ಕುಟುಂಬ
ಮಾನವರಲ್ಲಿ ಒಂದು ಕುಟುಂಬವು ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿರುವ ಒಂದು ಗುಂಪು ಎಂದು ಹೇಳಬಹುದು. ಕುಟುಂಬವು ಸಮಾಜದ ಬಹು ಮುಖ್ಯ ಅಂಗವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. ಭಾರತದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗೀಕರಿಸಬಹುದು. ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಇತ್ತೀಚಿಗೆ ಏಕ ಪೋಷಕ ಕುಟುಂಬವೊಂದು ನಿರ್ಮಾಣವಾಗಿದೆ.
ಬೆಳವಣಿಗೆಸಂಪಾದಿಸಿ
ಹೀಗಿರುವ ಒಂದು ಕುಟುಂಬದಲ್ಲಿ ಹಲವಾರು [ಗಂಡು]-[ಹೆಣ್ಣು ಒಟ್ಟಿಗೆ ಇರುತ್ತಿದ್ದರು. ಹುಟ್ಟುವ ಮಕ್ಕಳಿಗೆ ತಾಯಿ ಯಾರೆಂದು ತಿಳಿದಿದ್ದರೂ ತಂದೆಯ ಬಗ್ಗೆ ನಿಖರ ಮಾಹಿತಿಯಿರಲಿಲ್ಲ. ಕ್ರಮೇಣ ಈ ಗುಂಪಿನ ಸಂಖ್ಯೆ ಬೆಳೆದ ಹಾಗೆ ಹಲವು ಗಂಡು-ಹಲವು ಹೆಣ್ಣು, ಹಲವು ಗಂಡು-ಒಂದು ಹೆಣ್ಣು, ಒಂದು ಗಂಡು-ಹಲವು ಹೆಣ್ಣು ಮತ್ತು ಒಂದು ಗಂಡು-ಒಂದು ಹೆಣ್ಣು , ಹೀಗೆ ಕುಟುಂಬಗಳು ಸೃಷ್ಟಿಯಾದವು. ಇವುಗಳಲ್ಲಿ ಕೊನೆಯ ಎರಡು ಬಗೆಯವು ಸ್ಥಿರಗೊಂಡವು. ಬಹುಶಃ ಹೆಣ್ಣಿನ ಬಸಿರು-ಬಾಣಂತನದ ಅಸಹಾಯಕತೆ ಈ ರೀತಿಯ ಬೆಳವಣಿಗೆಗೆ ಪೂರಕವಾಗಿರಬಹುದು. ಇತ್ತೀಚಿಗೆ ಬಹುಪತ್ನಿತ್ವವೂ ನಶಿಸಿ ಈಗಿರುವ ಕುಟುಂಬ ಸೃಷ್ಟಿಯಾಗಿದೆ.
ವಿಂಗಡಣೆಸಂಪಾದಿಸಿ
ಅವಿಭಕ್ತ ಕುಟುಂಬ ಅಥವಾ ಕೂಡು ಕುಟುಂಬಸಂಪಾದಿಸಿ
ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ. ಸಾಮಾನ್ಯವಾಗಿ ಹಿರಿಯರೊಬ್ಬರು ಇದಕ್ಕೆ ಯಜಮಾನರಾಗಿರುತ್ತಾರೆ. ಅವಿಭಕ್ತ ಕುಟುಂಬ ಎಂದರೆ ಒಂದೇ ಮನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಲೆಮಾರಿನವರು ವಾಸಿಸುವುದನ್ನು ಅವಿಭಕ್ತ ಕುಟುಂಬ ಎನ್ನಲಾಗುತ್ತದೆ.
ಉಪಯೋಗಗಳುಸಂಪಾದಿಸಿ
- ಇಲ್ಲಿ ವಿಷಯಗಳ ಹಂಚುವಿಕೆ ಹೆಚ್ಚಾಗಿ ಕಂಡುಬರುತ್ತದೆ.
- ಇದು ಉತ್ತಮ ಸಂಬಂಧಗಳನ್ನು ಸೃಷ್ಥಿಸುವ ವೇದಿಕೆಯಾಗಿದೆ.
- ಜೀವನದ ಮೌಲ್ಯವನ್ನು ತಿಳಿಸುತ್ತದೆ.
ಆದರೆ ಈಗಿನ ಕಾಲದಲ್ಲಿ ಅತ್ಯಂತ ಕಡಿಮೆಯಾಗಿ ಕಾಣಸಿಗುತ್ತದೆ.ಏಕೆಂದರೆ ಅವಿಭಕ್ತ ಕುಟುಂಬಗಳು
ಸಂಬಂಧಗಳುಸಂಪಾದಿಸಿ
ಮೊದಲಿಗೆ ತಾಯಿ-ಮಗುವಿನ ಸಂಬಂಧವೊಂದೇ ಮೂಡಿತ್ತು. ಕುಟುಂಬದ ಪರಿಕಲ್ಪನೆ ಬರುವವರೆಗೂ ಬೇರೆ ಯಾವ ಸಂಬಂಧಗಳೂ ಇರಲಿಲ್ಲ. ಲೈಂಗಿಕ ಕ್ರಿಯೆ ಸಹಜವಾಗಿದ್ದರಿಂದ ತಂದೆ ಅಪ್ರಸ್ತುತನಾಗಿದ್ದ. ಕುಟುಂಬದ ನಿರ್ಮಾಣದೊಂದಿಗೆ ಗಂಡ-ಹೆಂಡತಿ ಸಂಬಂಧ ತಂದೆ, ತಾಯಿ, ಮಕ್ಕಳ ಸಂಬಂಧವಾಯಿತು. ಮುಂದೆ ಸಹೋದರ ಸಂಬಂಧ ಬಲವಾಯಿತು. ಈ ತಂದೆ-ತಾಯಿ-ಸಹೋದರ(ರಿ) ಸಂಬಂಧವೇ ಮೂಲ ಸಂಬಂಧ. ಉಳಿದ ಎಲ್ಲಾ ಸಂಬಂಧಗಳು ಈ ಮೂಲ ಸಂಬಂಧಗಳ ಮೇಲೆಯೇ ಟಿಸಿಲೊಡೆದವು. ವಿವಾಹ ಸಂಸ್ಥೆಯ ಉಗಮದೊಂದಿಗೆ ಸಂಬಂಧಗಳು ಸಂಕೀರ್ಣವಾಗತೊಡಗಿದವು..
ಉಲೇಖ< /> https://en.wikipedia.org/wiki/Family