ಬುಲೆಟ್ ಪ್ರಕಾಶ್
ಬುಲೆಟ್ ಪ್ರಕಾಶ್ (ಜನನ: 2 ಏಪ್ರಿಲ್ 1976, ಸಾವು: 6 ಏಪ್ರಿಲ್ 2020) ಅವರು ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟರಾಗಿದ್ದರು. ತಮ್ಮ ವೈಚಿತ್ರ್ಯಪೂರ್ಣ ನಟನೆ ಹಾಗೂ ಸಮಯೋಚಿತ ಹಾಸ್ಯದಿಂದಾಗಿ 325 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮನಮೆಚ್ಚುವ ಪಾತ್ರಗಳನ್ನು ನಿರ್ವಹಿಸಿದ್ದರು. ಅವರು ಸದಾ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕನ್ನು ಬಳಸುತ್ತಿದ್ದರಿಂದ, ಅವರು "ಬುಲೆಟ್" ಎಂಬ ಅಡ್ಡಹೆಸರನ್ನು ಗಳಿಸಿದರು ಹಾಗೂ ಅದೇ ಹೆಸರಿನಲ್ಲಿಯೇ ಪ್ರಸಿದ್ಧರಾದರು. 2015 ರಲ್ಲಿ ಪ್ರಕಾಶ್ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದರು.
ಬುಲೆಟ್ ಪ್ರಕಾಶ್ | |
---|---|
ಜನನ | ಪ್ರಕಾಶ್ ೨ ಏಪ್ರಿಲ್ ೧೯೭೬ ಬೆಂಗಳೂರು, ಭಾರತ |
ಸಾವು | ೬ ಏಪ್ರಿಲ್ ೨೦೨೦ (ವಯಸ್ಸು ೪೪) |
ಸಾವಿನ ಕಾರಣ | ಮೂತ್ರಪಿಂಡ ಮತ್ತು ಯಕೃತ್ತು ವೈಫಲ್ಯ[೧] |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ನಟ, ರಾಜಕೀಯ ನಾಯಕ |
Years active | 1999–2020 |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಸಾಧನೆ
ಬದಲಾಯಿಸಿಪ್ರಕಾಶ್ರವರು ಕನ್ನಡದ ಸುವರ್ಣ ಚಾನಲ್ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋನಲ್ಲಿ ಬಿಗ್ಬಾಸ್ ಎರಡನೇ ಋತುವಿನಲ್ಲಿ ಪಾಲ್ಗೊಂಡಿದ್ದರು. ಸೂಂಬೆ ಎಂಬ ತುಳು ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ[೨] ಹಾಗೂ ೩೦೦ಕ್ಕೂ ಹೆಚ್ಚು ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ.
ಚಿತ್ರ | ವರ್ಷ |
---|---|
ದ್ರುವ | ೨೦೦೨ |
ಪಾರ್ಥ | ೨೦೦೩ |
ಓ೦ಕಾರ | ೨೦೦೪ |
ಅ೦ಬಿ | ೨೦೦೬ |
ಮಾಸ್ತ್ ಮಜಾ ಮಾಡಿ | ೨೦೦೮ |
ಐತಲಕ್ಕಡಿ | ೨೦೧೦ |
ಜಾಕಿ | ೨೦೧೦ |
ಮಲ್ಲಿಕಾರ್ಜುನ | ೨೦೧೧ |
ದೆವ್ರಾಣೆ | ೨೦೧೩ |
ರಜಿನಿ ಕಾ೦ತ | ೨೦೧೩ |
ಪಾರಾರಿ | ೨೦೧೩ |
ಜಟಾಯು | ೨೦೧೩ |
ಶತ್ರು | ೨೦೧೩ |
ಜ೦ಗಲ್ ಜಾಕಿ | ೨೦೧೩ |
ಧನು | ೨೦೧೩ |
ಸವಾಲ್ | ೨೦೧೩ |
ಲವ್ ಶೋ | ೨೦೧೪ |
ನಿ೦ಬೆ ಹುಳಿ | ೨೦೧೪ |
ಪು೦ಗಿ ದಾಸ | ೨೦೧೪ |
ರೋಜ್ | ೨೦೧೪ |
ಆರ್ಯನ್ | ೨೦೧೪ |
ಮಾಸ್ಟರ್ ಮೈ೦ಡ್ | ೨೦೧೫ |
ರಾಟೆ | ೨೦೧೫ |
ದಕ್ಷ | ೨೦೧೫ |
ಬಾ೦ಬೆ ಮಿಟಾಯಿ | ೨೦೧೫ |
ಪಾತರಗಿತ್ತಿ | ೨೦೧೫ |
ರೆಡ್ ಅಲರ್ಟ್ | ೨೦೧೫ |
ಮಳೆ | ೨೦೧೫ |
ಲವ್ ಯು ಆಲಿಯ | ೨೦೧೫ |
ಮಿ. ಐರಾವತ | ೨೦೧೫ |
ಗ೦ಗ | ೨೦೧೫ |
ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ | ೨೦೧೬ |
ಮದುವೆಯ ಮಮತೆಯ ಕರೆಯೋಲೆ | ೨೦೧೬ |
ಅಕಿರ | ೨೦೧೬ |
ಸಾಹೇಬ | ೨೦೧೬ |
ಜಗ್ಗುದಾದ | ೨೦೧೬ |
ರಾಜಸಿಂಹ | ೨೦೧೮ |
ನಿಧನ
ಬದಲಾಯಿಸಿಯಕೃತ್ತಿನ ಸೋಂಕಿನಿಂದಾಗಿ ೬ ಏಪ್ರಿಲ್ ೨೦೨೦ ರಂದು 44 ನೇ ವಯಸ್ಸಿನಲ್ಲಿ ಅವರು ವಿಧಿವಶರಾದರು.
ಉಲ್ಲೇಖಗಳು
ಬದಲಾಯಿಸಿ- ↑ Kannada comedian Bullet Prakash succumbs to a liver problem. Times of India (6 April 2020)
- ↑ "Tulu film 'Soombe' set for release". mangaloretoday.com. Mangalore Today. Retrieved 19 May 2025.
- ↑ https://www.imdb.com/name/nm5308603/