ಗೌರವ ಯೋಗ್ಯತೆ ಮತ್ತು ಗೌರವಾರ್ಹತೆಯ ಗ್ರಹಿತ ಗುಣಮಟ್ಟವನ್ನು ಒಳಗೊಳ್ಳುವ ಒಂದು ಅಮೂರ್ತ ಪರಿಕಲ್ಪನೆಯಾಗಿದೆ. ಇದು ಕುಟುಂಬ, ಶಾಲೆ, ಸೈನಿಕಪಡೆ ಅಥವಾ ರಾಷ್ಟ್ರದಂತಹ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಸಾಮಾಜಿಕ ಸ್ಥಾನಮಾನ ಮತ್ತು ಸ್ವಯಂ ಮೌಲ್ಯಮಾಪನ ಎರಡರ ಮೇಲೂ ಪ್ರಭಾವ ಬೀರುತ್ತದೆ. ಹೀಗೆ, ಅವರ ಕ್ರಿಯೆಗಳ ಸಾಮರಸ್ಯವನ್ನು ಆಧರಿಸಿ ನಿರ್ದಿಷ್ಟ ಗೌರವ ಸಂಕೇತ ಅಥವಾ ಒಟ್ಟಾರೆಯಾಗಿ ಸಮಾಜದ ನೀತಿಸಂಹಿತೆಯೊಂದಿಗೆ ವ್ಯಕ್ತಿಗಳಿಗೆ (ಅಥವಾ ಸಂಸ್ಥೆಗಳಿಗೆ) ಮೌಲ್ಯ ಮತ್ತು ಸ್ಥಾನಮಾನವನ್ನು ನಿಗದಿಮಾಡಲಾಗುತ್ತದೆ.

ಗೌರವವು ಹಲವಾರು ಅರ್ಥಗಳನ್ನು ಹೊಂದಿದೆ ಎಂದು ಸ್ಯಾಮುಯಲ್ ಜಾನ್ಸನ್ ವ್ಯಾಖ್ಯಾನಿಸಿದನು. ಮೊದಲನೆಯದೆಂದರೆ ಆತ್ಮದ ಉದಾತ್ತತೆ, ಉದಾರತೆ, ಮತ್ತು ಅಧಮತೆಯ ತಿರಸ್ಕಾರ. ಈ ಬಗೆಯ ಗೌರವವು ವ್ಯಕ್ತಿಯ ಗ್ರಹಿತ ಸದ್ಗುಣಶೀಲ ನಡತೆ ಮತ್ತು ವೈಯಕ್ತಿಕ ಸಮಗ್ರತೆಯಿಂದ ಹುಟ್ಟುತ್ತದೆ. ಮತ್ತೊಂದೆಡೆ, ಖ್ಯಾತಿ ಮತ್ತು ಪ್ರಸಿದ್ಧಿಯ ಸಂಬಂಧದಲ್ಲೂ ಜಾನ್ಸನ್ ಗೌರವವನ್ನು ವ್ಯಾಖ್ಯಾನಿಸಿದನು. ಇದರರ್ಥ ಶ್ರೇಣಿ ಅಥವಾ ಹುಟ್ಟಿನ ಸವಲತ್ತುಗಳು ಮತ್ತು ಒಬ್ಬ ವ್ಯಕ್ತಿಯನ್ನು ಸಾಮಾಜಿಕವಾಗಿ ಇರಿಸುವ ಮತ್ತು ಅವನ ಆದ್ಯತೆಯ ಹಕ್ಕನ್ನು ನಿರ್ಧರಿಸುವ ಬಗೆಯ ಗೌರವ. ಈ ಬಗೆಯ ಗೌರವವು ಹಲವುವೇಳೆ ಅಷ್ಟಾಗಿ ನೈತಿಕ ಶ್ರೇಷ್ಠತೆಯ ಕ್ರಿಯೆಯಾಗಿರುವುದಿಲ್ಲ, ಹೆಚ್ಚಾಗಿ ಅಧಿಕಾರದ ಪರಿಣಾಮವಾಗಿರುತ್ತದೆ. ಅಂತಿಮವಾಗಿ, ಲೈಂಗಿಕತೆಯ ಸಂಬಂಧದಲ್ಲಿ, ಗೌರವ ಪದವನ್ನು ಸಾಂಪ್ರದಾಯಿಕವಾಗಿ ಪವಿತ್ರತೆ ಅಥವಾ ಕನ್ಯತ್ವದೊಂದಿಗೆ ಸಂಬಂಧಿಸಲಾಗಿದೆ, ಅಥವಾ ವಿವಾಹಿತ ಸ್ತ್ರೀ ಮತ್ತು ಪುರುಷರ ವಿಷಯದಲ್ಲಿ ನಿಷ್ಠೆಯೊಂದಿಗೆ. ಗೌರವವನ್ನು ಸಂಹಿತೆಯ ಬದಲಾಗಿ ಹೆಚ್ಚಾಗಿ ವಾಕ್ಚಾತುರ್ಯ, ಅಥವಾ ಸಂಭಾವ್ಯ ಕ್ರಿಯೆಗಳ ಸಮೂಹವಾಗಿ ಕಾಣಬೇಕು ಎಂದು ಕೆಲವರು ವಾದಿಸಿದ್ದಾರೆ.

ವರ್ತನೆಯ ಸಂಹಿತೆಯಾಗಿ ಗೌರವವು ಒಂದು ಸಾಮಾಜಿಕ ಗುಂಪಿನೊಳಗೆ ಒಬ್ಬ ವ್ಯಕ್ತಿಯ ಕರ್ತವ್ಯಗಳನ್ನು ವ್ಯಾಖ್ಯಾನಿಸುತ್ತದೆ. ಗೌರವಾಧಾರಿತ ಸಮಾಜದಲ್ಲಿ ಒಬ್ಬ ವ್ಯಕ್ತಿ ಇರುವುದು ಅವನು ಅಥವಾ ಅವಳು ಇತರ ಜನರ ದೃಷ್ಟಿಯಲ್ಲಿ ಇರುವಂತೆ ಎಂದು ಮಾರ್ಗರೆಟ್ ವಿಸರ್ ಗಮನಿಸುತ್ತಾರೆ.[] ಗೌರವ ಸಂಹಿತೆಯು ನ್ಯಾಯಸಂಹಿತೆಯಿಂದ ಭಿನ್ನವಾಗಿದೆ, ಮತ್ತು ಸಾಮಾಜಿಕವಾಗಿ ವ್ಯಾಖ್ಯಾನಿತ ಮತ್ತು ನ್ಯಾಯದೊಂದಿಗೆ ಸಂಬಂಧಿತವಾಗಿದೆ. ಗೌರವವು ಸ್ಪಷ್ಟ ಹಾಗೂ ವಸ್ತುನಿಷ್ಠದ ಬದಲಾಗಿ ಸೂಚ್ಯವಾಗಿ ಉಳಿದಿರುತ್ತದೆ.

ಲೈಂಗಿಕತೆಯ ವಿಷಯದಲ್ಲಿ ಐತಿಹಾಸಿಕವಾಗಿ, ಗೌರವವು ಆಗಾಗ್ಗೆ ನಿಷ್ಠೆಗೆ ಸಂಬಂಧಿಸಿರುತ್ತದೆ: ಗೌರವವನ್ನು ಕಾಪಾಡಿಕೊಳ್ಳುವುದೆಂದರೆ ಮುಖ್ಯವಾಗಿ ಅವಿವಾಹಿತರು ಕನ್ಯತ್ವವನ್ನು ಕಾಪಾಡಿಕೊಳ್ಳುವುದು ಮತ್ತು ಉಳಿದವರು ಪ್ರತ್ಯೇಕ ಏಕಸಂಗಾತಿ ಹೊಂದಿರುವುದು. ಈ ಬಗೆಯ ಗೌರವದ ಹೆಚ್ಚಿನ ವಿಚಾರಗಳು ಸಂಸ್ಕೃತಿಗಳ ನಡುವೆ ವ್ಯಾಪಕವಾಗಿ ಬದಲಾಗುತ್ತವೆ; ವ್ಯಕ್ತಿಗಳು ಕುಟುಂಬದ ಗೌರವವನ್ನು ಅಪವಿತ್ರಗೊಳಿಸಿದರೆ ಗೌರವ ರಕ್ಷಣೆಗಾಗಿ ಒಬ್ಬರ ಸ್ವಂತ ಕುಟುಂಬದ ಸದಸ್ಯರ ಹತ್ಯೆಯು ನ್ಯಾಯಸಮ್ಮತ ಎಂದು ಕೆಲವು ಸಂಸ್ಕೃತಿಗಳು ಪರಿಗಣಿಸುತ್ತವೆ.

ಉಲ್ಲೇಖಗಳು

ಬದಲಾಯಿಸಿ
  1. Doris, Jim (2003-01-05). "A conversation with Margaret Visser: diagnosing that feeling of helplessness". Catholic New Times. Retrieved 2011-03-10.


"https://kn.wikipedia.org/w/index.php?title=ಗೌರವ&oldid=805290" ಇಂದ ಪಡೆಯಲ್ಪಟ್ಟಿದೆ