ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ಪರಿಕಲ್ಪನೆಗಳು
ಶೃತಿ · ಸ್ವರ · ಅಲಂಕಾರ · ರಾಗ
ತಾಳ · ಘರಾನಾ · ಥಾಟ್
ಸಂಗೀತೋಪಕರಣಗಳು
ಭಾರತೀಯ ಸಂಗೀತೋಪಕರಣಗಳು
ಶೈಲಿಗಳು
ದ್ರುಪದ್ · ಧಮಾರ್ · ಖಯಾಲ್ · ತರಾನ
ಠುಮ್ರಿ · ದಾದ್ರ · ಖವ್ವಾಲಿ · ಘಝಲ್
ವಿದಾನಗಳು (ಥಾಟ್‌ಗಳು)
ಬಿಲಾವಲ್ · ಖಮಾಜ್ · ಕಾಫಿ · ಅಸಾವರಿ · ಭೈರವ್
ಭೈರವಿ · ತೋಡಿ · ಪೂರ್ವಿ · ಮಾರ್ವ · ಕಲ್ಯಾಣಿ

ಭೈರವ್ ,ಅಥವಾ ಭೈರೋನ್ , ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಶತಮಾನಗಳಿಂದ ಪ್ರಮುಖವಾದ ಒಂದು ರಾಗ. ಭೈರವ್ ಎಂಬ ಹೆಸರು ಶಿವನ ಅವತಾರವಾದ ಭೈರವ ಎಂಬುವುದರಿಂದ ಬಂದಿದ್ದು,ಇದು ಘನತೆ ಮತ್ತು ಗಾಂಭೀರ್ಯಕ್ಕೆ ಐತಿಹಾಸಿಕವಾಗಿ ಸಂಬಂಧಿಸಿದ್ದರೂ ಶಾಂತ ಮತ್ತು ಭಕ್ತಿ ರಸ ಪ್ರಧಾನವಾಗಿದೆ. ರಾಗ ಭೈರವ್ ಕೆಲವೊಮ್ಮೆ ಭೈರವನ (ಶಿವ )ನ ಹೆಂಡತಿ ಭೈರವಿ ಎಂಬ ಅರ್ಥದಲ್ಲಿ ಭೈರವಿ ರಾಗದೊಂದಿಗೆ ಗುರುತಿಸಲ್ಪಡುತ್ತದೆ.

ಸಿಖ್ಖ್ ಸಂಪ್ರದಾಯ

ಬದಲಾಯಿಸಿ

ಭೈರೋನ್ ಸಿಖ್ ಸಂಪ್ರದಾಯದಲ್ಲಿ ಕಾಣ ಬರುತ್ತದೆ.ಇದುಗುರು ಗ್ರಂಥ ಸಾಹಿಬ್ ನ ಒಂದು ಭಾಗವಾಗಿದೆ. ಪ್ರತಿ ರಾಗವೂ ಒಂದು ಸಿದ್ದ ಚೌಕಟ್ಟು ಹೊಂದಿರುತ್ತದೆ.ಇದರಿಂದಾಗಿ ಪ್ರತೀ ರಾಗದಲ್ಲಿ ಉಪಯೋಗಿಸಬಹುದಾದ ಸ್ವರಗಳು ,ಸ್ವರಗಳ ಸಂಖ್ಯೆ,ಅವುಗಳ ನಡುವೆ ಇರುವ ಅನ್ಯೋನ್ಯತೆ ಇವುಗಳು ರಾಗ ಸಂಯೋಜನೆಯಲ್ಲಿ ಪ್ರಮುಖವಾಗುತ್ತದೆ. ಗುರು ಗ್ರಂಥ್ ಸಾಹಿಬ್ ದಲ್ಲಿ ೩೧ ರಾಗಗಳ ರಚನೆಗಳಿವೆ.ಅದರಲ್ಲಿ ಈ ರಾಗವು ೨೪ನೆಯದು.ಈ ರಾಗದ ರಚನೆ ಒಟ್ಟು ೪೩ ಪುಟಗಳಲ್ಲಿ ಪುಟ ಸಂಖ್ಯೆ ೧೧೨೫ ರಿಂದ ೧೧೬೮ ರ ವರೇಗೆ ಇದೆ.

ಭೈರವ್ ರಾಗವು ಗುರುನಾನಕ ರ ಕಾಲದಿಂದಲೂ ಬಹಳ ಪ್ರಮುಖ ರಾಗವಾಗಿದ್ದು ಈಗಲೂ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ಭೈರವ್ ರಾಗಮಾಲ ದಲ್ಲಿ ಭೈರವಿಯ ಗಂಡನಾಗಿ ಉಳಿದ ನಾಲ್ಕು ರಾಗಿಣಿಯರ ಜತೆ ಕಾಣಿಸಿಕೊಂಡಿದೆ. ಇಂದು ಇದು ಹತ್ತು ಥಾಟ್ ಗಳಲ್ಲೇ ಪ್ರಮುಖ ವಾಗಿದೆ. "ರಾಗ ಸಾಗರ "ಎಂಬ ೮ ನೆಯ ಶತಮಾನದ ಒಂದು ಪುಸ್ತಕದಲ್ಲಿ ಈ ರಾಗವನ್ನು "ಆರಾಧನೆಯ ಸಾರ್ಥಕತೆ"ಯನ್ನು ಬಿಂಬಿಸುವ ರಾಗವೆಂದು ವರ್ಣಿಸಿದ್ದಾರೆ.ಮೆಸಕರ್ಣ (೧೫೦೯ )ಎಂಬವನು ಈ ಬೆಳಗಿನ ಮಾಧುರ್ಯಪೂರ್ಣ ರಾಗವನ್ನು ಶರತ್ಕಾಲದ ಗಾಂಭೀರ್ಯ ಎಂದು ವರ್ಣಿಸಿದ್ದಾನೆ. ಸೂರ್ಯೋದಯ ಪೂರ್ವ ಹಾಡಲ್ಪಡುವ ಈ ರಾಗವನ್ನುಗುರು ನಾನಕ್ ,ಗುರು ಅಮರ್ ದಾಸ್ ,ಗುರು ರಾಮ್ ದಾಸ್ ಮತ್ತು ಗುರು ಅರ್ಜನ್ ಸುಮಾರು ೯೯ ಸ್ತುತಿ ಗಿತೆಗಳಲ್ಲಿ ಉಪಯೋಗಿಸಿದ್ದಾರೆ .

  • ಆರೋಹ್ : ಸ ರಿ (ಕೋಮಲ್ ) ಗ ಮ ಪ ಧ(ಕೋಮಲ್ )ನಿ ಸ
  • ಅವರೊಹ್: ಸ ನಿ ಧ (ಕೋಮಲ್ )ಪ ಗ ರಿ (ಕೋಮಲ್ ) ಸ
  • ವಾದಿ: ಧ
  • ಸಂವಾದಿ : ರಿ

ಇವನ್ನೂ ಗಮನಿಸಿ‌

ಬದಲಾಯಿಸಿ
  • ಗುರು ಗ್ರಂಥ್ ಸಾಹಿಬ್ ನಲ್ಲಿ ರಾಗಗಳು
  • ಕಿರ್ತನ್
  • ರಾಗಗಳು
  • ತಾಲ್

ಬಾಹ್ಯ ಕೊಂಡಿಗಳು

ಬದಲಾಯಿಸಿ