ಕೊಳಲು
ಕೊಳಲುಪುರಾತನಕಾಲದಿಂದಲೂ ಪ್ರಸಿದ್ಧವಾಗಿರುವ ಮೂರು ವಾದ್ಯಗಳಲ್ಲಿ ಕೊಳಲು ಕೂಡಾ ಒಂದು.ವೀಣೆ ಹಾಗೂ ಮೃದಂಗ ಉಳಿದೆರಡು ವಾದ್ಯಗಳು.ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಬಾನ್ಸುರಿ ಎಂಬ ಪ್ರಭೇದ ಬಳಕೆಯಲ್ಲಿದೆ.ಇದರ ಶ್ರುತಿ ಯು ಮನುಷ್ಯನ ಕಂಠದ ಶ್ರುತಿಗೆ ಸಮೀಪವಾಗಿದೆ.ಇದರಿಂದಾಗಿ ಗಮಕ ಮತ್ತು ಜಂಟಿಸ್ವರ ಗಳನ್ನು ನುಡಿಸಲು ಅನುಕೂಲವಾಗಿದೆ. ಇದರ ತಯಾರಿಕೆಯನ್ನು ಹಲವಾರು ವಸ್ತುಗಳಿಂದ ಮಾಡಿದರೂ ಬಿದಿರಿನಿಂದ ಮಾಡಿದ ವಾದ್ಯವು ಶ್ರೇಷ್ಟವಾದುದು.