ಅವರ್ಗೀಯ ವ್ಯಂಜನ
ಪ್ರಕೃತ, ಕನ್ನಡ ಭಾಷಾ ಕಲಿಕೆಯತ್ತ ಗಮನ ಹರಿಸಿದಾಗ ಮೊದಲು ನಮ್ಮ ಗಮನ ಸೆಳೆಯುವುದು ಕನ್ನಡ ಅಕ್ಷರಮಾಲೆ ಅಥವಾ ವರ್ಣಮಾಲೆ. ಇದರಲ್ಲಿ ಸ್ಥೂಲವಾಗಿ ನಾಲ್ಕು ವಿಭಾಗಗಳಿವೆ:- ಸ್ವರಾಕ್ಷರ, ವರ್ಗೀಯ ವ್ಯಂಜನ. ಅವರ್ಗೀಯ ವ್ಯಂಜನ
|
ಮತ್ತು ಅನುನಾಸಿಕ. ಸ್ವರಾಕ್ಷರಗಳು (ಮೂಲ ಹತ್ತು ಅಕ್ಷರಗಳು ಮಾತ್ರ ಅ ಆ ಇ ಈ ಉ ಊ ಎ ಏ ಒ ಓ) ತಮ್ಮದೇ ಆದ ಉಚ್ಚಾರಣಾ ಸ್ವಾತಂತ್ರ್ಯನ್ನು ಹೊಂದಿವೆ. ಆದರೆ ವ್ಯಂಜನಾಕ್ಷರಗಳಿಗೆ ಆ ಸ್ವಾತಂತ್ರ್ಯಲ್ಲ. ಸ್ವರದ ನೆರವು ಬೇಕಾಗುವುದು. ಉದಾ:- ಕ್ + ಅ = ಕ, ಕ್ + ಆ =ಆ ಈ ರೀತಿ. ಹೀಗೆ ಕನ್ನಡ ವರ್ಣಮಾಲೆಯ ರಚನಾ ಸ್ವರೂಪದಲ್ಲಿ ಅಕ್ಷರಗಳ ಕೂಡುವಿಕೆ ಅಥವಾ ಸಂಯುಕ್ತತೆ ಅನಿವಾರ್ಯವಾಗಿ ಕಂಡುಬರುತ್ತದೆ. ಹಾಗಾಗಿ ಸ್ವರಾಕ್ಷರ ಆಧಾರಿತವಾದ ಕಾಗುಣಿತ ಪದ ರಚನೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಈ ಸಂರಚನಾ ಸ್ವರೂಪವನ್ನು ನಾವೆಂದೂ ಕಡೆಗಣಿಸುವಂತಿಲ್ಲ. ತಾತ್ಪರ್ಯವೆಂದರೆ ಕನ್ನಡ ಕಲಿಕೆಯಲ್ಲಿ ಕಾಗುಣಿತದ ಅವಶ್ಯಕತೆಯಿದೆ ಹಾಗೂ ಅದರ ಅಭ್ಯಾಸ ಅನಿವಾರ್ಯ. ಆದರೆ ಈಗ ಕಲಿಸುತ್ತಿರುವ ವಿಧಾನದಲ್ಲಿ ಅದು ನಾಪತ್ತೆಯಾಗಿದೆ. ನಾದವಿಲ್ಲದ ಓಲಗದಂತೆ ಕನ್ನಡ ಕಲಿಕೆ ಸೊರಗಿದೆ.
ಸ್ವತಂತ್ರವಾಗಿ ಉಚ್ಚರಿಸಲಾಗದ ಅಕ್ಷರಗಳು ‘ವ್ಯಂಜನ’ಗಳಾಗಿವೆ. ಸ್ವರಗಳ ಸಹಾವಿಲ್ಲದೆ ವ್ಯಂಜನಗಳ ಉಚ್ಚಾರ ಸಾಧ್ಯವಿಲ್ಲ. ಉದಾ : ಯ್+ಅ=ಯ. ಅವರ್ಗೀಯ ವ್ಯಂಜನ ಸಂಜ್ಞೆಗಳಲ್ಲಿ ‘ಯ್’ಕಾರದಿಂದ ‘ಳ್’ ಕಾರದವರೆಗೆ ಒಟ್ಟು ೦೯ ಅಕ್ಷರಗಳಿವೆ.[೧]
ಅವರ್ಗೀಯ ವ್ಯಂಜನಗಳುಸಂಪಾದಿಸಿ
ಅವರ್ಗೀಯ ವ್ಯಂಜನಗಳು ಒಂಭತ್ತು. ಇವುಗಳನ್ನು ಒಂದೊಂದಾಗಿ ವರ್ಗೀಕರಿಸಲಾಗುವುದಿಲ್ಲ. ಹಾಗಾಗಿ ಇವುಗಳನ್ನು ಅವರ್ಗೀಯ ವ್ಯಂಜನಗಳು ಎಂದು ಕರೆಯುತ್ತಾರೆ.[೨] ಯ್, ರ್, ಲ್, ವ್, ಶ್, ಷ್, ಸ್, ಹ್, ಳ್ –
ಧ್ವನಿ ಶಾಸ್ತ್ರದ ನೆಲೆಯಲ್ಲಿ ಅವರ್ಗೀಯಗಳುಸಂಪಾದಿಸಿ
ಕೇಶಿರಾಜನು ವರ್ಗೀಯ ವ್ಯಂಜನಗಳಂತೆ ಅವರ್ಗೀಯ ವ್ಯಂಜನಗಳಲ್ಲಿ ಯ್, ವ್, ಲ್, ಅಕ್ಷರಗಳನ್ನು ಅನುನಾಸಿಕಗಳೆಂದು ಹೇಳಿ ಧ್ವನಿಶಾಸ್ತ್ರದ ಸೂಕ್ಷ್ಮ ಪರಿಜ್ಞಾನವನ್ನು ಪ್ರಕಟಿಸಿದ್ದಾನೆ.
ಉಲ್ಲೇಖಸಂಪಾದಿಸಿ
- ↑ https://www.omniref.com/ruby/gems/scylla/0.4.1/files/source_texts/kannada.txt[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on 2016-10-19. Retrieved 2015-12-27.