, ಕನ್ನಡ ವರ್ಣಮಾಲೆಯ ಆರನೇ ಅವರ್ಗೀಯ ವ್ಯಂಜನವಾಗಿದೆ. ತಾಲವ್ಯ ಅಘೋಷ ಸಂಘರ್ಷ ವ್ಯಂಜನ ಧ್ವನಿ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಚಾರಿತ್ರಿಕ ಹಿನ್ನೆಲೆ

ಬದಲಾಯಿಸಿ

ಬಾಣದ ಆಕಾರದಲ್ಲಿರುವ ಅಶೋಕನ ಕಾಲದ ಈ ಅಕ್ಷರದ ಸ್ವರೂಪಕ್ಕೂ ಈಗಿನ ಸ್ವರೂಪಕ್ಕೂ ಯಾವ ವಿಧವಾದ ಹೋಲಿಕೆಗಳೂ ಕಂಡು ಬರುವುದಿಲ್ಲ. ಉದ್ದನೆಯ ಈ ಅಕ್ಷರ ಸಾತವಾಹನ ಕಾಲದಲ್ಲಿ ಸಣ್ಣದಾಗಿ ಕದಂಬ ಕಾಲದಲ್ಲಿ ಘಂಟೆಯ ಆಕಾರವನ್ನು ಹೊಂದುತ್ತದೆ.ಎರಡು ಪಾರ್ಶ್ವಗಳನ್ನು ಸೇರಿಸುವ ಒಂದು ರೇಖೆ ಇಲ್ಲಿ ಉದ್ಭವವಾಗುತ್ತದೆ. ಇದೇ ಮುಂದೆ ಪರಿವರ್ತಿತವಾಗಿ ಅಕ್ಷರದ ಕೆಳಭಾಗವಾಗುತ್ತದೆ. ರಾಷ್ಟ್ರಕೂಟ ಕಾಲದಲ್ಲಿಯೂ ಈ ಅಕ್ಷರದಲ್ಲಿ ಅಂತಹ ಬದಲಾವಣೆಗಳೇನೂ ಕಾಣಬರುವುದಿಲ್ಲ. ಆದರೆ ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಬಹು ಬದಲಾವಣೆಗಳನ್ನು ಹೊಂದಿ ಈಗಿನ ಅಕ್ಷರಕ್ಕೆ ಅತಿ ಸಮೀಪವಾಗಿ ಕಾಣಬರುತ್ತದೆ. ಕೆಳಭಾಗದಲ್ಲಿ ಒಂದು ವೃತ್ತಾಕಾರ ಉದ್ಭವವಾಗಿ ಅದು ಪಾಶ್ರ್ವವನ್ನು ಮೀರಿ ಹೊರಬರುತ್ತದೆ. ಇದೇ ಆಕಾರ ಕಳಚುರಿ, ಹೊಯ್ಸಳ ಮತ್ತು ಸೇವುಣ ಕಾಲಗಳಲ್ಲಿಯೂ ಮುಂದುವರಿಯುತ್ತದೆ. ಆದರೆ ವಿಜಯನಗರ ಕಾಲದಲ್ಲಿ ಕೆಳಗಿನ ವೃತ್ತಾಕೃತಿ ಅಗಲವಾಗುವ ಬದಲು ಉದ್ದವಾಗುತ್ತದೆ ಮತ್ತು ಪಾಶ್ರ್ವದ ರೇಖೆಯನ್ನು ಮೀರಿ ಹೊರಬರುವುದಿಲ್ಲ. ಇದೇ ಸ್ವರೂಪವೇ ಇನ್ನೂ ಗುಂಡಗಾಗಿ ಹದಿನೆಂಟನೆಯ ಶತಮಾನದಲ್ಲಿ ಮುಂದುವರಿಯುತ್ತದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಶ&oldid=972142" ಇಂದ ಪಡೆಯಲ್ಪಟ್ಟಿದೆ