ಕೋಟಿ ರಾಮು ಎಂದೇ ಖ್ಯಾತರಾದ ನಿರ್ಮಾಪಕ ರಾಮು ಅವರು ಕನ್ನಡದ ಹೆಮ್ಮೆಯ ನಿರ್ಮಾಪಕರಲ್ಲಿ ಒಬ್ಬರು. ಕುಣಿಗಲ್ ಮೂಲದ ರಾಮು, ಅದ್ಧೂರಿ ವೆಚ್ಚದಲ್ಲಿ ಸಾಹಸಮಯ ಸಿನಿಮಾ ನಿರ್ಮಾಣಕ್ಕೆ ಹೆಸರಾಗಿದ್ದಾರೆ.

ಚೈತ್ರದ ಪ್ರೇಮಾಂಜಲಿ ಚಿತ್ರದ ಹಂಚಿಕೆಯಿಂದ ಪ್ರವರ್ಧಮಾನಕ್ಕೆ ಬಂದ ರಾಮು, ಅಧಿಪತಿ ಚಿತ್ರದಿಂದ ನಿರ್ಮಾಪಕರಾದರು. ಅವರಿಗೆ ನಿರ್ಮಾಪಕನಾಗಿ ಒಂದು ಒಳ್ಳೆಯ ಬುನಾದಿ ಸಿಕ್ಕದ್ದು ಲಾಕಪ್ ಡೆತ್ ಚಿತ್ರದಿಂದ. ಇಡೀ ದಕ್ಷಿಣ ಭಾರತವೇ ತಿರುಗಿ ನೋಡುವಂತೆ ಈ ಚಿತ್ರ ಮಾಡಿದ್ದರಲ್ಲಿ ನಿರ್ದೇಶಕ ಓಂಪ್ರಕಾಶರಾವ್ ಹಾಗೂ ರಾಮು ಅವರಿಗೆ ಸಮಾನ ಗೌರವ ನೀಡಬೇಕು. ಥ್ರಿಲ್ಲರ್ ಮಂಜು ಎಂಬ ಪ್ರತಿಭಾವಂತ ಸಾಹಸ ನಿರ್ದೇಶಕನ ಎಲ್ಲ ಕನಸುಗಳನ್ನು ಸಾಕಾರಗೊಳಿಸುವ ಸಾಧ್ಯತೆಗಳನ್ನು ಈ ಚಿತ್ರ ತೆರೆದಿರಿಸಿತು. ದೊಡ್ಡ ಯಶಸ್ಸಿನ ಈ ಚಿತ್ರ ರಾಮು ಅವರಿಗೆ ಹುರುಪು ನೀಡಿತು. ಮುಂದೆ ಸಿಂಹದಮರಿ, ಭಾವ ಭಾಮೈದ, ಮಲ್ಲ, ಕಲಾಸಿಪಾಳ್ಯ, ರಜನಿ, ಚಾಮುಂಡಿ, ನಂಜುಂಡಿ, ದುರ್ಗಿ, ಸರ್ಕಲ್ ಇನ್ಸ್ ಪೆಕ್ಟರ್, ಲೇಡಿ ಪೋಲೀಸ್, ಲೇಡಿ ಕಮಿಷನರ್, ಕಿಚ್ಚ, ಕಿರಣ್ ಬೇಡಿ, ಲಾ ಅಂಡ್ ಆರ್ಡರ್, ಏ.ಕೆ.47, ರಾಕ್ಷಸ, ಶಿವಾಜಿನಗರ, ಮುತ್ತಿನಂಥ ಹೆಂಡತಿ ಹಲೋ ಸಿಸ್ಟರ್, ಗೂಳಿ, ಕಿಚ್ಚ, ಹಾಲಿವುಡ್ ಮುಂತಾದ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಪತ್ನಿ ಮಾಲಾಶ್ರೀ. ಇಬ್ಬರು ಮಕ್ಕಳಿದ್ದಾರೆ. ೨೦೧೪ರಲ್ಲಿ ಮುಂಬಯಿ, ಮಹಾಕಾಳಿ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.

"https://kn.wikipedia.org/w/index.php?title=ರಾಮು&oldid=679250" ಇಂದ ಪಡೆಯಲ್ಪಟ್ಟಿದೆ