ಭೈರವಿ (ಹಿಂದುಸ್ತಾನಿ )

ಹಿಂದುಸ್ತಾನಿ ರಾಗ
ರಾಗ ಭೈರವಿ
ಭೈರವಿ ರಾಗಮಾಲ ಚಿತ್ರಿಕೆ .
ಥಾಟ್ ಭೈರವಿ
ಆರೋಹ Re Ga ಮ ಪ Dha Ni
ಅವರೋಹ Ni Dha ಪ ಮ Ga Re
ಪಕಡ್ ನಿ ರಿ ಗ MaMa ಗ ರಿ ಸ
ವಾದಿ
ಸಂವಾದಿ ನಿ
ಪ್ರಹರ್ (ಸಮಯ ) Evening (ಪ್ರಥಮ್ ಪ್ರಹರ್ )

ರಾಗ ಭೈರವಿ (ಹಿಂದಿ: भैरवि) ಯು ಒಂದು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಸಂಪೂರ್ಣ (Sampurna) ರಾಗ.ಇದು ಭೈರವಿ ಥಾಟ್ ಗೆ ಸೇರಿರುತ್ತದೆ. ಸಾಂಪ್ರದಾಯಿಕವಾಗಿ ಇದು ಒಂದು ಮುಂಜಾನೆ ರಾಗ.ಈಗಿನ ದಿನಗಳಲ್ಲಿ ,ಕೊನೆಯಪಕ್ಷ ಖಯಾಲ್ ಗಾಯಕಿ ಯಲ್ಲಿ ಇದನ್ನು ಕಛೇರಿಯ ಕೊನೆಯ ಭಾಗದಲ್ಲಿ ಹಾಡುತ್ತಾರೆ. ಇದು ಅದರದ್ದೇ ಥಾಟ್ ಅದ ಭೈರವಿಯ ಪ್ರಾತಿನಿಧಿಕ ರಾಗವಾಗಿದೆ.

ಕರ್ನಾಟಕ ಸಂಗಿತ ವು ಭೈರವಿ ಹೆಸರಿನ ರಾಗವನ್ನು ಹೊಂದಿದ್ದರೂ ಅದು ಈ ರಾಗಕ್ಕಿಂತ ಸಾಕಷ್ಟು ಭಿನ್ನವಾಗಿದೆ.

ಕರ್ನಾಟಕ ಸಂಗಿತದ ಹನುಮತೋಡಿ ರಾಗವು ಹಿಂದುಸ್ತಾನಿಯ ಭೈರವಿ ರಾಗದ ಸಮಾನವಾದ ಸ್ವರಶ್ರೇಣಿಯನ್ನು ಹೊಂದಿದೆ.

ಸಿದ್ಧಾಂತಸಂಪಾದಿಸಿ

ಹಿಂದುಸ್ತಾನಿ ಸಂಗೀತ ಶಾಸ್ತ್ರದ ದ ಬಗ್ಗೆ ಬರೆಯುವುದು ಎಂದರೆ ಬಹಳ ಎಡರು ತೊಡರುಗಳಿಂದ ತುಂಬಿದ ಕೆಲಸ. ಪ್ರಥಮವಾಗಿ ನಿರ್ದಿಷ್ಟ ಸ್ವರಲಿಪಿ ಇಲ್ಲದಿರುವುದು.ಹಿಂದುಸ್ತಾನಿ ಸಂಗೀತವು ಗುರುಶಿಷ್ಯ ಪರಂಪರೆಯಲ್ಲಿ ಮುಖ್ಯವಾಗಿ ಕೇಳುವಿಕೆ ಯಿಂದ ಕಲಿಸಲ್ಪದುವುದರಿಂದ ಬರೆದು ಕಲಿಯುವುದು ಅಷ್ಟು ಪ್ರಾಮುಖ್ಯವಲ್ಲ .

ಆರೋಹಣ ಮತ್ತು ಅವರೋಹಣಸಂಪಾದಿಸಿ

ಆರೋಹಣ

ಸ , ಕೋಮಲ್ ರಿ , ಕೋಮಲ್ ಗ , ಮ , ಪ , ಕೋಮಲ್ ಧ, ಕೋಮಲ್ ನಿ

ಅವರೋಹಣ

ಸ , ಕೋಮಲ್ ನಿ , ಕೋಮಲ್ ಧ , ಪ , ಮಾ, ಕೋಮಲ್ ಗ , ಕೋಮಲ್ ರಿ

ವಾದಿ ಮತ್ತು ಸಂವಾದಿಸಂಪಾದಿಸಿ

ವಾದಿ - ಗ

ಸಂವಾದಿ - ನಿ

ಪಕಡ್ ಅಥವಾ ಚಲನಸಂಪಾದಿಸಿ

ಕೋಮಲ್ ಧಾ - ಕೋಮಲ್ ನಿ - ಸ

ಸ - ಕೋಮಲ್ ರಿ - ಸ

ಸ - ಕೋಮಲ್ ರಿ - ಕಾಲಿ - ಮ - ಕಾಲಿ - ಪ - ಕೋಮಲ್ ಗ - ಕೋಮಲ್ ನಿ - ಕೋಮಲ್ ಗ

ಸಂಘಟನೆ ಮತ್ತು ಸಂಬಂಧಗಳುಸಂಪಾದಿಸಿ

ಸಂಬಂಧಿಸಿದ ರಾಗಗಳು :

  • ಭೈರವಿ
  • ಶುದ್ಧ ಭೈರವಿ
  • ಸಿಂಧು ಭೈರವಿ
  • ನಟ ಭೈರವಿ


ಥಾಟ್ : ಭೈರವಿ

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ಪರಿಕಲ್ಪನೆಗಳು
ಶೃತಿ · ಸ್ವರ · ಅಲಂಕಾರ · ರಾಗ
ತಾಳ · ಘರಾನಾ · ಥಾಟ್
ಸಂಗೀತೋಪಕರಣಗಳು
ಭಾರತೀಯ ಸಂಗೀತೋಪಕರಣಗಳು
ಶೈಲಿಗಳು
ದ್ರುಪದ್ · ಧಮಾರ್ · ಖಯಾಲ್ · ತರಾನ
ಠುಮ್ರಿ · ದಾದ್ರ · ಖವ್ವಾಲಿ · ಘಝಲ್
ವಿದಾನಗಳು (ಥಾಟ್‌ಗಳು)
ಬಿಲಾವಲ್ · ಖಮಾಜ್ · ಕಾಫಿ · ಅಸಾವರಿ · ಭೈರವ್
ಭೈರವಿ · ತೋಡಿ · ಪೂರ್ವಿ · ಮಾರ್ವ · ಕಲ್ಯಾಣಿ

ಸ್ವಭಾವಸಂಪಾದಿಸಿ

ರಾಗದ ಸ್ವಭಾವ ಎಂದರೆ ಸಂಗೀತದ ಪ್ರಾಯೋಗಿಕ ಆಯಾಮ.ಹಿಂದುಸ್ತಾನಿ ಪದ್ದತಿಯಲ್ಲಿ ಇದು ಸ್ವಲ್ಪ ಕ್ಲಿಷ್ಟಕರ ಏಕೆಂದರೆ ಬಹುತೇಕ ಪರಿಕಲ್ಪನೆಗಳು ಚಲನಶೀಲ ಹಾಗೂ ಸಂಪ್ರದಾಯಶೀಲವಾಗಿದೆ.ಈ ಕೆಳಗಿನ ಮಾಹಿತಿಗಳು ನಿಖರ ,ವಾಗಿ ಇರದಿದ್ದರೂ,ಸಂಗೀತದ ಸ್ವಭಾವನ್ನು ಪರಿಚಯಿಸಲು ಪ್ರಯತ್ನಿಸುತ್ತದೆ. ಈ ರಾಗದ ನಿರ್ವಹಣೆ ಸಾಮಾನ್ಯವಾಗಿ ವಿರಾಮದಾಯಕ ವಾಗಿರುತ್ತದೆ. ಕೆಲವು ಸಂಗೀತಗಾರರು ಶುದ್ಧ ರಿ ಯನ್ನು ಆರೋಹಣದಲ್ಲಿ ಉಪಯೋಗಿಸುವ ಸ್ವಾತಂತ್ರ್ಯವನ್ನು ತೆಗೆದುಕೊಳ್ಳುತ್ತಾರೆ.ಕೆಲವೊಮ್ಮೆ ಪ ವನ್ನು ಬಿಟ್ಟು ಹಾಡುವ ಸಂಪ್ರದಾಯವೂ ಇದೆ. ಈ ರೀತಿಯ ವಿಚಲನೆ ರಾಗ ಸಂಭಂದಿಯಾಗಿರದೆ ಹಾಡುಗಾರರ ಪ್ರತಿಭೆ ಆಧಾರಿತವಾಗಿರುತ್ತದೆ.

ಸಮಯಸಂಪಾದಿಸಿ

ಭೈರವಿ ರಾಗ ಗಂಡು ರಾಗವಾದ ಭೈರವ್ ರಾಗದ ಹೆಣ್ಣು ಪ್ರತಿರೂಪ ವಾಗಿ ಸಂಜೆಯ ರಾಗ ವೆಂದು ಪರಿಗಣಿಸಲ್ಪಡುತ್ತದೆ ಅದರೂ ಇದನ್ನು ಬೆಳಗಿನ ರಾಗವಾಗಿ ಅಥವಾ ಕಚೇರಿಯ ಕೊನೆಯ ರಾಗವಾಗಿ ಹಾಡುವ ಸಂಪ್ರದಾಯ ಹೆಚ್ಹು ಬಳಕೆಯಲ್ಲಿದೆ.

ಋತುಮಾನಸಂಪಾದಿಸಿ

ಹಲವು ರಾಗಗಳು ಋತುಮಾನ ಸ್ವಭಾವವನ್ನು ಹೊಂದಿರುತ್ತವೆ.ಆದರೆ ಭೈರವಿ ಕೇವಲ ದಿನದ ಸಮಯಾಧಾರಿತವಾಗಿ ಎಲ್ಲಾ ಋತುಮಾನದಲ್ಲಿಯೂ ಹಾಡಲು ಯೋಗ್ಯವಾಗಿದೆ.

ರಸಸಂಪಾದಿಸಿ

ರಾಗ ಭೈರವಿ ಶಾಂತರಸ ಪ್ರದಾನವಾದುದು. ಅದರೂ ತೀವ್ರ ಹಾಗೂ ದುಃಖ ರಸ ಪ್ರಧಾನ ರಚನೆಗಳು ಹಾದಲ್ಪಡುತ್ತದೆ.

ಚಲನಚಿತ್ರ ಗೀತೆಗಳುಸಂಪಾದಿಸಿ

ಭೈರವಿ ಚಲನಚಿತ್ರಗಳಲ್ಲಿ ಜನಪ್ರಿಯ ರಾಗವಾಗಿದೆ. ಭೈರವಿ ರಾಗಧಾರಿತ ಹಲವು ಗೀತೆಗಳು ಇಲ್ಲಿವೆ.

  • "ಹಮೆ ತುಮ್ಸೆ ಪ್ಯಾರ್ ಕಿತ್ನ " - ಕುದ್ರತ್
  • "ತು ಪ್ಯಾರ್ ಕರೆ ಯಾ ತುಕ್ರಾಯೇ " - ದೇಖ್ ಕಬೀರ ರೋಯ
  • "ದಿಲ್ ಅಪ್ನ ಆರ್ ಪ್ರೀತ್ ಪರಾಯಿ " - ದಿಲ್ ಅಪ್ನ ಆರ್ ಪ್ರೀತ್ ಪರಾಯಿ
  • "ಲಾಗ ಚುನರಿ ಮೇನ್ ದಾಗ್ " - ದಿಲ್ ಹಿ ತೊ ಹೈ
  • "ಮಾತಾ ಸರಸ್ವತಿ " - ಆಲಾಪ್ (ಫಿಲಂ )
  • "ತು ಗಂಗಾ ಕಿ ಮೂಜ್" - ಬೈಜು ಬಾವ್ರ
  • "ದಿಲ್ ತೋ ಬಚ್ಚ ಹೈ ಜಿ " - ಈಶ್ಕಿಯ
  • "ರಮೈಯ ವಸ್ತ ವೈಯ" - ಶ್ರೀ ೪೨೦
  • "ಪ್ಯಾರ್ ಹುವ ಎಕ್ರಾರ್ ಹುವ ಹೈ " - ಶ್ರೀ ೪೨೦

ಚಾರಿತ್ರಿಕ ಮಾಹಿತಿಸಂಪಾದಿಸಿ

ಮೂಲಗಳುಸಂಪಾದಿಸಿ

ಬಡೆ ಗುಲಾಂ ಅಲಿ ಖಾನ್ರು ಭೈರವಿಯು ಇರಾನ್[೧].ನ ಜಾನಪದ ಸಂಗೀತದಿಂದ ಹುಟ್ಟಿರುತ್ತದೆ ಎಂದು ಅಭಿಪ್ರಾಯ ಪಟ್ಟಿರುತ್ತಾರೆ.

ಪ್ರಾಮುಖ್ಯ ದ್ವನಿಮುದ್ರಿಕೆಗಳುಸಂಪಾದಿಸಿ

ಹೆಚ್ಚಿನಂಶ ಅಬ್ದುಲ್ ಕರೀಂ ಖಾನ್ ರ ೧೯೦೫ ರಲ್ಲಿ ದ್ವನಿಮುದ್ರಣ. [ಶಾಶ್ವತವಾಗಿ ಮಡಿದ ಕೊಂಡಿ]

ಉಲ್ಲೇಖಗಳು‌ಸಂಪಾದಿಸಿ

  1. [೧] ಬಡೆ ಗುಲಾಮ್ ಅಲಿ ಖಾನ್ ತಾಕುರ್ ಜಯದೇವ್ ಸಿಂಗ ರೊಂದಿಗಿನ ಸಂಭಾಷಣೆ

ಬೋರ್ ಜೋಎಪ್ (ed). Rao, Suvarnalata; der Meer, Wim van; Harvey, Jane (co-authors) The Raga Guide: A Survey of 74 Hindustani Ragas . ಜೆನಿತ್ ಮಿಡಿಯಾ,ಲಂಡನ್.೧೯೯೯

ಬಾಹ್ಯ ಕೊಂಡಿಗಳುಸಂಪಾದಿಸಿ