ಭಾರತದ ಚಲನಚಿತ್ರೋದ್ಯಮ

ಭಾರತದ ಚಲನಚಿತ್ರೋದ್ಯಮ ವು ಭಾರತದಾದ್ಯಂತ ನಿರ್ಮಿಸಲಾದ ಚಲನಚಿತ್ರಗಳನ್ನು ಒಳಗೊಳ್ಳುತ್ತದೆ. ಮುಂಬಯಿಯ ಸಿನಿಮೀಯ ಸಂಸ್ಕೃತಿಯನ್ನಷ್ಟೇ ಅಲ್ಲದೇ, ಆಂಧ್ರಪ್ರದೇಶ, ಅಸ್ಸಾಮ್‌, ಕರ್ನಾಟಕ, ಕೇರಳ, ಪಂಜಾಬ್‌, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಂಥ ರಾಜ್ಯಗಳ ಸಿನಿಮೀಯ ಸಂಪ್ರದಾಯಗಳನ್ನೂ ಇದು ಒಳಗೊಂಡಿದೆ. ಭಾರತೀಯ ಚಲನಚಿತ್ರಗಳು ದಕ್ಷಿಣ ಏಷ್ಯಾ ಮತ್ತು ಮಧ್ಯಪ್ರಾಚ್ಯದಾದ್ಯಂತ ಅನುಸರಿಸಿಕೊಂಡು ಬಂದವು. ಒಂದು ಮಾಧ್ಯಮವಾಗಿ ಚಲನಚಿತ್ರವು ದೇಶದಲ್ಲಿ ಜನಪ್ರಿಯತೆಯನ್ನು ಗಳಿಸಿದಂತೆ, ಹಲವಾರು ಭಾರತೀಯ ಭಾಷೆಗಳಲ್ಲಿ ವಾರ್ಷಿಕವಾಗಿ 2,000ದಷ್ಟು ಚಲನಚಿತ್ರಗಳು ನಿರ್ಮಾಣಗೊಂಡವು. ಯುನೈಟೆಡ್‌ ಕಿಂಗ್‌ಡಂ ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳಂಥ ದೇಶಗಳಲ್ಲಿನ ವಲಸಿಗರು ಹಿಂದಿ-ಭಾಷೆ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಪ್ರೇಕ್ಷಕರಾಗಿರುವಲ್ಲಿನ ತಮ್ಮ ಅಸ್ತಿತ್ವವನ್ನು ಮುಂದುವರಿಸಿಕೊಂಡು ಬಂದರು. ಬಾಲಿವುಡ್‌ ಕುರಿತಾಗಿ ಬ್ರಿಟಾನಿಕಾ ವಿಶ್ವಕೋಶ ದಲ್ಲಿ (2009) ಇರುವ ನಮೂದಿನ ಪ್ರಕಾರ, ಈ ಚಲನಚಿತ್ರಗಳ ಪೈಕಿ ಕೆಲವೊಂದು "ಸೂತ್ರಾನುಸಾರಿಯಾಗಿರುವ ಕಥೆಯ ಎಳೆಗಳು, ಪರಿಣತಿಯಿಂದ ಸಂಯೋಜಿಸಲ್ಪಟ್ಟ ಹೊಡೆದಾಟದ ದೃಶ್ಯಗಳು, ನಯನ ಮನೋಹರವಾದ ಹಾಡು-ಹಾಗೂ-ನೃತ್ಯದ ವಾಡಿಕೆಯ ಅನುಕ್ರಮಗಳು, ಮತ್ತು ಉತ್ಪ್ರೇಕ್ಷಿತ ಸ್ವರೂಪದಲ್ಲಿರುವ ಕಥಾನಾಯಕರಿಂದ ಜನರನ್ನು ಆಕರ್ಷಿಸುವುದನ್ನು ಮುಂದುವರಿಸಿದವು."[] ಇದು ವ್ಯಾಪಾರಿ ತಮಿಳು ಚಲನಚಿತ್ರ ಹಾಗೂ ತೆಲುಗು ಚಲನಚಿತ್ರಗಳಿಗೆ ಸಂಬಂಧಿಸಿದಂತೆಯೂ ನಿಜ ಸಂಗತಿಯಾಗಿದೆ. ಮತ್ತೊಂದೆಡೆ, ಬಂಗಾಳಿ ಚಿತ್ರರಂಗ, ಮಲಯಾಳಂ ಚಿತ್ರರಂಗ, ಕನ್ನಡ ಚಿತ್ರರಂಗಗಳಲ್ಲಿ ಹಾಗೂ ತನ್ನ ಗಂಭೀರ ವಿಷಯ, ಯಥಾರ್ಥತೆ ಹಾಗೂ ವಾಸ್ತವಿಕತೆಗಳಿಗಾಗಿ ಚಿರಪರಿಚಿತವಾಗಿರುವ ಇತರ ಪ್ರಾದೇಶಿಕ ಭಾಷಾ ಉದ್ಯಮಗಳಲ್ಲಿ ಎದ್ದು ಕಾಣುವಂತಿರುವ 'ಸಮಾನಾಂತರ ಚಲನಚಿತ್ರ'ದ ಪ್ರವೃತ್ತಿಯ ಬೆಳವಣಿಗೆಯು ಇವಕ್ಕೆ ಹೋಲಿಸಿದಾಗ ವೈಲಕ್ಷಣ್ಯವನ್ನು ತೋರಿಸುತ್ತವೆ.[][]


ಸ್ಥೂಲ ಅವಲೋಕನ

ಬದಲಾಯಿಸಿ
 
1929ರಲ್ಲಿ ಬಂದ ಪ್ರಪಂಚ ಪಾಶ್‌ ಚಲನಚಿತ್ರದಲ್ಲಿ ಚಾರು ರಾಯ್‌ ಮತ್ತು ಸೀತಾ ದೇವಿ.

20ನೇ ಶತಮಾನದಲ್ಲಿ, ಅಮೆರಿಕಾದ ಹಾಗೂ ಚೀನಾದ ಚಲನಚಿತ್ರೋದ್ಯಮಗಳ ಜೊತೆಜೊತೆಯಲ್ಲಿಯೇ ಭಾರತೀಯ ಚಿತ್ರರಂಗವು ಒಂದು ಜಾಗತಿಕ ಉದ್ಯಮವಾಗಿ ಮಾರ್ಪಟ್ಟಿತು.[] ಉತ್ಪನ್ನವನ್ನು ವಿತರಿಸುವಲ್ಲಿ ಬೇರುಬಿಟ್ಟಿದ್ದ ಸಿನಿಮೀಯ ರೂಢಮಾದರಿಯನ್ನು ಸುಧಾರಿಸುವಲ್ಲಿ ವರ್ಧಿಸಲ್ಪಟ್ಟ ತಂತ್ರಜ್ಞಾನವು ದಾರಿಮಾಡಿಕೊಟ್ಟಿತು. ಇದರಿಂದಾಗಿ ವಿಷಯವು ಉದ್ದೇಶಿತ ಪ್ರೇಕ್ಷಕರನ್ನು ತಲುಪುವ ವಿಧಾನದಲ್ಲಿ ಆಮೂಲಾಗ್ರ ಮಾರ್ಪಾಟುಗಳಾದವು.[] ಭಾರತದ ಚಲನಚಿತ್ರಗಳು ಪ್ರದರ್ಶನಗೊಳ್ಳುವ 90ಕ್ಕೂ ಹೆಚ್ಚಿನ ದೇಶಗಳಲ್ಲಿ ಭಾರತೀಯ ಚಿತ್ರರಂಗವು ಮಾರುಕಟ್ಟೆಯನ್ನು ಕಂಡುಕೊಂಡಿತು.[] ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿಯೂ ದೇಶವು ಪಾಲ್ಗೊಂಡಿತು. ಅದರಲ್ಲೂ ವಿಶೇಷವಾಗಿ ಸತ್ಯಜಿತ್‌ ರೇ (ಬಂಗಾಳಿ), ಅಡೂರ್‌ ಗೋಪಾಲ ಕೃಷ್ಣನ್‌, ಷಾಜಿ N. ಕರುಣ್‌ (ಮಲಯಾಳಂ) ಮೊದಲಾದವರ ಚಿತ್ರಗಳು ಇಲ್ಲಿ ಪ್ರದರ್ಶಿತವಾದವು.[] ಶೇಖರ್‌ ಕಪೂರ್‌, ಮೀರಾ ನಾಯರ್‌, ದೀಪಾ ಮೆಹ್ತಾ ಇವರೇ ಮೊದಲಾದ ಭಾರತೀಯ ಚಲನಚಿತ್ರ ತಯಾರಕರು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಯಶಸ್ಸನ್ನು ಕಂಡರು.[] ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಹಾಗೂ ಜಪಾನ್‌ನಂಥ ಹೊರ ದೇಶಗಳಿಗೆ ಚಲನಚಿತ್ರಗಳ ಪ್ರತಿನಿಧಿಗಳ ತಂಡಗಳನ್ನು ಭಾರತದ ಸರ್ಕಾರವು ವಿಸ್ತರಿಸಿದರೆ, ದೇಶದ ಚಲನಚಿತ್ರ ನಿರ್ಮಾಪಕರ ಒಕ್ಕೂಟವು ಇದೇ ರೀತಿಯ ನಿಯೋಗಗಳನ್ನು ಯುರೋಪ್‌ನಾದ್ಯಂತ ಕಳಿಸಿದವು.[]

ಭಾರತವು ಚಲನಚಿತ್ರಗಳ ವಿಶ್ವದ ಅತಿದೊಡ್ಡ ತಯಾರಕನಾಗಿದ್ದು, ಪ್ರತಿವರ್ಷವೂ ಸರಿಸುಮಾರು ಒಂದು ಸಾವಿರ ಚಲನಚಿತ್ರಗಳನ್ನು ತಯಾರಿಸಿಕೊಂಡು ಬಂದಿದೆ.[][] ಒಟ್ಟಾರೆಯಾಗಿ ತಯಾರಾಗುತ್ತಿರುವ 600 ಚಲನಚಿತ್ರಗಳ ಪೈಕಿ, ತಲಾ 300ರಷ್ಟು ಚಲನಚಿತ್ರಗಳು ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿದ್ದರೆ, ಇನ್ನುಳಿದವು ಇತರ ಭಾಷೆಗಳಲ್ಲಿವೆ.[] ಆದಾಗ್ಯೂ, ಭಾರತದಲ್ಲಿ ಚಲನಚಿತ್ರಗಳಿಂದ ಉತ್ಪತ್ತಿಯಾಗುತ್ತಿರುವ ಒಟ್ಟಾರೆ ಆದಾಯದ ಪೈಕಿ ಸುಮಾರು ಅರ್ಧದಷ್ಟು ಭಾಗವು ಹಿಂದಿ ಚಲನಚಿತ್ರಗಳಿಂದ ಬರುತ್ತದೆ.[] 100% ವಿದೇಶೀ ನೇರ ಹೂಡಿಕೆಗೆ ಅವಕಾಶ ಕಲ್ಪಿಸಿರುವುದರಿಂದಾಗಿ, 20ತ್‌ ಸೆಂಚುರಿ ಫಾಕ್ಸ್‌, ಸೋನಿ ಪಿಕ್ಷರ್ಸ್‌, ಮತ್ತು ವಾರ್ನರ್‌ ಬ್ರದರ್ಸ್‌ನಂಥ ವಿದೇಶಿ ಉದ್ಯಮಗಳಿಗೆ ಭಾರತೀಯ ಚಲನಚಿತ್ರ ಮಾರುಕಟ್ಟೆಯು ಆಕರ್ಷಕ ತಾಣವಾಗಿ ಕಂಡಿದೆ.[೧೦] ಝೀ, UTV ಮತ್ತು ಆಡ್‌ಲ್ಯಾಬ್ಸ್‌‌ನಂಥ ಭಾರತದ ಪ್ರಸಿದ್ಧ ಉದ್ಯಮಗಳು ಕೂಡಾ ಚಲನಚಿತ್ರಗಳ ನಿರ್ಮಾಣ ಹಾಗೂ ವಿತರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವು.[೧೦] ಮಲ್ಟಿಪ್ಲೆಕ್ಸ್‌ಗಳಿಗೆ ನೀಡಲಾದ ತೆರಿಗೆಯ ಉತ್ತೇಜಕ ಸವಲತ್ತುಗಳು ಭಾರತದಲ್ಲಿನ ಮಲ್ಟಿಪ್ಲೆಕ್ಸ್‌ಗಳ ಭರಾಟೆಗೆ ಕಾರಣವಾದವು.[೧೦] 2003ರ ವೇಳೆಗೆ ಏನಿಲ್ಲವೆಂದರೂ 30 ಚಲನಚಿತ್ರ ತಯಾರಿಕಾ ಕಂಪನಿಗಳು ಭಾರತದ ರಾಷ್ಟ್ರೀಯ ಸ್ಟಾಕ್‌ ವಿನಿಮಯ ಕೇಂದ್ರದಲ್ಲಿ ಪಟ್ಟೀಕರಣಕ್ಕೊಳಗಾಗುವ ಮೂಲಕ, ಸದರಿ ಮಾಧ್ಯಮವು ಅನುಭವಕ್ಕೆ ತಂದುಕೊಂಡಿರುವ ವ್ಯಾಪಾರೀ ಅಸ್ತಿತ್ವವನ್ನು ಎಲ್ಲರ ಮನಗಾಣಿಸಿದವು.[೧೦]

ಚದುರಿಹೋದ ಭಾರತೀಯ ಜನರಗುಂಪು ಸಾಗರೋತ್ತರ ದೇಶಗಳಲ್ಲಿರುವ ಲಕ್ಷಗಟ್ಟಲೆ ಭಾರತೀಯರನ್ನು ಒಳಗೊಂಡಿದ್ದು, ಅವರಿಗಾಗಿ DVDಗಳಂಥ ಮಾಧ್ಯಮಗಳ ಮೂಲಕ ಹಾಗೂ ಅವರು ವಾಸವಾಗಿರುವ ದೇಶಗಳಲ್ಲಿ ವಾಣಿಜ್ಯ ಸ್ವರೂಪದಲ್ಲಿ ಕಾರ್ಯಸಾಧ್ಯವಾಗುವ ಕಡೆಯಲ್ಲೆಲ್ಲಾ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಚಲನಚಿತ್ರಗಳು ಅವರಿಗೂ ಲಭ್ಯವಾಗುವಂಥ ಅವಕಾಶ ಕಲ್ಪಿಸಲಾಗಿದೆ.[೧೧] ಮುಖ್ಯವಾಹಿನಿ ಚಲನಚಿತ್ರವೊಂದರಿಂದ ಸಂಗ್ರಹವಾದ ಆದಾಯದ ಪೈಕಿ ಸುಮಾರು 12%ನಷ್ಟು ಪಾಲನ್ನು ಹೊಂದಿರುವ ಈ ಗಳಿಕೆಗಳು, ಭಾರತೀಯ ಚಿತ್ರರಂಗದ ಒಟ್ಟಾರೆ ಆದಾಯಕ್ಕೆ ಗಣನೀಯವಾದ ಕೊಡುಗೆಯನ್ನು ಕೊಟ್ಟಿವೆ. 2000ನೇ ಇಸವಿಯಲ್ಲಿ ಈ ಗಳಿಕೆಯು 1.3 ಶತಕೋಟಿ US ಡಾಲರುಗಳಷ್ಟಿದ್ದುದು ಈ ಅಭಿಪ್ರಾಯಕ್ಕೆ ಪುಷ್ಟಿ ನೀಡುತ್ತದೆ.[೧೨] ದೇಶದಲ್ಲಿನ ಚಲನಚಿತ್ರ ತಯಾರಿಕೆಗಾಗಿರುವ ಸೌಲಭ್ಯಗಳಲ್ಲಿ ತೆಲುಗು ಚಲನಚಿತ್ರೋದ್ಯಮದ ನೆಲೆಯಾಗಿರುವ ಹೈದರಾಬಾದ್‌‌ನಲ್ಲಿರುವ ರಾಮೋಜಿ ಫಿಲ್ಮ್‌ ಸಿಟಿಯು ಸೇರಿಕೊಂಡಿದ್ದು, ಗಿನ್ನೆಸ್‌ ವಿಶ್ವ ದಾಖಲೆಗಳಿಂದ ಪ್ರಮಾಣೀಕರಿಸಲ್ಪಟ್ಟಂತೆ ಇದು ವಿಶ್ವದಲ್ಲಿನ ಅತ್ಯಂತ ದೊಡ್ಡ ಚಲನಚಿತ್ರ ಸ್ಟುಡಿಯೋ ಸಂಕೀರ್ಣವಾಗಿದೆ.[೧೩] ಸಂಗೀತವು ಭಾರತೀಯ ಚಿತ್ರರಂಗಕ್ಕೆ ಗಣನೀಯ ಪ್ರಮಾಣದಲ್ಲಿ ಆದಾಯವನ್ನು ತರುತ್ತಿರುವ ಮತ್ತೊಂದು ಅಂಗವಾಗಿದೆ. ಭಾರತರದಲ್ಲಿ ಚಲನಚಿತ್ರವೊಂದರಿಂದ ಸಂಗ್ರಹಿಸಲ್ಪಡುವ ನಿವ್ವಳ ಆದಾಯಗಳ ಪೈಕಿ ಕೇವಲ ಸಂಗೀತದ ಹಕ್ಕುಗಳಿಂದಲೇ ಬರುವ ಆದಾಯವು 4–5%ನಷ್ಟಿರುತ್ತದೆ.[೧೨] 1913ರಲ್ಲಿ ಭಾರತವು ತನ್ನ ಮೊದಲ ಚಲನಚಿತ್ರವನ್ನು ತಯಾರಿಸಿತು.ಇಂದು ಬಾಲಿವುಡ್‌ ವಿಶ್ವದಲ್ಲೇ ಅತ್ಯಂತ ಹೆಚ್ಚು ಚಲನಚಿತ್ರವನ್ನು ನಿರ್ಮಿಸುವ ಉದ್ಯಮವಾಗಿದೆ.

ಇತಿಹಾಸ

ಬದಲಾಯಿಸಿ
 
ರಾಜಾ ಹರಿಶ್ಚಂದ್ರ (1913) ಚಿತ್ರದ ಒಂದು ದೃಶ್ಯ– ಮೊಟ್ಟಮೊದಲ ಪೂರ್ಣ-ಪ್ರಮಾಣದ ಚಲನಚಿತ್ರ.
ಚಿತ್ರ:Joymati.jpg
ಅಸ್ಸಾಮೀ ಚಲನಚಿತ್ರೋದ್ಯಮದ ಮೊಟ್ಟಮೊದಲ ಚಲನಚಿತ್ರವಾದ ಜೋಯ್‌ಮತಿಯ ಒಂದು ದೃಶ್ಯ (1935).
 
ಅಚ್ಚುತ್‌ ಕನ್ಯಾ (1936) ಚಿತ್ರದಲ್ಲಿ ದೇವಿಕಾ ರಾಣಿ ಮತ್ತು ಅಶೋಕ್‌ ಕುಮಾರ್‌.

ಲಂಡನ್‌ನಲ್ಲಿ ಲೂಮಿಯೇರ್‌ ಚಲನಚಿತ್ರಗಳ ಪ್ರದರ್ಶನವಾದ (1895) ನಂತರ ಷಲನಷಿತ್ರ ಎಂಬುದು ಯುರೋಪ್‌ನಾದ್ಯಂತ ಒಂದು ಸಂಚಲನೆಯನ್ನೇ ಸೃಷ್ಟಿಸಿತು ಮತ್ತು 1896ರ ಜುಲೈ ವೇಳೆಗೆ ಲೂಮಿಯೇರ್‌ ಚಲನಚಿತ್ರಗಳು ಬಾಂಬೆಯಲ್ಲಿ (ಈಗ ಮುಂಬಯಿ) ಪ್ರದರ್ಶನ ಭಾಗ್ಯವನ್ನು ಕಂಡಿದ್ದವು.[೧೪] ಮೊದಲ ಕಿರುಚಿತ್ರಗಳು ಭಾರತದಲ್ಲಿ ಹೀರಾಲಾಲ್‌ ಸೇನ್‌‌ನಿಂದ ನಿರ್ದೇಶಿಸಲ್ಪಟ್ಟವು. ದಿ ಫ್ಲವರ್‌ ಆಫ್‌ ಪರ್ಷಿಯಾ (1898) ಎಂಬ ಕಿರುಚಿತ್ರವು ಅದರಲ್ಲಿ ಮೊದಲನೆಯದಾಗಿತ್ತು.[೧೫] ಭಾರತದಲ್ಲಿ ಪೂರ್ಣ-ಪ್ರಮಾಣದ ಮೊದಲ ಚಲನಚಿತ್ರವು ದಾದಾಸಾಹೇಬ್‌ ಫಾಲ್ಕೆಯಿಂದ ನಿರ್ಮಿಸಲ್ಪಟ್ಟವು. ಭಾರತದ ಭಾಷೆಗಳು ಹಾಗೂ ಸಂಸ್ಕೃತಿಯ ಕುರಿತಾಗಿ ಪಾಂಡಿತ್ಯವನ್ನು ಸಂಪಾದಿಸಿಕೊಂಡಿದ್ದ ಈತ ರಾಜಾ ಹರಿಶ್ಚಂದ್ರ (1913) ಎಂಬ ಒಂದು ಮರಾಠಿ ಮೂಕಿ ಚಲನಚಿತ್ರವನ್ನು ನಿರ್ಮಿಸಲು ಸಂಸ್ಕೃತ ಮಹಾಕಾವ್ಯಗಳಲ್ಲಿ ಹೇರಳವಾಗಿದ್ದ ಮೂಲಾಂಶಗಳನ್ನು ಒಟ್ಟುಗೂಡಿಸಿದ. (ಕುತೂಹಲಕರ ವಿಷಯವೆಂದರೆ, ಈ ಚಲನಚಿತ್ರದಲ್ಲಿನ ಸ್ತ್ರೀ ಪಾತ್ರಗಳನ್ನು ಪುರುಷ ಕಲಾವಿದರು ನಿರ್ವಹಿಸಿದ್ದರು.)[೧೬] ಭಾರತದ ಚಲನಚಿತ್ರಮಂದಿರಗಳ ಮೊದಲ ಸರಣಿಯು ಕಲ್ಕತ್ತಾಜಮ್ಷೆಡ್‌ಜಿ ಫ್ರೇಮ್ಜಿ ಮದನ್‌ ಎಂಬ ವಾಣಿಜ್ಯೋದ್ಯಮಿಯ ಸ್ವಾಮ್ಯದಲ್ಲಿತ್ತು. ಈತ ವಾರ್ಷಿಕವಾಗಿ 10 ಚಲನಚಿತ್ರಗಳ ತಯಾರಿಕೆಯ ಮೇಲ್ವಿಚಾರಣೆಯನ್ನು ಮಾಡಿದ್ದ ಹಾಗೂ ಭಾರತೀಯ ಉಪಖಂಡದಾದ್ಯಂತ ಅವುಗಳನ್ನು ವಿತರಿಸಿದ್ದ.[೧೬]

ಇಪ್ಪತ್ತನೇ ಶತಮಾನದ ಆರಂಭದ ಅವಧಿಯಲ್ಲಿ ಚಲನಚಿತ್ರವು ಒಂದು ಮಾಧ್ಯಮವಾಗಿ ಭಾರತದ ಜನಸಮೂಹದಾದ್ಯಂತ ಹಾಗೂ ಅದರ ಅನೇಕ ಆರ್ಥಿಕ ವರ್ಗಗಳಾದ್ಯಂತ ಜನಪ್ರಿಯತೆಯನ್ನು ಗಳಿಸಿತು.[೧೪] ಶ್ರೀಸಾಮಾನ್ಯನ ಕೈಗೂ ಎಟುಕುವಂತಿರಲು ಟಿಕೆಟ್ಟುಗಳಿಗೆ ಕಡಿಮೆ ಬೆಲೆಯನ್ನು ನಿಗದಿಪಡಿಸಲಾಗಿತ್ತು ಹಾಗೂ ಸಾಕಷ್ಟು ಸ್ಥಿತಿವಂತರಾದವರಿಗೆ ಹೆಚ್ಚುವರಿ ಬೆಲೆಯ ಪ್ರವೇಶದ ಟಿಕೆಟ್‌ನ್ನು ನಿಗದಿಪಡಿಸಿದ್ದೇ ಹೆಚ್ಚುವರಿ ಸೌಕರ್ಯಗಳ ಸೂಚಕವಾಗಿತ್ತು.[೧೪] ಕೇವಲ ಒಂದು ಆಣೆ ಯಷ್ಟು (ಬಾಂಬೆಯಲ್ಲಿ 4 ಪೈಸಾ ) ಕಡಿಮೆಯಿದ್ದ ಪ್ರವೇಶಶುಲ್ಕದಲ್ಲಿ ಈ ಮನರಂಜನಾ ಮಾಧ್ಯಮವು ಲಭ್ಯವಾಗಿದ್ದರಿಂದ ಪ್ರೇಕ್ಷಕ ವೃಂದವು ಚಲನಚಿತ್ರ ಮಂದಿರಗಳಿಗೆ ಗುಂಪಾಗಿ ನುಗ್ಗಿತು.[೧೪] ಈ ಸಾಮಾನ್ಯ ವರ್ಗದ ಜನರ ಮನವನ್ನು ತಟ್ಟುವ ರೀತಿಯಲ್ಲಿ ಭಾರತೀಯ ವ್ಯಾಪಾರಿ ಚಲನಚಿತ್ರಗಳ ವಿಷಯವು ಗಣನೀಯ ಪ್ರಮಾಣದಲ್ಲಿ ರೂಪುಗೊಂಡಿತು.[೧೪] ಭಾರತದ ಸಾಮಾಜಿಕ ಜೀವನ ಹಾಗೂ ಸಂಸ್ಕೃತಿಯ ಮೂಲಾಂಶಗಳನ್ನು ಚಲನಚಿತ್ರದೊಳಗೆ ಅಳವಡಿಸಲು ಯುವ ಭಾರತೀಯ ನಿರ್ಮಾಪಕರು ಶುರುಮಾಡಿದರು.[೧೭] ಇತರರು ತಮ್ಮೊಂದಿಗೆ ವಿಶ್ವಾದ್ಯಂತದ ಪರಿಕಲ್ಪನೆಗಳನ್ನು ಹೊತ್ತುತಂದರು.[೧೭] ಇದು ಭಾರತದ ಚಲನಚಿತ್ರೋದ್ಯಮದ ಕುರಿತು ಜಾಗತಿಕ ಪ್ರೇಕ್ಷಕರು ಹಾಗೂ ಮಾರುಕಟ್ಟೆಗಳು ಅರಿವು ಮೂಡಿಸಿಕೊಂಡ ಕಾಲವೂ ಆಗಿತ್ತು.[೧೭]

ಮಾತುಗಳನ್ನು ಅಳವಡಿಸಲಾಗಿದ್ದ ಮೊಟ್ಟಮೊದಲ ಭಾರತೀಯ ಚಲನಚಿತ್ರವಾದ ಅಲಂ ಆರಾ ವನ್ನು 1931ರ ಮಾರ್ಚ್‌ 14ರಂದು ಆರ್ದೇಶಿರ್‌ ಇರಾನಿ ಬಿಡುಗಡೆ ಮಾಡಿದ.[೧೬] ಭಾರತದಲ್ಲಿನ 'ವಾಕ್ಚಿತ್ರಗಳ' ಪ್ರಾರಂಭವನ್ನು ಅನುಸರಿಸಿ ಕೆಲವೊಂದು ಚಲನಚಿತ್ರ ತಾರೆಯರ ಅಗತ್ಯ ಹೆಚ್ಚಿನ ರೀತಿಯಲ್ಲಿ ಕಂಡುಬಂತು ಹಾಗೂ ನಟನೆಯ ಮೂಲಕ ಆರಾಮದಾಯಕವಾದ ಆದಾಯಗಳನ್ನು ಅವರು ಗಳಿಸಿದರು.[೧೬] ಧ್ವನಿ ತಂತ್ರಜ್ಞಾನವು ಪ್ರಗತಿಯನ್ನು ಕಂಡಂತೆ 1930ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ಸಂಗೀತದ ಏಳಿಗೆಯು ಕಂಡುಬಂದಿತು. ಇಂದ್ರಸಭಾ ಮತ್ತು ದೇವಿ ದೇವಯಾನಿ ಯಂಥ ಸಂಗೀತಮಯ ಚಿತ್ರಗಳು ಭಾರತದ ಚಲನಚಿತ್ರಗಳಲ್ಲಿ ಹಾಡು-ಮತ್ತು-ನೃತ್ಯವು ಶುರುವಾಗುವುದಕ್ಕೆ ಅಂಕಿತ ಹಾಕಿದವು.[೧೬] 1935ರ ಹೊತ್ತಿಗೆ ಚಲನಚಿತ್ರ ತಯಾರಿಕೆಯು ಒಂದು ನೆಲೆಗೊಳಿಸಲ್ಪಟ್ಟ ಕುಶಲಕಲೆಯಾಗಿ ಮಾರ್ಪಟ್ಟ ಕಾರಣದಿಂದ, ಚೆನ್ನೈ, ಕೋಲ್ಕತಾ, ಹಾಗೂ ಮುಂಬಯಿಯಂಥ ಪ್ರಮುಖ ನಗರಗಳಾದ್ಯಂತ ಸ್ಟುಡಿಯೋಗಳು ತಲೆಯೆತ್ತಿದವು. ರಾಷ್ಟ್ರವ್ಯಾಪಿಯಾಗಿ ಪ್ರೇಕ್ಷಕರನ್ನು ಮೋಹಪರವಶಗೊಳಿಸುವಲ್ಲಿ ಸಮರ್ಥವಾದ ದೇವದಾಸ್‌ ಚಿತ್ರದ ಯಶಸ್ಸು ಇದಕ್ಕೆ ನಿದರ್ಶನವಾಗಿ ಹೊರಹೊಮ್ಮಿತು.[೧೮] 1934ರಲ್ಲಿ ಬಾಂಬೆ ಟಾಕೀಸ್‌ ಹುಟ್ಟಿಕೊಂಡಿತು ಮತ್ತು ಪುಣೆಯಲ್ಲಿನ ಪ್ರಭಾತ್‌ ಸ್ಟುಡಿಯೋಸ್‌, ಮರಾಠಿ ಭಾಷೆಯ ಪ್ರೇಕ್ಷಕರನ್ನು ಉದ್ದೇಶಿಸಿದ ಚಲನಚಿತ್ರಗಳನ್ನು ತಯಾರಿಸಲು ಶುರುಮಾಡಿತ್ತು.[೧೮] ಚಲನಚಿತ್ರ ತಯಾರಕ R. S. D. ಚೌಧುರಿಯು ರಾತ್‌ (1930) ಎಂಬ ಚಿತ್ರವನ್ನು ನಿರ್ಮಿಸಿದ. ಈ ಚಿತ್ರದಲ್ಲಿ ನಟರನ್ನು ಭಾರತದ ನಾಯಕರುಗಳೆಂಬಂತೆ ಚಿತ್ರಿಸಲಾಗಿದ್ದರಿಂದ, ಭಾರತೀಯ ಸ್ವಾತಂತ್ರ್ಯ ಚಳವಳಿಯ ದಿನಗಳ ಅವಧಿಯಲ್ಲಿನ ನಿಷೇಧಕ್ಕೊಳಗಾಗಿದ್ದ ಒಂದು ಅಭಿವ್ಯಕ್ತಿಯಾಗಿ ಇದನ್ನು ಪರಿಗಣಿಸಿ, ಅಂದು ಭಾರತದಲ್ಲಿದ್ದ ಬ್ರಿಟಿಷ್‌ ಆಳ್ವಿಕೆಯು ಈ ಚಿತ್ರವನ್ನು ನಿಷೇಧಿಸಿತು.[೧೬]

ಹಾಡು, ನೃತ್ಯ, ಪ್ರಣಯ ಇತ್ಯಾದಿಗಳೊಂದಿಗಿನ ವ್ಯಾಪಾರೀ ಚಲನಚಿತ್ರಗಳಿಗಾಗಿ ಬಳಸಲಾಗುತ್ತಿದ್ದ ಒಂದು ಪರಿಭಾಷೆಯಾದ ಭಾರತೀಯ ಮಸಾಲಾ ಚಲನಚಿತ್ರ ವು ಎರಡನೇ ಜಾಗತಿಕ ಸಮರದ ನಂತರ ಹುಟ್ಟಿಕೊಂಡಿತು.[೧೮] S.S. ವಾಸನ್‌ರ ಚಂದ್ರಲೇಖಾ ಚಲನಚಿತ್ರವು ಬಿಡುಗಡೆಯಾಗುವುದರೊಂದಿಗೆ ದಕ್ಷಿಣ ಭಾರತೀಯ ಚಿತ್ರರಂಗವು ಭಾರತದಾದ್ಯಂತ ಪ್ರಸಿದ್ಧಿಯನ್ನು ಗಳಿಸಿತು.[೧೮] 1940ರ ದಶಕದ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿನ ಚಲನಚಿತ್ರವು ಭಾರತದ ಹೆಚ್ಚೂಕಮ್ಮಿ ಅರ್ಧದಷ್ಟು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿತು ಮತ್ತು ಸಾಂಸ್ಕೃತಿಕ ಪುನರುಜ್ಜೀವನದ ಒಂದು ಸಾಧನವಾಗಿ ಚಲನಚಿತ್ರವನ್ನು ನೋಡುವ ಪರಿಪಾಠವು ಸೃಷ್ಟಿಯಾಯಿತು.[೧೮] ಭಾರತದ ಸ್ವಾತಂತ್ರ್ಯದ ನಂತರ ಕಂಡುಬಂದ ಭಾರತದ ವಿಭಜನೆಯು ರಾಷ್ಟ್ರದ ಸ್ವತ್ತುಗಳನ್ನೂ ಸಹ ವಿಭಜಿಸಿತು. ಇದರ ಪರಿಣಾಮವಾಗಿ ಹಲವಾರು ಸ್ಟುಡಿಯೋಗಳು ಹೊಸದಾಗಿ ರೂಪುಗೊಂಡ ಪಾಕಿಸ್ತಾನಕ್ಕೆ ಸೇರ್ಪಡೆಯಾದವು.[೧೮] ಈ ವಿದ್ಯಮಾನವು ನಡೆದ ನಂತರದ ದಶಕಗಳಲ್ಲಿ, ವಿಭಜನೆಯ ಘರ್ಷಣೆಯು ಚಲನಚಿತ್ರ ತಯಾರಿಕೆಗೆ ಸಂಬಂಧಿಸಿದಂತೆ ಒಂದು ಸಹಿಸಿಕೊಂಡಿರಲೇ ಬೇಕಾದ ವಿಷಯವಾಗಿ ಪರಿಣಮಿಸಿತ್ತು.[೧೮]

ಸ್ವಾತಂತ್ರ್ಯಾನಂತರದಲ್ಲಿ ಭಾರತದ ಚಲನಚಿತ್ರೋದ್ಯಮವು S.K. ಪಾಟೀಲ್‌ ಆಯೋಗದಿಂದ ವಿಚಾರಿಸಿಕೊಳ್ಳಲ್ಪಟ್ಟಿತು.[೧೯] ಆಯೋಗದ ಮುಖ್ಯಸ್ಥನಾದ S.K. ಪಾಟೀಲ್‌, ಭಾರತದಲ್ಲಿನ ಚಲನಚಿತ್ರರಂಗದ ವ್ಯಾಪಾರೀ ಮೌಲ್ಯವನ್ನು ಗುರುತುಹಾಕಿಕೊಳ್ಳುವುದರ ಜೊತೆಗೇ, ಚಲನಚಿತ್ರವನ್ನು 'ಕಲೆ, ಉದ್ಯಮ, ಹಾಗೂ ಪ್ರದರ್ಶಕ ಕಲೆಯ ಒಂದು ಸಂಯೋಜಿತ ಸ್ಥಿತಿಯಾಗಿ' ನೋಡಿದ.[೧೯] ಪಾಟೀಲ್‌ ಮತ್ತಷ್ಟು ಮುಂದುವರಿದು, ಹಣಕಾಸು ಖಾತೆಯ ಅಡಿಯಲ್ಲಿ ಚಲನಚಿತ್ರ ಹಣಕಾಸು ನಿಗಮವೊಂದನ್ನು ಸ್ಥಾಪಿಸುವುದರ ಕಡೆಗೆ ಶಿಫಾರಸು ಮಾಡಿದ.[೨೦] ಈ ಸಲಹೆಯನ್ನು ನಂತರ 1960ರಲ್ಲಿ ಕೈಗೆತ್ತಿಕೊಳ್ಳಲಾಯಿತು ಹಾಗೂ ಭಾರತದಾದ್ಯಂತವಿರುವ ಪ್ರತಿಭಾನ್ವಿತ ಚಲನಚಿತ್ರ ತಯಾರಕರಿಗೆ ಹಣಕಾಸಿನ ಬೆಂಬಲವನ್ನು ಒದಗಿಸುವ ದೃಷ್ಟಿಯಿಂದ ಈ ಸಂಸ್ಥೆಯು ಅಸ್ತಿತ್ವಕ್ಕೆ ಬಂತು.[೨೦] 1949ರ ವೇಳೆಗೆ ಚಲನಚಿತ್ರಗಳ ವಿಭಾಗವೊಂದನ್ನು ಭಾರತದ ಸರ್ಕಾರವು ಸ್ಥಾಪಿಸಿತ್ತು. ಅಂತಿಮವಾಗಿ ಇದು ವಿಶ್ವದಲ್ಲಿನ ಅತಿದೊಡ್ಡ ಸಾಕ್ಷ್ಯಚಿತ್ರ ನಿರ್ಮಾಪಕರಲ್ಲಿ ಒಂದೆನಿಸಿಕೊಂಡಿದ್ದೇ ಅಲ್ಲದೇ, ಪ್ರತಿವರ್ಷವೂ 200ಕ್ಕೂ ಹೆಚ್ಚಿನ ಕಿರು ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಾ ಬಂದಿತು. ಇವುಗಳ ಪೈಕಿ ಪ್ರತಿಯೊಂದು ಕಿರು ಸಾಕ್ಷ್ಯಚಿತ್ರವೂ 18 ಭಾಷೆಗಳಲ್ಲಿ 9000 ಪ್ರತಿಗಳೊಂದಿಗೆ ಬಿಡುಗಡೆಯಾಗಿ ದೇಶಾದ್ಯಂತವಿರುವ ಕಾಯಂ ಚಿತ್ರಮಂದಿರಗಳಿಗೆ ವಿತರಿಸಲ್ಪಟ್ಟವು.[೨೧]

ಒಂದು ಕಮ್ಯುನಿಸ್ಟ್‌ ಪ್ರವೃತ್ತಿಯೊಂದಿಗಿನ ಒಂದು ಕಲಾ ಚಟುವಟಿಕೆಯಾದ ಇಂಡಿಯನ್‌ ಪೀಪಲ್'ಸ್‌ ಥಿಯೇಟರ್‌ ಅಸೋಸಿಯೇಷನ್‌ (IPTA), 1940ರ ದಶಕ ಮತ್ತು 1950ರ ದಶಕದಾದ್ಯಂತ ಆಕಾರವನ್ನು ಪಡೆಯುಲು ಶುರುವಿಟ್ಟುಕೊಂಡಿತು.[೧೯] 1944ರಲ್ಲಿ ಬಂದ ಬಿಜೋನ್‌ ಭಟ್ಟಾಚಾರ್ಯನಬನ್ನಾ ದಂಥ (1943ರ ಬಂಗಾಳದ ಬರಗಾಲದ ದುರಂತವನ್ನು ಆಧರಿಸಿದ್ದು), IPTAಯ ವಾಸ್ತವಿಕ ದೃಷ್ಟಿಕೋನದ ಅನೇಕ ನಾಟಕಗಳು ಭಾರತೀಯ ಚಿತ್ರರಂಗದಲ್ಲಿ ಯಥಾರ್ಥತೆಯ ಘನೀಕರಣಕ್ಕೆ ಸಂಬಂಧಿಸಿದ ತಳಹದಿಯನ್ನು ಸಿದ್ಧಗೊಳಿಸಿದವು. 1946ರಲ್ಲಿ ಬಂದ ಖ್ವಾಜಾ ಅಹ್ಮದ್‌ ಅಬ್ಬಾಸ್‌‌‌ಧರ್ತಿ ಕೆ ಲಾಲ್‌ (ಭೂಮಿಯ ಮಕ್ಕಳು) ಚಿತ್ರವು ಇದನ್ನು ನಿದರ್ಶನದ ಮೂಲಕ ನಿರೂಪಿಸಿತು.[೧೯] ಯಥಾರ್ಥತೆಯ ಮೇಲೆ ಒತ್ತು ನೀಡುವುದನ್ನು IPTAಯ ಆಂದೋಲನ ಅಥವಾ ಚಟುವಟಿಕೆಯು ಮುಂದುವರಿಸಿತು ಹಾಗೂ ಭಾರತದ ಅತ್ಯಂತ ಅಭಿಜ್ಞೇಯ ಸಿನಿಮೀಯ ತಯಾರಿಕೆಗಳಲ್ಲಿ ಸೇರಿದ ಮದರ್‌ ಇಂಡಿಯಾ ಹಾಗೂ ಪ್ಯಾಸಾ ಎಂಬ ಚಲನಚಿತ್ರಗಳನ್ನು ನಿರ್ಮಿಸಿತು.[೨೨]

ಭಾರತೀಯ ಚಿತ್ರರಂಗದ ಸುವರ್ಣ ಯುಗ

ಬದಲಾಯಿಸಿ
ಚಿತ್ರ:Nagarikscreenshot.gif
ಬಂಗಾಳಿ ಚಿತ್ರರಂಗದ ಆರಂಭಿಕ ಕಲಾತ್ಮಕ ಚಲನಚಿತ್ರ ಎಂದು ಪರಿಗಣಿಸಲಾದ ಋತ್ವಿಕ್‌ ಘಾಟಕ್‌ರ ನಾಗರಿಕ್‌ (1952) ಚಲನಚಿತ್ರದ ಒಂದು ದೃಶ್ಯ.
ಚಿತ್ರ:Apu Pather1.jpg
ಸತ್ಯಜಿತ್‌ ರೇಯವರ ದಿ ಅಪು ಟ್ರೈಲಜಿ (1955–1959) ಚಲನಚಿತ್ರದಲ್ಲಿನ ಒಂದು ನಿರಂತರವಾಗಿರುವ ಪ್ರಮುಖ ಲಕ್ಷಣವಾದ ಅಗಲವಾಗಿ ತೆರೆದ ಕಣ್ಣುಗಳು.
 
ಪ್ಯಾಸಾ (1957) ಚಿತ್ರದಲ್ಲಿ ಗುರುದತ್‌. ಈ ಚಿತ್ರಕ್ಕೆ ಆತ ನಿರ್ದೇಶಕ, ನಿರ್ಮಾಪಕ ಹಾಗೂ ಪ್ರಮುಖ ನಟನಾಗಿದ್ದ.

ಭಾರತದ ಸ್ವಾತಂತ್ರ್ಯದ ನಂತರದ, 1940ರ ದಶಕದ ಅಂತ್ಯದಿಂದ 1960ರ ದಶಕದವರೆಗಿನ ಅವಧಿಯನ್ನು ಚಲನಚಿತ್ರದ ಇತಿಹಾಸಕಾರರು ಭಾರತೀಯ ಚಿತ್ರರಂಗದ 'ಸುವರ್ಣ ಯುಗ' ಎಂದು ಪರಿಗಣಿಸಿದ್ದಾರೆ.[೨೩][೨೪][೨೫] ವಿಮರ್ಶಾತ್ಮಕವಾಗಿ ಅತ್ಯಂತ ಮೆಚ್ಚುಗೆಯನ್ನು ಪಡೆದ ಭಾರತದ ಕೆಲವೊಂದು ಸಾರ್ವಕಾಲಿಕ ಚಲನಚಿತ್ರಗಳು ಈ ಅವಧಿಯಲ್ಲಿಯೇ ನಿರ್ಮಿಸಲ್ಪಟ್ಟವು. ವ್ಯಾಪಾರೀ ಹಿಂದಿ ಚಿತ್ರರಂಗದಲ್ಲಿ ಈ ಸಮಯದಲ್ಲಿ ಬಂದ ಪ್ರಸಿದ್ಧ ಚಲನಚಿತ್ರಗಳ ಉದಾಹರಣೆಗಳಲ್ಲಿ ಗುರುದತ್‌ ಚಲನಚಿತ್ರಗಳಾದ ಪ್ಯಾಸಾ (1957) ಹಾಗೂ ಕಾಗಜ್‌ ಕೆ ಫೂಲ್‌ (1959) ಮತ್ತು ರಾಜ್‌ ಕಪೂರ್‌ ಚಲನಚಿತ್ರಗಳಾದ ಆವಾರಾ (1951) ಹಾಗೂ ಶ್ರೀ 420 (1955) ಸೇರಿವೆ. ಮುಖ್ಯವಾಗಿ ಭಾರತದಲ್ಲಿನ ಕಾರ್ಮಿಕ-ವರ್ಗದ ನಗರ ಜೀವನದೊಂದಿಗೆ ಸಂಬಂಧಿಸಿದ ಸಾಮಾಜಿಕ ವಿಷಯಗಳನ್ನು ಈ ಚಲನಚಿತ್ರಗಳು ಅಭಿವ್ಯಕ್ತಿಸಿದವು; ಆವಾರಾ ಚಲನಚಿತ್ರವು ನಗರವನ್ನು ಒಂದು ಘೋರಸ್ವಪ್ನದ ಹಾಗೂ ಒಂದು ಕನಸಿನ ರೂಪಗಳೆರಡರಲ್ಲೂ ಸಾದರಪಡಿಸಿದರೆ, ಪ್ಯಾಸಾ ಚಲನಚಿತ್ರವು ನಗರ ಜೀವನದ ಅವಾಸ್ತವಿಕತೆ ಅಥವಾ ಮಿಥ್ಯೆಯನ್ನು ವಿಮರ್ಶಾತ್ಮಕವಾಗಿ ಚರ್ಚಿಸಿತು.[೨೬] ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿರುವ ಅಕಾಡೆಮಿ ಪ್ರಶಸ್ತಿಗೆ[೨೭] ನಾಮನಿರ್ದೇಶನಗೊಂಡಿದ್ದ ಮೆಹಬೂಬ್‌ ಖಾನ್‌‌‌ಮದರ್‌ ಇಂಡಿಯಾ (1957) ಮತ್ತು K. ಆಸಿಫ್‌ಮುಘಲ್‌-ಎ-ಅಜಮ್‌ (1960) ಚಿತ್ರಗಳೂ ಸೇರಿದಂತೆ, ಹಿಂದಿ ಚಿತ್ರರಂಗದ ಕೆಲವೊಂದು ಅತ್ಯಂತ ಪ್ರಸಿದ್ಧವಾದ ಮಹಾಕಾವ್ಯದಂಥ ಚಲನಚಿತ್ರಗಳು ಈ ಅವಧಿಯಲ್ಲೇ ತಯಾರಿಸಲ್ಪಟ್ಟವು.[೨೮] V. ಶಾಂತಾರಾಂರವರ ದೋ ಆಂಖೇ ಬಾರಾ ಹಾತ್‌ (1957) ಚಿತ್ರವು ದಿ ಡರ್ಟಿ ಡಜನ್‌ (1967) ಎಂಬ ಹಾಲಿವುಡ್‌ ಚಲನಚಿತ್ರಕ್ಕೆ ಪ್ರೇರಣೆಯನ್ನು ನೀಡಿತು ಎಂದು ನಂಬಲಾಗಿದೆ.[೨೯] ಋತ್ವಿಕ್‌ ಘಾಟಕ್‌ರವರ ಕಥೆಯನ್ನು ಹೊಂದಿದ್ದು ಬಿಮಲ್‌ ರಾಯ್‌‌ರಿಂದ ನಿರ್ದೇಶಿಸಲ್ಪಟ್ಟ ಮಧುಮತಿ (1958) ಚಿತ್ರವು ಪಾಶ್ಚಿಮಾತ್ಯ ಜನಪ್ರಿಯ ಸಂಸ್ಕೃತಿಯಲ್ಲಿ ಪುನರ್ಜನ್ಮದ ವಿಷಯವನ್ನು ಜನಪ್ರಿಯಗೊಳಿಸಿತು.[೩೦] ಕಮಲ್‌ ಅಮ್ರೋಹಿ ಮತ್ತು ವಿಜಯ್‌ ಭಟ್‌ ಮೊದಲಾದವರು ಆ ಸಮಯದಲ್ಲಿದ್ದ ಇತರ ಮುಖ್ಯವಾಹಿನಿಯ ಹಿಂದಿ ಚಲನಚಿತ್ರ ತಯಾರಕರಲ್ಲಿ ಸೇರಿದ್ದರು.

ಭಾರತದ ವ್ಯಾಪಾರೀ ಚಲನಚಿತ್ರಗಳು ಅಭಿವೃದ್ಧಿ ಹೊಂದುತ್ತಿರುವಾಗಲೇ, ಮುಖ್ಯವಾಗಿ ಬಂಗಾಳಿ ಚಿತ್ರರಂಗದ ನೇತೃತ್ವವನ್ನು ಹೊಂದಿದ್ದ ಸಮಾನಾಂತರ ಚಲನಚಿತ್ರದ ಒಂದು ಹೊಸ ಆಂದೋಲನದ ಉದಯವನ್ನೂ ಈ ಅವಧಿಯು ಕಂಡಿತು.[೨೬] ಈ ಆಂದೋಲನದಲ್ಲಿನ ಚಲನಚಿತ್ರಗಳ ಆರಂಭಿಕ ಉದಾಹರಣೆಗಳಲ್ಲಿ, ಚೇತನ್‌ ಆನಂದ್‌‌‌ನೀಚಾ ನಗರ್‌ (1946),[೩೧] ಋತ್ವಿಕ್‌ ಘಾಟಕ್‌ರ ನಾಗರಿಕ್‌ (1952),[೩೨][೩೩] ಮತ್ತು ಬಿಮಲ್‌ ರಾಯ್‌‌ರವರ ಟೂ ಏಕರ್ಸ್‌ ಆಫ್‌ ಲ್ಯಾಂಡ್‌ (1953) ಚಿತ್ರಗಳು ಸೇರಿದ್ದು, ಇವು ಭಾರತೀಯ ನವಯಥಾರ್ಥತೆ[] ಮತ್ತು "ಭಾರತೀಯ ಹೊಸ ಅಲೆ"ಗಳಿಗೆ ಬುನಾದಿಗಳನ್ನು ಹಾಕಿದವು.[] ಸತ್ಯಜಿತ್‌ ರೇಯಿಂದ ಚಿತ್ರಿಸಲ್ಪಟ್ಟ ದಿ ಅಪು ಟ್ರೈಲಜಿ ಯ (1955–1959) ಮೊದಲ ಭಾಗವಾದ ಪಥೇರ್‌ ಪಾಂಚಾಲಿ (1955) ಚಿತ್ರವು ಭಾರತೀಯ ಚಿತ್ರರಂಗದಲ್ಲಿನ ಅವರ ಪ್ರವೇಶವನ್ನು ಗುರುತುಮಾಡಿದವು.[೩೪] ದಿ ಅಪು ಟ್ರೈಲಜಿ ಚಿತ್ರವು ಎಲ್ಲಾ ಪ್ರಮುಖ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಮುಖ ಬಹುಮಾನಗಳನ್ನು ಗೆದ್ದಿತು ಹಾಗೂ ಭಾರತೀಯ ಚಿತ್ರರಂಗದಲ್ಲಿ 'ಸಮಾನಾಂತರ ಚಲನಚಿತ್ರ'ದ ಆಂದೋಲನವು ಭದ್ರವಾಗಿ ನೆಲೆಯೂರುವುದಕ್ಕೆ ಕಾರಣವಾಯಿತು. "ದಿ ಅಪು ಟ್ರೈಲಜಿ" ಚಿತ್ರದ ಒಂದು ಅತ್ಯಮೋಘ ಪ್ರಥಮ ಪರಿಚಯಕ್ಕೆ ಕಾರಣವಾದ" "ಐವತ್ತರ ದಶಕದ ಮಧ್ಯಭಾಗದಿಂದ ಕಲಾತ್ಮಕ ಚಿತ್ರಗಳ ನಿರ್ಮಾಣ ನೆಲೆಗಳಿಗೆ ಭರಪೂರವಾಗಿ ಬಂದ ಪ್ರಾಪ್ತ-ವಯಸ್ಸಿಗೆ-ಬರುತ್ತಿರುವ ಹೊಸತನದ ನಾಟಕೀಯ ಚಿತ್ರಗಳಲ್ಲಿಯೂ" ಜಾಗತಿಕ ಚಿತ್ರರಂಗದ ಮೇಲಿನ ಇದರ ಪ್ರಭಾವವನ್ನು ಕಂಡುಕೊಳ್ಳಬಹುದು.[೩೫] ವಿಮರ್ಶಾತ್ಮಕವಾಗಿ-ಮೆಚ್ಚುಗೆ ಪಡೆದ ಇನ್ನೂ ಅನೇಕ 'ಕಲಾತ್ಮಕ ಚಲನಚಿತ್ರಗಳನ್ನು' ಸತ್ಯಜಿತ್‌ ರೇ ಹಾಗೂ ಋತ್ವಿಕ್‌ ಘಾಟಕ್‌ ನಿರ್ದೇಶಿಸುತ್ತಾ ಹೋದರು. ಅಷ್ಟೇ ಅಲ್ಲ, ಮೃಣಾಲ್‌ ಸೇನ್‌, ಅಡೂರ್‌ ಗೋಪಾಲಕೃಷ್ಣನ್‌, ಮಣಿಕೌಲ್‌ ಮತ್ತು ಬುದ್ಧದೇಬ್‌ ದಾಸ್‌ಗುಪ್ತಾರಂಥ ಭಾರತದ ಇತರ, ಮೆಚ್ಚುಗೆ ಪಡೆದ ಸ್ವತಂತ್ರ ಚಲನಚಿತ್ರ ತಯಾರಕರು ಇವರಿಬ್ಬರನ್ನು ಅನುಸರಿಸಿದರು.[೨೬] 1960ರ ದಶಕದ ಅವಧಿಯಲ್ಲಿ, ಇಂದಿರಾ ಗಾಂಧಿಯವರು ಭಾರತದ ಮಾಹಿತಿ ಮತ್ತು ಪ್ರಸಾರಖಾತೆ ಸಚಿವರಾಗಿದ್ದ ಆಡಳಿತಾವಧಿಯಲ್ಲಿ ಕಂಡುಬಂದ ಮಧ್ಯಪ್ರವೇಶವು , ಅಧಿಕೃತವಾದ ಚಲನಚಿತ್ರ ಹಣಕಾಸು ನಿಗಮದಿಂದ ಬೆಂಬಲಿಸಲ್ಪಡುತ್ತಿದ್ದ ವಾಡಿಕೆಯದಲ್ಲದ ಸಿನಿಮೀಯ ಅಭಿವ್ಯಕ್ತಿಯ ತಯಾರಿಕೆಗೆ ಉತ್ತೇಜನ ನೀಡಲು ಕಾರಣವಾಯಿತು.[೨೦]

ಸತ್ಯಜಿತ್‌ ರೇಯವರ ದಿ ಅಪು ಟ್ರೈಲಜಿ ಚಿತ್ರದೊಂದಿಗೆ ತನ್ನ ಪ್ರಥಮ ಪ್ರವೇಶವನ್ನು ಮಾಡಿದ ಸುಬ್ರತಾ ಮಿತ್ರ ಎಂಬ ಚಲನಚಿತ್ರ ಛಾಯಾಗ್ರಾಹಕ ಕೂಡಾ ವಿಶ್ವಾದ್ಯಂತದ ಛಾಯಾಗ್ರಹಣ ಕಲೆಯ ಮೇಲೆ ಒಂದು ಪ್ರಮುಖ ಪ್ರಭಾವವನ್ನು ಬೀರಿದ್ದ. ಚಲನಚಿತ್ರದ ಸಜ್ಜಿಕೆಗಳ (ಸೆಟ್ಟುಗಳ) ಮೇಲೆ ದಿನದ ಬೆಳಕಿನ ಪರಿಣಾಮವನ್ನು ಮರುಸೃಷ್ಟಿಸಲೆಂದು ಬೌನ್ಸ್‌ ಲೈಟಿಂಗ್‌ ಎಂಬ ವಿಶಿಷ್ಟ ಶೈಲಿಯನ್ನು ಬಳಸಿದ್ದು ಅವನ ಅತ್ಯಂತ ಪ್ರಮುಖ ಕಾರ್ಯಕೌಶಲಗಳಲ್ಲಿ ಒಂದಾಗಿತ್ತು ದಿ ಅಪು ಟ್ರೈಲಜಿ ಯ ಎರಡನೇ ಭಾಗವಾದ ಅಪರಾಜಿತೋ (1956) ಚಿತ್ರದ ಚಿತ್ರೀಕರಣವನ್ನು ನಡೆಸುವಾಗ ಈ ಕೌಶಲವನ್ನು ಆತ ಮೊದಲು ಶುರುಮಾಡಿದ್ದ.[೩೬] ಸತ್ಯಜಿತ್‌ ರೇ ಪ್ರವರ್ತಿಸಿದ ಕೆಲವೊಂದು ಪ್ರಯೋಗಾತ್ಮಕ ಕಾರ್ಯಕೌಶಲಗಳಲ್ಲಿ ಫೋಟೋ-ನೆಗಟಿವ್‌ ಫ್ಲಾಶ್‌ಬ್ಯಾಕ್‌ಗಳು ಮತ್ತು ಪ್ರತಿದ್ವಂದಿ (1972) ಚಿತ್ರದ ಚಿತ್ರೀಕರಣದಲ್ಲಿ ಬಳಸಿದ X-ರೇ ವಿಷಯಾಂತರಗಳು ಸೇರಿವೆ.[೩೭] ಚಿತ್ರೀಕರಣ ಪ್ರಾರಂಭವಾಗಬೇಕಿದ್ದು ಅಂತಿಮವಾಗಿ ರದ್ದುಮಾಡಲ್ಪಟ್ಟ ದಿ ಏಲಿಯೆನ್‌ ಎಂಬ ಹೆಸರಿಡಲು ಉದ್ದೇಶಿಸಲಾಗಿದ್ದ ಚಲನಚಿತ್ರವೊಂದಕ್ಕಾಗಿ 1967ರಲ್ಲಿ ರೇ ಸಿದ್ಧಪಡಿಸಿಟ್ಟುಕೊಂಡಿದ್ದ ಚಿತ್ರಕಥೆಯು ಕೂಡಾ ಸ್ಟೀವನ್‌ ಸ್ಪಿಲ್‌ಬರ್ಗ್‌E.T. ಚಲನಚಿತ್ರಕ್ಕೆ ಪ್ರೇರಣೆ ನೀಡಿತು ಎಂಬ ನಂಬಿಕೆಯು ವ್ಯಾಪಕವಾಗಿ ಚಾಲ್ತಿಯಲ್ಲಿದೆ (1982).[೩೮][೩೯][೪೦] ಋತ್ವಿಕ್‌ ಘಾಟಕ್‌ನ ಕೆಲವೊಂದು ಚಲನಚಿತ್ರಗಳು ಕೂಡಾ ನಂತರದಲ್ಲಿ ಬಂದ ಪ್ರಖ್ಯಾತ ಅಂತರರಾಷ್ಟ್ರೀಯ ಚಲನಚಿತ್ರಗಳೊಂದಿಗೆ ಬಲವಾದ ಹೋಲಿಕೆಯನ್ನು ಹೊಂದಿದ್ದವು. ಘಾಟಕ್‌ನ ಬರಿ ತೆಕೆ ಪಲಿಯೇ (1958) ಚಿತ್ರವು ಫ್ರಾಂಕೋಯಿಸ್‌ ಟ್ರಫೌಟ್‌‌ದಿ 400 ಬ್ಲೋಸ್‌ (1959) ಚಿತ್ರವನ್ನು ಹೋಲುವಂತಿದ್ದರೆ, ಅಜಾಂತ್ರಿಕ್‌ (1958) ಚಿತ್ರವು ಟ್ಯಾಕ್ಸಿ ಡ್ರೈವರ್‌ (1976) ಮತ್ತು ಹೆರ್ಬೀ ಚಲನಚಿತ್ರಗಳನ್ನು (1967–2005) ಹೋಲುವ ಮೂಲಾಂಶಗಳನ್ನು ಹೊಂದಿತ್ತು.

ಈ ಅವಧಿಯಲ್ಲಿ ಇತರ ಪ್ರಾದೇಶಿಕ ಉದ್ಯಮಗಳೂ ಸಹ ತಮ್ಮ 'ಸುವರ್ಣ ಯುಗ'ವನ್ನು ಹೊಂದಿದ್ದವು. ತಯಾರಾದ ಚಿತ್ರಗಳ ಪೈಕಿ ವ್ಯವಹಾರಿಕವಾಗಿ ಯಶಸ್ಸು ಕಾಣುವ ಚಿತ್ರಗಳ ಸಂಖ್ಯೆಯಲ್ಲಿ ಬೆಳವಣಿಗೆಯಾಗುವುದನ್ನು ವ್ಯಾಪಾರೀ ತಮಿಳು ಚಿತ್ರರಂಗವು ಕಂಡುಕೊಂಡಿತು. ಆ ಕಾಲದ ತಮಿಳು ಚಿತ್ರರಂಗದ ಅತ್ಯಂತ ಪ್ರಸಿದ್ಧ ವ್ಯಕ್ತಿಗಳಲ್ಲಿ M. G. ರಾಮಚಂದ್ರನ್‌, ಶಿವಾಜಿ ಗಣೇಶನ್‌, M. N. ನಂಬಿಯಾರ್‌, ಅಶೋಕನ್‌ ಮತ್ತು ನಾಗೇಶ್‌ ಮೊದಲಾದವರು ಸೇರಿದ್ದರು.[೪೧] V. ಶಾಂತಾರಾಂರಂಥ ಮರಾಠಿ ಭಾಷೆಯ ಕೆಲವೊಂದು ನಿರ್ದೇಶಕರು ನಂತರದಲ್ಲಿ ಮುಖ್ಯವಾಹಿನಿಯ ಹಿಂದಿ ಚಲನಚಿತ್ರಗಳ 'ಸುವರ್ಣ ಯುಗ'ದಲ್ಲಿ ನಿರ್ದಿಷ್ಟವಾಗಿ ಸಾಧನಭೂತವಾದ ಪಾತ್ರವನ್ನು ವಹಿಸುವುದರೊಂದಿಗೆ, ಈ ಕಾಲದಲ್ಲಿನ 'ಸುವರ್ಣ ಯುಗ'ವೊಂದರಲ್ಲಿ ಮರಾಠಿ ಚಿತ್ರರಂಗವೂ ಸಹ ತನ್ನ ಆಗಮನವನ್ನು ಸೂಚಿಸಿತು.[೪೨]

ನೀಚಾ ನಗರ್‌ ಎಂಬ ಚೇತನ್‌ ಆನಂದ್‌ರ ಸಾಮಾಜಿಕ ವಾಸ್ತವಿಕತಾವಾದಿ ಚಲನಚಿತ್ರವು ಮೊದಲ ಕ್ಯಾನೆಸ್‌ ಚಲನಚಿತ್ರೋತ್ಸವದಲ್ಲಿ[೩೧] ಮಹಾನ್‌ ಬಹುಮಾನವನ್ನು ಗೆದ್ದಂದಿನಿಂದ ಈಚೆಗೆ, 1950ರ ದಶಕ ಮತ್ತು 1960ರ ದಶಕದ ಆರಂಭದಲ್ಲಿನ ಹೆಚ್ಚೂಕಮ್ಮಿ ಪ್ರತಿವರ್ಷವೂ ಕ್ಯಾನೆಸ್‌ ಚಲನಚಿತ್ರೋತ್ಸವದಲ್ಲಿನ ಪಾಮೆ ಡಿ'ಓರ್‌ ಪ್ರಶಸ್ತಿಗಾಗಿ ಭಾರತೀಯ ಚಲನಚಿತ್ರಗಳು ಮೇಲಿಂದಮೇಲೆ ಸ್ಪರ್ಧೆಯಲ್ಲಿದ್ದವು ಹಾಗೂ ಅವುಗಳ ಪೈಕಿ ಅನೇಕ ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರಮುಖ ಬಹುಮಾನಗಳನ್ನು ತಮ್ಮದಾಗಿಸಿಕೊಂಡವು. ಸತ್ಯಜಿತ್‌ ರೇ ಕೂಡಾ ತಮ್ಮ ದಿ ಅಪು ಟ್ರೈಲಜಿ ಯ ಎರಡನೇ ಭಾಗವಾದ ಅಪರಾಜಿತೊ (1956) ಚಿತ್ರಕ್ಕಾಗಿ ವೆನಿಸ್‌ ಚಲನಚಿತ್ರೋತ್ಸವದಲ್ಲಿ ಗೋಲ್ಡನ್‌ ಲಯನ್‌ ಪ್ರಶಸ್ತಿಯನ್ನೂ, ಮತ್ತು ಬರ್ಲಿನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್‌ ಬೇರ್‌ ಹಾಗೂ ಎರಡು ಸಂಖ್ಯೆಯಲ್ಲಿ ಅತ್ಯುತ್ತಮ ನಿರ್ದೇಶಕನಿಗಾಗಿರುವ ಗೋಲ್ಡನ್‌ ಬೇರ್ಸ್‌‌ ಪ್ರಶಸ್ತಿಗಳನ್ನು ಗೆದ್ದರು.[೪೩] ರೇಯವರ ಸಮಕಾಲೀನರಾದ ಋತ್ವಿಕ್‌ ಘಾಟಕ್‌ ಹಾಗೂ ಗುರುದತ್‌ರನ್ನು ಅವರದೇ ಜೀವಿತಾವಧಿಗಳಲ್ಲಿ ಉಪೇಕ್ಷಿಸಲಾಯಿತಾದರೂ, ಬಹಳ ಕಾಲದ ನಂತರ 1980ರ ದಶಕ ಹಾಗೂ 1990ರ ದಶಕಗಳಲ್ಲಿ ತಡವಾಗಿ ಅಂತರರಾಷ್ಟ್ರೀಯ ಮಾನ್ಯತೆಯನ್ನು ಗಳಿಸಿದರು.[೪೩][೪೪] ರೇಯವರನ್ನು 20ನೇ ಶತಮಾನದ ಚಿತ್ರರಂಗದ ಮಹಾನ್‌ ಮೂಲಪುರುಷ ಅಥವಾ ನಿರ್ಮಾತೃಗಳ ಪೈಕಿ ಒಬ್ಬರೆಂದು ಪರಿಗಣಿಸಲಾಗಿದ್ದರೆ, ದತ್‌[೪೫] ಮತ್ತು ಘಾಟಕ್‌ರನ್ನು[೪೬] ಕೂಡಾ ಸಾರ್ವಕಾಲಿಕವಾದ ಮಹಾನ್‌ ಚಲನಚಿತ್ರ ತಯಾರಕರ ಗುಂಪಿನಲ್ಲಿ ಪರಿಗಣಿಸಲಾಗಿದೆ. 1992ರಲ್ಲಿ, ಸೈಟ್‌ & ಸೌಂಡ್‌‌‌ ನ ವಿಮರ್ಶಕರ ಮತಾಭಿಪ್ರಾಯವು ತನ್ನ ಸಾರ್ವಕಾಲಿಕವಾದ[೪೭] "ಅತ್ಯುನ್ನತ 10 ನಿರ್ದೇಶಕರ" ಪಟ್ಟಿಯಲ್ಲಿ ಸತ್ಯಜಿತ್‌ ರೇಯವರಿಗೆ #7ನೇ ಶ್ರೇಯಾಂಕವನ್ನು ನೀಡಿದ್ದರೆ, ಮಹಾನ್‌ ನಿರ್ದೇಶಕರ ಕುರಿತಾದ 2002ರ ಸೈಟ್‌ & ಸೌಂಡ್‌ ಮತಾಭಿಪ್ರಾಯದಲ್ಲಿ ದತ್‌ಗೆ #73ರ ಶ್ರೇಯಾಂಕವನ್ನು ನೀಡಲಾಯಿತು.[೪೫]

ಹಲವಾರು ವಿಮರ್ಶಕರಿಂದ ಮತ್ತು ನಿರ್ದೇಶಕರಿಂದ ಪಡೆಯಲಾದ ಅಭಿಪ್ರಾಯ ಸಂಗ್ರಹಣೆಯಲ್ಲಿನ ಸಾರ್ವಕಾಲಿಕ ಮಹಾನ್‌ ಚಲನಚಿತ್ರಗಳ ಪೈಕಿ ಈ ಯೂಗಕ್ಕೆ ಸೇರಿದ ಹಲವಾರು ಭಾರತೀಯ ಚಲನಚಿತ್ರಗಳು ಅನೇಕ ಬಾರಿ ಸೇರಿಸಲ್ಪಟ್ಟಿವೆ. ಸತ್ಯಜಿತ್‌ ರೇಯವರ ಹಲವಾರು ಚಲನಚಿತ್ರಗಳು ಸೈಟ್‌ & ಸೌಂಡ್‌ ವಿಮರ್ಶಕರ ಜನಮತ ಸಂಗ್ರಹದಲ್ಲಿ ಕಾಣಿಸಿಕೊಂಡಿದ್ದು, ದಿ ಅಪು ಟ್ರೈಲಜಿ (ಒಂದು ವೇಳೆ ಮತಗಳನ್ನು ಸಂಯೋಜಿಸುವುದಾದರೆ 1992ರಲ್ಲಿ #4ನೇ ಶ್ರೇಯಾಂಕವನ್ನು ಪಡೆಯಿತು)[೪೮], ದಿ ಮ್ಯೂಸಿಕ್‌ ರೂಂ (1992ರಲ್ಲಿ #27ನೇ ಶ್ರೇಯಾಂಕವನ್ನು ಪಡೆಯಿತು), ಚಾರುಲತಾ (1992ರಲ್ಲಿ #41ನೇ ಶ್ರೇಯಾಂಕವನ್ನು ಪಡೆಯಿತು)[೪೯] ಹಾಗೂ ಡೇಸ್‌ ಅಂಡ್‌ ನೈಟ್ಸ್‌ ಇನ್‌ ದಿ ಫಾರೆಸ್ಟ್‌ (1982ರಲ್ಲಿ #81ನೇ ಶ್ರೇಯಾಂಕವನ್ನು ಪಡೆಯಿತು)ಚಿತ್ರಗಳು ಅದರಲ್ಲಿ ಸೇರಿದ್ದವು.[೫೦] 2002ರ ಸೈಟ್‌ & ಸೌಂಡ್‌ ವಿಮರ್ಶಕರ ಮತ್ತು ನಿರ್ದೇಶಕರ ಅಭಿಪ್ರಾಯ ಸಂಗ್ರಹವು ಕೂಡಾ, ಗುರುದತ್‌ ಚಲನಚಿತ್ರಗಳಾದ ಪ್ಯಾಸಾ ಮತ್ತು ಕಾಗಜ್‌ ಕೆ ಫೂಲ್‌ (ಎರಡೂ ಚಿತ್ರಗಳು #160ನೇ ಶ್ರೇಯಾಂಕದಲ್ಲಿ ಸಮಸ್ಥಾನದಲ್ಲಿದ್ದವು), ಋತ್ವಿಕ್‌ ಘಾಟಕ್‌ ಚಲನಚಿತ್ರಗಳಾದ ಮೇಘೆ ಧಕಾ ತಾರಾ (#231ನೇ ಶ್ರೇಯಾಂಕವನ್ನು ಪಡೆಯಿತು) ಮತ್ತು ಕೋಮಲ್‌ ಗಾಂಧಾರ್‌ (#346ನೇ ಶ್ರೇಯಾಂಕವನ್ನು ಪಡೆಯಿತು) ಚಿತ್ರಗಳನ್ನು ಒಳಗೊಂಡಿತ್ತು, ಮತ್ತು ರಾಜ್‌ ಕಪೂರ್‌ರ ಆವಾರಾ , ವಿಜಯ್‌ ಭಟ್‌‌ಬೈಜು ಬಾವ್ರಾ , ಮೆಹಬೂಬ್‌ ಖಾನ್‌‌ರ ಮದರ್‌ ಇಂಡಿಯಾ ಮತ್ತು K. ಆಸಿಫ್‌ರ ಮುಘಲ್‌-ಎ-ಅಜಮ್‌ ಈ ಎಲ್ಲಾ ಚಿತ್ರಗಳೂ #346ನೇ ಶ್ರೇಯಾಂಕದಲ್ಲಿ ಸಮಸ್ಥಾನದಲ್ಲಿದ್ದವು.[೫೧] 1998ರಲ್ಲಿ, ಏಷ್ಯಾದ ಚಲನಚಿತ್ರ ನಿಯತಕಾಲಿಕವಾದ ಸಿನಿಮಾಯಾ ದಿಂದ ನಡೆಸಲ್ಪಟ್ಟ ವಿಮರ್ಶಕರ ಜನಾಭಿಪ್ರಾಯ ಸಂಗ್ರಹದಲ್ಲಿ, ದಿ ಅಪು ಟ್ರೈಲಜಿ (ಒಂದು ವೇಳೆ ಮತಗಳನ್ನು ಸಂಯೋಜಿಸುವುದಾದರೆ #1ನೇ ಶ್ರೇಯಾಂಕವನ್ನು ಪಡೆದವು), ರೇಯವರ ಚಾರುಲತಾ ಮತ್ತು ದಿ ಮ್ಯೂಸಿಕ್‌ ರೂಂ (ಎರಡೂ ಸಹ #11ನೇ ಶ್ರೇಯಾಂಕದಲ್ಲಿ ಸಮಸ್ಥಾನದಲ್ಲಿದ್ದವು), ಮತ್ತು ಘಾಟಕ್‌ರ ಸುಬರ್ಣರೇಖಾ (ಇದು ಕೂಡಾ #11ನೇ ಶ್ರೇಯಾಂಕದಲ್ಲಿ ಸಮಸ್ಥಾನದಲ್ಲಿತ್ತು) ಚಿತ್ರಗಳು ಸೇರಿದ್ದವು.[೪೬] 1999ರಲ್ಲಿ, ದಿ ವಿಲೇಜ್‌ ವಾಯ್ಸ್‌‌‌‌ ನ ಅತ್ಯುನ್ನತ 250 "ಶತಮಾನದ ಅತ್ಯುತ್ತಮ ಚಲನಚಿತ್ರ"ಗಳಿಗೆ ಸಂಬಂಧಿಸಿದ ವಿಮರ್ಶಕರ ಜನಾಭಿಪ್ರಾಯ ಸಂಗ್ರಹವೂ ಸಹ ದಿ ಅಪು ಟ್ರೈಲಜಿ ಯನ್ನು (ಒಂದು ವೇಳೆ ಮತಗಳನ್ನು ಸಂಯೋಜಿಸುವುದಾದರೆ ಇದು #5ನೇ ಶ್ರೇಯಾಂಕದಲ್ಲಿತ್ತು) ಒಳಗೊಂಡಿತ್ತು.[೫೨] 2005ರಲ್ಲಿ, ದಿ ಅಪು ಟ್ರೈಲಜಿ ಮತ್ತು ಪ್ಯಾಸಾ ಚಿತ್ರಗಳು ಟೈಮ್‌ ನಿಯತಕಾಲಿಕದ "ಸಾರ್ವಕಾಲಿಕ" 100 ಅತ್ಯುತ್ತಮ ಚಲನಚಿತ್ರಗಳ ಪಟ್ಟಿಯಲ್ಲಿಯೂ ಕಾಣಿಸಿಕೊಂಡವು.[೫೩]

ಆಧುನಿಕ ಭಾರತೀಯ ಚಿತ್ರರಂಗ

ಬದಲಾಯಿಸಿ

ಶ್ಯಾಮ್‌ ಬೆನೆಗಲ್‌ರಂಥ ಕೆಲವೊಂದು ಚಲನಚಿತ್ರ ತಯಾರಕರು 1970ರ ದಶಕದಾದ್ಯಂತ[೫೪] ವಾಸ್ತವಿಕ ದೃಷ್ಟಿಕೋನದ ಸಮಾನಾಂತರ ಚಲನಚಿತ್ರದ ನಿರ್ಮಾಣವನ್ನು ಮುಂದುವರಿಸಿದರು. ಬಂಗಾಳಿ ಚಿತ್ರರಂಗದಲ್ಲಿನ ಸತ್ಯಜಿತ್‌ ರೇ, ಋತ್ವಿಕ್‌ ಘಾಟಕ್‌, ಮೃಣಾಲ್‌ ಸೇನ್‌, ಬುದ್ಧದೇಬ್‌ ದಾಸ್‌ಗುಪ್ತಾ ಹಾಗೂ ಗೌತಮ್‌ ಘೋಷ್‌; ಮಲಯಾಳಂ ಚಿತ್ರರಂಗದಲ್ಲಿನ ಅಡೂರ್‌ ಗೋಪಾಲಕೃಷ್ಣನ್‌, ಜಾನ್‌ ಅಬ್ರಹಾಂ ಹಾಗೂ G. ಅರವಿಂದನ್‌; ಮತ್ತು ಹಿಂದಿ ಚಿತ್ರರಂಗದಲ್ಲಿನ ಮಣಿಕೌಲ್‌, ಕುಮಾರ್‌ ಶಹಾನಿ, ಕೇತನ್‌ ಮೆಹ್ತಾ, ಗೋವಿಂದ ನಿಹಲಾನಿ ಹಾಗೂ ವಿಜಯ ಮೆಹ್ತಾ ಮೊದಲಾದವರು ಇದೇ ನೆಲೆಗಟ್ಟಿನಲ್ಲಿ ಜೊತೆಜೊತೆಯಾಗಿಯೇ ಚಿತ್ರಗಳನ್ನು ನಿರ್ಮಿಸಿದರು.[೨೬] ಆದಾಗ್ಯೂ, 1976ರಲ್ಲಿ ನಡೆದ ಸಾರ್ವಜನಿಕ ಉದ್ಯಮಗಳ ವಿಚಾರಣೆಯ ಮೇಲಿನ ಸಮಿತಿಯೊಂದರ ಅವಧಿಯಲ್ಲಿ, 'ಕಲಾತ್ಮಕ ಚಲನಚಿತ್ರ'ಗಳೆಡೆಗಿನ ಚಲನಚಿತ್ರ ಹಣಕಾಸು ನಿಗಮದ ಮರ್ಜಿ ಅಥವಾ ಪ್ರವೃತ್ತಿಯು ಟೀಕೆಗೊಳಗಾಯಿತು. ವ್ಯಾಪಾರಿ ಚಲನಚಿತ್ರಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡದಿರುವುದಕ್ಕಾಗಿ ಈ ಘಟಕವು ದೂಷಣೆಗೆ ಗುರಿಯಾಯಿತು.[೫೫] ಅದೇನೇ ಇದ್ದರೂ, ಓರ್ವ ಪ್ರಮುಖ ನಟನಾಗಿ ಅಮಿತಾಬ್‌ ಬಚ್ಚನ್‌ನ ಸ್ಥಾನವನ್ನು ಗಟ್ಟಿಗೊಳಿಸಿದ ಷೋಲೆ ಯಂಥ (1975) ಬಾಳಿಕೆಬರುವ ಚಲನಚಿತ್ರಗಳ ಸ್ವರೂಪದಲ್ಲಿ, ವ್ಯಾಪಾರಿ ಚಲನಚಿತ್ರಗಳ ಹುಟ್ಟುವಿಕೆಯನ್ನು 1970ರ ದಶಕವು ಕಂಡಿತು.[೫೫] ಜೈ ಸಂತೋಷಿ ಮಾ ಎಂಬ ಭಕ್ತಿಪೂರ್ವಕ ಮೇರುಚಿತ್ರವೂ 1975ರಲ್ಲಿ ಬಿಡುಗಡೆಯಾಯಿತು.[೫೫] ಸಲೀಂ-ಜಾವೇದ್‌‌‌ರ ಕಥೆ ಹಾಗೂ ಯಶ್‌ ಚೋಪ್ರಾರ ನಿರ್ದೇಶನವನ್ನು ಹೊಂದಿದ್ದ ದೀವಾರ್‌ ಚಿತ್ರವು 1975ರಲ್ಲಿ ಬಿಡುಗಡೆಯಾದ ಮತ್ತೊಂದು ಪ್ರಮುಖ ಚಲನಚಿತ್ರವಾಗಿತ್ತು. "ಕಳ್ಳಸಾಗಣೆದಾರನಾಗಿದ್ದ ಹಾಜಿ ಮಸ್ತಾನ್‌‌ನ ನಿಜಜೀವನವನ್ನು ಆಧರಿಸಿದ್ದ, ದುಷ್ಕೃತ್ಯಗಳ ಪಟಾಲಂನ ಓರ್ವ ನಾಯಕನಾಗಿರುವ ತನ್ನ ಸೋದರನ ವಿರುದ್ಧವಾಗಿ ಓರ್ವ ಆರಕ್ಷಕ ಅಧಿಕಾರಿಯು ಹೋರಾಟಕ್ಕೆ ಇಳಿಯುವುದನ್ನು" ಒಳಗೊಂಡಿದ್ದ ಒಂದು ಅಪರಾಧ ಚಲನಚಿತ್ರ ಇದಾಗಿತ್ತು. ಅಮಿತಾಬ್‌ ಬಚ್ಚನ್‌ನನ್ನು ಸದರಿ ಕಳ್ಳಸಾಗಣೆದಾರನ ಪಾತ್ರದಲ್ಲಿ ಚಿತ್ರಿಸಿದ್ದ ಈ ದೀವಾರ್‌ ಚಿತ್ರವನ್ನು ಡ್ಯಾನಿ ಬೋಯ್ಲ್‌ ಎಂಬಾತ "ಇದು ಭಾರತೀಯ ಚಿತ್ರರಂಗಕ್ಕೆ ನಿಶ್ಚಯವಾಗಿ ಒಂದು ಅತ್ಯಂತ ಮಹತ್ವದ ಕೊಡುಗೆ" ಎಂದು ವರ್ಣಿಸಿದ.[೫೬]

ಮಿಸ್ಟರ್‌ ಇಂಡಿಯಾ (1987), ಕಯಾಮತ್‌ ಸೆ ಕಯಾಮತ್‌ ತಕ್‌ (1988), ತೇಜಾಬ್‌ (1988), ಚಾಂದನಿ (1989), ಮೈನೆ ಪ್ಯಾರ್‌ ಕಿಯಾ (1989), ಬಾಝಿಗರ್‌ (1993), ಡರ್‌ (1993),[೫೫] ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೇ (1995) ಮತ್ತು ಕುಚ್‌ ಕುಚ್‌ ಹೋತಾ ಹೈ ನಂಥ (1998) ಚಲನಚಿತ್ರಗಳು ಬಿಡುಗಡೆಯಾಗುವುದರೊಂದಿಗೆ ವ್ಯಾಪಾರಿ ಚಲನಚಿತ್ರರಂಗವು 1980ರ ದಶಕ ಮತ್ತು 1990ರ ದಶಕಗಳಾದ್ಯಂತ ಮತ್ತಷ್ಟು ಬೆಳೆಯಿತು. ಇವುಗಳ ಪೈಕಿ ಬಹುತೇಕ ಚಿತ್ರಗಳು ಆಮೀರ್‌ ಖಾನ್‌, ಸಲ್ಮಾನ್‌ ಖಾನ್‌ ಮತ್ತು ಶಾರುಖ್‌ ಖಾನ್‌‌ರಂಥ ತಾರೆಯರನ್ನು ಒಳಗೊಂಡಿದ್ದವು.

ಚಿತ್ರ:Roja002.jpg
ಮಣಿರತ್ನಂನ ತಮಿಳು ರೂಪಕ ಚಲನಚಿತ್ರ ರೋಜಾದಲ್ಲಿ (1992) ರೋಜಾ ಎಂಬ ಹಳ್ಳಿಯ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಂಡ ಮಧೂ.

ಮಣಿರತ್ನಂರಿಂದ ನಿರ್ದೇಶಿಸಲ್ಪಟ್ಟ ಚಲನಚಿತ್ರಗಳು ಭಾರತದ ಕಲ್ಪನೆಯನ್ನು ಸಮರ್ಥವಾಗಿ ಹಿಡಿದಿಟ್ಟ ಕಾರಣದಿಂದಾಗಿ, 1990ರ ದಶಕದಲ್ಲಿ ತಮಿಳು ಚಿತ್ರರಂಗದ ರಾಷ್ಟ್ರೀಯ ಜನಪ್ರಿಯತೆಯಲ್ಲಿ ಒಂದು ಹೆಚ್ಚಳವು ಕಂಡುಬಂದಿತು.[೫೫] ಇಂಥ ಚಲನಚಿತ್ರಗಳಲ್ಲಿ ರೋಜಾ (1992) ಮತ್ತು ಬಾಂಬೆ (1995) ಸೇರಿದ್ದವು. ಕಮಲಹಾಸನ್‌ ನಟಿಸಿದ್ದ ರತ್ನಂರ ಹಿಂದಿನ ಚಲನಚಿತ್ರವಾದ ನಾಯಗನ್‌ (1987), ಟೈಮ್‌ ನಿಯತಕಾಲಿಕದ "ಸಾರ್ವಕಾಲಿಕ" 100 ಅತ್ಯುತ್ತಮ ಚಲನಚಿತ್ರಗಳು ಪಟ್ಟಿಯಲ್ಲಿ ಸೇರಿಸಲ್ಪಟ್ಟಿತ್ತು. ಇದರ ಜೊತೆಜೊತೆಗಿದ್ದ ನಾಲ್ಕು ಮುಂಚಿನ ಭಾರತೀಯ ಚಲನಚಿತ್ರಗಳೆಂದರೆ: ಸತ್ಯಜಿತ್‌ ರೇಯವರ ದಿ ಅಪು ಟ್ರೈಲಜಿ (1955–1959) ಮತ್ತು ಗುರುದತ್‌‌‌ರವರ ಪ್ಯಾಸಾ (1957).[೫೩] ಮತ್ತೋರ್ವ ತಮಿಳು ನಿರ್ದೇಶಕರಾದ S. ಶಂಕರ್‌ ಕಾದಲನ್‌ ಎಂಬ ತಮ್ಮ ಚಲನಚಿತ್ರದ ಮೂಲಕ ಸಂಚಲನೆಯನ್ನೇ ಸೃಷ್ಟಿಸಿದರು. ಈ ಚಿತ್ರದ ಸಂಗೀತ ಹಾಗೂ ನಟ ಪ್ರಭುದೇವನ ನೃತ್ಯಗಳು ಸಾಕಷ್ಟು ಪ್ರಸಿದ್ಧಿಯನ್ನು ಪಡೆದವು. ದಕ್ಷಿಣ ಭಾರತೀಯ ಚಲನಚಿತ್ರೋದ್ಯಮವು ಕೇವಲ ರಾಷ್ಟ್ರೀಯ ಆಕರ್ಷಣೆಯ ಚಲನಚಿತ್ರವನ್ನಷ್ಟೇ ಅಲ್ಲದೇ ಬಹುಸಾಂಸ್ಕೃತಿಕ ಸಂಗೀತವನ್ನು ಕೂಡಾ ಒಳಗೊಂಡಿತ್ತು. ಇದು ರಾಷ್ಟ್ರಮಟ್ಟದ ಭಾರತೀಯ ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆಯಲು ಕಾರಣವಾಯಿತು.[೫೭] A. R. ರಹಮಾನ್‌ ಮತ್ತು ಇಳಯರಾಜಾರಂಥ ತಮಿಳಿನ ಕೆಲವೊಂದು ಫಿಲ್ಮೀ ಸಂಗೀತ ಸಂಯೋಜಕರು ಅಂದಿನಿಂದಲೂ ಒಂದು ಬೃಹತ್‌ ಪ್ರಮಾಣದ ರಾಷ್ಟ್ರೀಯ ಮತ್ತು ನಂತರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅಭಿಮಾನಿವೃಂದವನ್ನು ಹೊಂದಿದ್ದಾರೆ. ರಹಮಾನ್‌ರ ಪ್ರಥಮ ಪರಿಚಯದ ರೋಜಾ ಚಿತ್ರಕ್ಕೆ ಸಂಬಂಧಿಸಿದ ಧ್ವನಿಪಥವು ಟೈಮ್‌ ನಿಯತಕಾಲಿಕದ ಸಾರ್ವಕಾಲಿಕ[೫೮] "10 ಅತ್ಯುತ್ತಮ ಧ್ವನಿಪಥಗಳಲ್ಲಿ" ಸೇರಿಸಲ್ಪಟ್ಟಿತು ಹಾಗೂ ಕಾಲಾನಂತರದಲ್ಲಿ ತಮ್ಮ ಅಂತರರಾಷ್ಟ್ರೀಯ ಮಟ್ಟದ ಚಿತ್ರವಾದ ಸ್ಲಂಡಾಗ್‌ ಮಿಲಿಯನೇರ್‌ (2008) ಧ್ವನಿಪಥಕ್ಕಾಗಿ ಅವರು ಎರಡು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದರು. ತಬರನ ಕಥೆ ಎಂಬ ಕನ್ನಡ ಚಲನಚಿತ್ರವೊಂದು, ತಾಷ್ಕೆಂಟ್‌, ನಾಂಟೆಸ್‌, ಟೋಕಿಯೋ, ಹಾಗೂ ರಷ್ಯಾದ ಚಲನಚಿತ್ರೋತ್ಸವವೂ ಸೇರಿದಂತೆ ಹಲವಾರು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತು.[೫೯]

ಭಾರತೀಯ ಚಿತ್ರರಂಗದ ಸುವರ್ಣ ಯುಗದ ಬಹುಕಾಲದ ನಂತರ, ದಕ್ಷಿಣ ಭಾರತದ ಕೇರಳದ ಮಲಯಾಳಂ ಚಿತ್ರರಂಗವು 1980ರ ದಶಕ ಹಾಗೂ 1990ರ ದಶಕದ ಆರಂಭದಲ್ಲಿ ತನ್ನದೇ ಆದ 'ಸುವರ್ಣ ಯುಗ'ವನ್ನು ಕಂಡುಕೊಂಡಿತು. ಆ ಸಮಯದಲ್ಲಿದ್ದ ಅತ್ಯಂತ ಮೆಚ್ಚುಗೆ ಪಡೆದ ಭಾರತದ ಚಲನಚಿತ್ರ ತಯಾರಕರ ಪೈಕಿ ಕೆಲವೊಬ್ಬರು ಮಲಯಾಳಂ ಚಿತ್ರರಂಗದಿಂದ ಬಂದವರಾಗಿದ್ದರು. ಅಡೂರ್‌ ಗೋಪಾಲಕೃಷ್ಣನ್‌, G. ಅರವಿಂದನ್‌, T. V. ಚಂದ್ರನ್‌ ಹಾಗೂ ಷಾಜಿ N. ಕರುಣ್‌ ಮೊದಲಾದವರು ಇವರಲ್ಲಿ ಸೇರಿದ್ದಾರೆ.[೬೦] ಸತ್ಯಜಿತ್‌ ರೇಯವರ ಆಧ್ಯಾತ್ಮಿಕ ಉತ್ತರಾಧಿಕಾರಿ[೬೧] ಎಂದೇ ಅನೇಕಬಾರಿ ಪರಿಗಣಿಸಲಾಗಿರುವ ಅಡೂರ್‌ ಗೋಪಾಲಕೃಷ್ಣನ್‌, ಅತ್ಯಂತ ಮೆಚ್ಚುಗೆಯನ್ನು ಪಡೆದ ತಮ್ಮ ಚಲನಚಿತ್ರಗಳ ಪೈಕಿ ಕೆಲವನ್ನು ಈ ಅವಧಿಯಲ್ಲಿ ನಿರ್ದೇಶಿಸಿದರು. ಲಂಡನ್‌ ಚಲನಚಿತ್ರೋತ್ಸವದಲ್ಲಿ ಸುದರ್‌ಲೆಂಡ್‌ ಪ್ರಶಸ್ತಿಯನ್ನು ಗೆದ್ದ ಎಲಿಪ್ಪತಾಯಮ್‌ (1981) ಎಂಬ ಚಿತ್ರವಷ್ಟೇ ಅಲ್ಲದೇ, ವೆನಿಸ್‌ ಚಲನಚಿತ್ರೋತ್ಸವದಲ್ಲಿ ಪ್ರಮುಖ ಬಹುಮಾನಗಳನ್ನು ಗೆದ್ದ ಮಥಿಲುಕಳ್‌ (1989) ಚಿತ್ರವೂ ಇವುಗಳಲ್ಲಿ ಸೇರಿವೆ.[೬೨] ಷಾಜಿ N. ಕರುಣ್‌ರ ಪ್ರಥಮ ಪ್ರವೇಶದ ಚಲನಚಿತ್ರವಾದ ಪಿರವಿ ಯು (1989) 1989ರ ಕ್ಯಾನೆಸ್‌ ಚಲನಚಿತ್ರೋತ್ಸವಗಳಲ್ಲಿ ಕ್ಯಾಮೆರಾ ಡಿ'ಓರ್‌ ಪ್ರಶಸ್ತಿಯನ್ನು ಗೆದ್ದರೆ, ಅವರ ಎರಡನೇ ಚಿತ್ರವಾದ ಸ್ವಾಹಂ (1994) 1994 ಕ್ಯಾನೆಸ್‌ ಚಲನಚಿತ್ರೋತ್ಸವದಲ್ಲಿನ ಪಾಮೆ ಡಿ'ಓರ್‌ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿತ್ತು.[೬೩]

ಚಿತ್ರ:Kamal Hassan in Nayagan.png
ನಾಯಗನ್‌ ಚಿತ್ರದಲ್ಲಿ ವೇಲು ನಾಯಕರ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಮಲಹಾಸನ್‌; ಟೈಮ್‌ ನಿಯತಕಾಲಿಕದ "ಸಾರ್ವಕಾಲಿಕ" 100 ಅತ್ಯುತ್ತಮ ಚಲನಚಿತ್ರಗಳಲ್ಲಿ ಈ ಚಿತ್ರವನ್ನು ಸೇರಿಸಲಾಗಿತ್ತು.
ಚಿತ್ರ:Lagaan cricket team.JPG
ಆಶುತೋಷ್‌ ಗೊವಾರಿಕರ್‌ನ ಲಗಾನ್‌ (2001) ಚಲನಚಿತ್ರದಲ್ಲಿ ಹಳ್ಳಿಯ-ಜನರನ್ನೊಳಗೊಂಡ ತನ್ನ ಕ್ರಿಕೆಟ್‌ ತಂಡದೊಂದಿಗೆ ಭುವನ್‌ (ಆಮೀರ್‌ ಖಾನ್‌).

1990ರ ದಶಕದ ಅಂತ್ಯದಲ್ಲಿ, 'ಸಮಾನಾಂತರ ಚಲನಚಿತ್ರ'ವು ಹಿಂದಿ ಚಿತ್ರರಂಗದಲ್ಲಿನ ಒಂದು ಪುನರ್ಜಾಗೃತಿಯನ್ನು ಅನುಭವಕ್ಕೆ ತಂದುಕೊಳ್ಳಲು ಶುರುಮಾಡಿತು. ಸತ್ಯ (1998) ಎಂಬ ಚಿತ್ರದ ವಿಮರ್ಶಾತ್ಮಕ ಹಾಗೂ ವ್ಯಾವಹಾರಿಕ ಯಶಸ್ಸು ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಾರಣವಾಗಿತ್ತು. ಮುಂಬಯಿ ಭೂಗತಲೋಕವನ್ನು ಆಧರಿಸಿದ್ದ ಈ ಕಡಿಮೆ-ಬಂಡವಾಳದ ಚಲನಚಿತ್ರಕ್ಕೆ ಅನುರಾಗ್‌ ಕಾಶ್ಯಪ್‌ ಕಥೆಯನ್ನು ಬರೆದಿದ್ದು, ರಾಂ ಗೋಪಾಲ್‌ ವರ್ಮಾನಿಂದ ಅದು ನಿರ್ದೇಶಿಸಲ್ಪಟ್ಟಿತ್ತು. ಮುಂಬಯಿ ನಾಯ್ರ್‌ [೬೪] ಎಂದು ಕರೆಯಲಾಗುವ, ಮುಂಬಯಿ ನಗರದ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ನಗರದ ಚಲನಚಿತ್ರಗಳ ಒಂದು ವಿಭಿನ್ನ-ವಿಶಿಷ್ಟ ಶೈಲಿಯು ಹುಟ್ಟಿಕೊಳ್ಳಲು ಈ ಚಲನಚಿತ್ರದ ಯಶಸ್ಸು ದಾರಿಮಾಡಿಕೊಟ್ಟಿತು.[೬೫] ಮುಂಬಯಿ ನಾಯ್ರ್‌ ಚಲನಚಿತ್ರ ಶೈಲಿಗೆ ಸೇರ್ಪಡೆಯಾಗುವ ಲಕ್ಷಣವನ್ನು ಹೊಂದಿದ್ದ ನಂತರದ ಚಲನಚಿತ್ರಗಳಲ್ಲಿ, ಮಧುರ್‌ ಭಂಡಾರ್ಕರ್‌‌ಚಾಂದನಿ ಬಾರ್‌ (2001) ಹಾಗೂ ಟ್ರಾಫಿಕ್‌ ಸಿಗ್ನಲ್‌ (2007), ರಾಂ ಗೋಪಾಲ್‌ ವರ್ಮಾನ ಕಂಪನಿ (2002) ಹಾಗೂ ಅದರ ಘಟನೆಗಳನ್ನೇ ಹೊಂದಿರುವ D (2005), ಅನುರಾಗ್‌ ಕಾಶ್ಯಪ್‌ನ ಬ್ಲ್ಯಾಕ್‌ ಫ್ರೈಡೆ (2004), ಮತ್ತು ಇರ್ಫಾನ್‌ ಕಮಲ್‌ನ ಥ್ಯಾಂಕ್ಸ್‌ ಮಾ (2009) ಚಿತ್ರಗಳು ಸೇರಿವೆ. ಇಂದಿಗೂ ಸಕ್ರಿಯರಾಗಿರುವ ಇತರ ಕಲಾತ್ಮಕ ಚಲನಚಿತ್ರ ನಿರ್ದೇಶಕರ ವಿವರ ಹೀಗಿದೆ: ಬಂಗಾಳಿ ಚಿತ್ರರಂಗದಲ್ಲಿನ ಮೃಣಾಲ್‌ ಸೇನ್‌, ಬುದ್ಧದೇಬ್‌ ದಾಸ್‌ಗುಪ್ತಾ, ಗೌತಮ್‌ ಘೋಷ್‌, ಸಂದೀಪ್‌ ರೇ, ಅಪರ್ಣಾ ಸೇನ್‌ ಮತ್ತು ರಿತುಪರ್ಣೋ ಘೋಷ್‌; ಮಲಯಾಳಂ ಚಿತ್ರರಂಗದಲ್ಲಿನ ಅಡೂರ್‌ ಗೋಪಾಲಕೃಷ್ಣನ್‌, ಷಾಜಿ N. ಕರುಣ್‌ ಮತ್ತು T. V. ಚಂದ್ರನ್‌; ಹಿಂದಿ ಚಿತ್ರರಂಗದಲ್ಲಿನ ಮಣಿಕೌಲ್‌, ಕುಮಾರ್‌ ಶಹಾನಿ, ಕೇತನ್‌ ಮೆಹ್ತಾ, ಗೋವಿಂದ ನಿಹಲಾನಿ, ಶ್ಯಾಮ್‌ ಬೆನೆಗಲ್‌,[೨೬] ಮೀರಾ ನಾಯರ್‌, ನಾಗೇಶ್‌ ಕುಕುನೂರ್‌, ಸುಧೀರ್‌ ಮಿಶ್ರಾ ಮತ್ತು ನಂದಿತಾ ದಾಸ್‌; ತಮಿಳು ಚಿತ್ರರಂಗದಲ್ಲಿನ ಮಣಿರತ್ನಂ ಮತ್ತು ಸಂತೋಷ್‌ ಶಿವನ್‌ ಹಾಗೂ, ಭಾರತೀಯ ಇಂಗ್ಲಿಷ್‌ ಚಿತ್ರರಂಗದಲ್ಲಿನ ದೀಪಾ ಮೆಹ್ತಾ, ಅನಂತ್‌ ಬಲಾನಿ, ಹೋಮಿ ಅಡಾಜಾನಿಯಾ, ವಿಜಯ್‌ ಸಿಂಗ್‌ ಮತ್ತು ಸೂನಿ ತಾರಾಪೋರ್‌ವಾಲಾ.

ಪ್ರಭಾವಗಳು

ಬದಲಾಯಿಸಿ
 
ಪ್ರಸಾದ್ಸ್‌ IMAX ಥಿಯೇಟರ್‌ ಹೌಸಸ್‌ ಅಟ್‌ ಹೈದರಾಬಾದ್‌, ದಿ 2ನ್ಡ್‌ ಲಾಜೆಸ್ಟ್‌ IMAX-3D ಇನ್‌ ದಿ ವರ್ಲ್ಡ್‌ (2ನ್ಡ್‌ ಟು ದಿ ವರ್ಲ್ಡ್ಸ್‌ ಲಾರ್ಜೆಸ್ಟ್‌ ಇನ್‌ ಸಿಡ್ನಿ, ಆಸ್ಟ್ರೇಲಿಯಾ).[೬೬]
 
ಬೆಂಗಳೂರಿನಲ್ಲಿನ PVR ಸಿನಿಮಾಸ್‌ ಭಾರತದಲ್ಲಿನ ಅತಿದೊಡ್ಡ ಸಿನಿಮಾ ಸರಪಳಿಗಳಲ್ಲಿ ಒಂದಾಗಿದೆ.

ಸಾರ್ವತ್ರಿಕವಾಗಿ ಹೇಳುವುದಾದರೆ ಆರು ಪ್ರಮುಖ ಪ್ರಭಾವಗಳು ಭಾರತದ ಜನಪ್ರಿಯ ಚಲನಚಿತ್ರದ ಸಂಪ್ರದಾಯಗಳನ್ನು ರೂಪಿಸಿವೆ. ಅವುಗಳಲ್ಲಿ ಮೊದಲ ಸ್ಥಾನದಲ್ಲಿದ್ದುದು ಪ್ರಾಚೀನ ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ . ಭಾರತದ ಜನಪ್ರಿಯ ಚಲನಚಿತ್ರದ ಮೇಲೆ, ಅದರಲ್ಲೂ ನಿರ್ದಿಷ್ಟವಾಗಿ ಅದರ ನಿರೂಪಣಾ ವಿಧಾನಗಳಲ್ಲಿನ ಆಲೋಚನಾ ಕ್ರಮ ಹಾಗೂ ಕಲ್ಪನಾಶಕ್ತಿ ಮೇಲೆ ಮೇಲೆ ಈ ಮಹಾಕಾವ್ಯಗಳು ಒಂದು ಆಳವಾದ ಪ್ರಭಾವವನ್ನು ಬೀರಿದವು. ಒಂದು ಉಪಕಥೆ, ಹಿಂದಿನ-ಕಥೆ ಮತ್ತು ಕಥೆಯೊಳಗೊಂದು ಕಥೆಯ ತಂತ್ರಗಳನ್ನು ಒಳಗೊಳ್ಳುವುದು ಈ ಪ್ರಭಾವಕ್ಕೆ ಉದಾಹರಣೆಗಳಾಗಿವೆ. ಭಾರತದ ಜನಪ್ರಿಯ ಚಲನಚಿತ್ರಗಳು ಅನೇಕ ಬಾರಿ ಉಪ-ಕಥಾವಸ್ತುಗಳಾಗಿ ಕವಲೊಡೆಯುವ ಕಥಾವಸ್ತುಗಳನ್ನು ಹೊಂದಿರುತ್ತವೆ; ಇಂಥ ನಿರೂಪಣೆಯ ಹರಡುವಿಕೆಯನ್ನು 1993ರಲ್ಲಿ ಬಂದ ಖಲ್‌ನಾಯಕ್‌ ಹಾಗೂ ಗರ್ದಿಷ್‌ ಎಂಬ ಚಲನಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಹೆಚ್ಚು ವಿಲಕ್ಷಣವಾಗಿ ಚಿತ್ರಿಸಲ್ಪಟ್ಟ ಸ್ವರೂಪ ಹಾಗೂ ಪ್ರದರ್ಶನದ ಮೇಲೆ ನೀಡುವ ಒತ್ತಿನೊಂದಿಗಿನ ವಿಶಿಷ್ಟತೆಯುಳ್ಳ ಪ್ರಾಚೀನ ಸಂಸ್ಕೃತ ನಾಟಕಗಳ ಕಡೆಯಿಂದ ಬಂದ ಪರಿಣಾಮವು ಎರಡನೆಯ ಬಗೆಯ ಪ್ರಭಾವವಾಗಿತ್ತು. "ನೃತ್ಯ ಹಾಗೂ ಮೂಕಾಭಿನಯವು ನಾಟಕೀಯವಾದ ಅನುಭೂತಿಯ ಕೇಂದ್ರಬಿಂದುವಾಗಿರುವುದರೊಂದಿಗೆ ಒಂದು ಮೈನವಿರೇಳಿಸುವ ಕಲಾತ್ಮಕ ಘಟಕವನ್ನು ಸೃಷ್ಟಿಸಲು ಸಂಗೀತ, ನೃತ್ಯ ಹಾಗೂ ಆಂಗಿಕ ಅಭಿನಯ ಅಥವಾ ಭಂಗಿಗಳು ಇಲ್ಲಿ ಸಂಯೋಜನೆಗೊಂಡಿರುತ್ತಿದ್ದವು. ಸಂಸ್ಕೃತ ನಾಟಕಗಳು ನಾಟ್ಯ ಎಂದೇ ಚಿರಪರಿಚಿತವಾಗಿದ್ದು, ಇದು ನೃತ್‌ (ನೃತ್ಯ) ಎಂಬ ಮೂಲಪದದಿಂದ ಜನ್ಯವಾಗಿದೆ. ನೃತ್ಯದ ಕಾರಣದಿಂದಾಗಿ ಸಂಸ್ಕೃತ ನಾಟಕಗಳು ನಯನ ಮನೋಹರವಾದ ನೃತ್ಯ-ನಾಟಕಗಳ ರೀತಿಯಲ್ಲಿ ತಮ್ಮ ಲಕ್ಷಣವನ್ನು ರೂಪಿಸಿಕೊಂಡಿದ್ದು, ಅದು ಭಾರತೀಯ ಚಿತ್ರರಂಗದಲ್ಲಿಯೂ ಮುಂದುವರಿಯಿತು.[೬೭] ಅಭಿನಯದ ಅಥವಾ ಪ್ರದರ್ಶನದ ರಸ ವಿಧಾನವು, ಪ್ರಾಚೀನ ಸಂಸ್ಕೃತ ನಾಟಕದಷ್ಟು ಹಳೆಯಕಾಲದ್ದಾಗಿದ್ದು, ಭಾರತೀಯ ಚಿತ್ರರಂಗವನ್ನು ಪಾಶ್ಚಾತ್ಯ ಕಲಾಪ್ರಪಂಚದಿಂದ ಪ್ರತ್ಯೇಕಿಸುವ ಮೂಲಭೂತ ಗುಣಲಕ್ಷಣಗಳ ಪೈಕಿ ಅದು ಒಂದಾಗಿದೆ. ರಸ ವಿಧಾನದಲ್ಲಿ, ಪರಾನುಭೂತಿ ಶಕ್ತಿಯುಳ್ಳ "ಭಾವನೆಗಳು ಪ್ರದರ್ಶಕನಿಂದ ವ್ಯಕ್ತಪಡಿಸಲ್ಪಡುತ್ತವೆ ಹಾಗೂ ತನ್ಮೂಲಕ ಪ್ರೇಕ್ಷಕರ ಅನುಭವಕ್ಕೆ ಅವು ಬರುತ್ತವೆಯಾದ್ದರಿಂದ" ಇವು ಪಾಶ್ಚಾತ್ಯರ ಸ್ಟಾನಿಸ್ಲೇವ್ಸ್ಕಿ ವಿಧಾನಕ್ಕೆ ತದ್ವಿರುದ್ಧವಾಗಿವೆ. ಸ್ಟಾನಿಸ್ಲೇವ್ಸ್ಕಿ ವಿಧಾನದಲ್ಲಿ ನಟನೊಬ್ಬನು "ಕೇವಲ ಭಾವನೆಯನ್ನು ವ್ಯಕ್ತಪಡಿಸುವುದಕ್ಕಿಂತ" ಹೆಚ್ಚಾಗಿ ಪಾತ್ರವೊಂದರ ಒಂದು ಜೀವಂತ, ಉಸಿರಾಡುತ್ತಿರುವ ಸಾಕಾರರೂಪವಾಗಿ" ಮಾರ್ಪಾಡುಗೊಳ್ಳಬೇಕಾಗುತ್ತದೆ. ಪ್ರದರ್ಶನ ಕಲೆಯ ರಸ ವಿಧಾನವು ಅಮಿತಾಬ್‌ ಬಚ್ಚನ್‌ ಹಾಗೂ ಶಾರುಖ್‌ ಖಾನ್‌‌ರಂಥ ಜನಪ್ರಿಯ ಹಿಂದಿ ಚಲನಚಿತ್ರ ನಟರ ಅಭಿನಯಗಳಲ್ಲಿ ಸ್ಪಷ್ಟವಾಗಿ ಕಣ್ಣಿಗೆ ಗೋಚರಿಸುತ್ತದೆ. ಅಷ್ಟೇ ಅಲ್ಲ, ರಂಗ್‌ ದೇ ಬಸಂತಿ ಯಂಥ (2006)[೬೮] ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದ ಹಿಂದಿ ಚಲನಚಿತ್ರಗಳು ಮತ್ತು ಸತ್ಯಜಿತ್‌ ರೇಯವರಿಂದ ನಿರ್ದೇಶಿಸಲ್ಪಟ್ಟ, ಅಂತರರಾಷ್ಟ್ರೀಯ ಮಟ್ಟದಲ್ಲಿ-ಮೆಚ್ಚುಗೆಯನ್ನು ಪಡೆದ ಬಂಗಾಳಿ ಚಲನಚಿತ್ರಗಳಲ್ಲೂ ರಸ ವಿಧಾನವು ಸ್ಪಷ್ಟವಾಗಿ ಗೋಚರಿಸುತ್ತದೆ.[೬೯]

ಸಾಂಪ್ರದಾಯಿಕ ಜಾನಪದ ಸ್ವರೂಪದ ಭಾರತೀಯ ರಂಗಭೂಮಿಯು ಮೂರನೇ ಪ್ರಭಾವವಾಗಿದ್ದು, ಸಂಸ್ಕೃತ ರಂಗಭೂಮಿಯ ಕುಸಿತದೊಂದಿಗೆ ಸುಮಾರು 10ನೇ ಶತಮಾನದಿಂದ ಇದು ಜನಪ್ರಿಯವಾಗತೊಡಗಿತು. ಈ ಪ್ರಾದೇಶಿಕ ಸಂಪ್ರದಾಯಗಳಲ್ಲಿ ಬಂಗಾಳಯಾತ್ರಾ, ಉತ್ತರ ಪ್ರದೇಶರಾಮಲೀಲಾ, ಹಾಗೂ ತಮಿಳುನಾಡಿನ ತೆರುಕ್ಕುಟ್ಟು ಸೇರಿವೆ. ಪಾರ್ಸಿ ರಂಗಭೂಮಿಯು ನಾಲ್ಕನೆಯ ಪ್ರಭಾವವಾಗಿದ್ದು, ಅದು "ಯಥಾರ್ಥತೆ ಮತ್ತು ಕಲ್ಪನಾಚಿತ್ರ, ಸಂಗೀತ ಮತ್ತು ನೃತ್ಯ, ನಿರೂಪಣಾ ವಿಧಾನ ಮತ್ತು ಪ್ರದರ್ಶನ ಶೈಲಿ, ಆ ನೆಲದ ಅಥವಾ ಒರಟು ಸಂಭಾಷಣೆ ಮತ್ತು ವೇದಿಕೆಯ ಪ್ರಸ್ತುತಿಯ ಚಾತುರ್ಯ ಮೊದಲಾದವುಗಳನ್ನು ಹದವಾಗಿ ಬೆರೆಸಿ, ಅವನ್ನು ಭಾವಾತಿರೇಕ ನಾಟಕದ ಒಂದು ನಾಟಕೀಯ ಧರ್ಮಬೋಧೆ ಅಥವಾ ಉಪದೇಶವಾಗಿ ಅದನ್ನು ಒಗ್ಗೂಡಿಸುತ್ತಿತ್ತು. ಪಾರ್ಸಿ ನಾಟಕಗಳಲ್ಲಿ ಒರಟಾದ ಹಾಸ್ಯ, ಇಂಪಾದ ಹಾಡುಗಳು ಮತ್ತು ಸಂಗೀತ, ಉದ್ರೇಕಕಾರಿತ್ವ ಮತ್ತು ವಿಸ್ಮಯಗೊಳಿಸುವ ರಂಗಕೌಶಲ ಮೊದಲಾದವುಗಳು ತುಂಬಿಕೊಂಡಿರುತ್ತಿದ್ದವು."[೬೭] 1970ರ ದಶಕ ಹಾಗೂ 1980ರ ದಶಕದ ಆರಂಭದಲ್ಲಿ, ಮನಮೋಹನ್‌ ದೇಸಾಯಿಯವರ ಚಲನಚಿತ್ರಗಳಿಂದ, ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ ಕೂಲಿ (1983) ಚಿತ್ರದಿಂದ ಜನಪ್ರಿಯಗೊಳಿಸಲ್ಪಟ್ಟ ಮಸಾಲಾ ಚಲನಚಿತ್ರ ಶೈಲಿಯಲ್ಲಿ ಈ ಎಲ್ಲಾ ಪ್ರಭಾವಗಳೂ ಸ್ಪಷ್ಟವಾಗಿ ಗೋಚರಿಸುತ್ತವೆ. ಅಷ್ಟೇ ಅಲ್ಲ, ರಂಗ್‌ ದೇ ಬಸಂತಿ ಯಂಥ ತೀರಾ ಇತ್ತೀಚೆಗೆ ಬಂದ ವಿಮರ್ಶಾತ್ಮಕವಾಗಿ-ಮೆಚ್ಚುಗೆ ಪಡೆದ ಚಲನಚಿತ್ರಗಳಲ್ಲಿಯೂ ಇದು ಒಂದು ಹಂತಕ್ಕೆ ಸ್ಪಷ್ಟವಾಗಿ ಗೋಚರಿಸುತ್ತದೆ.[೬೮]

ಹಾಲಿವುಡ್‌ ಚಿತ್ರರಂಗವು ಐದನೇ ಪ್ರಭಾವವಾಗಿತ್ತು. ಭಾರತದ ಚಲನಚಿತ್ರ ತಯಾರಕರು ಹಾಲಿವುಡ್‌ ಚಲನಚಿತ್ರ ತಯಾರಕರಿಂದ ಹಲವಾರು ವಿಧಗಳಲ್ಲಿ ಬೇರ್ಪಟ್ಟಿದ್ದರೂ ಸಹ, ಹಾಲಿವುಡ್‌ನಲ್ಲಿ ಸಂಗೀತಮಯ ಚಿತ್ರಗಳು 1920ರ ದಶಕದಿಂದ 1950ರ ದಶಕದವರೆಗೆ ಜನಪ್ರಿಯವಾಗಿದ್ದವು. "ಉದಾಹರಣೆಗೆ, ಹಾಲಿವುಡ್‌ನ ಸಂಗೀತಮಯ ಚಿತ್ರಗಳು ಸ್ವತಃ ಮನರಂಜನಾ ಪ್ರಪಂಚವನ್ನು ತಮ್ಮ ಕಥಾವಸ್ತುವನ್ನಾಗಿ ಹೊಂದಿದ್ದವು. ಭಾರತದ ಜನಪ್ರಿಯ ಚಲನಚಿತ್ರಗಳಲ್ಲಿ ತುಂಬಾ ವ್ಯಾಪಕವಾಗಿರುವ ಕಲ್ಪನಾಚಿತ್ರದ ಮೂಲಾಂಶಗಳನ್ನು ಅಧಿಕಗೊಳಿಸುವಾಗ ಅಥವಾ ಉತ್ಪ್ರೇಕ್ಷಿಸುವಾಗ, ಭಾರತದ ಚಲನಚಿತ್ರ ತಯಾರಕರು ತಮ್ಮ ಚಲನಚಿತ್ರಗಳಲ್ಲಿನ ಗೊತ್ತುಪಡಿಸಲಾದ ಸನ್ನಿವೇಶವೊಂದರಲ್ಲಿ ಜೋಡಣೆಯ ಒಂದು ಸ್ವಾಭಾವಿಕ ವಿಧಾನವಾಗಿ ಹಾಡು ಮತ್ತು ಸಂಗೀತವನ್ನು ಬಳಸಿದರು. ಪುರಾಣ, ಇತಿಹಾಸ, ಕಟ್ಟುಕಥೆಗಳು ಹಾಗೂ ಇನ್ನೂ ಅನೇಕ ಅಂಶಗಳನ್ನು ಹಾಡು ಹಾಗೂ ನೃತ್ಯದ ಮೂಲಕ ನಿರೂಪಿಸುವ ಒಂದು ಸದೃಢವಾದ ಭಾರತೀಯ ಸಂಪ್ರದಾಯವು ಅಸ್ತಿತ್ವದಲ್ಲಿದೆ." ಇದರ ಜೊತೆಯಲ್ಲಿ, "ತಮ್ಮ ಚಲನಚಿತ್ರದ ನಿರ್ಮಿತ ಸ್ವರೂಪವನ್ನು ರಹಸ್ಯವಾಗಿಡಲು ಹಾಲಿವುಡ್‌ ಚಲನಚಿತ್ರ ತಯಾರಕರು ಹೆಣಗಾಡಿದ ಕಾರಣದಿಂದ ವಾಸ್ತವಿಕ ದೃಷ್ಟಿಕೋನದ ನಿರೂಪಣಾ ಶೈಲಿಯು ಸಂಪೂರ್ಣವಾಗಿ ಪ್ರಭಾವಶಾಲಿಯಾಗುವಂತೆ ಮಾಡಿದ್ದಕ್ಕೆ ಹೋಲಿಸಿ ನೋಡಿದಾಗ, ತಾವು ತೆರೆಯ ಮೇಲೆ ತೋರಿಸಿದ್ದು ಒಂದು ಸೃಷ್ಟಿ, ಒಂದು ಭ್ರಮೆ, ಒಂದು ಕಲ್ಪನೆಯಾಗಿತ್ತು ಎಂಬ ವಾಸ್ತವಾಂಶವನ್ನು ರಹಸ್ಯವಾಗಿಡಲು ಭಾರತೀಯ ಚಲನಚಿತ್ರ ತಯಾರಕರು ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಆದಾಗ್ಯೂ, ಜನರ ದೈನಂದಿನ ಜೀವನಗಳೊಂದಿಗೆ ಈ ಸೃಷ್ಟಿಯು ಸಂಕೀರ್ಣವಾದ ಮತ್ತು ಕುತೂಹಲಕರ ವಿಧಾನಗಳಲ್ಲಿ ಹೇಗೆ ಛೇಧಿಸಿಕೊಂಡು ಹೋಯಿತು ಎಂಬುದನ್ನು ಅವರು ನಿರೂಪಿಸಿ ತೋರಿಸಿದರು."[೭೦] ಪಾಶ್ಚಾತ್ಯರ ಸಂಗೀತಮಯ ದೂರದರ್ಶನವು, ಅದರಲ್ಲೂ ನಿರ್ದಿಷ್ಟವಾಗಿ MTVಯು ಅಂತಿಮ ಪ್ರಭಾವವಾಗಿದ್ದು, ಇದು 1990ರ ದಶಕದಿಂದೀಚಿಚೆಗೆ ಒಂದು ವರ್ಧನಶೀಲ ಪ್ರಭಾವವನ್ನು ಹೊಂದಿತ್ತು. ಇತ್ತೀಚಿನ ಭಾರತೀಯ ಚಲನಚಿತ್ರಗಳ ವೇಗ, ಕ್ಯಾಮರಾದ ಕೋನಗಳು, ನೃತ್ಯ ಸನ್ನಿವೇಶಗಳು ಮತ್ತು ಸಂಗೀತದಲ್ಲಿ ಇದನ್ನು ಕಾಣಬಹುದು. ಮಣಿರತ್ನಂಬಾಂಬೆ (1995) ಚಲನಚಿತ್ರದಲ್ಲಿ ಈ ಮಾರ್ಗದ ಒಂದು ಆರಂಭಿಕ ಉದಾಹರಣೆಯು ಕಂಡುಬಂದಿತ್ತು.[೭೧]

ಭಾರತದ ಮುಖ್ಯವಾಹಿನಿಯ ಜನಪ್ರಿಯ ಚಲನಚಿತ್ರದ ರೀತಿಯಲ್ಲಿಯೇ ಸಮಾನಾಂತರ ಚಲನಚಿತ್ರವೂ ಸಹ ಭಾರತೀಯ ರಂಗಭೂಮಿ (ನಿರ್ದಿಷ್ಟವಾಗಿ ಹೇಳುವುದಾದರೆ ಸಂಸ್ಕೃತ ನಾಟಕ) ಮತ್ತು ಭಾರತೀಯ ಸಾಹಿತ್ಯದ (ನಿರ್ದಿಷ್ಟವಾಗಿ ಹೇಳುವುದಾದರೆ ಬಂಗಾಳಿ ಸಾಹಿತ್ಯದ) ಒಂದು ಸಂಯೋಜನೆಯಿಂದ ಪ್ರಭಾವಿತಗೊಂಡಿತ್ತು. ಆದರೆ, ವಿದೇಶೀ ಪ್ರಭಾವಗಳ ವಿಷಯಕ್ಕೆ ಬಂದಾಗ ಇದು ಕೊಂಚ ವಿಭಿನ್ನತೆಯನ್ನು ಮೆರೆಯುತ್ತದೆ. ಏಕೆಂದರೆ ಹಾಲಿವುಡ್‌ ಚಲನಚಿತ್ರಗಳಿಗಿಂತ ಹೆಚ್ಚಾಗಿ ಇದು ಐರೋಪ್ಯ ಚಿತ್ರರಂಗದಿಂದ (ನಿರ್ದಿಷ್ಟವಾಗಿ ಹೇಳುವುದಾದರೆ ಇಟಲಿಯ ನವಯಥಾರ್ಥತೆ ಮತ್ತು ಫ್ರೆಂಚರ ಕಾವ್ಯಾತ್ಮಕ ಯಥಾರ್ಥತೆಯ ಚಿತ್ರಗಳಿಂದ) ಹೆಚ್ಚು ಪ್ರಭಾವಿತಗೊಂಡಿದೆ. ಸತ್ಯಜಿತ್‌ ರೇಯವರು ಇಟಲಿಯ ಚಲನಚಿತ್ರ ತಯಾರಕನಾದ ವಿಟ್ಟೊರಿಯೋ ಡಿ ಸಿಕಾಬೈಸಿಕಲ್‌ ಥೀವ್ಸ್‌ (1948) ಹಾಗೂ ಫ್ರೆಂಚ್‌ ಚಲನಚಿತ್ರ ತಯಾರಕನಾದ ಜೀನ್‌ ರೆನೋಯ್ರ್‌‌ದಿ ರಿವರ್‌ (1951) ಚಿತ್ರಗಳು ತಮ್ಮ ಪ್ರಥಮ ಪ್ರವೇಶದ ಚಿತ್ರವಾದ ಪಥೇರ್‌ ಪಾಂಚಾಲಿ ಯ (1955) ಮೇಲೆ ಪ್ರಭಾವ ಬೀರಿವೆ ಎಂದು ಉಲ್ಲೇಖಿಸಿದ್ದಾರೆ. ಈ ಎರಡೂ ಚಿತ್ರಗಳಿಗೆ ಅವರು ಸಹಾಯಕರಾಗಿದ್ದರು ಎಂಬುದು ಇಲ್ಲಿ ಗಮನಾರ್ಹ. ಐರೋಪ್ಯ ಚಲನಚಿತ್ರ ಮತ್ತು ಬಂಗಾಳಿ ಸಾಹಿತ್ಯದಿಂದ ದೊರೆತ ಪ್ರಭಾವದ ಜೊತೆಗೆ, ಭಾರತೀಯ ರಂಗಭೂಮಿ ಸಂಪ್ರದಾಯಕ್ಕೂ, ಅದರಲ್ಲೂ ನಿರ್ದಿಷ್ಟವಾಗಿ ಸಾಂಪ್ರದಾಯಿಕ ಸಂಸ್ಕೃತ ನಾಟಕದ ರಸ ವಿಧಾನಕ್ಕೂ ಸಹ ಸತ್ಯಜಿತ್‌ ರೇಯವರೂ ಋಣಿಯಾಗಿದ್ದಾರೆ. ರಸ ವಿಧಾನದ ಸಂಕೀರ್ಣಗೊಳಿಸಲ್ಪಟ್ಟ ಸಿದ್ಧಾಂತವು, "ಪಾತ್ರಗಳು ಅನುಭವಕ್ಕೆ ತಂದುಕೊಂಡ ಭಾವದ ಮೇಲೆ ಮಾತ್ರವಲ್ಲದೇ ಒಂದು ನಿಗದಿತ ಕಲಾತ್ಮಕ ವಿಧಾನದಲ್ಲಿ ಅವುಗಳ ನೋಡುಗನಿಗೂ ಆ ಭಾವವನ್ನು ಮುಟ್ಟಿಸುವುದರ ಕಡೆಗೂ ಪ್ರಮುಖವಾಗಿ ಕೇಂದ್ರೀಕರಿಸುತ್ತದೆ. ರಸ ಹೊದಿಕೆಯ ಈ ಒಂದು ವಿಧಾನದ ಉಭಯಾತ್ಮಕತೆಯು" ದಿ ಅಪು ಟ್ರೈಲಜಿ ಯಲ್ಲಿ ಅನಾವರಣಗೊಳ್ಳುತ್ತದೆ.[೬೯] ಬಿಮಲ್‌ ರಾಯ್‌‌ರವರ ಟೂ ಏಕರ್ಸ್‌ ಆಫ್‌ ಲ್ಯಾಂಡ್‌ (1953) ಚಲನಚಿತ್ರವೂ ಸಹ ಡೆ ಸಿಕಾನ ಬೈಸಿಕಲ್‌ ಥೀವ್ಸ್‌ ಚಿತ್ರದಿಂದ ಪ್ರಭಾವಿತಗೊಂಡಿತ್ತು ಮತ್ತು ಅನುಕ್ರಮವಾಗಿ ಭಾರತೀಯ ಹೊಸ ಅಲೆ ಚಿತ್ರಗಳಿಗಾಗಿ ಹಾದಿಯನ್ನು ನಿರ್ಮಿಸಿತು. ಫ್ರೆಂಚ್‌ ಹೊಸ ಅಲೆ ಚಿತ್ರಗಳು ಮತ್ತು ಜಪಾನಿನ ಹೊಸ ಅಲೆ ಚಿತ್ರಗಳ ಸರಿಸುಮಾರು ಕಾಲದಲ್ಲಿಯೇ ಭಾರತೀಯ ಹೊಸ ಅಲೆಯ ಚಿತ್ರಗಳು ಶುರುವಾದವು ಎಂಬುದು ಗಮನಾರ್ಹ.[]

navigation, search ಮೈ ನೇಮ್‌ ಈಸ್‌ ಖಾನ್‌

ನಾಟಕೀಯ ಸ್ವರೂಪದ ಮುದ್ರಿತಚಿತ್ರ ನಿರ್ದೇಶನ: ಕರಣ್‌ ಜೋಹರ್‌ ನಿರ್ಮಾಪಕರು: ಹಿರೂ ಯಶ್‌ ಜೋಹರ್‌ ಗೌರಿ ಖಾನ್‌ ಕಥೆ ಮತ್ತು ಚಿತ್ರಕಥೆ: ಶಿಬಾನಿ ಬತೀಜಾ ಸಂಭಾಷಣೆಗಳು: ಶಿಬಾನಿ ಬತೀಜಾ ನಿರಂಜನ್‌ ಅಯ್ಯಂಗಾರ್‌ ತಾರಾಗಣದಲ್ಲಿ: ಶಾರುಖ್‌ ಖಾನ್‌ ಕಾಜೋಲ್‌ ಸಂಗೀತ: ಶಂಕರ್‌-ಎಹ್ಸಾನ್‌-ಲಾಯ್‌ ಛಾಯಾಗ್ರಹಣ ರವಿ K. ಚಂದ್ರನ್‌ ಸಂಕಲನ: ದೀಪಾ ಭಾಟಿಯಾ ಸ್ಟುಡಿಯೋ ಪರಿಕಲ್ಪನೆ: ಅಬು ಧಾಬಿ ಧರ್ಮಾ ಪ್ರೊಡಕ್ಷನ್ಸ್‌ ರೆಡ್‌ ಚಿಲ್ಲೀಸ್‌ ಎಂಟರ್‌ಟೇನ್‌ಮೆಂಟ್‌ ವಿತರಣೆ: FOX ಸ್ಟಾರ್‌ ಎಂಟರ್‌ಟೇನ್‌ಮೆಂಟ್‌ ಫಾಕ್ಸ್‌ ಸರ್ಚ್‌ಲೈಟ್‌ ಪಿಕ್ಚರ್ಸ್‌ (USA) 20ತ್‌ ಸೆಂಚುರಿ ಫಾಕ್ಸ್‌ (ವಿಶ್ವವ್ಯಾಪಿ ಮಾರಾಟ) ಬಿಡುಗಡೆಯ ದಿನಾಂಕ(ಗಳು) ಫೆಬ್ರುವರಿ, 2010 ಓಡುವ ಅವಧಿ: 161 ನಿಮಿಷಗಳು [1] ದೇಶ: ಭಾರತ ಭಾಷೆ: ಹಿಂದಿ/ಉರ್ದು ಇಂಗ್ಲಿಷ್‌ ಅಂದಾಜುವೆಚ್ಚ: ರೂ. 380 ದಶಲಕ್ಷ[2] US$ 8.18 ದಶಲಕ್ಷ ಖರೀದಿ: ರೂ. 1 ಶತಕೋಟಿ US$ 21.53 ದಶಲಕ್ಷ

ಪ್ರಾದೇಶಿಕ ಉದ್ಯಮಗಳು

ಬದಲಾಯಿಸಿ

ಅಸ್ಸಾಮೀ ಚಿತ್ರರಂಗ

ಬದಲಾಯಿಸಿ

ಅಸ್ಸಾಮೀ ಭಾಷೆ ಚಲನಚಿತ್ರೋದ್ಯಮವು ತನ್ನ ಮೂಲಗಳನ್ನು ರೂಪ್‌ಕೊನ್ವರ್‌ ಜ್ಯೋತಿಪ್ರಸಾದ್‌ ಅಗರ್‌ವಾಲಾ ಎಂಬ ಕ್ರಾಂತಿಕಾರಿ ಕನಸಿಗನ ಕೃತಿಗಳಲ್ಲಿ ಕಂಡುಕೊಳ್ಳುತ್ತದೆ. ಈತ ಓರ್ವ ವಿಶಿಷ್ಟ ಕವಿ, ನಾಟಕಕಾರ, ಸಂಯೋಜಕ ಮತ್ತು ಸ್ವಾತಂತ್ರ್ಯ ಹೋರಾಟಗಾರನೂ ಆಗಿದ್ದ. 1935ರಲ್ಲಿ ಚಿತ್ರಲೇಖಾ ಮೂವಿಟೋನ್ ಎಂಬ ಲಾಂಛನದಡಿಯಲ್ಲಿ ಬಂದ ಜೋಯ್‌ಮತಿ[೭೨] ಎಂಬ ಮೊಟ್ಟಮೊದಲ ಅಸ್ಸಾಮೀ ಚಲನಚಿತ್ರದ ತಯಾರಿಕೆಯಲ್ಲಿ ಆತ ಸಾಧನಭೂತನಾಗಿದ್ದ. 21ನೇ ಶತಮಾನದ ಆರಂಭದಲ್ಲಿ ಬಾಲಿವುಡ್‌-ಶೈಲಿಯ ಅಸ್ಸಾಮೀ ಚಲನಚಿತ್ರಗಳು ತೆರೆಕಂಡವಾದರೂ, ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನೊಡ್ಡುವಷ್ಟು ಈ ಉದ್ಯಮವು ಸಮರ್ಥವಾಗಲಿಲ್ಲ. ಬಾಲಿವುಡ್‌ನಂಥ [೭೩] ದೊಡ್ಡ ಮಟ್ಟದ ಉದ್ಯಮಗಳಿಂದ ಅಸ್ಸಾಮೀ ಚಿತ್ರರಂಗವು ಗಣನೀಯವಾಗಿ ಮಂಕಾಗಿಸಲ್ಪಟ್ಟಿದ್ದೇ ಇದಕ್ಕೆ ಕಾರಣ.

ಬಂಗಾಳಿ ಚಿತ್ರರಂಗ

ಬದಲಾಯಿಸಿ
 
ಸತ್ಯಜಿತ್‌ ರೇ, ಬಂಗಾಳಿ ಚಲನಚಿತ್ರ ತಯಾರಕ.

ಪಶ್ಚಿಮ ಬಂಗಾಳದಲ್ಲಿನ ಟಾಲಿಗಂಜ್‌‌ಬಂಗಾಳಿ ಭಾಷೆಯ ಸಿನಿಮೀಯ ಸಂಪ್ರದಾಯವು ತನ್ನ ಅತ್ಯಂತ ಮೆಚ್ಚುಗೆಗೊಳಗಾದ ಜನರ ಪೈಕಿ ಸತ್ಯಜಿತ್‌ ರೇ, ಋತ್ವಿಕ್‌ ಘಾಟಕ್‌ ಮತ್ತು ಮೃಣಾಲ್‌ ಸೇನ್‌‌‌ರಂಥ ಹೆಸರುವಾಸಿಯಾದ ಚಿತ್ರನಿರ್ಮಾತೃಗಳನ್ನು ಹೊಂದಿದೆ.[೭೪] ರಾಷ್ಟ್ರೀಯ ಮಟ್ಟದಲ್ಲಿ ಗಮನವನ್ನು ಸೆಳೆದ ಇತ್ತೀಚಿನ ಬಂಗಾಳಿ ಚಲನಚಿತ್ರಗಳಲ್ಲಿ ಐಶ್ವರ್ಯಾ ರೈ ನಟಿಸಿರುವ ರಿತುಪರ್ಣೋ ಘೋಷ್‌‌‌ಚೋಕರ್‌ ಬಾಲಿ ಸೇರಿಕೊಂಡಿದೆ.[೭೫] ಬಂಗಾಳಿ ಚಲನಚಿತ್ರ ತಯಾರಿಕೆಯು ಬಾಂಗ್ಲಾದ ವೈಜ್ಞಾನಿಕ ಕಾದಂಬರಿಯ ಚಲನಚಿತ್ರಗಳು ಹಾಗೂ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಚಲನಚಿತ್ರಗಳನ್ನೂ ಒಳಗೊಳ್ಳುತ್ತದೆ.[೭೬] 1993ರಲ್ಲಿ, ಬಂಗಾಳಿ ಚಿತ್ರೋದ್ಯಮದಿಂದ 57 ಚಲನಚಿತ್ರಗಳು ನಿರ್ಮಿಸಲ್ಪಟ್ಟವು.[೭೭]

ಬಂಗಾಳದಲ್ಲಿನ ಚಲನಚಿತ್ರದ ಇತಿಹಾಸವು 1890ರ ದಶಕದಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ಈ ಅವಧಿಯಲ್ಲಿ ಕಲ್ಕತ್ತಾದಲ್ಲಿನ ರಂಗಮಂದಿರಗಳಲ್ಲಿ ಮೊದಲ "ಬಯೋಸ್ಕೋಪ್‌ಗಳನ್ನು" ತೋರಿಸಲಾಗಿತ್ತು. ಒಂದು ದಶಕದ ಒಳಗಾಗಿ, ವಿಕ್ಟೋರಿಯಾದ ಯುಗ ಚಲನಚಿತ್ರದ ಓರ್ವ ಕಟ್ಟಾಳುವೆಂದೇ ಪರಿಗಣಿಸಲ್ಪಟ್ಟಿದ್ದ ಹೀರಾಲಾಲ್‌ ಸೇನ್‌‌ ಎಂಬಾತ ರಾಯಲ್‌ ಬಯೋಸ್ಕೋಪ್‌ ಕಂಪನಿಯನ್ನು ಸ್ಥಾಪಿಸುವ ಮೂಲಕ ಉದ್ಯಮದ ಆರಂಭದ ಮೊದಲ ಬೀಜಗಳನ್ನು ಬಿತ್ತಿದ. ಕಲ್ಕತ್ತಾದ, ಸ್ಟಾರ್‌ ಥಿಯೇಟರ್‌, ಮಿನರ್ವಾ ಥಿಯೇಟರ್‌, ಕ್ಲಾಸಿಕ್‌ ಥಿಯೇಟರ್‌‌ಗಳಲ್ಲಿನ ಅನೇಕ ಜನಪ್ರಿಯ ಪ್ರದರ್ಶನಗಳ ರಂಗಮಂಚದ ನಿರ್ಮಾಣಗಳಿಂದ ದೃಶ್ಯಗಳನ್ನು ನಿರ್ಮಿಸುವ ಮೂಲಕ ಆತ ಈ ವಲಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಸೇನ್‌ನ ಕೃತಿಗಳು ಬಂದ ಒಂದು ಸುದೀರ್ಘ ಅಂತರದ ನಂತರದಲ್ಲಿ, ಧೀರೇಂದ್ರ ನಾಥ ಗಂಗೂಲಿ (ಈತ D.G ಎಂದೇ ಖ್ಯಾತನಾಗಿದ್ದ) ಎಂಬಾತ ಇಂಡೋ ಬ್ರಿಟಿಷ್‌ ಫಿಲ್ಮ್‌ ಕಂ ಎಂಬ ಬಂಗಾಳಿ ಮಾಲೀಕತ್ವದ ಮೊದಲ ನಿರ್ಮಾಣ ಕಂಪನಿಯನ್ನು 1918ರಲ್ಲಿ ಸ್ಥಾಪಿಸಿದ. ಆದಾಗ್ಯೂ, ಬಿಲ್ವಮಂಗಲ್‌ ಎಂಬ ಮೊಟ್ಟಮೊದಲ ಬಂಗಾಳಿ ರೂಪಕ ಚಲನಚಿತ್ರವು ಮದನ್‌ ಥಿಯೇಟರ್‌ ಲಾಂಛನದ ಅಡಿಯಲ್ಲಿ 1919ರಲ್ಲಿ ನಿರ್ಮಾಣಗೊಂಡಿತು. ಬಿಲಾಟ್‌ ಫೆರಾಟ್‌ ಚಿತ್ರವು 1921ರಲ್ಲಿ ಬಂದ IBFCನ ಮೊದಲ ನಿರ್ಮಾಣವಾಗಿತ್ತು. ಮದನ್‌ ಥಿಯೇಟರ್‌‌‌‌‌ನ ನಿರ್ಮಾಣವಾದ ಜಮಾಯಿ ಷಷ್ಠಿ ಚಿತ್ರವು ಬಂಗಾಳಿ ಭಾಷೆಯ ಮೊಟ್ಟಮೊದಲ ವಾಕ್ಚಿತ್ರವಾಗಿತ್ತು.[೭೮]

ಟಾಲಿಗಂಜ್‌ ಎಂಬ ಹೆಸರು "ಹಾಲಿವುಡ್‌"ನೊಂದಿಗೆ ಪ್ರಾಸಬದ್ಧವಾಗಿರುವ ರೀತಿಯಲ್ಲಿ ಇದ್ದುದರಿಂದ ಮತ್ತು ಆ ಸಮಯದಲ್ಲಿ ಟಾಲಿಗಂಜ್‌ ಭಾರತೀಯ ಚಲನಚಿತ್ರೋದ್ಯಮದ ಕೇಂದ್ರಬಿಂದುವಾಗಿದ್ದರಿಂದ, 1932ರಲ್ಲಿ ಬಂಗಾಳಿ ಚಲನಚಿತ್ರೋದ್ಯಮಕ್ಕಾಗಿ "ಟಾಲಿವುಡ್‌" ಎಂಬ ಹೆಸರನ್ನು ರಚಿಸಲಾಯಿತು. ಭಾರತೀಯ ಚಲನಚಿತ್ರೋದ್ಯಮದ ಕೇಂದ್ರಬಿಂದುವಾಗುವ ಮೂಲಕ ಟಾಲಿಗಂಜ್‌ನ್ನು ಮುಂಬಯಿ-ಮೂಲದ ಚಿತ್ರೋದ್ಯಮವು ಹಿಂದಿಕ್ಕಿದ್ದರಿಂದಾಗಿ ಇದು ನಂತರ "ಬಾಲಿವುಡ್‌" ಎಂಬ ಹೆಸರಿಗೆ, ಹಾಗೂ ಇನ್ನೂ ಅನೇಕ ಹಾಲಿವುಡ್‌-ಪ್ರೇರಿತ ಹೆಸರುಗಳಿಗೆ ಪ್ರೇರೇಪಿಸಿತು.[೭೯] 1950ರ ದಶಕದಲ್ಲಿ ಬಂಗಾಳಿ ಚಲನಚಿತ್ರೋದ್ಯಮದಲ್ಲಿ 'ಸಮಾನಾಂತರ ಚಲನಚಿತ್ರ'ದ ಆಂದೋಲನವು ಪ್ರಾರಂಭವಾಯಿತು. ಅಲ್ಲಿಂದೀಚೆಗೆ ಒಂದು ಸುದೀರ್ಘ ಇತಿಹಾಸವು ಅಡ್ಡಹಾಯ್ದುಹೋಗಿ, ಸತ್ಯಜಿತ್‌ ರೇ, ಮೃಣಾಲ್‌ ಸೇನ್‌, ಋತ್ವಿಕ್‌ ಘಾಟಕ್‌‌‌ರಂಥ ಕಟ್ಟಾಳುಗಳು ಮತ್ತು ಇತರರು ಅಂತರರಾಷ್ಟ್ರೀಯ ಮಟ್ಟದ ಮೆಚ್ಚುಗೆಯನ್ನು ಗಳಿಸಿದರು ಹಾಗೂ ಚಲನಚಿತ್ರದ ಇತಿಹಾಸದಲ್ಲಿ ತಮ್ಮ ಹೆಸರುಗಳು ದಾಖಲಿಸಲ್ಪಡಲು ಕಾರಣರಾದರು.

ಭೋಜ್‌ಪುರಿ ಚಿತ್ರರಂಗ

ಬದಲಾಯಿಸಿ

ಬಿಹಾರ ಮತ್ತು ಪೂರ್ವದ ಉತ್ತರ ಪ್ರದೇಶದ ವಲಯಗಳಲ್ಲಿ ವಾಸಿಸುವ ಜನರಿಗೆ ಭೋಜ್‌ಪುರಿ ಭಾಷೆಯ ಚಲನಚಿತ್ರಗಳು ಪ್ರಧಾನವಾಗಿ ಮನರಂಜನೆಯನ್ನು ಒದಗಿಸುತ್ತವೆ. ದೆಹಲಿ ಹಾಗೂ ಮುಂಬಯಿಯಂಥ ಮೆಟ್ರೋನಗರಗಳಿಗೆ ಭೋಜ್‌ಪುರಿ ಭಾಷೆಯನ್ನು ಮಾತನಾಡುವ ವಲಯಗಳಿಂದ ಜನರು ವಲಸೆ ಬಂದಿರುವ ಕಾರಣದಿಂದಾಗಿ ಈ ನಗರಗಳಲ್ಲಿ ಭೋಜ್‌ಪುರಿ ಚಲನಚಿತ್ರಗಳಿಗೂ ಸಹ ಒಂದು ದೊಡ್ಡ ಪ್ರಮಾಣದ ಪ್ರೇಕ್ಷಕವರ್ಗವಿದೆ. ಭಾರತವಷ್ಟೇ ಅಲ್ಲದೇ, ವೆಸ್ಟ್‌ ಇಂಡೀಸ್‌, ಓಷಿಯಾನಿಯಾ, ಮತ್ತು ದಕ್ಷಿಣ ಅಮೆರಿಕಾ[೮೦] ದ ಭೋಜ್‌ಪುರಿ ಭಾಷೆಯ ಬಳಕೆಯಿರುವ ದೇಶಗಳಲ್ಲಿಯೂ ಈ ಚಲನಚಿತ್ರಗಳಿಗೆ ಒಂದು ದೊಡ್ಡ ಮಾರುಕಟ್ಟೆಯಿದೆ. ಗಂಗಾ ಮಯ್ಯಾ ತೂಹೆ ಪಿಯಾರಿ ಚಢಾಯ್ಬೊ ("ಗಂಗಾಮಾತೆಯೇ, ನಾನು ನಿನಗೊಂದು ಹಳದಿ ಸೀರೆಯನ್ನು ಅರ್ಪಿಸುವೆ") ಎಂಬ ಚಲನಚಿತ್ರದೊಂದಿಗೆ ಭೋಜ್‌ಪುರಿ ಭಾಷೆಯ ಚಲನಚಿತ್ರದ ಇತಿಹಾಸವು 1962ರಲ್ಲಿ ಪ್ರಾರಂಭವಾಗುತ್ತದೆ. ಇದನ್ನು ಕುಂದನ್‌ ಕುಮಾರ್ ಎಂಬಾತ ನಿರ್ದೇಶಿಸಿದ್ದ.[೮೧] ನಂತರ ಬಂದ ದಶಕಗಳಾದ್ಯಂತ ಕೇವಲ ರಭಸದ ಕಾರ್ಯಚಟುವಟಿಕೆಯಲ್ಲಿ ಚಿತ್ರಗಳು ನಿರ್ಮಿಸಲ್ಪಟ್ಟವು. ಬಿದೇಸಿಯಾ ("ವಿದೇಶಿ" 1963, S. N. ತ್ರಿಪಾಠಿಯಿಂದ ನಿರ್ದೇಶಿಸಲ್ಪಟ್ಟ ಚಿತ್ರ) ಮತ್ತು ಗಂಗಾ ದಂಥ ("ಗಂಗಾನದಿ" 1965, ಕುಂದನ್‌ ಕುಮಾರ್‌ನಿಂದ ನಿರ್ದೇಶಿಸಲ್ಪಟ್ಟ ಚಿತ್ರ) ಚಲನಚಿತ್ರಗಳು ಲಾಭದಾಯಕವಾಗಿದ್ದವು ಮತ್ತು ಜನಪ್ರಿಯವಾಗಿದ್ದವು. ಆದರೆ ಸಾರ್ವತ್ರಿಕವಾಗಿ ಭೋಜ್‌ಪುರಿ ಚಲನಚಿತ್ರಗಳು 1960ರ ದಶಕ ಮತ್ತು 1970ರ ದಶಕದಲ್ಲಿ ಸಾಮಾನ್ಯವಾಗಿ ನಿರ್ಮಾಣಗೊಳ್ಳಲಿಲ್ಲ.

ಸೈಯ್ಯಾಂ ಹಮಾರ್‌ ("ನನ್ನ ಪ್ರೇಮಿ", ಮೋಹನ್‌ ಪ್ರಸಾಡ್‌ನಿಂದ ನಿರ್ದೇಶಿಸಲ್ಪಟ್ಟ ಚಿತ್ರ‌) ಎಂಬ ಚಿತ್ರವು ಅದ್ಭುತ ಯಶಸ್ಸನ್ನು ಕಾಣುವುದರೊಂದಿಗೆ ಭೋಜ್‌ಪುರಿ ಚಿತ್ರೋದ್ಯಮವು 2001ರಲ್ಲಿ ಒಂದು ಪುನರುಜ್ಜೀವನವನ್ನು ಅನುಭವಕ್ಕೆ ತಂದುಕೊಂಡಿದ್ದೇ ಅಲ್ಲದೇ, ಈ ಚಿತ್ರದ ನಾಯಕನಾದ ರವಿ ಕಿಷನ್‌ನನ್ನು ಸೂಪರ್‌ಸ್ಟಾರ್‌ಗಿರಿಯು ಪಟ್ಟದಲ್ಲಿ ಕೂರಿಸಿತು.[೮೨] ಈ ಚಿತ್ರದ ಯಶಸ್ಸನ್ನು ಗಮನಾರ್ಹವಾದ ಯಶಸ್ಸು ಕಂಡ ಇತರ ಹಲವಾರು ಚಲನಚಿತ್ರಗಳು ಕ್ಷಿಪ್ರವಾಗಿ ಅನುಸರಿಸಿದವು. ಪಂಡಿತ್‌ ಬತಾಯಿ ನಾ ಬಿಯಾಹ್‌ ಕಬ್‌ ಹೋಯಿ (2005ರಲ್ಲಿ ಬಂದ, ಮೋಹನ್‌ ಪ್ರಸಾದ್‌ ನಿರ್ದೇಶಿಸಿದ, "ಅರ್ಚಕರೇ, ನಾನು ಯಾವಾಗ ಮದುವೆಯಾಗುತ್ತೇನೆಂದು ಹೇಳಿ" ಎಂಬ ಚಿತ್ರ) ಮತ್ತು ಸಸುರಾ ಬಡಾ ಪೈಸಾ ವಾಲಾ (2005ರಲ್ಲಿ ಬಂದ "ನನ್ನ ಮಾವ ಶ್ರೀಮಂತ") ಎಂಬ ಚಿತ್ರಗಳು ಈ ಯಶಸ್ವೀ ಚಿತ್ರಗಳಲ್ಲಿ ಸೇರಿದ್ದವು. ಭೋಜ್‌ಪುರಿ ಚಲನಚಿತ್ರೋದ್ಯಮದ ಏಳಿಗೆಯ ಒಂದು ಅಳತೆಗೋಲಿನ ಸ್ವರೂಪದಲ್ಲಿದ್ದ ಈ ಎರಡೂ ಚಿತ್ರಗಳು, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಮುಖ್ಯವಾಹಿನಿಯ ಯಶಸ್ವೀ ಬಾಲಿವುಡ್‌ ಚಿತ್ರಗಳಿಗಿಂತ ಹೆಚ್ಚು ಉತ್ತಮವಾದ ವ್ಯವಹಾರವನ್ನು ಮಾಡಿದವು, ಮತ್ತು ಅತ್ಯಂತ ಹಿಡಿತದ ಖರ್ಚಿನಲ್ಲಿ ತಯಾರಿಸಲಾದ ಈ ಎರಡೂ ಚಲನಚಿತ್ರಗಳು ಅವುಗಳ ನಿರ್ಮಾಣ ವೆಚ್ಚಗಳಿಗಿಂತ[೮೩] ಹತ್ತುಪಟ್ಟು ಹೆಚ್ಚುದುಡ್ಡನ್ನು ಮರಳಿ ಗಳಿಸಿಕೊಟ್ಟವು. ಭಾರತದ ಇತರ ಚಿತ್ರೋದ್ಯಮಗಳಿಗೆ ಹೋಲಿಸಿದಾಗ ಇದು ಒಂದು ಪುಟ್ಟ ಉದ್ಯಮವಾಗಿದೆಯಾದರೂ, ಅದು ನಿರ್ಮಿಸಿದ ಚಲನಚಿತ್ರಗಳ ಕ್ಷಿಪ್ರ ಯಶಸ್ಸು ಭೋಜ್‌ಪುರಿ ಚಿತ್ರರಂಗದ ಗೋಚರತ್ವದಲ್ಲಿನ ನಾಟಕೀಯ ಸ್ವರೂಪದ ಹೆಚ್ಚಳಕ್ಕೆ ಕಾರಣವಾಗಿದೆ, ಮತ್ತು ಈ ಉದ್ಯಮವು ಈಗ ಪ್ರಶಸ್ತಿಗಳ ಕಾರ್ಯಕ್ರಮವೊಂದನ್ನು ಹಾಗೂ ಭೋಜ್‌ಪುರಿ ಸಿಟಿ [೮೪] ಎಂಬ ಒಂದು ವ್ಯಾಪಾರಿ ನಿಯತಕಾಲಿಕವನ್ನು ಬೆಂಬಲಿಸುತ್ತಿದೆ.

ಭೋಜ್‌ಪುರಿ ಚಲನಚಿತ್ರಗಳು ಇಡೀ ವಿಶ್ವದಲ್ಲಿ ಒಂದು ವೈಶಿಷ್ಟ್ಯಪೂರ್ಣವಾದ ಹೆಸರನ್ನು ಹೊಂದಿವೆ. ಬಿಹಾರದ ಮುಖ್ಯಮಂತ್ರಿಯಾದ ಶ್ರೀ. ನಿತಿಶ್‌ ಕುಮಾರ್‌ರವರು ರಾಜ್‌ಗೀರ್‌ನಲ್ಲಿ (ಇದು ಪಾಟ್ನಾದಿಂದ 80 ಕಿಮೀ ದೂರವಿದೆ) ಒಂದು ಚಲನಚಿತ್ರೋದ್ಯಮವನ್ನು ಆರಂಭಿಸುವವರಿದ್ದಾರೆ. ಆ ಚಲನಚಿತ್ರೋದ್ಯಮವು ಬಿಹಾರ ಮತ್ತು ಪೂರ್ವದ UPಗೆ ಸೇರಿದ ಹಲವಾರು ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲಿದೆ. ಅಮಿತಾಬ್‌ ಬಚ್ಚನ್‌, ಅಜಯ್‌ ದೇವ್‌ಗನ್‌, ನಗಮಾ, ಮಿಥುನ್‌ ಚಕ್ರವರ್ತಿ ಇವರೇ ಮೊದಲಾದ ಬಾಲಿವುಡ್‌ ಕಲಾವಿದರು ಹಲವಾರು ಭೋಜ್‌ಪುರಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೂ ಭೋಜ್‌ಪುರಿ ಚಲನಚಿತ್ರೋದ್ಯಮವನ್ನು ತನ್ಮೂಲಕ ಬೆಂಬಲಿಸಿದ್ದಾರೆ Archived 2019-12-14 ವೇಬ್ಯಾಕ್ ಮೆಷಿನ್ ನಲ್ಲಿ..........

ಬಾಲಿವುಡ್‌

ಬದಲಾಯಿಸಿ
ಚಿತ್ರ:Awaara.jpg
ಆವಾರಾ (1951) ಚಿತ್ರದಲ್ಲಿ ನಗೀಸ್‌ ಮತ್ತು ರಾಜ್‌ ಕಪೂರ್‌; ಈ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣ ಕೂಡಾ ಕಪೂರ್‌ನದ್ದೇ.

ಬಾಲಿವುಡ್‌ ಎಂಬ ಹೆಸರಿನಿಂದಲೂ ಗುರುತಿಸಲ್ಪಡುವ ಹಿಂದಿ ಭಾಷೆಯ ಚಲನಚಿತ್ರೋದ್ಯಮವು ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ಹಾಗೂ ಅತ್ಯಂತ ಜನಪ್ರಿಯ ಶಾಖೆಯಾಗಿದೆ.[೮೫] "ಬಾಲಿವುಡ್‌" ಎಂಬ ಪದವನ್ನು ಕೆಲವೊಮ್ಮೆ ಭಾರತೀಯ ಚಿತ್ರರಂಗಕ್ಕೆ ಒಟ್ಟಾರೆಯಾಗಿ ತಪ್ಪಾದ ರೀತಿಯಲ್ಲಿ ಅನ್ವಯಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ, ದಕ್ಷಿಣ ಏಷ್ಯಾದ ಆಚೆಗೆ ಹಾಗೂ ದಕ್ಷಿಣ ಏಷ್ಯನ್ನರ ಚದುರಿಹೋದ ಜನರಗುಂಪಿನ ಆಚೆಗೆ ಈ ರೀತಿಯ ಕಲ್ಪನೆಯಿದೆ.[೮೬] ಅಚ್ಚುತ್‌ ಕನ್ಯಾ (1936) ಮತ್ತು ಸುಜಾತಾ ದಂಥ (1959) ಚಲನಚಿತ್ರಗಳಲ್ಲಿ ಜಾತಿ ಹಾಗೂ ಸಂಸ್ಕೃತಿಯ ಸಮಸ್ಯೆಗಳನ್ನು ಬಾಲಿವುಡ್‌ ಚಿತ್ರಗಳು ಆರಂಭದಲ್ಲಿ ಒಳಹೊಕ್ಕು ವಿಚಾರಮಾಡಿವೆ.[೮೭] ರಾಜ್‌ ಕಪೂರ್‌‌ಆವಾರಾ ಚಿತ್ರದೊಂದಿಗೆ ಬಾಲಿವುಡ್‌ ಚಲನಚಿತ್ರೋದ್ಯಮಕ್ಕೆ ಅಂತರರಾಷ್ಟ್ರೀಯ ಗೋಚರತ್ವ ದಕ್ಕಿತು.[೮೮] 1991ರಲ್ಲಿ ಸುಮಾರು 215 ಚಲನಚಿತ್ರಗಳು ತೆರೆಕಾಣುವುದರೊಂದಿಗೆ 1990ರ ದಶಕದ ಅವಧಿಯಲ್ಲಿ ಬಾಲಿವುಡ್‌ ಬೆಳೆಯಿತು.[೧೧] ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೇ ಚಿತ್ರದೊಂದಿಗೆ, ಪಾಶ್ಚಿಮಾತ್ಯ ಪ್ರಪಂಚಲ್ಲೂ ಬಾಲಿವುಡ್‌ ತನ್ನ ವ್ಯಾಪಾರೀ ಅಸ್ತಿತ್ವವನ್ನು ದಾಖಲಿಸಿತು.[೧೧]

1995ರಲ್ಲಿ ಭಾರತೀಯ ಆರ್ಥಿಕತೆಯು ಊರ್ಜಿತಗೊಳ್ಳಬಲ್ಲ ವಾರ್ಷಿಕ ಬೆಳವಣಿಗೆಯನ್ನು ತೋರಿಸಲು ಶುರುಮಾಡಿತು, ಮತ್ತು ಒಂದು ವ್ಯಾಪಾರೀ ಉದ್ಯಮವಾಗಿ ಬಾಲಿವುಡ್‌ ವಾರ್ಷಿಕವಾಗಿ 15%ನಷ್ಟು ಪ್ರಮಾಣದಲ್ಲಿ ಬೆಳೆಯಿತು.[೧೧] ವ್ಯಾಪಾರೀ ಆಕರ್ಷಣೆಯಲ್ಲಿ ಬೆಳವಣಿಗೆ ಕಾಣುವುದರೊಂದಿಗೆ ಶಾರುಖ್‌ ಖಾನ್‌, ಆಮೀರ್‌ ಖಾನ್‌ ಮತ್ತು ಹೃತಿಕ್‌ ರೋಷನ್‌‌ರಂಥ ಚಿರಪರಿಚಿತ ಬಾಲಿವುಡ್‌ ತಾರೆಯರ ಗಳಿಕೆಗಳು 2010ರ ವರ್ಷದ ಹೊತ್ತಿಗೆ ಪ್ರತಿ ಚಲನಚಿತ್ರಕ್ಕೆ 150 ದಶಲಕ್ಷ ರೂಪಾಯಿಗಳವರೆಗೆ ಮುಟ್ಟಿದವು.[೧೨] ಮಾಧುರಿ ದೀಕ್ಷಿತ್‌‌ಳಂಥ ಮಹಿಳಾ ತಾರೆಯರೂ ಚಲನಚಿತ್ರವೊಂದಕ್ಕೆ 12.5 ದಶಲಕ್ಷ ರೂಪಾಯಿಗಳನ್ನು ಗಳಿಸಿದರು.[೧೧] ಅನೇಕ ಕಲಾವಿದರು ಏಕಕಾಲಕ್ಕೆ 3–4 ಚಲನಚಿತ್ರಗಳಲ್ಲಿ ಅಭಿನಯಿಸುವ ಒಪ್ಪಂದಗಳಿಗೆ ಸಹಿಹಾಕಿದರು.[೧೨] ಇಂಡಸ್ಟ್ರಿಯಲ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಆಫ್‌ ಇಂಡಿಯಾದಂಥ ಸಂಸ್ಥೆಗಳು ಬಾಲಿವುಡ್‌ ಚಲನಚಿತ್ರಗಳಿಗೆ ಹಣಕಾಸಿನ ನೆರವು ನೀಡಲು ಮುಂದೆಬಂದವು.[೧೨] ಫಿಲ್ಮ್‌ಫೇರ್‌ ,ಸ್ಟಾರ್‌ಡಸ್ಟ್‌ , ಸಿನಿಬ್ಲಿಟ್ಜ್‌ ಇವೇ ಮೊದಲಾದ ಅನೇಕ ನಿಯತಕಾಲಿಕಗಳು ಜನಪ್ರಿಯವಾದವು.[೮೯]

ಗುಜರಾತಿ ಚಿತ್ರರಂಗ

ಬದಲಾಯಿಸಿ

ಗುಜರಾತ್‌ನ ಈ ಪ್ರಾದೇಶಿಕ ಚಿತ್ರೋದ್ಯಮವು 1922ರಲ್ಲಿ ತನ್ನ ಪಯಣವನ್ನು ಆರಂಭಿಸಿತು. ಅಲ್ಲಿಂದೀಚೆಗೆ ಗುಜರಾತಿ ಚಲನಚಿತ್ರಗಳು ಭಾರತೀಯ ಚಿತ್ರರಂಗಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿವೆ. ಭಾರತದಲ್ಲಿನ ಪ್ರಾದೇಶಿಕ ಚಿತ್ರೋದ್ಯಮಗಳ ಪೈಕಿ ಗುಜರಾತಿ ಚಿತ್ರರಂಗವು ಜನಪ್ರಿಯತೆಯನ್ನು ಗಳಿಸಿದೆ. ಪುರಾಣದಿಂದ ಇತಿಹಾಸದವರೆಗಿನ ಹಾಗೂ ಸಾಮಾಜಿಕ ವಿಷಯದಿಂದ ರಾಜಕೀಯ ವಿಷಯದವರೆಗಿನ ಚಿತ್ರಕಥೆಗಳನ್ನು ಗುಜರಾತಿ ಚಿತ್ರರಂಗವು ಯಾವಾಗಲೂ ಆಧರಿಸಿದೆ. ಗುಜರಾತಿ ಚಿತ್ರರಂಗವು ತಾನು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಭಾರತೀಯ ಸಮಾಜಕ್ಕೆ ಸೇರಿದ ಹಲವಾರು ಕಥೆಗಳು ಹಾಗೂ ಸಮಸ್ಯೆಗಳೊಂದಿಗೆ ಪ್ರಯೋಗವನ್ನು ನಡೆಸುತ್ತಲೇ ಬಂದಿದೆ. ಇಷ್ಟೇ ಅಲ್ಲದೇ, ಭಾರತೀಯ ಚಿತ್ರೋದ್ಯಮಕ್ಕೆ ಹಲವಾರು ಗುಜರಾತಿ ಕಲಾವಿದರು ಆಕರ್ಷಣೆಯನ್ನು ತಂದುಕೊಟ್ಟಿದ್ದು, ತನ್ಮೂಲಕ ಬಾಲಿವುಡ್‌ಗೆ ಗುಜರಾತ್‌ನ ವತಿಯಿಂದ ಸೊಗಸಾದ ಕೊಡುಗೆ ಸಿಕ್ಕಂತಾಗಿದೆ.

ಗುಜರಾತಿ ಚಲನಚಿತ್ರಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ಚಿತ್ರಕಥೆಗಳು ಹಾಗೂ ಕಥೆಗಳು ಸ್ವಾಭಾವಿಕವಾಗಿ ಮಾನವಿಕ ಅಥವಾ ದಯಾಪರ ಸ್ವರೂಪವನ್ನು ಉಳ್ಳದ್ದಾಗಿವೆ. ಮಾನವನ ಮಹತ್ವಾಕಾಂಕ್ಷೆಗಳೊಂದಿಗಿನ ಸಂಬಂಧ ಹಾಗೂ ಕುಟುಂಬವನ್ನು ಉದ್ದೇಶಿಸಿದ ವಿಷಯಗಳನ್ನು ಅವು ಒಳಗೊಂಡಿದ್ದು, ಭಾರತೀಯ ಕುಟುಂಬ ಸಂಸ್ಕೃತಿಯ ಕುರಿತಾದ ವಿಷಯವನ್ನು ಕೈಗೆತ್ತಿಕೊಳ್ಳುತ್ತವೆ. ಹೀಗಾಗಿ, ಈ ಗುಜರಾತಿ ಚಲನಚಿತ್ರಗಳು ಮೂಲಭೂತವಾದ ಮಾನವೀಯತೆಯಿಂದ ವಿಮುಖವಾಗುವ ಯಾವುದೇ ಸ್ಥಿತಿಯು ಉದ್ಭವವಾಗುವುದಿಲ್ಲ. 'ನರಸಿನ್ಹ ಮೆಹ್ತಾ' ಎಂಬುದು 1932ರಲ್ಲಿ ಬಿಡುಗಡೆಯಾದ ಮೊದಲ ಗುಜರಾತಿ ಚಲನಚಿತ್ರವಾಗಿದ್ದು, ಇದನ್ನು ನಾನುಭಾಯಿ ವಕೀಲ್ ನಿರ್ದೇಶಿಸಿದರು. ಮೋಹನ್‌ಲಾಲಾ, ಮಾರುತಿರಾವ್‌, ಮಾಸ್ಟರ್‌ ಮನ್‌ಹರ್‌, ಮತ್ತು ಕುಮಾರಿ ಮೆಹ್ತಾಬ್‌ ಇವರೇ ಮೊದಲಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದರು. ಇದು 'ಸಂತ ಚಲನಚಿತ್ರ'ದ ಶೈಲಿಯಲ್ಲಿತ್ತು ಹಾಗೂ ಅನೇಕ ಶತಮಾನಗಳ ನಂತರ ಮಹಾತ್ಮ ಗಾಂಧಿಯವರಿಂದ ಅನುಸರಿಸಲ್ಪಟ್ಟ ಒಂದು ಮತ-ನಂಬಿಕೆಯನ್ನು ಆಚರಿಸಿದ ನರಸಿನ್ಹ ಮೆಹ್ತಾ ಎಂಬ ಸಂತನ ಜೀವನವನ್ನು ಕುರಿತಾದ ಚಿತ್ರವಾಗಿತ್ತು. ಯಾವುದೇ ಪವಾಡಗಳ ಚಿತ್ರಣವನ್ನು ಇದು ಒಳಗೊಂಡಿರಲಿಲ್ಲವಾದ್ದರಿಂದ, ಇದೊಂದು ಅಪ್ರತಿಮ ಚಿತ್ರವಾಗಿತ್ತು 1935ರಲ್ಲಿ, ಹೋಮಿ ಮಾಸ್ಟರ್ ಎಂಬಾತನಿಂದ ನಿರ್ದೇಶಿಸಲ್ಪಟ್ಟ 'ಘರ್‌ ಜಮಾಯಿ' ಎಂಬ ಮತ್ತೊಂದು ಸಾಮಾಜಿಕ ಚಿತ್ರವು ಬಿಡುಗಡೆಯಾಯಿತು. ಈ ಚಲನಚಿತ್ರದಲ್ಲಿ ಹೀರಾ, ಜಮ್ನಾ, ಬೇಬಿ ನೂರ್‌ಜೆಹಾನ್‌, ಅಮೂ, ಆಲಿಮಿಯಾ, ಜಮ್ಷೆಡ್‌ಜಿ, ಮತ್ತು ಗುಲಾಮ್‌ ರಸೂಲ್‌ ಇವರೇ ಮೊದಲಾದ ಕಲಾವಿದರು ಅಭಿನಯಿಸಿದ್ದರು. ಓರ್ವ 'ಮನೆವಾಸಿ ಮನೆಯಳಿಯ' (ಘರ್‌ ಜಮಾಯಿ) ಹಾಗೂ ಆತನ ಹುಚ್ಚಾಟಗಳು ಅಥವಾ ಸ್ವೇಚ್ಛಾವರ್ತನೆಗಳನ್ನಷ್ಟೇ ಅಲ್ಲದೇ, ಮಹಿಳೆಯರ ಸ್ವಾತಂತ್ರ್ಯದೆಡೆಗಿನ ಆತನ ಸಮಸ್ಯಾತ್ಮಕ ನಡವಳಿಕೆಯನ್ನು ಈ ಚಿತ್ರವು ಒಳಗೊಂಡಿತ್ತು. ಇದೊಂದು ಹಾಸ್ಯವನ್ನು ಗುರಿಯಾಗಿರಿಸಿಕೊಂಡ ಚಿತ್ರವಾಗಿತ್ತು ಹಾಗೂ ಚಿತ್ರೋದ್ಯಮದಲ್ಲಿ ಇದು ಒಂದು ಪ್ರಮುಖ ಯಶಸ್ಸನ್ನು ದಾಖಲಿಸಿತು.

ಈ ರೀತಿಯಲ್ಲಿ ಗುಜರಾತಿ ಚಲನಚಿತ್ರಗಳು ಇತರ ಹಲವಾರು ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಸಮಸ್ಯೆಗಳೊಂದಿಗೆ ಮುಂದುವರಿದವು. 1948, 1950, 1968, 1971ರ ವರ್ಷಗಳು ಒಂದು ವಿಸ್ತೃತ ಆಯಾಮದ ಬಗೆಯೊಂದಿಗೆ ಮುಂದುವರಿದವು. ಚತುರ್ಭುಜ್‌ ದೋಷಿಯಿಂದ ನಿರ್ದೇಶಿಸಲ್ಪಟ್ಟ ಕಾರಿಯಾವಾರ್, ರಾಮಚಂದ್ರ ಠಾಕೂರ್‌ನಿಂದ ನಿರ್ದೇಶಿಸಲ್ಪಟ್ಟ ವಡಿಲೋನಾ ವಾಂಕೆ, ರತಿಭಾಯಿ ಪುನಾತಾರ್‌ಯಿಂದ ನಿರ್ದೇಶಿಸಲ್ಪಟ್ಟ ಗದಾನೊ ಬೆಲ್‌ ಹಾಗೂ ವಲ್ಲಭ್‌ ಚೋಸ್ಕಿಯಿಂದ ನಿರ್ದೇಶಿಸಲ್ಪಟ್ಟ ಲೀಲುದಿ ಧರ್ತಿ ಇವೇ ಮೊದಲಾದ ಗುಜರಾತಿ ಚಲನಚಿತ್ರಗಳು ಉದ್ಯಮಕ್ಕೆ ಅಗಾಧವಾದ ಯಶಸ್ಸನ್ನು ತಂದುಕೊಟ್ಟವು. ಆಧುನಿಕೀಕರಣದ ಸಮಸ್ಯೆಗಳು ಹಲವಾರು ಚಲನಚಿತ್ರಗಳ ಆಧಾರಸ್ವರೂಪವಾಗಿರುವ ಕಾಳಜಿಗಳಾಗಿವೆ. ಗದಾನೊ ಬೆಲ್‌ನಂಥ ಚಲನಚಿತ್ರಗಳು ಒಂದು ಬಲವಾದ ಯಥಾರ್ಥತೆ ಮತ್ತು ಸುಧಾರಣಾ ವಾದವನ್ನು ಹೊಂದಿದ್ದವು.

ಗುಜರಾತ್‌ನಲ್ಲಿನ ಚಿತ್ರೋದ್ಯಮವು ಹಲವಾರು ಸಮಸ್ಯೆಗಳೊಂದಿಗೆ ಪ್ರಯೋಗಗಳನ್ನು ನಡೆಸಿವೆ. ಲೀಲುದಿ ಧರ್ತಿಯಂಥ ಗುಜರಾತಿ ಚಲನಚಿತ್ರಗಳು ಗ್ರಾಮೀಣ ಪ್ರಪಂಚವನ್ನು ಅದರ ಸಮೃದ್ಧಿಯಾದ ವಾಡಿಕೆಯ ಆಚರಣೆಗಳೊಂದಿಗೆ ಪ್ರತಿಬಿಂಬಿಸುತ್ತವೆ. 1975ರಲ್ಲಿ ಬಂದ ತನಾರಿರಿ ಎಂಬ ಚಿತ್ರವು ಚಂದ್ರಕಾಂತ್‌ ಸಂಗಾನಿಯಿಂದ ನಿರ್ದೇಶಿಸಲ್ಪಟ್ಟಿದ್ದು, ಸಮರಸವಾಗಿ ಆಡಳಿತ ನಡೆಸಿಕೊಂಡು ಬರುತ್ತಿದ್ದ ಓರ್ವ ದಯಾಪೂರ್ಣ ಆಡಳಿತಗಾರನಂತೆ ಸಾಮಾನ್ಯವಾಗಿ ಚಿತ್ರಿಸಲ್ಪಟ್ಟಿರುವ ಅಕ್ಬರ್‌ನ ಕುರಿತಾಗಿ ಗೊತ್ತಿಲ್ಲದ ಕೆಲವೊಂದು ಮಗ್ಗುಲುಗಳನ್ನು ಈ ಚಿತ್ರವು ಎತ್ತಿತೋರಿಸುತ್ತದೆ. ಗಿರೀಶ್‌ ಮನುಕಾಂತ್‌ನಿಂದ ನಿರ್ದೇಶಿಸಲ್ಪಟ್ಟ ಸೋನ್‌ಬೈನಿ ಚುಂದಾದಿಯು ಗುಜರಾತಿ ಚಿತ್ರರಂಗದ ಮೊಟ್ಟಮೊದಲ ಸಿನೆಮಾಸ್ಕೋಪ್‌ ಚಿತ್ರವಾಗಿದ್ದು, 1976ರಲ್ಲಿ ಇದು ಬಿಡುಗಡೆಯಾಯಿತು. ಈ ಚಿತ್ರಗಳ ಜೊತೆಗೆ, 1980ರಲ್ಲಿ ಬಿಡುಗಡೆಯಾದ ಭವಾನಿ ಭವಾಯಿ ಚಿತ್ರವನ್ನು ಕೇತನ್‌ ಮೆಹ್ತಾ ನಿರ್ದೇಶಿಸಿದ್ದ. ಕಲಾವಿದರ ಶ್ರೇಷ್ಠಮಟ್ಟದ ಅಭಿನಯಗಳು, ಅತ್ಯುತ್ತಮವಾದ ಛಾಯಾಗ್ರಹಣವನ್ನು ಒಳಗೊಂಡು ಹೆಮ್ಮೆಪಡುತ್ತಿದ್ದ ಈ ಚಿತ್ರವು ಎರಡು ಪ್ರಶಸ್ತಿಗಳನ್ನು ಗೆದ್ದಿತು. ಅವೆಂದರೆ, ರಾಷ್ಟ್ರೀಯ ಭಾವೈಕ್ಯತೆಗೆ ಸಂಬಂಧಿಸಿದ ಅತ್ಯುತ್ತಮ ರೂಪಕ ಚಲನಚಿತ್ರಕ್ಕಾಗಿರುವ ರಾಷ್ಟ್ರೀಯ ಪ್ರಶಸ್ತಿ, ಹಾಗೂ ಫ್ರಾನ್ಸ್‌ನಲ್ಲಿನ ನಾಂಟೆಸ್‌ ಉತ್ಸವದಲ್ಲಿನ ಮತ್ತೊಂದು ಪ್ರಶಸ್ತಿ. 1992ರಲ್ಲಿ, ಸಂಜೀವ್‌ ಷಾನಿಂದ ನಿರ್ದೇಶಿಸಲ್ಪಟ್ಟ ಹುನ್‌ ಹುನ್ಷಿ ಹುನ್ಷಿಲಾಲ್‌ ಚಿತ್ರವು ನವ್ಯೋತ್ತರ ಚಿತ್ರವಾಗಿ ಗುರುತಿಸಲ್ಪಟ್ಟಿದೆ.

ಚಲನಚಿತ್ರಕ್ಕೆ ಸಂಬಂಧಿಸಿದ ಪ್ರಸಿದ್ಧ ಕಲಾವಿದರ ಮನೋಜ್ಞ ಅಭಿನಯಗಳೊಂದಿಗೆ ಗುಜರಾತಿ ಚಲನಚಿತ್ರಗಳು ಮತ್ತಷ್ಟು ಸಮೃದ್ಧಿಯನ್ನು ಪಡೆದವು. ಅನುಪಮಾ, ಉಪೇಂದ್ರ ತ್ರಿವೇದಿ, ಅರವಿಂದ್‌ ತ್ರಿವೇದಿ, ರಮೇಶ್ ಮೆಹ್ತಾ ಮತ್ತು ವೆಲ್‌ಜಿಭಾಯಿ ಗಜ್ಜರ್‌, ದಿಲೀಪ್‌ ಪಟೇಲ್‌, ರಂಜಿತ್‌ರಾಜ್‌, ಸೋಹಿಲ್‌ ವಿರಾನಿ, ನಾರಾಯಣ್‌ ರಾಜ್‌ಗೋರ್‌, ಪ್ರೇಂಶಂಕರ್‌ ಭಟ್‌, ಜಯ್‌ ಪಟೇಲ್‌, ಅಶ್ವಿನ್‌ ಪಟೇಲ್‌, ಗಿರಿಜಾ ಮಿತ್ರಾ, ಅಂಜನಾ, ಮನಮೋಹನ್‌ ದೇಸಾಯಿ, ಸಂಜಯ್‌ ಗಢವಿ, ಕಲ್ಯಾಣ್‌ಜಿ ಆನಂದ್‌ಜಿ, ದೀಪಿಕಾ ಚಿಖಾಲಿಯಾ, ಬಿಂದು ದೇಸಾಯಿ, ರೇಣುಕಾ ಷಹಾನೆ ಹಾಗೂ ಪ್ರೀತಿ ಪಾರೇಖ್‌ ಇವರೇ ಮೊದಲಾದವರು ಪ್ರಸಿದ್ಧ ಕಲಾವಿದರಾಗಿದ್ದು, ಗುಜರಾತಿ ಚಿತ್ರೋದ್ಯಮಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿದ್ದಾರೆ.

ಕನ್ನಡ ಚಿತ್ರರಂಗ

ಬದಲಾಯಿಸಿ

ಕನ್ನಡ ಚಲನಚಿತ್ರೋದ್ಯಮವು ಸ್ಯಾಂಡಲ್‌ವುಡ್‌ ಎಂದೂ ಚಿರಪರಿಚಿತವಾಗಿದ್ದು, ಇದು ಬೆಂಗಳೂರಿನಲ್ಲಿ ನೆಲೆಗೊಂಡಿದೆ, ಹಾಗೂ ಕರ್ನಾಟಕ ರಾಜ್ಯದ ಜನಸಂಖ್ಯೆಯ ಬಹುಭಾಗಕ್ಕೆ ಮನರಂಜನೆಯನ್ನು ಒದಗಿಸುತ್ತದೆ.

ಕನ್ನಡ ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಡಾ. ರಾಜ್‌ಕುಮಾರ್‌ ಒಂದು ಮಾದರಿ ರೂಪ ಹಾಗೂ ಆರಾಧ್ಯದೈವವಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಬಹುಮುಖದ ಪಾತ್ರಗಳನ್ನು ನಿರ್ವಹಿಸಿದ ಅವರು ಚಲನಚಿತ್ರಗಳು ಮತ್ತು ಗೀತಸಂಪುಟಗಳಿಗಾಗಿ[ಸೂಕ್ತ ಉಲ್ಲೇಖನ ಬೇಕು] ಸುಮಾರು 3000 ಹಾಡುಗಳನ್ನು ಹಾಡಿದರು. ಕನ್ನಡ ಚಿತ್ರರಂಗದ ಕೆಲವೊಂದು ಗಮನಾರ್ಹ ನಿರ್ದೇಶಕರಲ್ಲಿ. ಗಿರೀಶ್ ಕಾಸರವಳ್ಳಿ, ಪುಟ್ಟಣ್ಣ ಕಣಗಾಲ್‌, G.V.ಅಯ್ಯರ್‌, ಗಿರೀಶ್‌ ಕಾರ್ನಾಡ್‌, T.S. ನಾಗಾಭರಣ ಮೊದಲಾದವರು ಸೇರಿದ್ದಾರೆ. ಇತರ ಜನಪ್ರಿಯ ಕಲಾವಿದರಲ್ಲಿ ವಿಷ್ಣುವರ್ಧನ್‌, ಅಂಬರೀಷ್‌, ರವಿಚಂದ್ರನ್‌, ರಮೇಶ್‌, ಅನಂತ್‌ ನಾಗ್‌, ಶಂಕರ್‌ ನಾಗ್‌, ಪ್ರಭಾಕರ್‌, ಉಪೇಂದ್ರ, ಸುದೀಪ್‌, ದರ್ಶನ್‌, ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಕಲ್ಪನಾ, ಭಾರತಿ, ಜಯಂತಿ, ಪಂಡರೀಬಾಯಿ, B ಸರೋಜಾದೇವಿ, ಸುಧಾರಾಣಿ, ಮಾಲಾಶ್ರೀ, ತಾರಾ, ಉಮಾಶ್ರೀ ಹಾಗೂ ರಮ್ಯಾ ಸೇರಿದ್ದಾರೆ.

G.K. ವೆಂಕಟೇಶ್‌, ವಿಜಯ ಭಾಸ್ಕರ್‌, TG ಲಿಂಗಪ್ಪ, ರಾಜನ್‌-ನಾಗೇಂದ್ರ, ಹಂಸಲೇಖಾ ಮತ್ತು ಗುರುಕಿರಣ್‌ ಮೊದಲಾದವರು ಪ್ರಸಿದ್ಧ ಸಂಗೀತ ನಿರ್ದೇಶಕರಾಗಿದ್ದಾರೆ.

ಬಂಗಾಳಿ ಚಲನಚಿತ್ರಗಳು ಹಾಗೂ ಮಲಯಾಳಂ ಚಲನಚಿತ್ರಗಳ ಜೊತೆಜೊತೆಗೆ ಕನ್ನಡ ಚಿತ್ರರಂಗವು ಭಾರತದ ಸಮಾನಾಂತರ ಚಲನಚಿತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಈ ಶೈಲಿಯಲ್ಲಿರುವ ಕೆಲವೊಂದು ಪ್ರಭಾವಶಾಲಿ ಚಲನಚಿತ್ರಗಳೆಂದರೆ: ಸಂಸ್ಕಾರ (U R ಅನಂತಮೂರ್ತಿಯವರ ಕಾದಂಬರಿಯೊಂದನ್ನು ಆಧರಿಸಿದ್ದು), B. V. ಕಾರಂತರಿಂದ ನಿರ್ದೇಶಿಸಲ್ಪಟ್ಟ ಚೋಮನ ದುಡಿ , ತಬರನ ಕಥೆ . ಸಂಸ್ಕಾರ, ವಂಶವೃಕ್ಷ, ಫಣಿಯಮ್ಮ, ಕಾಡು ಕುದುರೆ, ಹಂಸಗೀತೆ, ಚೋಮನ ದುಡಿ, ಆಕ್ಸಿಡೆಂಟ್‌, ಘಟಶ್ರಾದ್ಧ, ಆಕ್ರಮಣ, ಮೂರು ದಾರಿಗಳು,ತಬರನ ಕಥೆ, ಬಣ್ಣದ ವೇಷ, ಮನೆ, ಕ್ರೌರ್ಯ, ತಾಯಿ ಸಾಹೇಬ, ದ್ವೀಪ ಮೊದಲಾದವು ಮೆಚ್ಚುಗೆ ಪಡೆದ ಇತರ ಕಲಾತ್ಮಕ ಚಿತ್ರಗಳಾಗಿವೆ.

ಮಲಯಾಳಂ ಚಿತ್ರರಂಗ

ಬದಲಾಯಿಸಿ
 
ಅಡೂರ್‌ ಗೋಪಾಲಕೃಷ್ಣನ್‌, ಮಲಯಾಳಂ ಚಲನಚಿತ್ರ ತಯಾರಕ.

ದಕ್ಷಿಣ ಭಾಗದ ಕೇರಳ ರಾಜ್ಯದಲ್ಲಿ ನೆಲೆಗೊಂಡಿರುವ ಮಲಯಾಳಂ ಚಲನಚಿತ್ರೋದ್ಯಮವು, ಚಿಂತನೆಗೆ-ಹಚ್ಚುವ ಸಾಮಾಜಿಕ ಸಮಸ್ಯೆಗಳನ್ನು ಅಭಿವ್ಯಕ್ತಿಸುವ ಮೂಲಕ ಸಮಾನಾಂತರ ಚಲನಚಿತ್ರಗಳು ಹಾಗೂ ಮುಖ್ಯವಾಹಿನಿಯ ಚಲನಚಿತ್ರಗಳ ನಡುವಿನ ಅಂತರವನ್ನು ತುಂಬುವ ಚಲನಚಿತ್ರಗಳಿಗಾಗಿ ಹೆಸರುವಾಸಿಯಾಗಿದೆ. ಮಲಯಾಳಂ ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ತಯಾರಕರಲ್ಲಿ ಅಡೂರ್‌ ಗೋಪಾಲಕೃಷ್ಣನ್‌, ಷಾಜಿ N. ಕರುಣ್‌, G. ಅರವಿಂದನ್‌, ಪದ್ಮರಾಜನ್‌, ಸತ್ಯನ್‌ ಅಂತಿಕಾಡ್‌, ಪ್ರಿಯದರ್ಶನ್‌ ಮತ್ತು ಶ್ರೀನಿವಾಸನ್‌‌ ಮೊದಲಾದವರು ಸೇರಿದ್ದಾರೆ.

1928ರಲ್ಲಿ ಬಿಡುಗಡೆಯಾದ, J. C. ಡೇನಿಯೆಲ್‌ನಿಂದ ನಿರ್ದೇಶಿಸಲ್ಪಟ್ಟ ವಿಗಥಕುಮಾರನ್ ಎಂಬ ಒಂದು ಮೂಕಿ ಚಿತ್ರವು ಮಲಯಾಳಂ ಚಿತ್ರರಂಗದ ಆರಂಭವನ್ನು ಗುರುತುಮಾಡಿತು. 1938ರಲ್ಲಿ ಬಿಡುಗಡೆಯಾದ ಬಾಲನ್‌ ಎಂಬ ಚಿತ್ರವು, ಮಲಯಾಳಂನ ಮೊದಲ "ವಾಕ್ಚಿತ್ರ"ವಾಗಿತ್ತು. 1947ರಲ್ಲಿ ಉದಯ ಎಂಬ ಮೊದಲ ಪ್ರಮುಖ ಚಲನಚಿತ್ರ ಸ್ಟುಡಿಯೋ ಕೇರಳದಲ್ಲಿ ಸ್ಥಾಪನೆಗೊಳ್ಳುವವರೆಗೂ, ಮಲಯಾಳಂ ಚಲನಚಿತ್ರಗಳು ಮುಖ್ಯವಾಗಿ ತಮಿಳು ನಿರ್ಮಾಪಕರಿಂದ ನಿರ್ಮಿಸಲ್ಪಡುತ್ತಿದ್ದವು. 1954ರಲ್ಲಿ ಬಿಡುಗಡೆಯಾದ ನೀಲಕ್ಕುಯಿಲ್‌ ಚಲನಚಿತ್ರವು ರಾಷ್ಟ್ರಪತಿಗಳ ರಜತ ಪದಕವನ್ನು ಗೆಲ್ಲುವ ಮೂಲಕ ರಾಷ್ಟ್ರೀಯ ಆಸಕ್ತಿಯನ್ನು ಹಿಡಿದಿಟ್ಟುಕೊಂಡಿತು. ಚಿರಪರಿಚಿತ ಮಲಯಾಳಂ ಕಾದಂಬರಿಕಾರನಾದ ಉರೂಬ್‌‌ನ ಚಿತ್ರಕಥೆ ಹಾಗೂ P. ಭಾಸ್ಕರನ್‌‌ ಹಾಗೂ ರಾಮು ಕಾರಿಯಟ್‌‌‌ರ ನಿರ್ದೇಶನವನ್ನು ಹೊಂದಿದ್ದ ಈ ಚಿತ್ರವು ಮೊಟ್ಟಮೊದಲ ಆಧಾರಪೂರ್ವಕ ಮಲಯಾಳಿ ಚಲನಚಿತ್ರ[೯೦] ಎಂಬುದಾಗಿ ಅನೇಕವೇಳೆ ಪರಿಗಣಿಸಲ್ಪಟ್ಟಿದೆ. ತಕಳಿ ಶಿವಶಂಕರ ಪಿಳ್ಳೈಯವರ ಕಥೆಯೊಂದನ್ನು ಆಧರಿಸಿದ ಹಾಗೂ ರಾಮು ಕಾರಿಯಟ್‌ರಿಂದ ನಿರ್ದೇಶಿಸಲ್ಪಟ್ಟ ಚೆಮ್ಮೀನ್‌ (1965) ಎಂಬ ಚಿತ್ರವು ಅಗಾಧವಾಗಿ ಜನಪ್ರಿಯವಾಗುತ್ತಾ ಹೋಯಿತು, ಮತ್ತು ಅತ್ಯುತ್ತಮ ಚಲನಚಿತ್ರಕ್ಕಾಗಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು[೯೧][೯೨] ಗೆದ್ದ ಮೊಟ್ಟಮೊದಲ ಮಲಯಾಳಂ ಚಲನಚಿತ್ರ ಎನಿಸಿಕೊಂಡಿತು. ಮಲಯಾಳಂ ಚಿತ್ರರಂಗದ ಈ ಆರಂಭಿಕ ಅವಧಿಯನ್ನು ಪ್ರೇಮ್‌ ನಜೀರ್‌, ಸತ್ಯನ್‌, ಶೀಲಾ ಮತ್ತು ಶಾರದಾರಂಥ ಕಲಾವಿದರು ಆಳಿದರು.

70ರ ದಶಕವು 'ಹೊಸ ಅಲೆಯ ಮಲಯಾಳಂ ಚಿತ್ರರಂಗ'ದ ಉದಯವನ್ನು ಕಂಡಿತು. ಸ್ವಯಂವರಂ (1972) ಎಂಬ ತಮ್ಮ ಪ್ರಥಮ ಪ್ರವೇಶದ ಚಲನಚಿತ್ರದ ಮೂಲಕ ಅಡೂರ್‌ ಗೋಪಾಲಕೃಷ್ಣನ್‌ ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿಕೊಂಡರು. ಈ ಅವಧಿಯ ಇತರ ಗಮನಾರ್ಹ ಚಲನಚಿತ್ರಗಳಲ್ಲಿ, M. T. ವಾಸುದೇವನ್‌ ನಾಯರ್ ನಿರ್ದೇಶನದ ನಿರ್ಮಾಲ್ಯಂ , G. ಅರವಿಂದನ್‌ ನಿರ್ದೇಶನದ ಉತ್ತರಾಯಣಂ , ಜಾನ್‌ ಅಬ್ರಹಾಂ ನಿರ್ದೇಶನದ ಚೆರಿಯಚಂತೆ ಕ್ರೂರಕೃತ್ಯಂಗಳ್‌ (1979) ಹಾಗೂ ಅಮ್ಮಾ ಅರಿಯಾನ್‌ (1986) ಮೊದಲಾದವು ಸೇರಿವೆ.

1980ರ ದಶಕದ ಅಂತ್ಯದಿಂದ 1990ರ ದಶಕದ ಆರಂಭದವರೆಗಿನ ಅವಧಿಯನ್ನು 'ಮಲಯಾಳಂ ಚಿತ್ರರಂಗದ ಸುವರ್ಣ ಯುಗ' ಎಂದು ಜನಾಭಿಪ್ರಾಯದಿಂದ ಪರಿಗಣಿಸಲಾಗಿದೆ. ಏಕೆಂದರೆ, ಮಮ್ಮೂಟ್ಟಿ ಹಾಗೂ ಮೋಹನ್‌ಲಾಲ್‌‌‌ರಂಥ ನಟರು ಹಾಗೂ I.V. ಶಶಿ, ಭರತನ್‌, ಪದ್ಮರಾಜನ್‌, ಸತ್ಯನ್‌ ಅಂತಿಕಾಡ್‌, ಪ್ರಿಯದರ್ಶನ್‌, A. K. ಲೋಹಿತದಾಸ್‌, ಸಿದ್ದಿಕಿ-ಲಾಲ್‌ ಹಾಗೂ ಶ್ರೀನಿವಾಸನ್‌‌‌ರಂಥ ಚಲನಚಿತ್ರ ತಯಾರಕರು ಮಲಯಾಳಂ ಚಿತ್ರೋದ್ಯಮದಲ್ಲಿ ಹೊರಹೊಮ್ಮಿದ್ದು ಈ ಅವಧಿಯಲ್ಲಿಯೇ. ಚಲನಚಿತ್ರಗಳಲ್ಲಿ ದಿನನಿತ್ಯದ ಜೀವನದ ಸಂಗತಿಗಳನ್ನು ಅಳವಡಿಸಿಕೊಂಡಿದ್ದು ಹಾಗೂ ಸಾಮಾಜಿಕ ಮತ್ತು ವೈಯಕ್ತಿಕ ನೆಲೆಗಟ್ಟಿನ ಸಂಬಂಧಗಳನ್ನು ಒಳಹೊಕ್ಕು ಪರೀಕ್ಷಿಸುವ ಪ್ರಯತ್ನ ಮಾಡಿದ್ದು, ಜನಪ್ರಿಯ ಚಲನಚಿತ್ರದ ಈ ಅವಧಿಯ ಮುಖ್ಯಲಕ್ಷಣವಾಗಿದೆ.[೯೩] ನಾಡೋಡಿಕ್ಕಟ್ಟು (1988) ಎಂಬ ಚಿತ್ರದಲ್ಲಿದ್ದಂತೆ, ಈ ಚಲನಚಿತ್ರಗಳು ವೈಯಕ್ತಿಕ ಹೋರಾಟಗಳ ವಿಷಯಗಳನ್ನು ಸೃಜನಶೀಲ ಹಾಸ್ಯದೊಂದಿಗೆ ಪರಸ್ಪರ ಹೆಣೆದವು. ಷಾಜಿ N. ಕರುಣ್‌‌ನಿಂದ ನಿರ್ದೇಶಿಸಲ್ಪಟ್ಟ ಪಿರವಿ (1989) ಚಿತ್ರವು ಕ್ಯಾನೆಸ್‌ ಚಲನಚಿತ್ರೋತ್ಸವದಲ್ಲಿ ಕ್ಯಾಮೆರಾ ಡಿ'ಓರ್‌-ನಾಮನಿರ್ದೇಶನವನ್ನು ಗೆದ್ದ ಮೊದಲ ಮಲಯಾಳಂ ಚಲನಚಿತ್ರವಾಗಿತ್ತು. ರಾಮ್‌ಜಿ ರಾವ್‌ ಸ್ಪೀಕಿಂಗ್‌ (1989) ಚಿತ್ರದಂಥ ಉತ್ತಮವಾಗಿ-ಹೆಣೆದ ಹಾಸ್ಯವನ್ನು ಸಮೃದ್ಧವಾಗಿ ಹೊಂದಿದ್ದ ಚಲನಚಿತ್ರಗಳ ಆರಂಭವನ್ನೂ ಈ ಅವಧಿಯು ಗುರುತುಮಾಡಿತು.

1990ರ ದಶಕದ ಅಂತ್ಯದಲ್ಲಿ ಹಾಗೂ 2000ರ ದಶಕದಲ್ಲಿ, ಸೂತ್ರಾನುಸಾರಿಯಾದ ಚಿತ್ರಗಳು ಹಾಗೂ ಕೋಡಂಗಿ ಆಟದ ಹಾಸ್ಯಚಿತ್ರಗಳ ಕಡೆಗಿನ ಒಂದು ಸ್ಥಿತ್ಯಂತರಕ್ಕೆ ಮಲಯಾಳಂ ಚಿತ್ರರಂಗವು ಸಾಕ್ಷಿಯಾಯಿತು. ಉಪಗ್ರಹ ದೂರದರ್ಶನದ ಉಗಮ ಹಾಗೂ ವ್ಯಾಪಕವಾಗಿ ಹಬ್ಬಿರುವ ಚಲನಚಿತ್ರದ ಕಳ್ಳಪ್ರಸಾರದಿಂದಾಗಿ ಇತ್ತೀಚಿನ ದಿನಗಳಲ್ಲಿ ಮಲಯಾಳಂ ಚಲನಚಿತ್ರೋದ್ಯಮವೂ ತೊಂದರೆಗೆ ಒಳಗಾಗುತ್ತಾ ಬಂದಿದೆ.

ಮರಾಠಿ ಚಿತ್ರರಂಗ

ಬದಲಾಯಿಸಿ

ದಾದಾಸಾಹೇಬ್‌ ಫಾಲ್ಕೆಯವರಂಥ ಭಾರತದ ಕೆಲವೊಂದು ಆರಂಭಿಕ ಚಲನಚಿತ್ರ ತಯಾರಕರು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದವರಾಗಿದ್ದರು. ಮರಾಠಿ ಚಿತ್ರರಂಗವು ತನ್ನ ಪ್ರೇಕ್ಷಕರನ್ನು ಇಲ್ಲಿಯೇ ಕಂಡುಕೊಳ್ಳುತ್ತದೆ.[೯೪] ಸಾಮಾನ್ಯ ಚಲನಚಿತ್ರ ಪ್ರೇಕ್ಷಕರ ಬಯಕೆಯನ್ನು ಈಡೇರಿಸುವ ಒಲವುಳ್ಳ ಪಲಾಯನವಾದಿ ಪ್ರವೃತ್ತಿಗಳಿಂದ ಮರಾಠಿ ಚಿತ್ರರಂಗವು ಗುರುತಿಸಲ್ಪಟ್ಟಿದ್ದು, ಆ ನಿಟ್ಟಿನಲ್ಲಿ ಚಿತ್ರಪ್ರೇಮಿಗಳಿಗೆ ಪೂರೈಸಬಲ್ಲ ಮನರಂಜನೆಯನ್ನು ಒದಗಿಸುತ್ತದೆ.[೯೪] ಜಬ್ಬಾರ್‌ ಪಟೇಲ್‌, ಅಮೋಲ್‌ ಪಾಲೇಕರ್‌ ಇವರೇ ಮೊದಲಾದವರಲ್ಲಿ ಕಲಾತ್ಮಕ ಚಲನಚಿತ್ರವು ತನ್ನ ಪ್ರತಿಪಾದಕರನ್ನು ಕಂಡುಕೊಂಡಿದೆ.[೯೫] 1993ರಲ್ಲಿ ಮರಾಠಿ ಚಿತ್ರೋದ್ಯಮವು 35 ಚಲನಚಿತ್ರಗಳನ್ನು ನಿರ್ಮಿಸಿತು.[೭೭] ಆದಾಗ್ಯೂ, 1994ರಲ್ಲಿ ಈ ಸಂಖ್ಯೆಯು 25ಕ್ಕೆ ಕುಸಿಯಿತು ಹಾಗೂ ಅಂತಿಮವಾಗಿ 1996ರಲ್ಲಿ ಇದು 10 ಚಲನಚಿತ್ರಗಳಷ್ಟು ಕಡಿಮೆ ಸಂಖ್ಯೆಗೆ ಇಳಿಯಿತು.[೯೫]

ಒರಿಯಾ ಚಿತ್ರರಂಗ

ಬದಲಾಯಿಸಿ

ಭುಬನೇಶ್ವರ್‌ ಮತ್ತು ಕಟಕ್‌‌ ಮೂಲದ ಒರಿಯಾ ಭಾಷೆಯ ಚಲನಚಿತ್ರೋದ್ಯಮಕ್ಕೆ ಒರಿಯಾ ಚಿತ್ರೋದ್ಯಮ ಎಂಬ ಪದವು ಉಲ್ಲೇಖಿಸಲ್ಪಡುತ್ತದೆ. ಒರಿಯಾ ಮತ್ತು ಹಾಲಿವುಡ್‌ ಎಂಬ ಪದಗಳ ಒಂದು ಬೆರಕೆಪದವಾಗಿರುವ ಓಲಿವುಡ್‌ ಎಂಬ ಹೆಸರಿನಿಂದಲೂ ಈ ಚಿತ್ರೋದ್ಯಮವನ್ನು ಕೆಲವೊಮ್ಮೆ ಕರೆಯಲಾಗುತ್ತದೆಯಾದರೂ, ಸದರಿ ಹೆಸರಿನ ವ್ಯತ್ಪತ್ತಿಗಳು ವಿವಾದಕ್ಕೆ ಒಳಗಾಗಿವೆ.[೯೬] ಸೀತಾ ಬಿಬಾಹ ಎಂಬ ಒರಿಯಾ ಭಾಷೆಯ ಮೊದಲ ವಾಕ್ಚಿತ್ರವನ್ನು 1936ರಲ್ಲಿ ಮೋಹನ್‌ ಸುಂದರ್‌ ದೇಬ್‌ ಗೋಸ್ವಾಮಿ ಎಂಬಾತ ನಿರ್ಮಿಸಿದ. ಒರಿಯಾ ಸಂಸ್ಕೃತಿಯ ಸಾರವನ್ನು ಭದ್ರವಾಗಿ ರಕ್ಷಿಸುವುದಷ್ಟೇ ಅಲ್ಲದೇ, ಒರಿಯಾ ಚಿತ್ರಗಳನ್ನು ವೀಕ್ಷಿಸುತ್ತಿದ್ದ ಚಿತ್ರೋದ್ಯಮದಲ್ಲಿ ಹೊಸತನವನ್ನು ತರುವುದರ ಮೂಲಕವೂ ಮೊಹಮ್ಮದ್‌ ಮೊಹ್ಸಿನ್‌ ಎಂಬಾತ ಒರಿಯಾ ಚಲನಚಿತ್ರೋದ್ಯಮದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಪ್ರಾರಂಭಿಸಿದ. ಒರಿಯಾ ಭಾಷೆಯ ಚಲನಚಿತ್ರಗಳಿಗೆ ತಾಜಾತನವನ್ನು ತರುವ ಮೂಲಕ ಒರಿಯಾ ಚಲನಚಿತ್ರೋದ್ಯಮದ ಸುವರ್ಣ ಯುಗದಲ್ಲಿ ಅವನ ಚಲನಚಿತ್ರಗಳು ತಮ್ಮ ಆಗಮನವನ್ನು ಘೋಷಿಸಿದವು.[೯೭] ಆ ಸಮಯದಲ್ಲಿ "ಎ ಬನಾರಾ ಛಾಯಿ" (ಈ ಕಾಡಿನ ನೆರಳು) ಎಂಬ ಮೊಟ್ಟಮೊದಲ ಬಣ್ಣದ ಚಲನಚಿತ್ರವು ಶ್ರೀ.ಸುರೇಂದ್ರ ಸಾಹು ಎಂಬ ಓರ್ವ ದಂತಕಥೆಯೆನಿಸಿದ್ದ ಛಾಯಾಗ್ರಾಹಕನಿಂದ ತಯಾರಿಸಲ್ಪಟ್ಟಿತು.

ಪಂಜಾಬಿ ಚಿತ್ರರಂಗ

ಬದಲಾಯಿಸಿ

ಶೀಲಾ ಎಂಬ ಮೊಟ್ಟಮೊದಲ ಪಂಜಾಬಿ ಚಲನಚಿತ್ರವನ್ನು K.D. ಮೆಹ್ರಾ ನಿರ್ಮಿಸಿದ (ಈ ಚಿತ್ರಕ್ಕೆ ಪಿಂಡ್‌ ಕಿ ಕುಡಿ ಎಂಬ ಹೆಸರೂ ಇತ್ತು). ಈ ಚಿತ್ರದಲ್ಲಿ ಬೇಬಿ ನೂರ್‌ ಜೆಹಾನ್‌ಳನ್ನು ಓರ್ವ ನಟಿ ಹಾಗೂ ಗಾಯಕಿಯಾಗಿ ಪರಿಚಯಿಸಲಾಯಿತು. ಶೀಲಾ ಚಿತ್ರವನ್ನು ಕಲ್ಕತ್ತಾದಲ್ಲಿ ತಯಾರಿಸಿ ಪಂಜಾಬ್‌ನ ರಾಜಧಾನಿಯಾಗಿದ್ದ ಲಾಹೋರ್‌ನಲ್ಲಿ ಬಿಡುಗಡೆ ಮಾಡಲಾಯಿತು; ಈ ಚಿತ್ರವು ಅತ್ಯಂತ ಯಶಸ್ವಿಯಾಗಿ ಓಡಿತು ಹಾಗೂ ಸದರಿ ಪ್ರಾಂತ್ಯದಾದ್ಯಂತ ಪ್ರಚಂಡ ಯಶಸ್ಸನ್ನು ದಾಖಲಿಸಿತು. ಈ ಮೊದಲ ಚಲನಚಿತ್ರದ ಯಶಸ್ಸಿನ ಕಾರಣದಿಂದಾಗಿ, ಇನ್ನೂ ಅನೇಕ ನಿರ್ಮಾಪಕರು ಪಂಜಾಬಿ ಚಲನಚಿತ್ರಗಳ ತಯಾರಿಕೆಯನ್ನು ಪ್ರಾರಂಭಿಸಿದರು. 2009ರವರೆಗೆ ಇದ್ದಂತೆ, ಪಂಜಾಬಿ ಚಿತ್ರರಂಗವು ಸುಮಾರು 900ರಿಂದ 1,000ದಷ್ಟು ಸಂಖ್ಯೆಯ ಚಲನಚಿತ್ರಗಳನ್ನು ನಿರ್ಮಿಸಿದೆ. ಪ್ರತಿ ವರ್ಷದಲ್ಲಿ ಬಿಡುಗಡೆಗೊಂಡ ಚಿತ್ರಗಳ ಸರಾಸರಿ ಸಂಖ್ಯೆಯು 1970ರ ದಶಕದಲ್ಲಿ ಒಂಬತ್ತರಷ್ಟಿದ್ದರೆ, 1980ರ ದಶಕದಲ್ಲಿ ಎಂಟರಷ್ಟು ಹಾಗೂ 1990ರ ದಶಕದಲ್ಲಿ ಆರರಷ್ಟು ಇತ್ತು. 1995ರಲ್ಲಿ, 11 ಚಲನಚಿತ್ರಗಳು ಬಿಡುಗಡೆಯಾದವು; 1996ರಲ್ಲಿ ಈ ಸಂಖ್ಯೆಯು ಏಳಕ್ಕೆ ಏಕಾಏಕಿ ಇಳಿಯಿತು ಮತ್ತು 1997ರಲ್ಲಿ ಈ ಸಂಖ್ಯೆಯು ತೀರಾ ಕಡಿಮೆ ಎನ್ನಬಹುದಾದ ಐದಕ್ಕೆ ಕುಸಿಯಿತು. ದೊಡ್ಡ ಪ್ರಮಾಣದ ಬಂಡವಾಳವು ತೊಡಗಿಸಲ್ಪಟ್ಟಿರುವ, ಸ್ಥಳೀಯವಾಗಿ ಬೆಳೆದ ತಾರೆಗಳನ್ನಷ್ಟೇ ಅಲ್ಲದೇ ಪಂಜಾಬಿ ಮೂಲದ ಬಾಲಿವುಡ್‌ ನಟರುಗಳನ್ನೂ ಒಳಗೊಂಡಿರುವ ಚಿತ್ರಗಳು ಪ್ರತಿವರ್ಷವೂ ಹೆಚ್ಚೆಚ್ಚು ಬಿಡುಗಡೆಯಾಗುವುದರೊಂದಿಗೆ, 2000ರ ದಶಕದಿಂದೀಚೆಗೆ ಪಂಜಾಬಿ ಚಿತ್ರರಂಗವು ಒಂದು ಪುನರುಜ್ಜೀವನವನ್ನು ಕಂಡಿದೆ.

ತಮಿಳು ಚಿತ್ರರಂಗ

ಬದಲಾಯಿಸಿ
ಚಿತ್ರ:Pushpak Movie Poster.JPG

ಸಿಂಗೀತಮ್‌ ಶ್ರೀನಿವಾಸ ರಾವ್‌‌ ರವರಿಂದ ನಿರ್ದೇಶಿಸಲ್ಪಟ್ಟ ಒಂದು ದುರಂತ-ಹಾಸ್ಯ ಚಿತ್ರವಾದ ಪುಷ್ಪಕ್‌ ನ ಭಿತ್ತಿಚಿತ್ರದಲ್ಲಿರುವ ಕಮಲಹಾಸನ್‌ ಮತ್ತು ಅಮಲಾ

ತಮಿಳು ಸಿನಿಮಾ ಎಂದೇ ಹೆಸರಾಗಿರುವ ತಮಿಳು ಭಾಷೆಯ ಚಿತ್ರೋದ್ಯಮವು, ಗುಣಮಟ್ಟ ಹಾಗೂ ತಂತ್ರಜ್ಞಾನದ ವಿಷಯಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿನ ಅತಿದೊಡ್ಡ ಚಿತ್ರೋದ್ಯಮಗಳಲ್ಲಿ ಒಂದೆನಿಸಿಕೊಂಡಿದೆ, ಮತ್ತು ಇದು ತಮಿಳುನಾಡಿನ ಚೆನ್ನೈ ಜಿಲ್ಲೆಯ ಕೋಡಂಬಾಕಂನಲ್ಲಿ ನೆಲೆಗೊಂಡಿದೆ. ವಿಶ್ವಾದ್ಯಂತ ಚದುರಿಹೋಗಿರುವ ತಮಿಳು ಜನರಗುಂಪು ಹಾಗೂ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಜನರಿಗಾಗಿ ತಮಿಳು ಚಲನಚಿತ್ರಗಳು ಪ್ರದರ್ಶಿಸಲ್ಪಡುತ್ತವೆ. ತಮಿಳು ಚಲನಚಿತ್ರಗಳಲ್ಲಿ ತಮಿಳು ಸಂಸ್ಕೃತಿಯು ಉತ್ತಮ ರೀತಿಯಲ್ಲಿ ನಿರೂಪಣೆಗೊಳ್ಳುತ್ತದೆಯಾದ್ದರಿಂದ, ಉತ್ತರ ಭಾರತೀಯ ಚಿತ್ರಗಳಿಗಿಂತ ಅವು ಭಿನ್ನವಾಗಿದ್ದು, ತಗ್ಗಿಸಲ್ಪಟ್ಟ ಲೈಂಗಿಕ ಅಭಿವ್ಯಕ್ತಿಗಳು ಹಾಗೂ ಹದವರಿತ ಸೊಬಗಿನ ಮೈಮಾಟದ ಪ್ರದರ್ಶನವನ್ನು ಒಳಗೊಂಡಿರುತ್ತವೆ.[೯೮] M. G. ರಾಮಚಂದ್ರನ್‌, M. ಕರುಣಾನಿಧಿ, ಮತ್ತು J. ಜಯಲಲಿತಾರಂಥ ಚಿತ್ರೋದ್ಯಮದ ಕೆಲವೊಂದು ಪ್ರಸಿದ್ಧ ವ್ಯಕ್ತಿಗಳು ರಾಜಕೀಯ ಅಧಿಕಾರವನ್ನು ಹೊಂದಿದ್ದ ಉದಾಹರಣೆಗಳೊಂದಿಗೆ, ತಮಿಳುನಾಡು ರಾಜ್ಯದ ಪ್ರಾದೇಶಿಕ ರಾಜಕೀಯದಲ್ಲಿ ತಮಿಳು ಚಿತ್ರರಂಗವು ಒಂದು ಚಾಲಕಶಕ್ತಿಯಾಗಿ ಪಾತ್ರವಹಿಸುತ್ತಾ ಬಂದಿದೆ.[೯೯] ಮದ್ರಾಸ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಸ್ಥಾಪನೆಗೊಳ್ಳುವುದರೊಂದಿಗೆ, ತಮಿಳು ಚಲನಚಿತ್ರಗಳ ಗುಣಮಟ್ಟವು 1980ರ ದಶಕದ ಅವಧಿಯಲ್ಲಿ ಸುಧಾರಿಸಿತು ಹಾಗೂ ಇನ್ನೂ ಮುಂದುವರಿದು ಅದು ಮಣಿರತ್ನಂರಂಥ ಚಲನಚಿತ್ರ ತಯಾರಕರ ಕೃತಿಗಳ ನೆರವಿನೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನವನ್ನು ಸೆಳೆಯಿತು.ಇಂದು, ಶ್ರೀಲಂಕಾ, ಸಿಂಗಪೂರ್‌, ದಕ್ಷಿಣ ಕೊರಿಯಾ, ಮಲೇಷಿಯಾ, ಮಾರಿಷಸ್‌, ದಕ್ಷಿಣ ಆಫ್ರಿಕಾ, ಪಶ್ಚಿಮ ಯುರೋಪ್‌, ಉತ್ತರ ಅಮೆರಿಕಾ, ಮತ್ತು ಚದುರಿಹೋಗಿರುವ ತಮಿಳು ಜನರಗುಂಪುಗಳಿರುವ ಇತರ ಗಮನಾರ್ಹ ವಲಯಗಳಂಥ ವಿಶ್ವಾದ್ಯಂತವಿರುವ ಹಲವಾರು ದೇಶಗಳಲ್ಲಿನ ಚಿತ್ರಮಂದಿರಗಳಿಗೆ ತಮಿಳು ಚಲನಚಿತ್ರಗಳು ವಿತರಿಸಲ್ಪಡುತ್ತವೆ.[೧೦೦] 1993ರಲ್ಲಿ ತಮಿಳು ಚಿತ್ರೋದ್ಯಮವು 168 ಚಲನಚಿತ್ರಗಳನ್ನು ತಯಾರಿಸಿತು.[೭೭] ಅತಿಹೆಚ್ಚು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹಾಗೂ ಫಿಲ್ಮ್‌ಫೇರ್‌ ಪ್ರಶಸ್ತಿಗಳನ್ನು ಗಳಿಸಿರುವ, ಮತ್ತು ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿರುವ ಅಕಾಡೆಮಿ ಪ್ರಶಸ್ತಿ ಯ ವಿಭಾಗದಲ್ಲಿನ ಸ್ಪರ್ಧೆಗಾಗಿ ಭಾರತದಿಂದ ಸಲ್ಲಿಸಲ್ಪಟ್ಟಿರುವ ಅತಿ ಹೆಚ್ಚು ಸಂಖ್ಯೆಯ ಚಲನಚಿತ್ರಗಳೊಂದಿಗೆ ಇರುವ ನಟ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಕಮಲಹಾಸನ್‌ ಮತ್ತು ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹಾಗೂ ಭಾರತದಲ್ಲಿನ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾದ ರಜನೀಕಾಂತ್‌ ಈ ಇಬ್ಬರು ತಾರೆಯರೂ ತಮಿಳು ಚಿತ್ರೋದ್ಯಮದ ತಾರೆಯರಾಗಿದ್ದಾರೆ.[೧೦೦] ಇಳಯರಾಜಾ, A.R.ರಹಮಾನ್‌‌ರಂಥ ಮಹಾನ್‌ ಸಂಗೀತ ನಿರ್ದೇಶಕರು ತಮಿಳು ಚಿತ್ರೋದ್ಯಮದಿಂದ ಬಂದವರಾಗಿದ್ದಾರೆ.

ತೆಲುಗು ಚಿತ್ರರಂಗ

ಬದಲಾಯಿಸಿ

ಆಂಧ್ರಪ್ರದೇಶತೆಲುಗು ಭಾಷೆಯ ಚಲನಚಿತ್ರೋದ್ಯಮವು ವರ್ಷವೊಂದರಲ್ಲಿ ತಯಾರಾಗುವ ಚಲನಚಿತ್ರಗಳ ಸಂಖ್ಯೆಗೆ ಸಂಬಂಧಿಸಿದಂತೆ ಭಾರತದಲ್ಲಿ ಸದ್ಯಕ್ಕೆ ಅತಿದೊಡ್ಡ ಚಿತ್ರೋದ್ಯಮವಾಗಿದೆ.[೧೦೧] ಭಾರತದಲ್ಲಿನ ಚಲನಚಿತ್ರ ಮಂದಿರಗಳ ಸಂಖ್ಯೆಯ ಪೈಕಿ ಆಂಧ್ರಪ್ರದೇಶ ರಾಜ್ಯವು ಸಿಂಹಪಾಲನ್ನು ಹೊಂದಿದೆ. 2006ರಲ್ಲಿ, ಭಾರತದಲ್ಲಿ ನಿರ್ಮಾಣಗೊಂಡ ಚಲನಚಿತ್ರಗಳ ಪೈಕಿ ತೆಲುಗು ಚಿತ್ರೋದ್ಯಮವು ಅತಿಹೆಚ್ಚಿನ ಸಂಖ್ಯೆಯನ್ನು ತನ್ನದಾಗಿಸಿಕೊಂಡಿತು. ಆ ವರ್ಷದಲ್ಲಿ ಸುಮಾರು 245 ತೆಲುಗು ಚಲನಚಿತ್ರಗಳು ತಯಾರಾದವು.[೧೦೨] ಪ್ರಪಂಚದಲ್ಲಿನ ಅತಿದೊಡ್ಡ ಚಲನಚಿತ್ರ ಸ್ಟುಡಿಯೋ ಸಂಕೀರ್ಣವಾಗಿರುವ ರಾಮೋಜಿ ಫಿಲ್ಮ್‌ ಸಿಟಿಯು ಆಂಧ್ರಪ್ರದೇಶದ ರಾಜಧಾನಿ ನಗರವಾದ ಹೈದರಾಬಾದ್‌ನ ಹೊರವಲಯದಲ್ಲಿ ನೆಲೆಗೊಂಡಿದೆ.

ಭಾರತದ ಚಲನಚಿತ್ರೋದ್ಯಮವು ಹಲವಾರು ಸಣ್ಣ ಗಾತ್ರದ ಪ್ರಾದೇಶಿಕ ಉದ್ಯಮಗಳನ್ನು ಒಳಗೊಂಡಿದ್ದು, ಪ್ರತಿ ಉದ್ಯಮವೂ ಹೆಚ್ಚಿನ ರೀತಿಯಲ್ಲಿ ಒಂದು ನಿರ್ದಿಷ್ಟವಾದ ಭಾಷೆಯ ಪ್ರೇಕ್ಷಕರಿಗೆ ಮನರಂಜನೆಯನ್ನು ಒದಗಿಸುತ್ತಿದೆ.[೭೭] ಆದಾಗ್ಯೂ, ಒಂದು ವಲಯಕ್ಕೆ ಸೇರಿದ ಚಲನಚಿತ್ರ ತಯಾರಕರು ಹಾಗೂ ಕಲಾವಿದರು ಮತ್ತೊಂದು ವಲಯಕ್ಕೆ ಮೀಸಲಾದ ಚಲನಚಿತ್ರಗಳಿಗೆ ಕೊಡುಗೆಯನ್ನು ಅನೇಕ ಬಾರಿ ನೀಡುವುದರಿಂದ, ಹಲವಾರು ವಲಯಗಳ ನಡುವೆ ಒಂದು ಗಣನೀಯ ಮಟ್ಟದಲ್ಲಿ ಪ್ರಾದೇಶಿಕ ಪರಸ್ಪರ ಪ್ರಭಾವವು ಕಂಡುಬರುತ್ತದೆ.[೭೭] K ವಿಶ್ವನಾಥ್‌, ಬಾಪು, ಜಂಧ್ಯಾಲ, ಸಿಂಗೀತಂ ಶ್ರೀನಿವಾಸರಾವ್‌, ರಾಂಗೋಪಾಲ್‌ ವರ್ಮಾ, ಕ್ರಾಂತಿ ಕುಮಾರ್‌, ದಾಸರಿ ನಾರಾಯಣ ರಾವ್‌‌, ರಾಘವೇಂದ್ರ ರಾವ್‌, ಕೃಷ್ಣ ವಂಶಿ, ಪುರಿ ಜಗನ್ನಾಥ್‌, ರಾಜಾ ಮೌಳಿ, VV ವಿನಾಯಕ್‌, ಸುರೇಂದ್ರ ರೆಡ್ಡಿ, ಬೊಮ್ಮರಿಲ್ಲು ಭಾಸ್ಕರ್‌ ಮೊದಲಾದವರು ತೆಲುಗು ಚಲನಚಿತ್ರ ಇತಿಹಾಸದ ಕೆಲವೊಂದು ಅತ್ಯುತ್ತಮ ನಿರ್ದೇಶಕರಾಗಿದ್ದಾರೆ. ದಂತಕಥೆಯ ಸ್ವರೂಪದಲ್ಲಿನ ಪ್ರಸಿದ್ಧ ನಟರಾದ NTR ಮತ್ತು ANR ತೆಲುಗು ಚಿತ್ರೋದ್ಯಮಕ್ಕೆ ಸೇರಿದವರಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಓರ್ವ ರಾಜಕಾರಣಿಯಾಗಿರುವ ಚಿರಂಜೀವಿಯು ತೆಲುಗು ಚಲನಚಿತ್ರೋದ್ಯಮದಲ್ಲಿ ಓರ್ವ ನಟನಾಗಿ ತನ್ನ ವೃತ್ತಿಜೀವನವನ್ನು ಆರಂಭಿಸಿದ.

ಪ್ರಕಾರಗಳು ಹಾಗೂ ಶೈಲಿಗಳು

ಬದಲಾಯಿಸಿ

ಮಸಾಲಾ ಚಲನಚಿತ್ರಗಳು

ಬದಲಾಯಿಸಿ

ಮಸಾಲಾ ಎಂಬುದು ಭಾರತೀಯ ಸಿನಿಮಾದಲ್ಲಿನ, ಅದರಲ್ಲೂ ವಿಶೇಷವಾಗಿ ಬಾಲಿವುಡ್‌ ಹಾಗೂ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿನ ಒಂದು ಶೈಲಿಯಾಗಿದ್ದು, ಒಂದೇ ಚಲನಚಿತ್ರದಲ್ಲಿ ಹಲವಾರು ಪ್ರಕಾರಗಳ ಮಿಶ್ರಣವನ್ನು ಈ ಶೈಲಿಯಲ್ಲಿ ಕಾಣಬಹುದಾಗಿರುತ್ತದೆ. ಉದಾಹರಣೆಗೆ, ಚಲನಚಿತ್ರವೊಂದು ಸಾಹಸ, ಹಾಸ್ಯ, ನಾಟಕೀಯತೆ, ಪ್ರಣಯ ಮತ್ತು ಭಾವಾತಿರೇಕದ ನಾಟಕ ಇವೆಲ್ಲವನ್ನೂ ಒಟ್ಟಿಗೇ ಚಿತ್ರಿಸಬಹುದು. ಇವುಗಳ ಪೈಕಿ ಅನೇಕ ಚಲನಚಿತ್ರಗಳು ಸಂಗೀತಮಯ ಚಿತ್ರಗಳಾಗಿರುವ ಪ್ರವೃತ್ತಿಯನ್ನೂ ಹೊಂದಿರುತ್ತವೆ. ಬಾಲಿವುಡ್‌ ಚಲನಚಿತ್ರಗಳಲ್ಲಿ ಈಗ ಅತಿಸಾಮಾನ್ಯವಾಗಿರುವ, ಚಿತ್ರಸದೃಶ ತಾಣಗಳಲ್ಲಿ ಹಾಡುಗಳನ್ನು ಚಿತ್ರೀಕರಿಸುವ ಪರಿಪಾಠವನ್ನು ಇದು ಒಳಗೊಂಡಿರುತ್ತದೆ. ಈ ಕುರಿತು ಪರಿಚಯವಿಲ್ಲದ ವೀಕ್ಷಕರಿಗೆ ಇಂಥ ಚಲನಚಿತ್ರಗಳಿಗೆ ಸಂಬಂಧಿಸಿದ ಕಥಾವಸ್ತುಗಳು ತರ್ಕರಹಿತವಾಗಿ ಮತ್ತು ಅಸಂಭವನೀಯವಾಗಿ ಕಾಣಿಸಬಹುದು. ಭಾರತೀಯ ಅಡುಗೆಯಲ್ಲಿನ ಸಂಬಾರ ಪದಾರ್ಥಗಳ ಒಂದು ಮಿಶ್ರಣವನ್ನು ವಿವರಿಸಲು ಬಳಸಲಾಗುವ ಒಂದು ಪದವಾದ ಮಸಾಲೆ ಯ ಹೆಸರನ್ನು ಈ ಪ್ರಕಾರಕ್ಕೆ ಇಡಲಾಗಿದೆ.

ಸಮಾನಾಂತರ ಚಲನಚಿತ್ರ

ಬದಲಾಯಿಸಿ

ಸಮಾನಾಂತರ ಚಲನಚಿತ್ರ ವು ಕಲಾತ್ಮಕ ಚಲನಚಿತ್ರ ಅಥವಾ ಭಾರತದ ಹೊಸ ಅಲೆಯ ಚಿತ್ರ ಎಂದೂ ಚಿರಪರಿಚಿತವಾಗಿದ್ದು, ಇದು ಭಾರತೀಯ ಚಿತ್ರರಂಗದಲ್ಲಿನ ಒಂದು ನಿರ್ದಿಷ್ಟ ಆಂದೋಲನ ಅಥವಾ ಕಾರ್ಯಚಟುವಟಿಕೆಯಾಗಿದೆ. ತಾನು ಒಳಗೊಳ್ಳುವ ಗಂಭೀರವಾಗಿರುವ ವಿಷಯ, ಯಥಾರ್ಥತೆ ಹಾಗೂ ವಾಸ್ತವತೆಗೆ ಇದು ಹೆಸರಾಗಿದ್ದು, ಆಯಾ ಕಾಲಘಟ್ಟಗಳ ಸಾಮಾಜಿಕ-ರಾಜಕೀಯ ವಾತಾವರಣದ ಮೇಲೆ ಇದು ಒಂದು ಚುರುಕಾದ ದೃಷ್ಟಿಯನ್ನು ಇರಿಸಿರುತ್ತದೆ. ಈ ಚಟುವಟಿಕೆಯು ಮುಖ್ಯವಾಹಿನಿಯ ಬಾಲಿವುಡ್‌ ಚಿತ್ರರಂಗಕ್ಕಿಂತ ವಿಭಿನ್ನವಾಗಿದೆ. ಫ್ರೆಂಚ್‌ ಹೊಸ ಅಲೆಯ ಚಿತ್ರಗಳು ಮತ್ತು ಜಪಾನಿನ ಹೊಸ ಅಲೆಯ ಚಿತ್ರಗಳು ಪ್ರಾರಂಭವಾದ ಸರಿಸುಮಾರು ಅದೇ ಸಮಯಕ್ಕೆ ಇದೂ ಸಹ ಶುರುವಾಯಿತು. ಆರಂಭದಲ್ಲಿ ಈ ಚಟುವಟಿಕೆಯ ನೇತೃತ್ವವನ್ನು ಬಂಗಾಳಿ ಚಿತ್ರರಂಗವು (ಸತ್ಯಜಿತ್‌ ರೇ, ಮೃಣಾಲ್‌ ಸೇನ್‌, ಋತ್ವಿಕ್‌ ಘಾಟಕ್‌, ಮತ್ತು ಇತರರಂಥ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಯನ್ನು ಪಡೆದ ಚಲನಚಿತ್ರ ತಯಾರಕರನ್ನು ನಿರ್ಮಿಸಿದ ಚಿತ್ರರಂಗವಿದು) ವಹಿಸಿತ್ತು ಮತ್ತು ನಂತರದಲ್ಲಿ ಭಾರತದ ಇತರ ಚಿತ್ರೋದ್ಯಮಗಳಲ್ಲೂ ಈ ಚಟುವಟಿಕೆಯು ಪ್ರಾಮುಖ್ಯತೆಯನ್ನು ಗಳಿಸಿತು. ಈ ಆಂದೋಲನ ಅಥವಾ ಚಟುವಟಿಕೆಯಲ್ಲಿ ಬಂದ ಕೆಲವೊಂದು ಚಲನಚಿತ್ರಗಳು ವ್ಯಾಪಾರೀ ಯಶಸ್ಸನ್ನು ಸಂಪಾದಿಸುವುದರ ಜೊತೆಗೆ, ಕಲಾತ್ಮಕ ಚಲನಚಿತ್ರ ಹಾಗೂ ವ್ಯಾಪಾರಿ ಚಲನಚಿತ್ರಗಳೆರಡರ ಆಚೆಈಚೆ ಯಶಸ್ವಿಯಾಗಿ ವ್ಯಾಪಿಸಿವೆ. ಬಿಮಲ್‌ ರಾಯ್‌‌‌ಟೂ ಏಕರ್ಸ್‌ ಆಫ್‌ ಲ್ಯಾಂಡ್‌ (1953) ಎಂಬ ಚಲನಚಿತ್ರವು ಇದಕ್ಕೊಂದು ಆರಂಭಿಕ ಉದಾಹರಣೆಯಾಗಿತ್ತು. ಇದು ವ್ಯಾಪಾರಿ ಯಶಸ್ಸು ಹಾಗೂ ವಿಮರ್ಶಾತ್ಮಕ ಯಶಸ್ಸುಗಳೆರಡನ್ನೂ ಗಳಿದುವುದರ ಜೊತೆಗೆ, 1954ರ ಕ್ಯಾನೆಸ್‌ ಚಲನಚಿತ್ರೋತ್ಸವದಲ್ಲಿ ಅಂತರರಾಷ್ಟ್ರೀಯ ಬಹುಮಾನವನ್ನು ಗೆದ್ದಿತು. ಈ ಚಲನಚಿತ್ರದ ಯಶಸ್ಸು ಭಾರತದ ಹೊಸ ಅಲೆ ಚಿತ್ರಗಳಿಗೆ ದಾರಿಮಾಡಿಕೊಟ್ಟಿತು.[][][೧೦೩]

ಬಂಗಾಳಿ ಚಲನಚಿತ್ರ ತಯಾರಕರಾದ ಸತ್ಯಜಿತ್‌ ರೇಯವರು ಭಾರತದ ಅತ್ಯಂತ ಪ್ರಸಿದ್ಧ "ನವ-ವಾಸ್ತವಿಕತಾವಾದಿ"ಯಾಗಿದ್ದರು. ಇವರನ್ನು ತೀರಾ ಹತ್ತಿರದಿಂದ ಅನುಸರಿಸಿದವರಲ್ಲಿ ಋತ್ವಿಕ್‌ ಘಾಟಕ್‌, ಮೃಣಾಲ್‌ ಸೇನ್‌, ಶ್ಯಾಮ್‌ ಬೆನೆಗಲ್‌, ಅಡೂರ್‌ ಗೋಪಾಲಕೃಷ್ಣನ್‌[೨೬] ಮತ್ತು ಗಿರೀಶ್ ಕಾಸರವಳ್ಳಿ ಮೊದಲಾದವರು ಸೇರುತ್ತಾರೆ.[೯೮] ರೇಯವರ ಅತ್ಯಂತ ಪ್ರಸಿದ್ಧ ಚಲನಚಿತ್ರಗಳಲ್ಲಿ ಪಥೇರ್‌ ಪಾಂಚಾಲಿ (1955), ಅಪರಾಜಿತೋ (1956) ಮತ್ತು ದಿ ವರ್ಲ್ಡ್ ಆಫ್‌ ಅಪು (1959) ಚಿತ್ರಗಳನ್ನು ಒಳಗೊಂಡಿದ್ದ ದಿ ಅಪು ಟ್ರೈಲಜಿ ಚಿತ್ರಗಳು ಸೇರಿದ್ದವು. ಈ ಮೂರು ಚಲನಚಿತ್ರಗಳು ಕ್ಯಾನೆಸ್‌, ಬರ್ಲಿನ್‌ ಮತ್ತು ವೆನಿಸ್‌ ಚಲನಚಿತ್ರೋತ್ಸವಗಳಲ್ಲಿ ಪ್ರಮುಖ ಬಹುಮಾನಗಳನ್ನು ಗೆದ್ದವು, ಮತ್ತು ಸಾರ್ವಕಾಲಿಕ ಮಹಾನ್‌ ಚಲನಚಿತ್ರಗಳ ಪಟ್ಟಿಯಲ್ಲಿ ಇವು ಆಗಿಂದಾಗ್ಗೆ ಸೇರಿಸಲ್ಪಡುತ್ತವೆ.[೫೨][೫೩][೧೦೪][೧೦೫]

ಚಲನಚಿತ್ರ ಸಂಗೀತ

ಬದಲಾಯಿಸಿ
 
ಭಾರತೀಯ ಚಲನಚಿತ್ರ ನೃತ್ಯಗಳು ಸಾಮಾನ್ಯವಾಗಿ ಫಿಲ್ಮೀ ಹಾಡುಗಳನ್ನು ಅನುಸರಿಸುತ್ತವೆ.

ಕೇವಲ ಸಂಗೀತ ಹಕ್ಕುಗಳೊಂದರಿಂದಲೇ ಭಾರತದಲ್ಲಿ ಚಲನಚಿತ್ರವೊಂದು ತನ್ನ ನಿವ್ವಳ ಆದಾಯದ 4–5%ನಷ್ಟು ಭಾಗವನ್ನು ಗಳಿಸುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಚಿತ್ರರಂಗದಲ್ಲಿ ಸಂಗೀತವು ಒಂದು ಗಮನಾರ್ಹವಾದ ಆದಾಯಜನಕ ಮೂಲವಾಗಿ ಪರಿಗಣಿಸಲ್ಪಟ್ಟಿದೆ.[೧೨] ಸಾರೆಗಾಮ, ಸೋನಿ ಮ್ಯೂಸಿಕ್‌ ಇತ್ಯಾದಿಗಳು ಭಾರತದ ಪ್ರಮುಖ ಚಲನಚಿತ್ರ ಸಂಗೀತ ಕಂಪನಿಗಳಾಗಿವೆ.[೧೨] ವ್ಯಾಪಾರೀ ದೃಷ್ಟಿಯಲ್ಲಿ, ಚಲನಚಿತ್ರ ಸಂಗೀತವು ಭಾರತದ ನಿವ್ವಳ ಸಂಗೀತ ಮಾರಾಟದ 48%ನಷ್ಟು ಪಾಲನ್ನು ಆಕ್ರಮಿಸಿಕೊಳ್ಳುತ್ತದೆ.[೧೨] ಭಾರತದಲ್ಲಿನ ಚಲನಚಿತ್ರವೊಂದು ತನ್ನ ಪ್ರದರ್ಶನ ಅವಧಿಯಾದ್ಯಂತ ವ್ಯಾಪಿಸಿರುವ ಹಲವು ನೃತ್ಯಸಂಯೋಜಿತ ಹಾಡುಗಳನ್ನು ಒಳಗೊಂಡಿರಲು ಸಾಧ್ಯವಿದೆ.[೧೦೬]

ಒಂದು ಬಹುಸಾಂಸ್ಕೃತಿಕ, ಹೆಚ್ಚೆಚ್ಚು ಜಾಗತೀಕರಣಗೊಂಡ ಭಾರತೀಯ ಪ್ರೇಕ್ಷಕರಿಗೆ, ಹಲವಾರು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಸಂಗೀತಮಯ ಸಂಪ್ರದಾಯಗಳ ಒಂದು ಬೆರಕೆ ಸಂಗೀತ ಸ್ವರೂಪವನ್ನು ಅನೇಕ ಬಾರಿ ನೀಡಲಾಗುತ್ತಿದೆ.[೧೦೬] ಅದೇನೇ ಆದರೂ, ಸ್ಥಳೀಯ ನೃತ್ಯ ಮತ್ತು ಸಂಗೀತಗಳು ಭಾರತದಲ್ಲಿ ಒಂದು ಸಮಯ ಪ್ರಮಾಣಿತ ಹಾಗೂ ಮರುಕಳಿಸಲ್ಪಡುವ ವಿಷಯವಾಗಿ ಉಳಿದುಕೊಂಡಿವೆ ಮತ್ತು ಚದುರಿಹೋದ ದೇಶದ ಜನರಗುಂಪಿನ ನೆರವಿನಿಂದಾಗಿ ಭಾರತದ ಗಡಿಗಳಾಚೆಗೂ ತಮ್ಮ ಹಾದಿಯನ್ನು ಕಂಡುಕೊಂಡಿವೆ.[೧೦೬] ಲತಾ ಮಂಗೇಷ್ಕರ್‌‌ರಂಥ ಹಿನ್ನೆಲೆ ಗಾಯಕ-ಗಾಯಕಿಯರು ರಾಷ್ಟ್ರಮಟ್ಟದ ಹಾಗೂ ಅಂತರರಾಷ್ಟ್ರೀಯ ಮಟ್ಟದ ಚಲನಚಿತ್ರ ಸಂಗೀತದ ವೇದಿಕೆಯ ಪ್ರದರ್ಶನಗಳಲ್ಲಿ ಬೃಹತ್‌ ಪ್ರಮಾಣದ ಜನಸಮೂಹವನ್ನು ಸೆಳೆದಿದ್ದಾರೆ.[೧೦೬] 19ನೇ ಶತಮಾನದ ಅಂತ್ಯ ಹಾಗೂ 21ನೇ ಶತಮಾನದ ಆರಂಭದಲ್ಲಿ ಭಾರತದ ಹಾಗೂ ಪಾಶ್ಚಾತ್ಯ ಪ್ರಪಂಚಕ್ಕೆ ಸೇರಿದ ಕಲಾವಿದರ ನಡುವಿನ ಒಂದು ವ್ಯಾಪಕವಾದ ಪರಸ್ಪರ ಪ್ರಭಾವವು ಕಂಡುಬಂತು.[೧೦೭] ಚದುರಿಹೋದ ಭಾರತೀಯ ಜನರಗುಂಪಿಗೆ ಸೇರಿದ ಕಲಾವಿದರು ತಮ್ಮ ಪರಂಪರೆಯ ಸಂಗೀತ ಸಂಪ್ರದಾಯಗಳನ್ನು ತಾವಿರುವ ದೇಶಗಳ ಸಂಗೀತ ಸಂಪ್ರದಾಯಗಳೊಂದಿಗೆ ಹದವಾಗಿ ಬೆರೆಸಿ, ಜನಪ್ರಿಯವಾದ ಸಮಕಾಲೀನ ಸಂಗೀತವನ್ನು ನೀಡಿದರು.[೧೦೭]

ಜಾಗತಿಕ ಸಂವಾದ

ಬದಲಾಯಿಸಿ

ವಸಾಹತು ಆಳ್ವಿಕೆಯ ಕಾಲದಲ್ಲಿ ಭಾರತೀಯರು ಯುರೋಪ್‌ನಿಂದ ಚಲನಚಿತ್ರದ ಉಪಕರಣಗಳನ್ನು ಖರೀದಿಸಿದರು.[೧೭] ಎರಡನೇ ಜಾಗತಿಕ ಸಮರದ ಅವಧಿಯಲ್ಲಿನ, ಬ್ರಿಟಿಷರ ಬಂಡವಾಳವನ್ನು ಹೊಂದಿದ್ದ ಯುದ್ಧಕಾಲದ ಪ್ರಚಾರದ ಚಲನಚಿತ್ರಗಳು ಭಾರತದೊಳಗೆ ನುಸುಳಿಕೊಂಡು ಬರುವಲ್ಲಿ ಯಶಸ್ವಿಯಾದವು. ಮೈತ್ರಿ ಶಕ್ತಿಗಳ ವಿರುದ್ಧ, ಅದರಲ್ಲೂ ವಿಶೇಷವಾಗಿ ಜಪಾನಿನ ಸಾಮ್ರಾಜ್ಯ‌ದ ವಿರುದ್ಧ ಭಾರತೀಯ ಸೇನೆಯನ್ನು ಕಣಕ್ಕಿಳಿಸಲಾಗಿರುವಂತೆ ಇವುಗಳಲ್ಲಿ ಕೆಲವು ಚಿತ್ರಗಳು ತೋರಿಸಿದ್ದವು.[೧೦೮] ಇಂಥ ಒಂದು ಕಥೆಯನ್ನು ಬರ್ಮಾ ರಾಣಿ ಚಿತ್ರವು ಹೊಂದಿತ್ತು. ಜಪಾನಿಯರ ಆಕ್ರಮಿಸುವಿಕೆಗೆ ಪ್ರತಿಯಾಗಿ ಮೈನ್‌ಮಾರ್‌ನಲ್ಲಿ ಹಾಜರಿದ್ದ ಬ್ರಿಟಿಷರು ಮತ್ತು ಭಾರತೀಯರು ಒಡ್ಡಿದ ನಾಗರಿಕ ಪ್ರತಿರೋಧವನ್ನು ಈ ಚಿತ್ರವು ಚಿತ್ರಿಸಿತ್ತು.[೧೦೮] J. F. ಮದನ್‌ ಹಾಗೂ ಅಬ್ದುಲಾಲ್ಲಿ ಇಸೂಫಾಲ್ಲಿಯವರಂಥ ಸ್ವಾತಂತ್ರ್ಯಪೂರ್ವ ವ್ಯವಹಾರಸ್ಥರು ಚಲನಚಿತ್ರಗಳ ಜಾಗತಿಕ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.[೧೬]

ಭಾರತೀಯ ಚಿತ್ರರಂಗದ ಚಲನಚಿತ್ರಗಳು ಸೋವಿಯೆಟ್‌ ಒಕ್ಕೂಟ, ಮಧ್ಯ ಪ್ರಾಚ್ಯ, ಆಗ್ನೇಯ ಏಷ್ಯಾ,[೧೦೯] ಮತ್ತು ಚೀನಾ ದೇಶಗಳಿಗೆ ತಮ್ಮ ಬಹಳ ಮುಂಚೆಯೇ ಅತಿಕ್ರಮಪ್ರವೇಶ ಮಾಡುವ ಮೂಲಕ, ಇತರ ವಲಯಗಳೊಂದಿಗಿನ ಭಾರತೀಯ ಚಿತ್ರರಂಗದ ಮುಂಚಿನ ಸಂಪರ್ಕಗಳು ಗೋಚರಿಸುವಂತಿದ್ದವು. ರಾಜ್‌ ಕಪೂರ್‌‌ರಂಥ ಮುಖ್ಯವಾಹಿನಿ ಹಿಂದಿ ಚಲನಚಿತ್ರಗಳ ತಾರೆಯರು ಏಷ್ಯಾ[೧೧೦][೧೧೧] ಹಾಗೂ ಪೂರ್ವದ ಯುರೋಪ್‌‌ನಾದ್ಯಂತ ಅಂತರರಾಷ್ಟ್ರೀಯ ಕೀರ್ತಿಯನ್ನು ಗಳಿಸಿದರು.[೧೧೨][೧೧೩] ಭಾರತೀಯ ಚಲನಚಿತ್ರಗಳು ಅಂತರರಾಷ್ಟ್ರೀಯ ವೇದಿಕೆಗಳು ಹಾಗೂ ಚಲನಚಿತ್ರೋತ್ಸವಗಳಲ್ಲಿಯೂ ಕಾಣಿಸಿಕೊಂಡವು.[೧೦೯] ಇದು ಸತ್ಯಜಿತ್‌ ರೇಯವರಂಥ 'ಸಮಾನಾಂತರ' ಬಂಗಾಳಿ ಚಲನಚಿತ್ರ ತಯಾರಕರ ಚಲನಚಿತ್ರಗಳು ಯುರೋಪಿನ, ಅಮೆರಿಕಾದ ಮತ್ತು ಏಷ್ಯಾದ ಪ್ರೇಕ್ಷಕರ ನಡುವೆ ಯಶಸ್ಸನ್ನು ಗಳಿಸುವುದರೊಂದಿಗೆ ವಿಶ್ವವ್ಯಾಪಿ ಕೀರ್ತಿಯನ್ನು ಸಾಧಿಸುವಲ್ಲಿ ಅವಕಾಶ ಮಾಡಿಕೊಟ್ಟವು.[೧೧೪] ಮಾರ್ಟಿನ್‌ ಸ್ಕೋರ್ಸೆಸೆ,[೧೧೫] ಜೇಮ್ಸ್‌ ಐವರಿ,[೧೧೬] ಅಬ್ಬಾಸ್‌ ಕಿಯಾರೊಸ್ಟಾಮಿ, ಎಲಿಯಾ ಕಝಾನ್‌, ಫ್ರಾಂಕೋಯಿಸ್‌ ಟ್ರಫೌಟ್‌,[೧೧೭] ಸ್ಟೀವನ್‌ ಸ್ಪಿಲ್‌ಬರ್ಗ್‌,[೩೮][೩೯][೪೦] ಕಾರ್ಲೋಸ್‌ ಸೌರಾ,[೧೧೮] ಜೀನ್‌-ಲ್ಯೂಕ್‌ ಗೊಡಾರ್ಡ್‌,[೧೧೯] ಇಸಾವೊ ಟಕಹಾಟಾ,[೧೨೦] ಗ್ರೆಗರಿ ನಾವಾ, ಇರಾ ಸ್ಯಾಕ್ಸ್‌ ಹಾಗೂ ವೆಸ್‌ ಆಂಡರ್‌ಸನ್‌‌‌‌ರಂಥ[೧೨೧] ಚಲನಚಿತ್ರ ತಯಾರಕರು ರೇಯವರ ಸಿನಿಮೀಯ ಶೈಲಿಯಿಂದ ಪ್ರಭಾವಿತರಾಗುವುದರೊಂದಿಗೆ ಹಾಗೂ ಅಕಿರಾ ಕುರೊಸಾವಾನಂಥ ಇತರ ಅನೇಕರು ರೇಯವರ ಕೆಲಸವನ್ನು ಮೆಚ್ಚಿಕೊಳ್ಳುವುದರೊಂದಿಗೆ, ಸತ್ಯಜಿತ್‌ ರೇಯವರ ಕಾರ್ಯವೈಖರಿಯು ಒಂದು ವಿಶ್ವವ್ಯಾಪೀ ಪ್ರಭಾವವನ್ನು ಹೊಂದಿತ್ತು.[೧೨೨] "ಐವತ್ತರ ದಶಕದ ಮಧ್ಯಭಾಗದಿಂದ ಕಲಾತ್ಮಕ ಚಿತ್ರಗಳ ನಿರ್ಮಾಣ ನೆಲೆಗಳಿಗೆ ಭರಪೂರವಾಗಿ ಬಂದ ಪ್ರಾಪ್ತ-ವಯಸ್ಸಿಗೆ-ಬರುತ್ತಿರುವ ಹೊಸತನದ ನಾಟಕೀಯ ಚಿತ್ರಗಳು ದಿ ಅಪು ಟ್ರೈಲಜಿ ಚಿತ್ರದ ಒಂದು ಅತ್ಯಮೋಘ ಪ್ರಥಮ ಪರಿಚಯಕ್ಕೆ ಕಾರಣವಾದವು".[೩೫] ಸುಬ್ರತಾ ಮಿತ್ರಬೌನ್ಸ್‌ ಲೈಟಿಂಗ್‌ ಎಂಬ ವಿಶಿಷ್ಟ ಶೈಲಿಯ ಛಾಯಾಗ್ರಹಣ ಕಾರ್ಯಕೌಶಲವು ಕೂಡಾ ದಿ ಅಪು ಟ್ರೈಲಜಿ ಯಿಂದ ಹುಟ್ಟಿಕೊಂಡಿತು.[೩೬] 1980ರ ದಶಕದಿಂದೀಚೆಗೆ, ಋತ್ವಿಕ್‌ ಘಾಟಕ್‌ [೧೨೩] ಮತ್ತು ಗುರುದತ್‌‌‌ರಂಥ [೧೨೪] ಹಿಂದೆ ಉಪೇಕ್ಷೆಗೆ ಒಳಗಾದ ಕೆಲವೊಂದು ಭಾರತದ ಚಲನಚಿತ್ರ ತಯಾರಕರು ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಮರಣಾನಂತರದಲ್ಲಿ ಗಳಿಸಿದ್ದಾರೆ.

ಏಷ್ಯಾದ ಮತ್ತು 'ಮೂರನೇ ವಿಶ್ವ'ದ ಅನೇಕ ದೇಶಗಳು, ಪಾಶ್ಚಿಮಾತ್ಯ ಚಲನಚಿತ್ರರಂಗಕ್ಕಿಂತ ಭಾರತೀಯ ಚಿತ್ರರಂಗವು ತಮ್ಮ ಸಂವೇದನೆಗಳಿಗೆ ಹೆಚ್ಚು ಸೂಕ್ತವಾಗಿ ಹೊಂದುತ್ತದೆ ಎಂಬುದನ್ನು ಹೆಚ್ಚಿನ ರೀತಿಯಲ್ಲಿ ಕಂಡುಕೊಂಡಿವೆ.[೧೦೯] ಜಿಗ್ನ ದೇಸಾಯಿಯವರ ಅನುಸಾರ, ಚದುರಿಹೋದ ಭಾರತೀಯ ಜನರಗುಂಪು ಗಣನೀಯ ಸಂಖ್ಯೆಗಳಲ್ಲಿರುವ ವಿಶ್ವದ ಅನೇಕ ಭಾಗಗಳಿಗೆ ವ್ಯಾಪಿಸುವ ಮೂಲಕ, ಮತ್ತು ಇತರ ಅಂತರರಾಷ್ಟ್ರೀಯ ಚಿತ್ರರಂಗಕ್ಕೆ ಒಂದು ಪಯಾರ್ಯಯವಾಗಿ ಮಾರ್ಪಡುವ ಮೂಲಕ, ಭಾರತೀಯ ಚಿತ್ರರಂಗವು 21ನೇ ಶತಮಾನದ ವೇಳೆಗೆ 'ಒಂದು ಪ್ರದೇಶಕ್ಕೆ ಸೀಮಿತವಾಗಿರುವ ಸ್ಥಿತಿಯಿಂದ ಆಚೆಬರುವಲ್ಲಿ' ಸಮರ್ಥವಾಗಿತ್ತು.[೧೨೫]

ಪಾಶ್ಚಾತ್ಯ ಸಂಗೀತಮಯ ಚಲನಚಿತ್ರಗಳ ಮೇಲೆ ಪ್ರಭಾವ ಬೀರುವುದನ್ನು ಭಾರತೀಯ ಚಿತ್ರರಂಗವು ತೀರಾ ಇತ್ತೀಚೆಗೆ ಶುರುಮಾಡಿದೆ, ಮತ್ತು ಪಾಶ್ಚಾತ್ಯ ಪ್ರಪಂಚದಲ್ಲಿ ಪ್ರಕಾರದ ಪುನರುಜ್ಜೀವನವಾಗುವಲ್ಲಿ ಇದು ನಿರ್ದಿಷ್ಟವಾಗಿ ಒಂದು ಕಾರ್ಯಸಾಧಕ ಪಾತ್ರವನ್ನು ವಹಿಸಿದೆ. ಬಾಝ್‌ ಲುಹ್ರ್‌ಮನ್‌ ಎಂಬಾತ ತನ್ನ ಯಶಸ್ವೀ ಸಂಗೀತಮಯ ಚಲನಚಿತ್ರವಾದ ಮೌಲೀನ್‌ ರೋಜ್‌! (2001) ಕುರಿತು ಮಾತನಾಡುತ್ತಾ, ಇದು ಬಾಲಿವುಡ್‌ ಸಂಗೀತಮಯ ಚಿತ್ರಗಳಿಂದ ನೇರವಾಗಿ ಪ್ರಭಾವಿತಗೊಂಡಿದೆ ಎಂದು ತಿಳಿಸಿದ.[೧೨೬] ಮೌಲೀನ್‌ ರೋಜ್‌! ಚಿತ್ರದ ವಿಮರ್ಶಾತ್ಮಕ ಹಾಗೂ ವ್ಯಾವಹಾರಿಕ ಯಶಸ್ಸು ಅಂದು ಮರಣಾವಸ್ಥೆಯಲ್ಲಿದ್ದ ಪಾಶ್ಚಾತ್ಯ ಸಂಗೀತಮಯ ಶೈಲಿಯಲ್ಲಿನ ಆಸಕ್ತಿಯನ್ನು ನವೀಕರಿಸಿತು, ತರುವಾಯ ಆ ಪ್ರಕಾರದ ಒಂದು ಪುನರುಜ್ಜೀವನಕ್ಕೆ ಶಕ್ತಿಯನ್ನು ತುಂಬಿತು.[೧೨೭] ಡ್ಯಾನಿ ಬೋಯ್ಲ್‌‌ಆಸ್ಕರ್‌-ವಿಜೇತ ಚಲನಚಿತ್ರವಾದ ಸ್ಲಂಡಾಗ್‌ ಮಿಲಿಯನೇರ್‌ (2008) ಚಿತ್ರವೂ ಸಹ ಭಾರತೀಯ ಚಲನಚಿತ್ರಗಳಿಂದ[೫೬][೧೨೮] ನೇರವಾಗಿ ಪ್ರಭಾವಿತಗೊಂಡಿತ್ತು ಮತ್ತು ಇದು "ಹಿಂದಿ ವ್ಯಾಪಾರಿ ಚಲನಚಿತ್ರಕ್ಕೆ ಸಲ್ಲಿಸಲಾಗಿರುವ ಒಂದು ಗೌರವಾರ್ಪಣೆ" ಎಂದು ಪರಿಗಣಿಸಲ್ಪಟ್ಟಿದೆ.[೩೧] ವಿಧು ವಿನೋದ್‌ ಚೋಪ್ರಾ, ಜಹ್ನು ಬರುವಾ, ಸುಧೀರ್‌ ಮಿಶ್ರಾ ಮತ್ತು ಪಾನ್‌ ನಳಿನ್‌ರಂಥ ನಿರ್ದೇಶಕರಿಂದ ಮುಂಬರಲಿರುವ ಚಲನಚಿತ್ರಗಳೊಂದಿಗೆ ಹೆಚ್ಚು ಹೆಚ್ಚು ಜಾಗತಿಕ ಪ್ರೇಕ್ಷಕರನ್ನು ತಲುಪುವ ಕಡೆಗೆ ಇತರ ಭಾರತೀಯ ಚಲನಚಿತ್ರ ತಯಾರಕರು ಪ್ರಯತ್ನಪಡುತ್ತಿದ್ದಾರೆ.[೧೨೯]

ಪ್ರಶಸ್ತಿಗಳು

ಬದಲಾಯಿಸಿ
ಪ್ರಶಸ್ತಿ ಆರಂಭವಾಗಿದ್ದು ಪ್ರಶಸ್ತಿ ನೀಡುವವರು
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (1954). ಚಲನಚಿತ್ರೋತ್ಸವಗಳ ನಿರ್ದೇಶನಾಲಯ, ಭಾರತ ಸರ್ಕಾರ
ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು 1937 ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು, ಪಶ್ಚಿಮ ಬಂಗಾಳ ಸರ್ಕಾರ
ಫಿಲ್ಮ್‌ಫೇರ್‌ ಪ್ರಶಸ್ತಿಗಳು 1954 ಫಿಲ್ಮ್‌ಫೇರ್‌‌
ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳು 1995 STAR TV (ಏಷ್ಯಾ)
ಝೀ ಸಿನಿ ಪ್ರಶಸ್ತಿಗಳು 1998 ಝೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌
IIFA 2000

ಇತರ ಪ್ರಶಸ್ತಿಗಳಲ್ಲಿ, ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು, ಅಂತರರಾಷ್ಟ್ರೀಯ ತಮಿಳು ಚಲನಚಿತ್ರ ಪ್ರಶಸ್ತಿಗಳು, ಬಾಲಿವುಡ್‌ ಚಲನಚಿತ್ರ ಪ್ರಶಸ್ತಿಗಳು, ನಂದಿ ಪ್ರಶಸ್ತಿಗಳು ಮತ್ತು ಜಾಗತಿಕ ಭಾರತೀಯ ಚಲನಚಿತ್ರ ಪ್ರಶಸ್ತಿಗಳು ಸೇರಿವೆ.

ಭಾರತದಲ್ಲಿರುವ ಚಲನಚಿತ್ರ ತರಬೇತಿ ಸಂಸ್ಥೆಗಳು

ಬದಲಾಯಿಸಿ

ಸರ್ಕಾರ ಮತ್ತು ಖಾಸಗಿ ವಲಯಗಳೆರಡರಿಂದಲೂ ನಡೆಸಲ್ಪಡುತ್ತಿರುವ ಹಲವಾರು ತರಬೇತಿ ಸಂಸ್ಥೆಗಳು ಚಲನಚಿತ್ರ ನಿರ್ಮಾಣದ ಹಲವಾರು ಮಗ್ಗುಲುಗಳಲ್ಲಿ ಔಪಚಾರಿಕ ಶಿಕ್ಷಣವನ್ನು ನೀಡುತ್ತವೆ. ಅವುಗಳ ಪೈಕಿ ಕೆಲವು ಸಂಸ್ಥೆಗಳ ಹೆಸರನ್ನು ಇಲ್ಲಿ ನೀಡಲಾಗಿದೆ:

ಇವನ್ನೂ ನೋಡಿ

ಬದಲಾಯಿಸಿ

ಸೂಚನೆ: ಇದು ಒಂದು ಸಮಗ್ರವಾದ ಪಟ್ಟಿಯಲ್ಲ.

ಟಿಪ್ಪಣಿಗಳು

ಬದಲಾಯಿಸಿ
  1. ಬ್ರಿಟಾನಿಕಾ ವಿಶ್ವಕೋಶ (2009), ಬಾಲಿವುಡ್‌ .
  2. ೨.೦ ೨.೧ ೨.೨ ೨.೩ Srikanth Srinivasan (4 August 2008). "Do Bigha Zamin: Seeds of the Indian New Wave". Dear Cinema. Retrieved 2009-04-13.
  3. ೩.೦ ೩.೧ ೩.೨ ದೋ ಬೀಘಾ ಝಮೀನ್‌ ಅಟ್‌ ಫಿಲ್ಮ್‌ರೆಫರೆನ್ಸ್‌
  4. ೪.೦ ೪.೧ ಖನ್ನಾ, 155
  5. ೫.೦ ೫.೧ ಖನ್ನಾ, 158
  6. ಖನ್ನಾ, 158–159
  7. ಖನ್ನಾ, 159
  8. ವಾಟ್ಸನ್‌ (2009)
  9. ೯.೦ ೯.೧ ೯.೨ ಖನ್ನಾ, "ದಿ ಬಿಸಿನೆಸ್‌ ಆಫ್‌ ದಿ ಹಿಂದಿ ಫಿಲ್ಮ್ಸ್‌", 140
  10. ೧೦.೦ ೧೦.೧ ೧೦.೨ ೧೦.೩ ಖನ್ನಾ, 156
  11. ೧೧.೦ ೧೧.೧ ೧೧.೨ ೧೧.೩ ೧೧.೪ ಪಾಟ್ಸ್‌, 74
  12. ೧೨.೦ ೧೨.೧ ೧೨.೨ ೧೨.೩ ೧೨.೪ ೧೨.೫ ೧೨.೬ ೧೨.೭ ಪಾಟ್ಸ್‌, 75
  13. ನಗರದೊಳಗಿನ ಒಂದು ನಗರವಾಗಿರುವ, ರಾಮೋಜಿ ಫಿಲ್ಮ್‌ ಸಿಟಿ (RFC) ಅತ್ಯಂದ ದೊಡ್ಡದಾದ, ಅತ್ಯಂತ ವ್ಯಾಪಕವಾದ, ಮತ್ತು ಅತ್ಯಂತ ವೃತ್ತಿಪರವಾದ ರೀತಿಯಲ್ಲಿ ಯೋಜಿಸಲಾದ ವಿಶ್ವದಲ್ಲಿನ ಚಲನಚಿತ್ರ ನಿರ್ಮಾಣ ಕೇಂದ್ರವಾಗಿದೆ....ಇಪ್ಪತ್ತೊಂಬತ್ತು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಏಳೂವರೆ ಸಾವಿರಕ್ಕಿಂತಲೂ ಹೆಚ್ಚಿನ ನೌಕರರೊಂದಿಗಿನ RFCಯು ಯಾವುದೇ ಒಂದು ಸಮಯದಲ್ಲಿ ಇಪ್ಪತ್ತು ಅಂತರರಾಷ್ಟ್ರೀಯ ಚಲನಚಿತ್ರಗಳ ನಿರ್ಮಾಣಕಾರ್ಯಕ್ಕೆ ಅವಕಾಶ ಕಲ್ಪಿಸುವ ಮತ್ತು ಕಡೇಪಕ್ಷ ನಲವತ್ತು ಭಾರತೀಯ ಚಲನಚಿತ್ರಗಳಿಗೆ ಏಕಕಾಲದಲ್ಲಿ ಅಗತ್ಯ ಪೂರೈಸಬಲ್ಲ ಸಾಮರ್ಥ್ಯ ಹೊಂದಿದೆ - ಕುಮಾರ್‌, 132.
  14. ೧೪.೦ ೧೪.೧ ೧೪.೨ ೧೪.೩ ೧೪.೪ ಬುರ್ರಾ & ರಾವ್‌, 252
  15. McKernan, Luke (1996-12-31). "Hiralal Sen (copyright British Film Institute)". Retrieved 2006-11-01.
  16. ೧೬.೦ ೧೬.೧ ೧೬.೨ ೧೬.೩ ೧೬.೪ ೧೬.೫ ೧೬.೬ ಬುರ್ರಾ & ರಾವ್‌, 253
  17. ೧೭.೦ ೧೭.೧ ೧೭.೨ ೧೭.೩ ಬುರ್ರಾ & ರಾವ್‌, 252–253
  18. ೧೮.೦ ೧೮.೧ ೧೮.೨ ೧೮.೩ ೧೮.೪ ೧೮.೫ ೧೮.೬ ಬುರ್ರಾ & ರಾವ್‌, 254
  19. ೧೯.೦ ೧೯.೧ ೧೯.೨ ೧೯.೩ ರಾಜಾಧ್ಯಕ್ಷ, 679
  20. ೨೦.೦ ೨೦.೧ ೨೦.೨ ರಾಜಾಧ್ಯಕ್ಷ, 684
  21. ರಾಜಾಧ್ಯಕ್ಷ, 681–683
  22. ರಾಜಾಧ್ಯಕ್ಷ, 681
  23. K. Moti Gokulsing, K. Gokulsing, Wimal Dissanayake (2004), Indian Popular Cinema: A Narrative of Cultural Change, Trentham Books, p. 17, ISBN 1858563291{{citation}}: CS1 maint: multiple names: authors list (link)
  24. Sharpe, Jenny (2005), "Gender, Nation, and Globalization in Monsoon Wedding and Dilwale Dulhania Le Jayenge", Meridians: feminism, race, transnationalism, 6 (1): 58–81 [60 & 75]
  25. Gooptu, Sharmistha (July 2002), "Reviewed work(s): The Cinemas of India (1896–2000) by Yves Thoraval", Economic and Political Weekly, 37 (29): 3023–4{{citation}}: CS1 maint: date and year (link)
  26. ೨೬.೦ ೨೬.೧ ೨೬.೨ ೨೬.೩ ೨೬.೪ ೨೬.೫ K. Moti Gokulsing, K. Gokulsing, Wimal Dissanayake (2004), Indian Popular Cinema: A Narrative of Cultural Change, Trentham Books, p. 18, ISBN 1858563291{{citation}}: CS1 maint: multiple names: authors list (link)
  27. Mother India @ ಐ ಎಮ್ ಡಿ ಬಿ
  28. "Film Festival – Bombay Melody". University of California, Los Angeles. 17 March 2004. Retrieved 2009-05-20.
  29. Bobby Sing (10 February 2008). "Do Ankhen Barah Haath (1957)". Bobby Talks Cinema. Archived from the original on 2012-11-14. Retrieved 2009-05-30.
  30. Doniger, Wendy (2005), "Chapter 6: Reincarnation", The woman who pretended to be who she was: myths of self-imitation, Oxford University Press, pp. 112–136 [135], ISBN 0195160169
  31. ೩೧.೦ ೩೧.೧ ೩೧.೨ ಮೇಕರ್‌ ಆಫ್‌ ಇನ್ನೊವೆಟಿವ್‌, ಮೀನಿಂಗ್‌ಫುಲ್‌ ಮೂವೀಸ್‌ Archived 2012-11-07 ವೇಬ್ಯಾಕ್ ಮೆಷಿನ್ ನಲ್ಲಿ.. ದಿ ಹಿಂದೂ , 15 ಜೂನ್‌ 2007
  32. Ghatak, Ritwik (2000), Rows and Rows of Fences: Ritwik Ghatak on Cinema, Ritwik Memorial & Trust Seagull Books, pp. ix & 134–36, ISBN 8170461782
  33. Hood, John (2000), The Essential Mystery: The Major Filmmakers of Indian Art Cinema, Orient Longman Limited, pp. 21–4, ISBN 8125018700
  34. ರಾಜಾಧ್ಯಕ್ಷ, 683
  35. ೩೫.೦ ೩೫.೧ Sragow, Michael (1994), "An Art Wedded to Truth", The Atlantic Monthly, University of California, Santa Cruz, archived from the original on 2009-04-12, retrieved 2009-05-11
  36. ೩೬.೦ ೩೬.೧ "Subrata Mitra". Internet Encyclopedia of Cinematographers. Archived from the original on 2009-06-02. Retrieved 2009-05-22.
  37. Nick Pinkerton (April 14th 2009). "First Light: Satyajit Ray From the Apu Trilogy to the Calcutta Trilogy". The Village Voice. Archived from the original on 2009-06-25. Retrieved 2009-07-09. {{cite web}}: Check date values in: |date= (help); Italic or bold markup not allowed in: |publisher= (help)
  38. ೩೮.೦ ೩೮.೧ Ray, Satyajit. "Ordeals of the Alien". The Unmade Ray. Satyajit Ray Society. Archived from the original on 2008-04-27. Retrieved 2008-04-21.
  39. ೩೯.೦ ೩೯.೧ Neumann P. "Biography for Satyajit Ray". Internet Movie Database Inc. Retrieved 2006-04-29.
  40. ೪೦.೦ ೪೦.೧ Newman J (2001-09-17). "Satyajit Ray Collection receives Packard grant and lecture endowment". UC Santa Cruz Currents online. Archived from the original on 2005-11-04. Retrieved 2006-04-29.
  41. "Nagesh: A legacy like no other". India Glitz. 1 February 2009. Retrieved 2009-05-21.
  42. Mukta Rajadhyaksha (29 August 2004). "Marathi cinema gets a shot in the arm". ಟೈಮ್ಸ್ ಆಫ್ ಇಂಡಿಯ. Retrieved 2009-05-29. {{cite web}}: Italic or bold markup not allowed in: |publisher= (help)
  43. ೪೩.೦ ೪೩.೧ "India and Cannes: A Reluctant Courtship". Passion For Cinema. 2008. Archived from the original on 2009-06-20. Retrieved 2009-05-20.
  44. K. Moti Gokulsing, K. Gokulsing, Wimal Dissanayake (2004), Indian Popular Cinema: A Narrative of Cultural Change, Trentham Books, pp. 18–9, ISBN 1858563291{{citation}}: CS1 maint: multiple names: authors list (link)
  45. ೪೫.೦ ೪೫.೧ Kevin Lee (2002-09-05). "A Slanted Canon". Asian American Film Commentary. Archived from the original on 2012-05-31. Retrieved 2009-04-24.
  46. ೪೬.೦ ೪೬.೧ Totaro, Donato (31 January 2003), "The "Sight & Sound" of Canons", Offscreen Journal, Canada Council for the Arts, retrieved 2009-04-19
  47. "Sight and Sound Poll 1992: Critics". California Institute of Technology. Archived from the original on 2015-06-18. Retrieved 2009-05-29.
  48. Aaron and Mark Caldwell (2004). "Sight and Sound". Top 100 Movie Lists. Archived from the original on 2001-04-14. Retrieved 2009-04-19.
  49. "SIGHT AND SOUND 1992 RANKING OF FILMS". Archived from the original on 2007-10-23. Retrieved 2009-05-29.
  50. "SIGHT AND SOUND 1982 RANKING OF FILMS". Archived from the original on 2007-10-23. Retrieved 2009-05-29.
  51. "2002 Sight & Sound Top Films Survey of 253 International Critics & Film Directors". Cinemacom. 2002. Retrieved 2009-04-19.
  52. ೫೨.೦ ೫೨.೧ "Take One: The First Annual Village Voice Film Critics' Poll". The Village Voice. 1999. Archived from the original on 2007-08-26. Retrieved 2006-07-27. {{cite web}}: Italic or bold markup not allowed in: |publisher= (help)
  53. ೫೩.೦ ೫೩.೧ ೫೩.೨ "[[Time magazine's "All-TIME" 100 best movies|All-Time 100 Best Movies]]". Time. Time, Inc. 2005. Archived from the original on 2005-05-23. Retrieved 2008-05-19. {{cite web}}: URL–wikilink conflict (help)
  54. ರಾಜಾಧ್ಯಕ್ಷ, 685
  55. ೫೫.೦ ೫೫.೧ ೫೫.೨ ೫೫.೩ ೫೫.೪ ರಾಜಾಧ್ಯಕ್ಷ, 688
  56. ೫೬.೦ ೫೬.೧ Amitava Kumar (23 December 2008). "Slumdog Millionaire's Bollywood Ancestors". Vanity Fair. Archived from the original on 2012-05-29. Retrieved 2008-01-04. {{cite web}}: Italic or bold markup not allowed in: |publisher= (help)
  57. ರಾಜಾಧ್ಯಕ್ಷ, 688–689
  58. Corliss, Richard (2005). "Best Soundtracks – ALL TIME 100 MOVIES – TIME". TIME. Archived from the original on 12 ಮಾರ್ಚ್ 2010. Retrieved 24 February 2008. {{cite web}}: Unknown parameter |dateformat= ignored (help)
  59. Kasbekar, Asha (2006). Pop Culture India!: Media, Arts and Lifestyle. ABC-CLIO. p. 215. ISBN 9781851096367. Songs play as important a part in South Indian films and some South Indian music directors such as A. R. Rehman and Ilyaraja have an enthusiastic national and even international following
  60. "Cinema History Malayalam Cinema". Malayalamcinema.com. Archived from the original on 2008-12-23. Retrieved 2008-12-30.
  61. "The Movie Interview: Adoor Gopalakrishnan". Rediff. 31 July 1997. Retrieved 2009-05-21.
  62. ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ Gopalakrishnan
  63. ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ N. Karun ."YODHA" ಎಂಬ ಮತ್ತೊಂದು ಮಲಯಾಳಂ ಚಲನಚಿತ್ರವು ತನ್ನ ಅದ್ಭುತ ಸಾಹಸ ಸನ್ನಿವೇಶಗಳಿಗಾಗಿ ಮತ್ತು ತಾಂತ್ರಿಕ ಅಂಶಗಳಿಗಾಗಿ ಭಾರತದ ಎಲ್ಲಾ ಭಾಗಗಳಿಂದ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು.
  64. Aruti Nayar (2007-12-16). "Bollywood on the table". The Tribune. Retrieved 2008-06-19.
  65. Christian Jungen (4 April 2009). "Urban Movies: The Diversity of Indian Cinema". FIPRESCI. Archived from the original on 2009-06-17. Retrieved 2009-05-11.
  66. http://www.rediff.com/money/2003/jun/10imax.htm
  67. ೬೭.೦ ೬೭.೧ K. Moti Gokulsing, K. Gokulsing, Wimal Dissanayake (2004), Indian Popular Cinema: A Narrative of Cultural Change, Trentham Books, p. 98, ISBN 1858563291{{citation}}: CS1 maint: multiple names: authors list (link)
  68. ೬೮.೦ ೬೮.೧ Matthew Jones (January 2010), "Bollywood, Rasa and Indian Cinema: Misconceptions, Meanings and Millionaire", Visual Anthropology, 23 (1): 33–43 {{citation}}: Unknown parameter |soi= ignored (help)
  69. ೬೯.೦ ೬೯.೧ Cooper, Darius (2000), The Cinema of Satyajit Ray: Between Tradition and Modernity, Cambridge University Press, pp. 1–4, ISBN 0521629802
  70. K. Moti Gokulsing, K. Gokulsing, Wimal Dissanayake (2004), Indian Popular Cinema: A Narrative of Cultural Change, Trentham Books, pp. 98–99, ISBN 1858563291{{citation}}: CS1 maint: multiple names: authors list (link)
  71. K. Moti Gokulsing, K. Gokulsing, Wimal Dissanayake (2004), Indian Popular Cinema: A Narrative of Cultural Change, Trentham Books, p. 99, ISBN 1858563291{{citation}}: CS1 maint: multiple names: authors list (link)
  72. ಜ್ಯೋಮತಿ (1935) [೧], IMDB.com
  73. ಲಕ್ಷ್ಮಿ B. ಘೋಷ್‌, ಎ ರೇರ್‌ ಪೀಪ್‌ ಇನ್‌ಟು ವರ್ಲ್ಡ್‌ ಆಫ್‌ ಅಸ್ಸಾಮೀಸ್‌ ಸಿನಿಮಾ [೨] Archived 2006-01-10 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಹಿಂದೂ, 2006
  74. ಗೋಕುಲ್‌ಸಿಂಗ್‌ & ದಿಸ್ಸಾನಾಯಕೆ, 138
  75. ಗೋಕುಲ್‌ಸಿಂಗ್‌ & ದಿಸ್ಸಾನಾಯಕೆ, 139
  76. ಗೋಕುಲ್‌ಸಿಂಗ್‌ & ದಿಸ್ಸಾನಾಯಕೆ, 138–140
  77. ೭೭.೦ ೭೭.೧ ೭೭.೨ ೭೭.೩ ೭೭.೪ ಗೋಕುಲ್‌ಸಿಂಗ್‌ & ದಿಸ್ಸಾನಾಯಕೆ, 129
  78. ಜಮಾಯಿ ಷಷ್ಠಿ ಕುರಿತಾದ IMDB ಪುಟ: ಮೊದಲ ಬಂಗಾಳಿ ಟಾಕೀ ಚಿತ್ರ
  79. Sarkar, Bhaskar (2008), "The Melodramas of Globalization", Cultural Dynamics, 20: 31–51 [34]
  80. Mesthrie, Rajend (1991). Language in Indenture: A Sociolinguistic History of Bhojpuri-Hindi in South Africa. London: Routledge. pp. 19–32. ISBN 041506404X.
  81. IMDB
  82. "ಆರ್ಕೈವ್ ನಕಲು". Archived from the original on 2012-08-26. Retrieved 2010-04-14.
  83. "ಮೂವ್‌ ಓವರ್‌ ಬಾಲಿವುಡ್‌, ಹಿಯರ್‌ ಈಸ್‌ ಭೋಜ್‌ಪುರಿ," BBC ನ್ಯೂಸ್‌ ಆನ್‌ಲೈನ್‌: http://news.bbc.co.uk/go/pr/fr/-/1/hi/world/south_asia/4512812.stm
  84. "ಆರ್ಕೈವ್ ನಕಲು". Archived from the original on 2009-09-04. Retrieved 2010-04-14.
  85. Pippa de Bruyn; Niloufer Venkatraman; Keith Bain (2006). Frommer's India. Frommer's. p. 579. ISBN 0471794341.{{cite book}}: CS1 maint: multiple names: authors list (link)
  86. Crusie, Jennifer;Yeffeth, Glenn (2005). Flirting with Pride & Prejudice. BenBella Books, Inc. p. 92. ISBN 1932100725.{{cite book}}: CS1 maint: multiple names: authors list (link)
  87. ಗೋಕುಲ್‌ಸಿಂಗ್‌ & ದಿಸ್ಸಾನಾಯಕೆ, 10–11
  88. ಗೋಕುಲ್‌ಸಿಂಗ್‌ & ದಿಸ್ಸಾನಾಯಕೆ, 10
  89. ಗೋಕುಲ್‌ಸಿಂಗ್‌ & ದಿಸ್ಸಾನಾಯಕೆ, 11
  90. "ಆರ್ಕೈವ್ ನಕಲು". Archived from the original on 2009-02-04. Retrieved 2010-04-14.
  91. "ಆರ್ಕೈವ್ ನಕಲು". Archived from the original on 2014-07-31. Retrieved 2010-04-14.
  92. "ಆರ್ಕೈವ್ ನಕಲು" (PDF). Archived from the original (PDF) on 2010-01-19. Retrieved 2010-04-14.
  93. "ಆರ್ಕೈವ್ ನಕಲು". Archived from the original on 2010-01-04. Retrieved 2023-02-08.
  94. ೯೪.೦ ೯೪.೧ ಗೋಕುಲ್‌ಸಿಂಗ್‌ & ದಿಸ್ಸಾನಾಯಕೆ, 136
  95. ೯೫.೦ ೯೫.೧ ಗೋಕುಲ್‌ಸಿಂಗ್‌ & ದಿಸ್ಸಾನಾಯಕೆ, 137
  96. "History Of Oriya Film Industry". www.izeans.com. Archived from the original on 2011-09-20. Retrieved 2008-10-23. {{cite web}}: Text "iZeans" ignored (help)
  97. "Orissa Cinema :: History of Orissa Cinema, Chronology of Orissa Films". orissacinema.com. Archived from the original on 2008-07-05. Retrieved 2008-10-23.
  98. ೯೮.೦ ೯೮.೧ ಗೋಕುಲ್‌ಸಿಂಗ್‌ & ದಿಸ್ಸಾನಾಯಕೆ, 132
  99. ಗೋಕುಲ್‌ಸಿಂಗ್‌ & ದಿಸ್ಸಾನಾಯಕೆ, 132–133
  100. ೧೦೦.೦ ೧೦೦.೧ ಗೋಕುಲ್‌ಸಿಂಗ್‌ & ದಿಸ್ಸಾನಾಯಕೆ, 133
  101. http://www.blonnet.com/2007/11/06/stories/2007110650842300.htm
  102. ತೆಲುಗು ಫಿಲ್ಮ್‌ ಇಂಡಸ್ಟ್ರಿ ಎಂಟರ್ಸ್‌ ನ್ಯೂ ಎರಾ
  103. ಟ್ರೆಂಡ್ಸ್‌ ಅಂಡ್‌ ಜೆನ್ರ್‌ಸ್‌
  104. "The Sight & Sound Top Ten Poll: 1992". Sight & Sound. British Film Institute. Archived from the original on 2012-03-09. Retrieved 2008-05-20.
  105. ದಿ ಬೆಸ್ಟ್‌ 1,000 ಮೂವೀಸ್‌ ಎವರ್‌ ಮೇಡ್‌ ಬೈ THE FILM CRITICS OF THE NEW YORK TIMES, ನ್ಯೂಯಾರ್ಕ್‌ ಟೈಮ್ಸ್‌ 2002.
  106. ೧೦೬.೦ ೧೦೬.೧ ೧೦೬.೨ ೧೦೬.೩ [170] ಥಾಂಪ್ಸನ್‌, 74
  107. ೧೦೭.೦ ೧೦೭.೧ ಝುಂಖಾವಾಲಾ-ಕುಕ್‌, 312
  108. ೧೦೮.೦ ೧೦೮.೧ ವೇಲಾಯುಧಂ, 174
  109. ೧೦೯.೦ ೧೦೯.೧ ೧೦೯.೨ ದೇಸಾಯಿ, 38
  110. Anil K. Joseph (20 November 2002). "Lagaan revives memories of Raj Kapoor in China". Press Trust of India. Archived from the original on 2012-08-26. Retrieved 2009-01-30.
  111. "Rahman's 'Lagaan' cast a spell on me". Sify. 13 February 2004. Retrieved 2009-02-24.
  112. "RussiaToday : Features : Bollywood challenges Hollywood in Russia". Archived from the original on 2008-06-26. Retrieved 2010-04-14.
  113. Ashreena, Tanya. "Promoting Bollywood Abroad Will Help to Promote India". Archived from the original on 2013-12-03. Retrieved 2010-04-14.
  114. Arthur J Pais (14 April 2009). "Why we admire Satyajit Ray so much". Rediff.com. Retrieved 2009-04-17.
  115. Chris Ingui. "Martin Scorsese hits DC, hangs with the Hachet". Hatchet. Archived from the original on 2009-08-26. Retrieved 2009-06-06.
  116. Sheldon Hall. "Ivory, James (1928–)". Screen Online. Retrieved 2007-02-12.
  117. Dave Kehr (5 May 1995). "THE 'WORLD' OF SATYAJIT RAY: LEGACY OF INDIA'S PREMIER FILM MAKER ON DISPLAY". Daily News. Archived from the original on 2009-09-15. Retrieved 2009-06-06. {{cite web}}: Italic or bold markup not allowed in: |publisher= (help)
  118. Suchetana Ray (11 March 2008). "Satyajit Ray is this Spanish director's inspiration". CNN-IBN. Archived from the original on 2014-07-07. Retrieved 2009-06-06.
  119. André Habib. "Before and After: Origins and Death in the Work of Jean-Luc Godard". Senses of Cinema. Archived from the original on 2006-06-14. Retrieved 2006-06-29.
  120. Daniel Thomas (20 January 2003). "Film Reviews: Grave of the Fireflies (Hotaru no Haka)". Archived from the original on 2012-10-30. Retrieved 2009-05-30.
  121. "On Ray's Trail". The Statesman. Archived from the original on 2008-01-03. Retrieved 2007-10-19.
  122. Robinson, A (2003), Satyajit Ray: The Inner Eye: The Biography of a Master Film-Maker, I. B. Tauris, p. 96, ISBN 1860649653
  123. Carrigy, Megan (October 2003), "Ritwik Ghatak", Senses of Cinema, retrieved 2009-05-03
  124. "Asian Film Series No.9 GURU DUTT Retorospective". Japan Foundation. 2001. Archived from the original on 2009-06-20. Retrieved 2009-05-13.
  125. ದೇಸಾಯಿ, 37
  126. "Baz Luhrmann Talks Awards and "Moulin Rouge"". About.com. Archived from the original on 2012-05-02. Retrieved 2009-05-15.
  127. "Guide Picks – Top Movie Musicals on Video/DVD". About.com. Archived from the original on 2009-01-24. Retrieved 2009-05-15.
  128. "Slumdog draws crowds, but not all like what they see". The Age. 25 January 2009. Retrieved 2008-01-24. {{cite web}}: Italic or bold markup not allowed in: |publisher= (help)
  129. http://news.bbc.co.uk/2/hi/south_asia/7412344.stm

ಆಕರಗಳು

ಬದಲಾಯಿಸಿ
  • ಬಾಲಿವುಡ್‌ ಷೋಪ್ಲೇಸಸ್‌, ಸಿನಿಮಾ ಥಿಯೇಟರ್ಸ್‌ ಇನ್‌ ಇಂಡಿಯಾ, ಡೇವಿಡ್‌ ವಿನ್ನೆಲ್ಸ್‌ & ಬ್ರೆಂಟ್‌ ಸ್ಕೆಲ್ಲಿ, ISBN 0-9516563-5-X
  • ಬುರ್ರಾ, ರಾಣಿ ಡೇ & ರಾವ್‌, ಮೈಥಿಲಿ (2006), "ಸಿನಿಮಾ", ಎನ್‌ಸೈಕ್ಲೋಪೀಡಿಯಾ ಆಫ್‌ ಇಂಡಿಯಾ (ಸಂಪುಟ. 1) , ಥಾಮ್ಸನ್‌ ಗೇಲ್‌, ISBN 0-684-31350-2.
  • ದೇಸಾಯಿ, ಜಿಗ್ನಾ (2004), ಬಿಯಾಂಡ್‌ ಬಾಲಿವುಡ್‌: ದಿ ಕಲ್ಚರಲ್‌ ಪಾಲಿಟಿಕ್ಸ್‌ ಆಫ್‌ ಸೌತ್‌ ಏಷ್ಯನ್‌ ಡಯಾಸ್ಪೋರಿಕ್‌ ಫಿಲ್ಮ್‌ , ರೌಟ್‌ಲೆಡ್ಜ್‌, ISBN 0-415-96684-1.
  • ಗೋಕುಲ್‌ಸಿಂಗ್‌, K. M. & ದಿಸ್ಸಾನಾಯಕೆ, W. (2004), ಇಂಡಿಯನ್‌ ಪಾಪ್ಯುಲರ್‌ ಸಿನಿಮಾ: ಎ ನೆರೇಟಿವ್‌ ಆಫ್‌ ಕಲ್ಚರಲ್‌ ಚೇಂಜ್‌ (2ನೇ ಆವೃತ್ತಿ) , ಟ್ರೆಂಥಾಮ್‌ ಬುಕ್ಸ್‌, ISBN 1-85856-329-1.
  • ಖನ್ನಾ, ಅಮಿತ್‌ (2003), "ದಿ ಬಿಸಿನೆಸ್‌ ಆಫ್‌ ಹಿಂದಿ ಫಿಲ್ಮ್ಸ್‌", ಎನ್‌ಸೈಕ್ಲೋಪೀಡಿಯಾ ಆಫ್‌ ಹಿಂದಿ ಸಿನಿಮಾ: ಹಿಸ್ಟಾರಿಕಲ್‌ ರೆಕಾರ್ಡ್‌, ದಿ ಬಿಸಿನೆಸ್‌ ಅಂಡ್‌ ಇಟ್ಸ್‌ ಫ್ಯೂಚರ್‌, ನೆರೇಟಿವ್‌ ಫಾರ್ಮ್ಸ್‌, ಅನಾಲಿಸಿಸ್‌ ಆಫ್‌ ದಿ ಮೀಡಿಯಂ, ಮೈಲ್‌ಸ್ಟೋನ್ಸ್‌, ಬಯಾಗ್ರಫೀಸ್‌ , ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ (ಭಾರತ) ಪ್ರೈವೇಟ್‌ ಲಿಮಿಟೆಡ್‌, ISBN 81-7991-066-0.
  • ಖನ್ನಾ, ಅಮಿತ್‌ (2003), "ದಿ ಫ್ಯೂಚರ್‌ ಆಫ್‌ ಹಿಂದಿ ಫಿಲ್ಮ್‌ ಬಿಸಿನೆಸ್‌", ಎನ್‌ಸೈಕ್ಲೋಪೀಡಿಯಾ ಆಫ್‌ ಹಿಂದಿ ಸಿನಿಮಾ: ಹಿಸ್ಟಾರಿಕಲ್‌ ರೆಕಾರ್ಡ್‌, ದಿ ಬಿಸಿನೆಸ್‌ ಅಂಡ್‌ ಇಟ್ಸ್‌ ಫ್ಯೂಚರ್‌, ನೆರೇಟಿವ್‌ ಫಾರ್ಮ್ಸ್‌, ಅನಾಲಿಸಿಸ್‌ ಆಫ್‌ ದಿ ಮೀಡಿಯಂ, ಮೈಲ್‌ಸ್ಟೋನ್ಸ್‌, ಬಯಾಗ್ರಫೀಸ್‌ , ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ (ಭಾರತ) ಪ್ರೈವೇಟ್‌ ಲಿಮಿಟೆಡ್‌, ISBN 81-7991-066-0.
  • ಕುಮಾರ್‌, ಶಾಂತಿ (2008), "ಬಾಲಿವುಡ್‌ ಅಂಡ್‌ ಬಿಯಾಂಡ್‌: ದಿ ಟ್ರಾನ್ಸ್‌ನ್ಯಾಷನಲ್‌ ಇಕಾನಮಿ ಆಫ್‌ ಫಿಲ್ಮ್‌ ಪ್ರೊಡಕ್ಷನ್‌ ಇನ್‌ ರಾಮೋಜಿ ಫಿಲ್ಮ್‌ ಸಿಟಿ, ಹೈದರಾಬಾದ್‌", ಗ್ಲೋಬಲ್‌ ಬಾಲಿವುಡ್‌: ಟ್ರಾವೆಲ್ಸ್‌ ಆಫ್‌ ಹಿಂದಿ ಸಾಂಗ್‌ ಅಂಡ್‌ ಡಾನ್ಸ್‌ , ಯೂನಿವರ್ಸಿಟಿ ಆಫ್‌ ಮಿನ್ನೆಸ್ಟೋವಾ ಪ್ರೆಸ್‌, ISBN 978-0-8166-4578-7.
  • ಪಾಟ್ಸ್‌, ಮೈಕೇಲ್‌ W. (2006), "ಫಿಲ್ಮ್‌ ಇಂಡಸ್ಟ್ರಿ", ಎನ್‌ಸೈಕ್ಲೋಪೀಡಿಯಾ ಆಫ್‌ ಇಂಡಿಯಾ (ಸಂಪುಟ. 2) , ಥಾಮ್ಸನ್‌ ಗೇಲ್‌, ISBN 0-684-31351-0.
  • ರಾಜಾಧ್ಯಕ್ಷ, ಆಶಿಶ್‌ (1996), "ಇಂಡಿಯಾ: ಫಿಲ್ಮಿಂಗ್‌ ದಿ ನೇಷನ್‌", ದಿ ಆಕ್ಸ್‌‌ಫರ್ಡ್‌ ಹಿಸ್ಟರಿ ಆಫ್‌ ವರ್ಲ್ಡ್‌ ಸಿನಿಮಾ , ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌, ISBN 0-19-811257-2.
  • ಥಾಂಪ್ಸನ್‌, ಗೋರ್ಡಾನ್‌ (2006), "ಫಿಲ್ಮೀಗೀತ್‌", ಎನ್‌ಸೈಕ್ಲೋಪೀಡಿಯಾ ಆಫ್‌ ಇಂಡಿಯಾ (ಸಂಪುಟ. 2) , ಥಾಮ್ಸನ್‌ ಗೇಲ್‌, ISBN 0-684-31351-0.
  • ವೇಲಾಯುಧಂ, ಸೆಲ್ವರಾಜ್‌ (2008), "ದಿ ಡಯಾಸ್ಪೋರಾ ಅಂಡ್‌ ದಿ ಗ್ಲೋಬಲ್‌ ಸರ್ಕ್ಯುಲೇಷನ್‌ ಆಫ್‌ ತಮಿಳ್‌ ಸಿನಿಮಾ", ತಮಿಳ್‌ ಸಿನಿಮಾ: ದಿ ಕಲ್ಚರಲ್‌ ಪಾಲಿಟಿಕ್ಸ್‌ ಆಫ್‌ ಇಂಡಿಯಾ'ಸ್‌ ಅದರ್‌ ಫಿಲ್ಮ್‌ ಇಂಡಸ್ಟ್ರಿ , ರೌಟ್‌ಲೆಡ್ಜ್‌, ISBN 978-0-415-39680-6.
  • ವಾಟ್ಸನ್‌, ಜೇಮ್ಸ್‌ L. (2009), ಗ್ಲೋಬಲೈಸೇಷನ್‌ , ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ.
  • ಝುಂಖಾವಾಲಾ-ಕುಕ್‌, ರಿಚರ್ಡ್‌ (2008), "ಬಾಲಿವುಡ್‌ ಗೆಟ್ಸ್‌ ಫಂಕಿ: ಅಮೆರಿಕನ್‌ ಹಿಪ್‌-ಹಾಪ್‌, ಬೇಸ್‌ಮೆಂಟ್‌ ಭಾಂಗ್ರಾ, ಅಂಡ್‌ ದಿ ರೇಷಿಯಲ್‌ ಪಾಲಿಟಿಕ್ಸ್‌ ಆಫ್‌ ಮ್ಯೂಸಿಕ್‌", ಗ್ಲೋಬಲ್‌ ಬಾಲಿವುಡ್‌: ಟ್ರಾವೆಲ್ಸ್‌ ಆಫ್‌ ಹಿಂದಿ ಸಾಂಗ್‌ ಅಂಡ್‌ ಡಾನ್ಸ್‌ , ಯೂನಿವರ್ಸಿಟಿ ಆಫ್‌ ಮಿನ್ನೆಸ್ಟೋವಾ ಪ್ರೆಸ್‌, ISBN 978-0-8166-4578-7.

ಮಾಹಿತಿ ತಾಣ

ಬದಲಾಯಿಸಿ