ಂ
ಯೋಗವಾಹ ಅಕ್ಷರ
ಯೋಗವಾಹ ಅಕ್ಷರಗಳನ್ನು ಅಕ್ಷರಮಾಲೆಯ ಶುದ್ಧಾಕ್ಷರಗಳು ಎಂದು ಕರೆಯುವುದಕ್ಕಿಂತ ಭಾಷೆಯಲ್ಲಿ ಕೇಳಿ ಬರುವ ಧ್ವನಿಗಳು ಯೋಗವಾಹಗಳು ಎಂದು ಮನ್ನಣೆ ನೀಡಲಾಗಿದೆ.
ಕೇಶಿರಾಜ ಯೋಗವಾಹಗಳನ್ನು ಸ್ವರಗಳಿಂದ ಪ್ರತ್ಯೇಕವಾಗಿ ವಿಭಾಗಿಸಿ, ನಾಲ್ಕು ಭಾಗ ಮಾಡಿಕೊಳ್ಳುತ್ತಾನೆ.[೧]
ಅನುಸ್ವಾರ
ಬದಲಾಯಿಸಿ- ‘೦’ - ಉದಾ : ಅಂ, ಡಂ, ಕಂ, ಗಂ. ಪದಗಳಲ್ಲಿ - ಅಂಗಳ,ಗಂಡು, ಕಂದ
- ಅನುಸ್ವಾರಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ವ್ಯಂಜನಾಂಗವೆಂದೂ ಕರೆಯಲಾಗಿದೆ.
ಅಂ ಕನ್ನಡ ವರ್ಣಮಾಲೆಯ ಮೊದಲನೇ ಯೋಗವಾಹಕವಾಗಿದೆ. ಇದರ ಉಚ್ಚಾರಣೆಯು ಇದರ ನಂತರ ಬರುವ ವ್ಯಂಜನಾಕ್ಷರದ ಮೇಲೆ ಅವಲಂಬಿಸಿರುತ್ತದೆ. ಉದಾಹರಣೆಗೆ:
ಅಕ್ಷರ ಸಂಯೊಗ |
ಸ್ವರ ಸಂಯೊಗ |
ಪದ |
---|---|---|
ಅಂ + ಕ | ಅ + ಙ್ + ಕ | ಅಂಕ |
ಅಂ + ಚೆ | ಅ + ಞ್ + ಚೆ | ಅಂಚೆ |
ಅಂ + ಟು | ಅ + ಣ್ + ಟು | ಅಂಟು |
ಕಾಂ + ತಿ | ಕಾ + ನ್ + ತಿ | ಕಾಂತಿ |
ಕೆಂ + ಪು | ಕೆ +ಮ್ + ಪು | ಕೆಂಪು |
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2016-10-19. Retrieved 2020-09-09.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |