ಪ್ರಭುದೇವ
ಪ್ರಭುದೇವ (ಜನನ ೩ ಏಪ್ರಿಲ್ ೧೯೭೩) ಭಾರತೀಯ ಚಲನಚಿತ್ರರಂಗದ ನಟರಾಗಿ, ನರ್ತಕರಾಗಿ, ನಿರ್ದೇಶಕರಾಗಿ, ನೃತ್ಯ ಸಂಯೋಜಕರಾಗಿ ಪ್ರಸಿದ್ಧಿ ಪಡೆದಿದ್ದಾರೆ.
ಪ್ರಭುದೇವ | |
---|---|
Born | ಪ್ರಭುದೇವ ಜನನ ೩ ಏಪ್ರಿಲ್ ೧೯೭೩[೧][೨] ಮೈಸೂರು, ಕರ್ನಾಟಕ, ಬಾರತ |
Occupation(s) | ಚಲನಚಿತ್ರ ನಟ, ನಿರ್ದೇಶಕ, ನೃತ್ಯ ಸಂಯೋಜಕ, ನಿರ್ಮಾಪಕ. |
Years active | ೧೯೮೮ - ಪ್ರಸ್ತುತ |
Parent(s) | ಮೂಗೂರು ಸುಂದರ್ ಮಹದೇವಮ್ಮ ಸುಂದರ್ |
Awards | ಪದ್ಮಶ್ರೀ |
ಜೀವನ
ಬದಲಾಯಿಸಿಭಾರತೀಯ ಚಿತ್ರರಂಗ ಕಂಡ ಅಪೂರ್ವ ಪ್ರತಿಭೆಗಳಲ್ಲಿ ಒಬ್ಬರಾದ ಪ್ರಭುದೇವ ಏಪ್ರಿಲ್ ೩, ೧೯೭೩ ರಲ್ಲಿ ಮೈಸೂರಿನಲ್ಲಿ ಜನಿಸಿದರು. ಪ್ರಭುದೇವರ ತಂದೆ ಮೂಗೂರು ಸುಂದರ್ ಕನ್ನಡವೂ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಪ್ರಸಿದ್ಧರು. ತಮ್ಮ ತಂದೆಯಿಂದ ಪ್ರೇರೇಪಣೆ ಪಡೆದ ಪ್ರಭುದೇವ ಭರತ ನಾಟ್ಯ ಮತ್ತು ಇತರ ಭಾರತೀಯ ನೃತ್ಯ ಕಲೆಗಳ ಜೊತೆಗೆ ಪಾಶ್ಚಿಮಾತ್ಯ ನೃತ್ಯ ಕಲೆಗಳಲ್ಲೂ ಅಭ್ಯಾಸ ನಡೆಸಿದರು. ನೃತ್ಯ ಕಲೆ ಅವರ ಆಸ್ಥೆ ಮತ್ತು ವೃತ್ತಿ ಎರಡೂ ಆದವು.
ಅಸಾಮಾನ್ಯ ನಾಟ್ಯ ಪ್ರತಿಭೆ
ಬದಲಾಯಿಸಿನಾಟ್ಯದಲ್ಲಂತೂ ಪ್ರಭುದೇವ ಅವರು ಮಾಡದಂತಹ ನಾಟ್ಯವೇ ಇಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆತ ಹೆಜ್ಜೆ ಇಟ್ಟದ್ದೆಲ್ಲಾ ನಾಟ್ಯವೇ. ಸಾಮಾನ್ಯವಾಗಿ ಒಬ್ಬ ನಟ ಜನಪ್ರಿಯನಾದಾಗ ಅದಕ್ಕೆ ಹೋಲಿಕೆಗಳೂ ಹುಟ್ಟಿಕೊಳ್ಳುತ್ತವೆ. ಪ್ರಭುದೇವನನ್ನು ಕುರಿತು ಹೇಳುವಾಗ ಮೈಖೆಲ್ ಜಾಕ್ಸನ್ ಹೆಸರನ್ನು ಭಾರತೀಯರು ಯೋಚಿಸುವುದು ಅಘೋಷಿತ ವಾಡಿಕೆಯೇ ಆಗಿದೆ. ಅದೇನೇ ಇರಲಿ ಪ್ರಭುದೇವ ಭಾರತೀಯ ಚಿತ್ರರಸಿಕರ ಮನದಲ್ಲಿ ಮೂಡಿಸಿರುವ ನಾಟ್ಯದ ಕ್ರೇಜ್ ಅನ್ನಂತೂ ಅಲ್ಲಗೆಳೆಯುವಂತಿಲ್ಲ.
ಶ್ರೇಷ್ಠ ನೃತ್ಯ ಸಂಯೋಜಕ, ನಟ ನಿರ್ದೇಶಕ
ಬದಲಾಯಿಸಿ- ಚಿತ್ರರಂಗದಲ್ಲಿ ನೃತ್ಯದ ಅಳವಡಿಕೆಗಳ ಸ್ವರೂಪದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಪ್ರಭುದೇವ ಇಂದು ಚಿತ್ರರಂಗದ ಶ್ರೇಷ್ಠ ಕೋರಿಯಾಗ್ರಫರುಗಳಲ್ಲಿ ಒಬ್ಬರು ಎಂದು ಪ್ರಸಿದ್ಧ ಪಡೆದಿದ್ದಾರೆ. ಅವರು ‘ಮಿನ್ಸಾರ್ ಕನವು’, ‘ಲಕ್ಷ್ಯ’ ಚಿತ್ರಗಳಿಗೆ ಪಡೆದ ರಾಷ್ಟ್ರಪ್ರಶಸ್ತಿ ಇದನ್ನು ಸ್ಪಷ್ಟೀಕರಿಸುತ್ತದೆ. ಮಾಧುರಿ ದೀಕ್ಷಿತ್ ಅಂತಹ ಕಲಾವಿದೆಯನ್ನೂ ಒಳಗೊಂಡಂತೆ ‘ಪುಕಾರ್’ ಚಿತ್ರದಲ್ಲಿನ ನೃತ್ಯ ಸನ್ನಿವೇಶವನ್ನು ಅದ್ಭುತವಾಗಿ ಮೂಡಿಸಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.
- ಕಮಲಹಾಸನ್ ಅಂತಹ ಶ್ರೇಷ್ಠ ನಟನ ಜೊತೆ ಕೂಡಾ ಸರಿ ಸಮಾನ ಪಾತ್ರದಲ್ಲಿ ನಟಿಸಿ ದ್ದಾರೆ. ಪ್ರಭುದೇವ ಚಿತ್ರರಂಗಕ್ಕೆ ಬಂದದ್ದು ವೇಟ್ರಿ ವಿಯಾ ಎಂಬ ಚಿತ್ರದಿಂದ. ಅಲ್ಲಿಂದೀಚೆಗೆ ಅವರು ನೂರಾರು ಚಿತ್ರಗಳಿಗೆ ಕೋರಿಯಾಗ್ರಫಿ ನೀಡಿದ್ದಾರೆ.ಹಿಂದಿಯಲ್ಲಿ ಸಲ್ಮಾನ್ ಖಾನನ ಇತ್ತೀಚಿನ ಯಶಸ್ವೀ ಚಿತ್ರ ‘ವಾಂಟೆಡ್’, ಅಕ್ಷಯ್ ಕುಮಾರನ ‘ರೌಡಿ ರಾಥೋಡ್’ ಚಿತ್ರದ ನಿರ್ದೇಶನ ಕೂಡಾ ಈತನದೇ. ಇಂದು ಪ್ರಭುದೇವ ಕೋರಿಯಾಗ್ರಫಿ, ನಿರ್ದೇಶನ, ನಿರ್ಮಾಣ ಮತ್ತು ನಟನೆಗಳಲ್ಲಿ ಅಪಾರ ಹೆಸರಾಗಿದ್ದಾರೆ.
- ತಮಿಳು, ತೆಲುಗು, ಹಿಂದಿ ಭಾಷೆಗಳೆಲ್ಲದರಲ್ಲಿ ಅವರು ವ್ಯಾಪಿಸಿದ್ದು ಈ ಎಲ್ಲಾ ಭಾಷೆಗಳಲ್ಲಿ ಅವರು ಜನಪ್ರಿಯ ಚಿತ್ರಗಳನ್ನು ನೀಡಿದ್ದಾರೆ ಎಂಬುದು ಗಮನಾರ್ಹವಾದದ್ದು. ನಟನೆಯ ಬಗ್ಗೆ ಹೇಳುವುದಾದರೆ ನೃತ್ಯ ಸನ್ನಿವೇಶಗಳನ್ನು ಒಳಗೊಂಡಂತೆ ಹೇಗೆ ಆಕರ್ಷಕರಾಗಿ ನಟಿಸುತ್ತಾ ರೋ ಅಷ್ಟೇ ಆಕರ್ಷಕವಾಗಿ ಹಾಸ್ಯ ಪಾತ್ರಗಳಲ್ಲಿ ಕೂಡಾ ಅಭಿನಯಿಸುವ ಈತನ ಪ್ರತಿಭೆ ಮೆಚ್ಚುವಂತದ್ದು. ಅಂದು ಅಗ್ನಿ ನಕ್ಷತ್ತಿರಂ ಚಿತ್ರದಲ್ಲಿ ಕಾಣದಂತೆ ನೃತ್ಯ ಮಾಡಿ ಹೋದ ಪ್ರಭುದೇವ ಮುಂದೆ ನೂರಾರು ಚಿತ್ರಗಳ ಹೀರೋ. ಕಾದಲನ್, ಜೆಂಟಲ್ ಮ್ಯಾನ್, ಮಿನ್ಸಾರ ಕನವು, ಪುಕಾರ್, ವಾನತ್ತೈ ಪೋಲ ಮುಂತಾದ ಚಿತ್ರಗಳಲ್ಲಿ ಆತನ ಕೈಚಳಕ ಮತ್ತು ಸಾಮರ್ಥ್ಯಗಳನ್ನು ಮೆಚ್ಚದವರೇ ಇಲ್ಲ.
ಎಲ್ಲೆಡೆಯಲ್ಲೂ ವ್ಯಾಪ್ತಿ
ಬದಲಾಯಿಸಿ- ೧೯೯೯ರ ವರ್ಷದಲ್ಲಿ ಪ್ರಭುದೇವ, ಶೋಭನ ಮತ್ತು ಎ. ಆರ್. ರೆಹಮಾನ್ ಜೊತೆಗೂಡಿ ಜರ್ಮನಿಯ ಮ್ಯೂನಿಚ್ಚಿನಲ್ಲಿ ‘ಮೈಖೆಲ್ ಜಾಕ್ಸನ್ ಅಂಡ್ ಫ್ರೆಂಡ್ಸ್’ ಕೂಟದಲ್ಲಿ ಪ್ರದರ್ಶನ ನೀಡಿದ್ದರು. ಅವರು ತಮ್ಮ ಸಹೋದರರ ಜೊತೆಗೂಡಿ ಕನ್ನಡವನ್ನೊಳಗೊಂಡಂತೆ ಕೆಲವು ಭಾಷೆ ಗಳಲ್ಲಿ 123 ಎಂಬ ಚಿತ್ರವನ್ನು ನಿರ್ಮಿಸಿ ನಟಿಸಿದ್ದರು. ಇತ್ತೀಚೆಗೆ ಪುನೀತ್ ರಾಜ್ ಕುಮಾರ್ ನಡೆಸುತ್ತಿರುವ ಕೋಟ್ಯಾಧಿಪತಿಯಲ್ಲಿ ಸಹಾ ಪಾಲ್ಗೊಂಡಿದ್ದರು. ಭಾರತದಲ್ಲಿ ಅವರ ನಡೆಸುತ್ತಿರುವ ಸೇವೆಯೇ ಅಲ್ಲದೆ ಸಿಂಗಪುರದಲ್ಲಿ ಪ್ರಭುದೇವ ಡ್ಯಾನ್ಸ್ ಅಕಾಡೆಮಿ ಸ್ಥಾಪಿಸಿದ್ದಾರೆ.
- ಇಟ್ ಈಸ್ ಬೋರಿಂಗ್ ಎಂಬ ಅವರ ವಿಡಿಯೋ ಆಲ್ಬಂ ಇನ್ನೇನು ಹೊರಬರಲಿದೆ. ಪ್ರಸಿದ್ಧ ನೃತ್ಯಪಟು ‘ಲಾರೆನ್ ಗೊಟ್ಟಿಲೆಬ್’ ಜೊತೆಗೂಡಿ ಭಾರತದ ಪ್ರಥಮ 3D ಚಿತ್ರ “ABCD – Any Body Can Dance” ಚಿತ್ರದಲ್ಲಿ ನಟಿಸಿದ್ದಾರೆ. ಅವರ ಹಲವಾರು ನಿರ್ದೇಶನ, ನೃತ್ಯ ನಿರ್ದೇಶನ ಮತ್ತು ನಟನಾ ಚಿತ್ರಗಳು ಬರುತ್ತಿವೆ. ಹೀಗೆ ಅವರು ಪ್ರಾರಂಭದಿಂದ ಪ್ರಸಕ್ತದವರೆಗೆ ಅತ್ಯಂತ ಬೇಡಿಕೆಯಲ್ಲಿದ್ದಾರೆ. ಈ ಬೇಡಿಕೆ ಇನ್ನೂ ಬಹಳಷ್ಟು ಕಾಲ ಮುಂದುವರೆಯುವ ಎಲ್ಲ ಸೂಚನೆಗಳೂ ಇವೆ.
ಫಿಲ್ಮೋಗ್ರಾಫಿ
ಬದಲಾಯಿಸಿನಿರ್ದೇಶಕ
ಬದಲಾಯಿಸಿಚಲನಚಿತ್ರ | ವರ್ಷ | ಭಾಷೆ | ಟಿಪ್ಪಣಿಗಳು |
---|---|---|---|
ನುವೋಸ್ತಾನಂತೆ ನೆನೊದ್ದಂತನ | ೨೦೦೫ | ತೆಲುಗು | |
ಪೌರ್ಣಮಿ | ೨೦೦೬ | ತೆಲುಗು | |
ಪೊಕ್ಕಿರಿ | ೨೦೦೭ | ತಮಿಳು | |
ಶಂಕರ್ ದಾದ ಜಿಂದಬಾದ್ | ೨೦೦೭ | ತೆಲುಗು | |
ವಿಲ್ಲು | ೨೦೦೯ | ತಮಿಳು | |
ವಾಂಟೆಡ್ | ೨೦೦೯ | ಹಿಂದಿ | |
ಎಂಜಿಯೂಮ್ ಕಾಧಲ್ | ೨೦೧೧ | ತಮಿಳು | |
ವೇದಿ | ೨೦೧೧ | ತಮಿಳು | |
ರೌಡಿ ರಾಥೊರ್ | ೨೦೧೨ | ಹಿಂದಿ | |
ರಾಮಯ್ಯ ವಸ್ತವಾಯ | ೨೦೧೩ | ಹಿಂದಿ | |
ಆರ್... ರಾಜ್ ಕುಮಾರ್ | ೨೦೧೩ | ಹಿಂದಿ | |
ಆಕ್ಷನ್ ಜಾಕ್ಸನ್ | ೨೦೧೪ | ಹಿಂದಿ | |
ಸಿಂಗ್ ಈಸ್ ಬ್ಲಿಂಗ್ | ೨೦೧೫ | ಹಿಂದಿ | |
ದಬಾಂಗ್ ೩† | ೨೦೧೯ | ಹಿಂದಿ | ಚಿತ್ರಕರಣ |
ನಿರ್ಮಾಪಕ
ಬದಲಾಯಿಸಿಚಲನಚಿತ್ರ | ವರ್ಷ | ನಿರ್ದೇಶಕ | ಬಾಷೆ | ಟಿಪ್ಪಣಿಗಳು |
---|---|---|---|---|
ದೇವಿ | ೨೦೧೬ | ಎ.ಎಲ್. ವಿಜಯ್ | ತಮಿಳು | |
ಬೋಗನ್ | ೨೦೧೭ | ಲಕ್ಷ್ಮಣ್ | ತಮಿಳು | |
ಸಮ್ ಟೈಮ್ಸ್ | ೨೦೧೮ | ಪ್ರಿಯದರ್ಶನ್ | ತಮಿಳು | ನೇರ-ವೀಡಿಯೊ |
ವಿನೋಧನ್ | ೨೦೧೯ | ವಿಕ್ಟರ್ ಜಯರಾಜ್ | ತಮಿಳು | ಚಿತ್ರೀಕರಣ |
ಅಭಿನಯದ ಪಾತ್ರಗಳು
ಬದಲಾಯಿಸಿನಟ
ಬದಲಾಯಿಸಿಚಲನಚಿತ್ರ | ವರ್ಷ | ಭಾಷೆ | ಪಾತ್ರ | ಟಿಪ್ಪಣಿಗಳು |
---|---|---|---|---|
ಇಂದು | ೧೯೯೪ | ತಮಿಳು | ಪಟ್ಟಸು | |
ಕಾಧಲನ್ | ೧೯೯೪ | ತಮಿಳು | ಪ್ರಭು | |
ರಾಸಯ್ಯ | ೧೯೯೫ | ತಮಿಳು | ರಾಸಯ್ಯ | |
ಲವ್ ಬರ್ಡ್ಸ್ | ೧೯೯೬ | ತಮಿಳು | ಅರುಣ್ | |
ಮಿ.ರೋಮಿಯೋ | ೧೯೯೬ | ತಮಿಳು | ರೊಮಿಯೋ, ಮದ್ರಾಸ್ | |
ಮಿನ್ಸರ ಕನವು | ೧೯೯೭ | ತಮಿಳು | ದೇವ | |
ವಿಐಪಿ | ೧೯೯೭ | ತಮಿಳು | ಗುರು | |
ನಾಮ್ ಇರುವರ್ ನಮ್ಮಕು ಇರುವರ್ | ೧೯೯೮ | ತಮಿಳು | ಪ್ರಭು, ದೇವ | |
ಲವ್ ಸ್ಟೋರಿ | ೧೯೯೯ | ತೆಲುಗು | ವಮ್ಸಿ | |
ಕಾತಲ ಕಾತಲ | ೧೯೯೮ | ತಮಿಳು | ಸುಂದರಲಿಂಗಮ್ | |
ನಿನೈವಿರುಕ್ಕುಮ್ ವರಾಇ | ೧೯೯೯ | ತಮಿಳು | ಜನಕಿರಮನ್ ( ಜಾನಿ | |
ಸುಯಂವರಂ | ೧೯೯೯ | ತಮಿಳು | ಕನ್ನ | |
ಟೈಮ್ | ೧೯೯೯ | ತಮಿಳು | ಶ್ರೀನಿವಾಸ ಮೂರ್ತಿ | |
ವಾನತಾಯಿಪ್ಪೊಲ | ೨೦೦೦ | ತಮಿಳು | ಸೇಲ್ವಕುಮಾರ್ | |
ಏಝೈಯೊನ್ ಸಿರಿಪ್ಪಿ | ೨೦೦೦ | ತಮಿಳು | ಗನೆಸನ್ | |
ಜೇಮ್ಸ್ ಪಾಂಡು | ೨೦೦೦ | ತಮಿಳು | ಜೇಮ್ಸ್ | |
ಪೆನ್ನಿನ್ ಮನತಯಿ ತೊಟ್ಟು | ೨೦೦೦ | ತಮಿಳು | ಸುನಿಲ್ | |
ಡಬಲ್ಸ್ | ೨೦೦೦ | ತಮಿಳು | ಪ್ರಭು | |
ಉಲ್ಲಮ್ ಕೊಲ್ಲಾಯಿ ಪೊಗೊತೆ | ೨೦೦೧ | ತಮಿಳು | ಅನ್ಬು | |
ಅಲ್ಲಿ ತಾಂಧ ವಾನಮ್ | ೨೦೦೧ | ತಮಿಳು | ಸತ್ಯಮ್ | |
ಮನಧಾಯಿ ತಿರುದಿವಿಟ್ಟಯಿ | ೨೦೦೧ | ತಮಿಳು | ದೇವ | |
ಚಾರ್ಲಿ ಚಾಪಿನ್ | ೨೦೦೨ | ತಮಿಳು | ತಿರು | |
H2O | ೨೦೦೨ | ಕನ್ನಡ]] | ವೈರಮುತು | |
ಸಂತೋಶಮ್ | ೨೦೦೨ | ತೆಲುಗು | ಪವನ್ | |
ಒನ್ ಟೂ ತ್ರೀ | ೨೦೦೨ | ತಮಿಳು | ಸತ್ಯ | |
ಅಗ್ನಿ ಮಹರ್ಷಿ | ೨೦೦೨ | ಹಿಂದಿ | ರಾಕ್ಷಶ | |
ತೊಟ್ಟಿ ಗ್ಯಾಂಗ್ | ೨೦೦೨ | ತೆಲುಗು | ಸೂರಿ ಬಾಬು | |
'ಕಲ್ಯಾಣ ರಾಮುಡು | ೨೦೦೩ | ತೆಲುಗು | ರಾಜೇಶ್ | |
ಅಲಾದಿನ್ | ೨೦೦೩ | ತಮಿಳು | ಅಲಾದಿನ್ | |
ಒಕ ರಾಧಾ ಇದ್ದರು ಕೃಷ್ಣುಲ ಪೆಲ್ಲಿ | ೨೦೦೩ | ತೆಲುಗು | ಮುರುಗನ್ | |
ಎಂಗಲ್ ಅಣ್ಣ | ೨೦೦೪ | ತಮಿಳು | ಕನ್ನನ್ | |
ತಪನ | ೨೦೦೪ | ತೆಲುಗು | ವೇನು | |
ಇಂತ್ಲೊ ಶ್ರೀಮತಿ ವೇಧಿಲೋ ಕುಮಾರಿ | ೨೦೦೪ | ತೆಲುಗು | ಗೋಪಾಲ್ | |
ಅಂದಲು ಡೊಂಗಾಲೆ ದೊರಿಕಿತೆ | ೨೦೦೪ | ತೆಲುಗು | ಬುಜ್ಜಿ | |
ಸ್ಟೈಲ್ | ೨೦೦೬ | ತೆಲುಗು | ಗಣೇಶ್ | |
ಚುಕ್ಕಲ್ಲೊ ಚಂದ್ರುಡು | ೨೦೦೬ | ತೆಲುಗು | ಶರತ್ | ಅತಿಥಿ ಪ್ರದರ್ಶನ |
ನಾಯುಡಮ್ಮ | ೨೦೦೬ | ತೆಲುಗು | ಪ್ರಭು | |
ಮೈಕೆಲ್ ಮದನ ಕಾಮರಾಜು | ೨೦೦೮ | ತೆಲುಗು | ಮೈಕೆಲ್, ರವಿ | |
ಉರುಮಿ | ೨೦೧೧ | ಮಲಯಾಳಂ | ವವ್ವಲ್ಲಿ | |
ಏಬಿಸಿಡಿ - ಎನಿ ಬಡಿ ಕ್ಯಾನ್ ಡಾನ್ಸ್ | ೨೦೧೩ | ಹಿಂದಿ | ವಿಷ್ಣು | |
ಎಬಿಸಿಡಿ ೨ | ೨೦೧೫ | ಹಿಂದಿ | ||
ದೇವಿ | ೨೦೧೬ | ತಮಿಳು | ಕೃಷ್ಣ ಕುಮಾರ್ | |
ಅಭಿನೇತ್ರಿ | ೨೦೧೬ | ತೆಲುಗು | ||
ತುಟಕ್ ತುಟಕ್ ತುಟಿಯ | ೨೦೧೬ | ಹಿಂದಿ | ||
ಕಲವಾಡಿಯ ಪೊಝುತುಗಲ್ | ೨೦೧೭ | ತಮಿಳು | ಪೊರ್ಚೆಝಿಯಾನ್ | |
ಗುಲೆಬಾಘವಾಲಿ | ೨೦೧೮ | ತಮಿಳು | ಬದ್ರಿ | |
ಮರ್ಕ್ಯುರಿ | ೨೦೧೮ | ಸೈಲೆಂಟ್ | ಬ್ಲೈಂಡ್ ಮ್ಯಾನ್ | |
ಲಕ್ಷ್ಮಿ | ೨೦೧೮ | ತಮಿಳು | ಕೃಷ್ಣ / ವಿಕೆ | |
ಚಾರ್ಲಿ ಚಾಪಿನ್ ೨ | ೨೦೧೯ | ತಮಿಳು | ತಿರು | |
ದೇವಿ ೨ | ೨೦೧೯ | ತಮಿಳು | ಕೃಷ್ಣ ಕುಮಾರ್ / ಅಲೆಕ್ಸ್ / ರಂಗ ರೆಡ್ಡಿ | |
ಅಭಿನೇತ್ರಿ ೨ | ೨೦೧೯ | ತೆಲುಗು | ||
ಖಾಮೋಶಿ | ೨೦೧೯ | ಹಿಂದಿ | ದೇವ್ | |
ಯುಂಗ್ ಮುಂಗ್ ಸಂಗ್ | ೨೦೧೯ | ತಮಿಳು | ಯುಂಗ್ | ಪೋಸ್ಟ್ ಪ್ರೊಡಕ್ಷನ್ |
ಪೋನ್ ಮನಿಕ್ಕವೆಲ್ | ೨೦೧೯ | ತಮಿಳು | ಪೋನ್ ಮನಿಕ್ಕವೆಲ್ | 50 th Film Fliming |
ಥಿಯಲ್ | ೨೦೧೯ | ತಮಿಳು | TBA | ಚಿತ್ರೀಕರಣ |
ಸ್ಟೀಟ್ ಡ್ಯಾನ್ಸರ್ | ೨೦೧೯ | ಹಿಂದಿ | TBA | ಚಿತ್ರೀಕರಣ |
==ನೃತ್ಯಗಾರ===
ಚಲನಚಿತ್ರ | ಹಾಡು | ವರ್ಷ | ಭಾಷೆ | ಟಿಪ್ಪಣಿಗಳು |
---|---|---|---|---|
ಮೌನ ರಾಗಮ್ | ಪನಿವಿಝಮ್ | ೧೯೮೬ | ತಮಿಳು | |
ಅಗ್ನಿ ನಟ್ಚಾತಿರಮ್ | ರಾಜ ರಾಜಧಿ | ೧೯೮೮ | ತಮಿಳು | |
ಅಧಿಕರಿ | ನಾಯಾಂದಿ ಮೇಲಂ | ೧೯೯೧ | ತಮಿಳು | |
ಇಂದ್ಯಾಮ್ | ಎಪ್ರಿಲ್ ಮಯಿಲೆ | ೧೯೯೧ | ತಮಿಳು | |
ಉನ್ನಾಯಿ ವಾಝ್ತಿ | ಔಟ ಲಂಗ್ಡಿ | ೧೯೯೨ | ತಮಿಳು | |
ಸುರಿಯನ್ | ಲಾಲಕು ದೊಲ್ ದಪ್ಪಿಮ | ೧೯೯೨ | ತಮಿಳು | |
ಪ್ರತಾಪ್ | ಮಾಂಗ ಮಾಂಗ | ೧೯೯೩ | ತಮಿಳು | |
ರಕ್ಷಣ | ಗಲ್ಲು ಮಂದಿ ಬಾಸು | ೧೯೯೩ | ತೆಲುಗು | |
ಏಝೈ ಜಾತಿ | ಕೊಡುತಲಮ್ ಕೊಡುತಂಡ | ೧೯೯೩ | ತಮಿಳು | |
ಆಗ್ರಹಮ್ | ೧೯೯೩ | ತೆಲುಗು | ||
ಜೆಂಟಲ್ ಮ್ಯಾನ್ | ಚಿಕ್ಕು ಬುಕ್ಕು ರೈಲೆ | ೧೯೯೩ | ತಮಿಳು | |
ವಾಲ್ಟರ್ ವೆಟ್ರಿವೆಲ್ | ಚಿನ್ನ ರಾಸವೆ | ೧೯೯೩ | ತಮಿಳು | |
ಪುಕಾರ್ | ಕಾಯ್ ಸೇರ ಸೇರ | ೨೦೦೦ | ಹಿಂದಿ | |
ಮನಸೆಲ್ಲ ನೀನೆ | ಗೆಸ್ಟ್ ಜಡ್ಜ್ | ೨೦೦೨ | ಕನ್ನಡ | ಅತಿಥಿ ಪ್ರದರ್ಶನ |
ಬಾಬ | ಕಿಚ್ಚು ತ | ೨೦೦೨ | ತಮಿಳು | |
ಶಕ್ತಿ | ದಮ್ರೂ ಬಾಜೆ ರೆ | ೨೦೦೨ | ಹಿಂದಿ | |
ಆಬ್ರ ಕ ಡಾಬ್ರ | ಶಿವ್ ಓಮ್ | ೨೦೦೪ | ಹಿಂದಿ | |
ನುವೋಸ್ತಾನಂತೆ ನೆನೊದ್ದಂತನ | ಪರಿಪೊಕೆ ಪಿಟ್ಟ | ೨೦೦೫ | ತೆಲುಗು | |
ಪೌರ್ಣಮಿ | ಕೋಯೊ ಕೋಯೊ | ೨೦೦೬ | ತೆಲುಗು | |
ಪೊಕ್ಕಿರಿ | ಆದುಂಗಡ | ೨೦೦೭ | ತಮಿಳು | |
ಶಂಕರ್ ದಾದ ಜಿಂದಬಾದ್ | ಜಗದೇಕ ವೀರುನಿಕಿ | ೨೦೦೭ | ತೆಲುಗು | |
ವಾನ | ಉನ್ನತ ಲೇನತ್ತ | ೨೦೦೮ | ತೆಲುಗು | |
ವಿಲ್ಲು | ರಾಮ ರಾಮ | ೨೦೦೯ | ತಮಿಳು | |
ವಾಂಟೆಡ್ | ಜಲ್ವ | ೨೦೦೯ | ಹಿಂದಿ | |
ಪ.ರ ಪಲನಿಸಾಮಿ | ಸಿಂಗಾರಿ ಮಾವ | ೨೦೧೦ | ತಮಿಳು | |
ಬಾಡಿಗಾರ್ಡ್ | ಕೋರಿಯೋಗ್ರಾಫರ್ | ೨೦೧೦ | ಮಲಯಾಳಂ | |
ಉರ್ಮಿ | ಅರಣೆ ಅರಣೆ | ೨೦೧೧ | ಮಲಯಾಳಂ | |
ಎಂಜಿಯೂಮ್ ಕಾಧಲ್ | ಎಂಜಿಯೂಮ್ ಕಾಧಲ್ | ೨೦೧೧ | ತಮಿಳು | |
ದೋನಿ | ವಾನ್ಗಮ್ ಪನತುಕ್ಕುಮ್ | ೨೦೧೨ | ತಮಿಳು | |
ದೋನಿ | ಮತ್ತಿಲೊನಿ ಚೆಟ್ಟು | ೨೦೧೨ | ತೆಲುಗು | |
ರೌಡಿ ರಾಥೊರ್ | ಚಿಂತ ತಾ ಚಿತ | ೨೦೧೨ | ಹಿಂದಿ | |
ಹೊ ಮೈ ಗಾಡ್ | ಗೋವಿಂದ | ೨೦೧೨ | ಹಿಂದಿ | |
ರಾಮಯ್ಯ ವಸ್ತವಾಯ | ಜಾದು ಕಿ ಜಪ್ಪಿ | ೨೦೧೩ | ಹಿಂದಿ | |
ಬಾಸ್ | ಹಮ್ ನಾ ತೋಡೆ | ೨೦೧೩ | ಹಿಂದಿ | |
ಆರ್...ರಾಜ್ ಕುಮಾರ್ | ಗಂದಿ ಬಾತ್ | ೨೦೧೩ | ಹಿಂದಿ | |
ಹ್ಯಾಪಿ ನ್ಯೂ ಯಿಯರ್ | ಡ್ಯಾನ್ಸ್ ಇನ್ಸ್ ಟ್ರಾಕ್ಟರ್ | ೨೦೧೪ | ಹಿಂದಿ | ಅತಿಥಿ ಪ್ರದರ್ಶನ |
ಆಕ್ಷನ್ ಜಾಕ್ಸನ್ | ಏಜೆ | ೨೦೧೪ | ಹಿಂದಿ |
ಹಾಡುಗಾರ
ಬದಲಾಯಿಸಿಚಲನಚಿತ್ರ | ಹಾಡು | ವರ್ಷ | ಭಾಷೆ | |
---|---|---|---|---|
ಸುಯಂವರಂ | ಸಿವ ಸಿವ ಸಂಕರ | ೧೯೯೯ | ತಮಿಳು | |
ಉಲ್ಲಮ್ ಕೊಲ್ಲಾಯಿ ಪೋಗುತೆ | ಕಿಂಗ್ಡ | ೨೦೦೧ | ತಮಿಳು |
ಗೀತಕಾರ
ಬದಲಾಯಿಸಿಚಲನಚಿತ್ರ | ಹಾಡು | ವರ್ಷ | ಸಂಯೋಜಕ | ಭಾಷೆ | ಟಿಪ್ಪಣಿಗಳು |
---|---|---|---|---|---|
ಯುಂಗ್ ಮುಂಗ್ ಸಂಗ್ | ೨೦೧೮ | ಅಮ್ರೇಶ್ ಗಣೇಶ್ | ತಮಿಳು | ||
ಚಾರ್ಲಿ ಚಾಪ್ಲಿನ್ ೨ | ಇವಲ ಇವಲ | ೨೦೧೮ | ಅಮ್ರೇಶ್ ಗಣೇಶ್ | ತಮಿಳು | |
ದೇವಿ ೨ | ಸೊಕ್ಕುರ ಪೆನ್ನೆ | ೨೦೧೮ | ಅಮ್ರೇಶ್ ಗಣೇಶ್ | ತಮಿಳು |
ಪ್ರಶಸ್ತಿಗಳು
ಬದಲಾಯಿಸಿವರ್ಷ | ಪ್ರಶಸ್ತಿ | ಚಲನಚಿತ್ರಗಳು | ಭಾಷೆ | ವರ್ಗ | ಫಲಿತಾಂಶ |
---|---|---|---|---|---|
೧೯೯೬ | ನ್ಯಾಷನಲ್ ಫಿಲ್ಮ್ ಅವಾರ್ಡ್ | ಮಿನ್ಸಾರ ಕನವು | ತಮಿಳು | ಅತ್ಯುತ್ತಮ ನೃತ್ಯ ಸಂಯೋಜನೆ | ಗೆಲುವು |
೨೦೦೪ | ನ್ಯಾಷನಲ್ ಫಿಲ್ಮ್ ಅವಾರ್ಡ್ | ಲಕ್ಷ್ಯ | ಹಿಂದಿ | ಅತ್ಯುತ್ತಮ ನೃತ್ಯ ಸಂಯೋಜನೆ | ಗೆಲುವು |
೨೦೦೫ | ಫಿಲ್ಮ್ ಫೇರ್ ಅವಾರ್ಡ್ | ಲಕ್ಷ್ಯ | ಹಿಂದಿ | ಅತ್ಯುತ್ತಮ ನೃತ್ಯ ಸಂಯೋಜನೆ | ಗೆಲುವು |
೨೦೦೪ | ನಂದಿ ಅವಾರ್ಡ್ | ವರ್ಷಂ | ತೆಲುಗು | ಅತ್ಯುತ್ತಮ ನೃತ್ಯ ಸಂಯೋಜನೆ | ಗೆಲುವು |
೨೦೦೫ | ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ | ನುವೋಸ್ತಾನಂತೆ ನೆನೊದ್ದಂತನ | ತೆಲುಗು | ಅತ್ಯುತ್ತಮ ನೃತ್ಯ ಸಂಯೋಜನೆ | ಗೆಲುವು |
೨೦೦೭ | ವಿಜಯ್ ಅವಾರ್ಡ್ | ಪೊಕ್ಕಿರಿ | ತಮಿಳು | ನೆಚ್ಚಿನ ನಿರ್ದೇಶಕ | ಗೆಲುವು |
- ಪ್ರಭುದೇವ ರವರು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ೨೦೧೯ ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಉಲ್ಲೇಖಗಳು
ಬದಲಾಯಿಸಿ- ↑ "On Prabhu Deva's 44th birthday, a recap of his catchy dance numbers". Retrieved 11 December 2017.
- ↑ Rose Telugu Movies (26 September 2016). "Prabhu Deva About His Age - Funny Comments - Abhinetri Interview - Tamanna". Retrieved 5 December 2016 – via YouTube.