ಅನುರಾಧಾ ಪೌಡ್ವಾಲ್

ಭಾರತೀಯ ಹಿನ್ನೆಲೆಗಾಯಕಿ

ಅನುರಾಧಾ ಪೌಡ್ವಾಲ್ ಅಥವಾ ಅನುರಾಧಾ ಪೊಡ್ವಾಲ್ (ಹುಟ್ಟು: ೧೯೫೪), ಪ್ರಮುಖ ಭಾರತೀಯ ಹಿನ್ನೆಲೆ ಗಾಯಕಿ. ಅನುರಾಧಾ ತಮ್ಮ ಹೆಚ್ಚಿನ ಹಾಡುಗಳನ್ನು ಒಡಿಯಾ ಭಾಷೆಯಲ್ಲಿ ಹಾಡಿದ್ದಾರೆ. ಅಲ್ಲದೇ ಹಿಂದಿ, ಮರಾಠಿ, ಬಂಗಾಳಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಉರ್ದು, ಸಂಸ್ಕೃತ ಮುಂತಾದ ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಇವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ೨೦೧೭ರಲ್ಲಿ ಭಾರತ ಸರ್ಕಾರ ನೀಡಿ ಗೌರವಿಸಿದೆ. ಇವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರು ಮತ್ತು ನಾಲ್ಕು ಬಾರಿ ಫಿಲ್ಮ್ಫೇರ್ ಪ್ರಶಸ್ತಿ ವಿಜೇತರೂ ಆಗಿದ್ದಾರೆ. ಇವರು ಚಲನಚಿತ್ರ ಗೀತೆಗಳಲ್ಲದೆ ಭಜನೆಗಳನ್ನೂ ಹಾಡುತ್ತಾರೆ.

ಅನುರಾಧಾ ಪೌಡ್ವಾಲ್
೨೦೧೧ರ ಫಿಲಂಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅನುರಾಧ
Born೨೭-೧೦-೧೯೫೪
Nationalityಭಾರತೀಯ
Occupationಹಿನ್ನೆಲೆ ಗಾಯಕಿ
Political partyಭಾರತೀಯ ಜನತಾ ಪಕ್ಷ
Spouseಅರುಣ್ ಪೌಡ್ವಾಲ್‌
Childrenಆದಿತ್ಯ ಪೌಡ್ವಾಲ್‌ ಮತ್ತು ಕವಿತಾ ಪೌಡ್ವಾಲ್‌

ಅನುರಾಧಾ ಅವರ ಹುಟ್ಟುಹೆಸರು ಅಲ್ಕಾ ನಾಡಕರ್ಣಿ. ೧೯೫೪ರ ಅಕ್ಟೋಬರ್ ೨೭ರಂದು ಕಾರವಾರದಲ್ಲಿ ಜನಿಸಿದರು.

ವೈಯಕ್ತಿಕ ಜೀವನ

ಬದಲಾಯಿಸಿ

ಇವರು ಅರುಣ್ ಪೌಡ್ವಾಲ್‌ರವರನ್ನು ವಿವಾಹವಾಗಿದ್ದಾರೆ. ಇವರ ಪುತ್ರ ಆದಿತ್ಯ ಪೌಡ್ವಾಲ್‌ ಮತ್ತು ಪುತ್ರಿ ಕವಿತಾ ಪೌಡ್ವಾಲ್‌. ಕವಿತಾರವರು ಸಂಗೀತಗಾರ್ತಿಯಾಗಿದ್ದಾರೆ.[]

ಪ್ರಶಸ್ತಿ ಮತ್ತು ಮನ್ನಣೆಗಳು

ಬದಲಾಯಿಸಿ
 
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಶ್ರೀ ಪುರಸ್ಕಾರ ಸ್ವೀಕರಿಸುತ್ತಿರುವ ಅನುರಾಧಾ
  1. ೨೦೧೭ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.[]
  2. ೨೦೧೩ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಮೊಹಮ್ಮದ್ ರಫಿ ಪ್ರಶಸ್ತಿ ಪಡೆದಿದ್ದಾರೆ.
  3. ೨೦೧೧ರಲ್ಲಿ ಜೀವಮಾನದ ಸಾಧನೆಗಾಗಿ ಮದರ್ ತೆರೆಸಾ ಪ್ರಶಸ್ತಿ ಪಡೆದಿದ್ದಾರೆ.[]
  4. ೨೦೧೦ರಲ್ಲಿ ಮಧ್ಯಪ್ರದೇಶ ಸರ್ಕಾರದಿಂದ ಲತಾ ಮಂಗೇಶ್ಕರ್ ಪ್ರಶಸ್ತಿ ಪಡೆದಿದ್ದಾರೆ.[]

ಫಿಲ್ಮ್‌ಫೇರ್ ಪ್ರಶಸ್ತಿಗಳು

ಬದಲಾಯಿಸಿ

ಗೆದ್ದ ಪ್ರಶಸ್ತಿಗಳು

ಬದಲಾಯಿಸಿ
ವರ್ಷ ಪ್ರಶಸ್ತಿ ಹಾಡು ಚಲನಚಿತ್ರ
೧೯೮೬ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಮೇರೆ ಮ್ಯಾನ್ ಬಜೋ ಮೃದಾಂಗ್ ಉತ್ಸವ್
೧೯೯೧ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ನಜರ್ ಕೆ ಸಾಮ್ನೆ ಆಶಿಕಿ
೧೯೯೨ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ದಿಲ್ ಹೈ ಕೆ ಮಾಂತಾ ನಹಿನ್ ದಿಲ್ ಹೈ ಕೆ ಮಾಂತಾ ನಹಿನ್
೧೯೯೩ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ದಕ್ ದಕ್ ಕರ್ನೆ ಲಗಾ ಬೇಟಾ

ನಾಮನಿರ್ದೇಶನಗೊಂಡ ಪ್ರಶಸ್ತಿಗಳು

ಬದಲಾಯಿಸಿ
ವರ್ಷ ಪ್ರಶಸ್ತಿ ಹಾಡು ಚಲನಚಿತ್ರ
೧೯೮೩ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಮೈನೆ ಏಕ್ ಗೀತ್ ಲಿಖಾ ಹೈ ಯೆಹ್ ನಜ್ಡೀಕಿಯನ್
೧೯೮೪ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ತು ಮೇರಾ ಹೀರೋ ಹೈ ಹೀರೋ
೧೯೮೯ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಕೆಹ್ ದೋ ಕಿ ತುಮ್ ತೇಜಾಬ್
೧೯೯೦ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ತೇರಾ ನಾಮ್ ಲಿಯಾ ರಾಮ್ ಲಖನ್
೧೯೯೦ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಬೆಕಬಾರ್ ಬೆವಾಫಾ ರಾಮ್ ಲಖನ್
೧೯೯೧ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಮುಜೆ ನೀಂದ್ ನಾ ಆಯೆ ದಿಲ್
೧೯೯೨ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಬಹುತ್ ಪ್ಯಾರ್ ಕಾರ್ಟೆ ಹೈ ಸಾಜನ್

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಬದಲಾಯಿಸಿ

ಅನುರಾಧಾರವರಿಗೆ ೧೯೮೯ರಲ್ಲಿರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕಲಾಟ್ ನಕಲಾತ್ ಚಲನಚಿತ್ರದ ಹಿ ಏಕ್ ರೇಷಮಿ ಹಾಡಿಗೆ, ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಎಂದು ಪಡೆದರು.

ಒಡಿಶಾ ರಾಜ್ಯ ಚಲನಚಿತ್ರ ಪ್ರಶಸ್ತಿಗಳು

ಬದಲಾಯಿಸಿ
ವರ್ಷ ಪ್ರಶಸ್ತಿ ಹಾಡು
೧೯೮೭ ಅತ್ಯುತ್ತಮ ಗಾಯಕಿ ತುಂಡಾ ಬೈಡಾ
೧೯೯೭ ಅತ್ಯುತ್ತಮ ಗಾಯಕಿ ಖಂಡೈ ಅಖಿ ರೆ ಲುಹಾ

ಗಿಲ್ಡ್ ಫಿಲ್ಮ್ ಅವಾರ್ಡ್ಸ್

ಬದಲಾಯಿಸಿ

೨೦೦೪ರಲ್ಲಿ ಅತ್ಯುತ್ತಮ ಗಾಯಕಿ ಎಂದು ಅಪ್ಸರಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

ಇತರ ಪ್ರಶಸ್ತಿ

ಬದಲಾಯಿಸಿ

ಅನುರಾಧಾ ಪದ್ಮಶ್ರೀ ಡಾ ಡಿವೈ ಪಾಟೀಲ್ ವಿಶ್ವವಿದ್ಯಾಲಯವು ಡಿ ಲಿಟ್ ಪದವಿ ನೀಡಿ ಗೌರವಿಸಿತು.[]

ಕನ್ನಡ ಹಾಡುಗಳು

ಬದಲಾಯಿಸಿ

ಅನುರಾಧ ಮೊದಲು ಕನ್ನಡದಲ್ಲಿ ಹಾಡಿದ್ದು ಜೀವನದಿ ಚಿತ್ರಕ್ಕೆ. ಆ ಚಿತ್ರದ "ಕನ್ನಡ ನಾಡಿನ ಜೀವನದಿ" ಹಾಡು ಜನಪ್ರಿಯವಾಯಿತು. ಪ್ರೀತ್ಸೆ ಚಿತ್ರದ '"ಸೈ ಸೈ", "ಯಾರಿಟ್ಟರೀ ಚುಕ್ಕಿ", "ಹೋಳಿ ಹೋಳಿ" ಹಾಡುಗಳು ಕನ್ನಡದಲ್ಲಿ ಅವರ ಜನಪ್ರಿಯತೆಯನ್ನು ಹೆಚ್ಚಿಸಿದವು.

ಅನುರಾಧ ಅವರು ಹಾಡಿರುವ ಕನ್ನಡ ಚಿತ್ರಗೀತೆಗಳ ಪಟ್ಟಿ:

ವರ್ಷ ಹಾಡು ಚಿತ್ರ ಸಂಗೀತ ಸಂಯೋಜನೆ ಸಹಗಾಯಕರು
೧೯೯೬ "ಕನ್ನಡ ನಾಡಿನ ಜೀವನದಿ" ಜೀವನದಿ ಕೋಟಿ ಎಸ್.ಪಿ.ಬಾಲಸುಬ್ರಹ್ಮಣ್ಯಂ
"ನವಮಾಸ ನಿನ್ನನು" ರಾಜೇಶ್ ಕೃಷ್ಣನ್
೨೦೦೦ "ಹೋಳಿ ಹೋಳಿ" ಪ್ರೀತ್ಸೆ ಹಂಸಲೇಖ ಕೆ. ಎಸ್. ಚಿತ್ರಾ, ರಾಜೇಶ್ ಕೃಷ್ಣನ್, ಎಸ್. ಪಿ. ಬಾಲಸುಬ್ರಹ್ಮಣ್ಯಂ
"ಸೈ ಸೈ ಸೈ" ಹರಿಹರನ್
"ಯಾರಿಟ್ಟರೀ ಚುಕ್ಕಿ"
"ಬೆಂದಕಾಳೂರ ಪಕ್ಕ" ದೇವರ ಮಗ ಎಸ್. ಪಿ. ಬಾಲಸುಬ್ರಹ್ಮಣ್ಯಂ
"ವಸಂತ ಭೂಮಿಗೆ" ರಾಜೇಶ್ ಕೃಷ್ಣನ್
"ಗೋಕುಲದಲ್ಲಿ ಕೃಷ್ಣಲೀಲೆ" ಕೃಷ್ಣಲೀಲೆ ವಿ. ಮನೋಹರ್ ಅನಂತ ನಾಗ್, ಶಿವರಾಜಕುಮಾರ್
೨೦೦೧ "ಯಾರೋ ನೀನು" ನನ್ನ ಪ್ರೀತಿಯ ಹುಡುಗಿ ಮನೋಮೂರ್ತಿ ಹರಿಹರನ್
"ನನ್ನ ಪ್ರೀತಿಯ ಹುಡುಗಿ "
೨೦೦೩ "ಎಲ್ ಎಲ್ಲಿಂದವೋ" ಕರಿಯ ಗುರುಕಿರಣ್ ಗುರುಕಿರಣ್
೨೦೦೪ "ಕರುನಾಡಿನ ಕೊರವಂಜಿ" ಸಾರ್ವಭೌಮ ಹಂಸಲೇಖ ಹರಿಹರನ್
"ಸಾರೆ ಜಹಾ ಸೆ ಅಚ್ಛ" -
೨೦೧೩ "ನಾ ಇನ್ನು ಬದುಕಿರಲಾರೆ" ಅಗಮ್ಯ ಚಿನ್ಮಯ್ ಎಂ. ರಾವ್ -

ಅನುರಾಧಾ ಪೌಡ್ವಾಲ್ ರವರ ಧ್ವನಿಮುದ್ರಿಸಿದ ಹಾಡುಗಳ ಪಟ್ಟಿ.

ಉಲ್ಲೇಖಗಳು

ಬದಲಾಯಿಸಿ