ಭಾರತೀಯ ಸಂಗೀತ ಕ್ಷೇತ್ರದಲ್ಲಿ ತಾನ್‍ಸೇನ್ ಅತ್ಯಂತ ಪ್ರಸಿದ್ಧ ಗಾಯಕ. ಇವನ ಕಾಲ (ಸು. ೧೫೬೪-೧೬೪೬). ಮೊಗಲ್ ಚಕ್ರವರ್ತಿ ಅಕ್ಬರನ ಆಸ್ಥಾನದ ಪ್ರಸಿದ್ಧ ಸಂಗೀತಗಾರ. ತಾನ್ ಸೇನ್ ಗ್ವಾಲಿಯರ್ ಬಳಿಯ 'ಬೇಹಟ್' ಎಂಬ ಗ್ರಾಮದಲ್ಲಿ ಜನಿಸಿದನು. ಇವನ ನಿಜವಾದ ಹೆಸರು ತನ್ನಾಮಿಶ್ರ. ತಾನ್ ಸೇನ್ ಎಂಬುದು ಅವನಿಗೆ ದೊರಕಿದ ಬಿರುದು. ತಾನ್‍ಸೇನ್ ಸ್ವಾಮಿ ಹರಿದಾಸ ಎಂಬವರಲ್ಲಿ ದ್ರುಪದ್ ಗಾಯನವನ್ನೂ, ಗೋವಿಂದ ಸ್ವಾಮಿ ಎಂಬವರಲ್ಲಿ ಕೀರ್ತನ ಪದ್ದತಿಯ ಗಾಯನವನ್ನೂ ಕಲಿತನು. ಮುಂದೆ ಅಕ್ಬರನ ಆಸ್ಥಾನ ವಿದ್ವಾಂಸನಾದ ಮೇಲೆ ಇವನ ಕೀರ್ತಿ ಎಲ್ಲೆಡೆ ಹರಡಿತು. ತಾನ್‍ಸೇನ್ ಅಪೂರ್ವ ಗಾಯಕನಾಗಿ ಮಾತ್ರವಲ್ಲದೆ ಸಂಗೀತ ಶಾಸ್ತ್ರಜ್ಞ ಹಾಗೂ ವಾಗ್ಗೇಯಕಾರನಾಗಿದ್ದನು. ಇವನು ರಚಿಸಿದ ಅನೇಕ ದ್ರುಪದಗಳು ಬಹುವಾಗಿ ಬಳಕೆಯಲ್ಲಿವೆ. ಇವನ ಗಾಯನ ಶೈಲಿಗೆ "ಗೌರ್ ಹರ್ ಬಾನೀ" ಎಂದು ಹೆಸರು. ಇವನು ಸೃಸ್ಟಿಸಿದ ದರ್ಬಾರಿ ಕಾನಡ, ಮಿಯಾ ಮಲ್ಹಾರ್, ತಾನ್ ಸೇನ್ ಕಿ ತೋಡಿ ಮತ್ತು ಮಿಯಾಕೆ ಸಾರಂಗ್ ಎಂಬ ರಾಗಗಳು ಬಹಳ ಜನಪ್ರಿಯ. ಇದಲ್ಲದೆ ಸಂಗೀತ್ ಸಾರ್ ಮತ್ತು ರಾಗಮಾಲಾ ಎಂಬ ಗ್ರಂಥಗಳನ್ನೂ ರಚಿಸಿದನು. ತಾನ್‍ಸೇನನು ೧೬೪೬ ರಲ್ಲಿ ಕಾಲವಾದನು. ಗ್ವಾಲಿಯರ್ ನಲ್ಲಿರುವ ಅವನ ಸಮಾಧಿಯ ಸ್ಥಳವು ಸಂಗೀತಗಾರರೆಲ್ಲರ ಯಾತ್ರಾಸ್ಥಳವಾಗಿದೆ.

ಮಿಯಾ ತಾನ್‍ಸೇನ್
Tansen of Gwalior. (11.8x6.7cm) Mughal. 1585-90. National Museum, New Delhi..jpg
ಮಿಯಾ ತಾನ್‍ಸೇನ್, ಲಾಲಾ ದೇವ್ ಲಾಲ್ ರವರ ವರ್ಣಚಿತ್ರ ಕಲ್ಕತ್ತಾದ ವಿಕ್ಟೋರಿಯ ಗ್ಯಾಲರಿಯಲ್ಲಿದ =
ಹಿನ್ನೆಲೆ ಮಾಹಿತಿ
ಜನ್ಮನಾಮರಾಮ್‍ತಾನು ಪಾಂಡೆ
ಅಡ್ಡಹೆಸರುಮೊಹಮ್ಮದ್ ಅತಾ ಖಾನ್
ಜನನಶ.೧೫೦೬
ಬೇಹತ್ ,ಗ್ವಾಲಿಯರ್
ಮರಣ೧೫೮೫
ಆಗ್ರಾ
ಸಂಗೀತ ಶೈಲಿಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ
ವೃತ್ತಿಮೊಘಲರ ಆಸ್ಥಾನ ಗಾಯಕ
ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿರುವ ತಾನ್‍ಸೇನನ ಸಮಾಧಿ
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ಪರಿಕಲ್ಪನೆಗಳು
ಶೃತಿ · ಸ್ವರ · ಅಲಂಕಾರ · ರಾಗ
ತಾಳ · ಘರಾನಾ · ಥಾಟ್
ಸಂಗೀತೋಪಕರಣಗಳು
ಭಾರತೀಯ ಸಂಗೀತೋಪಕರಣಗಳು
ಶೈಲಿಗಳು
ದ್ರುಪದ್ · ಧಮಾರ್ · ಖಯಾಲ್ · ತರಾನ
ಠುಮ್ರಿ · ದಾದ್ರ · ಖವ್ವಾಲಿ · ಘಝಲ್
ವಿದಾನಗಳು (ಥಾಟ್‌ಗಳು)
ಬಿಲಾವಲ್ · ಖಮಾಜ್ · ಕಾಫಿ · ಅಸಾವರಿ · ಭೈರವ್
ಭೈರವಿ · ತೋಡಿ · ಪೂರ್ವಿ · ಮಾರ್ವ · ಕಲ್ಯಾಣಿ