ಭಜರಂಗಿ (ಚಲನಚಿತ್ರ)

ಕನ್ನಡ ಚಲನಚಿತ್ರ
ಭಜರಂಗಿ (ಚಲನಚಿತ್ರ)
ಭಜರಂಗಿ
ನಿರ್ದೇಶನಹರ್ಷ
ನಿರ್ಮಾಪಕನಟರಾಜ್ ಗೌಡ ,ಮಂಜುನಾಥ್ ಗೌಡ
ಪಾತ್ರವರ್ಗಶಿವರಾಜ್ ಕುಮಾರ್ ಶಿವರಾಜ್ ಕುಮಾರ್ ,ಐಂದ್ರಿತ ರಾಯ್ ,ಸಾಧು ಕೋಕಿಲಾ ,ಬುಲೆಟ್ ಪ್ರಕಾಶ್ ,ರುಕ್ಮಿಣಿ ವಿಜಯ್ ಕುಮಾರ್ ಹಾಗೂ ಶೃತಿ ರಾಜ್
ಸಂಗೀತಅರ್ಜುನ್ ಜನ್ಯ
ಬಿಡುಗಡೆಯಾಗಿದ್ದು2013
ಶಿವರಾಜ್ ಕುಮಾರ್

ಪಾತ್ರಗಳು ಬದಲಾಯಿಸಿ

ಶಿವರಾಜ್ ಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ 'ಭಜರಂಗಿ'. ಹರ್ಷ ಚಲನಚಿತ್ರ ನಿರ್ದೇಶಕ. ಚಿತ್ರದಲ್ಲಿ ಐಂದ್ರಿತ ರಾಯ್ ಶಿವರಾಜ್ ಕುಮಾರ್ ಜೊತೆಯಾಗಿದ್ದಾರೆ.ಸಾಧು ಕೋಕಿಲಾ ,ಬುಲೆಟ್ ಪ್ರಕಾಶ್ ,ರುಕ್ಮಿಣಿ ವಿಜಯ್ ಕುಮಾರ್ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.[೧]

ಚಿತ್ರವು ಡಿಸೆಂಬರ್೨೦೧೩ ರಲ್ಲಿ ಬಿಡುಗಡೆ ಆಗಿದೆ.'ಭಜರಂಗಿ' ಚಲನಚಿತ್ರವು 'ಹ್ಯಾಟ್ರಿಕ್ ಹೀರೋ' ಮತ್ತು 'ಸೆಂಚ್ಯುರಿ ಸ್ಟಾರ್' ಎಂದೇ ಚಂದನವನದಲ್ಲಿ ಡಾ|| ಶಿವರಾಜ್ ಕುಮಾರ್ ರವರು ನಾಯಕನಟನಾಗಿ ಅಭಿನಯಿಸಿರುವ ಚಿತ್ರ.ಶಿವಣ್ಣನಿಗೆ ಇದು ಚಂದವನದಲ್ಲಿ೧೦೫ನೇ ಚಿತ್ರ.ಮೈಲಾರಿ ಚಿತ್ರದ ನಂತರದ ಗೆಲುವಿನ ಲಯ ಕಳೆದುಕೊಂಡಿದ್ದ ಶಿವಣ್ಣನಿಗೆ 'ಭಜರಂಗಿ' ಚಲನಚಿತ್ರವು ಬಹುದೊಡ್ಡ ಗೆಲುವು ತಂದುಕೊಟ್ಟಿತು.ಈ ಚಲನಚಿತ್ರವು ಚಿತ್ರವಿಮರ್ಶಕರಿಂದ ಉತ್ತಮ ಪ್ರಶಂಸೆ ಪಡೆದಿತ್ತು. 'ಭಜರಂಗಿ' ಚಲನಚಿತ್ರಕ್ಕಾಗಿ ಶಿವರಾಜ್ ಕುಮಾರ್ ರವರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಂಡು,ದಿನನಿತ್ಯ ಕಠಿಣ ತಾಲೀಮು ನಡೆಸಿ 'ಸಿಕ್ಸ್ ಪ್ಯಾಕ್' ಮಾಡಿಕೊಂಡರು.ಅವರ ಈ ಪರಿಶ್ರಮಕ್ಕಾಗಿ ಇಡಿ ಚಿತ್ರರಂಗವೇ ಅಭಿನಂದಿಸಿತು.೫೦ರ ಪ್ರಾಯದಲ್ಲಿಸಿಕ್ಸ್ ಪ್ಯಾಕ್ ಮಾಡಿಕೊಂಡ ಭಾರತೀಯ ಪ್ರಥಮ ನಾಯಕನಟ ಎಂಬ ಪ್ರಶಂಸೆ ಗಳಿಸಿದರು.

 
ಭಜರಂಗಬಲಿ


ನಿರೀಕ್ಷಣೆ ಬದಲಾಯಿಸಿ

ಶಿವಣ್ಣನ ಸಿಕ್ಸ್ ಪ್ಯಾಕ್ ನೋಡಲು ಕೂತುಹಲಸದಿಂದ ಕಾಯುತಿದ್ದ ಅವರ ಅಭಿಮಾನಿಗಳಿಗೆ ಶಿವಣ್ಣನವರು ಡಿಸೆಂಬರ್ ೧೩ ೨೦೧೩ರಂದು 'ಭಜರಂಗಿ' ಚಿತ್ರವನ್ನು ಬಿಡುಗಡೆ ಮಾಡಿದರು.ಜೀವ ಮತ್ತು ಭಜರಂಗಿ ಎಂಬ ಎರಡು ಪಾತ್ರದಲ್ಲಿ ಶಿವಣ್ಣ ಉತ್ತಮವಾಗಿ ಅಭಿನಯಿಸಿದ್ದಾರೆ.ಚಂದನವನದಲ್ಲಿ ಪ್ರಸಿದ್ದ ನೃತ್ಯ ಸಂಯೋಜಕರಾದ ಎ.ಹರ್ಷ ಸಾರಥ್ಯದಲ್ಲಿ ಮೂಡಿಬಂದ ಮೊದಲ ಚಲನಚಿತ್ರ.ಚಿತ್ರಕಥೆಯನ್ನು ಬರೆದವರು ಅವರೇ.ಚಿತ್ರದ ನಿರ್ಮಾಪಕರು ನಟರಾಜ್ ಗೌಡ ಮತ್ತು ಮಂಜುನಾಥ್ ಗೌಡ. ನಿರ್ಮಾಪಕರು ನಟರಾಜ್ ಗೌಡ ಮತ್ತು ಮಂಜುನಾಥ್ ಗೌಡ.ಐಂದ್ರಿತಾ ರೇ ಅವರು ನಾಯಕನಟಿಯಾಗಿ ಅಭಿನಯಸಿರುವ ೨೨ನೇ ಚಿತ್ರ ಭಜರಂಗಿ.

ಧ್ವನಿಮುದ್ರಿಕೆ ಬದಲಾಯಿಸಿ

ಚಿತ್ರದ ಸಂಗೀತವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದಾರೆ.

ಸಂ.ಹಾಡುಹಾಡುಗಾರರುಸಮಯ
1."ಬಾಸು ನಂ ಬಾಸು"ಅರ್ಜುನ್ ಜನ್ಯ 
2."ಜೈ ಭಜರಂಗಿ"ಶಂಕರ್ ಮಹದೇವನ್ 
3."ಜಿಯಾ ತೇರಿ ಜಿಯಾ ಮೇರಿ"ಕಾರ್ತಿಕ್  
4."ರೆ ರೆ ಭಜರಂಗಿ"ಕೈಲಾಶ್ ಖೇರ್ 
5."ಶ್ರೀ ಕೃಷ್ಣ"ಅನುರಾಧಾ ಭಟ್  

ಗಳಿಕೆ ಬದಲಾಯಿಸಿ

ಸ್ಯಾಂಡಲ್ ವುಡ್ ನ ಎ.ಆರ್. ರಹಮಾನ್ ಎಂದೇ ಪ್ರಸಿದ್ದಿಯಗಿರುವ ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತವನ್ನುನಿರ್ದೆಶಿಸಿದ್ದಾರೆ.ಚಿತ್ರದಲ್ಲಿ ಒಟ್ಟು ೫ ಹಾಡುಗಳಿದ್ದು,ಇವು ಮನಸ್ಸಿಗೆ ಇಂಪು ನೀಡಲಿವೆ.ಚಿತ್ರಕ್ಕೆ ಜೈ ಆನಂದ್ ಛಾಯಗ್ರಹಕರಾಗಿ ಕೆಲಸವನ್ನು ನಿಭಾಯಿಸಿದ್ದಾರೆ.'ಭಜರಂಗಿ' ಚಿತ್ರದ ಚಿತ್ರೀಕರಣವನ್ನು ಬಹುತೇಕ ಬೆಂಗಳೂರಿನ ಹೆಸರಘಟ್ಟದಲ್ಲಿ ಚಿತ್ರೀಕರಿಸಲಾಗಿದೆ.ಒಟ್ಟು ೨೨೧ ಚಿತ್ರಮಂದಿರದಲ್ಲಿ ತೆರೆಕಂಡ ಭಜರಂಗಿ ಚಿತ್ರವು ತನ್ನ ಮೊದಲ ೨೫ ದಿನಗಳಲ್ಲಿ ೧೨.೫ ಕೋಟಿಯನ್ನು ಗಳಿಸಿ ಚಂದನವನದ ಇತಿಹಾಸದಲ್ಲಿ ಮೊದಲ ೨೫ ದಿನಗಳಲ್ಲಿ ಅತಿ ಹೆಚ್ಚು ಮೊತ್ತವನ್ನು ಗಳಿಸಿದ ಮೊದಲ ಸಿನಿಮಾ ಎಂಬ ಮುನ್ನುಡಿಯನ್ನು ಬರೆಯಿತು. ಈ ಸಿನಿಮಾ ತನ್ನ ಎಲ್ಲಾ ಮೂಲಗಳಿಂದ ೫೪ ಕೋಟಿ ಗಳಿಸಿತು

ಉಲ್ಲೇಖನಗಳು ಬದಲಾಯಿಸಿ

  1. "ಭಜರಂಗಿ ಚಲನಚಿತ್ರ". Archived from the original on 2015-09-07. Retrieved 2017-02-03.