ಬ
ಬ, ಕನ್ನಡ ವರ್ಣಮಾಲೆಯ ಪ-ವರ್ಗದ ಮೂರನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ , ಅಲ್ಪಪ್ರಾಣ .
|
ಚಾರಿತ್ರಿಕ ಹಿನ್ನೆಲೆ
ಬದಲಾಯಿಸಿಮೌರ್ಯರ ಕಾಲದ ಬ್ರಾಹ್ಮೀಯಲ್ಲಿ ಇದರ ಆಕಾರ ಚೌಕನಾದ್ದು. ಇದೇ ರೂಪವೆ ಮುಂದುವರಿದರೂ ಮೂಲೆಗಳು ಸ್ವಲ್ಪ ಗುಂಡಗಾಗುತ್ತ ಹೋಗುತ್ತವೆ. ಸುಮಾರು ಐದನೆಯ ಶತಮಾನದಲ್ಲಿ ಎಡಭಾಗದಲ್ಲಿ ರೇಖೆ ಕೊಂಡಿಯಂತಾಗುತ್ತದೆ. ಒಂಬತ್ತನೆಯ ಶತಮಾನದಲ್ಲಿ ಎಡಭಾಗದ ಈ ಕೊಂಡಿ ಬೇರೆಯಾಗಲು ಹವಣಿಸುತ್ತದೆ. ಹನ್ನೊಂದನೆಯ ಶತಮಾನದಲ್ಲಿ ಪೂರ್ಣ ವಿಕಾಸಹೊಂದಿ ಅಕ್ಷರದ ಮೇಲ್ಭಾಗದ ರೇಖೆ ಇಲ್ಲವಾಗಿ ತಳದಲ್ಲಿ ಹೊಕ್ಕಳು ಕಾಣಿಸಿಕೊಳ್ಳುತ್ತದೆ. ಇದೇ ರೂಪವೇ ಮುಂದುವರಿಯುತ್ತದೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: