ದ್ರುಪದ

ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ ರಾಣಿ ದ್ರೌಪದಿಯ ತಂದೆ

ದ್ರುಪದನು ಮಹಾಭಾರತ ದ ಒಂದು ಪಾತ್ರ. ಇವನ ಇನ್ನೊಂದು ಹೆಸರು ಯಜ್ಞಸೇನ. ಇವನು ಪಾಂಚಾಲ ದೇಶದ ಅರಸ. ಬಾಲ್ಯದಲ್ಲಿ ಇವನು ದ್ರೋಣನ ಜತೆ ಕಲಿಯುವಾಗ ತನ್ನ ರಾಜ್ಯವನ್ನು ಅವನ ಜತೆ ಹಂಚಿಕೊಳ್ಳುವುದಾಗಿ ಮಾತು ಕೊಟ್ಟಿದ್ದನು. ಕಾಲಾಂತರದಲ್ಲಿ ಇವನು ರಾಜನದಾಗ ದ್ರೋಣನು ಬಂದು ಸಂಪತ್ತನ್ನು ಬೇಡಿದನು. ಹುಡುಗಾಟದಲ್ಲಿ ಹೇಳಿದ ಮತನ್ನು ನಂಬಿ ಬೇಡಲು ಬಂದ ಎಂದು ದ್ರುಪದನು ಹಾಸ್ಯ ಮಾಡಿದಾಗ ದ್ರೋಣನು ಅಪಮಾನವನ್ನು ಅನುಭವಿಸಿ ಸಿಟ್ಟಿಗೆದ್ದನು. ಮುಂದೆ ಕುರುವಂಶದ ರಾಜಕುಮಾರರಿಗೆ ಬಿಲ್ಲುವಿದ್ಯೆಯನ್ನು ಹೇಳಿಕೊಟ್ಟಾಗ ಅರ್ಜುನನು ದ್ರುಪದನನ್ನು ಹೆಡೆಮುರಿ ಕಟ್ಟಿ ದ್ರೋಣನಲ್ಲಿಗೆ ತಂದನು. ಆಗ ದ್ರುಪದನು ಕ್ಷಮೆ ಕೇಳಿ ತನ್ನ ರಾಜ್ಯದ ಒಂದು ಭಾಗವನ್ನು ಬಿಟ್ಟು ಕೊಟ್ಟನು. ಮುಂದೆ ತನ್ನ ಮಗಳು ದೌಪದಿಯ ಸ್ವಯಂವರವನ್ನು ಏರ್ಪಡಿಸಿದಾಗ ಅರ್ಜುನನು ಸ್ವಯಂವರದಲ್ಲಿ ಗೆದ್ದು, ಪಾಂಡವರು ದ್ರೌಪದಿಯನ್ನು ಮದುವೆಯಾಗುತ್ತಾರೆ.

ಚಿತ್ರ:The Swayamvara of Panchala's princess, Draupadi.jpg
ದ್ರೌಪದಿ ಸ್ವಯಂವರ

ಹಿಂದಿನ ಜನ್ಮದಲ್ಲಿ ಅಂಬೆಯಾಗಿದ್ದು ಮತ್ತೆ ಹುಟ್ಟಿ ಬಂದಿರುವ ಶಿಖಂಡಿ ದ್ರುಪದನ ಮಗ. ದ್ರೋಣನ ಮೇಲೆ ಸೇಡು ತೀರಿಸಿಕೊಳ್ಳಲು ದೇವತೆಗಳ ಸಹಾಯದಿಂದ ದ್ರೌಪದಿ ಮತ್ತು ದೃಷ್ಟದ್ಯುಮ್ನರನ್ನು ಮಕ್ಕಳನ್ನ್ನಾಗಿ ಪಡೆದನು. ದ್ರೌಪದಿ ಯು ಮುಂದೆ ಪಾಂಡವರನ್ನು ಮದುವೆ ಆದಳು. ಮಹಾಭಾರತ ಯುದ್ದದಲ್ಲಿ ದ್ರೋಣನು ದ್ರುಪದನನ್ನು ಕೊಂದನು, ದೃಷ್ತದ್ಯುಮ್ನನು ದ್ರೋಣನನ್ನು ಕೊಂದನು.

"https://kn.wikipedia.org/w/index.php?title=ದ್ರುಪದ&oldid=639609" ಇಂದ ಪಡೆಯಲ್ಪಟ್ಟಿದೆ