ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೧೧

ಅರಳಿಕಟ್ಟೆ.png

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ::

 • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

 • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
 • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು -

{{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.

 • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
 • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
 • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.

justify

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧|೧೨|೧೩|೧೩|೧೪ |೧೫

ಇತರ ಚರ್ಚೆ: | | |

Bhubaneswar Heritage Edit-a-thon 2017ಸಂಪಾದಿಸಿ

Hello,
The Odia Wikimedia Community and CIS-A2K are happy to announce the "Bhubaneswar Heritage Edit-a-thon" between 12 October and 10 November 2017

This Bhubaneswar Heritage Edit-a-thon aims to create, expand, and improve articles related to monuments in the Indian city of Bhubaneswar.

Please see the event page here.

We invite you to participate in this edit-a-thon, please add your name to this list here.

You can find more details about the edit-a-thon and the list of articles to be improved here: here.

Please feel free to ask questions. -- User:Titodutta (sent using MediaWiki message delivery (ಚರ್ಚೆ) ೦೯:೨೦, ೪ ಅಕ್ಟೋಬರ್ ೨೦೧೭ (UTC))[]

ಪ್ರಾಜ್ಯಾಕ್ಟ್ ಗ್ರಾಂಟೀನಾ ಸಲುವಾಗಿ ನಮ್ಮ ಅರ್ಜಿಸಂಪಾದಿಸಿ

ನಮಸ್ಕಾರ,

User: Rohini ಮತ್ತು ನನ್ನ ಪ್ರಾಜ್ಯಾಕ್ಟ್ ಗ್ರಾಂಟೀನಾ ಸಲುವಾಗಿ ಅರ್ಜಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳ ಸಂತೋಷವಾಗಿದೆ. ನಮ್ಮ ಅರ್ಜಿ “Community toolkit for greater diversity” ಎಂದು ಹೆಸರಿಸಲಾಗಿದೆ ಮತ್ತು ಇದು ಪ್ರಾಥಮಿಕ ಸುತ್ತಿನ ವಿಮರ್ಶೆಯನ್ನು ತೆರವುಗೊಳಿಸಲಾಗಿದೆ. ಈ ಅರ್ಜಿ ಅಕ್ಟೋಬರ್ 17, 2017 ರವರೆಗೂ ಸಮುದಾಯ ವಿಮರ್ಶೆಗಾಗಿ ತೆರೆದಿರುತ್ತದೆ. <https://meta.wikimedia.org/wiki/Grants:Project/Chinmayisk/Community_toolkit_for_Greater_Diversity> ಈ ಅರ್ಜಿಯ ಚರ್ಚ ಪುಟದಲ್ಲಿ ನಿಮ್ಮ ಸಲಹೆ ಮತ್ತು ಪ್ರತಿಕ್ರಿಯೆಗಳನ್ನು (https://meta.wikimedia.org/wiki/Grants_talk:Project/Chinmayisk/Community_toolkit_for_Greater_Diversity), ಮತ್ತು ನಿಮ್ಮ ಬೆಂಬಲವನ್ನು ಅನುಮೋದನೆ ವಿಭಾಗದಲ್ಲಿ ತಿಳಿಸಿದರೆ ನಾವು ಮೆಚ್ಚುತ್ತೇವೆ (https://meta.wikimedia.org/wiki/Grants:Project/Chinmayisk/Community_toolkit_for_Greater_Diversity#Endorsements).

ನೀವು ನಮ್ಮೊಂದಿಗೆ ಸ್ವಯಂಸೇವಕರಾಗಿ ಸಹಾಯ ಮಾಡಲು ಬಯಸಿದರೆ ,ನನ್ನನ್ನು ಸಂಪರ್ಕಿಸಿ. ತುಂಬ ಧನ್ಯವಾದಗಳು -Chinmayisk (ಚರ್ಚೆ) ೦೮:೩೬, ೮ ಅಕ್ಟೋಬರ್ ೨೦೧೭ (UTC)[]

ಸೆಪ್ಟೆಂಬರ್ ತಿಂಗಳ ವರದಿಸಂಪಾದಿಸಿ

ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಕಾರ್ಯಕ್ರಮಗಳುಸಂಪಾದಿಸಿ

 • ಸೆಪ್ಟೆಂಬರ್ ತಿಂಗಳ ಮೊದಲನೆಯ ವಾರದಲ್ಲಿ ದಿನಾಂಕ ೨&೩ ರಂದು ಕರಾವಳಿ ವಿಕಿಮೀಡಿಯನ್ನರ ತುಳು ವಿಕಿಪೀಡಿಯ ವರ್ಷಾಚರಣೆಯ ಕಾರ್ಯಕ್ರಮದ ಸಂದರ್ಭದಲ್ಲಿ ಅಸಫ್ ಅವರು ನಡೆಸಿಕೊಟ್ಟ ಎರಡು ದಿನದ ವಿಕಿಡೇಟಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ.
 • ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಐಆರ್‌ಸಿ ಯನ್ನು ನಡೆಸಲಾಯಿತು.
 • ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವದ ಅಂಗವಾಗಿ ನಡೆಸಬೇಕೆಂದಿರುವುದರ ಸಂಪಾದನೋತ್ಸವದ ಬಗ್ಗೆ ಮತ್ತು ಕನ್ನಡ ವಿಕಿಪೀಡಿಯದ ಕೆಲಸದಲ್ಲಿ ಸಮುದಾಯನದೊಂದಿಗೆ ಕೈಜೋಡಿಸುವಂತೆ ಗುಲಬರ್ಗ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಲ್ಲಿ ಮಿಂಚಂಚೆ ಮೂಲಕ ಮನವಿ ಮಾಡಿಕೊಂಡಿದ್ದೇನೆ.

ವಿಫಲತೆಗಳುಸಂಪಾದಿಸಿ

 • ಮುಖ್ಯವಾಗಿ ಸಪ್ಟೆಂಬರ್ ತಿಂಗಳಲ್ಲಿ ನಡೆಬೇಕೆಂದಿದ್ದ ಟೆಂಪ್ಲೇಟು ಕಾರ್ಯಾಗಾರದ ಮುಂದಿನ ಭಾಗ ಸಾಧ್ಯವಾಗಲಿಲ್ಲ. ಸಮುದಾಯ ಸದಸ್ಯರಲ್ಲಿ ಕೇಳಿಕೊಂಡಾಗ ಸಂಪನ್ಮೂಲ ವ್ಯಕ್ತಿಗಳು ಬದಲಾಗಬೇಕೆಂದು ಕೇಳಿಬಂತು. ಹಾಗಾಗಿ ಸಮುದಾಯದ ಬಳಿಯೇ ಸಂಪನ್ಮೂಲ ವ್ಯಕ್ತಿಗಳನ್ನು ಸೂಚಿಸಲು ಕೇಳಿಕೊಂಡೆವು. ನಂತರ ಸಂಪನ್ಮೂಲ ವ್ಯಕ್ತಿಗಳು ಹಿಂದಿನ ಬಾರಿಯವರೇ ಆಗಬಹುದು ಆದರೆ ಸಲಹೆಯಲ್ಲಿ ಸೂಚಿಸಿದ ವಿಷಯಗಳನ್ನು ಅಳವಡಿಸಿಕೊಂಡರೆ ಉತ್ತಮ ಎನ್ನುವ ವಿಚಾರ ಬಂತು.
 • ತುಮಕೂರು ವಿಜ್ಞಾನ ಕೇಂದ್ರವನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಏನೂ ಉತ್ತರ ಬಂದಿಲ್ಲ.
 • ಇನ್ನೂ ಹೆಚ್ಚಿನ ವಿಶ್ಯವಿದ್ಯಾಲಯಗಳಿಗೆ, ಸಂಸ್ಥೆಗಳಿಗೆ ಮಿಂಚಂಚೆ ಮೂಲಕ ಕನ್ನಡ ವಿಕಿಪೀಡಿಯದ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ಅವರು ವಿಕಿಮೀಡಿಯದ ಯೋಜನೆಗಳಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಳ್ಳುವುದರಲ್ಲಿ ಇನ್ನೂ ಹೆಚ್ಚಿನ ಶ್ರಮ ಬೇಕೆಂದು ನನ್ನ ಅಭಿಪ್ರಾಯ.
 • ಡಿಎಸ್‌ಸಿಆರ್‍ಟಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ನನ್ನಲ್ಲಿರುವ ದೂರವಾಣಿ ಸಂಖ್ಯೆ ಕೆಲಸ ಮಾಡಲಿಲ್ಲ.

ಅಕ್ಟೋಬರ್ ತಿಂಗಳಲ್ಲಿ ಮಾಡಬೇಕೆಂದಿರುವುದುಸಂಪಾದಿಸಿ

 • ತುಮಕೂರು ವಿಜ್ಞಾನ ಕೇಂದ್ರದ ಭೇಟಿ.
 • ಡಿಎಸ್‌ಸಿ‌ಆರ್‌ಟಿಯಲ್ಲಿ ಸಂಬಂಧಪಟ್ಟವರ ಭೇಟಿ.
 • ಸಮುದಾಯ ಸದಸ್ಯರು ತಮಗೆ ಪರಿಚಯವಿರುವ ಕನ್ನಡದ ಬಗ್ಗೆ ಕಾಳಜಿ ಇದ್ದು ಕೆಲಸ ಮಾಡುವ ಯಾವುದೇ ಸಂಸ್ಥೆಯಲ್ಲಿ ಪರಿಚಯದವರು ಇದ್ದಲ್ಲಿ ಅವರ ಮಾಹಿತಿಯನ್ನು ನನ್ನಲ್ಲಿ ದಯವಿಟ್ಟು ಹಂಚಿಕೊಳ್ಳಬೇಕಾಗಿ ವಿನಂತಿ. ಅವರಿಗೆ ಮಿಂಚಂಚೆ ಮೂಲಕ ಸಂಪರ್ಕಿಸುವುದರಿಂದ ಮಾಹಿತಿ ತಿಳಿಸಿದ ಸದಸ್ಯರೊಂದಿಗೆ ಸೇರಿ ಮುಖತಃ ಭೇಟಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿದಲ್ಲಿ ಹೆಚ್ಚಿನ ಪ್ರಯೋಜನ ಎಂದು ನನ್ನ ಅನಿಸಿಕೆ.
 • ಹಂಪಿ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ನಿಘಂಟನ್ನು ಡಿಜಿಟಲೀಕರಣ ನಡೆಸಿದ್ದಾರೆ. ಕೆಲವರಿಗೆ ಯುನಿಕೋಡ್ ಸಮಸ್ಯೆ ಎದುರಾಗಿದೆ. ಅದನ್ನು ಬಗೆಹರಿಸಿ ಎಲ್ಲವನ್ನೂ ವಿಕ್ಷನರಿಗೆ ತರವುದು.
 • ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಸಬೇಕೆಂದಿರುವ ಸಂಪಾದನೋತ್ಸವದ ತಯಾರಿ.
 • ಗೋಕರ್ಣದ ಸ್ವಸ್ವರ ಎಂಬ ರೆಸಾರ್ಟಿಗೆ ಭೇಟಿನೀಡಿದ್ದಾಗ ಅವರು ವಿಕಿಪೀಡಿಯಕ್ಕೆ ನಾವೇನಾದರೂ ಸಹಾಯ ಮಾಡಬಹುದೇ ಎಂದು ಮುಂದೆ ಬಂದಿದ್ದರು. ಹೀಗಾಗಿ ಅವರ ಆವರಣದಲ್ಲಿ ಸಾಕಷ್ಟು ಸಸ್ಯ ಸಂಪತ್ತು ಇದೆ. ಅದರಲ್ಲಿ ಔಷಧೀಯ ಸಸ್ಯಗಳೂ ಸೇರಿವೆ. ಅವುಗಳ ಚಿತ್ರ, ಮತ್ತು ಮಾಹಿತಿಗಳನ್ನು ಸಂಗ್ರಹಿಸುವುದು. ಇದು ಔಷಧೀಯ ಸಸ್ಯಗಳ ಯೋಜನೆಗೆ ಸಹಕಾರಿ ಆಗುತ್ತದೆ. ಇದರ ಜೊತೆ ಇತರ ಸಸ್ಯ, ಪ್ರಾಣಿಗಳ ಬಗ್ಗೆಯೂ ಮಾಹಿತಿ ಸೇರಿಸುವುದು.


--Gopala Krishna A (ಚರ್ಚೆ) ೧೦:೨೯, ೧೨ ಅಕ್ಟೋಬರ್ ೨೦೧೭ (UTC)[]

ಡಿಎಸ್‌ಸಿಆರ್‍ಟಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ನನ್ನಲ್ಲಿರುವ ದೂರವಾಣಿ ಸಂಖ್ಯೆ ಕೆಲಸ ಮಾಡಲಿಲ್ಲ - ಇದು ತುಂಬ ಅಪ್ರಬುದ್ಧವಾಗಿ ಕಾಣಿಸುತ್ತಿದೆ. ನನ್ನನ್ನು ಸಂಪರ್ಕಿಸಿದ್ದರೆ ನಾನು ಸರಿಯಾದ ಫೋನ್ ಸಂಖ್ಯೆ ನೀಡುತ್ತಿದ್ದೆ. ಸಾಮಾನ್ಯವಾಗಿ ಸರಕಾರದಲ್ಲಿ ಕೆಲಸ ಆಗಬೇಕಾದರೆ ನಾವೇ ಅಲ್ಲಿ ಹತ್ತು ಸಲ ಅಲೆಯಬೇಕು.ಅದಕ್ಕೆ ಸಾಕಷ್ಟು ತಾಳ್ಮೆಯೂ ಬೇಕು. ನಾನು ಮೈಸೂರು ವಿ.ವಿ. ವಿಶ್ವಕೋಶವನ್ನು ಕ್ರಿಯೇಟಿವ್ ಕಾಮನ್ಸ್‍ನಲ್ಲಿ ಬಿಡುಗಡೆ ಮಾಡಿಸಲು ಅವರನ್ನು ಒಪ್ಪಿಸಲು ಬಹುಶಃ ೬-೮ ಸಲ ಹೋಗಿದ್ದೆ. ಒಪ್ಪಿದ ನಂತರವೂ ಅದಕ್ಕೆ ಬೇಕಾದ ಕಾಗದ ಪತ್ರ, ಬಿಡುಗಡೆ ಕಾರ್ಯಕ್ರಮದ ಸಿದ್ಥತೆ ಎಂದು ಮತ್ತೆ ಮತ್ತೆ ಹೋಗಿದ್ದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಿ.ಎಸ್.ಇ.ಆರ್.ಟಿ. - ಈ ಇಲಾಖೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲೂ ಅಷ್ಟೆ. ಒಂದು ಸಲ ಫೋನ್ ಮಾಡಲು ಪ್ರಯತ್ನಿಸಿದೆ. ಅದು ಕೆಲಸ ಮಾಡಲಿಲ್ಲ ಎಂದರೆ ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ. ಡಿ.ಎಸ್.ಇ.ಆರ್.ಟಿ. ಬೆಂಗಳೂರಿನಲ್ಲೇ ಇದೆ. ಅಲ್ಲಿಗೇ ಹೋಗಿ ಪ್ರಯತ್ನಿಸಬಹುದಿತ್ತಲ್ಲ?
ಸರಿ. ನಿಮ್ಮಲ್ಲಿರುವ ಸರಿಯಾದ ಫೋನ್ ಸಂಖ್ಯೆ ದಯವಿಟ್ಟು ನೀಡಿರಿ. --Gopala Krishna A (ಚರ್ಚೆ) ೧೦:೧೩, ೨೪ ಅಕ್ಟೋಬರ್ ೨೦೧೭ (UTC)[]
ನೀಡಿದ್ದೇನೆ--ಪವನಜ (ಚರ್ಚೆ) ೧೦:೩೪, ೨೪ ಅಕ್ಟೋಬರ್ ೨೦೧೭ (UTC)[]
ಸೆಪ್ಟೆಂಬರ್ ತಿಂಗಳ ಮೊದಲನೆಯ ವಾರದಲ್ಲಿ ದಿನಾಂಕ ೨&೩ ರಂದು ಕರಾವಳಿ ವಿಕಿಮೀಡಿಯನ್ನರ ತುಳು ವಿಕಿಪೀಡಿಯ ವರ್ಷಾಚರಣೆಯ ಕಾರ್ಯಕ್ರಮದ ಸಂದರ್ಭದಲ್ಲಿ ಅಸಫ್ ಅವರು ನಡೆಸಿಕೊಟ್ಟ ಎರಡು ದಿನದ ವಿಕಿಡೇಟಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. - ಕಾರ್ಯಕ್ರಮ ಆಯೋಜಕರಲ್ಲೊಬ್ಬ, ಕಾರ್ಯಕರ್ತನಾಗಿ ಭಾಗವಹಿಸಲಿಲ್ಲ. ಆ ಎರಡು ದಿನಗಳಲ್ಲಿ ಕನ್ನಡ, ತುಳು, ಕೊಂಕಣಿ ವಿಕಿಪೀಡಿಯ ಸಂಪದಾನೋತ್ಸವ ಮತ್ತು ವಿಕಿಡಾಟಾ ತರಬೇತಿ ಕಾರ್ಯಕ್ರಮ ಒಟ್ಟಿಗೇ ನಡೆಯಿತು. ಅದರಲ್ಲಿ ನೀವು ವಿಕಿಡಾಟಾ ತರಬೇತಿಯಲ್ಲಿ ಕುಳಿತುಕೊಂಡಿರಿ. ಸಂಪಾದನೋತ್ಸವಕ್ಕೆ ಬಂದ ಹೊಸಬರಿಗೆ ಹೇಳಿಕೊಡಲು ನಾನು ಕೇಳಿಕೊಂಡಾಗ ನಿರಾಕರಿಸಿದಿರಿ. ಕನ್ನಡದ ಸಿ.ಎ. ಆಗಿ ಸಮುದಾಯದವರು ಕೇಳಿಕೊಂಡಾಗ ಈ ಕೆಲಸ ಮಾಡಬೇಕಿತ್ತು. ಅದು ಬಿಟ್ಟು ನಿಮ್ಮ ವೈಯಕ್ತಿಕ ಲಾಭವನ್ನು ಮಾತ್ರ ಗಮನದಲ್ಲಿಟ್ಟುಕೊಂಡಿರಿ. ಈ ತರಬೇತಿಯಿಂದ ನಿಮಗೆ ಲಾಭವಾಗಿರಬಹುದು. ಆದರೆ ಆ ಜ್ಞಾನವನ್ನು ಕನ್ನಡ ವಿಕಿ ಸಮುದಾಯಕ್ಕೆ ನೀವು ಹಂಚಿದಂತೆ ಕಂಡುಬರಲಿಲ್ಲ. ಕನಿಷ್ಠ ಒಂದು ಚಿಕ್ಕ ವಿಕಿಡಾಟಾ ಕೈಪಿಡಿ, ಟ್ಯುಟೋರಿಯಲ್ ಫೈಲ್ ಮತ್ತು ವಿಡಿಯೋ, ಯಾವುದೂ ಬರಲಿಲ್ಲ.
ಇಡಿಯ ಒಂದು ತಿಂಗಳ ಸಾಧನೆ ಎಂದರೆ ಕೇವಲ ಒಂದು ಐಆರ್‍ಸಿ ನಡೆಸಿದ್ದಾ? ವಿಕಿಸೋರ್ಸ್‍ನಲ್ಲಿ ಬೇಕಾದಷ್ಟು ಕೆಲಸಗಳು ಬಾಕಿ ಇವೆ. ಅದರ ಬಗ್ಗೆ ಏನೂ ಕೆಲಸ ಮಾಡಿದಂತೆ ಕಂಡು ಬರಲಿಲ್ಲ. ಕ್ರಿಯೇಟಿವ್ ಕಾಮನ್ಸ್‍ನಲ್ಲಿ ಬಿಡುಗಡೆಯಾದ ಪುಸ್ತಕಗಳು ಇನ್ನೂ ಹಲವು ವಿಕಿಸೋರ್ಸ್‍ಗೆ ಬಂದಿಲ್ಲ. ಯಾವುದೇ ಹೊಸ ಕಾರ್ಯಾಗಾರ, ಸಂಪಾದನೋತ್ಸವ, ಯೋಜನೆ, ಕಂಡುಬಂದಿಲ್ಲ.--ಪವನಜ (ಚರ್ಚೆ) ೦೬:೩೪, ೨೪ ಅಕ್ಟೋಬರ್ ೨೦೧೭ (UTC)[]
ಸರಿ. ಈ ಬಗ್ಗೆ ಗಮನ ಹರಿಸುತ್ತೇನೆ. --Gopala Krishna A (ಚರ್ಚೆ) ೧೦:೧೩, ೨೪ ಅಕ್ಟೋಬರ್ ೨೦೧೭ (UTC)[]

CS1 templates always show error in Kannada wikipedia:ಸಂಪಾದಿಸಿ

  Resolved: waiting for admin to move modules from sandbox

CS1 error ಬಗ್ಗೆ phabricator.wikimedia.org ನಲ್ಲಿ ಚರ್ಚಿಸಿದ್ದು . ಅವರು the module does not understand kn months ಎಂದು ಉತ್ತರಿಸಿದ್ದಾರೆ. ಈ ಎರರ್ ಬಗ್ಗೆ ಪರಿಶೀಲಿಸಲು ವಿನಂತಿ.--Sangappadyamani (ಚರ್ಚೆ) ೧೩:೫೧, ೧೮ ಅಕ್ಟೋಬರ್ ೨೦೧೭ (UTC)[]

ಈ ಸಮಸ್ಯೆ ಏನಾಯಿತು? ಇದರಲ್ಲಿ ಮಾಡ್ಯೂಲ್ ಬದಲಾವಣೆ ಯಾಕೆ ಅಂತ ಕೇಳಿದಾರೆ. ಉತ್ತರ ಏನು? ಇದನ್ಯಾಕೆ ಟಿಟೊ ಅವರ ಸಹಾಯ ಪಡೆದು ಸರಿಮಾಡಬಾರದು? @Sangappadyamani --ವಿಶ್ವನಾಥ/Vishwanatha (ಚರ್ಚೆ) ೧೯:೩೫, ೭ ನವೆಂಬರ್ ೨೦೧೭ (UTC)[]
@ವಿಶ್ವನಾಥ/Vishwanatha ಈ ಮಾಡ್ಯೂಲ್ಗಳನ್ನು ನಿರ್ವಾಹಕರು ಮಾತ್ರ ಸಂಪಾದಿಸಲು ಅನುಮತಿ ಇದೆ. ಕಾರಣ ಕನ್ನಡ ವಿಕಿ ನಿರ್ವಾಹಕರು ಮಾತ್ರ ಸರಿಪಡಿಸಬಹುದು.Sangappadyamani (ಚರ್ಚೆ) ೨೧:೫೦, ೭ ನವೆಂಬರ್ ೨೦೧೭ (UTC)[]
@ಸದಸ್ಯ:Pavanaja ನೀವು ಮಾಡ್ಯುಲ್'ಗಳ ಪ್ರಯೋಗ ಪುಟದಿಂದ ಅಮದು ಮಾಡಿ. ★ Anoop / ಅನೂಪ್ © ೨೧:೦೭, ೧೫ ನವೆಂಬರ್ ೨೦೧೭ (UTC)[]

ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ಸಂಪಾದನೋತ್ಸವಸಂಪಾದಿಸಿ

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಆ ಪ್ರಯುಕ್ತ ನವೆಂಬರ್ ಮೊದಲನೆಯ ವಾರದಂದು ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ಪರಿಕಲ್ಪನೆಯಲ್ಲಿ ರಾಜ್ಯದ ಬಗ್ಗೆ ಸಂಪಾದನೋತ್ಸವ ನಡೆಸುವುದು ಎಂದು ಹಿಂದಿನ ಸಮ್ಮಿಲನದಲ್ಲಿ ತೀರ್ಮಾನಿಸಲಾಗಿತ್ತು. ಈ ಸಂಪಾದನೋತ್ಸವವನ್ನು ಒಂದು ತಿಂಗಳು ಮುಂದುವರಿಸಿ, ಮೊದಲನೆಯ ವಾರದ ಹೊರತಾಗಿ ಇತರ ದಿನಗಳಲ್ಲಿ ಯಾವುದೇ ವಿಷಯಗಳನ್ನು ತೆಗೆದುಕೊಳ್ಳಬಹುದಾಗಿದೆ. ತಮ್ಮ ಹೆಸರನ್ನು ನೋಂದಾಯಿಸಲು ಈ ಪುಟಕ್ಕೆ ಭೇಟಿ ನೀಡಿ.

ಈ ನಿಟ್ಟಿನಲ್ಲಿ ಮೊದಲನೆಯ ವಾರದಲ್ಲಿ ಅಂದರೆ ದಿನಾಂಕ ೪ ರಂದು ಬೆಂಗಳೂರಿನ ಸಿಐಎಸ್-ಏ೨ಕೆ ಕಛೇರಿಯಲ್ಲಿ ಸೇರಿ ರಾಜ್ಯೋತ್ಸವದ ಸಂಭ್ರಮಾಚರಣೆ, ಸಮ್ಮಿಲನದ ಜೊತೆಗೆ ಒಂದು ದಿನದ ಸಂಪಾದನೋತ್ಸವ ನಡೆಸೋಣವೇ? --Gopala Krishna A (ಚರ್ಚೆ) ೦೯:೩೪, ೨೪ ಅಕ್ಟೋಬರ್ ೨೦೧೭ (UTC)[]

ಅಭಿಪ್ರಾಯಗಳುಸಂಪಾದಿಸಿ

 1. --ನಾನು ಸ್ಟಾಕ್‍ಹೋಮ್, ಸ್ವೀಡನ್‍ನಲ್ಲಿ ವಿಕಿಮೀಡಿಯ ಕಾನ್ಫೆರೆನ್ಸ್‍ನಲ್ಲಿ ಭಾಗವಹಿಸಲು ಹೋಗುವವನಿದ್ದೇನೆ. ಆದುದರಿಂದ ನನಗೆ ಭಾಗವಹಿಸಲು ಆಗುವುದಿಲ್ಲ.--ಪವನಜ (ಚರ್ಚೆ) ೧೦:೪೪, ೨೪ ಅಕ್ಟೋಬರ್ ೨೦೧೭ (UTC)[]
 2. --ಆಯೋಗಿಸಿದರೆ ಭಾಗವಹಿಸುತ್ತೇನೆ. ★ Anoop / ಅನೂಪ್ © ೦೮:೫೧, ೨೭ ಅಕ್ಟೋಬರ್ ೨೦೧೭ (UTC)[]
 3. -- ೪ನೇ ತಾರೀಕು ಶನಿವಾರ ಆದ್ದರಿಂದ ವಿದ್ಯಾರ್ಥಿಗಳು ಮತ್ತು ಕೆಲವೊಂದು ವೃತ್ತಿಯವರಿಗೆ ಸಾಧ್ಯವಿಲ್ಲ ಎಂದು ದೂರವಾಣಿಯಲ್ಲಿ ಮಾತಾಡಿದಾಗ ತಿಳಿದುಕೊಂಡೆ. ಹೀಗಾಗಿ ೫ನೇ ತಾರೀಕಿನ ಭಾನುವಾರದಂದು ನಡೆಸೋಣವೇ? ಈ ಹಿಂದೆ ಶನಿವಾರ ನಡೆಸೋಣ ಎಂದು ಕೇಳಲು ಕಾರಣ ೫ನೇ ತಾರೀಕಿನಂದು ಸಾಕಷ್ಟು ಇತರ ಕನ್ನಡಪರ ಕಾರ್ಯಕ್ರಮಗಳು ಇವೆ. ಭಾಗವಹಿಸುವವರ ಸಂಖ್ಯೆ ಕಡಿಮೆ ಇರಬಹುದೆಂದು ಅಂದುಕೊಂಡೆ. ಭಾನುವಾರ ೫ ರಂದು ಆಯೋಜಿಸೋಣ. --Gopala Krishna A (ಚರ್ಚೆ) ೧೪:೪೦, ೨೮ ಅಕ್ಟೋಬರ್ ೨೦೧೭ (UTC)[]
 4. --ನಾನು ಖುದ್ದಾಗಿ ಭಾಗವಹಿಸಲು ಪ್ರಯತ್ನಿಸುತ್ತೇನೆ. ಆಗದಿದ್ದಲ್ಲಿ ಆನ್ ಲೈನ್ ಪಾಲ್ಗೊಳ್ಳುವೆ. --Vikashegde (ಚರ್ಚೆ) ೦೬:೦೫, ೩೦ ಅಕ್ಟೋಬರ್ ೨೦೧೭ (UTC)[]
 5. -- ೪-೫ ಆಗುವುದಿಲ್ಲ; ಆನ್‍ಲೈನ್‍ನಲ್ಲಿ ಬೇರೆ ದಿನಗಳಲ್ಲಿ ಪಾಲ್ಗೊಳ್ಳುವೆ --ವಿಶ್ವನಾಥ/Vishwanatha (ಚರ್ಚೆ) ೧೦:೩೪, ೩೦ ಅಕ್ಟೋಬರ್ ೨೦೧೭ (UTC)[]

ಸಾಮಾಜಿಕ ಜಾಲತಾಣಗಳ ಕೊಂಡಿ ಮುಖಪುಟದಲ್ಲಿಸಂಪಾದಿಸಿ

  ನಡೆಯುತ್ತಿರುವ ಚರ್ಚೆ ...
ಕನ್ನಡ_ವಿಕಿಪೀಡಿಯದ_ಸಾಮಾಜಿಕ_ಜಾಲತಾಣಗಳ_ಸಮುದಾಯಗಳ ಲಿಂಕ್ ಸೇರಿಸಿ ಟೆಂಪ್ಲೇಟ್ ತಯಾರಿಸಲಾಗಿದೆ.ಮುಖಪುಟದಲ್ಲಿ ಸೇರಿಸುವ ಬಗ್ಗೆ ಚರ್ಚೆ.---Sangappadyamani (ಚರ್ಚೆ) ೦೩:೧೫, ೨೬ ಅಕ್ಟೋಬರ್ ೨೦೧೭ (UTC)[]

ಸಮ್ಮತಿಸಂಪಾದಿಸಿ

 1. --Gopala Krishna A (ಚರ್ಚೆ) ೧೪:೪೬, ೨೮ ಅಕ್ಟೋಬರ್ ೨೦೧೭ (UTC)[]
 2. --ಅನಂತ್ (ಚರ್ಚೆ) ೦೭:೩೩, ೨೯ ಅಕ್ಟೋಬರ್ ೨೦೧೭ (UTC)[]
 3. --Vikashegde (ಚರ್ಚೆ) ೦೬:೦೬, ೩೦ ಅಕ್ಟೋಬರ್ ೨೦೧೭ (UTC)[]
 4. --ವಿಶ್ವನಾಥ/Vishwanatha (ಚರ್ಚೆ) ೧೦:೩೦, ೩೦ ಅಕ್ಟೋಬರ್ ೨೦೧೭ (UTC)[]

ಅಸಮ್ಮತಿಸಂಪಾದಿಸಿ

ಚರ್ಚೆಸಂಪಾದಿಸಿ

 •   -ಇದನ್ನು ಯಾರೂ ನಡೆಸುತ್ತಿರುವಂತೆ ಕಾಣುತ್ತಿಲ್ಲ. ಇದನ್ನು ತೆಗೆಯಬಹುದು. ಉಳಿದೆರಡನ್ನು ನಡೆಸುತ್ತಿರುವವರಲ್ಲಿ ನಾನೂ ಒಬ್ಬ.--ಪವನಜ (ಚರ್ಚೆ) ೦೫:೦೧, ೨೯ ಅಕ್ಟೋಬರ್ ೨೦೧೭ (UTC)[]
 • ಇದರಲ್ಲಿ ೨೫೩ ಸದಸ್ಯರು ಇದ್ದು ,ಓಂ ಓಂ ಶಿವ ಪ್ರಕಾಶ್ ರವರು ಅಡ್ಮಿನ್ ಅನಿಸುತ್ತೆ. ಅವರಲ್ಲಿ ವಿಚಾರಿಸಿದರೆ ಮಾಹಿತಿ ಸಿಗಬಹುದು.
 • ಇದೆ ಹೆಸರಿನಲ್ಲಿ ಇನ್ನೊಂದು ಸಮುದಾಯ ಇದೆ.ಅದರಲ್ಲಿ ೭೮ ಜನ ಇದ್ದಾರೆ Kannada Wikipedia - ಕನ್ನಡ ವಿಕಿಪೀಡಿಯ.
 • ೨೫೩ ಸದಸ್ಯರಿರುವ ಪುಟವನ್ನು @ಓಂಶಿವಪ್ರಕಾಶ್ ರವರ ಜತೆ ಚರ್ಚಿಸಿ ಮುಂದುವರೆಸಬಹುದು. Sangappadyamani (ಚರ್ಚೆ) ೧೮:೧೪, ೨೯ ಅಕ್ಟೋಬರ್ ೨೦೧೭ (UTC)[]
 • ಐಕಾಸ್ ಗಾತ್ರಗಳು ಇನ್ನೊಂದು ಸ್ವಲ್ಪ ದೊಡ್ಡದಾಗಿ ಮಾಡಲು ಸಾಧ್ಯವಾದರೆ ಚೆನ್ನಾಗಿರುತ್ತದೆ ಅನ್ನಿಸಿತು. ಗೂಗಲ್ ಪ್ಲಸ್ ಗುಂಪು ನಿಷ್ಕ್ರಿಯವಾಗಿದೆ. ಅದನ್ನು ತೆಗೆಯಬಹುದು ಅಥವಾ ನಡೆಸುಗರ ಜೊತೆ ಚರ್ಚಿಸಿ ನಿರ್ಧರಿಸಬಹುದು. --Vikashegde (ಚರ್ಚೆ) ೦೬:೦೬, ೩೦ ಅಕ್ಟೋಬರ್ ೨೦೧೭ (UTC)[]

ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೬೮ಸಂಪಾದಿಸಿ

ಕರ್ನಾಟಕ ರಾಜ್ಯೋತ್ಸವ ವಿಶೇಷ ಬರಹ ಲೇಖನ ತಯಾರಿಸಲಾಗಿದೆ.ಸಮುದಾಯದವರು ಪರಿಶೀಲಿಸಲು ವಿನಂತಿ.---Sangappadyamani (ಚರ್ಚೆ) ೦೩:೧೫, ೨೬ ಅಕ್ಟೋಬರ್ ೨೦೧೭ (UTC)[]

ಈ ಲೇಖನವನ್ನು ಎಲ್ಲಿಯಾದರೂ ಪ್ರಕಟಿಸುವ ಯೋಜನೆಯಿದೆಯೇ? --ವಿಶ್ವನಾಥ/Vishwanatha (ಚರ್ಚೆ) ೧೮:೫೦, ೩೦ ಅಕ್ಟೋಬರ್ ೨೦೧೭ (UTC)[]
ಈ ಲೇಖನವನ್ನು ಮುಖ್ಯಪುಟದ ವಿಶೇಷ ಲೇಖನ ಅಂಕಣದಲ್ಲಿ ಪ್ರಕಟಿಸಲಾಗುವುದು. ★ Anoop / ಅನೂಪ್ © ೧೯:೨೬, ೩೦ ಅಕ್ಟೋಬರ್ ೨೦೧೭ (UTC)[]

ವಿಕಿಕೋಟ್ಸ್ ಗೆ ಗ್ಯಾಜೆಟ್ಗಳ ಅಳವಡಿಕೆಸಂಪಾದಿಸಿ

  ನಡೆಯುತ್ತಿರುವ ಚರ್ಚೆ ...
ವಿಕಿಕೋಟ್ಸ್ ಗೆ ಹಾಟ್ ಕ್ಯಾಟ್ ನಂತಹ ಗ್ಯಾಜೆಟ್ಗಳನ್ನು ಅಳವಡಿಸಲು ವಿನಂತಿ.---Sangappadyamani (ಚರ್ಚೆ) ೦೩:೧೧, ೨೬ ಅಕ್ಟೋಬರ್ ೨೦೧೭ (UTC)   ಬೆಂಬಲ- ವಿಕಿಕೋಟ್ಸ್‌ಗೆ ಗ್ಯಾಜೆಟ್ಟುಗಳ ಅವಶ್ಯಕತೆ ಇದೆ. ಇದನ್ನು ಅಳವಡಿಸಬೇಕಾಗಿ ಅಡ್ಮಿನ್‌ಗಳಲ್ಲಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೯:೦೨, ೧೩ ಫೆಬ್ರುವರಿ ೨೦೧೮ (UTC)[]

ಕನ್ನಡ ವಿಕಿಪೀಡಿಯ ಲೇಖನದ ಕನಿಷ್ಠ ಮಿತಿಸಂಪಾದಿಸಿ

ಕನ್ನಡ ವಿಕಿಪೀಡಿಯ ಲೇಖನಗಳಿಗೆ ಕನಿಷ್ಠ ಮಿತಿಯಿದೆಯಷ್ಟೆ (೨MB). ಆದರೆ ಬಳಕೆದಾರರಿಗೆ ನಿಜವಾದ ಉಪಯೋಗವಾಗಲು ಇಷ್ಟು ವಸ್ತು ಸಾಲದು. ಅದಕ್ಕೆ ಈಗಿರುವ ಗಾತ್ರದ ಮಿತಿಯೊಂದಿಗೆ ಲೇಖನದ ವಿಭಾಗಗಳ ಮಿತಿಯನ್ನೂ ಹಾಕಿದರೆ ಹೇಗೆ? ಉದಾ: ವ್ಯಕ್ತಿಗಳ ಲೇಖನಗಳಲ್ಲಿ ಕನಿಷ್ಠ ಬಾಲ್ಯ ಮತ್ತು ಶಿಕ್ಷಣ, ವೃತ್ತಿ, ಹೆಸರುವಾಸಿಯಾದ ಕೆಲಸಗಳು, ಇಷ್ಟನ್ನು ಅಗತ್ಯ ವಿಭಾಗಗಳೆಂದು ಮಾಡಬಹುದೆ? ರಾಜ್ಯೋತ್ಸವದ ಸಂದರ್ಭದಲ್ಲಿ ಇದನ್ನು ಅಧಿಕೃತಗೊಳಿಸಬಹುದೆ? --ವಿಶ್ವನಾಥ/Vishwanatha (ಚರ್ಚೆ) ೨೦:೩೫, ೨೯ ಅಕ್ಟೋಬರ್ ೨೦೧೭ (UTC)[]

@ ವಿಶ್ವನಾಥ/Vishwanatha, ನನಗೆ ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ ೨mb ಗಾತ್ರ ಗರಿಷ್ಠ (ಕನಿಷ್ಠ ಅಲ್ಲ) ಹಾಗು ಈ ಮಿತಿಯಲ್ಲಿ ನೀವು ತುಂಬಾ(ಸುಮಾರು ೫-೬ ಪುಟ) ಮಾಹಿತಿ ಸೇರಿಸಬಹುದು. ★ Anoop / ಅನೂಪ್ © ೦೩:೪೨, ೩೦ ಅಕ್ಟೋಬರ್ ೨೦೧೭ (UTC)[]
೨KB ಬರೆಯುವ ಬದಲು ೨MB ಬರೆದಿದ್ದೆ. --ವಿಶ್ವನಾಥ/Vishwanatha (ಚರ್ಚೆ) ೦೮:೫೦, ೩೦ ಅಕ್ಟೋಬರ್ ೨೦೧೭ (UTC)[]
ಈಗ ಕನ್ನಡ ವಿಕಿಪೀಡಿಯಕ್ಕೆ ಯಾವುದೇ ಹೊಸ ಲೇಖನ ಸೇರಿಸಬೇಕಾದರೆ ಅದು ಕನಿಷ್ಠ ೨೦೪೮ (2k) ಬೈಟ್‍ಗಳನ್ನು ಹೊಂದಿರಬೇಕು. 2mb ಅಲ್ಲ. ಈ ಮಿತಿ ಮೂಲತಃ ಇಂಗ್ಲಿಶ್ ವಿಕಿಪೀಡಿಯದಿಂದ ಬಂದುದು. ಇಂಗ್ಲಿಶ್ ಭಾಷೆಯಲ್ಲಿ 2kb ಅಂದರೆ ಸುಮಾರು ೨೦೦೦ ಪದ ಆಗುತ್ತದೆ. ಅಂದರೆ ೧ ಬೈಟ್ = ೧ ಅಕ್ಷರ (UTF-8). ಆದರೆ ಭಾರತೀಯ ಭಾಷೆಗಳಿಗೆ ೩ ಬೈಟ್ = ೧ ಅಕ್ಷರ. ಇದರ ಪ್ರಕಾರ ನಾವು ಒಂದು ಲೇಖನದ ಕನಿಷ್ಠ ಗಾತ್ರವನ್ನು ೬೧೪೪ ಬೈಟ್ ಇಟ್ಟುಕೊಳ್ಳಬೇಕಾಗುತ್ತದೆ. ಕನಿಷ್ಠ ಮಿತಿ ಇಲ್ಲದಿದ್ದರೆ ಜನ ಒಂದು ಸಾಲಿನ ಲೇಖನ ಸೇರಿಸುತ್ತಾರೆ. ಈ ಮಿತಿ ಹಾಕುವ ಮೊದಲು ಅಂತಹ ಸಾಕಷ್ಟು ಲೇಖನಗಳು ಬಂದಿವೆ. ಬಹುತೇಕ ಲೇಖನಗಳು ಕೆಲವು ಸಿನಿಮಾ, ಊರುಗಳ ಬಗ್ಗೆ ಇವೆ. ಅವುಗಳಲ್ಲಿ ಹೆಚ್ಚಿನವನ್ನು ಅಳಿಸಿ ಹಾಕಲಾಗಿದೆ. ಹೀಗೆ ಅಳಿಸದೆ ಇದ್ದಿದ್ದರೆ ಕನ್ನಡ ವಿಕಿಪೀಡಿಯದ ಲೇಖನಗಳ ಸಂಖ್ಯೆ ೩೦ ಸಾವಿರ ದಾಟುತ್ತಿತ್ತು. ಆದರೆ ಈ ನಿಯಮದಿಂದಾಗಿ ಗುಣಮಟ್ಟ ಹೆಚ್ಚಾಗಿದೆ. ಸಂಖ್ಯೆ ಹೆಚ್ಚಾಗಿಲ್ಲ (quality vs quantity). ವ್ಯಕ್ತಿಗಳ ಬಗ್ಗೆ ಮತ್ತು ಇತರೆ ವಿಷಯಗಳ ಬಗ್ಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಸಲಹೆ ಇಲ್ಲಿದೆ.--ಪವನಜ (ಚರ್ಚೆ) ೦೫:೫೩, ೩೦ ಅಕ್ಟೋಬರ್ ೨೦೧೭ (UTC)[]
ವಿಭಾಗಗಳ ಮಿತಿಯನ್ನು ಹಾಕುವುದು ಅಷ್ಟು ಉಚಿತವಲ್ಲ ಅಂತ ನನ್ನ ಅಭಿಪ್ರಾಯ. ಆದರೆ ತಾಂತ್ರಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಕ್ಷರ ಮಿತಿ (ಬೈಟ್ಸ್) ಹೆಚ್ಚಿಸಬಹುದು. --Vikashegde (ಚರ್ಚೆ) ೦೬:೧೧, ೩೦ ಅಕ್ಟೋಬರ್ ೨೦೧೭ (UTC)[]
ಅಕ್ಷರಮಿತಿಯಾದರೂ ಸರಿಯೆ. ಈಗಿರುವ ಮಿತಿಯಲ್ಲಿ, ಪವನಜರು ಹೇಳಿದ ಹಾಗೆ, ೩-೪ ಸಾಲುಗಳಲ್ಲೇ ಮುಗಿಯುತ್ತವೆ. ಲೇಖನಗಳು ಕೇವಲ ನೆಪಕ್ಕಾಗಿ ಬರೆದಿರುವ ಹಾಗಿವೆ. ಕನಿಷ್ಠ ಮಿತಿ ೬ ಅಥವ ೭ ಕೆಬಿ ಮಾಡಬಹುದೇ? --ವಿಶ್ವನಾಥ/Vishwanatha (ಚರ್ಚೆ) ೦೮:೫೦, ೩೦ ಅಕ್ಟೋಬರ್ ೨೦೧೭ (UTC)[]

ಅಕ್ಟೋಬರ್ ತಿಂಗಳ ವರದಿಸಂಪಾದಿಸಿ

ಕಳೆದ ತಿಂಗಳಿನಲ್ಲಿ ವಿವಿಧ ವಿಶ್ವವಿದ್ಯಾಲಯಗಳಿಗೆ ಮತ್ತು ಸರಕಾರಿ ಸಂಸ್ಥೆಗಳಿಗೆ ಮತ್ತು ಅಧಿಕಾರಿಗಳಿಗೆ ಮಿಂಚಂಚೆಯನ್ನು ಕಳಿಸಿದ್ದೇನೆ. ಅವರಿಂದ ಯಾವುದೇ ಉತ್ತರ ಈ ವರೆಗೆ ಬಂದಿಲ್ಲ. ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣಾ ಸಂಪಾದನೋತ್ಸವ 2017 ಮತ್ತು ವಿಕಿಪೀಡಿಯ ಏಷ್ಯನ್ ತಿಂಗಳು 2017ರನ್ನು ಸಂಘಟಿಸುತ್ತಿದ್ದೇನೆ. ಈ ಪ್ರಯುಕ್ತ ಗುಬ್ಬಿ ಲ್ಯಾಬ್‌ ಅವರೊಂದಿಗೆ ಮಾತಾಡಿ ಅವರೂ ನಮ್ಮ ಜೊತೆ ಕೈಜೋಡಿಸುತ್ತಿದ್ದಾರೆ. ಗುಬ್ಬಿ ಲ್ಯಾಬ್‌ ಜೊತೆ ಸೇರಿ ಮೊದಲಿಗೆ ಕರ್ನಾಟಕದ ವನ್ಯಜೀವಿಗಳ ಬಗ್ಗೆ ಲೇಖನಗಳನ್ನು ಸೇರಿಸುವ ಯೋಜನೆ ಮತ್ತು ಅವುಗಳನ್ನು ವಿಕಿಡೇಟಾಕ್ಕೂ ಸೇರಿಸುವುದು ಎಂಬುವುದನ್ನು ನಿರ್ಧರಿಸಿದ್ದೇವೆ. ಇದಕ್ಕಾಗಿ ನವೆಂಬರ್ ತಿಂಗಳಿನಲ್ಲಿ ಒಂದು ಕಾರ್ಯಾಗಾರವನ್ನು ನಡೆಸುವುದು ಎಂದೂ ತೀರ್ಮಾನಿಸಿದ್ದೇವೆ. ಇದಕ್ಕಾಗಿ ದಿನಾಂಕವನ್ನು ನಿರ್ಧರಿಸಬೇಕಷ್ಟೇ. ಪುಸ್ತಕಗಳ ಪರಿಚಯವನ್ನು ಕನ್ನಡ ವಿಕಿಪೀಡಿಯದಲ್ಲಿ ಪ್ರಾರಂಭಿಸಬೇಕೆಂಬುದು ನನ್ನ ಆಶಯ. ಇದಕ್ಕಾಗಿ ಮುನ್ನೋಟ, ಆಕೃತಿ ಮುಂತಾದ ಪುಸ್ತಕ ಮಳಿಗೆ, ಅಡಿಗ ಅಂಗಳ, ಋತುಮಾನಗಳ ಮುಖ್ಯಸ್ಥರ ಜೊತೆ ಮಾತನಾಡಿದ್ದೇನೆ. ಅವರು ಯೋಚನೆಯನ್ನು ಮೆಚ್ಚಿದ್ದಾರೆ. ಮುಂದಿನ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ.

ಮುಂದಿನ ತಿಂಗಳ ಯೋಜನೆಸಂಪಾದಿಸಿ

 • ವಿಕಿಸೋರ್ಸ್‌ನಲ್ಲಿ ಸಾಕಷ್ಟು ಕೆಲಸಗಳು ಬಾಕಿ ಇವೆ. ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶಕ್ಕೆ ಅಕಾರಾದಿ ವರ್ಗೀಕರಣ ಆಗಬೇಕಿದೆ. ಈ ಕೆಲಸವನ್ನು ನವೆಂಬರ್ ತಿಂಗಳಿನಲ್ಲಿ ಮಾಡಬೇಕು. ಕಾಮನ್ಸ್‌ನಲ್ಲಿರುವ ಹೆಚ್ಚಿನ ಪುಸ್ತಕಗಳನ್ನು ವಿಕಿಸೋರ್ಸ್‌ಗೆ ಈಗಾಗಲೇ ಸೇರಿಸಲಾಗಿದೆ. ಮುಂದೆ ಕೆಲವು ಪುಸ್ತಕಗಳನ್ನು ಸೇರಿಸಬೇಕಿದೆ. ಅದಕ್ಕಿಂತ ಮೊದಲು ಇರುವ ಪುಸ್ತಕಗಳನ್ನು ಪೂರ್ಣಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ.
 • ವಿಕಿಡೇಟಾದಲ್ಲಿ ಭಾರತೀಯ ಮಟ್ಟದಲ್ಲಿ ಒಂದು ಯೋಜನೆ ಶುರುವಾಗಿದೆ. ಅದರಲ್ಲಿ ಈಗಾಗಲೇ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇನೆ. ಇದು ಅಸಫ್ ಅವರ ವಿಕಿಡೇಟಾ ಕಾರ್ಯಾಗಾರದ ನಂತರ ಪ್ರಾರಂಭವಾದ ಯೋಜನೆ. ಅದೇ ಯೋಜನೆಯನ್ನು ಕನ್ನಡ ವಿಕಿಪೀಡಿಯ ಸಮುದಾಯದ ಕಡೆಗೆ ಕೊಂಡುಹೋಗಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಒಂದು PPT ಯನ್ನು ಅಥವಾ ಕೈಪಿಡಿಯನ್ನು ಮಾಡಿ ಕನ್ನಡ ಸಮುದಾಯಕ್ಕೆ ಹಂಚಬೇಕೆಂದಿದ್ದೇನೆ.
 • ನವೆಂಬರ್ ತಿಂಗಳಿನಲ್ಲಿ ಸಮ್ಮಿಲನವನ್ನು ಏರ್ಪಡಿಸಬೇಕೆಂದಿದ್ದೇನೆ. ವಿಕಿಪೀಡಿಯ ಸಮುದಾಯದವರಾದ ವಿಕಾಸ್ ಹೆಗಡೆ ಮತ್ತು ಸಂಗಪ್ಪ ದ್ಯಾಮಣಿ ಅವರನ್ನು ಮಾತಾಡಿಸಿದ್ದಾಗ ಅಟೋ ವಿಕಿ ಬ್ರೌಸರ್ (AWB) ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ಉತ್ತಮ. ಈ ಬಗ್ಗೆ ಒಂದು ಕಾರ್ಯಾಗಾರವನ್ನು ಏರ್ಪಡಿಸಿ ಎಂದು ಕೇಳಿದ್ದಾರೆ. ಅದನ್ನು ಈ ತಿಂಗಳು ಮಾಡಬೇಕೆಂದಿದ್ದೇನೆ.
 • ಸರಕಾರಿ ಸಂಸ್ಥೆಗಳಾದ ಡಿ.ಎಸ್.ಸಿ.ಆರ್.ಟಿಗೆ ಭೇಟಿ ನೀಡಿ ಈಗಾಗಲೇ ಇರುವ ಯೋಜನೆಯನ್ನು ಪುನಃ ಪ್ರಾರಂಭಿಸಬೇಕು ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿಗಳಿಗೆ ಭೇಟಿನೀಡಿ ಅವರಲ್ಲಿ ವಿಕಿಪೀಡಿಯಕ್ಕೆ ಸಹಾಯ ಮಾಡುವಂತೆ ಕೇಳಿಕೊಳ್ಳಬೇಕು.

ನನಗೆ ನೀಡಿದ ಮೂರು ತಿಂಗಳಿನ ಅವಧಿ ನಿನ್ನೆಗೆ ಮುಕ್ತಾಯವಾಗಿದೆ. ಇನ್ನೂ ಮಾಡಬೇಕಾದ ಕೆಲಸಗಳು ತುಂಬಾ ಇವೆ. ಇದಕ್ಕಾಗಿ ನಾನು ಇನ್ನೂ ಹೆಚ್ಚಿನ ಅವಧಿ ನೀಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ. ಮೂರು ತಿಂಗಳ ನನ್ನ ಕೆಲಸದ ಪುಟ ಇಲ್ಲಿದೆ. --Gopala Krishna A (ಚರ್ಚೆ) ೦೪:೩೫, ೨ ನವೆಂಬರ್ ೨೦೧೭ (UTC)[]

ವನ್ಯಜೀವಿಗಳ ಲೇಖನಗಳ ಕಾರ್ಯಕ್ರಮ ಒಳ್ಳೆಯ ಯೋಜನೆ. ಈ ಮೂರು ತಿಂಗಳಿನ ಒಟ್ಟಾರೆ ವರದಿ ಮತ್ತು ನೀವು ಆರಂಭಿಸುವ ಮೊದಲು ಇದ್ದ ಕೆಲಸಗಳ ಪಟ್ಟಿಯಿದ್ದರೆ ಮುಂದಿನ ನಿರ್ಧಾರಕ್ಕೆ ಅನುಕೂಲ. ಈ ಮೊದಲು ಅರಳಿಕಟ್ಟೆಯಲ್ಲಿ ತಿಳಿಸಿದಂತೆ PAಯ ವರದಿಗಳಿಗೆ ಒಂದು ವಿಕಿಪುಟ ಇನ್ನೂ ತಯಾರಾಗಿಲ್ಲ (ಆಗಿದ್ದರೆ ಇಲ್ಲಿ ತಿಳಿಸಿ). ಈ ವಿಕಿಪುಟದಲ್ಲಿ ಎಲ್ಲಾ PAಗಳ ಸಮಗ್ರ ವರದಿ ಸಿಗುವ ಹಾಗಿರಬೇಕು. ಇದರಿಂದ ಒಂದು ಶಿಸ್ತಿನಲ್ಲಿ ಕೆಲಸ ಮಾಡಲು ಸಹಾಯವಾಗುತ್ತದೆ. ಹೆಚ್ಚಿನ ಅವಧಿಗೆ ನನ್ನ ಸಮ್ಮತಿಯಿದೆ. --ವಿಶ್ವನಾಥ/Vishwanatha (ಚರ್ಚೆ) ೧೯:೩೯, ೧ ನವೆಂಬರ್ ೨೦೧೭ (UTC)[]
ಹಾಕಿದ್ದೇನೆ. --Gopala Krishna A (ಚರ್ಚೆ) ೦೪:೩೬, ೨ ನವೆಂಬರ್ ೨೦೧೭ (UTC)[]
   ಸರಿ --ವಿಶ್ವನಾಥ/Vishwanatha (ಚರ್ಚೆ) ೨೦:೨೭, ೨ ನವೆಂಬರ್ ೨೦೧೭ (UTC)[]

ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"�"ಸಂಪಾದಿಸಿ

  ನಡೆಯುತ್ತಿರುವ ಚರ್ಚೆ ...
ಸಂಖ್ಯೆಗಳು ಉಪಯೋಗಿಸಲ್ಪಡುವ ಟೆಂಪ್ಲೇಟುಗಳಲ್ಲಿ ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"�" ಎಂಬ ದೋಷವು ಕೆಲವೊಮ್ಮೆ ಕಾಣುತ್ತದೆ. ಇದು ಜನನ,ಮರಣಕ್ಕೆ ಸಂಬಂಧಿಸಿದ ಟೆಂಪ್ಲೇಟುಗಳಲ್ಲಿ ಕಾಣುತ್ತಿತ್ತು (ಇದರಲ್ಲಿ: {{Death date and age}}). ಇದರ ಪರಿಹಾರ ಹೀಗೆ: ಟೆಂಪ್ಲೇಟ್ ವೇರಿಯಬಲ್ {{CURRENTYEAR}}ಅನ್ನು ಅದರ ಬದಲಾಗಿ, ಹೀಗೆ {{formatnum:{{CURRENTYEAR}}|R}} ಬಳಸಬೇಕು (ಹೆಚ್ಚಿನ ಮಾಹಿತಿ). ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು: ಕನ್ನಡ ಲಿಪಿಯ ಸಂಖ್ಯೆಗಳನ್ನು mathematical expressionsಗಳಲ್ಲಿ ಉಪಯೋಗಿಸಲು ಸಾಧ್ಯವಿಲ್ಲ. ಇಂತಹ ಕಡೆ "formatnum" ಉಪಯೋಗಿಸಬೇಕು. ಹಾಗೆಯೇ, ದೊಡ್ಡ ಸಂಖ್ಯೆಗಳಲ್ಲಿ "," ಸಂಕೇತಗಳನ್ನು ತೆಗೆಯಲು ಸಹ ಇದನ್ನು ಉಪಯೋಗಿಸಬೇಕು. --ವಿಶ್ವನಾಥ/Vishwanatha (ಚರ್ಚೆ) ೧೯:೫೪, ೧ ನವೆಂಬರ್ ೨೦೧೭ (UTC)[]

CIS-A2K Newsletter August September 2017ಸಂಪಾದಿಸಿ

Hello,
CIS-A2K has published their newsletter for the months of August and September 2017. Please find below details of our August and September newsletters:

August was a busy month with events across our Marathi and Kannada Focus Language Areas.

 1. Workshop on Wikimedia Projects at Ismailsaheb Mulla Law College, Satara
 2. Marathi Wikipedia Edit-a-thon at Dalit Mahila Vikas Mandal
 3. Marathi Wikipedia Workshop at MGM Trust's College of Journalism and Mass Communication, Aurangabad
 4. Orientation Program at Kannada University, Hampi

Please read our Meta newsletter here.

September consisted of Marathi language workshop as well as an online policy discussion on Telugu Wikipedia.

 1. Marathi Wikipedia Workshop at Solapur University
 2. Discussion on Creation of Social Media Guidelines & Strategy for Telugu Wikimedia

Please read our Meta newsletter here: here
If you want to subscribe/unsubscribe this newsletter, click here.

Sent using --MediaWiki message delivery (ಚರ್ಚೆ) ೦೪:೨೩, ೬ ನವೆಂಬರ್ ೨೦೧೭ (UTC)[]

೨೦೧೭ ಸಮುದಾಯದ ಬಯಕೆಪಟ್ಟಿ ಸಮೀಕ್ಷೆಸಂಪಾದಿಸಿ

ಎಲ್ಲರಿಗೂ ನಮಸ್ಕಾರ,

ಮುಂದಿನ ವರ್ಷದಲ್ಲಿ ವಿಕಿಮೀಡಿಯ ಫೌಂಡೇಶನ್'ನ ಕಮ್ಯೂನಿಟಿ ಟೆಕ್ ಯಾವ ಕೆಲಸ ಮಾಡಬೇಕೆಂದು ವಿಕಿಮೀಡಿಯಾ ಸಮುದಾಯಗಳು ನಿರ್ಧರಿಸುವುದು ಸಮುದಾಯ ಬಯಕೆಪಟ್ಟಿಗೆ ಸಮೀಕ್ಷೆಯ ಒಂದು ಪ್ರಕ್ರಿಯೆಯಾಗಿದೆ.

ಅನುಭವಿ ವಿಕಿಮೀಡಿಯ ಸಂಪಾದಕರಿಗೆ ಅನುಕೂಲವಾಗುವ ಸಲಕರಣೆಗಳನ್ನು ಒದಗಿಸುವುದು ಸಮುದಾಯ ಟೆಕ್ ತಂಡದ ಕೇಂದ್ರ ನಿಲುವಾಗಿದೆ. ನೀವು ನವೆಂಬರ್ ೨೦ ರವರೆಗೆ ತಾಂತ್ರಿಕ ಪ್ರಸ್ತಾಪಗಳನ್ನು ಪೋಸ್ಟ್ ಮಾಡಬಹುದು. ನವೆಂಬರ್ ೨೮ ಮತ್ತು ಡಿಸೆಂಬರ್ ೧೨ ರ ನಡುವಿನ ಪ್ರಸ್ತಾವನೆಗಳ ಮೇಲೆ ಸಮುದಾಯಗಳು ಮತ ಚಲಾಯಿಸುತ್ತವೆ. ೨೦೧೭ ಬಯಕೆಪಟ್ಟಿಗೆ ಸಮೀಕ್ಷೆ ಪುಟದಲ್ಲಿ ನೀವು ಹೆಚ್ಚು ಓದಬಹುದು. Johan (WMF) (ಚರ್ಚೆ) ೨೦:೩೧, ೮ ನವೆಂಬರ್ ೨೦೧೭ (UTC)[]

Featured Wikimedian [November 2017]ಸಂಪಾದಿಸಿ

On behalf of Wikimedia India, I hereby announce the Featured Wikimedian for November 2017.

Balaji Jagadesh is one of the top contributors from the Tamil Wikimedia community. Though he started contributing since 2009, he was quite active after his participation in WikiConference India 2011. Initially he started contributing to Tamil Wikipedia, but was later attracted towards Tamil Wikisource, Tamil Wikitionary, and Wikidata. His global contributions count to whooping 2,50,000 edits. He is an admin on Tamil Wikitionary.

After his interaction with Mr. Loganathan (User:Info-farmer), Balaji was very much motivated to contribute to Wikimedia projects. He says, "When I was editing in Tamil Wikipedia, I used to translate science articles from English to Tamil. But faced problem in finding equivalent Tamil words. The English to Tamil dictionaries were inadequate. Hence I felt the need to work in the Tamil Wikitionary. After a while there was a collaboration with Tamil Wikisource and Tamil Nadu Government through Tamil Virtual University through 2000 CC0 books were uploaded".

As an active contributor to Wikidata, he says that the vision of Wikimedia movement is, "Imagine a world in which every single human being can freely share in the sum of all knowledge", but with Wikidata we can make it, "Imagine a world in which every single human being and every single machine can freely share in the sum of all knowledge". Apart from regular contributions, he also created templates to Tamil Wikimedia projects, and also maintains Tamil Wikisource's official Twitter handle.

Balaji hails from Coimbatore, Tamil Nadu, and is a post-graduate is Physics. He currently works as a Senior Geophysicist in Oil and Natural Gas Corporation Limited (ONGC).

Any editor can propose a fellow to be a Featured Wikimedia at: http://wiki.wikimedia.in/Featured_Wikimedian/Nominations

MediaWiki message delivery (ಚರ್ಚೆ) ೦೯:೫೯, ೧೦ ನವೆಂಬರ್ ೨೦೧೭ (UTC)[]

Changes to the global ban policyಸಂಪಾದಿಸಿ

Hello. Some changes to the community global ban policy have been proposed. Your comments are welcome at m:Requests for comment/Improvement of global ban policy. Please translate this message to your language, if needed. Cordially. Matiia (Matiia) ೦೦:೩೪, ೧೨ ನವೆಂಬರ್ ೨೦೧೭ (UTC)[]

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿಸಂಪಾದಿಸಿ

ಕನ್ನಡ ವಿಕಿಪೀಡಿಯದ ಬಗ್ಗೆ ಕನ್ನಡ ಅಭಿವೃಧ್ಧಿ ಪ್ರಾಧಿಕಾರವನ್ನು ಸಂಪರ್ಕಿಸಲು ಕಳೆದ ತಿಂಗಳು ಪ್ರಯತ್ನಿಸಿದ್ದೆ. ಈ ಬಗ್ಗೆ ಅವರು ಉತ್ತರಿಸಿ ಕೆಲವೇ ನಿಮಿಷಗಳ ಮೊದಲು ನಾಳೆ ಅಂದರೆ ದಿನಾಂಕ ೧೬ ನವೆಂಬರ್ ೨೦೧೭ರಂದು ಅಪರಾಹ್ನ ಭಾರತೀಯ ಕಾಲಮಾನ ೩:೦೦ ಘಂಟೆಗೆ ಸರಿಯಾಗಿ ಅಧ್ಯಕ್ಷರು ಭೇಟಿಗೆ ಸಮಯ ನೀಡಿದ್ದಾರೆ ಎಂದು ಕರೆ ಬಂತು. ಈ ಕಾರ್ಯಕ್ರಮದಲ್ಲಿ ಸಮುದಾಯ ಸದಸ್ಯರು ಯಾರಾದರೂ ಭಾಗವಹಿಸಲು ಆಸಕ್ತಿ ಇದ್ದರೆ ನನಗೆ (bhat.gka666 gmail.com) ಅಥವಾ ತಂಡದ ಸದಸ್ಯರಿಗೆ (tanveer cis-india.org) ಮುಂಚಿತವಾಗಿ ತಿಳಿಸಬೇಕಾಗಿ ವಿನಂತಿ. --Gopala Krishna A (ಚರ್ಚೆ) ೧೧:೩೫, ೧೫ ನವೆಂಬರ್ ೨೦೧೭ (UTC)[]

ಸಭೆಯಲ್ಲಿ ಏನನ್ನು ಚರ್ಚಿಸಲಾಯಿತು ಮತ್ತು ಏನು ತೀರ್ಮಾನವಾಯಿತು?--ಪವನಜ (ಚರ್ಚೆ) ೧೭:೫೪, ೧೬ ನವೆಂಬರ್ ೨೦೧೭ (UTC)[]
ಸಮಾಲೋಚನೆಯಲ್ಲಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳು ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ ಮುಂದೊಂದು ದಿನ ಸಮಾಲೋಚನೆ ಹಮ್ಮಿಕೊಳ್ಳುವುದು ಎಂದು ತೀರ್ಮಾನಿಸಲಾಯಿತು. --Gopala Krishna A (ಚರ್ಚೆ) ೦೭:೦೦, ೨೦ ನವೆಂಬರ್ ೨೦೧೭ (UTC)[]

ಕನ್ನಡ ಪುಸ್ತಕಗಳನ್ನು ಸ್ಕ್ಯಾನ್ ಮಾಡುವ ಕುರಿತುಸಂಪಾದಿಸಿ

ಕರಾವಳಿ ವಿಕಿಮೀಡಿಯನ್ಸ್‌ ಮಂಗಳೂರಿನ ಕನ್ನಡ ವಿಕಿಪೀಡಿಯ ಲೇಖಕರಿಗೆ ಬುಕ್‌ಸ್ಕ್ಯಾನ್ ಯಂತ್ರದ ಅಗತ್ಯವಿದೆ. ಸಿಐಎಸ್ ಬಳಿ ನಾಲ್ಕು ಸ್ಕ್ಯಾನ್ ಯಂತ್ರವಿದೆಯೆಂದು ಈ ಹಿಂದೆ ರಹಮಾನುದ್ದೀನ್ ಶೇಕ್ ಹೇಳಿದ್ದರು. ಒಮ್ಮೆ ಅದನ್ನು ಮಂಗಳೂರಿನಲ್ಲಿ ಒಂದು ತಿಂಗಳ ಮಟ್ಟಿಗೆ ಇರಿಸಿದ್ದರು. ಅದನ್ನು ವಿಜಯವಾಡದಲ್ಲಿ ಸ್ಕ್ಯಾನ್ ಮಾಡಲು ಬೇಕೆಂದು ಅನಂತ ಸುಬ್ರಯ(ಆಗಿನ ಕನ್ನಡ ವಿಕಿಪೀಡಿಯ ಸಮುದಾಯ ಪಿಎ) ಕೊಂಡು ಹೋದರು. ಇತ್ತೀಚೆಗೆ ಇದೇ ವಿಚಾರವನ್ನು ತನ್ವೀರ್ ಜೊತೆ ಕೇಳಿದಾಗ ನಮ್ಮಲ್ಲಿ ಇರುವ ನಾಲ್ಕರಲ್ಲಿ ಒಂದು ರಿಪೇರಿಯಲ್ಲಿದೆ. ಉಳಿದಿರುವ ಮೂರು ಬೇರೆ ಸಮುದಾಯದಲ್ಲಿ ಇವೆಯೆಂದು ಹೇಳಿದ್ದರು. ಈಗ ಕನ್ನಡದ ಕೆಲಸಕ್ಕೆ ಸ್ಕ್ಯಾನರ್‍ನ ಅಗತ್ಯವಿದೆ. ಕನ್ನಡದ ಪುಸ್ತಕಗಳು ಸ್ಕ್ಯಾನ್ ಆಗುತ್ತಿರುವಂತೆ ಕಾಣಿಸುತ್ತಿಲ್ಲ. ಸದ್ಯಕ್ಕೆ ನಮಗೆ ನಾಲ್ಕರಲ್ಲಿ ಒಂದು ಸ್ಕ್ಯಾನರ್‍ನ ಅಗತ್ಯವಿದೆ. ಈ ಬಗ್ಗೆ ಸಮುದಾಯದವರು ಏನು ಹೇಳುತ್ತೀರಿ? ಸಿಐಎಸ್‌ನವರು ಸ್ಕ್ಯಾನರ್ ಒದಗಿಸಿಕೊಡುವಿರಾ?---Vishwanatha Badikana (ಚರ್ಚೆ) ೧೬:೫೬, ೧೬ ನವೆಂಬರ್ ೨೦೧೭ (UTC)[]

ಕನ್ನಡದ ಪ್ರಥಮ ಪತ್ರಿಕೆ ಪ್ರಾರಂಭವಾದುದು ಮಂಗಳೂರಿನಲ್ಲಿ. ಕನ್ನಡದ ಅತಿ ಹಳೆಯ ಹಲವು ಪುಸ್ತಕಗಳು ಪ್ರಕಟವಾದುದು ಮಂಗಳೂರಿನಿಂದ. ಮಂಗಳೂರಿನ ಕೆಲವು ಗ್ರಂಥಾಲಯಗಳಲ್ಲಿ ಅತಿ ಹಳೆಯ ಪುಸ್ತಕಗಳಿವೆ. ಅವುಗಳಲ್ಲಿ ಬಹುತೇಕ ಹಕ್ಕುಸ್ವಾಮ್ಯ ಮುಗಿದವು. ಅವುಗಳನ್ನು ಸ್ಕ್ಯಾನ್ ಮಾಡಿ ಕನ್ನಡ ವಿಕಿಸೋರ್ಸ್‍ಗೆ ಸೇರಿಸಬಹುದು. ಈ ಕಾರ್ಯಕ್ಕೆ ಸ್ಕ್ಯಾನರ್ ಅಗತ್ಯವಿದೆ. ಸಮುದಾಯದ ಕೆಲಸಕ್ಕೆಂದು ಸಿಐಎಸ್ ಕೊಂಡುಕೊಂಡ (ಹಲವು ಸ್ಕ್ಯಾನರ್‍ಗಳನ್ನು ಹೋಲಿಸಿ, ಪರಿಶೀಲಿಸಿ, ಯಾವುದನ್ನು ಕೊಳ್ಳಬಹುದೆಂದು ತೀರ್ಮಾನಿಸಿದ್ದು ನಾನು, ಸಿಐಎಸ್‍ನಲ್ಲಿದ್ದಾಗ) ೪ ಸ್ಕ್ಯಾನರ್‍ಗಳಲ್ಲಿ ಒಂದನ್ನು ಉತ್ತಮ ಕೆಲಸ ಮಾಡುತ್ತಿರುವ ಕರಾವಳಿ ವಿಕಿಮೀಯನ್ಸ್‍ನವರಿಗೆ ಬಳಸಲು ಕೊಡಬಹುದು ಎಂದು ನನ್ನ ಅಭಿಪ್ರಾಯ.--ಪವನಜ (ಚರ್ಚೆ) ೧೮:೦೦, ೧೬ ನವೆಂಬರ್ ೨೦೧೭ (UTC)[]
@Vishwanatha Badikana: ನಿಮ್ಮ ಕೋರಿಕೆಗೆ ಧನ್ಯವಾದಗಳು. ಸ್ಕ್ಯಾನರ್‌ ಅನ್ನು ಒದಗಿಸಿ ಕೊಡುತ್ತೇವೆ. ಸದಸ್ಯ:Pavanaja ನಿಮ್ಮ ಸಲಹೆಗಳಿಗೆ ಧನ್ಯವಾದಗಳು. --Gopala Krishna A (ಚರ್ಚೆ) ೦೮:೫೮, ೨೧ ನವೆಂಬರ್ ೨೦೧೭ (UTC).[]
ಕರಾವಳಿ ವಿಕಿಮಿಡಿಯನ್ಸ್ ತಂಡಕ್ಕೆ ಆದಷ್ಟು ಬೇಗ ಸ್ಕ್ಯಾನರ್ ಯಂತ್ರವನ್ನು ಒದಗಿಸುವಿರೆಂದು ನಾವು ನಂಬಿರುತ್ತೆವೆ.--Lokesha kunchadka (ಚರ್ಚೆ) ೧೦:೨೯, ೨೧ ನವೆಂಬರ್ ೨೦೧೭ (UTC)[]
ಸ್ಕ್ಯಾನರ್ ಒದಗಿಸುವುದು ಏನಾಯಿತು?--ಪವನಜ (ಚರ್ಚೆ) ೧೧:೫೨, ೨೩ ಜನವರಿ ೨೦೧೮ (UTC)[]

@Pavanaja: ಮೊದಲು ನಿಮಗೆ ತಿಳಿಸಿದಂತೆ ಹಂಪಿಯಲ್ಲಿ ಸ್ಕ್ಯಾನಿಂಗ್ ಕೆಲಸ ಮುಗಿಸಿದ ನಂತರ ಸ್ಕ್ಯಾನರ್ ಒದಗಿಸುತ್ತೇವೆ. --ಗೋಪಾಲಕೃಷ್ಣ (ಚರ್ಚೆ) ೧೨:೦೬, ೨೩ ಜನವರಿ ೨೦೧೮ (UTC)[]

ಗುಬ್ಬಿ ಸಂಶೋಧನಾಲಯದ ಕಾರ್ಯಾಗಾರಸಂಪಾದಿಸಿ

ಗುಬ್ಬಿ ಸಂಶೋಧನಾಯದ ಜೊತೆ ಸೇರಿ ಸಿಐಎಸ್-ಏ೨ಕೆ ತಂಡ ಇದೇ ಬರುವ ಭಾನುವಾರ ಅಂದರೆ ನವೆಂಬರ್ ೨೬ರಂದು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಭಾಗವಹಿಸಲು ಆಸಕ್ತಿ ಇರುವವರು ತಮ್ಮ ಹೆಸರನ್ನು ಈ ಪುಟದಲ್ಲಿ ನೊಂದಾಯಿಸಬೇಕಾಗಿ ವಿನಂತಿ. --Gopala Krishna A (ಚರ್ಚೆ) ೧೧:೪೮, ೨೦ ನವೆಂಬರ್ ೨೦೧೭ (UTC)[]

New print to pdf feature for mobile web readersಸಂಪಾದಿಸಿ

CKoerner (WMF) (talk) ೨೨:೦೭, ೨೦ ನವೆಂಬರ್ ೨೦೧೭ (UTC)[]

ಶಿವಮೊಗ್ಗದಲ್ಲಿ ಸಂಪಾದನೋತ್ಸವ ನಡೆಸುವ ಬಗ್ಗೆಸಂಪಾದಿಸಿ

ಕನ್ನಡ ಸಾಹಿತ್ಯಕ್ಕೆ ಮಲೆನಾಡಿನ ಸಾಹಿತಿಗಳ ಕೊಡುಗೆ ಅಪಾರ. ಈ ಭಾಗದಲ್ಲಿ ವಿಕಿಪೀಡಿಯಾವನ್ನು ಹೆಚ್ಚಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ಜನವರಿ ೬ ಮತ್ತು ೭ ರಂದು ಶಿವಮೊಗ್ಗದಲ್ಲಿ ಸಂಪಾದನೋತ್ಸವ ಆಯೋಜಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ---Vchetans(ಚರ್ಚೆ)

ಮುಂದಿನ ತಿಂಗಳ ವಿಕಿಪೀಡಿಯ ಸಾಧಕರ ಬಗ್ಗೆಸಂಪಾದಿಸಿ

ಹಿಂದಿನ ತಿಂಗಳ ವಿಕಿಪೀಡಿಯ ಸಾಧಕರನ್ನು ಆರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ಮುಂದಿನ (ನವೆಂಬರ್) ತಿಂಗಳ ವಿಕಿಪೀಡಿಯ ಸಾಧಕರನ್ನು ಆರಿಸಬೇಕಾಗಿ ವಿನಂತಿ. --Gopala Krishna A (ಚರ್ಚೆ) ೦೭:೨೫, ೨೯ ನವೆಂಬರ್ ೨೦೧೭ (UTC)[]

ಇದು ತನಕ ಯಾರನ್ನೆಲ್ಲ ಸಾಧಕರೆಂದು ಪರಿಚಯಿಸಲಾಗಿದೆ?--ಪವನಜ (ಚರ್ಚೆ) ೦೭:೫೦, ೨೯ ನವೆಂಬರ್ ೨೦೧೭ (UTC)[]
ಪಟ್ಟಿ ಸಿಕ್ಕಿತು--ಪವನಜ (ಚರ್ಚೆ) ೦೭:೫೪, ೨೯ ನವೆಂಬರ್ ೨೦೧೭ (UTC)[]
ನನ್ನ ಸಲಹೆ -ಧನಲಕ್ಷ್ಮಿ ಕೆ.ಟಿ. ಆಗಬಹುದು ಎಂದು.--ಪವನಜ (ಚರ್ಚೆ) ೦೮:೦೭, ೨೯ ನವೆಂಬರ್ ೨೦೧೭ (UTC)[]
 1. --ಸದಸ್ಯ:Dhanalakshmi .K. T ಅವರನ್ನು ಆಯ್ಕೆ ಮಾಡಲು ನನ್ನ ಬೆಂಬಲವಿದೆ. ★ Anoop / ಅನೂಪ್ © ೧೫:೩೫, ೨೯ ನವೆಂಬರ್ ೨೦೧೭ (UTC)[]
 2. ಸದಸ್ಯ:Dhanalakshmi .K. T ಅವರನ್ನು ಆಯ್ಕೆ ಮಾಡಲು ನನ್ನ ಬೆಂಬಲವಿದೆ.__Sangappadyamani (ಚರ್ಚೆ) ೧೫:೫೨, ೨೯ ನವೆಂಬರ್ ೨೦೧೭ (UTC)[]
 3. ಧನಲಕ್ಷ್ಮಿ ಕೆ.ಟಿ.ಯವರು ಒಪ್ಪಿಗೆ ಇದೆ...--Vikashegde (ಚರ್ಚೆ) ೧೩:೫೧, ೩೦ ನವೆಂಬರ್ ೨೦೧೭ (UTC)[]
 4. ಧನಲಕ್ಷ್ಮಿ ಕೆ.ಟಿ. ಆಗಬಹುದು.--Lokesha kunchadka (ಚರ್ಚೆ) ೦೩:೩೫, ೧ ಡಿಸೆಂಬರ್ ೨೦೧೭ (UTC)[]
 5. ಸದಸ್ಯ:Dhanalakshmi .K. T ಅವರನ್ನು ಆಯ್ಕೆ ಮಾಡಲು ನನ್ನ ಬೆಂಬಲವಿದೆ.--ಕೆ.ಸೌಭಾಗ್ಯವತಿ (ಚರ್ಚೆ) ೧೨:೩೬, ೬ ಡಿಸೆಂಬರ್ ೨೦೧೭ (UTC)[]

ಭಾರತೀಯ ಭಾಷಾ ವಿಕಿಪೀಡಿಯನ್ನರಿಗೆ ಸಹಕಾರಸಂಪಾದಿಸಿ

ಭಾರತೀಯ ಭಾಷಾ ವಿಕಿಪೀಡಿಯನ್ನರಿಗಾಗಿ ವಿಕಿಮೀಡಿಯ ಫೌಂಡೇಷನ್, ಸಿಐಸ್-ಏ೨ಕೆ ಮತ್ತು ಗೂಗಲ್‌ನ ನೇತ್ರತ್ವದಲ್ಲಿ ಸಹಾಯ ನೀಡುವ ಕಾರ್ಯಕ್ರಮವು ನಡೆಯುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೆಟಾ ಪುಟಕ್ಕೆ ಭೇಟಿ ನೀಡಿರಿ. ಕಾರ್ಯಕ್ರಮವನ್ನು ಉತ್ತಮವಾಗಿ ರೂಪಿಸಲು ನಿಮ್ಮ ಸಲಹೆಗಳ ಅಗತ್ಯವಿದೆ. ಇದಕ್ಕಾಗಿ tavnveer cis-india.org ಅಥವಾ tito cis-india.org ಅಥವಾ rayyakkannu wikimedia.org ಅವರನ್ನು ಸಂಪರ್ಕಿಸಬೇಕಾಗಿ ವಿನಂತಿ. --Gopala Krishna A (ಚರ್ಚೆ) ೧೦:೧೭, ೨೯ ನವೆಂಬರ್ ೨೦೧೭ (UTC)[]

ಆಳ್ವಾಸ್ ನುಡಿಸಿರಿ ಸಂಪಾದನೋತ್ಸವ, ಮೂಡುಬಿದಿರೆ, ದಶಂಬರ ೦೧-೦೩, ೨೦೧೭ಸಂಪಾದಿಸಿ

ಆಳ್ವಾಸ್ ನುಡಿಸಿರಿ, ಮೂಡುಬಿದಿರೆಯಲ್ಲಿ ಕರಾವಳಿ ವಿಕಿಮೀಡಿಯನ್ಸ್ ವತಿಯಿಂದ ಸಂಪಾದನೋತ್ಸವ ಆಯೋಜಿಸಲಾಗಿದೆ. ವಿವರಗಳಿಗೆ ಹಾಗೂ ನೋಂದಣಿಗೆ ಈ ಪುಟ ನೋಡಿ.--ಪವನಜ (ಚರ್ಚೆ) ೦೨:೧೨, ೧ ಡಿಸೆಂಬರ್ ೨೦೧೭ (UTC)[]

Train The Trainer 2018 (TTT-2018)ಸಂಪಾದಿಸಿ

ವಿಕಿಮೀಡಿಯ ತರಬೇತುದಾರರಿಗಾಗಿ ನಡೆಯುವ ತರಬೇತು ಕಾರ್ಯಕ್ರಮ ೨೦೧೮ (TTT - 2018) ಜನವರಿ ೨೬,೨೭ ಮತ್ತು ೨೮ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಆಸಕ್ತ ವಿಕಿಪೀಡಿಯನ್ನರು ಭಾಗವಹಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೆಟಾ ಪುಟಕ್ಕೆ ಭೇಟಿನೀಡಬೇಕಾಗಿ ವಿನಂತಿ. ಈ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಲು ನಿಮ್ಮ ಸಲಹೆಗಳೂ ಮುಖ್ಯವಾಗಿದೆ. ಸಲಹೆಗಳನ್ನು ನೀಡಲು tanveer cis-india.org ಅಥವಾ tito cis-india.org ಗೆ ಮಿಂಚಂಚೆಯನ್ನು ಕಳುಹಿಸಬೇಕಾಗಿ ವಿನಂತಿ. --Gopala Krishna A (ಚರ್ಚೆ) ೦೯:೨೬, ೧ ಡಿಸೆಂಬರ್ ೨೦೧೭ (UTC)[]

Featured Wikimedian [December 2017]ಸಂಪಾದಿಸಿ

Greetings, on behalf of Wikimedia India, I, Krishna Chaitanya Velaga introduce you to the Featured Wikimedian of the Month for December 2017, Hrishikes Sen.

Hrishikes Sen is one of the most active contributors from the Bengali community. Though he started editing English and Bengali Wikipedia in 2007, he had to take a long break due to professional constraints. Later he started working on Bengali Wikisource from 2012, and ever since, he has been an active contributor, and expanded to English Wikisource as well. With more than 45,000 global edits, he is an admin on English Wikisource.

As a child, Hrishikes always found reading books as a fascinating task. He says that he finds reference books as interesting as mystery novels. That interest, over years motivated him to contribute to Wikisource. The journey and motivation behind his contributions to Wikisource can be read from a post on WMF's blog, Why I contribute to Wikisource?. He says that till date he's been only active online, but he plans to do outreach in the coming future. He hopes that attending the 10th Anniversary Celebratory Workshop of Bengali Wikisource in Kolkata on 10 December may be a harbinger to his future offline activities.

Hrishikes believes that Wikisource will one day emerge as of the top digital libraries in the world, and says that as a store-house for primary and secondary source materials for Wikipedia, the importance of Wikisource is steadily becoming invaluable. Much of his time, Hrishikes spends working around Indian works, with a special focus on the works of Bankim Chandra Chattopadhyay, Jagadish Chandra Bose, and Rabindranath Tagore. Apart from being a proofreader, he uploaded more than 750 books spreading over five languages to Wikimedia Commons.

Hrishikes hails from Kolkata, but is presently based in Lucknow. By profession, he is a doctor serving in paramilitary forces. To his Bengali friends, he welcomes them to contribute to Bengali Wikisource which has more than 676,000 that have completed Optical Character Recognition and are waiting to be proofread.

Nomination can be made at: http://wiki.wikimedia.in/Featured_Wikimedian/Nominations

MediaWiki message delivery (ಚರ್ಚೆ) ೧೩:೦೯, ೧ ಡಿಸೆಂಬರ್ ೨೦೧೭ (UTC)[]

CIS-A2K Newsletter October 2017ಸಂಪಾದಿಸಿ

Hello,
CIS-A2K has published their newsletter for the months of October 2017. The edition includes details about these topics:

 • Marathi Wikipedia - Vishwakosh Workshop for Science writers in IUCAA, Pune
 • Bhubaneswar Heritage Edit-a-thon
 • Odia Wikisource anniversary
 • CIS-A2K signs MoU with Telangana Government
 • Indian Women Bureaucrats: Wikipedia Edit-a-thon
 • Interview with Asaf Bartov

Please read the complete newsletter here.
If you want to subscribe/unsubscribe this newsletter, click here. Sent using --MediaWiki message delivery (ಚರ್ಚೆ) ೦೫:೪೪, ೪ ಡಿಸೆಂಬರ್ ೨೦೧೭ (UTC)[]

ಕರ್ನಾಟಕ ರಾಜ್ಯೋತ್ಸವ ಸಂಪಾದನೋತ್ಸವ ೨೦೧೭ಸಂಪಾದಿಸಿ

ಕರ್ನಾಟಕ ರಾಜ್ಯೋತ್ಸವ ಸಂಪಾದನೋತ್ಸವ ೨೦೧೭ರಲ್ಲಿ ಭಾಗವಹಿಸಿದ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಮತ್ತು ಅಭಿನಂದನೆಗಳು. ಈ ಸಂಪಾದನೋತ್ಸವದಲ್ಲಿ ಒಟ್ಟಾಗಿ ಎಲ್ಲಾ ಭಾಷಾ ವಿಕಿಪೀಡಿಯಗಳಲ್ಲಿ ೬೩ ಹೊಸ ಲೇಖನಗಳು ಸೃಷ್ಠಿಯಾಗಿದ್ದು, ಮರು ಸಂಪಾದಿಸಿದ್ದು ಮತ್ತು ವಿಸ್ತರಿಸಿದ್ದು ೩೪ ಲೇಖನಗಳು. ಸರಿ ಸುಮಾರು ೪೮ ಹೊಸ ಲೇಖನಗಳು ಕನ್ನಡ ವಿಕಿಪೀಡಿಯದಲ್ಲಿ ಸೃಷ್ಠಿಯಾಗಿದೆ. ೧೫ ಲೇಖನಗಳು ಇತರ ಭಾಷಾ ವಿಕಿಪೀಡಿಯಗಳಲ್ಲಿ ಸಂಪಾದನೆಯಾಗಿವೆ. ಈ ಸಂಪಾದನೋತ್ಸವದಲ್ಲಿ ಭಾಗವಹಿಸಿದವರಿಗೆ ಧನ್ಯವಾದಗಳನ್ನು ತಿಳಿಸಲು ಪೋಸ್ಟ್ ಕಾರ್ಡುಗಳನ್ನು ಕಳುಹಿಸಿಕೊಟ್ಟರೆ ಹೇಗೆ ಎಂಬುದು ನನ್ನ ಅಭಿಪ್ರಾಯ. ಈ ಬಗ್ಗೆ ಸಮುದಾಯ ಸದಸ್ಯರು ನಿಮ್ಮ ಸಲಹೆಗಳನ್ನು ನೀಡಬೇಕಾಗಿ ವಿನಂತಿ. --Gopala Krishna A (ಚರ್ಚೆ) ೦೮:೧೨, ೬ ಡಿಸೆಂಬರ್ ೨೦೧೭ (UTC)[]


ಮೈಸೂರು ಕಾರ್ಯಾಗಾರ ೨೦೧೮ಸಂಪಾದಿಸಿ

ದಿನಾಂಕ ೨೩ ಡಿಸೆಂಬರ್ ೨೦೧೭ರಂದು ಮೈಸೂರಿನ ಹೊರವರ್ತುಲ ರಸ್ತೆಯಲ್ಲಿರುವ ವಿವೇಕಾನಂದ ನಾಯಕತ್ವ ಅಭಿವೃದ್ಧಿ ಕಾಲೇಜಿನಲ್ಲಿ ವಿಕಿಪೀಡಿಯ ಕಾರ್ಯಾಗಾರ ನಡೆಸಲಾಗುವುದು. ಸಮುದಾಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿ. ಭಾಗವಹಿಸುವವರು ಈ ಪುಟದಲ್ಲಿ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿ. --Gopala Krishna A (ಚರ್ಚೆ) ೧೦:೦೬, ೧೯ ಡಿಸೆಂಬರ್ ೨೦೧೭ (UTC)[]

Call for Wikimania 2018 Scholarshipsಸಂಪಾದಿಸಿ

Hi all,

We wanted to inform you that scholarship applications for Wikimania 2018 which is being held in Cape Town, South Africa on July 18–22, 2018 are now being accepted. Applications are open until Monday, 22 January 2018 23:59 UTC.

Applicants will be able to apply for a partial or full scholarship. A full scholarship will cover the cost of an individual's round-trip travel, shared accommodation, and conference registration fees as arranged by the Wikimedia Foundation. A partial scholarship will cover conference registration fees and shared accommodation. Applicants will be rated using a pre-determined selection process and selection criteria established by the Scholarship Committee and the Wikimedia Foundation, who will determine which applications are successful. To learn more about Wikimania 2018 scholarships, please visit: wm2018:Scholarships.

To apply for a scholarship, fill out the multi-language application form on: https://scholarships.wikimedia.org/apply

It is highly recommended that applicants review all the material on the Scholarships page and the associated FAQ before submitting an application. If you have any questions, please contact: wikimania-scholarships at wikimedia.org or leave a message at: wm2018:Talk:Scholarships. Please help us spread the word and translate pages!

Best regards, David Richfield and Martin Rulsch for the Scholarship Committee ೧೯:೨೪, ೨೦ ಡಿಸೆಂಬರ್ ೨೦೧೭ (UTC)[]

User group for Military Historiansಸಂಪಾದಿಸಿ

Greetings,

"Military history" is one of the most important subjects when speak of sum of all human knowledge. To support contributors interested in the area over various language Wikipedias, we intend to form a user group. It also provides a platform to share the best practices between military historians, and various military related projects on Wikipedias. An initial discussion was has been done between the coordinators and members of WikiProject Military History on English Wikipedia. Now this discussion has been taken to Meta-Wiki. Contributors intrested in the area of military history are requested to share their feedback and give suggestions at Talk:Discussion to incubate a user group for Wikipedia Military Historians.

MediaWiki message delivery (ಚರ್ಚೆ) ೧೦:೪೬, ೨೧ ಡಿಸೆಂಬರ್ ೨೦೧೭ (UTC)[]

ಜನವರಿ ತಿಂಗಳ ವಿಕಿಪೀಡಿಯ ಸಾಧಕರ ಆಯ್ಕೆಸಂಪಾದಿಸಿ

ಮುಂದಿನ ತಿಂಗಳ ವಿಕಿಪೀಡಿಯ ಸಾಧಕರನ್ನು ಆಯ್ಕೆ ಮಾಡಿ ಚರ್ಚೆ ನಡೆಸಿ ಚುನಾಯಿಸಬೇಕಾಗಿ ವಿನಂತಿ. ಸಾಧಕರ ಪಟ್ಟಿ ಇಲ್ಲಿದೆ. --Gopala Krishna A (ಚರ್ಚೆ) ೦೭:೫೪, ೨೮ ಡಿಸೆಂಬರ್ ೨೦೧೭ (UTC)[]

Radhatanaya ರವರನ್ನು (ಹೊಳಲ್ಕೆರೆ ರಂಗರಾವ್ ಲಕ್ಷ್ಮೀವೆಂಕಟೇಶ್) ಈಗಾಗಲೇ ಆಯ್ಕೆ ಮಾಡಲಾಗಿದೆ.

@Anoop Rao:,---ಸದಸ್ಯ:Radhatanaya ರನ್ನು ಹೋದ ವರ್ಷ ವಿಕಿ ಸಾಧಕರನ್ನಾಗಿ ಆಯ್ಕೆ ಮಾಡಲಾಗಿದೆ.--Gopala Krishna A (ಚರ್ಚೆ) ೦೫:೦೬, ೨೯ ಡಿಸೆಂಬರ್ ೨೦೧೭ (UTC)[]

ಅನೂಪ್ ರಾವ್ ಯಾವಾಗ ಆಗಿದ್ದು? ಸಾಧಕರ ಪಟ್ಟಿಯಲ್ಲಿ ಅವರ ಹೆಸರಿಲ್ಲ--ಪವನಜ (ಚರ್ಚೆ) ೦೯:೪೭, ೨೯ ಡಿಸೆಂಬರ್ ೨೦೧೭ (UTC)[]
ಅನೂಪ್ ರಾವ್ ಮತ್ತು ಲೋಕೇಶ್ ಕುಂಚಡ್ಕ ಇವರಿಬ್ಬರಲ್ಲಿ ಯಾರಾದರೂ ಆಗಬಹುದು--ಪವನಜ (ಚರ್ಚೆ) ೦೭:೫೭, ೪ ಜನವರಿ ೨೦೧೮ (UTC)[]
ಈ ಬಾರಿ ಲೋಕೇಶ್ ಕುಂಚಡ್ಕ ಅವರಿಗೆ ನನ್ನ ಮತ. ಜನವರಿ ಕೊನೆಯಾಗುತ್ತಿರುವುದರಿಂದ ಫೆಬ್ರವರಿಗೆ ಆಯ್ಕೆಯನ್ನು ಪರಿಗಣಿಸಬಹುದು --Vikashegde (ಚರ್ಚೆ) ೦೮:೧೪, ೨೩ ಜನವರಿ ೨೦೧೮ (UTC)[]

ಕರ್ನಾಟಕ ಲೋಕಸಭಾ ಚುನಾವಣೆ, ೨೦೦೪ / ೨೦೧೪ಸಂಪಾದಿಸಿ

"ಕರ್ನಾಟಕ ಲೋಕಸಭಾ ಚುನಾವಣೆ ೨೦೦೪ "

ಈ ಪುಟವನ್ನು ಈ ಸರಣಿಯ ಇತರ ಪುಟಗಳ ಹಾಗೆ ಸರಿಪಡಿಸಬೇಕು ಮತ್ತು 2014 ರ ದಕ್ಕೆ ಒಂದು ಪುಟ ಮಾಡಬೇಕು Shreekant.mishrikoti (ಚರ್ಚೆ) ೦೧:೫೦, ೩೧ ಡಿಸೆಂಬರ್ ೨೦೧೭ (UTC)[]

Wikigraphists Bootcamp (2018 India)ಸಂಪಾದಿಸಿ

Greetings,

It is being planned to organize Wikigraphists Bootcamp in India, please fill out the survey form to help the organizers. Your responses will help organizers understand what level of demand there is for the event (how many people in your community think it is important that the event happens). At the end of the day, the participants will turn out to have knowledge to create drawings, illustrations, diagrams, maps, graphs, bar charts etc. and get to know to how to tune the images to meet the QI and FP criteria. For more information and link to survey form, please visit Talk:Wikigraphists Bootcamp (2018 India). MediaWiki message delivery (ಚರ್ಚೆ) ೧೨:೪೩, ೧೫ ಜನವರಿ ೨೦೧೮ (UTC)[]

ವಿಕಿಸೋರ್ಸ್‌ಗೆ ನಿರ್ವಾಹಕರುಗಳ ಅಗತ್ಯತೆ ಇದೆಸಂಪಾದಿಸಿ

ಕನ್ನಡ ವಿಕಿಸೋರ್ಸ್‌ನಲ್ಲಿ ನಿರ್ವಾಹಕರುಗಳ ಅಗತ್ಯ ಇದೆ. ಈ ಹಿಂದೆ Pavanaja (talk · contribs) ಮತ್ತು Anoop Rao (talk · contribs) ತಾತ್ಕಾಲಿಕವಾಗಿ ನಿರ್ವಾಹಕರಾಗಿದ್ದರು. ಇವರ ನಿರ್ವಾಗಕರ ಅವಧಿ ಮುಗಿದಿದೆ. ಸದ್ಯಕ್ಕೆ ವಿಕಿಸೋರ್ಸ್‌ನಲ್ಲಿ ಯಾವುದೇ ನಿರ್ವಾಹಕರಿಲ್ಲ. ಹೀಗಾಗಿ ಪವನಜ ಮತ್ತು ಅನೂಪ್ ರಾವ್ ಅವರಲ್ಲಿ ಪೂರ್ಣ ಸಮಯದದ ನಿರ್ವಾಹಕರಾಗಿ ಭಡ್ತಿ ಪಡೆಯಲು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಬೇಕಾಗಿ ವಿನಂತಿ. ಅಥವಾ ಇತರ ಯಾವುದಾದರೂ ಅನುಭವಿ ಸದಸ್ಯರಿಗೆ ಆಸಕ್ತಿ ಇದ್ದಲ್ಲಿ ಸ್ವಯಂ ಆಗಿ ಮುಂದೆ ಬಂದು ಉಮೇದುವಾರಿಕೆ ಸಲ್ಲಿಬೇಕಾಗಿ ವಿನಂತಿ. ಈ ಚರ್ಚೆ ವಿಕಿಸೋರ್ಸ್‌ನ ಅರಳಿಕಟ್ಟೆಯಲ್ಲಿ ನಡೆಸಬೇಕಾಗಿ ವಿನಂತಿ. ಇಲ್ಲಿ ಹಾಕಿದ್ದು ಕೇವಲ ಮಾಹಿತಿಗಾಗಿ. --Gopala Krishna A (ಚರ್ಚೆ) ೧೦:೪೧, ೧೭ ಜನವರಿ ೨೦೧೮ (UTC)[]

ಶಿವಮೊಗ್ಗದಲ್ಲಿ ಮುಂದುವರೆದ ಸಂಪಾದನೋತ್ಸವ ನಡೆಸುವ ಬಗ್ಗೆಸಂಪಾದಿಸಿ

ಜನವರಿ ೬ ಮತ್ತು ೭ರಂದು ಶಿವಮೊಗ್ಗದಲ್ಲಿ ಸಂಪಾದನೋತ್ಸವ ಯಶಸ್ವಿಯಾಗಿ ನಡೆಯಿತು. ಇದರ ಮುಂದುವರೆದ ಸಂಪಾದನೋತ್ಸವವನ್ನು ಫ಼ೆಬ್ರವರಿ ೧೭ ಮಾತು ೧೮ ರಂದು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗೆ ಈ ಪುಟವನ್ನು ನೋಡಿ---Vchetans(ಚರ್ಚೆ)

Wikigraphists Bootcamp Survey Reminderಸಂಪಾದಿಸಿ

Greetings,

As it has already been notified about Wikigraphists Bootcamp in India, for training related to creation drawings, illustrations, diagrams, maps, graphs, bar charts etc. and to tune the images to meet the QI and FP criteria, please fill the survey form linked from Talk:Wikigraphists Bootcamp (2018 India). It'll help the organizers to assess the needs of the community, and plan accordingly. Please ignore if already done. Krishna Chaitanya Velaga ೦೩:೦೩, ೨೧ ಜನವರಿ ೨೦೧೮ (UTC)[]

ಕನ್ನಡ ವಿಕಿಗಳ ನಿರ್ವಾಹಕ ಸ್ಥಾನಕ್ಕೆ ಅರ್ಜಿ (Applying to sysop in Kannada Wikis)ಸಂಪಾದಿಸಿ

ನಾನು ಕನ್ನಡ ವಿಕಿಗಳಲ್ಲಿ ನಿರ್ವಾಹಕನಾಗಲು ಇಲ್ಲಿ ಪ್ರಕಟಿಸುತಿದ್ದೇನೆ, -> ವಿಕಿಪೀಡಿಯ:ನಿರ್ವಾಹಕ_ಮನವಿ_ಪುಟ#Anoop_Rao

ನಾನು ಈ ಮೇಲಿನ ವಿಕಿಗಳನ್ನು ಸಕ್ರಿಯವಾಗಿ ನಿರ್ವಹಿಸುತ್ತೇನೆ. ಬಹುತೇಕರಿಗೆ ಗೊತ್ತಿರುವ ಹಾಗೆ ನಾನು ಅನೂಪ್ ರಾವ್ ವಿಕಿಪಿಡಿಯದಲ್ಲಿ ೧ ವರುಷದಿಂದ ಸಕ್ರಿಯವಗಿದ್ದೇನೆ. ಇತ್ತೀಚಿಗೆ ನಾನು FANDOM'ನ ಸ್ವಯಂಸೇವಕ ಸ್ಪ್ಯಾಮ್ ಟಾಸ್ಕ್ ಫೋರ್ಸ್'ಗೆ ಆಯ್ಕೆಯಾಗಿದ್ದೇನೆ , FANDOMನಲ್ಲಿ ಕನ್ನಡ ಬಳಕೆದಾರರ ಸಂಖ್ಯೆ ಕಡಿಮೆ ಇರುವುದರಿಂದ ಇಲ್ಲಿ ನನಗೆ ಉತ್ತಮ ಅವಕಾಶ ಎಂದು ಅರ್ಜಿ ಸಲ್ಲಿಸಿದ್ದೇನೆ ಹಾಗು ವಿಕಿಸೋರ್ಸ್ , ವಿಕಿ ಶಬ್ದಕೋಶ , ವಿಕಿ ಉಕ್ತಿ ನಲ್ಲಿ ಯಾವುದೆ ಸಕ್ರಿಯ ನಿರ್ವಾಹಕರಿಲ್ಲ. ಹಾಗು ಕನ್ನಡದ ಬಳಕೆದಾರರಿಗೆ Pywikibot, Auto wiki browser (AWB) ,ಇತ್ಯದಿ ಹೊಸ ವಿಕಿ ಸದನಗಳನ್ನು ಪರಿಚಯಿಸುವುದು ನನ್ನ ಉದ್ದೇಶ. ಹಾಗು ಸುಮಾರು ೧ ವರುಷದಿಂದ ತಾಂತ್ರಿಕ ಸುದ್ದಿಗಳನ್ನು ಕನ್ನಡ ಮತ್ತು ಹಿಂದಿ ಬಾಷೆಯಲ್ಲಿ ಅನುವಾದಿಸುತ್ತಿದ್ದೇನೆ. ★ Anoop / ಅನೂಪ್ © ೦೪:೧೨, ೨೨ ಜನವರಿ ೨೦೧೮ (UTC)[]

 1.  Y ನಾನು ಬೆಂಬಲಿಸುತ್ತೇನೆ. I support --ಪವನಜ (ಚರ್ಚೆ) ೦೪:೩೦, ೨೨ ಜನವರಿ ೨೦೧೮ (UTC)[]
 2.  Yನಾನು ಬೆಂಬಲಿಸುತ್ತೇನೆ-Lokesha kunchadka (ಚರ್ಚೆ) ೧೦:೩೬, ೨೨ ಜನವರಿ ೨೦೧೮ (UTC)[]
 3.  Yನಾನು ಬೆಂಬಲಿಸುತ್ತೇನೆ-ವಿದ್ಯಾಧರ ಚಿಪ್ಳಿ (ಚರ್ಚೆ) ೧೪:೨೮, ೨೪ ಜನವರಿ ೨೦೧೮ (UTC)[]

ಚರ್ಚೆಸಂಪಾದಿಸಿ

ಇದಕ್ಕಾಗಿ ನಿರ್ವಾಹಕ ಮನವಿ ಪುಟ ಇದೆಯಲ್ಲವೇ!? ಕೋರಿಕೆ ಸಲ್ಲಿಸುವ ಜೊತೆಗೆ ತಮ್ಮ ಬಗ್ಗೆ ಪರಿಚಯ, ವಿಕಿಕೆಲಸದ ಚುಟುಕಾದ ವಿವರಗಳು ಇತ್ಯಾದಿಗಳನ್ನು ಬರೆದರೆ ಚೆನ್ನಾಗಿರುತ್ತದೆ --Vikashegde (ಚರ್ಚೆ) ೦೮:೨೭, ೨೨ ಜನವರಿ ೨೦೧೮ (UTC)[]

ಏಕೆಂದರೆ ಬಹು ವಿಕಿ ನಿರ್ವಹಣೆ ಪ್ರಯುಕ್ತ ಇಲ್ಲಿ ಚರ್ಚೆ ಮಡುವುದು ಸೂಕ್ತ ಅನಿಸಿತು. ಹಾಗು ಪರಿಚಯ ಮತ್ತು ವಿವರವನ್ನು ಸೆರಿಸುತ್ತೇನೆ. ★ Anoop / ಅನೂಪ್ © ೧೧:೩೮, ೨೨ ಜನವರಿ ೨೦೧೮ (UTC)[]
ಪ್ರತ್ಯೇಕ ವಿಕಿಯೋಜನೆಗಳಲ್ಲಿ ನಿರ್ವಾಹಕ ಕೋರಿಕೆ ಪುಟಗಳಿವೆ. ಅಲ್ಲಿ ಮನವಿ ಸಲ್ಲಿಸಿ. ಅಲ್ಲಿನ ಅರಳಿಕಟ್ಟೆಯಲ್ಲಿ ಆ ಬಗ್ಗೆ ಹಾಕಿ. ಆ ಎಲ್ಲಾ ನಿರ್ವಾಹಕ ಕೋರಿಕೆ ಪುಟಗಳ ಕೊಂಡಿಗಳನ್ನು ಇಲ್ಲಿ ಹಾಕಿ ಹೀಗೆ ಕೋರುತ್ತಿದ್ದೇನೆ ಅಂತ ಮಾಹಿತಿ ಬರೆಯಿರಿ. ಅಂದರೆ ನೀವು ನಾಲ್ಕು ಕಡೆ ಪ್ರತ್ಯೇಕ ಕೋರಿಕೆಗಳು, ಹಾಗು ನಾಲ್ಕು ಕಡೆ ಅರಳಿಕಟ್ಟೆಯ ಪ್ರಕಟಣೆ ಹಾಕಬೇಕಾಗುತ್ತದೆ. ಮತದಾನ ನಡೆಯಬೇಕಾಗಿರುವುದು ಪ್ರತಿಯೊಂದು ಯೋಜನೆಯ 'ನಿರ್ವಾಹಕ ಕೋರಿಕೆ ಪುಟದಲ್ಲಿ' ಅಥವಾ ಎಲ್ಲಾ ಕೋರಿಕೆಗಳನ್ನು ಒಟ್ಟಿಗೇ ಈ ರೀತಿ ಹಾಕಿ ಮತಹಾಕಲು ಬೇರೇನಾದರೂ ಜಾಗ, ಸೌಲಭ್ಯ ಇದ್ದರೆ ತಿಳಿಸಲು ಬಲ್ಲವರಲ್ಲಿ ಕೋರಿಕೆ .--Vikashegde (ಚರ್ಚೆ) ೦೮:೨೦, ೨೩ ಜನವರಿ ೨೦೧೮ (UTC).[]