ಶಿವರಾಜ್‍ಕುಮಾರ್ (ನಟ)
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. (ಏಪ್ರಿಲ್ ೨೭,೨೦೧೫) |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ (ಏಪ್ರಿಲ್ ೨೭,೨೦೧೫) ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಡಾ. ಶಿವರಾಜ್‍ಕುಮಾರ್ ಕನ್ನಡದ ಚಿತ್ರನಟ. ಡಾ. ರಾಜ್‍ಕುಮಾರ್‍ಅವರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್‍ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು ೧೦೦ ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು.
ಡಾ. ಶಿವರಾಜ್ ಕುಮಾರ್ | |
---|---|
Born | ಶಿವು ಪುಟ್ಟ ಸ್ವಾಮಿ ೧೯೬೨-೦೭-೧೨ |
Other names | ಪುಟ್ಟಸ್ವಾಮಿ,ಶಿವಣ್ಣ |
Occupation(s) | ನಟ, ಹಿನ್ನಲೆ ಗಾಯಕ , ನೃತ್ಯಗಾರ |
Years active | ೧೯೮೬ —ಪ್ರಸಕ್ತ |
Title | ಡಾಕ್ಟರೇಟ್ ಪದವಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ[೧], ಶಿವಣ್ಣ , ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್,ಎಸ್ ಆರ್ ಕೆ, ನಾಟ್ಯ ಸಾರ್ವಭೌಮ, |
Spouse | ಗೀತಾ ಶಿವರಾಜ್‍ಕುಮಾರ್ |
Children | ನಿವೇದಿತಾ,ನಿರುಪಮಾ |
Parent(s) | ಡಾ.ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ |
ಜನನ
ಬದಲಾಯಿಸಿಶಿವರಾಜ್ಕುಮಾರ್ ೧೯೬೨ರ ಜುಲೈನಲ್ಲಿ ಮದ್ರಾಸ್ ನಗರದಲ್ಲಿ ಡಾ. ರಾಜ್‍ಕುಮಾರ್ ಮತ್ತು ಪಾರ್ವತಮ್ಮ ದಂಪತಿಗಳಿಗೆ ಜನಿಸಿದರು. ಡಾ. ರಾಜ್‍ಕುಮಾರ್ ಮಗನಿಗೆ ಶಿವಪುಟ್ಟಸ್ವಾಮಿ ಎಂದು ತಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಙ್ನಾಪಕಾರ್ಥವಾಗಿ ಅವರ ಹೆಸರನ್ನೇ ಮಗನಿಗೆ ಇಟ್ಟರು. ಬಾಲ್ಯದಿಂದಲೇ ಶಿಸ್ತು ಮತ್ತು ಸಂಯಮಗಳನ್ನು ರೂಢಿಸಿಕೊಂಡ ಶಿವರಾಜ್‍ಕುಮಾರ್, ಕ್ರೀಡಾಚಟುವಟಿಕೆಗಳಲ್ಲಿ ಹೆಸರು ಮಾಡಿದರು.
ಚಿತ್ರರಂಗ
ಬದಲಾಯಿಸಿಮುಂಬೈನಲ್ಲಿ ಅಭಿನಯದ ತರಬೇತಿ ಪಡೆದ ಶಿವರಾಜ್‍ಕುಮಾರ್, ೧೯೮೬ನೇ ಇಸವಿಯಲ್ಲಿ ಆನಂದ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಚಿ. ಉದಯಶಂಕರ್ ಪುತ್ರ ಚಿ. ಗುರುದತ್, ನಟಿ ಸುಧಾರಾಣಿ ಇವರಿಬ್ಬರ ಮೊದಲ ಚಿತ್ರವೂ ಆನಂದ್ ಆಗಿತ್ತು. ತನ್ನನ್ನೂ ಮತ್ತು ತನ್ನ ತಾಯಿಯನ್ನು ನಡುಬೀದಿಯಲ್ಲಿ ಬಿಟ್ಟ ತನ್ನ ತಂದೆಗೆ ಬುದ್ದಿ ಕಲಿಸುವ ವಿದ್ಯಾರ್ಥಿಯ ಪಾತ್ರದಲ್ಲಿ ಶಿವರಾಜ್‍ಕುಮಾರ್ ನಟನೆಗೆ ಪ್ರಶಂಸೆ ಪಡೆದರು.ಮುಂದಿನ ಎರಡೂ ಚಿತ್ರಗಳು (ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ) ಶತದಿನ ಪ್ರದರ್ಶನ ಕಂಡವು..
ಅಭಿನಯದ ಮೊದಲ ಮೂರೂ ಚಿತ್ರಗಳೂ ಶತದಿನೋತ್ಸವದ ಯಶಸ್ಸು ಪಡೆದದ್ದರಿಂದ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದಿಗೆ ಪಾತ್ರರಾದರು. ರಣರಂಗ ಚಿತ್ರ ಕೂಡಾ ಶತದಿನ ಪ್ರದರ್ಶನ ಕಂಡಿತು.೧೯೯೨ರಿಂದ ೧೯೯೫ರ ಅವಧಿಯಲ್ಲಿ ಶಿವರಾಜ್‍ಕುಮಾರ್ ಅಭಿನಯದ ಚಿತ್ರಗಳು ಸತತವಾಗಿ ಸೋಲು ಕಂಡವು. ೧೯೯೪ರಲ್ಲಿ ಉಪೇಂದ್ರ ನಿರ್ದೇಶನದ ಓಂ ಚಿತ್ರ ಶಿವರಾಜ್‍ಕುಮಾರ್ ರಿಗೆ ಭಿನ್ನ ಇಮೇಜ್ ನೀಡಿತು. ಭೂಗತ ಪಾತಕಿ ಸ್ಟೇಷನ್ ಸತ್ಯ ಬದುಕನ್ನು ಆಧರಿಸಿದ ಆ ಚಿತ್ರ ಜನಮನ್ನಣೆ, ಯಶಸ್ಸು ಮತ್ತು ಕೀರ್ತಿ ತಂದಿತು. ೧೯೯೫ರಲ್ಲಿ ಜನುಮದ ಜೋಡಿ ಮತ್ತು ನಮ್ಮೂರ ಮಂದಾರ ಹೂವೆ ಚಿತ್ರಗಳ ಅಭೂತಪೂರ್ವ ಯಶಸ್ಸು ಹಿವರಾಜ್‍ಕುಮಾರ್ ರಿಗೆ ಅಗ್ರ ಸ್ಥಾನದತ್ತ ತಂದೊಯ್ದಿತು. ಆ ರೀತಿಯ ಗೆಲುವನ್ನು ಕಾಣಲು, ೧೯೯೯ರಲ್ಲಿ ತೆರೆಕಂಡ ಎಕೆ ೪೭ ಚಿತ್ರದವರೆಗೆ ಶಿವರಾಜ್‍ಕುಮಾರ್ ಕಾಯಬೇಕಾಯಿತು. ತಮ್ಮ ಸಜ್ಜನಿಕೆ, ಸರಳತೆ ಮತ್ತು ತಾದಾತ್ಮ್ಯತೆಯಿಂದ ಶಿವರಾಜ್‍ಕುಮಾರ್ ನಿರ್ಮಾಪಕರುಗಳಿಗೆ ಮಿನಿಮಂ ಗ್ಯಾರಂಟಿ ಹೀರೋ ಆದರು. ರೊಮಾಂಟಿಕ್ ಪಾತ್ರಗಳ ರಮೇಶ್, ಭಿನ್ನತೆಯ ಉಪೇಂದ್ರ, ಆವೇಶಭರಿತ ಪೋಲೀಸ್ ಪಾತ್ರಗಳ ಸಾಯಿಕುಮಾರ್ ಹೀಗೆ ಹಲವು ನಟರುಗಳ ನಡುವೆಯೂ ಶಿವರಾಜ್‍ಕುಮಾರ್, ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದರು. ಇಮೇಜ್ ನ ಹಂಗು ಇಲ್ಲದೆ, ವಿಭಿನ್ನ ಪಾತ್ರಗಳನ್ನು ನಿರ್ವಹಿಸಲು ಸದಾ ಮುಂದಾಗುಗಿತ್ತಿದ್ದ ಶಿವರಾಜ್, ಅದೇ ಕಾರಣಕ್ಕೆ ಬರಗೂರು ರಾಮಚಂದ್ರಪ್ಪನವರ ಹಗಲುವೇಷ, ಪ್ರೇಂರ ಜೋಗಿ, ಹೀಗೆ ಹಲವು ಹೊಸ ನಿರ್ದೇಶಕರ ಮೊದಲ ಆಯ್ಕೆಯಾಗಿ ಉಳಿದರು. ರವಿಚಂದ್ರನ್, ರಮೇಶ್ ಮತ್ತು ಉಪೇಂದ್ರ ಶಿವರಾಜ್ ರ ನೆಚ್ಚಿನ ಗೆಳೆಯರು.
ಗಾಯನ
ಬದಲಾಯಿಸಿಇವರು ಆಸೆಗೊಬ್ಬ ಮೀಸೆಗೊಬ್ಬ, ಮೋಡದ ಮರೆಯಲ್ಲಿ, ಅಂಡಮಾನ್, ಸಾರ್ವಭೌಮ ಅಭಯಹಸ್ತ ಹಲವಾರು ಚಿತ್ರಗಳಲ್ಲಿ ಹಿನ್ನೆಲೆಗಾಯನ ಕೂಡ ಮಾಡಿದ್ದಾರೆ. ಇವರ ಪುತ್ರಿಯ ಹೆಸರು ನಿವೇದಿತಾ. ಈಕೆ, ಅಂಡಮಾನ್ ಚಿತ್ರದಲ್ಲಿ ನಟಿಸಿದ್ದಾಳೆ.
ಪ್ರಶಸ್ತಿಗಳು
ಬದಲಾಯಿಸಿರಾಜ್ಯ ಪ್ರಶಸ್ತಿಗಳು
ಬದಲಾಯಿಸಿ- ಓಂ- ೧೯೯೫ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
- ಹೃದಯ ಹೃದಯ - ೧೯೯೯ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
- ಚಿಗುರಿದ ಕನಸು - ೨೦೦೩ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
- ಜೋಗಿ - ೨೦೦೬ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
ಉಜ್ವಲ ಪ್ರಶಸ್ತಿ
ಬದಲಾಯಿಸಿ- ಆನಂದ್ - ೧೯೮೬
- ಭೂಮಿತಾಯಿಯ ಚೊಚ್ಚಲ ಮಗ - ೧೯೯೮
ಚಿತ್ರ ರಸಿಕರ ಸಂಘ ಪ್ರಶಸ್ತಿ
ಬದಲಾಯಿಸಿ- ಮಿಡಿದ ಶ್ರುತಿ - ೧೯೯೨
- ಜನುಮದ ಜೋಡಿ - ೧೯೯೬
- ಎ.ಕೆ.೪೭ - ೧೯೯೯
ಫಿಲಮ್‍ಫೇರ್ ಪ್ರಶಸ್ತಿ
ಬದಲಾಯಿಸಿ- ಓಂ- ೧೯೯೫
- ನಮ್ಮೂರ ಮಂದಾರ ಹೂವೆ - ೧೯೯೬
- ಎ.ಕೆ.೪೭ - ೧೯೯೯
- ತಮಸ್ಸು - ೨೦೧೧
- ಜೋಗಿ
ಹೀರೋಹೋಂಡ ಎಕ್ಸ್ಪ್ರೆಸ್ ಪ್ರಶಸ್ತಿ
ಬದಲಾಯಿಸಿ- ಓಂ - ೧೯೯೫
- ಜನುಮದ ಜೋಡಿ - ೧೯೯೬
- ಎ.ಕೆ.೪೭ - ೧೯೯೯
ಆರ್ಯಭಟ ಪ್ರಶಸ್ತಿ
ಬದಲಾಯಿಸಿ- ಜನುಮದ ಜೋಡಿ - ೧೯೯೬
ಸ್ಕ್ರೀನ್ ಅವಾರ್ಡ್ಸ್
ಬದಲಾಯಿಸಿ- ನಮ್ಮೂರ ಮಂದಾರ ಹೂವೆ - ೧೯೯೬
ಎಸ್.ಐ.ಸಿ.ಎ. ವಿಶೇಷ ಜ್ಯೂರಿ ಪ್ರಶಸ್ತಿ
ಬದಲಾಯಿಸಿ- ತವರಿಗೆ ಬಾ ತಂಗಿ - ೨೦೦೨
- ಚಿಗುರಿದ ಕನಸು - ೨೦೦೪
ಹಲೋ ಗಾಂಧಿನಗರ ಪ್ರಶಸ್ತಿ
ಬದಲಾಯಿಸಿ- ಚಿಗುರಿದ ಕನಸು - ೨೦೦೪
ಈ ಟಿವಿ ವಾಟಿಕಾ ಪ್ರಸಸ್ತಿ
ಬದಲಾಯಿಸಿ- ಜೋಗಿ - ೨೦೦೫
ಮೈಲಿಗಲ್ಲುಗಳು
ಬದಲಾಯಿಸಿ- ೧ನೇ ಚಿತ್ರ: ಆನಂದ್ (೧೯೮೬)
- ೨೫ನೇ ಚಿತ್ರ: ಮನಮಿಡಿಯಿತು (೧೯೯೫)
- ೫೦ನೇ ಚಿತ್ರ: ಏ.ಕೆ. ೪೭ (೧೯೯೯)
- ೭೫ನೇ ಚಿತ್ರ: ಶ್ರೀರಾಮ್ (೨೦೦೩)
- ೧೦೦ನೇ ಚಿತ್ರ: ಜೋಗಯ್ಯ (೨೦೧೧)
ಅಭಿನಯಿಸಿದ ಚಲನಚಿತ್ರಗಳು
ಬದಲಾಯಿಸಿಈ ಹೃದಯ ನಿನಗಾಗಿ ಚಿತ್ರದಲ್ಲಿ ಒಂದು ಹಾಡಿನಲ್ಲಿ ನಟಿಸಿದ್ದಾರೆ
ಉಲ್ಲೇಖಗಳು
ಬದಲಾಯಿಸಿ- ↑ http://kannada.oneindia.in/movies/news/shivrajkumar-receive-an-honorary-doctorate-bellary-084386.html