ಹೊಯ್ಸಳ ಸಾಮ್ರಾಜ್ಯದ ಪ್ರಸಿದ್ಧ ಕನ್ನಡ ಕವಿಗಳು ಮತ್ತು ಬರಹಗಾರರು
(1100-1343 CE)
ನಾಗಚಂದ್ರ 1105
ಕ೦ಟಿ 1108
ರಾಜದಿತ್ಯ 12th. c
ಹರಿ ಹರ 1160–1200
ಉದಯದಿತ್ಯ 1150
ವ್ರಿತ್ತ ವಿಲಾಸ 1160
ಕೆರೆಯ ಪದ್ಮರಸ 1165
ನೆಮಿಚ೦ದ್ರ 1170
ಸುಮನೊಬನ 1175
ರುದ್ರಭಟ್ಟ 1180
ಅಗ್ಗಲ 1189
ಪಲ್ಕುರಿಕಿ ಸೊಮನಾಥ 1195
ಸುಜನೊತ್ತಮ್ಸ(ಬೊಪ್ಪಣ್ಣ) 1180
ಕವಿ ಕಮ 12th c.
ದೆವಕವಿ 1200
ರಾಘವ೦ಕ 1200–1225
ಭ೦ದುವರ್ಮ 1200
ಬಾಲಚ೦ದ್ರ ಕವಿ 1204
ಪರ್ಸ್ವ ಪ೦ಡಿತ 1205
ಮಘನ೦ದ್ಯಚರ್ಯ 1209
ಜನ್ನ 1209–1230
ಪುಲಿಗೆರೆ ಸೋಮನಾಥ 13th c.
ಹಸ್ತಿಮಲ್ಲ 13th c.
ಚ೦ದ್ರಮ 13th c.
ಸೋಮರಜ 1222
ಗುಣವರ್ಮ II 1235
ಪೊಲಲ್ವದ೦ದನಾಥ 1224
ಆ೦ಡಯ್ಯ 1217–1235
ಸಿಸುಮಯನ 1232
ಮಲ್ಲಿಕಾರ್ಜುನ 1245
ನರಹರಿ ತೀರ್ಥ 1281
ಕುಮಾರ ಪದ್ಮರಸ 13th c.
ಮಹಾಬಲ ಕವಿ 1254
ಕೇಶಿರಾಜ 1260
ಕುಮುದೆ೦ದು 1275
ನಚಿರಾಜ 1300
ರಟ್ಟ ಕವಿ 1300
ನಾಗರಾಜ 1331
ಸೀನು ಯಾದವ ಆಳ್ವಿಕೆಯ ಪ್ರಸಿದ್ಧ ಕನ್ನಡ ಕವಿಗಳು ಮತ್ತು ಬರಹಗಾರರು
ಕಮಲಭವ 1180
ಅಚ್ಛಣ್ಣ 1198
ಆಮುಗಿದೇವ 1220
ಚೌ೦ಡರಸ 1300

ಕೇಶಿರಾಜನ ಕಾಲ ಸುಮಾರು ಕ್ರಿ.ಶ.೧೨೬೦.[] ಈತನು ಜನ್ನನ ಸೋದರಳಿಯ.ಹಳಗನ್ನಡ ವ್ಯಾಕರಣವನ್ನು ವಿವರಿಸುವ ಶಬ್ದಮಣಿದರ್ಪಣ ಈತನ ಪ್ರಖ್ಯಾತ ಕೃತಿ.

ಕೇಶಿರಾಜ
ಜನನ೧೩ ನೇ ಶತಮಾನ ಪ್ರಸ್ತುತ ಕಾಲಮಾನ
ಸಾವು೧೩ನೆ ಅಥವಾ ೧೪ನೆ ಶತಮಾನ ಪ್ರಸ್ತುತ ಕಾಲಮಾನ
ವೃತ್ತಿಕನ್ನಡ,ವ್ಯಾಕರಣ, ಕವಿ ಮತ್ತು ಬರಹಗಾರ
ಕೆಲಸಗಳುಶಬ್ದಮಣಿದರ್ಪಣ
Fatherಮಲ್ಲಿಕಾರ್ಜುನ

ಜೀವನ ವಿವರಗಳು

ಬದಲಾಯಿಸಿ

ಕೇಶಿರಾಜನ ತಂದೆ ಯೋಗಿಪ್ರವರನಾದ 'ಮಲ್ಲಿಕಾರ್ಜುನ', ತಾಯಿತಂದೆ ಕವಿಯೂ ಯಾದವಕಟಕಾಚಾರ್ಯನೂ ಆಗಿದ್ದ "ಸುಮನೋಬಾಣ" ಎಂದು ಶಬ್ದಮಣಿದರ್ಪಣದ ಆದಿಯಲ್ಲಿ ಕೇಶಿರಾಜನೇ ಹೇಳಿದ್ದಾನೆ. ಸುಮನೋಬಾಣನು ಇಮ್ಮಡಿ ನರಸಿಂಹನ ಆಸ್ಥಾನದಲ್ಲಿದ್ದನು.(೧೨೩೦) ಅವನ ಅನಂತನಾಥಪುರಾಣದಲ್ಲಿ ಅದರ ಸೂಚನೆಯಿದೆ.ಕೇಶಿರಾಜ ಚೋಳರಾಜನಾದ ಇಮ್ಮಡಿ ನರಸಿಂಹನ ಹಾಗೂ ಅವನ ಮಗ ವೀರ ಸೋಮೇಶ್ವರನ ಆಳಿಕೆಯಲ್ಲಿದ್ದನೆಂದು ವಿದ್ವಾಂಸರು ಹೇಳುತ್ತಾರೆ. ಇಮ್ಮಡಿ ನರಸಿಂಹನ ಆಳ್ವಿಕೆಯಕಾಲ ೧೨೨೦-೩೮. ಅಲ್ಲದೇ ಅವನ ಮಗನಾದ ಸೋಮೇಶ್ವರನ ಕಾಲ ೧೨೩೩-೬೭. ಈ ಕಾಲಘಟ್ಟದಲ್ಲಿಯೇ ಕೇಶಿರಾಜನ ಶಬ್ದಮಣಿದರ್ಪಣ ರಚನೆಯಾದದ್ದು.[]

ಕೃತಿಗಳು

ಬದಲಾಯಿಸಿ

ಪ್ರಬೋಧಚಂದ್ರ, ಚೋಳಪಾಲಕ ಚರಿತ, ಕಿರಾತ, ಸುಭದ್ರಾ ಹರಣ, ಶ್ರೀ ಚಿತ್ರಮಾಲೆ. ಆದರೆ ಇವು ಯಾವುವೂ ಪ್ರಸ್ತುತ ಲಭ್ಯವಿಲ್ಲವಾಗಿವೆ.[] [] ಶಬ್ದಮಣಿದರ್ಪಣವನ್ನು ಜೆ.ಗ್ಯಾರೆಟ್ ಎನ್ನುವವರು ಕ್ರಿ.ಶ. ೧೮೬೮ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದರು. ಕ್ರಿ.ಶ.೧೮೭೨ರಲ್ಲಿ ರೆವೆರಂಡ್ ಕಿಟ್ಟೆಲ್ ಈ ಗ್ರಂಥವನ್ನು ಪರಿಷ್ಕರಿಸಿ ಪ್ರಕಟಿಸಿದರು. ಕ್ರಿ.ಶ. ೧೯೫೧ರಲ್ಲಿ ಡಿ.ಕೆ.ಭೀಮಸೇನರಾಯರು ಹಾಗು ೧೯೫೮ರಲ್ಲಿ ಡಿ.ಎಲ್.ನರಸಿಂಹಾಚಾರ್ ಅವರು ಪರಿಷ್ಕೃತ ಕೃತಿಗಳನ್ನು ರಚಿಸಿದ್ದಾರೆ.[]

ಶಬ್ದಮಣಿದರ್ಪಣ

ಬದಲಾಯಿಸಿ
  • ಕೇಶಿರಾಜನ ಶಬ್ದಮಣಿದರ್ಪಣವು ಸಮಗ್ರವೂ ಸ್ವಾರಸ್ಯಕರವೂ ಆದ ಉತ್ತಮ ವ್ಯಾಕರಣ ಗ್ರಂಥ. ಇಡಿಯ ಕೃತಿ ಕಂದ ಪದ್ಯಗಳ ರೂಪದಲ್ಲಿದ್ದು ಎಂಟು ಅಧ್ಯಾಯಗಳಿಂದ ಕೂಡಿದೆ. ಇಲ್ಲಿ ಅಧ್ಯಾಯಗಳನ್ನು ಪ್ರಕರಣಗಳೆಂದು ಕರೆಯಲಾಗಿದೆ.ಕಂದ ಪದ್ಯಗಳನ್ನು 'ಸೂತ್ರ'ವೆಂದೂ ಗದ್ಯ ರೂಪದ ವಿವರಣೆಗಳನ್ನು'ವೃತ್ತಿ'ಯೆಂದೂ ವ್ಯಾಕರಣದ ಉದಾಹರಣೆಗಳನ್ನು 'ಪ್ರಯೋಗ'ವೆಂದೂ ಕರೆದು ತನ್ನ ಗ್ರಂಥಕ್ಕೆ ೨ನೇ ನಾಗವರ್ಮನ "ಶಬ್ದಸ್ಪೃತಿ ಮತ್ತು ಕಾವ್ಯಾವಲೋಕನ" ಗ್ರಂಥಗಳ 'ಸೂತ್ರ', 'ವೃತ್ತಿ' ಮತ್ತು 'ಪ್ರಯೋಗ'ಗಳನ್ನು ಆಧರಿಸಿದ್ದಾನೆ.
  • "ಶಬ್ದಮಣಿದರ್ಪಣ"ವು ೧೩ನೇ ಶತಮಾನಕ್ಕಿಂತ ಹಿಂದಿನ ಹಳಗನ್ನಡ ಭಾಷಾ ಸ್ಥಿತಿಗತಿಗಳು ಹೇಗಿದ್ದುವೆಂಬುದನ್ನು ಸವಿಸ್ತಾರವಾಗಿ, ಸಪ್ರಮಾಣ ವಿವೇಚನೆಯಿಂದ ವರ್ಣಿಸುತ್ತದೆ. ಇದರಲ್ಲಿ ಸಂಧಿ, ನಾಮ, ಸಮಾಸ, ತದ್ಧಿತ, ಆಖ್ಯಾತ, ಧಾತು, ಅಪಭ್ರಂಶ, ಅವ್ಯಯ ಎಂಬ ಎಂಟು ಪ್ರಕರಣಗಳಿವೆ.
  • ಪೂರ್ವಕವಿಗಳ ಪ್ರಯೋಗಗಳನ್ನು ಯಥೋಚಿತವಾಗಿ ಉದಾಹರಿಸುವ ಕ್ರಮವನ್ನು ಇಲ್ಲಿ ಅನುಸರಿಸಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. http://www.sobagu.in/ಕೇಶಿರಾಜ/
  2. https://en.unionpedia.org/i/Kesiraja
  3. "ಆರ್ಕೈವ್ ನಕಲು". Archived from the original on 2016-03-06. Retrieved 2015-12-25.
  4. https://archive.org/details/abdamaidarpaa00kirjuoft
  5. https://play.google.com/store/books/details/KANNADA_SHABDAMANIDARPANA_SANGRAHA?id=HnaYAwAAQBAJ&hl=en_IN


"https://kn.wikipedia.org/w/index.php?title=ಕೇಶಿರಾಜ&oldid=1306958" ಇಂದ ಪಡೆಯಲ್ಪಟ್ಟಿದೆ