ಕೌಸ್ತುಭ ಒಂದು ದೈವಿಕ ಮಣಿ ಅಥವಾ ರತ್ನ. ಕ್ಷೀರಸಮುದ್ರದಲ್ಲಿ ಇರುವ ವಿಷ್ಣುವು ಇದರ ಒಡೆಯನಾಗಿದ್ದಾನೆ. ಈ ರತ್ನವನ್ನು ಅವನು ತನ್ನ ಎದೆಯಲ್ಲಿ ಧರಿಸಿದ್ದಾನೆ. ಇದು ಇಡೀ ವಿಶ್ವದಲ್ಲಿ ಅತ್ಯಂತ ಬೆಲೆಬಾಳುವ ರತ್ನವಾಗಿದೆ. ಹಿಂದೂ ಪುರಾಣದಲ್ಲಿ, ದೇವತೆಗಳು ಮತ್ತು ಅಸುರರು ಅಮೃತವನ್ನು ಪಡೆಯಲು ಸಮುದ್ರ ಮಂಥನದಲ್ಲಿ ತೊಡಗಿದರು. ಈ ಪ್ರಕ್ರಿಯೆಯಲ್ಲಿ, ಹದಿನಾಲ್ಕು ರತ್ನಗಳು ಸಾಗರದಿಂದ ಹೊರಹೊಮ್ಮಿದವು. ಹೊರಹೊಮ್ಮಿದ ನಾಲ್ಕನೇ ರತ್ನವನ್ನು ಕೌಸ್ತುಭ ಎಂದು ಕರೆಯಲಾಗುತ್ತದೆ. ಇದು ತನ್ನ ಎಲ್ಲ ಹೊಳೆಯುವ ಅಭಿವ್ಯಕ್ತಿಗಳಲ್ಲಿ ಪ್ರಕಾಶಿಸುವ ಪರಿಶುದ್ಧ ಪ್ರಜ್ಞೆಯನ್ನು ಪ್ರತಿನಿಧಿಸುತ್ತದೆ. ವಿಷ್ಣುವನ್ನು ಬಿಟ್ಟು ಈ ಬ್ರಹ್ಮಾಂಡದಲ್ಲಿ ಬೇರೆ ಯಾರೂ ಈ ಮಣಿಯ ಕಾಂತಿ ಹಾಗೂ ಭವ್ಯತೆಯನ್ನು ನಿಭಾಯಿಸಲಾರರು ಎಂದು ಶಿವನು ಹೇಳಿದನು, ಏಕೆಂದರೆ ಇದು ಧಾರಕನಲ್ಲಿ ಅದನ್ನು ಯಾವಾಗಲೂ ಹೊಂದಿರಬೇಕೆಂಬ ದುರಾಸೆಯನ್ನು ತುಂಬಿ ಅವನನ್ನು ನೀತಿಭ್ರಷ್ಟನನ್ನಾಗಿ ಮಾಡಬಲ್ಲದು. ಈ ಮಣಿಯು ಯಾವುದೇ ರಂಧ್ರ ಅಥವಾ ದೋಷವನ್ನು ಹೊಂದಿಲ್ಲ, ಮತ್ತು ಇದರಿಂದ ಯಾವುದೇ ಬಂಧನಗಳಿಲ್ಲ ಎಂದು ಹೇಳಲಾಗಿದೆ.[]

ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=ಕೌಸ್ತುಭ&oldid=892330" ಇಂದ ಪಡೆಯಲ್ಪಟ್ಟಿದೆ