ಕವನ
ಸಾಹಿತ್ಯ ಕಲೆ
(ಕಾವ್ಯ ಇಂದ ಪುನರ್ನಿರ್ದೇಶಿತ)
ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವಾ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು. ಕವಿತೆಯು ಸ್ವತಂತ್ರವಾಗಿ ರಚಿತವಾಗಿರಬಹುದು ಅಥವಾ ಸಂಗೀತ, ನಾಟಕ ಮುಂತಾದ ಕಲೆಗಳೊಂದಿಗೆ ಉಪಯೋಗಿಸಲ್ಪಡಬಹುದು.
- ಇದರಲ್ಲಿ ನಾಲ್ಕು ಅಥವಾ ಆರು ಸಾಲಿನ ಚೌಕಟ್ಟಿರುತ್ತದೆ.
- ಕವನದಲ್ಲಿ ಶೃಂಗಾರವನ್ನು ಬಿಂಬಿಸುವ ರಮಣೀಯ ಪದಗಳು ಹೆಚ್ಚಾಗಿರುತ್ತವೆ.
- ಪ್ರತಿ ಪದಗಳ ಬಳಕೆ ಓದುಗನಿಗೆ ಮುದ ನೀಡುವಂತೆ ರಚಿತವಾಗಿರುತ್ತದೆ.
- ನವ, ನವೀನವಾದ ಪದಗಳ ಬಳಕೆಗೆ ಹೆಚ್ಚಿನ ಆಧ್ಯತೆ ಇರುತ್ತದೆ.
- ಇದರಲ್ಲಿನ ವಿಷಯವಸ್ತು ಶೃಂಗಾರ ಹಾಸ್ಯದಿಂದ ಹಿಡಿದು ಎಲ್ಲವನ್ನು ಸೂಕ್ಷ್ಮವಾಗಿ ಪ್ರತಿಪಾದಿಸಲಾಗಿರುತ್ತದೆ.
- ಆಧುನಿಕತೆಗೆ ಒತ್ತು ನೀಡಿ ರಚಿಸಲಾಗುತ್ತದೆ.
- ಸರಳ ಹಾಗೂ ಸುಂದರವಾದ ಪದಬಳಕೆಯಿಂದ ಕೂಡಿರುತ್ತದೆ.
- ಕೆಲವುಕಡೆ ವಿವಿಧ ರೀತಿಯ ಪ್ರಾಸಕ್ಕೆ ತುಂಬಾ ಪ್ರಾಮುಖ್ಯತೆ ನೀಡಿ ರಚಿಸಲಾಗುತ್ತದೆ.
- ಎರಡು ಅಥವಾ ಮೂರು ಸಾಲಿನಿಂದ ರಚಿತವಾದ ಕವನಗಳಿಗೆ ಹೈಕು/ಹನಿಗವನ/ಚುಟುಕು ಎಂದು ಕರೆಯಲಾಗಿದ್ದು, ಇದನ್ನು ಮನೋಹರವಾಗಿ, ಲಘುವಾಗಿ ರಚಿಸಬಹುದಾಗಿದೆ.
- ವರ್ಣರಂಜಿತ ಪದಗಳಿಂದ ತುಂಬಿದ್ದು ಸಕಾರ ಮತ್ತು ವಿರಾಳ ಭಾವವನ್ನು ಮೂಡಿಸುವುದರಲ್ಲಿ ಸಫಲತೆಯನ್ನು ಕಂಡುಕೊಂಡಿರುತ್ತದೆ.