ಭಾರತೀಯ ಶಾಸ್ತ್ರೀಯ ಸಂಗೀತ
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ . (October 2009) |
This article needs attention from an expert on the subject.(October 2009) |
ಭಾರತೀಯ ಸಂಗೀತ | |
---|---|
ಭಾರತೀಯ ಶಾಸ್ತ್ರೀಯ ಸಂಗೀತ | |
ಕರ್ನಾಟಕ ಸಂಗೀತ | |
ಹಿಂದೂಸ್ತಾನಿ ಸಂಗೀತ | |
ಮುಖ್ಯ ಪರಿಕಲ್ಪನೆಗಳು | |
ಶೃತಿ · ಸ್ವರ · ಅಲಂಕಾರ · ರಾಗ · ತಾಳ |
ಭಾರತೀಯ ಶಾಸ್ತ್ರೀಯ ಸಂಗೀತ ದ ಮೂಲವು (ಹುಟ್ಟು), ಬಹಳ ಹಳೆಯ ಧರ್ಮ ಗ್ರಂಥ ಹಿಂದೂ ಸಂಪ್ರದಾಯದ ಒಂದು ಭಾಗವಾದ ವೇದದಲ್ಲಿ ಕಂಡು ಬರುತ್ತದೆ. ಇದು ಭಾರತೀಯ ಜನಾಂಗದ ಸಂಗೀತದಿಂದ ಅರ್ಥವತ್ತಾಗಿ ಪ್ರಭಾವಿತಗೊಂಡಿದೆ, ಮತ್ತು ಹಿಂದೂಸ್ಥಾನಿ ಸಂಗೀತವು ಪರ್ಷಿಯಾ ಸಂಗೀತದಿಂದ ಪ್ರಭಾವಿತಗೊಂಡಿದೆ. ನಾಲ್ಕು ವೇದಗಳಲ್ಲಿ ಒಂದಾದ ಸಾಮವೇದವು ಸಂಗೀತವನ್ನು ವಿವರವಾಗಿ ಪರಿಚಯಿಸಿದೆ. ಸಾಮವೇದವು ಋಗ್ವೇದದಿಂದ ರಚಿತವಾಗಿದೆ. ಆದುದರಿಂದ ಇದರ ದೇವರನಾಮವನ್ನು ಸಾಮಗಾನವನ್ನಾಗಿ ಹಾಡಬಹುದು; ಈ ಶೈಲಿಯು ಜತಿಗಳಾಗಿ ಪರಿವರ್ತನೆಗೊಂಡು ಕೊನೆಗೆ ರಾಗಗಳಾಗಿ ಪರಿಣಮಿಸಿತು. ಭಾರತೀಯ ಶಾಸ್ತ್ರೀಯ ಸಂಗೀತ, ಅದರ ಉತ್ಪತ್ತಿಯು (ಹುಟ್ಟು) ಧ್ಯಾನದ ಸಾಧನವಾಗಿದ್ದು ತನ್ನೊಳಗಿನ ಅರಿವನ್ನು ಗಳಿಸುವುದಾಗಿದೆ. ಭರತನ ನಾಟ್ಯ ಶಾಸ್ತ್ರವು, ನಾಟ್ಯ,ಸಂಗೀತ ಮತ್ತುನಾಟಕ ಗಳಿಗೆ ಆಧಾರಭೂತವಾದ (ತತ್ವ) ನಿಯಮಗಳನ್ನು ಹಾಕಿದ ಮೊದಲ ಗ್ರಂಥವಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತವು, ಅತ್ಯಂತ ಸಂಕೀರ್ಣ ಮತ್ತು ಸಂಪೂರ್ಣ ರಚನೆಗೊಂಡಿರುವ ಸಂಗೀತದ ವ್ಯವಸ್ಥೆಯಾಗಿದೆ. ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಂತೆ ಇದು ಆಕ್ಟೇವ್ವನ್ನು 12 ಅರ್ಧ ಶ್ರುತಿಗಳನ್ನಾಗಿ ವಿಭಾಗಿಸಿದಾಗ , ಸ ರಿ ಗ ಮ ಪ ಧ ನಿ ಸ ಎಂಬ 7 ಮೂಲಭೂತ ಸ್ವರಗಳು ಅನುಕ್ರಮವಾಗಿ, ದೋ ರಿ ಮಿ ಫಾ ಸೋಲ್ ಲ ತಿ ದೋ ಎಂಬ ಸ್ಥಾನಗಳಿಗೆ ಪಲ್ಲಟವಾಗುತ್ತದೆ. ಹೀಗಿದ್ದರೂ ಇದನ್ನು ಕೇವಲ ಸ್ವರಭೇದದ ರಾಗದಲ್ಲಿ ಉಪಯೋಗಿಸಲಾಗುತ್ತದೆ, ಇದಕ್ಕೆ ವಿರೋಧವಾಗಿ ಇದನ್ನು ಹೆಚ್ಚು ಆಧುನಿಕ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಸಮ -ಸ್ವಭಾವ ರಾಗದ ರೀತಿಯಲ್ಲಿ ಉಪಯೋಗಿಸಲಾಗುತ್ತದೆ. ಭಾರತೀಯ ಶಾಸ್ತ್ರೀಯ ಸಂಗೀತವು ಸ್ವಭಾವದಲ್ಲಿ ಒಂದೇ ಮಧುರ ದ್ವನಿಯಾಗಿದ್ದು ಮತ್ತು ಒಂದೇ ಮಧುರಎಳೆಯನ್ನು ಸುತ್ತುವರಿದಿದ್ದು, ನಿಗದಿತ ನಾದದಲ್ಲೇ ನುಡಿಸಲಾಗುತ್ತದೆ. ಅಭಿನಯದ ಮಧುರತೆಯು ನಿರ್ದಿಷ್ಟ ರಾಗಗಳು ಮತ್ತು ನಿಯಮಬದ್ಧ ತಾಳಗಳನ್ನು ಆಧರಿಸಿರುತ್ತದೆ.
ಸ್ವರ ಚಿಹ್ನೆಯ ಪದ್ಧತಿ
ಬದಲಾಯಿಸಿಭಾರತೀಯ ಸಂಗೀತವು ಸಾಂಪ್ರದಾಯಿಕವಾಗಿ ಅಭ್ಯಾಸ-ಪೂರ್ವಕವಾಗಿದ್ದು ಮತ್ತು ಪ್ರಾಥಮಿಕ ಮಾದ್ಯಮದ ಬೋಧನೆ, ಅರ್ಥಮಾಡಿಸುವಿಕೆ ಅಥವಾ ಸಂಚಾರಣೆಯ ವಿಧಾನದಲ್ಲಿ ಸ್ವರ ಚಿನ್ಹೆಯನ್ನು ಉಪಯೋಗಿಸಲಾಗುವುದಿಲ್ಲ. ಭಾರತೀಯ ಸಂಗೀತ ಮತ್ತು ಸಂಯೋಜನೆಯ ನಿಯಮವು, ಗುರುವಿನಿಂದ ಶಿಷ್ಯನಿಗೆ ಮುಖತಃ ಕಲಿಸುವುದಾಗಿದೆ. ಬೇರೆ ಬೇರೆ ಭಾರತೀಯ ಸಂಗೀತ ಶಾಲೆಗಳು ಸ್ವರ ಚಿನ್ಹೆಗಳು ಮತ್ತು ವರ್ಗೀಕರಣವನ್ನು ಅನುಸರಿಸುತ್ತಿವೆ. (ನೋಡಿ ಮೇಳಕರ್ತಮತ್ತು ಥಾಟ್); ಆದಾಗ್ಯೂ ಸ್ವರ ಚಿನ್ಹೆಯು ಸೊಗಸಿನ ವಿಚಾರವನ್ನು ಗಣನೆಗೆ ತೆಗೆದುಕೊಳ್ಳುತ್ತದೆಯೇ ಹೊರತು ಅದು ಪ್ರಮಾಣೀಕೃತವಲ್ಲ. ಹಾಗೆಯೇ ವಿಶ್ವದ ಉಳಿದ ಭಾಗಕ್ಕೆ ಭಾರತೀಯ ಸಂಗೀತವನ್ನು ಅಭ್ಯಸಿಸಲು ಸ್ವರ ಚಿನ್ಹೆಯ ವಿಶ್ವ ನೀತಿಯಿಲ್ಲ. 17 ಮತ್ತು 18 ನೇ ಶತಮಾನದಲ್ಲಿ, ಯುರೋಪ್ ನ ಪಂಡಿತರು ಭಾರತೀಯ ಸಂಗೀತಕ್ಕೆ ಮನಸೋತರು ಮತ್ತು ದ್ವನಿಯನ್ನು ಮುದ್ರಿಸಿಕೊಳ್ಳಲು ಅನುಕೂಲತೆಗಳು ಇರಲಿಲ್ಲವಾದ್ದರಿಂದ, ಆಗಿದ್ದ ಕೆಲವು ನೀತಿಗಳನ್ನು ಉಪಯೋಗಿಸಿ ಸಂಯೋಜನೆಯಲ್ಲಿರುವ ಧ್ವನಿಗಳನ್ನು ಬಹುಶಃ ಹೊರಗೆಡವಬಹುದು, ಎಂದು ಅವರು ವಿಚಾರ ಮಾಡಿದರು. ಪಂಡಿತರು ಈಗಾಗಲೇ ಪರ್ಷಿಯನ್ ಗೆ ಭಾಷಾಂತರ ಮಾಡಿರುವ ಪ್ರಾಚೀನ ಸ್ವರ ಚಿನ್ಹೆಯ ರೀತಿಯು ಗೊತ್ತುಪಡಿಸಲ್ಪಟ್ಟಿದ್ದು, ಆದರೂ ಭಾರತೀಯ ಶಾಸ್ತ್ರೀಯ ಸಂಗೀತದ ಜಟಿಲತೆಗಳನ್ನು (ಸಂಕೀರ್ಣತೆ)ಬರಹಗಳಲ್ಲಿ ಹೊರಗೆಡಹಲಾಗಿಲ್ಲ. ಕೆಲವು ಪಾಶ್ಚಿಮಾತ್ಯ ಪಂಡಿತರು ಸ್ಟಾಫ್ ಸ್ವರ ಚಿನ್ಹೆಯ ರೀತಿಯಲ್ಲಿ ಸಂಯೋಜನೆಯನ್ನು ಮುದ್ರಿಸಿದ್ದಾದರೂ, ಭಾರತೀಯ ಸಂಗೀತಗಾರರು 20 ನೇ ಶತಮಾನದಲ್ಲಿ ಭಟ್ಖಂಡೆ ರಚಿಸಿದ ನೀತಿಯನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಭಟ್ಖಂಡೆಯ ನೀತಿಯು ಹೆಚ್ಚು ಪರಿಪಕ್ವವಾಗಿದ್ದರೂ, ಚಿನ್ಹೆಗಳಿಗಿಂತ ದೇವನಾಗರಿ ಲಿಪಿಯನ್ನು ಅವಲಂಬಿಸಿರುವುದರಿಂದ, ಸ್ವರ ಚಿನ್ಹೆಯನ್ನು ರಚಿಸಲು ಅಡ್ಡಿಯನ್ನುಂಟು ಮಾಡುತ್ತದೆ. ಒಂದು ಹೊಸ ಸ್ವರ ಚಿನ್ಹೆಯ ರೀತಿಯನ್ನು ಸೂಚಿಸಿದ್ದು, ಇದು ಗುರುತು(ಚಿನ್ಹೆ)ಗಳನ್ನು ಉಪಯೋಗಿಸಿದೆ ಮತ್ತು ಸ್ಟಾಫ್ ಸ್ವರ ಚಿನ್ಹೆಯ ರೀತಿಯಂತೆ ಗ್ರಹಣ ಶಕ್ತಿಯನ್ನು ತಕ್ಷಣವೇ ಕೊಡುತ್ತದೆ. ಇದು ಸ್ವರ ಚಿನ್ಹೆಯ ರೀತಿಯ ಜೊತೆ ಪ್ರಮಾಣಬದ್ಧವಾಗಿದ್ದು, ಇಲ್ಲಿಯವರೆಗಿನ ಅಪರಿಚಿತ ಸಂಯೋಜನೆಗಳನ್ನು ಬೆಳಕಿನ ದಿನ[೧] ಎಂದು ಕಾಣಬಹುದಾಗಿದೆ.
ಮುಖ್ಯ ಪ್ರಭೇದಗಳು (ಶೈಲಿಗಳು)
ಬದಲಾಯಿಸಿಭಾರತೀಯ ಶಾಸ್ತ್ರೀಯ ಸಂಗೀತದ ಎರಡು ಮುಖ್ಯ ವಾಹಿನಗಳೆಂದರೆ :
- ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ , ಮೂಲತಃ ಉತ್ತರ ಭಾರತದಿಂದ
- ಕರ್ನಾಟಕ ಸಂಗೀತ , ಮೂಲತಃ ದಕ್ಷಿಣ ಭಾರತದಿಂದ
ಹಿಂದೂಸ್ತಾನಿ ಸಂಗೀತ
ಬದಲಾಯಿಸಿಖಯಾಲ್ ಮತ್ತು ಧ್ರುಪದ್ ಇವೆರಡು ಹಿಂದೂಸ್ತಾನಿ ಸಂಗೀತದ ಪ್ರಮುಖ ಬಗೆಗಳು (ಸ್ವರೂಪ), ಆದರೆ ಇತರ ಶಾಸ್ತ್ರೀಯ ಮತ್ತು ಅರ್ಧ-ಶಾಸ್ತ್ರೀಯ ಬಗೆಗಳು ಅನೇಕ ಇವೆ. ಡ್ರಂನ ಮಾದರಿಯಂತಿರುವ ತಬಲವನ್ನು ನುಡಿಸುವವರು, ಸಾಮಾನ್ಯವಾಗಿ ಧಾಟಿಯನ್ನು ಸುಸ್ಥಿತಿಯಲ್ಲಿಟ್ಟಿದ್ದು, ಹಿಂದೂಸ್ಥಾನಿ ಸಂಗೀತದ ಕಾಲ ಸೂಚಕವೂ ಆಗಿದೆ. ಮತ್ತೊಂದು ಸಾಮಾನ್ಯ ವಾದ್ಯವಾದ ತಂತಿಗಳುಳ್ಳ ತಾನಪುರ ವು , ರಾಗ ದ ಅಭಿನಯದುದ್ದಕ್ಕೂ, ಸ್ಥಿರ (ಏಕ ಪ್ರಕಾರದ )ಧ್ವನಿಗಾಗಿ ನುಡಿಸಲಾಗುತ್ತದೆ. ಈ ಕೆಲಸ ಸಾಂಪ್ರದಾಯಿಕವಾಗಿ ಹಾಡುವ ಏಕವ್ಯಕ್ತಿಯ ವಿದ್ಯಾರ್ಥಿಯ ಮೇಲೆ ಬೀಳುತ್ತದೆ, ಈ ನೇಮಿಸಿದ ಕೆಲಸ ನೋಡಲು ಏಕ ಪ್ರಕಾರವಾಗಿ (ವೈವಿಧ್ಯವಲ್ಲದ)ಕಾಣಬಹುದು, ಆದರೆ ನಿಜವಾಗಿ,ಇದನ್ನು ಯಾರು ಪಡೆಯುತ್ತಾರೋ ಆ ವಿದ್ಯಾರ್ಥಿಗೆ ಇದು ಗೌರವಯುತವಾದದ್ದು ಮತ್ತು ಅಪರೂಪದ ಅವಕಾಶವಾಗಿರುತ್ತದೆ. ಇತರ ಪಕ್ಕ ವಾದ್ಯಗಳಲ್ಲಿ ಸಾರಂಗಿ ಮತ್ತು ಹಾರ್ಮೋನಿಯಂ ಕೂಡ ಸೇರಿದೆ. ಹಿಂದೂಸ್ಥಾನಿ ಸಂಗೀತದ ಮೂಲ ವಸ್ತು ವಿಷಯಗಳೆಂದರೆ ಭಾವನಾತ್ಮಕ ಪ್ರೀತಿ, ಪ್ರಕೃತಿ , ಮತ್ತು ಭಕ್ತಿ ಗೀತೆಗಳು .ಹಾಡುಗಾರಿಕೆಯ ಅಭಿನಯವು ಸಾಮಾನ್ಯವಾಗಿ ರಾಗದ ನಿಧಾನ ವಿಸ್ತರಣೆಯೊಂದಿಗೆ ಆರಂಭವಾಗುವುದನ್ನು ಬಧತ್ ಎಂದು ತಿಳಿಯಲಾಗಿದೆ. ಇದರ ಶ್ರೇಣಿಯು (30–40 ನಿಮಿಷ )ಗಳಷ್ಟು ಉದ್ದವಾಗಿರಬಹುದು, ಅಥವಾ (2–3 ನಿಮಿಷ )ಗಳಷ್ಟು ಬಹಳ ಕಡಿಮೆಯೂ ಆಗಿರಬಹುದು. ಇದು ಸಂಗೀತಗಾರರ ಶೈಲಿ ಮತ್ತು ಅಭಿನಯವನ್ನು ಅವಲಂಭಿಸಿರುತ್ತದೆ. ಒಂದು ಬಾರಿ ರಾಗವು ಅಭಿವೃದ್ಧಿಯಾಗುತ್ತಿದ್ದಂತೆ, ಮೋದೆಯನ್ನು ಸಿಂಗಾರವಾಗಿಸುತ್ತಾ, ತಾಳಬದ್ಧವಾಗಿ ಪ್ರಾರಂಭಗೊಂಡು, ಕ್ರಮೇಣ ಗತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಈ ಪ್ರಕರಣ (ಭಾಗ ) ವನ್ನು ದ್ರುತ್ ಅಥವಾ ಜೋರ್ ಎಂದು ಕರೆಯಲಾಗುತ್ತದೆ. ಕೊನೆಯದಾಗಿ, ಬೆರಳುಗಳಿಂದ ಮೆದುವಾಗಿ ತಟ್ಟುವವನು ಕೂಡಿಕೊಳ್ಳುತ್ತಾನೆ ಮತ್ತು ತಾಳ ದ ಪರಿಚಯವಾಗುತ್ತದೆ. ಹಿಂದೂಸ್ಥಾನಿ ಸಂಗೀತದಲ್ಲಿ , ವಾದ್ಯಗಳು ಮತ್ತು ಪ್ರದರ್ಶನದ ಶೈಲಿಯಲ್ಲಿ ಅರ್ಥಗರ್ಭಿತವಾದ ಪರ್ಷಿಯನ್ ಪ್ರಾಭಾವವಿದೆ. ಹಾಗೂ, ಕರ್ನಾಟಕ ಸಂಗೀತದಂತೆ ಹಿಂದೂಸ್ಥಾನಿ ಸಂಗೀತವೂ ಸಹ ವಿವಿಧ ಪ್ರಾಚೀನ (ಜನಾಂಗ ಶ್ರುತಿ )ಧ್ವನಿಗಳನ್ನು ಜೀರ್ಣಿಸಿಕೊಂಡಿದೆ.
ಕರ್ನಾಟಕ ಸಂಗೀತ
ಬದಲಾಯಿಸಿಕರ್ನಾಟಕ ಸಂಗೀತದ ಮಾದರಿಯು, ಹಿಂದೂಸ್ಥಾನಿ ಸಂಗೀತಕ್ಕಿಂತ ಹೆಚ್ಚು ಸಾಂಕೇತಿಕವಾಗಿ ರಚನೆಯಾಗಿದೆ. ಉದಾಹರಣೆಗಾಗಿ, ತಾರ್ಕಿಕ ವರ್ಗೀಕರಣದಿಂದಾದ ರಾಗವು ಮೇಳಕರ್ತವಾಗಿದೆ, ಮತ್ತು ನಿಗದಿತ ಸಂಯೋಜನೆಗಳ ಉಪಯೋಗವು ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತವನ್ನು ಹೋಲುತ್ತದೆ. ಕರ್ನಾಟಕ ಸಂಗೀತದ ರಾಗದ ವಿಸ್ತರಣೆಯು ಸಾಮಾನ್ಯವಾಗಿ ಸಂಗೀತದ ತಾಳಗಳಲ್ಲಿ ಹೆಚ್ಚು ವೇಗವಾಗಿಯೂ ಮತ್ತು ಹಿಂದೂಸ್ತಾನಿ ಸಂಗೀತದಲ್ಲಿ ಅದರ ಸರಿಸಮಾನತೆಗಿಂತ ಕಡಿಮೆ ಅವಧಿಯದಾಗಿರುತ್ತದೆ. ಆರಂಭದ ತುಣುಕಿನ ಭಾಗವನ್ನು ವರ್ಣಂ ಎಂದು ಕರೆಯಲಾಗಿದ್ದು, ಮತ್ತು ಇದು ಸಂಗೀತಗಾರರಿಗೆ ಉತ್ಸಾಹವನ್ನು ಉಂಟುಮಾಡುತ್ತದೆ. ಇದನ್ನು ಅನುಸರಿಸುತ್ತಾ ಅರ್ಪಣೆ ಮತ್ತು ಬೇಡಿಕೆಯ ಆಶೀರ್ವಾದ, ನಂತರದಲ್ಲಿ ರಾಗಗಳು (ಅನಿಯಮಿತ ಮಧುರತೆ) ಮತ್ತು ತಾಳಗಳ ಮದ್ಯೆ ಅದಲುಬದಲಾವಣೆಗಳ ಸರಣಿ ಇರುತ್ತದೆ (ಜೋರ್ ಗೆ ಸರಿಸಮನಾಗಿ ಅಲಂಕರಣೆಯಾಗಿದೆ). ಇದು ಹ್ಯಮ್ನ್ಗಳ ಜೊತೆ ಅಂತರ್ಮಿಳಿತವಾಗಿದ್ದು, ಇದನ್ನು ಕೃತಿ ಗಳು ಎಂದು ಕರೆಯಲಾಗಿದೆ. ಇದು ಪಲ್ಲವಿ ಯನ್ನು ಅನುಸರಿಸುತ್ತದೆ ಅಥವಾ ರಾಗದ ವಿಷಯ (ವಸ್ತು) ವಾಗಿರುತ್ತದೆ . ಕರ್ನಾಟಕ ಸಂಗೀತದ ತುಣುಕು ಕೂಡ ಸ್ವರಚಿನ್ಹೆಯಿಂದ ಕೂಡಿರುತ್ತದೆ, ಕವನಗಳ ಸಾಹಿತ್ಯದ ಪುನರುತ್ಪತ್ತಿಯು, ಅಭಿನಯ ನೀಡುವವರ ಕಲ್ಪನೆಯಂತೆ ಉಪಚಾರಗೊಳ್ಳುತ್ತದೆ ಮತ್ತು ಚೆಂದಗೊಳಿಸಲು ಸಾದ್ಯವಾಗುತ್ತದೆ; ಈ ಮೂಲಭೂತ ಭಾಗ(ತುಣುಕು)ವನ್ನು ಸಂಯೋಜನೆಯೆಂದು ಕರೆಯಲಾಗುತ್ತದೆ. ಸಂಯೋಜನೆಯು ಸಾಮಾನ್ಯವಾಗಿ ಅವುಗಳೊಳಗೆ ವಿಧೇಯಕವನ್ನು (ಮೃದುತ್ವ)ಹೊಂದಿದೆ, ಹಾಗೂ ರಚನೆಯನ್ನು ಬೆಳಸುತ್ತದೆ: ಬೇರೆ ಬೇರೆ ಅಭಿನಯಗಾರರಿಂದ ಬೇರೆ ಬೇರೆ ವಿಧಾನದಲ್ಲಿ ಒಂದೇ ಮಾದರಿಯ ಸಂಯೋಜನೆಗಳನ್ನು ಹಾಡುವ ಸಾಮಾನ್ಯ ಸ್ಥಳವಾಗಿದೆ.ಈ ವಿಷಯವಾಗಿ, ಕರ್ನಾಟಕ ಸಂಗೀತವು ಹಿಂದೂಸ್ಥಾನಿ ಸಂಗೀತದಂತೆಯೇ ಇದ್ದು, ಮತ್ತು ಇನ್ನು ನವೀಕರಣಗೊಳಿಸಲಾಗಿದೆ (ನೋಡಿ ಮ್ಯೂಸಿಕಲ್ ಇಂಪ್ರೋವೈಸೇಶನ್ ). ಪ್ರಾಥಮಿಕ ವಿಷಯಗಳು ಆರಾಧನೆಯನ್ನೂ ಸೇರಿಸಿ, ದೇವಾಲಯಗಳ ವರ್ಣನೆ, ತತ್ವ ಶಾಸ್ತ್ರ, ನಾಯಕ -ನಾಯಕಿಯರ ವಸ್ತು ವಿಷಯಗಳು ಮತ್ತು ದೇಶ ಭಕ್ತಿಗೀತೆಗಳು. ಪುರಂದರ ದಾಸ (1480-1564) ರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆದರೆ, ತ್ಯಾಗರಾಜ (1759-1847), ಮುತ್ತುಸ್ವಾಮಿ ದೀಕ್ಷಿತ ರು (1776-1827) ಮತ್ತು ಶ್ಯಾಮಾ ಶಾಸ್ತ್ರಿ (1762-1827) ಈ ಮೂವರನ್ನು ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ತಿಳಿಯಲಾಗಿದೆ.
ಸಂಗೀತ ವಾದ್ಯಗಳು
ಬದಲಾಯಿಸಿಹಿಂದೂಸ್ಥಾನಿ ಸಂಗೀತದಲ್ಲಿ ಸಾಂಕೇತಿಕವಾಗಿ ಉಪಯೋಗಿಸುವ ವಾದ್ಯಗಳಲ್ಲಿ ಸಿತಾರ್ , ಸರೋದ್ , ತಾನ್ಪುರ , ಬಾನ್ಸುರಿ , ಶೆಹನಾಯಿ , ಸಾರಂಗಿ , ಸಂತೂರ್ , ಮತ್ತು ತಬಲಾ ಗಳು ಸೇರಿವೆ. ಕರ್ನಾಟಕ ಸಂಗೀತದಲ್ಲಿ ಸಾಂಕೇತಿಕವಾಗಿ ಉಪಯೋಗಿಸುವ ವಾದ್ಯಗಳಲ್ಲಿ ಕೊಳಲು , ಗೋಟುವಾದ್ಯ , ಹಾರ್ಮೋನಿಯಂ , ವೀಣೆ , ಮೃದಂಗ, ಕಂಜಿರ , ಘಟಂ ಮತ್ತು ವಯೊಲಿನ್ ಗಳು ಸೇರಿವೆ.ಭಾರತೀಯ ವಾದ್ಯಗಳ ಮೂಲಭೂತ ವಿಚಾರವನ್ನು ಪರಿಣಾಮಕಾರಿಯಾಗಿ ವಿವರಿಸಿರುವ ಡಾ.ಲಾಲ್ ಮಣಿ ಮಿಶ್ರರವರ ಭಾರತೀಯ ಸಂಗೀತ ವಾದ್ಯ ವು ಅವರ ವರ್ಷಗಳ ಸಂಶೋದನೆಯ ನಂತರ ಹೊರ ತಂದಿದೆ.
ಪಾಂಡಿತ್ಯವುಳ್ಳವರು
ಬದಲಾಯಿಸಿಪ್ರಾಚೀನ ಮೂಲ ಗ್ರಂಥಗಳು ಭಾರತೀಯ ಸಂಗೀತದ ಮೂಲಭೂತ ನಿಯಮಗಳನ್ನು ನೀಡಿವೆ, ಆದರೆ ಓಂಕಾರ ನಾಥ್ ಥಾಕೂರ್ , ಲಲಿತ್ ಕಿಶೋರ್ ಸಿಂಗ್ ,ಲಾಲ್ ಮಣಿ ಮಿಶ್ರ , ಆಚಾರ್ಯ ಬೃಹಸ್ಪತಿ , ಥಾಕೂರ್ ಜೈದೇವ್ ಸಿಂಗ್ , ಅರ್ . ಸಿ . ಮೆಹತಾ , ಪ್ರೇಮಲತಾ ಶರ್ಮ , ಸುಭದ್ರಾ ಚೌಧರಿ , ಇಂದ್ರಣಿ ಚಕ್ರವರ್ತಿ , ಅಶೋಕ್ ರಾನಡೆ , ಅಬಾನ್ ಇ ಮಿಸ್ಟ್ರಿ , ಮತ್ತು ಇತರರ ಆಧುನಿಕ ಬರವಣಿಗೆ ಭಾರತೀಯ ಸಂಗೀತ ರಚನೆಗೆ (ವ್ಯವಸ್ಥೆ ) ಉಗ್ರ ತಳಹದಿಯನ್ನು ಕೊಟ್ಟಿದೆ. ಇವರುಗಳಲ್ಲದೆ, ಬೇರೆ ವಾಹಿನಿ[೨] ಗಳಲ್ಲಿರುವ ಪಂಡಿತರುಗಳೂ ಕೂಡ ಸಂಗೀತದ ಬಗ್ಗೆ ಬರೆದಿದ್ದಾರೆ. ಅನೇಕ ಭಾರತೀಯ ಸಂಗೀತಗಾರ[೩] ರ ಜೀವನ ಚರಿತ್ರೆಗಳಿವೆ, ಹಾಗಿದ್ದರೂ ಕೆಲವು ವಿಮರ್ಶಕಾರರು[೪], ಭಾರತೀಯ ಚರಿತ್ರಾಕಾರರು ಸಂಗೀತಕ್ಕೆ ಹೆಚ್ಚು ಗಮನ ಕೊಟ್ಟಿಲ್ಲವೆಂದು ಭಾವಿಸುತ್ತಾರೆ.
ಸಂಗೀತಗಾರರು - ಹಾಡುವವರು
ಬದಲಾಯಿಸಿಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ, ಗುರುತಿಸಲ್ಪಡುವ ಹಲವಾರು ಹಾಡುಗಾರರಲ್ಲಿ ಇವರುಗಳು ಸೇರಿದ್ದಾರೆ.ತಾನ್ ಸೇನ್ ,ಕೇಸರಬಾಯಿ ಕೆರ್ಕರ್ , ರೋಶನ್ ಅರಾ ಬೇಗಂ , ಚೆಂಬೈ ವೈದ್ಯನಾಥ ಭಾಗವತರ್ ,ಎಂ.ಎಸ್.ಸುಬ್ಬುಲಕ್ಷ್ಮಿ, ಜಿ .ಏನ್ .ಬಾಲಸುಬ್ರಮಣ್ಯಂ , ಡಾ. ಬಾಲಮುರಳಿ ಕೃಷ್ಣ, ಜಾನ್ ಬಿ . ಹಿಗ್ಗಿನ್ಸ್ , ಅರಿಯಾಕುಡಿ ರಾಮಾನುಜ ಅಯ್ಯಂಗಾರ್ , ಡಿ .ವಿ .ಪಲುಸ್ಕರ್ , ಅಬ್ದುಲ್ ಕರಿಂ ಖಾನ್ , ಅಬ್ದುಲ್ ವಾಹಿದ್ ಖಾನ್ , ಫೈಯಾಜ್ ಖಾನ್ , ಅಮೀರ್ ಖಾನ್ , ಬಡೇ ಗುಲಾಂ ಅಲಿ ಖಾನ್ , ಕುಮಾರ ಗಂಧರ್ವ , ನಾರಾಯಣರಾವ್ ವ್ಯಾಸ್ , ಮಲ್ಲಿಕಾರ್ಜುನ ಮನ್ಸೂರ್ , ಹಿರಿಯ ಮತ್ತು ಕಿರಿಯ ದಾಗರ್ ಸಹೋದರರು , ಜಿಯಾ ಫಾರಿದುದ್ದೀನ್ ದಾಗರ್ , ರಿತ್ವಿಕ್ ಸನ್ಯಾಲ್ , ಗುಂದೇಚ ಸಹೋದರರು , ನಜಕತ್ ಮತ್ತು ಸಲಾಮತ್ ಅಲಿ ಖಾನ್ , ಭೀಮಸೇನ್ ಜೋಷಿ , ಮೊಗು ಬಾಯಿ ಕುರ್ದಿಕರ್ , ಕಿಶೋರಿ ಅಮೋನ್ಕರ್ ,ಪಂಡಿತ್ ಜಸರಾಜ್ , ಉಲ್ಲ್ಹಾಸ್ ಕಶಲ್ಕರ್ , ಸತ್ಯಶೀಲ್ ದೇಶಪಾಂಡೆ , ರಶೀದ್ ಖಾನ್ , ಮಧುಪ್ ಮುದ್ಗಲ್ , ವಿನಾಯಕರಾವ್ ಪಟವರ್ಧನ್ , ಮತ್ತು ಓಂಕಾರ್ ನಾಥ್ ಥಾಕುರ್ .
ಸಂಗೀತಗಾರರು - ವಾದ್ಯಗಾರರು
ಬದಲಾಯಿಸಿಅಲ್ಲಾ ಉದ್ದೀನ್ ಖಾನ್ ಒಬ್ಬ ಪರಿವರ್ತನಾಶೀಲ ವಾದ್ಯಗಾರ. ಅವರು ಅವರ ಮಗನಾದ ಅಲಿ ಅಕ್ಬರ್ ಖಾನ್ ಮತ್ತು ಅವರ ಮಗಳು ಅನ್ನಪೂರ್ಣದೇವಿ ,ಯನ್ನು ತರಬೇತುಗೊಳಿಸಿದ್ದಾರೆ. ನಿಖಿಲ್ ಬ್ಯಾನರ್ಜಿ , ಪಂಡಿತ್ ರವಿಶಂಕರ್ , ಮತ್ತು ಕೊಳಲುವಾದಕ ಪನ್ನಲಾಲ್ ಘೋಷ್ ,ಬಾಂಗ್ಲಾದೇಶ ದಿಂದ ಆಜಿಜುಲ್ ಇಸ್ಲಾಂ ಯುವ-ಜನಾಂಗದ ಸಿತಾರ್ ವಾದಕರಲ್ಲಿ ಚಂದ್ರಕಾಂತ್ ಸರ್ದೇಶ್ ಮುಖ್ ಬುಧಾದಿತ್ಯ ಮುಖರ್ಜಿ ಮತ್ತು ಶಾಹಿದ್ ಪರ್ವೇಜ್ ಸೇರಿದ್ದಾರೆ. ಯುವ-ಜನಾಂಗದವರ ಪಟ್ಟಿಯಲ್ಲಿ ಶ್ರೇಷ್ಠ ಕೊಳಲುವಾದಕರ ಹೆಸರೆಂದರೆ ವಿಜಯ್ ರಾಘವ ರಾವ್ , ಹರಿಪ್ರಸಾದ್ ಚೌರಾಸಿಯಾ , ರಘುನಾಥ್ ಸೇಥ್ ಮತ್ತು ನಿತ್ಯಾನಂದ್ ಹಳ್ದಿಪುರ್ . ಬಿಸ್ಮಿಲ್ಲಾ ಖಾನ್ ರ ಹೆಸರು ಶೆಹನಾಯಿ ವಾದ್ಯದ ಜೊತೆ ಪರ್ಯಾಯಪದವಾಗಿದೆ. ಜಿಯಾ ಮೊಹಿದ್ದೀನ್ ದಾಗರ್ ರವರು ವೀಣೆಯೊಂದಿಗಿನ ಅವರ ನೈಪುಣ್ಯತೆಯಿಂದ ಹೆಸರುವಾಸಿಯಾಗಿದ್ದಾರೆ.ಅಲ್ಲಾ ರಖಾ ರವರು, ಪಂಡಿತ್ ರವಿಶಂಕರ್ ಜೊತೆ,ಪಶ್ಚಿಮ ಭಾಗದಲ್ಲಿ ತಬಲವನ್ನು ಪ್ರಸಿದ್ಧವನ್ನಾಗಿ ಮಾಡಿದ್ದಾರೆ.ಅವರ ಮಗ ಜಾಕೀರ್ ಹುಸೇನ್ ಕೂಡ ಒಬ್ಬ ಪ್ರಖ್ಯಾತ ತಬಲ ವಾದಕರು. ಸಂತೂರ್ ವಾದನದಲ್ಲಿ ಶಿವಕುಮಾರ್ ಶರ್ಮಾ ಹೆಸರು ವಾಸಿ.ದಕ್ಷಿಣ ಶಾಸ್ತ್ರೀಯ ಸಂಗೀತಗಾರರಲ್ಲಿ , ಮಾಸ್ಟರ್ ಯು. ಶ್ರೀನಿವಾಸ್ ರವರು ಪ್ರಪಂಚದಾದ್ಯಂತ ಹೆಸರುವಾಸಿಯಾಗಿರುವ ಮೇರು ಕಲಾವಿದರಾಗಿರುತ್ತಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ,ಅವನ ಮ್ಯಾಂಡೊಲಿನ್ ನಮೂನೆಯ ಪರಿಚಯದಿಂದ ಹೆಸರುವಾಸಿಯಾಗಿದ್ದಾನೆ. ಭಾರತದಲ್ಲಿ "ಮ್ಯಾಂಡೊಲಿನ್" ಶಬ್ದದ ಜೊತೆ ಅವನು ಪರ್ಯಾಯಪದವಾಗಿ ಆಗಿದ್ದಾನೆ.ಅವರುಗಳಲ್ಲಿ , ಚೆನ್ನಾಗಿ ಪ್ರಖ್ಯಾತರಾದ ವಾದ್ಯಗಾರರಲ್ಲಿ ಕುಮರೇಶ್ ಮತ್ತು ಗಣೇಶ್ ಜೋಡಿ, ಲಾಲ್ಗುಡಿ ಜಿ. ಜಯರಾಮನ್ ಮತ್ತು ದಿವಂಗತ ಕುನ್ನಕ್ಕುಡಿ ವೈದ್ಯನಾಥನ್, ಇವರೆಲ್ಲಾ ಅವರ ವಯೊಲಿನ್ ಪ್ರದರ್ಶನಕ್ಕಾಗಿ ಹೆಸರುವಾಸಿಯಾಗಿದ್ದಾರೆ.
ಇವನ್ನೂ ಗಮನಿಸಿ
ಬದಲಾಯಿಸಿಆಕರಗಳು
ಬದಲಾಯಿಸಿ- ↑ "ಒಮೆ ಸ್ವರಲಿಪಿ "ಎಂಬ ಲೇಖನ , ಡಾ. ರಾಗಿಣಿ ತ್ರಿವೇದಿಯವರ ಭಾರತೀಯ ಶಾಸ್ತ್ರೀಯ ಸಂಗೀತ: ಶಸ್ತ್ರ, ಶಿಕ್ಷಣ್ ವ ಪ್ರಯೋಗ . (ಸಾಹಿತ್ಯ ಸಂಗಮ , ಅಲಹಾಬಾದ್ : 2008)
- ↑ ಉಮೇಶ್ ಜೋಶಿ -- ಭಾರತೀಯ ಸಂಗೀತ್ ಕ ಇತಿಹಾಸ್
- ↑ ಕೋಮಲ್ ಗಾಂಧರ್ -- ಉಸ್ತಾದ್ ವಿಲಯತ್ ಖಾನ್
- ↑ http://www.omenad.net/articles/icm.htm ಇಂಡಿಯನ್ ಕ್ಲಾಸ್ಸಿಕಲ್ ಮ್ಯೂಸಿಕ್
ಹೊರಗಿನ ಕೊಂಡಿಗಳು
ಬದಲಾಯಿಸಿ- ಸ್ಪಿಕ್ ಮಕಾಯ್ -ಯುವಕರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ಸಮಾಜವಾಗಿದೆ. Archived 2020-01-29 ವೇಬ್ಯಾಕ್ ಮೆಷಿನ್ ನಲ್ಲಿ.
- ದಕ್ಷಿಣ ಏಷ್ಯಾದ ಸ್ತ್ರೀಯರ ಚಾವಡಿ (ಭವನ) ಭಾರತೀಯ ಶಾಸ್ತ್ರೀಯ ಸಂಗೀತದ ಜೊತೆ ವಿವರಣೆಯನ್ನು ಹೊಂದಿರುವ ದೊಡ್ಡ ಲೇಖನಗಳ ಸಂಗ್ರಹವನ್ನು ಮತ್ತು ಅಪರೂಪದ ಮುದ್ರಣಗಳಿಂದ ಹೊರತೆಗೆದ ಆಡಿಯೋದ (ಶ್ರಾವ್ಯ) ಕೊಂಡಿಗಳನ್ನು ಹೊಂದಿದೆ.
- ವಿಜಯ ಪರ್ರಿಕರ್ ಲೈಬ್ರರಿ ಆಫ್ ಇಂಡಿಯನ್ ಕ್ಲಾಸ್ಸಿಕಾಲ್ ಮ್ಯೂಸಿಕ್ ಗ್ರಂಥಾಲಯವು,ಈಸ್ಟರ್ ವರ್ಷದ ಭಾರತದ ಮಹಾನ್ ಸಂಗೀತ ಮಾಸ್ಟರ್ ಗಳ ಸಂಗೀತದ ಮುದ್ರಿಕೆಗಳು,ಹಳೆಯದರಿಂದ ಆರಿಸಿ ತೆಗೆದದ್ದು,ಶೋಧಿಸಲು ಕಷ್ಟವಾದದ್ದು ಅಥವಾ ಮುದ್ರಣಗೊಂಡು ಬಿಡುಗಡೆಯಾಗದೆ ಇದ್ದದ್ದು ಮುಂತಾದುವುಗಳನ್ನು ಹೊಂದಿದೆ.
- ರಾಗವಾಣಿ Archived 2018-06-18 ವೇಬ್ಯಾಕ್ ಮೆಷಿನ್ ನಲ್ಲಿ. ಒಂದು ಆನ್ ಲೈನ್ ದಿನಪತ್ರಿಕೆಯಾಗಿದ್ದು, ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳ ಮೇಲೆ ಏಕಾಗ್ರತೆಯನ್ನು ಹೊಂದಿದೆ.
- ಭಾರತದ ದ್ವನಿಗಳು (ಶಬ್ದ ) - ರಾಗವು ಆಡಿಯೋ ಜೊತೆ ಸಂಬಂಧ ಹೊಂದಿದ್ದು,ಸಂಗೀತದ ತಾರ್ಕಿಕ ಲೇಖನಗಳು ಮತ್ತು ಆನ್ ಲೈನ್ ಪಾಠಗಳು.
- ಇಂಡಿಯನ್ ಮ್ಯೂಸಿಕ್ ಫಾರ್ ಮ್ಯುಸಿಶಿಯನ್ಸ್ Archived 2010-05-16 ವೇಬ್ಯಾಕ್ ಮೆಷಿನ್ ನಲ್ಲಿ. -ಸಂಗೀತಗಾರರು ವಿವಿಧ ರಾಗಗಳ ಸೂಕ್ಷ್ಮ ವ್ಯತ್ಯಾಸಗಳನ್ನು, ಅದರ ಸಾಹಿತ್ಯ ಮತ್ತು ಮನೋಭಾವಗಳನ್ನು ವಿವರವಾಗಿ ಚರ್ಚೆ ಮಾಡಲು ಇರುವ ಒಂದು ಸಭಾಭವನ.
- ಸ್ವರ ಗಂಗಾ ಬೈ ಅದ್ವೈತ್ ಜೋಷಿ - ರಾಗದ ತಳಹದಿ , ತಾಳದ ತಳಹದಿ , ಬಂದಿಶ್ ತಳಹದಿ ; ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ವಿವಿಧ ಸಂಗೀತ ಮಾದರಿಗಳು ಮತ್ತು ಲೇಖನಗಳು
- ಭಾರತೀಯ ಶಾಸ್ತ್ರೀಯ ಸಂಗೀತದ ತಳಹದಿ (ಆಧಾರ)ಮತ್ತು ಇತಿಹಾಸ.[ಶಾಶ್ವತವಾಗಿ ಮಡಿದ ಕೊಂಡಿ]
- ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತಕ್ಕೆ ಸರಳ ಪೀಟಿಕೆ- - ಭಾಗ 1 Archived 2008-05-17 ವೇಬ್ಯಾಕ್ ಮೆಷಿನ್ ನಲ್ಲಿ. ವಿಶ್ವ ಸಂಗೀತ ಸೆಂಟ್ರಲ್ ರವರಿಂದ ಪ್ರಕಟಣೆ.
- ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತಕ್ಕೆ ಸರಳ ಪೀಟಿಕೆ - ಭಾಗ 2 Archived 2008-06-11 ವೇಬ್ಯಾಕ್ ಮೆಷಿನ್ ನಲ್ಲಿ. ವಿಶ್ವ ಸಂಗೀತ ಸೆಂಟ್ರಲ್ ರವರಿಂದ ಪ್ರಕಟಣೆ.
- ಮೈಗ್ಹ್ ಮಲ್ಹಾರ್ Archived 2008-12-08 ವೇಬ್ಯಾಕ್ ಮೆಷಿನ್ ನಲ್ಲಿ. - ಇತಿಹಾಸ(ಚರಿತ್ರೆ),ವಿಷಯ,ಚಿರಪರಿಚಿತ ಹಾಡುಗಾರರು ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದ ವಾದ್ಯಗಳ ಮೇಲೆ ವ್ಯಾಪಕವಾದ ವಿವರಣೆಯನ್ನು ನೀಡುತ್ತದೆ.
- ತಾನರಂಗ್ .ಕಾಮ್ ತಾನರಂಗ್ ಇದು ಒಂದು ಅಂತರ್ಜಾಲವಾಗಿದ್ದು, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ವಿವಿಧ ರಾಗಗಳ ಬಗ್ಗೆ ಮತ್ತು ವಿವಿಧ ಬಂದಿಷೆಸ್ ಗಳ ಬಗ್ಗೆ ಕೇಳಲು ಮಾಹಿತಿಗಳನ್ನು ಒಳಗೊಂಡಿದೆ.
- "ಬನಾರಸ್ , ಮ್ಯೂಸಿಕ್ ಆನ್ ದಿ ಗಂಗೆ " ಡಾಕ್ಯುಮೆಂಟರಿ 52 ನಿಮಿಷಗಳು.