ಖ್ಯಾತಿ ಹಿಂದೂ ಪುರಾಣದ ಒಬ್ಬ ವ್ಯಕ್ತಿಯಾಗಿದ್ದಾಳೆ, ಮತ್ತು ದಕ್ಷ ಪ್ರಜಾಪತಿ ಹಾಗೂ ಪ್ರಸೂತಿಯ ಮಗಳು.

ಪುರಾಣಗಳ ಪ್ರಕಾರ, ದಕ್ಷನು ತನ್ನ ಪತ್ನಿ ಪ್ರಸೂತಿಯಿಂದ ೨೪ ಪುತ್ರಿಯರನ್ನು[] ಮತ್ತು ತನ್ನ ಪತ್ನಿ ಪಂಚಜನಿಯಿಂದ (ವೀರಿಣಿ) ೬೨ ಪುತ್ರಿಯರನ್ನು ಪಡೆದನು.[][] ಖ್ಯಾತಿ ಅವರಲ್ಲಿ ಒಬ್ಬಳು. ಖ್ಯಾತಿ ಪದದ ಅರ್ಥ ಪ್ರಸಿದ್ಧಳು ಎಂದು. ಆದರೆ ಖ್ಯಾತಿಯ ಮುಖ್ಯ ಅರ್ಥ ದೈವಿಕ ದೀಪಕ ಪ್ರಜ್ಞೆ, ಪ್ರಜಾಪತಿ ಭೃಗುವಿಗೆ ಸಂಬಂಧಿಸಿದ ತತ್ವ. ಖ್ಯಾತಿ ಬಹುಮುಖಿ ಜ್ಞಾನ ಮತ್ತು ಸೌಂದರ್ಯವನ್ನು ವ್ಯಕ್ತಪಡಿಸುತ್ತದೆ, ದೀಪಕ ಮತ್ತು ಕ್ರಿಯೆಯಾಗಿ ಅನ್ವಯಿಸಿದಾಗ.

ಅವಳು ಭೃಗು ಋಷಿಯೊಂದಿಗೆ ವಿವಾಹವಾದಳು, ಮತ್ತು ಆ ದಂಪತಿಗೆ ಇಬ್ಬರು ಪುತ್ರರು ಧಾತಾ ಹಾಗೂ ವಿಧಾತಾ[] ಮತ್ತು ಶ್ರೀ ಎಂಬ ಒಬ್ಬ ಮಗಳು. ಶ್ರೀ ವಿಷ್ಣುವನ್ನು ಮದುವೆಯಾದಳು.

ಅವಳು ಶಿವನ ಮೊದಲ ಪತ್ನಿಯಾದ ಸತಿಯ ಭಗಿನಿ.

ಉಲ್ಲೇಖಗಳು

ಬದಲಾಯಿಸಿ
  1. Vishnu Purana, Padma Purana
  2. Matsya Purana
  3. The Matsya Puranam P-I (B.D. Basu) English Translation Ch #5, Page 17
  4. Brigu Archived 2013-08-18 ವೇಬ್ಯಾಕ್ ಮೆಷಿನ್ ನಲ್ಲಿ. www.urday.in.
"https://kn.wikipedia.org/w/index.php?title=ಖ್ಯಾತಿ&oldid=1124887" ಇಂದ ಪಡೆಯಲ್ಪಟ್ಟಿದೆ