ಪ್ರೇಮ್ (ಚಲನಚಿತ್ರ ನಿರ್ದೇಶಕ)
ಭಾರತೀಯ ನಟ, ಚಲನಚಿತ್ರ ನಿರ್ದೇಶಕ
(ಪ್ರೇಂ ಇಂದ ಪುನರ್ನಿರ್ದೇಶಿತ)
ಪ್ರೇಮ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲೊಬ್ಬರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕರಿಯ ಚಿತ್ರದ ಮೂಲಕ ನಿರ್ದೇಶನ ಪ್ರಾರಂಭಿಸಿದ ಪ್ರೇಮ್, ನಂತರ ಎಕ್ಸ್ ಕ್ಯೂ ಸ್ ಮಿ ಮತ್ತು ಶಿವರಾಜ್ ಕುಮಾರ್ ಜೊತೆ ಜೋಗಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಮೂರೂ ಚಿತ್ರಗಳು ಶತದಿನೋತ್ಸವದ ಯಶಸ್ಸನ್ನು ಕಂಡಿರುವುದು ಗಮನಾರ್ಹ. ಇವರ ನಿರ್ದೇಶನದ ನಾಲ್ಕನೆ ಚಿತ್ರ 'ಪ್ರೀತಿ ಏಕೆ ಭೂಮಿ ಮೇಲಿದೆ?'. ಈ ಚಿತ್ರದಲ್ಲಿ ಪ್ರೇಮ್ ನಾಯಕನಟನಾಗಿ ನಟಿಸಿದ್ದಾರೆ. ನಿರ್ದೇಶನದ ಐದನೆ ಚಿತ್ರ ಪುನೀತ್ ರಾಜ್ ಕುಮಾರ್ ಜೊತೆ ರಾಜ್ ದಿ ಶೋ ಮ್ಯಾನ್. ನಿರ್ದೇಶನದ ಆರನೆ ಚಿತ್ರ ಶಿವರಾಜ್ ಕುಮಾರ್ ಜೊತೆ ಜೋಗಯ್ಯ ಚಿತ್ರದಲ್ಲಿ ಪತ್ನಿ ರಕ್ಷಿತಾ ನಿರ್ಮಾಪಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಜೋಗಿ ಚಿತ್ರಕ್ಕೆ ಗೀತ ರಚನೆ ಮಾಡುವ ಮೂಲಕ, ಪ್ರೇಮ್ ಚಿತ್ರ ಸಾಹಿತಿಯಾಗಿಯೂ ಕೆಲಸ ಮಾಡಿದ್ದಾರೆ. ಇದೇ ಚಿತ್ರದಲ್ಲಿನ ಹೊಡಿ ಮಗ ಹೊಡಿ ಮಗ ಮತ್ತು ಬೇಡುವೆನು ವರವನ್ನು ಹಾಡುಗಳಿಗೆ ಹಿನ್ನೆಲೆಗಾಯನ ಮಾಡಿದ್ದಾರೆ.
ಪ್ರೇಮ್ ನಿರ್ದೇಶನದ ಚಿತ್ರಗಳು ಸಂಪಾದಿಸಿ
ವರ್ಷ | ಚಿತ್ರ |
---|---|
೨೦೦೩ | ಕರಿಯ |
೨೦೦೩ | ಎಕ್ಸ್‌ಕ್ಯೂಸ್ ಮಿ |
೨೦೦೫ | ಜೋಗಿ |
೨೦೦೮ | ಪ್ರೀತಿ ಏಕೆ ಭೂಮಿ ಮೇಲಿದೆ? |
೨೦೦೯ | ರಾಜ್ ದಿ ಶೋ ಮ್ಯಾನ್ |
೨೦೧೧ | ಜೋಗಯ್ಯ |
ಪ್ರೇಮ್ ಹಿನ್ನೆಲೆಗಾಯನ ಮಾಡಿರುವ ಹಾಡುಗಳು ಸಂಪಾದಿಸಿ
ವರ್ಷ | ಚಿತ್ರ | ಹಾಡು |
---|---|---|
೨೦೦೩ | ಎಕ್ಸ್‌ಕ್ಯೂಸ್ ಮಿ | ಬ್ರಹ್ಮ ವಿಷ್ಣು ಶಿವ |
೨೦೦೫ | ಜೋಗಿ | ಹೊಡಿ ಮಗ ಹೊಡಿ ಮಗ ಬೇಡುವನು ವರವನ್ನು |
ಪ್ರೇಮ್ ಅಭಿನಯದ ಚಿತ್ರಗಳು ಸಂಪಾದಿಸಿ
ವರ್ಷ | ಚಿತ್ರ |
---|---|
೨೦೦೮ | ಪ್ರೀತಿ ಏಕೆ ಭೂಮಿ ಮೇಲಿದೆ? |
೨೦೧೨ | ಪ್ರೆಮ್ ಅಡ್ಡ |
೨೦೧೩ | ದಾಸವಾಳ |
೨೦೧೫ ಡಿ.ಕೆ _(ಚಲನಚಿತ್ರ)|ಡಿ.ಕೆ]]|----