ಶೆಹನಾಯಿ, ಸಾಮಾನ್ಯವಾಗಿ ಇಂಗ್ಲಿಷ್‌ನಲ್ಲಿ ಕ್ಲಾರಿನೆಟ್ ಎಂದು ಹೇಳಲಾಗುತ್ತದೆ, ಇದು ಭಾರತೀಯ ಉಪಖಂಡದಿಂದ ಹುಟ್ಟಿಕೊಂಡ ಸಂಗೀತ ವಾದ್ಯವಾಗಿದೆ. ಇದು ಮರದಿಂದ ಮಾಡಲ್ಪಡುತ್ತದೆ, ಒಂದು ತುದಿಯಲ್ಲಿ ಎರಡು ಜೊಂಡು ಮತ್ತು ಇನ್ನೊಂದು ತುದಿಯಲ್ಲಿ ಲೋಹದ ಅಥವಾ ಮರದ ಗಂಟೆ[][][] ಇರುತ್ತದೆ. ಒಂಬತ್ತು ಮಂಗಳಕರ ವಾದ್ಯಗಳಲ್ಲಿ ಇದು ಒಂದಾಗಿದೆ. ರಾಜರುಗಳು ಶುಭ ಸಂಧರ್ಭದಲ್ಲಿ ಈ ವಾದ್ಯವನ್ನು ದರ್ಬಾರಿನಲ್ಲಿ ನುಡಿಸಲಾಗುತಿತ್ತು. ಶೆಹನಾಯಿ ದಕ್ಷಿಣ ಭಾರತದ ನಾದಸ್ವರವನ್ನು ಹೋಲುತ್ತದೆ. ಇದನ್ನ ಉತ್ತರ ಭಾರತ,ಪಾಕಿಸ್ತಾನ,ಇರಾನ್ ಮುಂತಾದ ದೇಶಗಳಲ್ಲಿ ಬಳಕೆಯಲ್ಲಿದೆ.[]

ಈ ವಾದ್ಯವು ಕೊಳವೆಯಾಕಾರವಾಗಿದೆ. ಇದು ಸಾಮಾನ್ಯವಾಗಿ ಆರು ಮತ್ತು ಒಂಬತ್ತು ರಂಧ್ರಗಳನ್ನು ಹೊಂದಿರುತ್ತದೆ. ರಂದ್ರಗಳನ್ನು ಬೆರಳುಗಳಿಂದ ಮುಚ್ಛುವುದು ಮತ್ತು ತೆರೆಯುವುದರ ಮೂಲಕ ವಿವಿಧ ಶಬ್ಧತರಂಗಗಳನ್ನು ಹೊರಡಿಸುತ್ತಾರೆ[]

ಶೆಹನಾಯಿಯು ಪುಂಗಿಯನ್ನು ಇನ್ನಷ್ಟು ಸುಧಾರಿಸಿ ಅಭಿವೃದ್ಧಿಪಡಿಸಲಾಗಿದೆ ಎಂದು ಭಾವಿಸಲಾಗಿದೆ. ಶೆಹನಾಯಿ ವಾದಕರು ಗೋವಾ/ಕೊಂಕಣಿ ಪ್ರದೇಶದ ಅವಿಭಾಜ್ಯ ಅಂಗವಾಗಿದ್ದರು. ಪಶ್ಚಿಮ ಕರಾವಳಿಯಲ್ಲಿರುವ ದೇವಾಲಯಗಳು ವಾದ್ಯಗಾರರನ್ನು ವಜಂತ್ರಿ ಎಂದು ಕರೆಯಲಾಗುತ್ತದೆ. ಇವರಿಗೆ ದೇವಾಲಯದಲ್ಲಿ ಸಲ್ಲಿಸುವ ಸೇವೆಗಳಿಗಾಗಿ ಭೂಮಿಯನ್ನು ಕೊಡಲಾಗುತ್ತಿತ್ತು.

ಈ ವಾದ್ಯಗಳನ್ನು ನುಡಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ. ವಿಶೇಷವಾಗಿ ದೀರ್ಘ ಮತ್ತು ವೇಗದ ಹಾಡಿಗೆ ವಾದ್ಯಗಾರರ ಸಾಧನೆ ಅತ್ಯಗತ್ಯ. ಶೆಹನಾಯಿಯನ್ನು ಉತ್ತರ, ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ದೇವಾಲಯದ ಸಂಗೀತಕ್ಕಾಗಿ ವ್ಯಾಪಕವಾಗಿ ಬಳಸಲಾಗುತ್ತದೆ ಮತ್ತು ಪವಿತ್ರ ನಗರ ವಾರಣಾಸಿ / ಬನಾರಸ್‌ನಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ. ಇದರ ಧ್ವನಿಯು ಮಂಗಳಕರ ಮತ್ತು ಪವಿತ್ರ ಎಂದು ನಂಬಲಾಗಿದೆ. ಮದುವೆಗಳು ಮತ್ತು ಮೆರವಣಿಗೆಗಳಲ್ಲಿ ವಾದ್ಯವನ್ನು ವ್ಯಾಪಕವಾಗಿ ನುಡಿಸಲಾಗುತ್ತದೆ. ಇದನ್ನು ಶಾಸ್ತ್ರೀಯ ರಾಗ ಸಂಗೀತಕ್ಕಾಗಿ 20 ನೇ ಶತಮಾನದ ಮಧ್ಯಭಾಗದಲ್ಲಿ ಶ್ರೇಷ್ಠ ಸಂಗೀತಗಾರ ಬಿಸ್ಮಿಲ್ಲಾ ಖಾನ್ ಅವರು ಅಳವಡಿಸಿಕೊಂಡರು, ಆ ಕಾಲದ ಅತ್ಯಂತ ಗೌರವಾನ್ವಿತ ಭಾರತೀಯ ಕಲಾವಿದರಲ್ಲಿ ಒಬ್ಬರು. ಶೆಹನಾಯಿಯ ದಕ್ಷಿಣ ಭಾರತದ ಸಮಾನವಾದ ನಾದಸ್ವರಂ ಆಗಿದೆ. ಸನಾದಿ ಅಪ್ಪಣ್ಣ ಎಂಬ ಕನ್ನಡ ಚಲನಚಿತ್ರದಲ್ಲಿ ಈ ವಾದ್ಯವನ್ನು ವ್ಯಾಪಕವಾಗಿ ಬಳಸಲಾಗಿದೆ[]

ಪ್ರಮುಖ ಶೆಹನಾಯಿ ವಾದಕರು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "Shehnai | musical instrument". Britannica (in ಇಂಗ್ಲಿಷ್). www.britannica.com. Retrieved 2023-03-10.
  2. Ranade. p. 307.
  3. Hoiberg, p. 1
  4. "Shehnai MUSICAL INSTRUMENT". www.britannica.com ,17 May 2017.
  5. "Bismillah Khan | Biography, Music, & Facts | Britannica". www.britannica.com (in ಇಂಗ್ಲಿಷ್). 2024-07-12. Retrieved 2024-08-07.


"https://kn.wikipedia.org/w/index.php?title=ಶೆಹನಾಯಿ&oldid=1240248" ಇಂದ ಪಡೆಯಲ್ಪಟ್ಟಿದೆ