೨೦೧೬ ಶುಕ್ರವಾರದಂದು ಆರಂಭವಾದ ಗ್ರೆಗೋರಿಯನ್ ಕ್ಯಾಲೆಂಡರ್‍ನ ಅಧಿಕ ವರ್ಷವಾಗಿದೆ. ಇದು ೨೧ನೇ ಶತಮಾನದ ೧೬ನೇ ವರ್ಷವಾಗಿದ್ದು ೨೦೧೦ನೇ ದಶಕದ ೭ನೇ ವರ್ಷವಾಗಿದೆ.

  • ೨೦೧೬ರ ವರ್ಷವನ್ನು ದ್ವಿದಳಧಾನ್ಯಗಳ ವರ್ಷವೆಂದು ಹೆಸರಿಸಲಾಗಿದೆ.

ಕರ್ನಾಟಕದಲ್ಲಿ ಕಾವೇರಿ ವಿವಾದ ೨೦೧೬

ಬದಲಾಯಿಸಿ
  • ಸೆಪ್ಟೆಂಬರ್ 5-12
  • 15,000ಕ್ಯೂಸೆಕ್ ನೀರು ಬಿಡಲು ಆದೇಶ
  • ಕರ್ನಾಟಕವು 10 ದಿನ ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಸೆ.5ರಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಆದೇಶ ಮಾರ್ಪಡಿಸುವಂತೆ ಕೋರಿ ರಾಜ್ಯ ಸರ್ಕಾರದಿಂದ ಸೆ.8 ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆಯನ್ನು ಸೆ.11ರಂದು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್‌, ತಮಿಳುನಾಡಿಗೆ ಪ್ರತಿ ದಿನ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಮತ್ತೆ ಆದೇಶ ನೀಡಿತ್ತು.
  • ***
  • ಸೆಪ್ಟೆಂಬರ್ 6
  • ಭುಗಿಲೆದ್ದ ಪ್ರತಿಭಟನೆ
  • ತಮಿಳುನಾಡಿಗೆ 15,000 ಕ್ಯೂಸೆಕ್ ನೀರು ಬಿಡಬೇಕು ಎಂಬ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಪ್ರತಿಭಟಿಸಿ ಮಂಡ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ, ಜಿಲ್ಲೆಯ ಶ್ರೀರಂಗಪಟ್ಟಣ, ಬೆಳಗೋಳ, ಕೆಆರ್‍ಎಸ್ ಬಳಿ ರೈತ ಸಂಘ, ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿತ್ತು.
  • ***
  • ಸೆಪ್ಟೆಂಬರ್ 13
  • 100ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ
  • ಕಾವೇರಿ ಚಳವಳಿಯ ಕಾವು ಬೆಂಗಳೂರು, ತುಮಕೂರು, ಚಿತ್ರದುರ್ಗ ಒಳಗೊಂಡಂತೆ ಇಡೀ ರಾಜ್ಯಕ್ಕೆ ಹಬ್ಬಿತ್ತು. ಸುಮಾರು 100ಕ್ಕೂ ಹೆಚ್ಚು ಬಸ್‌–ಲಾರಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಬೆಂಗಳೂರಿನ ಮೈಸೂರು ಹಾಗೂ ತುಮಕೂರು ರಸ್ತೆಗಳಲ್ಲಿ ಹಿಂಸಾಚಾರ ತಾಂಡವವಾಡಿತ್ತು.
  • ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿ, ಲಘು ಲಾಠಿ ಪ್ರಹಾರವನ್ನೂ ನಡೆಸಿದ್ದರು. ವಾಹನಗಳಿಗೆ ಬೆಂಕಿ ಹಚ್ಚಿದ ಸುದ್ದಿ ತಿಳಿದು ಭೀತಿಗೊಂಡ ವ್ಯಾಪಾರಸ್ಥರು ಅಂಗಡಿಗಳ ಬಾಗಿಲು ಮುಚ್ಚಿದ್ದರು. ಮಾಲ್‌ಗಳು, ಚಿತ್ರಮಂದಿರಗಳು ಬಂದ್‌ ಆಗಿ, ನಗರದಲ್ಲಿ ಅಘೋಷಿತ ಬಂದ್‌ ವಾತಾವರಣ ಸೃಷ್ಟಿಯಾಗಿತ್ತು.
  • ***
  • ಸೆಪ್ಟೆಂಬರ್ 24
  • ವಿಶೇಷ ಅಧಿವೇಶನ
  • ಕಾವೇರಿ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿನಿತ್ಯ ಆರು ಸಾವಿರ ಕ್ಯುಸೆಕ್‌ ನೀರು ಬಿಡುವಂತೆ ಸುಪ್ರೀಂ ಕೋರ್ಟ್‌ ಸೆ. 20ರಂದು ನೀಡಿರುವ ಆದೇಶ ಹಾಗೂ ಅದರ ಸಾಧಕ– ಬಾಧಕ ಕುರಿತು ಚರ್ಚಿಸಲು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲಾಗಿತ್ತು.
  • ‘ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳಲ್ಲಿ ಸದ್ಯ ಸಂಗ್ರಹವಿರುವ ನೀರನ್ನು ಕುಡಿಯುವುದಕ್ಕೆ ವಿನಾ ಬೇರೆ ಉದ್ದೇಶಗಳಿಗೆ ಪೂರೈಸುವುದಿಲ್ಲ’ ಎಂಬ ನಿರ್ಣಯವನ್ನು ರಾಜ್ಯ ವಿಧಾನಮಂಡಲದ ಉಭಯ ಸದನಗಳೂ ಸರ್ವಾನುಮತದಿಂದ ಅಂಗೀಕರಿಸಿದ್ದವು.
  • ***
  • ಸೆಪ್ಟೆಂಬರ್ 28
  • ಕೇಂದ್ರದ ಮಧ್ಯಸ್ಥಿಕೆಗೆ ಸಲಹೆ
  • ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಉಭಯ ರಾಜ್ಯಗಳ ಮುಖ್ಯಸ್ಥರ ಸಭೆ ಕರೆದು ಕಾವೇರಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಬೇಕು ಎಂದು ಮಂಗಳವಾರ ಮಧ್ಯಾಹ್ನ ನಡೆದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಹಾಗೂ ಉದಯ್ ಲಲಿತ್ ಅವರ ಪೀಠವು ಕೇಂದ್ರದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರಿಗೆ ನಿರ್ದೇಶನ ನೀಡಿತ್ತು. ಆ ಮೂಲಕ ಕಾವೇರಿ ನೀರು ಹಂಚಿಕೆ ಬಿಕ್ಕಟ್ಟು ತಲೆದೋರಿದಂದಿನಿಂದ ಕರ್ನಾಟಕ ಎದುರಿಸುತ್ತಿದ್ದ ಆತಂಕವನ್ನು ಕೊಂಚ ಮಟ್ಟಿಗೆ ದೂರವಾಗಿಸಿತ್ತು.
  • ***
  • ಅಕ್ಟೋಬರ್ 2
  • ದೇವೇಗೌಡರ ಉಪವಾಸ
  • ಕಾವೇರಿ ಸಮಸ್ಯೆ ಇರ್ತರ್ಥಕ್ಕಾಗಿ ಎಚ್.ಡಿ. ದೇವೇಗೌಡ ಅವರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಉಪವಾಸ ನಡೆಸಿದ್ದರು. ಪ್ರಧಾನಿ ಮೋದಿ ಅವರ ಭರವಸೆ ಮೇಲೆ ಅದೇ ದಿನ ರಾತ್ರಿ ಉಪವಾಸ ಅಂತ್ಯಗೊಳಿಸಿದ್ದರು. ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ. ಸದಾನಂದಗೌಡ ಅವರು ಧರಣಿ ಸ್ಥಳಕ್ಕೆ ತೆರಳಿ ಪ್ರಧಾನಿಯವರ ಮನವಿ ಮೇರೆಗೆ ಉಪವಾಸ ಅಂತ್ಯಗೊಳಿಸುವಂತೆ ಕೋರಿದ್ದರು.
  • ಸೆಪ್ಟೆಂಬರ್ 9ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಎಚ್.ಡಿ. ದೇವೇಗೌಡ ಅವರು, ಕಾವೇರಿ, ಮಹಾದಾಯಿ ಸಮಸ್ಯೆ ಸೇರಿದಂತೆ ಕರ್ನಾಟಕ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಅರ್ಧ ಗಂಟೆಗೂ ಅಧಿಕ ಕಾಲ ಚರ್ಚಿಸಿದ್ದರು. ತಾವು ಮಧ್ಯಸ್ಥಿಕೆ ವಹಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಪ್ರಧಾನಿ ಅವರನ್ನು ಕೋರಿದ್ದರು.
  • ***
  • ಅಕ್ಟೋಬರ್ 4
  • ಹೊಲಗಳಿಗೆ ನೀರು ಹರಿಸಲು ನಿರ್ಣಯ
  • ಕರ್ನಾಟಕ ಹಾಗೂ ತಮಿಳುನಾಡಿನ ಜಟಾಪಟಿಯಿಂದಾಗಿ ದೊಡ್ಡ ಕಗ್ಗಂಟಾಗಿರುವ ಕಾವೇರಿ ವಿವಾದದ ಬಗ್ಗೆ ಚರ್ಚಿಸಲು ಮತ್ತೆ ವಿಧಾನಮಂಡಲ ವಿಶೇಷ ಅಧಿವೇಶನ ಸೇರಿತ್ತು. ರೈತರ ಹೊಲಗಳಿಗೆ ನೀರು ಹರಿಸುವ ಸಂಬಂಧ ರಾಜ್ಯ ಸರ್ಕಾರ ಮಂಡಿಸಿದ ನಿರ್ಣಯವನ್ನು ಉಭಯ ಸದನಗಳೂಒಕ್ಕೊರಲಿನಿಂದ ಬೆಂಬಲಿಸಿದ್ದವು. ತಮಿಳುನಾಡಿಗೆ ನೀರು ಬಿಡುವ ಬಗ್ಗೆ ನಿರ್ಣಯದಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳಿರಲಿಲ್ಲ.
  • ***
  • ಅಕ್ಟೋಬರ್ 8
  • ಕೇಂದ್ರ ತಂಡದ ಅಧ್ಯಯನ
  • ಕಾವೇರಿ ಕಣಿವೆಯಲ್ಲಿನ ಪರಿಸ್ಥಿತಿ ಅರಿಯಲು ಕೇಂದ್ರ ಸರ್ಕಾರ ನೇಮಿಸಿದ್ದ ಸಿಡಬ್ಲ್ಯುಸಿ ಅಧ್ಯಕ್ಷ ಜಿ.ಎಸ್. ಝಾ ನೇತೃತ್ವದ ತಂಡ ಪ್ರವಾಸ ಕೈಗೊಂಡಿತ್ತು. ನೀರು ಬಿಡಲಾಗದ ಪರಿಸ್ಥಿತಿಯಲ್ಲಿ ರಾಜ್ಯ ಇದೆ ಎಂದು ರಾಜ್ಯ ಸರ್ಕಾರದಿಂದ ಕೇಂದ್ರದ ತಂಡಕ್ಕೆ ಸಂಕಷ್ಟ ಮನವರಿಕೆ ಮಾಡಲಾಗಿತ್ತು.
  • ಕರ್ನಾಟಕ, ತಮಿಳುನಾಡಿನಲ್ಲಿ ಅಧ್ಯಯನ ನಡೆಸಿದ ತಂಡ ಅಕ್ಟೋಬರ್ 17ರಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠಕ್ಕೆ ವರದಿ ಸಲ್ಲಿಸಿತ್ತು. ಈ ವರದಿ ಆಧರಿಸಿ ಸುಪ್ರೀಂ ಕೋರ್ಟ್‌ ಅಕ್ಟೋಬರ್‌ 20ರಿಂದ ಮುಂದಿನ ಆದೇಶದವರೆಗೆ ಪ್ರತಿದಿನ ತಮಿಳುನಾಡಿಗೆ 2 ಸಾವಿರ ಕ್ಯುಸೆಕ್‌ ನೀರು ಹರಿಸುವಂತೆ ಆದೇಶಿಸಿತ್ತು. ಅನಂತರ ಚಳವಳಿ ತಣ್ಣಗಾಯಿತು.

ಪ್ರಮುಖ ಘಟನೆಗಳು

ಬದಲಾಯಿಸಿ
  • ಜನವರಿ 9
  • ರಾಷ್ಟ್ರಪತಿ ಆಡಳಿತ:ಜಮ್ಮು ಮತ್ತು ಕಾಶ್ಮೀರದ ಪಿಡಿಪಿ– ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮಹಮ್ಮದ್‌ ಸಯೀದ್‌ ಅವರು ನಿಧನ ಹೊಂದಿದ್ದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂತು.[]
  • ಜನವರಿ ೨೮ - ಜಿಕಾ ವೈರಾಣುವಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ವರದಿಮಾಡಿತು.[]

ಫೆಬ್ರವರಿ

ಬದಲಾಯಿಸಿ
  • ಬೆಂಗಳೂರು -ಫೆಬ್ರವರಿ 20-21 ತೈಲ ಬೆಲೆ ಏರಿಕೆ ನೀತಿ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ದೇಶದಾದ್ಯಂತ ಕರೆ ನೀಡಿದ್ದ ಎರಡು ದಿನಗಳ ಬಂದ್‌ಗೆ ನಗರದ ಆಟೊ ಚಾಲಕರು, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನೌಕರರು ಬೆಂಬಲ ವ್ಯಕ್ತಪಡಿಸಿದ್ದರು. ಅದರಿಂದ ನಗರದಲ್ಲಿ ಆಟೊ ಹಾಗೂ ಬಸ್‌ ಸಂಚಾರ ಬಂದ್‌ ಆಗಿ, ಎರಡು ದಿನ ಇಡೀ ನಗರವೇ ಸ್ತಬ್ಧವಾಗಿತ್ತು.ಎರಡು ದಿನ ಇಡೀ ನಗರವೇ ಸ್ತಬ್ಧವಾಗಿತ್ತು

ಮಾರ್ಚ್

ಬದಲಾಯಿಸಿ

ಏಪ್ರಿಲ್

ಬದಲಾಯಿಸಿ
  • ಏಪ್ರಿಲ್ 4;ಮತ್ತೆ ಪಿಡಿಪಿ–ಬಿಜೆಪಿ ಮೈತ್ರಿ;ನಾಲ್ಕು ತಿಂಗಳ ಅನಿಶ್ಚಿತತೆಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಮೆಹಬೂಬಾ ಮುಫ್ತಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಏಪ್ರಿಲ್‌ 12 []

ಆಗಸ್ಟ್

ಬದಲಾಯಿಸಿ

ಮುಖ್ಯಮಂತ್ರಿ ಬದಲು;ಗುಜರಾತ್‌ ಮುಖ್ಯಮಂತ್ರಿ ಹುದ್ದೆಗೆ ಆನಂದಿ ಬೆನ್ ಪಟೇಲ್ ರಾಜೀನಾಮೆ ನೀಡಿದರು. ನಂತರ, ವಿಜಯ್‌ ರೂಪಾಣಿ ಅವರು ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ಆಗಸ್ಟ್‌ 7ರಂದು ಪ್ರಮಾಣ ವಚನ ಸ್ವೀಕರಿಸಿದರು.

  • ಆಗಸ್ಟ್‌ 17;ಹೊಸ ಸರ್ಕಾರ;ಅರುಣಾಚಲ ಪ್ರದೇಶದಲ್ಲಿ ಪೆಮಾ ಖಂಡು ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂತು.
  • ಸೆಪ್ಟೆಂಬರ್‌ 16;ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌;ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ನೇತೃತ್ವದಲ್ಲಿ ಕಾಂಗ್ರೆಸ್‌ನ 40ಕ್ಕೂ ಹೆಚ್ಚು ಶಾಸಕರು ಪೀಪಲ್ಸ್‌ ಪಾರ್ಟಿ ಆಫ್‌ ಅರುಣಾಚಲ (ಪಿಪಿಎ) ಸೇರಿದರು.[]

ನವೆಂಬರ್‌

ಬದಲಾಯಿಸಿ
  • ನವೆಂಬರ್ 08,2016 ಮದ್ಯರಾತ್ರಿ;

ನೋಟುಗಳ ಅನಾಣ್ಯೀಕರಣ

ಬದಲಾಯಿಸಿ
  • ನವೆಂಬರ್ 08,2016 ಮದ್ಯರಾತ್ರಿ;
  • ಭಾರತ ಸರ್ಕಾರ ಬುಧವಾರ 9 ನವೆಂಬರ್ 2016 ರಿಂದ ಎಲ್ಲಾ ರೂ..500 ಮತ್ತು ರೂ. 1000 ಬ್ಯಾಂಕ್-ನೋಟುಗಳ ಅನಾಣ್ಯೀಕರಣವನ್ನು ಘೋಷಣೆ ಮಾಡಿದ್ದು, ಭಾರತದಲ್ಲಿ ಕಾನೂನು ಬದ್ಧವಾಗಿ ಮಹಾತ್ಮ ಗಾಂಧಿ ಸರಣಿಯ ರೂ.1000 ಬ್ಯಾಂಕ್ ನೋಟುಗಳ ಮೌಲ್ಯವನ್ನು (ನವೆಂಬರ್ 08,2016 ಮದ್ಯರಾತ್ರಿಯಿಂದ) ರದ್ದುಗಳಿಸುತ್ತಿರುವುದಾಗಿ 8 ನವೆಂಬರ್ 2016 ರಲ್ಲಿ ಘೋಶಿಸಲಾಯಿತು.[೧]
  • ಭಾರತ ಪ್ರಧಾನಿ ನರೇಂದ್ರ ಮೋದಿಯವರು 8:15 ರಾತ್ರಿ ಹೊಸದಿಲ್ಲಿಯಲ್ಲಿ ಈ ಪ್ರಕಟಣೆ ಮಾಡಿದರು. ಅದೇ ದಿನ ಮೋದಿಯವರಿಂದ ರಾಷ್ಟ್ರಕ್ಕೆ ಒಂದು ಅನಿಗದಿತ ನೇರ ಪ್ರಸಾರ ಭಾಷಣದಲ್ಲಿ ಮಹಾತ್ಮ ಗಾಂಧಿ ಸರಣಿಯ ಎಲ್ಲಾ ರೂ. 500 ಮತ್ತು ರೂ. 1000 ಬ್ಯಾಂಕ್ ನೋಟುಗಳ ಪರಿಚಲನೆ ಅಮಾನ್ಯವಾಗಿದೆ ಎಂದು ಘೋಷಿಸಿ ಈ ಪ್ರಕಟಣೆ ಮಾಡಲ್ಪಟ್ಟಿತು. ಹಳೆಯ ಬ್ಯಾಂಕ್‍ನೋಟುಗಳನ್ನು ಮಹಾತ್ಮ ಗಾಂಧಿ ಹೊಸ ಸರಣಿಯ, ಹೊಸ ರೂ.500 ಮತ್ತು ರೂ. 2000 ಬ್ಯಾಂಕ್ ನೋಟುಗಳ ನೀಡಿಕೆಯ ವಿನಿಮಯವನ್ನು ಘೋಷಿಸಿತು[]

ಸೆರೆಮನೆಗೆ ದಾಳಿ

ಬದಲಾಯಿಸಿ
  • ನವೆಂಬರ್‌ 27;ಜೈಲಿನಿಂದ ಪರಾರಿ;ಪೊಲೀಸ್‌ ಸಮವಸ್ತ್ರದಲ್ಲಿದ್ದ ಬಂದೂಕುಧಾರಿ ಯುವಕರ ಗುಂಪೊಂದು ಪಂಜಾಬ್‌ನ ನಾಭಾ ಸೆರೆಮನೆಗೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಉಗ್ರಗಾಮಿ ಸಂಘಟನೆ ಖಲಿಸ್ತಾನ್‌ ಲಿಬರೇಷನ್‌ ಫ್ರಂಟ್‌ನ ಮುಖ್ಯಸ್ಥ ಹರ್ಮಿಂದರ್‌ ಸಿಂಗ್‌ ಮಿಂಟೂಮತ್ತು ಇತರ ಐವರು ಜೈಲಿನಿಂದ ಪರಾರಿಯಾದರು. ಮರುದಿನ ಮಿಂಟೂನನ್ನು ಬಂಧಿಸಲಾಯಿತು.[]

೨೦೧೬- ಉಗ್ರರ ಧಾಳಿ

ಬದಲಾಯಿಸಿ
  • ಐಎಸ್‌ ಮತ್ತು ಅಲ್‌ಕೈದಾ ಉಗ್ರರ ದಾಳಿ
  • ಜನವರಿ 15
  • ಪಶ್ಚಿಮ ಆಫ್ರಿಕಾದ ದೇಶ ಬುರ್ಕಿನ ಫಾಸೊದ ಔಗಾಡೌದಲ್ಲಿ ಹೋಟೆಲ್ ಮತ್ತು ರೆಸ್ಟೊರೆಂಟ್‌ ಮೇಲೆ ದಾಳಿ ನಡೆಸಿದ ಅಲ್‌ಕೈದಾ ಉಗ್ರರು 22 ಮಂದಿಯನ್ನು ಹತ್ಯೆ ಮಾಡಿದರು. ಮೂವರು ಉಗ್ರರನ್ನು ಕೊಂದು 126 ಒತ್ತೆಯಾಳುಗಳನ್ನು ರಕ್ಷಿಸಲಾಯಿತು.
  • ಜನವರಿ 30: ನೈಜೀರಿಯಾದ ಮೈದುಗುರಿಯ ಹಳ್ಳಿಯ ಮೇಲೆ ಬೊಕೊ ಹರಮ್ ಉಗ್ರರ ದಾಳಿ. ಕನಿಷ್ಠ 65 ಮಂದಿ ಸಾವು. 136 ಜನರಿಗೆ ಗಾಯ.
  • ಫೆಬ್ರುವರಿ 12: ಇರಾಕ್‌ನ ಮೋಸುಲ್‌ನಲ್ಲಿರುವ ಜಗತ್ತಿನ ಅತಿ ಪ್ರಾಚೀನ ಕ್ರೈಸ್ತ ಮಂದಿರಗಳಲ್ಲಿ ಒಂದಾದ, 1400 ವರ್ಷ ಇತಿಹಾಸವುಳ್ಳ ಸೇಂಟ್‌ ಎಲಿಜಾಹ್‌ವನ್ನು ಧ್ವಂಸಗೊಳಿಸಿದ ಐಎಸ್‌ ಉಗ್ರರು.
  • ಫೆ. 21: ಸಿರಿಯಾದ ಹೊಮ್ಸ್‌ ಮತ್ತು ಡಮಾಸ್ಕಸ್‌ ಮೇಲೆ ಐಎಸ್‌ ಉಗ್ರರ ದಾಳಿಯಲ್ಲಿ 140 ಮಂದಿ ಬಲಿ
  • ***
  • ಮಾರ್ಚ್‌ 22
  • ಪಶ್ಚಿಮ ಆಫ್ರಿಕಾದ ದೇಶ ಬುರ್ಕಿನ ಫಾಸೊದ ಔಗಾಡೌದಲ್ಲಿ ಹೋಟೆಲ್ ಮತ್ತು ರೆಸ್ಟೊರೆಂಟ್‌ ಮೇಲೆ ದಾಳಿ ನಡೆಸಿದ ಅಲ್‌ಕೈದಾ ಉಗ್ರರು 22 ಮಂದಿಯನ್ನು ಹತ್ಯೆ ಮಾಡಿದರು. ಮೂವರು ಉಗ್ರರನ್ನು ಕೊಂದು 126 ಒತ್ತೆಯಾಳುಗಳನ್ನು ರಕ್ಷಿಸಲಾಯಿತು.
  • ಜನವರಿ 30: ನೈಜೀರಿಯಾದ ಮೈದುಗುರಿಯ ಹಳ್ಳಿಯ ಮೇಲೆ ಬೊಕೊ ಹರಮ್ ಉಗ್ರರ ದಾಳಿ. ಕನಿಷ್ಠ 65 ಮಂದಿ ಸಾವು. 136 ಜನರಿಗೆ ಗಾಯ.
  • ಫೆಬ್ರುವರಿ 12: ಇರಾಕ್‌ನ ಮೋಸುಲ್‌ನಲ್ಲಿರುವ ಜಗತ್ತಿನ ಅತಿ ಪ್ರಾಚೀನ ಕ್ರೈಸ್ತ ಮಂದಿರಗಳಲ್ಲಿ ಒಂದಾದ, 1400 ವರ್ಷ ಇತಿಹಾಸವುಳ್ಳ ಸೇಂಟ್‌ ಎಲಿಜಾಹ್‌ವನ್ನು ಧ್ವಂಸಗೊಳಿಸಿದ ಐಎಸ್‌ ಉಗ್ರರು.
  • ಫೆ. 21: ಸಿರಿಯಾದ ಹೊಮ್ಸ್‌ ಮತ್ತು ಡಮಾಸ್ಕಸ್‌ ಮೇಲೆ ಐಎಸ್‌ ಉಗ್ರರ ದಾಳಿಯಲ್ಲಿ 140 ಮಂದಿ ಬಲಿ ಬ್ರಸಲ್ಸ್‌ನ ವಿಮಾನ ನಿಲ್ದಾಣ ಮತ್ತು ಮೆಟ್ರೊ ನಿಲ್ದಾಣಗಳ ಮೇಲೆ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 32 ಮಂದಿ ಮೃತಪಟ್ಟು, 260 ಜನರು ಗಾಯಗೊಂಡರು.
  • ಮಾ. 27: ಪಾಕಿಸ್ತಾನದ ಲಾಹೋರ್‌ನಲ್ಲಿ ಕ್ರೈಸ್ತರನ್ನು ಗುರಿಯಾಗಿರಿಸಿಕೊಂಡು ಸುನ್ನಿ ಇಸ್ಲಾಮಿಕ್‌ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 75 ಬಲಿ, ಸುಮಾರು 340 ಜನರಿಗೆ ಗಾಯ.
  • ಜೂನ್ 12: ಅಮೆರಿಕದ ಒರ್ಲಾಂಡೊದಲ್ಲಿ ಸಲಿಂಗಿಗಳ ನೈಟ್‌ಕ್ಲಬ್ ಮೇಲೆ ದಾಳಿ ನಡೆಸಿದ ಐಎಸ್‌ ಬಂದೂಕುಧಾರಿಯಿಂದ 49 ಜನರ ಹತ್ಯೆ.
  • ಜೂ. 28: ಇಸ್ತಾಂಬುಲ್‌ನ ಅಟಟುರ್ಕ್‌ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್ ಮತ್ತು ಬಂದೂಕು ದಾಳಿಗೆ 42 ಮಂದಿ ಬಲಿ. 200ಕ್ಕೂ ಹೆಚ್ಚು ಮಂದಿಗೆ ಗಾಯ.
  • ಜುಲೈ 1: ಬಾಂಗ್ಲಾದೇಶದ ಢಾಕಾದಲ್ಲಿನ ಕೆಫೆಯೊಂದರ ಮೇಲೆ ಇಸ್ಲಾಮಿಕ್ ಸ್ಟೇಟ್‌ ಉಗ್ರರ ದಾಳಿ. 20 ಒತ್ತೆಯಾಳುಗಳು ಮತ್ತು ಇಬ್ಬರು ಪೊಲೀಸರ ಹತ್ಯೆ
  • ಜು. 2: ಇರಾಕ್‌ನ ಬಾಗ್ದಾದ್‌ನಲ್ಲಿ ಲಾರಿಯಲ್ಲಿ ಬಾಂಬ್ ಸ್ಫೋಟ, 125 ಸಾವು. ಸುಮಾರು 150 ಜನರಿಗೆ ಗಾಯ. ದಾಳಿ ಹೊಣೆ ಹೊತ್ತ ಐಎಸ್.
  • ಜು. 23: ಆಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಪ್ರತಿಭಟನಾ ಮೆರವಣಿಗೆ ಮೇಲೆ ಆತ್ಮಾಹುತಿ ಬಾಂಬ್ ದಾಳಿಗೆ 80 ಸಾವು.
  • ಅಕ್ಟೋಬರ್‌ 25: ಪಾಕಿಸ್ತಾನದ ಕ್ವೆಟ್ಟಾದಲ್ಲಿ ಪೊಲೀಸ್ ತರಬೇತಿ ಅಕಾಡೆಮಿ ಮೇಲೆ ಐಎಸ್‌ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 61 ಸಾವು. 117 ಮಂದಿಗೆ ಗಾಯ.
  • ೨೦೧೬ ಹಿನ್ನೋಟ


ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=೨೦೧೬&oldid=1253580" ಇಂದ ಪಡೆಯಲ್ಪಟ್ಟಿದೆ