ಬ್ರಿಟಾನಿಕಾ ವಿಶ್ವಕೋಶ
ಸ್ಕಾಟ್ಲೆಂಡ್ ನಲ್ಲಿ ಸನ್ ೧೭೬೮ ರಲ್ಲಿ ಮೊಟ್ಟಮೊದಲು ಪುಸ್ತಕರೂಪದಲ್ಲಿ ಪ್ರಕಟಗೊಂಡಿದ್ದ 'ಎನ್ಸೈಕ್ಲೊಪೇಡಿಯ ಬ್ರಿಟಾನಿಕಾ' ಬ್ರಿಟಾನಿಕಾ ವಿಶ್ವಕೋಶವು ಇದು ವರೆಗೆ ಪ್ರಕಟಿಸಿರುವ ಪುಸ್ತಕ ರೂಪದ ಆವೃತ್ತಿಗಳು, ಮಾರುಕಟ್ಟೆಯಲ್ಲಿ ಬಿಕರಿಯಾದ ಬಳಿಕ, ಪುಸ್ತಕ ರೂಪದ ಪ್ರಕಟಣೆಗಳನ್ನು ಸ್ಥಗಿತಗೊಳಿಸುವ ಸನ್ನದ್ಧತೆ ನಡೆದಿದೆ. ಮನೆಮನೆಗಳಲ್ಲಿ, ಪುಸ್ತಕಾಲಯಗಳಲ್ಲಿ ಮೆರೆಯುತ್ತಿದ್ದ, ಹಾಗೂ 'ಆಕರ ಗ್ರಂಥ'ವಾಗಿ ಬಳಕೆಯಾಗುತ್ತಿರುವ `ಬ್ರಿಟಾನಿಕಾ ವಿಶ್ವಕೋಶ'-'ಎನ್ ಸೈಕ್ಲೋಪೀಡಿಯಾ ಬ್ರಿಟಾನಿಕಾ` ತನ್ನ ೨೪೪ ವರ್ಷಗಳ ಇತಿಹಾಸದಲ್ಲಿ ತನ್ನ ಮುದ್ರಣ ಆವೃತ್ತಿಯನ್ನು ಸ್ಥಗಿತಗೊಳಿಸಲು ಯೋಜನೆಯನ್ನು ಸಿದ್ಧಪಡಿಸಿದ್ದು 'ಡಿಜಿಟಲ್ ಆವೃತ್ತಿ'ಗಳ ಕಡೆ ತನ್ನ ಗಮನವನ್ನು ಹೊರಳಿಸಿದೆ. 'ಡಿಜಿಟಲ್ ಆವೃತ್ತಿ'ಗಳು ಲಗ್ಗೆ ಹಾಕಿದ ಬಳಿಕ ವಿಶ್ವದ ಸಾಹಿತ್ಯ ಪ್ರಕಟನೆಯ ಕ್ಷೇತ್ರಗಳಲ್ಲಿ ಹಲವಾರು ಹೊಸ ಮಾರ್ಪಾಡುಗಳು ಆಗಿವೆ. [೧]
ಬ್ರಿಟಾನಿಕಾ ವಿಶ್ವಕೋಶದ ಹೊಸ ಅವತಾರ
ಬದಲಾಯಿಸಿಸನ್ ೨೦೧೦ ರಲ್ಲಿ ೩೨ ಸಂಪುಟಗಳ ಪ್ರಕಟಿತವಾದ ವಿಶ್ವಕೋಶ ಗ್ರಂಥರೂಪದ ಆವೃತ್ತಿಯೇ ಕೊನೆಯದು. ಇದುವರೆಗೆ ಪ್ರಕಟಿತಗೊಂಡಿರುವ ಸುಮಾರು ೪೦ ಸಾವಿರ ಕಟ್ಟುಗಳ ಪ್ರತಿಗಳು ಹಾಗೆಯೇ ಮುಂದುವರೆಯುವ ವಿಚಾರವಿದೆ. ಕಂಪೆನಿಯ ಕಾರ್ಯಸ್ಥರದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾದ ಯೋಜನೆಗಳನ್ನೂ ಹಮ್ಮಿಕೊಳ್ಳುವುದು ಯೋಜನೆಯಲ್ಲೇ ಲುಕಿಂಗ್ ಅಹೆಡ್ ಎಂಬ ಹೆಸರಿನ 'ಬ್ಲಾಗ್ ಒಡೆ'ಯ ಹಾಗೂ ಕಂಪೆನಿಯ 'ಅಧ್ಯಕ್ಷ ಜಾರ್ಜ್ ಕೌಝ್' ಹೇಳಿದ್ದಾರೆ.
ಮಾರಾಟದ ದಾಖಲೆಗಳು
ಬದಲಾಯಿಸಿಸನ್ ೧೯೯೦ ಯಲ್ಲಿ, ಬ್ರಿಟಾನಿಕಾ ವಿಶ್ವಕೋಶದ ಸುಮಾರು ೧ ಲಕ್ಷದ ೨೦ ಸಹಸ್ರ ಕಟ್ಟುಗಳು, ವಿಶ್ವದಾದ್ಯಂತ ಮಾರಾಟಗೊಂಡಿದ್ದವು. ಹೀಗೆ ಮಂಚೂಣಿಯಲ್ಲಿ ರಂಜಿಸುತ್ತಿದ್ದ ಕಂಪೆನಿಯ ಉತ್ಪಾದನೆಗಳು ೬ ವರ್ಷಗಳ ಬಳಿಕ ಸುಮಾರು ೪೦ ಸಾವಿರ ಕಟ್ಟುಗಳಷ್ಟು ಮಾರಾಟ ಕಡಿಮೆಯಾಯಿತು. ಮಾರುಕಟ್ಟೆಯಲ್ಲಿ ಪ್ರಸ್ತುತದಲ್ಲಿನ 'ಗಟ್ಟಿ ಹೊರ ಕವಚ'ದ ಸಮಗ್ರ ಹೊತ್ತಿಗೆಗಳ ಬೆಲೆ ೧,೩೯೫ ಅಮೆರಿಕನ್ ಡಾಲರ್ ಇದೆ. ಈ ತರಹದ ಪೈಪೋಟಿ, ಗ್ರಂಥ ವಲಯದಲ್ಲಿ ಈಗ ಹೆಚ್ಚಾಗಿದೆ. ಹಾಗಾಗಿ ಮುದ್ರಿತ ಆವೃತ್ತಿಗಳ ಮಾರಾಟ ಕೆಳಗೆ ಸರಿಯುತ್ತಿರುವುದು ಸ್ಪಷ್ಟವಾಗಿ ಕಾಣಬರುತ್ತಿದೆ. ಅಧ್ಯಕ್ಷ, 'ಶ್ರೀ. ಕೌಝ್' ರವರು ಈ ಹೊಸ ಬೆಳವಣಿಗೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ. 'ಗೂಗಲ್' ಮತ್ತು 'ವಿಕಿಪೀಡಿಯ' ಮೊದಲಾದ ಮಾಹಿತಿ 'ಅಂತರ್ಶೋಧ ಇಂಜಿನ್' ಗಳ ಸಮರ್ಪಕ ಬಳಕೆಯಿಂದಾಗಿ, ಮುದ್ರಣ ಆವೃತ್ತಿಗಳು ನಿಧಾನವಾಗಿ ನೇಪಥ್ಯಕ್ಕೆ ಸಾಗಿವೆ. ಬಹುದೊಡ್ಡ ಗಾತ್ರದ ಪೈಪೋಟಿಯನ್ನು 'ಗ್ರಂಥ ಪ್ರಕಟಣಾ ಸಂಸ್ಥೆಗಳು' ಎದುರಿಸಬೇಕಾಗಿದೆ. 'ಬ್ರಿಟಾನಿಕಾದ ಹೊಸ ಅವತಾರ'ಗಳನ್ನು ಕಂಡುಕೊಳ್ಳಬೇಕಾಗಿದೆ. ಡಿಜಿಟಲ್ ರೂಪದಲ್ಲಿ ಅದು ಸ್ವಲ್ಪ ಯಶಸ್ಸನ್ನು ಪಡೆಯುತ್ತದೆ. ಮಾರಾಟದಲ್ಲೂ ಗಮನಾರ್ಹ ಪ್ರಗತಿ ದೊರೆಯಬಹುದು.
'ಬ್ರಿಟಾನಿಕಾ ವಿಶ್ವಕೋಶದ ಬಗ್ಗೆ ಅಧಿಕೃತ ಮಾಹಿತಿಗಳು'
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ