ಸಂತ
ಹಿಂದೂ ಧರ್ಮ, ಜೈನ ಧರ್ಮ, ಮತ್ತು ಬೌದ್ಧ ಧರ್ಮದಲ್ಲಿ, ಸಂತ ಎಂದರೆ "ಆತ್ಮ, ಸತ್ಯ, ವಾಸ್ತವ"ದ ಬಗ್ಗೆ ಅವನ ಅಥವಾ ಅವಳ ಜ್ಞಾನಕ್ಕಾಗಿ ಮತ್ತು ಸತ್ಯದ ಆದರ್ಶವಾಗಿ ಗೌರವದಿಂದ ಕಾಣಲಾದ ಮನುಷ್ಯ. ಸಿಖ್ ಧರ್ಮದಲ್ಲಿ ಈ ಪದವನ್ನು ದೇವರೊಡನೆ ಸಂಯೋಗದ ಮೂಲಕ ಆಧ್ಯಾತ್ಮಿಕ ಜ್ಞಾನೋದಯ ಮತ್ತು ದೈವಿಕ ಜ್ಞಾನ ಹಾಗೂ ಶಕ್ತಿಯನ್ನು ಪಡೆದಿರುವ ಜೀವಿಯನ್ನು ವರ್ಣಿಸಲು ಬಳಸಲಾಗುತ್ತದೆ.[೧]
ವ್ಯುತ್ಪತ್ತಿ
ಬದಲಾಯಿಸಿಸಂತ ಶಬ್ದವು ಸಂಸ್ಕೃತ ಮೂಲ ಸತ್ ಇಂದ ವ್ಯುತ್ಪನ್ನವಾಗಿದೆ. ಇದರರ್ಥ "ಸತ್ಯ, ವಾಸ್ತವ, ಸಾರ" ಎಂದಿರಬಹುದು.
ಬಳಕೆ
ಬದಲಾಯಿಸಿಈ ಶಬ್ದವನ್ನು ವಿವಿಧ ಸಂದರ್ಭಗಳಲ್ಲಿ ಬಳಸಲಾಗುತ್ತದೆ:
- ಇಸ್ಲಾಮಿ ಆಳ್ವಿಕೆಯಡಿ ಹದಿನೈದನೇ ಮತ್ತು ಹದಿನಾರನೇ ಶತಮಾನದ ಭಾರತದಲ್ಲಿ, ಈ ಪದವನ್ನು ಸಾಮಾನ್ಯವಾಗಿ ಭಕ್ತಿ ಚಳುವಳಿಯೊಳಗೆ ದೇವ ದೇವಿಯರ ಕೊಂಡಾಟದಲ್ಲಿ ಭಕ್ತರು ಹಾಗೂ ಸಮುದಾಯಗಳ ನೇತೃತ್ವ ವಹಿಸಿದ ಶಿಕ್ಷಕರು ಮತ್ತು ಕವಿ-ವಿದ್ವಾಂಸರನ್ನು ವರ್ಣಿಸಲು ಬಳಸಲಾಗುತ್ತಿತ್ತು.
- ಆಧುನಿಕ ಯುಗದಲ್ಲಿ, ಈ ಪದವು ಕೆಲವೊಮ್ಮೆ ಒಂದು ನಿರ್ದಿಷ್ಟ ರೂಪದ ಆಧ್ಯಾತ್ಮಿಕತೆಯನ್ನು ಪ್ರತಿಪಾದಿಸುವ ಯಾವುದೇ ಪವಿತ್ರ ಪುರುಷ ಅಥವಾ ಸ್ತ್ರೀಯನ್ನು ವರ್ಣಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Khalsa, Sant Singh (2007). Sri Guru Granth Sahib: English Translation of Sri Guru Granth Sahib. Arizona: Hand Made Books (Mandeep Singh). pp. 12–263.
- Hawley, John Stratton, ed. (1987), Saints and Virtues, University of California Press, ISBN 9780520061637
- Schomer, Karine; McLeod, W. H., eds. (1987), The Sants: Studies in a Devotional Tradition of India, Motilal Banarsidass, ISBN 9788120802773