ಯೋಗವಾಹ
ಎಂದರೆ ಒಂದು ಕ್ಷಣ ಎಂದರ್ಥ
ಯೋಗವಾಹ ಅಕ್ಷರಗಳನ್ನು ಅಕ್ಷರಮಾಲೆಯ ಶುದ್ಧಾಕ್ಷರಗಳು ಎಂದು ಕರೆಯುವುದಕ್ಕಿಂತ ಭಾಷೆಯಲ್ಲಿ ಕೇಳಿ ಬರುವ ಧ್ವನಿಗಳು ಯೋಗವಾಹಗಳು ಎಂದು ಮನ್ನಣೆ ನೀಡಲಾಗಿದೆ.[೧]
|
ಯೋಗವಾಹದ ವಿಧಗಳು
ಬದಲಾಯಿಸಿಕೇಶಿರಾಜ ಯೋಗವಾಹಗಳನ್ನು ಸ್ವರಗಳಿಂದ ಪ್ರತ್ಯೇಕವಾಗಿ ವಿಭಾಗಿಸಿ, ನಾಲ್ಕು ಭಾಗ ಮಾಡಿಕೊಳ್ಳುತ್ತಾನೆ.[೨]
ಅನುಸ್ವಾರ
ಬದಲಾಯಿಸಿ- ‘ಂ’ - ಉದಾ : ಅಂ, ಡಂ, ಕಂ, ಗಂ. ಪದಗಳಲ್ಲಿ - ಅಂಗಳ,ಗಂಡು, ಕಂದ
- ಅನುಸ್ವಾರಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ವ್ಯಂಜನಾಂಗವೆಂದೂ ಕರೆಯಲಾಗಿದೆ.
ವಿಸರ್ಗ
ಬದಲಾಯಿಸಿ- ‘ಃ’ - ಉದಾ : ಅಃ, ಕಃ.
- ವಿಸರ್ಗಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ವಿಸರ್ಗವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ವಿಸರ್ಗವನ್ನು ವ್ಯಂಜನಾಂಗವೆಂದೂ ಕರೆಯಲಾಗಿದೆ.
ಜಿಹ್ವಾಮೂಲೀಯ
ಬದಲಾಯಿಸಿ- ‘x್ಕ’ – ೦ಃಕ.
- ಜಿಹ್ವಾಮೂಲೀಯಗಳು ಸಂಸ್ಕೃತ ಪದಕೋಶದಲ್ಲಿ ಮಾತ್ರ ಕಾಣಿಸುತ್ತವೆ. ಉದಾ: ಪ್ರಾತ ಃಕಾಲ ಇತ್ಯಾದಿ. ಆದರೆ ಈ ಧ್ವನಿ ವಿಶೇಷ ಕನ್ನಡಕ್ಕೂ ಸಹಜವಾದುದೆಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ‘ಉಫ್’ ಎಂಬಲ್ಲಿ ಕೇಳಿ ಬರುವಧ್ವನಿಯೇ ಜಿಹ್ವಾಮೂಲೀಯ. ಉದಾ: ಅಂತ ಃಕರಣ, ಮನ ಃಕಷಾಯ. ಇದು ಶ್ರವಣ ರೂಪದ ಧ್ವನ್ಯಂಗವಾಗಿದ್ದು ಅಕ್ಷರ ರೂಪದ ಶುದ್ಧಗೆ ಎಂಬುದು ಕನ್ನಡದಲ್ಲಿ ಗಮನಾರ್ಹ.
ಉಪಾದ್ಮಾನೀಯ
ಬದಲಾಯಿಸಿ- (ಓಷ್ಠ್ಯ) ಪಿ -
- ಉಪದ್ಮಾನೀಯಗಳು ಸಂಸ್ಕೃತ ಪದಕೋಶದಲ್ಲಿ ಮಾತ್ರ ಕಾಣಿಸುತ್ತವೆ. ಉದಾ: ಪಯ ಃಪಾನ ಇತ್ಯಾದಿ. ಆದರೆ ಈ ಧ್ವನಿ ವಿಶೇಷ ಕನ್ನಡಕ್ಕೂ ಸಹಜವಾದುದೆಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಉಪಾದ್ಮಾನೀಯಕ್ಕೆ ಉದಾ: ಃಪ / ಪಿ - ತಪ ಃಫಲ, ಪುನ ಃಪುನಃ . ಇದು ಶ್ರವಣ ರೂಪದ ಧ್ವನ್ಯಂಗವಾಗಿದ್ದು ಅಕ್ಷರ ರೂಪದ ಶುದ್ಧಗೆ ಎಂಬುದು ಕನ್ನಡದಲ್ಲಿ ಗಮನಾರ್ಹ.
ಅನುಸ್ವಾರ, ವಿಸರ್ಗಗಳು ಸ್ವರಾಂಗ ವ್ಯಂಜನಾಂಗವಾದರೂ ಭಾಷಾಬಳಕೆಯಲ್ಲಿ ಅವುಗಳಿಗೆ ಸ್ವತಂತ್ರ ಧ್ವನಿಮಾ ವ್ಯವಸ್ಥೆಯಿಲ್ಲ. ಆದರೂ ಕೇಶಿರಾಜನ ಇವು ನಾಲ್ಕೂ ಯೋಗವಾಹಗಳು.
ಉಲ್ಲೇಖ
ಬದಲಾಯಿಸಿ- ↑ https://www.omniref.com/ruby/gems/scylla/0.4.1/files/source_texts/kannada.txt[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on 2016-10-19. Retrieved 2015-12-27.