ಪಂಡಿತ್ ಜಸರಾಜ್
ಪಂಡಿತ್ ಜಸ್ ರಾಜ್ ರವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಪ್ರಮುಖ ಗಾಯಕರಲ್ಲಿ ಒಬ್ಬರು.ಮೇವಾಟಿ ಘರಾಣದ ಅದ್ವರ್ಯುವಾದ ಇವರು ೧೯೩೦ರಲ್ಲಿ ಹರ್ಯಾಣ ರಾಜ್ಯದ ಹಿಸ್ಸಾರ್ ಎಂಬಲ್ಲಿ ಜನಿಸಿದರು.ಪ್ರಾಥಮಿಕ ಸಂಗೀತ ಅಭ್ಯಾಸವನ್ನು ತನ್ನ ಸಹೋದರ ಪಂಡಿತ್ ಮಣಿರಾಮ್ ರವರಿಂದ ಪಡೆದರು.ಹಲವಾರು ಪ್ರಶಸ್ತಿಗಳನ್ನು ಪಡೆದ ಇವರು ಭಾರತದ ಉದ್ದಗಲ ಜನಪ್ರಿಯತೆಯನ್ನು ಗಳಿಸಿ ಕೊಂಡಿದ್ದಾರೆ.೧೯೯೭-೯೮ರಲ್ಲಿ ಕಾಳಿದಾಸ ಸಮ್ಮಾನ್ಪ್ರಶಸ್ತಿ, ೨೦೦೦ದಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರೆಯಿತು.ಇವರ ಶಿಷ್ಯರಲ್ಲಿ ಸಂಜೀವ ಅಭ್ಯಂಕರ್, ಹಿಂದಿ ಚಿತ್ರರಂಗದ ಸಾಧನಾ ಸರ್ ಗಮ್ ಮುಂತಾದವರು ಪ್ರಮುಖರು.
ಪಂಡಿತ್ ಜಸರಾಜ್ | |
---|---|
![]() ಪಂಡಿತ್ ಜಸರಾಜ್ | |
ಹಿನ್ನೆಲೆ ಮಾಹಿತಿ | |
ಜನನ | ೨೮ ಜನವರಿ ೧೯೩೦ |
ಮೂಲಸ್ಥಳ | ಹಿಸ್ಸಾರ್, ಹರ್ಯಾಣ, ಭಾರತ |
ಸಂಗೀತ ಶೈಲಿ | ಹಿಂದೂಸ್ತಾನಿ ಸಂಗೀತ |
ವೃತ್ತಿ | ಗಾಯಕ |
ಸಕ್ರಿಯ ವರ್ಷಗಳು | 1945–present |
ಅಧೀಕೃತ ಜಾಲತಾಣ | ಅಧಿಕೃತ ತಾಣ |

