ಕಾಂಚನಗಂಗ
ವಿಶ್ವದ ಅತ್ಯುನ್ನತ ಪರ್ವತಶೃಂಗಗಳಲ್ಲಿ ಮೂರನೆಯದು. ಹಿಮಾಲಯ ಪರ್ವತಶ್ರೇಣಿಯಲ್ಲಿ, ನೇಪಾಲ ಸಿಕ್ಕಿಂ ಗಡಿಯ ಮೇಲೆ, ಉತ್ತರ ಅಕ್ಷಾಂಶ 27ಲಿ42' ಮತ್ತು ಪೂರ್ವರೇಖಾಂಶ 88ಲಿ 11'ನಲ್ಲಿ ಡಾರ್ಜೀಲಿಂಗಿಗೆ ವಾಯವ್ಯಕ್ಕೆ 46 ಮೈ. ದೂರದಲ್ಲಿದೆ. ಇದರ ಎತ್ತರ 28,168'.
ಕಾಂಚನಗಂಗ
ಬದಲಾಯಿಸಿಕಾಂಚನಗಂಗವೆಂಬ ಹೆಸರು ಇದಕ್ಕೆ ಪ್ರಾಪ್ತವಾದ್ದು ಟಿಬೆಟನ್ ಮೂಲದ ಕಾಂಗ್-ಚೆನ್-ಡ್ಜೋ-ನ್ಗ ಅಥವಾ ಯಾಂಗ್-ಛೆನ್-ಡ್ಜೋ-ನ್ಗ ಎಂಬ ನಾಲ್ಕು ಶಬ್ದಗಳಿಂದ. ಸಿಕ್ಕಿಂನಲ್ಲಿ ಇದಕ್ಕೆ ಪಂಚ ಮಹಾ ಹಿಮ ಸಂಚಯ ಎಂದು ಅರ್ಥ. ಆ ಸುತ್ತಿನ ಜನರ ಪುರಾಣ ಮತ್ತು ಧಾರ್ಮಿಕ ಆಚಾರಗಳಲ್ಲಿ ಈ ಪರ್ವತಶೃಂಗ ಬಹು ಮುಖ್ಯ ಪಾತ್ರ ವಹಿಸಿದೆ. ಪರಿಶೋಧಕನ ದೃಕ್ಪಥದಲ್ಲಿ ಬೀಳುವುದಕ್ಕೂ ಬಲು ಹಿಂದೆಯೇ ಇದರ ಇಳಿಜಾರುಗಳು ವ್ಯಾಪಾರಿಗಳಿಗೂ ದನಕಾಯುವವರಿಗೂ ಪರಿಚಿತವಾಗಿದ್ದುವು.ಇದು ಕರ್ನಾಟಕ ಸಂಕ್ರಾತಿವೃತ್ತದಿಂದ ಕೇವಲ ಸು. 4' ಉತ್ತರದಲ್ಲಿರುವುದಿಂದ ಉಷ್ಣವಲಯಕ್ಕಿಂತ ಬಲುದೂರ ಇದ್ದಹಾಗೇನಲ್ಲ. ಆದರೆ ಔನ್ನತ್ಯದಿಂದಾಗಿ ಇದರ ತುದಿಭಾಗ ಬಲು ಶೀತ. ಸನಿಯದ ಡಾರ್ಜೀಲಿಂಗಿನಿಂದ ಇದು ಹಿಮ ಹೊದೆದ ಮಹಾ ಗುಡಾರದಂತೆ ಕಾಣುತ್ತದೆ.[೧]
ಕಾಂಚನಗಂಗ ಪರ್ವತಪುಂಜ
ಬದಲಾಯಿಸಿಕಾಂಚನಗಂಗ ಪರ್ವತಪುಂಜದ್ದು ಬೃಹತ್ ಸಿಲುಬೆಯ ಆಕಾರ. ಉತ್ತರ ದಕ್ಷಿಣ ಪೂರ್ವ ಪಶ್ಚಿಮವಾಗಿ ಇದರ ದೈತ್ಯಾಕಾರದ ಚತುರ್ಭುಜಗಳು ಚಾಚಿವೆ. ದಕ್ಷಿಣ ಭುಜದ ಮೇಲಿರುವುದು ಕಾಂಚನಂಗದ ಎರಡನೆಯ ಶಿಖರ (27,823) ಮೊದಲನೆಯ ಶಿಖರಕ್ಕೂ ಎರಡನೆಯದಕ್ಕೂ ನಡುವೆ ಇರುವುದು ಮೂರನೆಯ ಶಿಖರ. ನಾಲ್ಕನೆಯದು ಪಶ್ಚಿಮ ಬಾಹುವಿನ ಮೇಲಿದೆ. ಕಾಂಚನಗಂಗದ ಚತುರ್ಬಾಹುಗಳೂ ನೆರೆಯ ಶಿಖರಗಳಲ್ಲಿ ಸಮಾವೇಶಗೊಳ್ಳುತ್ತವೆ. ದಕ್ಷಿಣ ಬಾಹುವಿಗೆ ಸೇರಿದ ಶಿಖರಗಳು ಟಾಲುಂಗ್ (23,080') ಮತ್ತು ಕಬ್ರು (24,002'). ಪೂರ್ವಭುಜಕ್ಕೆ ಸೇರಿದಂತಿರುವುದು ಸಿಕ್ಕಿಮಿನಲ್ಲಿರುವ ಸಿಂವು (22,360'). ಪಶ್ಚಿಮದ ಬಾಹುವಿಗೆ ಕೂಡಿಕೊಂಡಿರತಕ್ಕವು ನೇಪಾಳದ ಕಂಬಚೆನ್ (25,782') ಮತ್ತು ಜನ್ನು (25,294'). ಉತ್ತರದ ಭುಜಕ್ಕೆ ಹೊಂದಿಕೊಂಡಂತೆ ಅವಳಿ (24,117), ನೇಪಾಳಗಿರಿ (23,500'), ಲಾಂಗ್ಪೊ (22,800') ಮುಂತಾದ ಅನೇಕ ಎತ್ತರ ಶಿಖರಗಳಿವೆ. ಇವು ನೇಪಾಳ ಸಿಕ್ಕಿಂಗಳ ಜಲಮೇಡಿನ ಮೇಲಿವೆ. ಈಕಡೆಯ ಬೆನ್ನೇಣು ಟಿಬೆಟಿಗೆ ಸಮೀಪ. ಕಾಂಚನಗಂಗದ ನಾಲ್ಕು ಬಾಹುಗಳ ನಡುವೆ ಈಶಾನ್ಯ ಆಗ್ನೇಯ ನೈಋತ್ಯ ವಾಯವ್ಯಗಳಲ್ಲಿ ಅನುಕ್ರಮವಾಗಿ ಹರಿಯುವವು ಜೆಮು, ಟಾಲುಂಗ್, ಕಾಂಚನಗಂಗ ಮತ್ತು ಯಾಲುಂಗ್ ಎಂಬ ನೀರ್ಗಲ್ಲ ನದಿಗಳು. ಈಗ ತಿಳಿದಿರುವಂತೆ ಕಾಂಚನಗಂಗದ ಪ್ರಥಮ ಭೂಪಟ ತಯಾರಾದದ್ದು 18ನೆಯ ಶತಮಾನದ ನಡುಗಾಲದಲ್ಲಿ-ರಿನ್ ಜಿûನ್ ನಂಗ್ಯಾಲ್ ಎಂಬ ಪಂಡಿತ ಪ್ರವಾಸಿಯಿಂದ. ಈ ಪ್ರದೇಶವನ್ನು ಪ್ರಪ್ರಥಮವಾಗಿ ಸಂದರ್ಶಿಸಿದ ಐರೋಪ್ಯ ಜೋಸೆಫ್ ಹೂಕರ್. 1848ರಲ್ಲೂ 1849ರಲ್ಲೂ ಈತ ಅಲ್ಲಿಗೆ ಭೇಟಿ ನೀಡಿ ಅಲ್ಲಿಯ ಪರಿಸರವನ್ನು ಬಣ್ಣಿಸಿದ. ಡೊಗ್ಲಾಸ್ ಫ್ರೆಷ್ ಫೀಲ್ಡ್ 1899ರಲ್ಲಿ ಈ ಶೃಂಗವನ್ನು ಪ್ರದಕ್ಷಿಣೆ ಮಾಡಿ ಪರಿಶೀಲಿಸಿದ. ಯಾಲುಂಗ್ ಕಣಿವೆ ಯತ್ತಣಿಂದ ಶಿಖರಾರೋಹಣ ಸಾಧ್ಯವೆಂದು ಸೂಚಿಸಿದವನಾತ. ಆಂಗ್ಲ-ಸ್ವಿಸ್ ಪರ್ವತಾರೋಹಿ ತಂಡವೊಂದು 1905ರಲ್ಲಿ ಈ ವಾರ್ಗದಲ್ಲಿ ಮೇಲೇರಲು ಪ್ರಯತ್ನ ನಡಿಸಿತಾದರೂ ಅದು ಸಿದ್ಧಿಸಲಿಲ್ಲ. ಒಬ್ಬ ಸ್ವಿಸ್ಸನೂ ಮೂವರು ಹೊರೆಯಾಳುಗಳೂ ಹಿಮಾಶ್ಮಪ್ರವಾಹವೊಂದಕ್ಕೆ ಸಿಲುಕಿ ಪ್ರಾಣತೆತ್ತ ಫಲವಾಗಿ ಅದೊಂದು ದುರಂತ ಸಾಹಸವಾಯಿತು.[೨]
ಇತಿಹಾಸ
ಬದಲಾಯಿಸಿಮತ್ತೆ ಇತ್ತಲಾಗಿ ಪಾಶ್ಚಾತ್ಯರ ಗಮನ ತೀವ್ರವಾಗಿ ಹರಿದದ್ದು ಕಾಲು ಶತಮಾನ ಕಳೆದ ಮೇಲೆ. ಅವರು ಈ ಪರ್ವತದ ಇತರ ಮುಖಗಳನ್ನು ಪರಿಶೋಧಿಸಿದರು. 1929ರಲ್ಲೂ 1931ರಲ್ಲೂ ಪಾಲ್ ಬೌವರನ ನಾಯಕತ್ವದಲ್ಲಿ ಬವೇರಿಯನ್ ತಂಡವೊಂದು eóÉಮುವಿನ ಕಡೆಯಿಂದಲೂ 1930ರಲ್ಲಿ ಜಿ.ಓ. ಡಿಹ್ರೆನ್ ಪರ್ತನ ತಂಡ ಕಾಂಚನಗಂಗ ಕಣಿವೆಯ ಕಡೆಯಿಂದಲೂ ಆರೋಹಣ ಪ್ರಯತ್ನ ನಡೆಸಿದುವು. ಈ ಪ್ರಯತ್ನಗಳ ಫಲವಾಗಿ ಸಿದ್ಧಿಸಿದ ಔನ್ನತ್ಯ 25,263'. 1931ರಲ್ಲಿ ಈ ಮಟ್ಟದಿಂದ ಮುಂದಕ್ಕೆ ಬೌವರನ ತಂಡ ಏರಲಾಗಲಿಲ್ಲ. ಅಲ್ಲಿದ್ದ ಹಿಮರಾಶಿ ಅಪಾಯಕಾರಿಯಾಗಿತ್ತು. ಅಪಘಾತಕ್ಕೆ ಕಾರಣವಾಯಿತು. ಕಾಂಚನಗಂಗದ ರುದ್ರಭೀಕರತೆಯಿಂದಾಗಿ 1954ರ ವರೆಗೂ ಯಾರೂ ಅದನ್ನೇರುವ ಪ್ರಯತ್ನ ಕೈಕೊಳ್ಳಲಿಲ್ಲ.ಮತ್ತೆ ಯಾಲುಂಗ್ ಕಣಿವೆಯ ಕಡೆಯಿಂದ ಪ್ರಯತ್ನ ಮಾಡಿ ನೋಡಬಹುದೆಂಬುದು 1954ರಲ್ಲಿ ಗಿಲ್ಮರ್ ಲೂಯಿಸ್ ಮತ್ತು ಜಾನ್ ಕೆಂಪರ ಪ್ರವಾಸಗಳಿಂದ ದೃಢಪಟ್ಟ ಫಲವಾಗಿ 1955ರಲ್ಲಿ ಚಾರಲ್ಸ್ ಇವಾನ್ಸನ ನಾಯಕತ್ವದಲ್ಲಿ ಆರೋಹಣ ತಂಡವೊಂದು ಈ ಪ್ರಯತ್ನ ಕೈಕೊಂಡಿತು. ಆ ತಂಡ ಬುಡದ ಶಿಬಿರದಿಂದ (18,000') ಹೊರಟು, ಮೂರು ವಾರಗಳ ಅನಂತರ 24,000' ಎತ್ತರದಲ್ಲಿರುವ ವಿಶಾಲವಾದ ಚಾಚೊಂದನ್ನು ತಲಪಿತು. ಅದರ ಎತ್ತರದ ಕೊನೆಯಲ್ಲಿ 25,000' ಪ್ರದೇಶವೇ ಆರೋಹಣತಂಡದ ಐದನೆಯ ಶಿಬಿರ. ಮುಂದಿನ ಶಿಬಿರದ ಎತ್ತರ 27,000'. ಅಲ್ಲಿಂದ ಅರೋಹಣದ ಕೊನೆಯ ಮಜಲು ಆರಂಭವಾಯಿತು. ಆಮ್ಲಜನಕದೊಂದಿಗೆ ಸಜ್ಜಾಗಿದ್ದ ಆರೋಹಿಗಳು ಆತ್ಮವಿಶ್ವಾಸದಿಂದ ಏರಿ ನಡೆದರು. 1955ರ ಮೇ 25 ರಂದು ಜೋ ಬ್ರೌನ್ ಮತ್ತು ಜಾರ್ಜ್ ಬ್ಯಾಂಡರೂ 26 ರಂದು ನಾರ್ಮನ್ ಹಾರ್ಡಿ ಮತ್ತು ಎಚ್. ಆರ್. ಎ. ಸ್ಟ್ರೀತರರೂ ಕಾಂಚನಗಂಗವನ್ನೇರಿದರು. ಆದರೆ ಸಿಕ್ಕಿಮರಿಗೆ ಪವಿತ್ರವೆನಿಸಿರುವ ಶಿಖರದ ತಲೆ ಮೆಟ್ಟಬಾರದೆಂಬ ಅವರ ಪ್ರಾರ್ಥನೆಗೆ ಬೆಲೆ ಕೊಟ್ಟು ಶಿಖರಾರೋಹಿಗಳು ಅದರ ಶಿಖಾಪ್ರದೇಶಕ್ಕಿಂತ ಕೆಲವು ಗಜಗಳ ಆಚೆಗೆ ನಿಂತು ಹಿಂದಿರುಗಿದರು.
ಉಲ್ಲೇಖಗಳು
ಬದಲಾಯಿಸಿ- ↑ http://swagatha-soliloquy.blogspot.in/2015/04/blog-post.html
- ↑ "ಆರ್ಕೈವ್ ನಕಲು". Archived from the original on 2017-03-14. Retrieved 2016-10-25.