ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೧

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ:

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು - {{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.
justify ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧ | ೧೨|೧೩ | ೧೩ | ೧೪ |೧೫ | ೧೬ | ೨೦ | ೨೧ | ೨೨ | ೨೩

ಇತರ ಚರ್ಚೆ: | | |

ರೋಮನ್ ಲಿಪಿ ಬಳಕೆ

ಬದಲಾಯಿಸಿ

en:Wikipedia:Naming conventions (use English) ರಲ್ಲಿ ಹೇಳಿರುವಂತೆ ವಿಕಿಪೀಡಿಯದ ಕನ್ನಡ ಪುಟಗಳಲ್ಲಿ ನಾವು ಏಕೆ ರೋಮನ್/ಆಂಗ್ಲ ಲಿಪಿಯ titleಗಳನ್ನು ಉಪಯೋಗಿಸಬಾರದು ?

ನನ್ನ ಯೋಚನೆಯಂತೆ, ಇದರಿಂದಾಗುವ ಲಾಭವೇನೆಂದರೆ, link ಗಳನ್ನು type ಮಾಡುವುದು, link ಗಳನ್ನು email ಮಾಡುವಿದು ಸುಲಭ. ನಷ್ಟವೇನೆಂದರೆ, ಎಲ್ಲರಿಗೂ ಸರಿಯಾದ (ಅಂದರ "ಬರಹ"ದ) transliteration scheme ನ ಪರಿಚಯವಿರುವುದಿಲ್ಲವಾದ್ದರಿಂದ ಹುಡುಕುವುದು ಕಷ್ಟವಾಗಬಹುದು. ಏನಂತೀರಿ? -- ಸುದರ್ಶನ ೦೯:೪೦, ೩ January ೨೦೦೫ (IST)

ಬೇಡ. ಹೀಗೆ ಮಾಡುವುದು ಬೇಡದ ಕ್ಲಿಷ್ಟತೆಗೆ ಈಡು ಮಾಡುತ್ತದೆ. ಕೆಳಗಿನ ಅಂಶಗಳನ್ನು ಗಮನಿಸಿ:
  • ಪ್ರತಿ ಲೇಖನಕ್ಕೂ ಒಂದೊಂದು ಇಂಗ್ಲಿಷ್ ಅಲಿಯಾಸ್ ಇಡಬೇಕಾಗುತ್ತದೆ. ಕೆಲವಕ್ಕೆ ತಮ್ಮದೇ ಹೆಸರನ್ನು ಇಂಗ್ಲಿಷಿನಲ್ಲಿ ಬರೆದರೆ (ಉದಾ: ಹೆಸರುಗಳು) ಕೆಲವಕ್ಕೆ ಇಂಗ್ಲಿಷ್ ಪದಗಳನ್ನೇ ಬಳಸಬೇಕಾಗುತ್ತದೆ.
  • ‌ ಅಕಸ್ಮಾತ್ ನೀವು ಟ್ರಾನ್ಸ್ಲಿಟರೇಶನ್ನೇ ಬಳಸಿ ಶೀರ್ಷಿಕೆಗಳನ್ನು ಇಂಗ್ಲಿಷಿನಲ್ಲಿ ಟೈಪಿಸಿದಿರಿ ಎಂದಿಟ್ಟುಕೊಳ್ಳಿ, ಆಗಲೂ ಕಂಟೆಂಟ್ ಸರ್ಚ್ ಮಾಡಲು ಯೂನಿಕೋಡ್ ಬಳಸಲೇ ಬೇಕು. ಶೀರ್ಷಿಕೆಗೊಂದು ನಿರ್ಧಿಷ್ಟಮಾನ, ಕಂಟೆಂಟಿಗೊಂದು ನಿರ್ಧಿಷ್ಟಮಾನ ಸಲ್ಲದು.
  • ಲಿಂಕುಗಳು ಇ-ಮೇಯ್ಲ್ ಮಾಡುವುದು ಸುಲಭವಲ್ಲ - ಸರಿ, ಆದರೆ ಸ್ವಲ್ಪ ದಿನ ಕಾಯ್ದು ನೋಡಿ. ಯೂನಿಕೋಡ್ URLಗಳನ್ನ ನೋಡುವ ದಿನ ದೂರವಿಲ್ಲ. ಆದರೂ ಲಿಂಕುಗಳನ್ನು ಟೈಪ್ ಮಾಡುವುದು ಕಷ್ಟವೇನಲ್ಲ.
  • ಮತ್ತೊಂದು ವಿಷಯ - ಆಂಗ್ಲ ವಿಕಿಪೀಡಿಯದಲ್ಲಿರುವ ಕಾರ್ಯನೀತಿಗಳು ಆಂಗ್ಲ ವಿಕಿಪೀಡಿಯದ್ದು. ಕನ್ನಡ ವಿಕಿಪೀಡಿಯದಲ್ಲಿ ಕಾರ್ಯನೀತಿಗಳಿಲ್ಲದಿದ್ದ ಕೆಲವು ಕಡೆ ಆಂಗ್ಲದ ಕಾರ್ಯನೀತಿ ಎರವಲು ಪಡೆಯುತ್ತಿದ್ದೇವೆ, ಅಷ್ಟೆ. ಹಾಗೆಂದ ಮಾತ್ರಕ್ಕೆ ಎಲ್ಲ ಕಾರ್ಯನೀತಿಗಳೂ ಇಲ್ಲಿ ಅಪ್ಪ್ಲೈ ಆಗಬೇಕೆಂದಿಲ್ಲ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 15:05, ೩ January ೨೦೦೬ (UTC)

ಪಾಲಿಸಿ ಕುರಿತು ಚರ್ಚೆ

ಬದಲಾಯಿಸಿ