ತುಳಸಿದಾಸ

(ತುಳಸಿದಾಸ್ ಇಂದ ಪುನರ್ನಿರ್ದೇಶಿತ)

ತುಳಸಿದಾಸ್ (ತುಲಸಿದಾಸ್ , ಗೋಸ್ವಾಮಿ ತುಲ್ಸಿದಾಸ್, ತುಲಸಿದಾಸ ಎಂದೂ ಕರೆಯುವರು) (1532-1623) ದೇವನಾಗರಿಯಲ್ಲಿ: तुलसीदास) ಒಬ್ಬ ಮಹಾ ಅವಧಿ ಭಕ್ತ, ತತ್ವಜ್ಞಾನಿ, ವಾಗ್ಗೇಯಕಾರ ಹಾಗೂ ಹಿಂದೂ ದೈವ ರಾಮನಿಗೆ ಅರ್ಪಿಸಿದ ಮಹಾಕಾವ್ಯ ಮತ್ತು ಧರ್ಮಗ್ರಂಥವಾದ ರಾಮಚರಿತಮಾನಸ ದ ಕೃತಿಕರ್ತ.

ತುಳಸಿದಾಸ್
ಜನನ1532
ರಾಜಾಪುರ, ಉತ್ತರ ಪ್ರದೇಶ
ಮರಣ1623 (೯೧ ವರ್ಷ)
ಬನಾರಸ್
ಕಾವ್ಯನಾಮತುಳಸಿ
ವೃತ್ತಿವಾಗ್ಗೇಯಕಾರ, ತತ್ವಜ್ಞಾನಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಧರ್ಮ
ವಿಷಯತತ್ತ್ವಶಾಸ್ತ್ರ

ಪ್ರಭಾವಿತರು

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ತಾಯಿ ಹುಲ್ಸಿ ಹಾಗೂ ತಂದೆ ಆತ್ಮಾರಾಮ್ ದುಬೆ ಇವರಿಗೆ ಮಗನಾಗಿ ತುಲ್ಸಿದಾಸ್‌ರವರು ಶ್ರಾವಣ ಶುಕ್ಲ ಸಪ್ತಮಿ, ವಿಕ್ರಮಿ ಸಮ್ವತ್ 1554 (ಕ್ರಿ.ಶ. 1532)ರಲ್ಲಿ ಅಕ್ಬರನ ಆಳ್ವಿಕೆಯ ಸಮಯದಲ್ಲಿ, ಭಾರತ ದೇಶದ ಉತ್ತರಪ್ರದೇಶಬಂದ ಜಿಲ್ಲೆಯಲ್ಲಿ ಜನಿಸಿದರು. ತುಲ್ಸಿದಾಸರು ಪರಶರ ಗೋತ್ರದ ಸರ್ಯುಪರೀನ್ ಬ್ರಾಹ್ಮಣರಾಗಿದ್ದರು. ಇದಕ್ಕೆ ಸಂಬಂಧಿಸಿದ ಪ್ರಸಿದ್ಧ ಪದ್ಯವೆಂದರೆ. ಪುರಾಣಗಳು

"पन्द्रह सौ चौवन बिसै कालिन्दी के तीर |
श्रावण शुक्ला सप्तमी तुलसी धरे शरीर ||"

ವಾಲ್ಮೀಕಿಯ ಅವತಾರ

ಬದಲಾಯಿಸಿ

ತುಲಸಿದಾಸರನ್ನು ಮಹಾ ಸಂತ ವಾಲ್ಮೀಕಿಯ ಅವತಾರವೆಂದು ಪರಿಗಣಿಸಲಾಗಿದೆ. ಭವಿಷ್ಯೋತ್ತರ ಪುರಾಣದಲ್ಲಿ, ದೇವನಾದ ಶಿವನು ಪಾರ್ವತಿಗೆ, ಹೇಗೆ ವಾಲ್ಮೀಕಿಯು ಕಲಿಯುಗದಲ್ಲಿ ದೇಶೀಯ ಭಾಷೆಯಲ್ಲಿ ಶ್ರೀ ರಾಮನ ಕೀರ್ತಿಗಳನ್ನು ಹಾಡಲು ಹನುಮಂತನಿಂದ ವರವನ್ನು ಪಡೆದನೆಂದು ಹೇಳುತ್ತಾನೆ. ಶಿವನ ಈ ಭವಿಷ್ಯವಾಣಿಯು ಶ್ರಾವಣ ಶುಕ್ಲ ಸಪ್ತಮಿ, ವಿಕ್ರಮಿ ಸಮ್ವತ್ 1554 ರಂದು ವಾಲ್ಮೀಕಿಯು ತುಲಸಿದಾಸರಾಗಿ ಅವತರಿಸುವ ಮೂಲಕ ಫಲಕಾರಿಯಾಯಿತು.

"वाल्मीकिस्तुलसीदासः कलौ देवि भविष्यति |
रामचन्द्रकथामेतां भाषाबद्धां करिष्यति ||"—ಭವಿಷ್ಯೋತ್ತರ ಪುರಾಣ, ಪ್ರತಿಸಾಗರ ಪರ್ವ, 4.20

ತುಲಸಿದಾಸರ ಸಮಕಾಲೀನರಾದ ಹಾಗೂ ಮಹಾ ಭಕ್ತರಾದ ನಭದಾಸರು ಕೂಡ ತಮ್ಮ ಕೃತಿ ಭಕ್ತ್‌ಮಾಲ್‌ನಲ್ಲಿ ತುಲಸಿದಾಸರನ್ನು ವಾಲ್ಮೀಕಿಯವರ ಅವತಾರವೆಂದು ಬಣ್ಣಿಸಿದ್ದಾರೆ. ರಾಮನಂದಿ ಪಂಥ(ತುಲಸಿದಾಸರು ಈ ಪಂಥಕ್ಕೆ ಸೇರಿದವರಾಗಿದ್ದಾರೆ)ವು ವಾಲ್ಮೀಕಿಯವರೇ ತುಲಸಿದಾಸರಾಗಿ [] ಕಲಿಯುಗದಲ್ಲಿ ಅವತರಿಸಿದ್ದಾರೆಂದು ದೃಢವಾಗಿ ನಂಬಿದೆ.

ಹೆಸರನ್ನು ಅನೇಕ ಬಗೆಗಳಲ್ಲಿ ಬರೆಯಬಹುದು. ದೇವನಾಗರಿ ಅಕ್ಷರಗಳ ಪ್ರತಿಲಿಪಿಯಾಗಿದ್ದರೆ ತುಲಸೀದಾಸ ಎಂದು (ಬಹುತೇಕ ಗ್ರಂಥಾಲಯಗಳ ಪುಸ್ತಕಪಟ್ಟಿಯ ಅಭ್ಯಾಸ ಇದಾಗಿರುವುದರಿಂದ)ಸಂಸ್ಕೃತ ಅಕ್ಷರಗಳ ಉಚ್ಛಾರವನ್ನು ಸೂಚಿಸಲು ಅಥವಾ ಹಿಂದಿಯ ಉಚ್ಛಾರದ ಪ್ರತಿಲಿಪಿಯಾಗಿದ್ದರೆ ತುಲಸಿದಾಸ್ ಎಂದು ಬರೆಯಲಾಗುವುದು. ಯಾವದೇ ಬಗೆಯಲ್ಲಿ ಬರೆದರೂ, ಹೆಸರು ಎರಡು ಪದಗಳಿಂದ ಹುಟ್ಟಿದೆ: ತುಲಸಿ, ಇದು ಒಂದು ಭಾರತೀಯ ತುಳಸಿ(ಬಾಸಿಲ್ ಸಸ್ಯ‌) ಜಾತಿಯ ಸಸ್ಯವಾಗಿದೆ, ಹಾಗೂ ದಾಸ ಎಂದರೆ ಸೇವಕ ಅಥವಾ "ಭಕ್ತ ಎಂದು.

ಸಾಹಿತ್ಯಿಕ ವೃತ್ತಿ

ಬದಲಾಯಿಸಿ

ರಾಮಚರಿತಮಾನಸ

ಬದಲಾಯಿಸಿ

ರಾಮಚರಿತಮಾನಸ ವು ರಾಮನಿಗೆ ಅರ್ಪಿಸಲಾದ ಮಹಾಕಾವ್ಯವಾಗಿದ್ದು, ಇದು ವಾಲ್ಮೀಕಿ ರಾಮಾಯಣಅವಧಿ ಆವೃತ್ತಿಯಾಗಿದೆ. ಇದು ನಿಖರವಾಗಿ: ಅವಧಿ ಆವೃತ್ತಿ"ಯಲ್ಲ ಆದರೆ ಮೂಲವು ಇದರ ಪ್ರಕಾರದ್ದಾಗಿದೆ. "ಅವಧಿ" ಯಲ್ಲದೆ ಇತರೆ ಮೂರು ಭಾಷೆಗಳನ್ನು ರಾಮಚರಿತಮಾನಸ ಮಹಾಕಾವ್ಯದಲ್ಲಿ ಕಾಣಬಹುದು - ಅವುಗಳು "ಭೋಜ್‌ಪುರಿ", ಬ್ರಿಜ್‌ಬಾಸಾ" ಹಾಗೂ ಚಿತ್ರಕೂಟ ಜನರ ಸ್ಥಳೀಯ ಭಾಷೆ ಮೂಲ ಸಂಸ್ಕೃತ ರಾಮಾಯಣದ ಅನೇಕ ಅನುವಾದಗಳಂತೆ, ಇದನ್ನು ಕೂಡ ಭಾರತದ ಅನೇಕ ಹಿಂದು ಮನೆಗಳಲ್ಲಿ ಓದಿ, ಆರಾಧಿಸಲಾಗುತ್ತಿದೆ. ಇದೊಂದು ಸ್ಪೂರ್ತಿದಾಯಕ ಪುಸ್ತಕವಾಗಿದ್ದು, ಪದ್ಯದ ರೂಪದಲ್ಲಿ ಚೌಪಾಯಿ ಎಂದು ಕರೆಯಲ್ಪಡುವ ದ್ವಿಪದಿಗಳನ್ನು ಹೊಂದಿದೆ.

ಇದನ್ನು ತುಲಸಿ-ಕೃತ ರಾಮಾಯಣ ವೆಂದು ಕರೆಯಲಾಗುತ್ತದೆ ಹಾಗೂ ಭಾರತಹಿಂದಿ ಮಾತನಾಡುವ ಹಿಂದುಗಳ ಮನೆಗಳಲ್ಲಿ ಇದು ಚಿರಪರಿಚಿತವಾಗಿದೆ. ಈ ಪ್ರದೇಶದಲ್ಲಿ ಇದರ ಪದ್ಯಗಳು ಜನಪ್ರಿಯ ನುಡಿಮುತ್ತುಗಳಾಗಿವೆ ತುಲಸಿದಾಸರ ನುಡಿಗಟ್ಟುಗಳು ಸಾಮಾನ್ಯ ಮಾತುಗಳಾಗಿ ರೂಪಾಂತರ ಹೊಂದಿದ್ದು, ಅವರ ಪ್ರದೇಶದ ಅರಿವೂ ಇಲ್ಲದಂತೆ ಹಿಂದಿ ಮಾತನಾಡುವ (ಮತ್ತು ಉರ್ದು ಮಾತನಾಡುವವರೂ ಕೂಡ)ಮಿಲಿಯಾಂತರ ಜನರು ಇವುಗಳನ್ನು ಬಳಸುತ್ತಿದ್ದಾರೆ. ಕೇವಲ ಇವರ ಮಾತುಗಳು ನುಡಿಗಟ್ಟುಗಳಾಗಿರದೆ ಅವರ ಸಿದ್ದಾಂತವು ವಾಸ್ತವಿಕವಾಗಿ ಇಂದಿನ ಹಿಂದುತ್ವದಲ್ಲಿ ಅತಿ ಶಕ್ತಿಯುತ ಧಾರ್ಮಿಕ ಪ್ರಭಾವವನ್ನುಂಟುಮಾಡಿದೆ; ಹಾಗೂ ಇವರು ಯಾವುದೇ ಪಂಥವನ್ನು ಕಟ್ಟದೇ ಇದ್ದರೂ ಹಾಗೂ ಗುರು ಅಥವಾ ಮುಖಂಡನೆಂದು ಹೇಳಿಸಿಕೊಳ್ಳದೇ ಇವರನ್ನು ಎಲ್ಲೆಡೆ ಇವರನ್ನು ಒಬ್ಬ ಕವಿ ಮತ್ತು ಸಂತನೆಂದು ಹಾಗೂ ಧರ್ಮದ ಹಾಗೂ ಜೀವನ ನಿರ್ವಹಣೆಯ ಕುರಿತು ಸ್ಪೂರ್ತಿ ಹಾಗೂ ವಿಶ್ವಾಸಾರ್ಹ ಮಾರ್ಗದರ್ಶಿ ಎಂದು ಒಪ್ಪಿಕೊಂಡರು.

ತುಲಸಿದಾಸರು ಅವರ ಗುರುಗಳಾದ ನರಹರಿ ದಾಸ್‌ರವರ ವಿನಮ್ರ ಹಿಂಬಾಲಕನೆಂದು ಪ್ರತಿಪಾದಿಸಿದರು, ಚಿಕ್ಕ ಹುಡುಗನಾಗಿದ್ದಾಗ ಸುಕಾರ್‌-ಖೆತ್‌ನಲ್ಲಿ ಮೊದಲ ಬಾರಿಗೆ ರಾಮನ ಕಾರ್ಯಸಿದ್ಧಿಗಳ ಕಥೆಯನ್ನು ಅವರಿಂದ ಕೇಳಿದ್ದು, ಇದು ಮುಂದೆ ರಾಮಚರಿತಮಾನಸ ದ ಮುಖ್ಯವಿಷಯವಾಗಿ ರೂಪುಗೊಂಡಿತು. ನರಹರಿ ದಾಸ್‌ರವರು ಆರನೇ ಆಧ್ಯಾತ್ಮಿಕ ಗುರುವಾಗಿದ್ದು, ಉತ್ತರ ಭಾರತದಲ್ಲಿ ಜನಪ್ರಿಯವಾದ ವೈಷ್ಣವತಾವಾದದ ಸಂಸ್ಥಾಪಕ ಹಾಗೂ ಅವರ ಪ್ರಸಿದ್ಧ ಕಾವ್ಯಗಳಿಂದ ಹೆಸರಾದ ರಮಾನಂದರ ನಂತರದ ಆಧ್ಯಾತ್ಮ ಗುರು.

ತುಲಸಿದಾಸರ ರಾಮಚರಿತಮಾನಸ ಹಾಗೂ ವಾಲ್ಮೀಕಿ ರಾಮಾಯಣದ ನಡುವೆ ಅನೇಕ ಭಿನ್ನತೆಗಳಿವೆ. ಕೈಕೇಯಿ ತನ್ನ ಗಂಡನಿಗೆ ರಾಮನನ್ನು ದೇಶಭ್ರಷ್ಟನನ್ನಾಗಿ ಮಾಡುವಂತೆ ಬಲವಂತಪಡಿಸುವ ಪ್ರಸಂಗವು ಒಂದು ಉದಾಹರಣೆಯಾಗಿದೆ. ತುಲಸಿದಾಸರ ಕೃತಿಯಲ್ಲಿ ದೀರ್ಘ ಹಾಗೂ ಹೆಚ್ಚು ಮಾನಸಿಕತೆ, ಜೊತೆಗೆ ತೀವ್ರ ಪಾತ್ರಚಿತ್ರಣ ಮತ್ತು ಅದ್ಭುತ ಉಪಮಾಲಂಕಾರಗಳನ್ನು ಕಾಣಬಹುದು.

ಇತರ ಕೃತಿಗಳು

ಬದಲಾಯಿಸಿ

ರಾಮಚರಿತಮಾನಸ ವಲ್ಲದೆ, ತುಲಸಿದಾಸರು ಐದು ದೀರ್ಘ ಮತ್ತು ಆರು ಲಘುವಾದ ಕೃತಿಗಳನ್ನು ರಚಿಸಿದ್ದು, ಇವುಗಳಲ್ಲಿ ಬಹುತೇಕ ಕೃತಿಗಳು ರಾಮನ ವಿಚಾರ, ಆತನ ಕಾರ್ಯಗಳು ಹಾಗೂ ಅವನೆಡೆಗಿನ ಭಕ್ತಿಯ ಕುರಿತಾಗಿವೆ. ಮೊದಲಿನ ಕೃತಿಗಳು:

  1. ದೋಹಾವಳಿ ಯು 573 ವಿವಿಧ ಬಗೆಯ ದೋಹಾ ಮತ್ತು ಸ್ತೋತ್ರಗಳನ್ನು ಹೊಂದಿದ್ದು; ಇವುಗಳು ರಾಮ್-ಸತ್‌ಸಾಯಿಯಲ್ಲಿ ಪಡಿಯಚ್ಚಾಗಿದ್ದು, ಏಳು ಶತಮಾನಗಳ ಪದ್ಯಗಳ ಜೋಡಣೆಯಿದೆ. ಇವುಗಳ ಅತಿ ಹೆಚ್ಚಿನ ಸಂಖ್ಯೆಯ ಪದ್ಯಗಳು ದೋಹಾವಳಿಯಲ್ಲಿಯೂ ಹಾಗೂ ತುಲಸಿಯವರ ಇತರೆ ಕೃತಿಗಳಲ್ಲಿಯೂ ಕಾಣಿಸಿಕೊಂಡಿವೆ.
  2. ಕಬಿತ್ತ ರಾಮಾಯಣ ಅಥವಾ ಕವಿತಾವಳಿ ಯು ಕವಿತ, ಘನಕ್ಷರಿ, ಚೌಪಾಯಿ ಮತ್ತು ಸವಯ್ಯ ಛಂದಸ್ಸಿನಲ್ಲಿನ ರಾಮನ ಇತಿಹಾಸವಾಗಿದ್ದು, ರಾಮಚರಿತಮಾನಸ ದಂತೆ ಇದನ್ನು ಏಳು ಕಾಂಡಗಳು ಅಥವಾ ಪಸುಗೆಗಳನ್ನಾಗಿ ವಿಂಗಡಿಸಲಾಗಿದೆ ಹಾಗೂ ರಾಮನ ಪಾತ್ರದ ಭವ್ಯತೆಯನ್ನು ರಚಿಸಲು ಮೀಸಲಿರಿಸಲಾಗಿದೆ,
  3. ಗೀತಾವಳಿ ಕೂಡ ಏಳು ಕಾಂಡಗಳಿಂದ ಕೂಡಿದ್ದು, ರಾಜನ ಜೀವನದ ಕೋಮಲ ಮುಖದ ವಿವರಣೆಯಾಗಿದೆ; ಹಾಡಲು ಸರಿಹೊಂದುವ ಛಂದಸ್ಸನ್ನು ಹೊಂದಿದೆ
  4. ಕೃಷ್ಣಾವಳಿ ಅಥವಾ ಕೃಷ್ಣ ಗೀತಾವಳಿ ಯು ಕೃಷ್ಣನ ಆರಾಧನೆಯ 61 ಹಾಡುಗಳ ಒಂದು ಸಂಗ್ರಹವಾಗಿದ್ದು, ಇದು ಹಿಂದಿಯ ಕನೌಜಿ ಆಡುಭಾಷೆಯಲ್ಲಿದೆ: ಇದರ ಅಸಲಿ ರೂಪ ಇನ್ನೂ ಸ್ಪಷ್ಟವಿಲ್ಲ,
  5. ವಿನಯ ಪತ್ರಿಕ ಅಥವಾ ಬಿನ್ನಹಗಳ ಪುಸ್ತಕ ವು, ಸ್ತೋತ್ರಗಳು ಮತ್ತು ಪ್ರಾರ್ಥನೆಗಳ ಸರಣಿಯಾಗಿದ್ದು, ಇದರ ಮೊದಲ 43 ಸ್ತೋತ್ರಗಳು ರಾಮನ ಆಸ್ಥಾನ ಹಾಗೂ ಹಾಜರಾತಿಗಳನ್ನು ರೂಪಿಸುವ ನಿಮ್ನ ದೇವರುಗಳನ್ನು ಉದ್ದೇಶಿಸಲಾಗಿದೆ, ಹಾಗೂ ಉಳಿದ 44 ರಿಂದ 279 ಸ್ತೋತ್ರಗಳು ರಾಮನನ್ನು ಉದ್ದೇಶಿಸಲಾಗಿದೆ.

ಬವರಾಯ್ ರಾಮಾಯಣ, ಜಾನಕಿ ಮಂಗಲ್, ರಮಾಲಾಲ್ ನಹಚ್ಚು, ರಾಮಜ್ನ ಪ್ರಶ್ನ, ಪಾರ್ವತಿ ಮಂಗಲ್, ಕೃಷ್ಣ ಗೀತಾವಳಿ, ಹನುಮಾನ್ ಬಹುಕ, ಸಂಕಟ ಮೋಚನ ಮತ್ತು ವೈರಾಗ್ಯ ಸಾಂದೀಪಿನಿ [] ಇವು ತುಲಸಿದಾಸರ ಸಣ್ಣ ಕೃತಿಗಳಾಗಿವೆ. ಸಣ್ಣ ರಚನೆಗಳಲ್ಲಿ ತುಂಬಾ ಆಸಕ್ತಿಕರವಾಗಿರುವುದು ವೈರಾಗ್ಯ ಸಾಂದೀಪಿನಿ ಅಥವಾ ಕಿಂಡ್ಲಿಂಗ್ ಆಫ್ ಕಾಂಟಿನೆನ್ಸ್ ಎಂಬ ಪದ್ಯ, ಇದು ಪವಿತ್ರ ಮಾನವನ ಸ್ವಭಾವ ಮತ್ತು ಮಹಾತ್ಮ್ಯೆಯನ್ನು ಹಾಗೂ ಅವನು ಪಡೆಯುವ ನಿಜವಾದ ಶಾಂತತೆಯನ್ನು ವರ್ಣಿಸುತ್ತದೆ.

ರಾಮಾಯಣದ ಹೊರತು ತುಲಸಿದಾಸರ ಅತ್ಯಂತ ಪ್ರಸಿದ್ಧ ಹಾಗೂ ಓದಿಸಿಕೊಂಡ ಸಾಹಿತ್ಯದ ಅಂಶವೆಂದರೆ " ಹನುಮಾನ್ ಚಾಲೀಸಾ", ಹನುಮಾನನ್ನು ಸ್ತುತಿಸುವ ಕಾವ್ಯ. ಅನೇಕ ಹಿಂದುಗಳು ಇದನ್ನು ಪ್ರತಿದಿನ ಪ್ರಾರ್ಥನೆಯಂತೆ ಹಾಡುತ್ತಾರೆ.

ತುಲಿಸಿದಾಸರಿಂದ ರಚಿತವಾದ ಎಲ್ಲ ಕೃತಿಗಳ ಸಂಗ್ರಹವು 13 ಪುಸ್ತಕವನ್ನು ಹೊಂದಿದ್ದು ,ಇದನ್ನು ಬಿಂದಾ ಪ್ರಸಾದ್ ಖತ್ರಿ(1898-1985)ಯವರು ಇಂಗ್ಲೀಷಿಗೆ(ಕಾವ್ಯಗಳಾಗಿ) ಅನುವಾದಿಸಿದ್ದಾರೆ. ಆದಾಗ್ಯೂ ಕೃತಿಗಳು ಇದುವರೆಗೂ ಪ್ರಕಾಶಗೊಂಡಿಲ್ಲ.

ಸಿದ್ದಾಂತ

ಬದಲಾಯಿಸಿ

नानापुराणनिगमागमसम्मतं यद् (RCM ಬಾಲಕಾಂಡ ಏಳನೇ ಪದ್ಯ)

ರಾಮಾನುಜರಂತೆ ತುಲಸಿದಾಸರೂ ಎಲ್ಲ ಸದ್ಗುಣಗಳನ್ನು ಹೊಂದಿರುವ ಪರಮಶಕ್ತ ಸಶರೀರ ದೇವರನ್ನು, ಜೊತೆಗೆ ಶಂಕರಾಚಾರ್ಯರ ನಿರ್ಗುಣ ನಿರ್ಲಿಪ್ತ ಅಶರೀರ ಬ್ರಾಹ್ಮಣ: ಮಾನವ ವರ್ಗದ ಹಾರೈಕೆಗಾಗಿ ದೈವವೇ ಒಮ್ಮೆ ಮಾನವ ರೂಪ ತಾಳಿ ಜನ್ಮ ತಾಳಿ ರಾಮನಾಗಿ ಅವತರಿಸುತ್ತಾರೆ ಎಂಬುದರಲ್ಲಿ ನಂಬಿಕೆ ಹೊಂದಿದ್ದರು. ಆದ್ದರಿಂದ ದೇಹವನ್ನು ತುಚ್ಛೀಕರಿಸದೇ ಗೌರವಿಸಲಾಗುತ್ತದೆ. ಭಕ್ತಿಯಿಂದ ದೇವರ ಬಳಿ ಸಾಗಬೇಕು, ನಿಸ್ವಾರ್ಥ ಭಕ್ತಿ ಮತ್ತು ಪರಿಪೂರ್ಣ ಪ್ರೀತಿಯಲ್ಲಿ ಆತ್ಮ ಸಮರ್ಪಣೆ ಹಾಗೂ ಸ್ವಾರ್ಥದ ಎಲ್ಲ ಕ್ರಿಯೆಗಳನ್ನು ಆತನ ಧ್ಯಾನದಲ್ಲಿ ಶುದ್ಧೀಕರಿಸುವ ಮೂಲಕ ಅವನ ಬಳಿ ಹೋಗಬೇಕು. ಎಲ್ಲ ಜೀವಿಗಳನ್ನೂ ಪ್ರೀತಿಯಿಂದ ಕಾಣು, ಆಗ ನೀನು ಸಂತಸವಾಗಿರುತ್ತೀಯ; ಆತ ಎಲ್ಲ ವಸ್ತುವಿನಲ್ಲೂ ಇರುವುದರಿಂದ, ನೀನು ಎಲ್ಲ ವಸ್ತುಗಳನ್ನು ಪ್ರೀತಿಸಿದಾಗ, ದೇವರು ನಿನ್ನನ್ನು ಪ್ರೀತಿಸುತ್ತಾನೆ. ದೈವದಿಂದ ಆತ್ಮ ಬಂದಿದ್ದು, ಈ ಆತ್ಮವನ್ನು ಜೀವನದ ಕರ್ಮಗಳ(ಕೆಲಸಗಳು)ಬಂಧನಕ್ಕೆ ಸಮರ್ಪಿಸಲಾಗಿದೆ; ಮನುಷ್ಯವರ್ಗ ತನ್ನ ಮೊಂಡುತನದಲ್ಲಿ ಕಾರ್ಯಗಳ ಬಲೆಯಲ್ಲಿ ತಮ್ಮನ್ನು ತಾವು ಬಂಧಿಸಿಕೊಂಡಿದ್ದು, ದೇವರ ಭಕ್ತಿಯಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಪರಮಾನಂದವನ್ನು ಕಾಣುತ್ತಿರುವವರ ಬಗ್ಗೆ ಕೇಳಿ ತಿಳಿದಿದ್ದರೂ, ಬಿಡುಗಡೆಯ ಪ್ರಯತ್ನ ಮಾಡುತ್ತಿಲ್ಲ. ಆಸೆಗಳನ್ನು ನಂದಿಸಿಕೊಳ್ಳುವ ಮೂಲಕ ಪರಮೋಚ್ಛ ಮನೆಯಲ್ಲಿ ಆತ್ಮವು ಪಡೆದುಕೊಂಡ ಪರಮಾನಂದವು ದೈವನಲ್ಲಿ ಕರಗುವುದಲ್ಲ ಬದಲಾಗಿ ವೈಯಕ್ತಿಕತೆಗೆ ಬದ್ಧವಾಗಿ ಆತನಲ್ಲಿ ಒಂದಾಗುವುದಾಗಿದೆ . ಇದು ಜನ್ಮ ಮತ್ತು ಪುನರ್ಜನ್ಮಗಳಿಂದ ಮುಕ್ತಿ(ಮುಕ್ತಿ) ಹಾಗೂ ಪರಮೋಚ್ಛವಾದ ಸಂತಸವಾಗಿದೆ ಸರ್ಯುಪರೇನ್ ಬ್ರಾಹ್ಮಣರಾದ ತುಲಸಿ, ಇಡೀ ಹಿಂದು ಸರ್ವ ಮಂದಿರವನ್ನು ಗೌರವಿಸುತ್ತಾರೆ ಹಾಗೂ ಬ್ರಾಹ್ಮಣರ ವಿಶೇಷ ದೈವವಾದ ಶಿವ ಅಥವಾ ಮಹಾದೇವನಿಗೆ ತನ್ನ ಭಕ್ತಿ ಸಲಿಸುವಲ್ಲಿ ವಿಶೇಷವಾಗಿ ಜಾಗರೂಕರಾಗಿರುತ್ತಾರೆ ಹಾಗೂ ರಾಮನ ಭಕ್ತಿ ಹಾಗೂ ಶಿವನ ಸಖ್ಯದ ನಡುವೆ ಅಸಮಂಜಸತೆಯೇನೂ ಇಲ್ಲ(ರಾಮಾಯಣ, ಲಂಕಾ ಕಾಂಡ, ದೋಹಾ 3). ಅವರ ಎಲ್ಲ ಬರಹಗಳ ವಸ್ತುನಿಷ್ಟ ಉದ್ದೇಶ ರಾಮನ ಕುರಿತು ಭಕ್ತಿಯನ್ನು ಮೈಗೂಡಿಸುವುದಾಗಿದ್ದು, ರಾಮ ಮುಕ್ತಿಯ ಮಾರ್ಗ ಹಾಗೂ ಹುಟ್ಟು ಮತ್ತು ಸಾವುಗಳ ಸರಪಳಿಯಿಂದ ಮುಕ್ತರು, ಬ್ರಾಹ್ಮಣರಂತೆ ಕೆಳಜಾತಿಯ ಮನುಜರಿಗೂ ಉಚಿತ ಮತ್ತು ಮುಕ್ತವಾದ ಮುಕ್ತಿಯ ದಾರಿ ಈ ರಾಮ ಎಂಬಂತೆ ಚಿತ್ರಿಸಿದ್ದಾರೆ.

ಆದಾಗ್ಯೂ, ತುಲಸಿದಾಸರಿಗೆ "ಸಿದ್ದಾಂತ" ಅಷ್ಟು ಪ್ರಮುಖವಲ್ಲ ಎಂದು ಅರ್ಥ ಮಾಡಿಕೊಳ್ಳುವುದು ಮುಖ್ಯ. ರಾಮ-ನಾಮ ಪದೇ ಪದೇ ಜಪಿಸುವ ಅಭ್ಯಾಸ, ರಾಮನ ಹೆಸರು ಅಭ್ಯಾಸ ತುಂಬಾ ಸೂಕ್ತವಾಗಿದೆ. ವಾಸ್ತವವಾಗಿ ತುಲಸೀದಾಸರು, ರಾಮನ ಹೆಸರು ರಾಮನಿಂತ ದೊಡ್ಡದೆಂದು ಹೇಳಿದ್ದಾರೆ(कहउँ नामु बड़ राम तें निज बिचार अनुसार,)[] ರಾಮನ ಹೆಸರು ರಾಮನಿಂತ ಏಕೆ ದೊಡ್ಡದು? ಏಕೆಂದರೆ "ರಾಮ" ಎಂಬುದು ಮಂತ್ರ, ಒಂದು ಶಬ್ದ, ಇದನ್ನು ಪದೇ ಪದೇ ಜಪಿಸುವುದರಿಂದ ಒಬ್ಬರನ್ನು ಪ್ರಜ್ಞೆಯ ಉಚ್ಛ್ರಾಯ ಸ್ಥಿತಿಗೆ ಕರೆದುಕೊಂಡು ಹೋಗಬಹುದು. ಈ ರೀತಿಯಾಗಿ ರಾಮನಲ್ಲ "ರಕ್ಷಿಸುವುದು" ಬದಲಾಗಿ ರಾಮನ ಹೆಸರು. ಏಕೆಂದರೆ ಸ್ವತಃ ರಾಮನನ್ನು ಈ ಹೆಸರು ಹೊಂದಿದೆ. ಸ್ವತಃ ರಾಮನೆಂದರೆ ಪ್ರಪಂಚದ ಪ್ರತಿ ಅಣುವಿನಲ್ಲೂ ಈತ ಇದ್ದಾನೆಂದು ಅರ್ಥ(ರಮ್ತಾ ಸಕಲ್ ಜಹಾನ್).

ಆಚಾರ್ಯ ರಾಮ ಚಂದ್ರ ಶುಕ್ಲರವರು ತಮ್ಮ ವಿಮರ್ಶಾ ಕೃತಿ ಹಿಂದಿ ಸಾಹಿತ್ಯ ಕಾ ಇತಿಹಾಸ್ ನಲ್ಲಿ ತುಲಸಿದಾಸರ ಸಾಹಿತ್ಯದ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ ಪ್ರಪಂಚದ ಇತರೆ ಸಾಹಿತಿಗಳೊಂದಿಗೆ ಹೋಲಿಸುವಂತೆ ಹಾಗೂ ಈ ಮಹಾನ್ ಕವಿಯನ್ನು ಶಾಶ್ವತಗೊಳಿಸಿದ ತುಲಸಿಯವರ ಲೋಕಮಂಗಳವನ್ನು ಸಾಮಾಜಿಕ ಏಳ್ಗೆಯ ಸಿದ್ದಾಂತ ಎಂದು ವಿವರಿಸಿದ್ದಾರೆ.

ಮೂಲಗಳು ಮತ್ತು ಹಸ್ತಪ್ರತಿಗಳು

ಬದಲಾಯಿಸಿ

ಗ್ರೌಸ್‌ನ ರಾಮಚರಿತಮಾನಸ [] ದ ಅನುವಾದದಲ್ಲಿ ನಭಾ ಅವರ ಭಗತ್‌ಮಾಲ ದಲ್ಲಿನ ಪಠ್ಯ ಮತ್ತು ಉದ್ದೃತ್ತ ಭಾಗಗಳ ಅನುವಾದಗಳು ಹಾಗೂ ಇದರ ವರ್ಣನೆಯನ್ನು ಕಾಣಬಹುದಾಗಿದ್ದು, ಇವುಗಳು ಕವಿಯ ಸಂಪ್ರದಾಯಗಳಿಗೆ ಸಂಬಂಧಿಸಿದ ಮುಖ್ಯ ಮೂಲ ಪ್ರಾಧಿಕಾರವಾಗಿದೆ. ನಭಾಜಿ ಸ್ವತಃ ತುಲಸಿದಾಸರನ್ನು ಭೇಟಿ ಮಾಡಿದ್ದರು; ಆದರೆ ಕವಿಯನ್ನು ಶ್ಲಾಘಿಸುವ ನುಡಿಯು ಆತನ ಜೀವನಕ್ಕೆ ಸಂಬಂಧಿಸಿದ ವಾಸ್ತವಾಂಶಗಳನ್ನು ನೀಡುವುದಿಲ್ಲ - ಇದನ್ನು ಕ್ರಿ.ಶ. 1712ರಲ್ಲಿ ಪ್ರಿಯದಾಸರು ಬರೆದ ಟಿಕಾ ಅಥವಾ ಟಿಪ್ಪಣಿಯಲ್ಲಿ ಹೇಳಲಾಗಿದೆ, ಹಾಗೂ ಬಹುತೇಕ ವಿಷಯಗಳು ದಂತಕಥೆಗಳು ಹಾಗೂ ನಂಬಲರ್ಹವಲ್ಲವೆಂದು ಹೇಳಿದೆ. ಗುರುವಿನ ಖಾಸಗಿ ಹಿಂಬಾಲಕ ಹಾಗೂ ಆಪ್ತ ಸಂಗಾತಿಯಾದ ಬೇನಿಮಧಾಬ್ ದಾಸ್‌ರವರು ಕವಿಯ ಜೀವನಚರಿತ್ರೆ ಗೋಸಾಹಿ ಚರಿತ್ರ ವನ್ನು ರಚಿಸಿ, 1642ರಲ್ಲಿ ಸಾವನ್ನಪ್ಪಿದ್ದರು, ದುರದೃಷ್ಟಕ್ಕೆ ಈ ಕೃತಿ ಕಾಣೆಯಾಯಿತು ಹಾಗೂ ಇದರ ಯಾವುದೇ ಪ್ರತಿ ಅಸ್ತಿತ್ವದಲ್ಲಿಲ್ಲ.

ನಗ್ರಿ ಪ್ರಾಚರ್ಣಿ ಸಭಾರವರ ರಾಮಾಯಣ ದ ಆವೃತ್ತಿಯ ಪ್ರಸ್ತಾವನೆಯಲ್ಲಿ ತುಲಸಿಯವರ ಜೀವನದ ಎಲ್ಲ ಗೊತ್ತಿರುವ ವಾಸ್ತವಾಂಶಗಳನ್ನು ಒಂದೆಡೆ ತಂದು ವಿಮರ್ಶಾತ್ಮಕವಾಗಿ ಚರ್ಚಿಸಲಾಗಿದೆ ಧಾರ್ಮಿಕ ಸ್ಥಿತಿಯಲ್ಲಿ ಆತನ ಪ್ರತಿಪಾದನೆಗಾಗಿ ಹಾಗೂ ಉತ್ತರ ಭಾರತದ ಜನಪ್ರಿಯ ಧರ್ಮದಲ್ಲಿ ಕವಿಯ ಸ್ಥಾನವನ್ನು ತಿಳಿಯಲು ಡಾ.ಗ್ರಿಯರ್‌ಸನ್‌ನ ಜರ್ನಲ್ ಆಫ್ ದಿ ರಾಯಲ್ ಏಷಿಯಾಟಿಕ್ ಸೊಸೈಟಿ, ಜುಲೈ 1903, pp. 447–466 ನ್ನು ನೋಡಿ. (C. J. L.)

ಅಯೋಧ್ಯಾ-ಕಾಂಡ ದ ಹಸ್ತಪ್ರತಿಯು ಕವಿಯ ಸ್ವಂತ ಕೈಬರಹದಲ್ಲಿದ್ದು, ತಮ್ಮ ಜನ್ಮಸ್ಥಳ ಬಂದ ಜಿಲ್ಲೆಯ ರಾಜಪುರ್‌ದಲ್ಲಿದೆ ಎಂದು ಹೇಳಲಾಗಿದೆ. ಸಮ್ವತ್ 1661 ರ ಅಂದರೆ, ಕವಿಯ ಸಾವಿನ ಹತ್ತೊಂಬತ್ತು ವರ್ಷಗಳ ಮುಂಚಿನ ಬಾಲ-ಕಾಂಡ ಗಳಲ್ಲೊಂದು, ಹಾಗೂ ಜಾಗರೂಕತೆಯಿಂದ ಸರಿಪಡಿಸಿದ್ದೆಂದು ಸ್ವಂತ ತುಲಸಿದಾಸರು ಆಪಾದಿಸಿದ್ದು ಅಯೋಧ್ಯೆಯಲ್ಲಿದೆ. ಲಕ್ನೋ ಜಿಲ್ಲೆಯ ಮಲಾಯಿಬಾದ್‌ನಲ್ಲಿ ಇನ್ನೊಂದು ಜೀವನಚರಿತ್ರೆಯನ್ನು ಸಂರಕ್ಷಿಸಲಾಗಿದೆ ಎಂದು ವರದಿಯಾಗಿದೆ, ಆದರೆ ಇದುವರೆಗೆ ದೃಢಪಟ್ಟಿಲ್ಲ. ಬನಾರಸ್‌ನಲ್ಲಿ ಇನ್ನೊಂದು ಪುರಾತನ ಹಸ್ತಪ್ರತಿಗಳು ದೊರೆತಿವೆ. ಭಾರತೀಯ ನಾಗರೀಕ ಸೇವೆಯ ಎಫ್. ಎಸ್. ಗ್ರೌಸ್‌ರವರು ಸಮಗ್ರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ (5ನೇ ಮುದ್ರಣ, ಕಾನ್‌ಪೋರ್, ಕಾನ್ಪುರ, 1891).

ಹಿಂದಿ ಮಾತನಾಡದ ಹಿನ್ನೆಲೆ ಹೊಂದಿರುವ ಒಬ್ಬ ವ್ಯಕ್ತಿಗೆ ಶ್ರೀ ರಾಮಚರಿತಮಾನಸವನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಇದು ಮುಖ್ಯವಾಗಿ ಆಡುಬಾಷೆಗಳು ಮತ್ತು ನುಡಿಗಟ್ಟು ಹಾಗೂ ಸಂದಿಗ್ಧ ವಿನ್ಯಾಸದ ವಾಕ್ಯಗಳಲ್ಲಿರುವುದರಿಂದ ಕಷ್ಟಸಾದ್ಯವಾಗಿದೆ. ಈ ಕಠಿಣತೆಗಳೇ ಶ್ರೀ ರಾಮಚರಿತೆಯನ್ನು ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಒಂದು ವಿಶಿಷ್ಟವಾದ ಮೌಲ್ಯವನ್ನು ಕಟ್ಟಿಕೊಟ್ಟಿದೆ. ಇದು ವಿರೂಪಗೊಂಡ ಮತ್ತು ತಿರುಚಿದ ಪದಗಳನ್ನು ಗುರುತಿಸಲು ಬುದ್ದಿಯನ್ನು ಶಿಸ್ತುಗೊಳಿಸುತ್ತದೆ ಹಾಗೂ ಇದು ಒಂದು ವಾಕ್ಯವನ್ನು ಮೇಲೆ ಕೆಳಗೆ ಮತ್ತು ಒಳಗೆ ಹೊರಗೆ ತಿರುಗಸಿ ಗ್ರಹಿಸಲು ಸಾಧ್ಯವಾಗುವಂತೆ ಉಳಿಯಬಹುದೆಂಬುದನ್ನು ಕಲಿಸುತ್ತದೆ. ಎಡ್ವಿನ್ ಗ್ರೀವ್ಸ್ ತಮ್ಮ "ನೋಟ್ಸ್ ಆನ್ ದಿ ಗ್ರಾಮರ್ ಆಫ್ ರಾಮಾಯಣ ಆಫ್ ತುಲಸಿದಾಸ್"[] ಎಂಬ ಪುಸ್ತಕದಲ್ಲಿ ಶ್ರೀ ರಾಮಚರಿತಮಾನಸದ ವ್ಯಾಕರಣದ ಬಗ್ಗೆ ಒಂದು ಉತ್ತಮವಾದ ಪ್ರಸ್ತಾವನೆಯನ್ನು ಬರೆದಿದ್ದಾರೆ (1895).

ಶ್ರೀ ರಾಮಚಂದ್ರ ಕೃಪಾಲು ಭಜಮನ್ (ತುಲಸಿದಾಸರ ಒಂದು ಭಜನೆ)

ಬದಲಾಯಿಸಿ
ಓ ಮನಸ್ಸೇ

! ದಯಾಳು ಶ್ರೀ ರಾಮನನ್ನು ಆರಾಧಿಸು

ಈತ ಲೋಕೋತ್ತರ ಪ್ರಪಂಚದ ಭಯವನ್ನು ನಿವಾರಿಸುತ್ತಾನೆ
ಈತನ ಕಣ್ಣುಗಳು ತಾಜಾ ಕಮಲಗಳಂತಿವೆ. ಈತ ಕಮಲವದನ.
ಈತನ ಕೈಗಳು ಕಮಲದಂತಿವೆ, ಈತನ ಪಾದಗಳು ಕಮಲದಂತಿವೆ.
ಈತನ ಸೌಂದರ್ಯ ಅಸಂಖ್ಯಾತ ಮನ್ಮಥರನ್ನು ಮೀರಿಸುತ್ತದೆ,
ಈತನ ಕೈಗಳು ನೀಲ ಆಗಸದಂತೆ ನೀಲಭರಿತವಾಗಿವೆ.
ಜನಕನ ಮಗಳನ್ನು ವರಿಸಿದವನ ಮುಂದೆ ನಾನು ತಲೆಬಾಗುತ್ತೇನೆ,
ಶುದ್ಧ ಪೀತಾಂಬರವನ್ನು ಧರಿಸಿ, ದರ್ಪವನ್ನು ಸಂಹರಿಸುತ್ತಾನೆ.
ದೀನ ಗೆಳೆಯನನ್ನು ಆರಾಧಿಸುವ,
ರಾಕ್ಷಸರ ಕುಟುಂಬಗಳನ್ನು ಸರ್ವನಾಶ ಮಾಡುವ ಸೂರ್ಯನೀತ.
ರಘುವಂಶಜ, ದಶರಥನ ಮಗ,
ಪರಮಾನಂದದ ಆಗರ, ಕೋಸಲಳಿಗೆ ಚಂದ್ರ.
ಶಿರದಲ್ಲಿ ಕಿರೀಟ ಧರಿಸಿರುವವನನ್ನು ಆರಾಧಿಸು,
ಕರ್ಣ ಒಡವೆಗಳನ್ನು ಮತ್ತು ಹಣೆಯಲ್ಲಿ ಕಡುಗೆಂಪು ತಿಲಕವನ್ನಿರಿಸಿದ
ಯಾರ ಪ್ರತಿ ಅಂಗಗಳು ಸುಂದರವಾಗಿ ಹಾಗೂ ಉದಾರವಾಗಿ ಅಲಂಕರಿಸಿರುವವೋ,
ಎತ್ತರದ ನಿಲುವಿನ, ಆಜಾನು ಬಾಹುಗಳಿಂದ ಕಟ್ಟುಮಸ್ತಾದ,
ಬಿಲ್ಲು ಬಾಣ ಹಿಡಿದು ಯುದ್ಧದಲ್ಲಿ ರಾಕ್ಷಸರ ವಿರುದ್ಧ ಜಯ ಸಾಧಿಸಿದವನನ್ನು ಆರಾಧಿಸು.
ಶಂಕರ ಮತ್ತು ಎಲ್ಲ ಸಂತರನ್ನು ಮೆಚ್ಚಿಸಿದ ಅವನನ್ನು ಈ ರೀತಿಯಾಗಿ ತುಲಸಿದಾಸರು ಆರಾಧಿಸುತ್ತಾರೆ,
ಕಾಮದಂತಹ ಭಾವನೆಗಳನ್ನು ಧ್ವಂಸಗೊಳಿಸಿ ನನ್ನ ಹೃದಯಕಮಲದಲ್ಲಿ ನೆಲೆಗೊಳ್ಳು.

ಶ್ರೀ ರಾಮಚಂದ್ರ = ಓ ಶ್ರೀರಾಮ ಕೃಪಾಲು = ಸದಾ ಅನುಕಂದಪ ಭಜುಮನ = ನನ್ನ ಮನಸ್ಸು ಪ್ರಾರ್ಥಿಸಲಿ(ಆತನನ್ನು) ಹರಣ = ಸಂಹಾರ ಅಥವಾ ಹಿಂಬಾಲಿಸುವವ ಭವಭಯ = ಈ ಪ್ರಪಂಚದ ಭಾಯ (ಭವಸಾಗರ್) - ಜನ್ಮ ಮತ್ತು ಮರುಜನ್ಮ ಚಕ್ರದ ದರುನಮ್ = ಕ್ರೂರ (ಪ್ರಪಂಚ)

.ತುಲಸಿದಾಸರು ಅವರ ಮನಸನ್ನು, ಸದಾ ದಯಾಳುವಾದ ಹಾಗೂ ನಮ್ಮ ಕ್ರೂರ ಜೀವನದ ಅವಧಿಯಲ್ಲಿನ ಎಲ್ಲ ಭಯಗಳನ್ನು ಸಂಹರಿಸುವ ಶ್ರೀ ರಾಮನನ್ನು ಧ್ಯಾನಿಸುವಂತ ಪ್ರೇರೇಪಿಸುತ್ತಾರೆ

ನವ ಕನ್ಜಲೋಚನ = (ಆತ ಹೊಂದಿದ) ಕಣ್ಣುಗಳು (ಲೋಚನ)ಹೊಸದಾಗಿ ರೂಪುಗೊಂಡ/ಕೋಮಲ (ನವ) ಕಮಲ (ಕಂಜ್) ಕುಂಜಮುಖ = ಹಾಗೂ ಸುಂದರ ಮುಖ (ಮುಖ) ಕಮಲದ ರೀತಿಯ (ಕಂಜ್) ಕರಕಂಜ = ಕಮಲದ ತರಹದ ಕೋಮಲ ಕೈಗಳು(ಕಂಜ್) ಪಾದ ಕಂಜಾರುಣಮ್ = ಹಾಗೂ ಆತನ ಪಾದಗಳು(ಪಾದ)ಕೆಂಪು(ಅರುಆಅ)ಕಮಲದಂತೆ (ಕಂಜ್)

ನನ್ನ ದೊರೆಯು ಕೋಮಲ/ತಾಜಾ ಕಮಲದಂತೆ ದೊಡ್ಡ, ಸುಂದರ ಕಣ್ಣುಗಳನ್ನು ಹೊಂದಿದ್ದು, ಆತನ ಬಾಹುಗಳು ಮತ್ತು ಪಾದಗಳು ಕಮಲದಂತಿವೆ ಹಾಗೂ ಆತನ ಮುಖವು ಬಿರಿದ ಕಮಲದಂತೆ ಇದೆ.

ಕಂದರ್ಪ = ಮನ್ಮಥ ಅಗಣಿತ = ಅಸಂಖ್ಯಾತ ಅಮಿತ = ಅಳತೆಗೆ ಮೀರಿದ ಚವಿ = ಮುಖ/ಮುಖಚರ್ಯೆ ನವನೀಲ = ಹೊಸದಾಗಿ(ನವ) ರೂಪುಗೊಂಡ ನೀಲಿ(ನೀಲ್) ನೀರಜ = ಕಮಲದಂತಹ (ನೀಲ ಕಮಲ - ನೀಲೊತ್ಪಲಮ್) ಸುಂದರಮ್ = ಸುಂದರ ಪಟ ಪೀತ = ಪೀತಾಂಬರ ಧರಿಸಿದ ಮಾನೋ ತಡಿತ = ನನ್ನ ಮನಸ್ಸು(ತಡಿತ ಎಂಬುದರ ಅರ್ಥ ಸ್ಪಷ್ಟವಿಲ್ಲ) ರುಚಿ ಸುಚಿನೌಮಿ = ಶುದ್ದನಾದ(ಸುಚಿ)ವನಿಗೆ ನಾನು ತಲೆಬಾಗುತ್ತೇನೆ ಜನಕ ಸುತಾ ವರಮ್ = ಜನಕನ(ಸುತಾ) ಮಗಳ(ಸೀತ)ಪತಿ(ವರ್)

ನೀಲೋತ್ಪಲಮ್‌ದಂತಹ ಮುಖದೊಂದಿಗೆ ನನ್ನ ದೊರೆಯ ಸೌಂದರ್ಯವು ಅಸಂಖ್ಯಾತ ಮನ್ಮಥರನ್ನು ಮೀರಿಸುತ್ತದೆ. ಹಳದಿ ಬಣ್ಣದ ವಸ್ತ್ರವನ್ನು ಧರಿಸುವ(ಪೀತಾಂಬರ್)ಈತ ತನ್ನ ಶುದ್ಧತೆಯಲ್ಲಿ ನಿಷ್ಕಂಳಕ ಹಾಗೂ ಶ್ರೀ ಸೀತಾಳ ಆಯ್ಕೆಯ ದೊರೆ, ಇವನಿಗೆ ನಾನು ಮಾನಸಿಕವಾಗಿ ಆತನ ಮುಂದೆ ತಲೆಬಾಗುತ್ತೇನೆ.

ಭಜು = ಪ್ರಾರ್ಥಿಸು ದೀನಬಂಧು = ಕೆಳವರ್ಗದ/ದೀನರ/ಬಡವರ/ಅಶಕ್ತರ(ದೀನ)ರ ಗೆಳೆಯ (ಬಂಧು) ದಿನೇಶ = ಸೂರ್ಯ ವಂಶದ ಒಂದು ಕುಡಿ ದಾನವ ದೈತ್ಯ ವಂಶ ನಿಕಕಂದನಮ್ = (ಆತ)ರಾಕ್ಷಸ (ನಿಕಂದನಮ್)ಕುಲವನ್ನು (ವಂಶ) ಸಂಹರಿಸಿದ

ದುರ್ಬಲರ ಗೆಳೆಯ ಹಾಗೂ ಸಂರಕ್ಷಕ, ರಾಕ್ಷಸರ ಸಂಹಾರಿ ಸೂರ್ಯ ಮನೆತನದ ಕುಡಿಯಾದ ದೊರೆಗೆ ಪ್ರಾರ್ಥಿಸು.

ರಘುನಂದ = ರಘೂ(ಕುಲ)ರವರ ಮಗ ಆನಂದಕಂದ = ಸಂತೋಷದ(ಆನಂದ)ಸಾಗರ(ಕಂದ) ಕೋಶ್ಲಚಂದ = ಕೋಸಲ ರಾಜವಂಶದ ಮನದನ್ನ(ಚಂದ) ದಶರಥ ನಂದನಮ್ = ರಾಜ ದಶರಥನ ಮಗ(ನಂದನಮ್)

ರಘುವಂಶದ ದಶರಥ ರಾಜನ ಪುತ್ರ ಕೋಸಲದ ಮನದನ್ನ(ಆತನ ತಾಯಿಯ ಮನೆತನ/ರಾಜವಂಶ - ಕೌಸಲ್ಯಾ)ಹಾಗೂ ಕೊನೆಯಿಲ್ಲದ ಪರಮಾನಂದ.

ಶಿರ ಮುಕುಟ = ತಲೆಯ(ದೊರೆ) ಮೇಲಿನ ಕಿರೀಟ(ಮುಕುಟ) ಕುಂಡಲ = ತೂಗಾಡುವ ಕಿವಿ ಓಲೆಗಳು ತಿಲಕ = ಹಣೆಯ ಮೇಲಿನ ಸುಂದರವಾದ ತಿಲಕ ಚಾರು = (ನೋಟಗಳು)ಸುಂದರವಾದ ಉದಾರ ಅಂಗ)= ಆತನ ದೈತ್ಯ (ಉದಾರ್)ಅವಯವಗಳು(ಅಂಗ) ವಿಭೂಷಣಮ್ = ಆಭರಣಗಳಿಂದ ಅಲಂಕೃತವಾದವು

ಆತನು ಶಿರದಲ್ಲಿ ಮುಕುಟ, ಕಿವಿಯಲ್ಲಿ ತೂಗಾಡುವ ಕಮಂಡಲ ಹಾಗೂ ಹಣೆಯಲ್ಲಿ ಸುಂದರವಾದ ತಿಲಕವನ್ನು ಧರಿಸಿರುತ್ತಾನೆ. ಆತನ ಆಜಾನು ಬಾಹುಗಳು ಹಸ್ತಾಭರಣಗಳು ಮತ್ತು ಬಾಹುಬಂಧಿಗಳಿಂದ ಅಲಂಕೃತವಾಗಿವೆ.

ಆಜಾನುಭುಜ = ಈತನ ಬಾಹುಗಳು(ಭುಜ)ಉದ್ದವಾಗಿವೆ(ಆಜಾನು)-ಸಾಹಿತ್ಯಿಕವಾಗಿ ಕೈಗಳು ಆತನ ಮೊಣಕಾಲನ್ನು ತಾಗುವುದು ಎಂದು ಅರ್ಥ ಶರಚಾಪ ಧರ = ಬಿಲ್ಲು (ಚಾಪ) ಮತ್ತು ಬಾಣಗಳು(ಶರ)ವನ್ನು ಪ್ರಯೋಗಿಸುವುದು ಸಂಗ್ರಾಮ ಜಿತ ಖರ ದುಶಣಮ್ = ಯುದ್ದದಲ್ಲಿ(ಸಂಗ್ರಾಮ್) ಖರ ಮತ್ತು ದೂಶಣನನ್ನು ಸೋಲಿಸಿದಾತ(ಜಿತ)

ಯುದ್ಧದಲ್ಲಿ ಆಜಾನು ಬಾಹುಗಳಿಂದ ಬಿಲ್ಲು ಮತ್ತು ಬಾಣಗಳನ್ನು ಪ್ರಯೋಗಿಸಿ ಖರ ಮತ್ತು ದೂಶಣನನ್ನು (ಶೂರ್ಪನಖಳ ಸಹೋದರರು)ಸೋಲಿಸಿದ.

ಇತಿ ವದತಿ = ಈ ಪ್ರಕಾರ (ಇತಿ) ಹೇಳುವುದು (ವದತಿ) ತುಲಸೀದಾಸ್ = ಕವಿ ತುಲಸಿದಾಸ್ ಶಂಕರ = ಶಿವ ದೈವ ಶೇಶ ಮುನಿ = (ಹಾಗೂ)ಇತರೆ (ಶೇಶ)ಮುನಿಗಳು ಮನ ರಂಜನಮ್ = ಅವರ ಮನಸ್ಸುಗಳ ಸಂತಸ (ರಂಜನ) ಮಮ ಹೃದಯ ಕಂಜ = ನನ್ನ (ಮಮ)ಹೃದಯ(ಹೃದಯ್) ಕಮಲದಲ್ಲಿ(ಕಂಜ್) ನಿವಾಸಕುರು = ದಯವಿಟ್ಟು ನೆಲೆಗೊಳ್ಳು(ನಿವಾಸ್ ಕುರು) ಕಾಮಾದಿ ಖಲಂದಲ ಗಂಜನಮ್ = ಓ ಕಾಮವಿನಾಶಕ (ಗಂಜನಮ್) ಹಾಗೂ ಇತರೆ ನೀಚ ಕೃತ್ಯಗಳ (ಖಲಂದಲ)ವಿನಾಶಕ

ಇವನ್ನೂ ನೋಡಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. ಶ್ರೀ ತುಲಸಿ ಪೀತ್‌ರಿಂದ ಪ್ರಕಾಶನಗೊಂಡ ಮನಸ್, ಚಿತ್ರಕೂಟ್
  2. ತುಲಸಿದಾಸ್ Archived 2009-03-25 ವೇಬ್ಯಾಕ್ ಮೆಷಿನ್ ನಲ್ಲಿ. www.ramcharitmanas.iitk.ac.in.
  3. ರಾಮಚರಿತಮಾನಸ, ಬಾಲ್ ಕಾಂಡ್, ದೋಹಾ 23
  4. ತುಲಸಿದಾಸರ ರಾಮಾಯಣ
  5. ತುಲಸಿದಾಸರ ರಾಮಾಯಣವ್ಯಾಕರಣದ ಮೇಲಿನ ಟಿಪ್ಪಣಿಗಳು

ಬಾಹ್ಯ ಕೊಂಡಿಗಳು

ಬದಲಾಯಿಸಿ