ಎಂ.ಎಸ್.ಸುಬ್ಬುಲಕ್ಷ್ಮಿ

ಕರ್ನಾಟಕ ಸಂಗೀತದ ಶೈಲಿಯ ಗಾಯಕಿ

ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ (ಜನಪ್ರಿಯವಾಗಿ ಎಂ.ಎಸ್., ಅಥವಾ ಎಂ.ಎಸ್.ಎಸ್., ಎಮ್ಮೆಸ್ಸಮ್ಮ), (ಸೆಪ್ಟೆಂಬರ್ ೧೬, ೧೯೧೬ - ಡಿಸೆಂಬರ್ ೧೧, ೨೦೦೪) ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು.

ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ
ಹಿನ್ನೆಲೆ ಮಾಹಿತಿ
ಮೂಲಸ್ಥಳಮಧುರೈ, ತಮಿಳು ನಾಡು, ಭಾರತ
ಸಂಗೀತ ಶೈಲಿಕರ್ನಾಟಕ ಸಂಗೀತ ಮತ್ತು ಹಿನ್ನಲೆ ಗಾಯನ
ವೃತ್ತಿಗಾಯಕಿ
ಸಕ್ರಿಯ ವರ್ಷಗಳು೧೯೪೦-೨೦೦೪
L‍abelsHMV, EMI, RPG, AVM Audio, Inreco, Charsur Digital Workshop etc.
ಅಧೀಕೃತ ಜಾಲತಾಣwww.msstribute.org

ಜೀವನ ಸಂಪಾದಿಸಿ

೧೯೧೬ ರಲ್ಲಿ ಮಧುರೈ ಪಟ್ಟಣದಲ್ಲಿ ಹುಟ್ಟಿದರು.

ವಿವಾಹ ಸಂಪಾದಿಸಿ

೧೯೩೬ ರಲ್ಲಿ 'ಸದಾಶಿವಂ ಅಯ್ಯರ್' ಎಂಬ ಸ್ವಾತಂತ್ರ್ಯ ಹೋರಾಟಗಾರರನ್ನು ಭೇಟಿಯಾದರು. ೧೯೪೦ ರಲ್ಲಿ ಇಬ್ಬರೂ ವಿವಾಹವಾದರು.

ನಿಧನ ಸಂಪಾದಿಸಿ

ಡಿಸೆಂಬರ್ ೨, ೨೦೦೪ ರಂದು ಅಸ್ವಸ್ಥರಾದ ಎಂ.ಎಸ್. ಡಿಸೆಂಬರ್ ೧೧ ರಂದು ದಿವಂಗತರಾದರು. [೧]

ಸಂಗೀತಗಾರ್ತಿಯಾಗಿ ಸಂಪಾದಿಸಿ

ಎಂ ಎಸ್ ೧೦ ವರ್ಷದವರಾಗಿದ್ದಾಗಲೆ ಅವರ ಮೊದಲ ಧ್ವನಿ-ಮುದ್ರಣ ಹೊರಬಂದಿತು. ನಂತರ ಸೆಮ್ಮಂಗುಡಿ ಶ್ರೀನಿವಾಸ ಐಯರ್ ಅವರಿಂದ ಕರ್ನಾಟಕ ಸಂಗೀತ ಹಾಗೂ ಪಂಡಿತ್ ನಾರಾಯಣ್ ರಾವ್ ವ್ಯಾಸ್ ಅವರಿಂದ ಹಿಂದುಸ್ಥಾನಿ ಸಂಗೀತ ಕಲಿತುಕೊಂಡರು. ೧೭ನೇ ವಯಸ್ಸಿನಲ್ಲಿ ಮದರಾಸು ಸಂಗೀತ ಅಕಾಡೆಮಿಯಲ್ಲಿ ಪ್ರಥಮ ಸಂಗೀತ ಕಛೇರಿಯನ್ನು ನೀಡಿದ ಎಂ ಎಸ್, ಇಲ್ಲಿಯವರೆಗೆ ಅನೇಕ ಭಾಷೆಗಳಲ್ಲಿ ಎಣಿಕೆಗೆ ಸಿಕ್ಕದಷ್ಟು ಹಾಡುಗಳನ್ನು ಹಾಡಿದ್ದಾರೆ (ಮುಖ್ಯವಾಗಿ ತಮಿಳು, ಹಿಂದಿ, ಕನ್ನಡ, ಬೆಂಗಾಲಿ, ಗುಜರಾತಿ, ಮಲಯಾಳಂ, ತೆಲುಗು, ಸಂಸ್ಕೃತ). ಸ್ವಲ್ಪ ಕಾಲ ಚಿತ್ರರಂಗದಲ್ಲೂ ಕೈಯಾಡಿಸಿದ ಎಂ ಎಸ್, ೧೯೪೫ ರಲ್ಲಿ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಮೀರಾ ಚಿತ್ರದಲ್ಲಿ ಪ್ರಧಾನ ಪಾತ್ರವಹಿಸಿದ್ದರು.೭೨ ರಾಗಗಳೂ ಅವರ ನಾಲಿಗೆಯಲ್ಲಿ ನರ್ತನ ಮಾಡಿವೆ. ಸುಬ್ಬುಲಕ್ಷ್ಮಿಯವರು ಕಳೆದ ಐದು ದಶಕಗಳಲ್ಲಿ ಭಾರತದಾದ್ಯಂತ ಕಛೇರಿಗಳನ್ನು ನಡೆಸಿದ್ದಾರೆ. ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿ ಅನೇಕ ಬಾರಿ ವಿದೇಶಗಳಲ್ಲಿ ಸಂಗೀತೋತ್ಸವಗಳ ಮೂಲಕ ಭಾರತವನ್ನು ಪ್ರತಿನಿಧಿಸಿದ್ದಾರೆ. ೧೯೯೭ ರಲ್ಲಿ ಅವರ ಪತಿಯ ಮರಣದ ನಂತರ ಎಂ ಎಸ್ ಅವರು ಸಾರ್ವಜನಿಕ ಕಛೇರಿಗಳನ್ನು ನೀಡುವುದನ್ನು ನಿಲ್ಲಿಸಿದರು.

ಪ್ರಶಸ್ತಿ-ಗೌರವ ಸಂಪಾದಿಸಿ

ಪ್ರಪಂಚದಾದ್ಯಂತ ಕೇಳುಗರನ್ನು ಆಕರ್ಷಿಸಿದ 'ಎಂ ಎಸ್' ಅವರಿಗೆ ಬಂದಿರುವ ಪ್ರಶಂಸೆಗಳು ಅಪಾರ. ಅವರ "ಹರಿ ತುಮ್ ಹರೋ ಜನ್ ಕೀ ಭೀರ್" ಎಂಬ ಮೀರಾ-ಭಜನೆಯನ್ನು ಕೇಳಿದ ಮಹಾತ್ಮ ಗಾಂಧಿ "ಆ ಭಜನೆ ಕೇವಲ ಅವರಿಗಾಗಿಯೇ ಮಾಡಿಸಿದ್ದು, ಇನ್ನಾರಿಗೂ ಅಲ್ಲ" ಎಂದು ಹೇಳಿದ್ದರು! ಭಾರತೀಯ ಸಂಗೀತಗಾರರೊಬ್ಬರಿಗೆ ದೊರಕಬಹುದಾದ ಪ್ರಶಸ್ತಿಗಳೆಲ್ಲವೂ ಎಂ.ಎಸ್ ಅವರಿಗೆ ದೊರಕಿವೆ: [೨] ಸುಬ್ಬುಲಕ್ಷ್ಮಿ ಅವರು 1966ರಲ್ಲಿ ವಿಶ್ವಸಂಸ್ಥೆಯ ಮುಖ್ಯಕಚೇರಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದರು. ಅವರ ಜನ್ಮ ಶತಮಾನೋತ್ಸವದ ಗೌರವಾರ್ಥ ವಿಶ್ವಸಂಸ್ಥೆಯು ವಿಶೇಷ ಅಂಚೆ ಚೀಟಿ ಹೊರ ತರಲು ಮುಂದಾಗಿದೆ.

ಉಲ್ಲೇಖಗಳು ಸಂಪಾದಿಸಿ

  1. Tributes to MS
  2. Hindu, M.S.' recreated, By T. Ramakrishnan ಎಮ್.ಎಫ್.ಹುಸೇನ್ ರವರ ಕೃತಿ'

ಬಾಹ್ಯ ಸಂಪರ್ಕಗಳು ಸಂಪಾದಿಸಿ