ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೩

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ:

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು - {{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.

justify

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧ | ೧೨|೧೩ | ೧೩ | ೧೪ |೧೫ | ೧೬ | ೨೦ | ೨೧

ಇತರ ಚರ್ಚೆ: | | |

ಚಲನಚಿತ್ರ ಪುಟಗಳಿಗೆ (ಚಲನಚಿತ್ರ) ಬದಲಾಯಿಸಿ

ಹೆಚ್.ಪಿ.ಎನ್: ಈ ವಿಷಯವನ್ನು ನಾವಾಗಲೇ (ಸುಮಾರು ಎರಡು ತಿಂಗಳ ಹಿಂದೆ) ಚರ್ಚಿಸಿದ್ದೆವು, ನನ್ನ ಚರ್ಚಾಪುಟದಲ್ಲಿ. ನೀವು ಚಲನಚಿತ್ರ ಪುಟಗಳನ್ನು (ಚಲನಚಿತ್ರ) ಎಂದು ಕೊನೆಯಲ್ಲಿ ಸೇರಿಸಿ ಸ್ಥಳಾಂತಿಸುತ್ತಿರುವುದು ಕಳೆದ ಕೆಲವು ದಿನಗಳಲ್ಲಿ ಗಮನಿಸಿದೆ. ಅದರ ಅಗತ್ಯ ತಿಳಿಯಲಾಗಲಿಲ್ಲ.

ಚಲನಚಿತ್ರಗಳ ಹೆಸರು ವ್ಯಕ್ತಿ, ಊರು, ವಿಷಯ/ವಸ್ತುವಿನ ಹೆಸರಾಗಿದ್ದಲ್ಲಿ ಅದಕ್ಕೆ (ಚಲನಚಿತ್ರ) ಎಂದು ಸೇರಿಸಬೇಕು. ಸಾಧ್ಯವಾದಷ್ಟೂ ಮಟ್ಟಿಗೆ ಇದನ್ನು ಪಾಲಿಸಲಾಗುತ್ತಿದೆ. (ಉದಾ: ಧೂಮಕೇತು (ಚಲನಚಿತ್ರ), ರಣಧೀರ ಕಂಠೀರವ (ಚಲನಚಿತ್ರ), ಇಮ್ಮಡಿ ಪುಲಿಕೇಶಿ (ಚಲನಚಿತ್ರ), ಕಿತ್ತೂರು ಚೆನ್ನಮ್ಮ (ಚಲನಚಿತ್ರ), ಚದುರಂಗ (ಚಲನಚಿತ್ರ), ಉಪೇಂದ್ರ (ಚಿತ್ರ) ಇತ್ಯಾದಿ).

ಎಲ್ಲ ಚಲನಚಿತ್ರ ಕುರಿತ ಪುಟಗಳಿಗೆ ಚಲನಚಿತ್ರ ಎಂದು ಸೇರಿಸುವುದು ಒಳ್ಳೆಯದು.
೧) consistency ಇರುತ್ತದೆ.
ಇಲ್ಲಿ ಯಾವುದು consistency ಎಂಬ ಪ್ರಶ್ನೆ ಏಳುತ್ತದೆ. ಎಲ್ಲಾ ಸಾಹಿತಿಗಳ ಪುಟದಲ್ಲಿ (ಸಾಹಿತಿ) ಎಂದು, ಎಲ್ಲಾ ಕ್ರೀಡಾಪಟು ಲೇಖನದ ಹೆಸರಿನಲ್ಲಿ (ಕ್ರೀಡಾಪಟು) ಎಂದು, ಎಲ್ಲಾ ರಾಜಕಾರಣಿಗಳ ಲೇಖನಗಳ ಹೆಸರಿನಲ್ಲಿ (ರಾಜಕಾರಣಿ) ಎಂದು, ಎಲ್ಲಾ ದೇಶಗಳ ಲೇಖನದ ಹೆಸರಿನಲ್ಲಿ (ದೇಶ) ಎಂದು, ಇತ್ಯಾದಿಯಾಗಿ ಸೇರಿಸುವ ಯೋಜನೆಯಿದ್ದಲ್ಲಿ, ಎಲ್ಲಾ ಚಲನಚಿತ್ರಗಳಿಗೂ (ಚಲನಚಿತ್ರ) ಎಂದು ಹಾಕಬಹುದು. ಆಗ consistency ಇರುತ್ತದೆ.
ಬೇರೆ ವರ್ಗದ ಎಲ್ಲಾ ಲೇಖನಗಳಿಗೆ ಅನ್ವಯಿಸದೇ, ಚಲನಚಿತ್ರ ಲೇಖನಗಳಿಗೆ ಮಾತ್ರ ಇದನ್ನು ಅನ್ವಯಿಸಿದರೆ ಅದು inconsistency ಆಗುತ್ತದೆ.
ಕೆಲವು ಲೇಖನಗಳಿಗೆ (ಚಲನಚಿತ್ರ) ಎಂದು ಹಾಕಿ ಮತ್ತೆ ಉಳಿದ ಲೇಖನಗಳಿಗೆ ಹಾಕದಿದ್ದರೆ ಅದು inconsistency ಆಗುತ್ತದೆ ಎನ್ನಲಾಗುವುದಿಲ್ಲ. ಏಕೆಂದರೆ ಎಲ್ಲಿ ಅವಶ್ಯಕತೆಯಿದೆಯೋ ಅಲ್ಲಿ ಮಾತ್ರ, ದ್ವಂದ್ವ ನಿವಾರಣೆಯ ಏಕೈಕ ಉದ್ದೇಶದಿಂದ ಹಾಕಲಾಗಿರುತ್ತದೆ. ಈಗಾಗಲೇ ಕೊಟ್ಟಿರುವ ಉದಾಹರಣೆಗಳಂತೆ, ಕಿತ್ತೂರು ಚೆನ್ನಮ್ಮ, ಉಪೇಂದ್ರ , ರಣಧೀರ ಕಂಠೀರವ ಇತ್ಯಾದಿ.

ಈ ನೀತಿಯು ಇತರ ವರ್ಗದಲ್ಲಿಯೂ ಕಾಣಬಹುದು. ಉದಾಹರಣೆಗೆ ಚದುರಂಗ ಸಾಹಿತಿ, ಚದುರಂಗ ಆಟ; ಬಾದಾಮಿ ಪದಾರ್ಥ ಮತ್ತು ಬಾದಾಮಿ ಊರು; ಇತ್ಯಾದಿ. ಚದುರಂಗ - ಚೆಸ್ - ಲೇಖನಕ್ಕೆ ಚದುರಂಗ (ಆಟ) ಎಂದು ಹೆಸರಿಸಿದರೆ ಉಳಿದ ಲೇಖನಗಳಿಗೂ (ಆಟ) ಎಂದು ಸೇರಿಸುತ್ತೇವೆಯೆ? ಖಂಡಿತ ಇಲ್ಲ. ಕಾರಣವೇನೆಂದರೆ, ಅಲ್ಲಿ (ಆಟ) ಎಂದು ಸೇರಿಸುವ ಏಕೈಕ ಕಾರಣ ಅದು ಸಾಹಿತಿ ಚದುರಂಗ, ಚಲನಚಿತ್ರ ಚದುರಂಗ ಲೇಖನಗಳೊಡನೆ ಇರುವ ದ್ವಂದ್ವ ನಿವಾರಣೆಯಾಗಲಿ ಎಂಬುದಕ್ಕೆ ಮಾತ್ರ. ಮನ|Mana Talk - Contribs

೨) ವಿಕಿಪೀಡಿಯವನ್ನು ವಿಹರಿಸುತ್ತಿರುವ ಓದುಗರಿಗೆ ಹೊಸ ಇತಿಹಾಸ, ವಾತ್ಸಲ್ಯ ಪಥ, ಅಪರಾಧಿ ನಾನಲ್ಲ, ಅವಳೇ ನನ್ನ ಹೆಂಡತಿ ಎಂದೆಲ್ಲ ಹೆಸರಿನ ಪುಟಗಳು ಎದುರಾದರೆ ಕಕ್ಕಾಬಿಕ್ಕಿಯಾಗುವಂತೆ ಮಾಡಿಬಿಡುತ್ತದೆ. ವಿಕಿಪೀಡಿಯ ಬಗ್ಗೆ ಹೆಚ್ಚೇನೂ ಅರಿಯದ ಹೊಸ ಸದಸ್ಯರಿಗಂತೂ ಇದು ತಪ್ಪು ಸಂಕೇತ ರವಾನಿಸುತ್ತದೆ.
ಜೊತೆಗೆ ಸಾಕಷ್ಟು ಚಲನಚಿತ್ರ ಪುಟಗಳಲ್ಲಿ ಶೀರ್ಷಿಕೆಯ ಕೆಳಗೆ "ಇದು ಚಲನಚಿತ್ರ" ಎಂಬ ಒಂದು ವಾಕ್ಯ ಕೂಡ ಇಲ್ಲ. ಓದುಗರು ಇನ್ಫೋಬಾಕ್ಸ್ ಓದಿಯೇ ಮೇಲಿನಂತಹ ಶೀರ್ಷಿಕೆಗಳು ತಂದೊಡ್ಡುವ ಶಾಕ್ ಶಮನ ಮಾಡಿಕೊಳ್ಳಬೇಕು. ಅದೇ ಚಲನಚಿತ್ರ ಎಂಬ ಹೆಸರಿನೊಂದಿಗೆ ಸೇರಿಸಿದರೆ, ಚಲನಚಿತ್ರಗಳ ಹೆಸರಿನ contextನಲ್ಲಿ ಸ್ವೀಕೃತವಾಗಿರುವ ಮೇಲಿನಂತಹ ಶೀರ್ಷಿಕೆಗಳು ಯಾವುದೇ ಆಭಾಸವನ್ನು ಸೃಷ್ಟಿಸುವುದಿಲ್ಲ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೨೯, ೨೬ ಆಗಸ್ಟ್ ೨೦೦೬ (UTC)
ಓದುಗರಿಗೆ ಕಕ್ಕಾಬಿಕ್ಕಿಯಾಗಿಸುವುದು, ಅಥವಾ ಶಾಕ್ ಕೊಡುವಂತ ಪುಟಗಳು ಇವು ಎಂಬುದು ಚರ್ಚಾಸ್ಪದ. ನನ್ನ ಅಭಿಪ್ರಾಯದಲ್ಲಿ ಓದುಗನಿಗೆ ಯಾವುದೇ ಶಾಕ್ ಈ ಲೇಖನಗಳು ಕೊಡುವುದಿಲ್ಲ. ಇತರ ಸಂಪಾದಕರು, ಸದಸ್ಯರುಗಳು ಈ ಪುಟಗಳನ್ನು ನೋಡಿ ತೀರ್ಮಾನಿಸಲಿ. - ಮನ|Mana Talk - Contribs
ಇದರ ಬಗ್ಗೆ ನನ್ನ ಅಭಿಪ್ರಾಯಗಳನ್ನು ವಿಕಿಪೀಡಿಯ mailing-list ನಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ತಿಳಿಸಿದ್ದೇನೆ.
ವಿಕಿಪೀಡಿಯ ಸದಸ್ಯರುಗಳ ಗಮನಕ್ಕೆ: ಈ ಕುರಿತಾಗಿ ನಡೆಯುತ್ತಿರುವ ಚರ್ಚೆಯನ್ನು ಇಲ್ಲಿ ಕಾಣಬಹುದು, ಮತ್ತು ಭಾಗವಹಿಸಬಹುದು: http://mail.wikipedia.org/pipermail/wikikn-l/2006-August/thread.html
- ಮನ|Mana Talk - Contribs ೨೨:೨೩, ೨೬ ಆಗಸ್ಟ್ ೨೦೦೬ (UTC)
ಚಲನಚಿತ್ರ ಎಂಬುದನ್ನು ಸೇರಿಸಬೇಕೋ ಬೇಡವೋ ಎಂಬುದರ ಬಗ್ಗೆ ಇಲ್ಲಿಯೇ ಚರ್ಚೆ ನಡೆದರೆ ಉತ್ತಮ. ಪ್ರತಿ ಕಾರ್ಯನೀತಿ ಚರ್ಚೆಗೂ ಮೇಯ್ಲಿಂಗ್ ಲಿಸ್ಟ್ ಬಳಸಲಾಗದು. ನಿಮ್ಮ Namespace ಪ್ರಸ್ತಾವನೆ ಮೇಯ್ಲಿಂಗ್ ಲಿಸ್ಟಿನಲ್ಲಿ ಚರ್ಚಿಸಬಹುದು ಎಂದಷ್ಟೆ ನಾನು ತಿಳಿಸಿದ್ದು. ಸಂಪೂರ್ಣ ಓದದೆ ಸ್ವಲ್ಪ ಅವಸರ ಪಟ್ಟು ಮೇಯ್ಲಿಂಗ್ ಲಿಸ್ಟಿಗೆ ಬರೆದೆರೆಂದು ಭಾವಿಸುತ್ತೇನೆ. ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ ಇಲ್ಲಿಯೇ ಆರ್ಕೈವಿನಲ್ಲಿ ಲಭ್ಯವಿದ್ದಲ್ಲಿ ಒಳ್ಳೆಯದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೩:೨೩, ೨೭ ಆಗಸ್ಟ್ ೨೦೦೬ (UTC)
ಅವಸರಪಟ್ಟು ಬರೆದದ್ದಲ್ಲ. namespace ಪ್ರಸ್ತಾವನೆಗೆ ಮುಂಚೆ, ಎಲ್ಲಾ ಲೇಖನಗಳಿಗೆ (ಚಲನಚಿತ್ರ) ಎಂದು ಸೇರಿಸಬೇಕೆ ಬೇಡವೆ ಎಂಬುದು ನಿರ್ಧಾರವಾಗಬೇಕಿತ್ತು. ಅದು ಇಲ್ಲಿ ನಿರ್ಧಾರವಾಗಿರಲಿಲ್ಲ. ಅದಕ್ಕಾಗಿ ಆ ಚರ್ಚೆಯನ್ನು ಪ್ರಾರಂಭಿಸಿದೆ. ಇಬ್ಬರು ಸದಸ್ಯರು (Tvsrinivas41 ಮತ್ತು Pavanaja) ಎಲ್ಲಾ ಚಲನಚಿತ್ರ ಪುಟಗಳಿಗೂ (ಚಲನಚಿತ್ರ)ವನ್ನು ಸೇರಿಸುವ ಅಗತ್ಯವಿಲ್ಲ ಎಂಬುದಕ್ಕೆ ಸಹಮತಿ ಸೂಚಿಸಿದ್ದಾರೆ.
ಆ ಇಬ್ಬರೂ ಸದಸ್ಯರು ಮೇಯ್ಲಿಂಗ್ ಲಿಸ್ಟಿನಲ್ಲಿ ಬರೆದದ್ದು "ನಿಮ್ಮ ಅಭಿಪ್ರಾಯ ಸೂಕ್ತವಾಗಿದೆ" ಎಂದು. ನೀವು ಸಮಸ್ಯೆಯ ಕುರಿತು ಹೆಚ್ಚು ಬೆಳಕು ಚೆಲ್ಲಿರಲಿಲ್ಲ. ಬರೆ ಶೀರ್ಷಿಕೆಯ ಬಗೆಗಿನ ನಿಮ್ಮ ಅಭಿಪ್ರಾಯವನ್ನು ಮಂಡಿಸಿದ್ದಿರಿ. ಅಲ್ಲದೆ, ನಿಮಗೆ ಉತ್ತರ ನೀಡಿದ ಇಬ್ಬರೂ ಸದಸ್ಯರು ವಿಕಿಪೀಡಿಯದಲ್ಲಿ ಸಕ್ರಿಯ ಸದಸ್ಯರಲ್ಲ. ಆದ್ದರಿಂದ ಅವರ ಅಭಿಪ್ರಾಯಗಳಿಗೆ ಹೆಚ್ಚು ಒತ್ತು ನೀಡದಿರುವುದು ಕ್ಷೇಮ. ಮೇಯ್ಲಿಂಗ್ ಲಿಸ್ಟಿನಲ್ಲಿ ನಾನು ಬರೆದ ಸಮಸ್ಯೆಯ ವಿವರ ಹಾಗೂ ನಿಮಗೆ ನೀಡಿದ ಉತ್ತರ ಕೆಳಗೆ ಲಗತ್ತಿಸುತ್ತಿದ್ದೇನೆ, ನೋಡಿ.
On Sat, 2006-08-26 at 16:50 -0500, K.N. Manohar wrote:


> namespace ಪ್ರಸ್ತಾವನೆ ಬರುವುದು, ಪ್ರತಿಯೊಂದು ಚಲನಚಿತ್ರ ಲೇಖನಕ್ಕೂ, ಅದು
> ಚಲನಚಿತ್ರದ ಬಗ್ಗೆಯ ಲೇಖನ ಎಂದು ಶೀರ್ಷಿಕೆಯಲ್ಲಿಯೇ ತಿಳಿಯಬೇಕು ಎಂದಾದಲ್ಲಿ ಮಾತ್ರ.
> ಇದನ್ನು ಕಾರ್ಯನೀತಿ ಪುಟದಲ್ಲಿ ನಡೆದ ಚರ್ಚೆಯಲ್ಲಿಯೂ ಬರೆದಿದ್ದೆ.



ನಿಮ್ಮ ಪ್ರಕಾರ ಅದು ಯಾವಾಗ ಬರುತ್ತದೋ ನನಗೆ ತಿಳಿದಿಲ್ಲ ಸ್ವಾಮಿ. ನೀವು "ಚಲನಚಿತ್ರ"
ಪುಟಗಳಿಗೆ ಹೊಸ namespace ಬೇಕು ಎಂದು ಬರೆದದ್ದಕ್ಕೆ ಉತ್ತರವಾಗಿ "ಮೇಯ್ಲಿಂಗ್
ಲಿಸ್ಟಿನಲ್ಲಿ ಚರ್ಚಿಸೋಣ" ಎಂದೆ. ಕಾರ್ಯನೀತಿಯೊಂದನ್ನು ಇಲ್ಲಿ ಚರ್ಚಿಸೋಣವೆಂದು
ಹೇಳಲಿಲ್ಲ.



ನಾವೀಗ ಚರ್ಚಿಸುತ್ತಿರುವ ಶೀರ್ಷಿಕೆಯೊಂದಿಗೆ "ಚಲನಚಿತ್ರ" ಸೇರಿಸಬೇಕೋ ಬೇಡವೋ ಎಂಬುವ
ವಿಷಯ ನ್ಯಾಯವಾಗಿ ವಿಕಿಪೀಡಿಯದ ಕಾರ್ಯನೀತಿ ಪುಟದಲ್ಲಿಯೇ ನಡೆಯಬೇಕು. ನಡೆದ ಚರ್ಚೆ ಒಂದೇ
ಕಡೆ ಆರ್ಕೈವಿನಲ್ಲಿ ಲಭ್ಯವಿದ್ದಲ್ಲಿ ಒಳಿತು.



> ಆದುದರಿಂದ ಮೊದಲು: ಎಲ್ಲಾ ಚಲನಚಿತ್ರ ಲೇಖನಗಳ ಶೀರ್ಷಿಕೆಯಲ್ಲಿಯೇ 'ಚಲನಚಿತ್ರ' ಎಂದು
> ಬರೆಯುವ ವಿಚಾರವು ಇತ್ಯರ್ಥವಾಗಬೇಕಿದೆ. ಎಲ್ಲ ಪುಟಗಳಿಗೂ ಆ ರೀತಿ ಬದಲಾಯಿಸುವ
> ಅವಶ್ಯಕತೆಯಿಲ್ಲ ಎಂದಾದರೆ, ಪ್ರತ್ಯೇಕ namespace ಪ್ರಶ್ನೆಯೆ ಉದ್ಭವಿಸುವುದಿಲ್ಲ.



ಇದನ್ನು "ಇತ್ಯರ್ಥ" ಮಾಡಬೇಕಾಗಿರುವುದು ಕಾರ್ಯನೀತಿ ಪುಟದಲ್ಲಿ. ಮುಂದಿನ ಉತ್ತರ ನಾನು
ಮೇಯ್ಲಿಂಗ್ ಲಿಸ್ಟಿನಲ್ಲಿ ನೀಡುವುದಿಲ್ಲ. ಈ ಚರ್ಚೆಯನ್ನು ಅಲ್ಲಿಗೇ ವರ್ಗಾಯಿಸಿ.



> ಇಲ್ಲಿ ಯಾವುದು consistency ಎಂಬ ಪ್ರಶ್ನೆ ಏಳುತ್ತದೆ. ಎಲ್ಲಾ ಸಾಹಿತಿಗಳ
> ಪುಟದಲ್ಲಿ (ಸಾಹಿತಿ) ಎಂದು, ಎಲ್ಲಾ ಕ್ರೀಡಾಪಟು ಲೇಖನದ ಹೆಸರಿನಲ್ಲಿ
> (ಕ್ರೀಡಾಪಟು) ಎಂದು, ಎಲ್ಲಾ ರಾಜಕಾರಣಿಗಳ ಲೇಖನಗಳ ಹೆಸರಿನಲ್ಲಿ (ರಾಜಕಾರಣಿ)



ಈಗಾಗಲೇ ಹಲವು ಚಲನಚಿತ್ರ ಪುಟಗಳಿಗೆ ಬೇರೊಂದು ವಿಷಯದ ಹೆಸರಿರುರುವುದೆಂದು (ಉದಾ:
"ಚದುರಂಗ") ನಾವು *ಈಗಾಗಲೇ* ಶೀರ್ಷಿಕೆಯೊಂದಿಗೆ "(ಚಲನಚಿತ್ರ)" ಎಂಬುದನ್ನು
ಸೇರಿಸುತ್ತಿಲ್ಲವೆ? ಆದ್ದರಿಂದ ಶೀರ್ಷಿಕೆಯಲ್ಲಿ "(ಚಲನಚಿತ್ರ)" ಎಂಬುದನ್ನು ಸೇರಿಸುವ
ಮಟ್ಟಿಗೆ ನಾವುಗಳು ಒಪ್ಪಿಕೊಂಡಾಗಿದೆ.
ಈಗ ಅದನ್ನು ಎಲ್ಲ ಚಲನಚಿತ್ರ ಪುಟಗಳಿಗೆ ಸೇರಿಸಿದಲ್ಲಿ 'ಯಾವುದಕ್ಕೆ ಸೇರಿಸಬೇಕು
ಯಾವುದಕ್ಕೆ ಸೇರಿಸಬಾರದು' ಎಂಬುದರ ಬಗ್ಗೆ ಸದಸ್ಯರಿಗೆ
ತಲೆಕೆಡಿಸಿಕೊಳ್ಳಬೇಕಾಗುವುದಿಲ್ಲ. consistencyಯೂ ಹೆಚ್ಚುತ್ತದೆ.



> ಎಂದು, ಎಲ್ಲಾ ದೇಶಗಳ ಲೇಖನದ ಹೆಸರಿನಲ್ಲಿ (ದೇಶ) ಎಂದು, ಇತ್ಯಾದಿಯಾಗಿ ಸೇರಿಸುವ
> ಯೋಜನೆಯಿದ್ದಲ್ಲಿ, ಎಲ್ಲಾ ಚಲನಚಿತ್ರಗಳಿಗೂ (ಚಲನಚಿತ್ರ) ಎಂದು ಹಾಕಬಹುದು. ಆಗ
> consistency ಇರುತ್ತದೆ.



ನೀವು ಬಹುಶಃ ಒಂದು ಅಂಶ ಮರೆಯುತ್ತಿದ್ದೀರಿ. ಕೇವಲ ೩೦೦೦+ ಲೇಖನಗಳಿರುವ ಕನ್ನಡ
ವಿಕಿಪೀಡಿಯದಲ್ಲಿ ೧೫೦೦ಕ್ಕೂ ಹೆಚ್ಚು "ಚಲನಚಿತ್ರ" ಕುರಿತ stubಗಳೇ ಇವೆ! (ಚುಟುಕು
ಲೇಖನಗಳು).
ಈ ಚುಟುಕು ಲೇಖನಗಳಲ್ಲಿ ಬರಿಯ ಶೀರ್ಷಿಕೆಯೊಂದನ್ನು ಸೇರಿಸಿ ಅದರೊಂದಿಗೆ infobox
ಒಂದನ್ನು ಸೇರಿಸಿ ಬಿಟ್ಟುಬಿಡಲಾಗಿದೆ. ಕೇವಲ ೩೦೦೦ ಲೇಖನಗಳಿರುವ ವಿಕಿಯೊಂದರಲ್ಲಿ
ಇಷ್ಟೊಂದು ಚಲನಚಿತ್ರ stubಗಳು ಈ ರೀತಿ ಸೇರ್ಪಡೆಯಾಗುತ್ತಿರುವುದು ಬಹುಶಃ ಕನ್ನಡ
ವಿಕಿಯೊಂದರಲ್ಲೆ. ಅಂತಹ ಪುಟಗಳಲ್ಲಿ "ಇದೊಂದು ಚಲನಚಿತ್ರ" ಎಂಬ ಒಂದು ವಾಕ್ಯ ಕೂಡ
ಇಲ್ಲ!



random ಲೇಖನ ಲಿಂಕ್ ಕ್ಲಿಕ್ಕಿಸಿದರೆ ಐದರಲ್ಲಿ ನಾಲ್ಕು ಬಾರಿ ಇದೇ ಚಲನಚಿತ್ರದ
stubಗಳು ಓದಲು ಸಿಗುತ್ತವೆ. ಚಲನಚಿತ್ರಗಳ ಹೆಸರುಗಳು ಸಂಸ್ಕೃತಿಯ ಹಲವು ಕೋನಗಳಿಂದ
ಬಂದಿರುತ್ತವೆ. ಓದುಗರಿಗೆ ದಿಢೀರನೆ



"ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ"
"ಅಳಿಯ ಮನೆ ತೊಳಿಯ"
"ಎಕ್ಸ್ ಕ್ಯೂಸ್ ಮಿ"



ಎಂದೆಲ್ಲ ಪುಟಗಳು ಎದುರಾದರೆ ವಿಕಿಪೀಡಿಯದಲ್ಲಿ ಓದುಗರ ಅಚ್ಚರಿ ನೀವೇ ಊಹಿಸಿಕೊಳ್ಳಿ.
ವಿಕಿಪೀಡಿಯ ಮಾಹಿತಿಯ ಭಂಡಾರವಾಗಬೇಕಾದ ಪ್ರಾಜೆಕ್ಟು. ಇಲ್ಲಿ ವಿಶ್ವಕೋಶವೊಂದನ್ನು ಓದಿದ
ಅಥವ ಅದರ ಹತ್ತಿರದ ಅನುಭವ ಓದುಗರಿಗಾಗಬೇಕು.
-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೫:೩೯, ೨೭ ಆಗಸ್ಟ್ ೨೦೦೬ (UTC)
ಸರಿ. ಯಾವ ಚರ್ಚೆಗಳಿಗೆ mailing-list ಉಪಯೋಗಿಸಬೇಕು, ಯಾವ ಚರ್ಚೆಯನ್ನು ವಿಕಿಪೀಡಿಯ ಅರಳಿಕಟ್ಟೆಯಲ್ಲಿಯೇ (ಅಂದರೆ ಈ ಪುಟದಲ್ಲಿ) ಮಾಡಬೇಕು ಎಂಬುದಕ್ಕೆ ಏನಾದರು ಕಾರ್ಯನೀತಿಯಿದ್ದಲ್ಲಿ ದಯವಿಟ್ಟು ತಿಳಿಸಿಕೊಡಿ. - ಮನ|Mana Talk - Contribs ೦೪:೩೯, ೨೭ ಆಗಸ್ಟ್ ೨೦೦೬ (UTC)
ನೋಡಿ, ಕಾರ್ಯನೀತಿ ಬಗ್ಗೆ ವಿಕಿಪೀಡಿಯದಲ್ಲೇ ಚರ್ಚೆ ನಡೆಸುವುದು ಒಳ್ಳೆಯದು. ನೀವು ಹೊಸ "namespace" ಪ್ರಸ್ತಾವನೆ ಮುಂದಿಟ್ಟದ್ದರಿಂದ ಮೇಯ್ಲಿಂಗ್ ಲಿಸ್ಟಿಗೆ ಮೊರೆ ಹೋಗಬಹುದೆಂದು ಈಗಾಗಲೇ ಹಲವು ಬಾರಿ ತಿಳಿಸಿರುವಂತೆ ಬರೆದೆ. ಹೊಸ namespace ಗಹನವಾದ ತಾಂತ್ರಿಕ ವಿಷಯ - ಅದಕ್ಕಾಗಿ ನಾವು ಡೆವಲಪರುಗಳನ್ನ ಹಿಡಿದು ಪ್ರಾರಂಭಿಸಬೇಕಾಗುತ್ತದಾದ್ದರಿಂದ ಅಂತದ್ದಕ್ಕೆ ಮೇಯ್ಲಿಂಗ್ ಲಿಸ್ಟ್ ಒಳ್ಳೆಯ ಜಾಗವಾಗಬಹುದು (ಇಂಗ್ಲೀಷಿನಲ್ಲಿ ಮಾತನಾಡಿಕೊಂಡರೆ). ಕಾರ್ಯನೀತಿ ಚರ್ಚೆ ವಿಕಿಪೀಡಿಯದಲ್ಲಿ ನಡೆದರೇ ಒಳಿತು. ಇಲ್ಲಿಯ ಅರ್ಕೈವಿನಲ್ಲಿಯೇ ನಡೆದ ಚರ್ಚೆಯೆಲ್ಲ ಲಭ್ಯವಿರುತ್ತದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೫:೪೩, ೨೭ ಆಗಸ್ಟ್ ೨೦೦೬ (UTC)

ಉಳಿದ ಚಿತ್ರಗಳಿಗೆ, (ಚಲನಚಿತ್ರ) ಎಂದು ಹಾಕುವ ಅವಶ್ಯಕತೆಯಿರುವುದಿಲ್ಲ, ಅಲ್ಲವೆ? ನಂಜುಂಡಿ ಕಲ್ಯಾಣ, ಗೋವಾದಲ್ಲಿ ಸಿ.ಐ.ಡಿ. ೯೯೯, ನಕ್ಕರೆ ಅದೇ ಸ್ವರ್ಗ, ಸಂಸಾರ ನೌಕ, ಅವಳೇ ನನ್ನ ಹೆಂಡತಿ ಮುಂತಾದ ಪುಟಗಳನ್ನು ಅದೇ ಹೆಸರಿನಲ್ಲಿಡಬಹುದೆಂದು ನನ್ನ ಅಭಿಪ್ರಾಯ.

ಉದಾಹರಣೆಗೆ ನೆನ್ನೆ ನೀವು ಸ್ಥಳಾಂತರಿಸಿರುವ ಚಿತ್ರಗಳಲ್ಲಿ ಕೆಲವು: ಕುಂಕುಮ ತಂದ ಭಾಗ್ಯ, ಬಲು ಅಪರೂಪ ನಮ್ಮ ಜೋಡಿ, ಸೋತು ಗೆದ್ದವಳು, ಕಿಟ್ಟು ಪುಟ್ಟು ಇತ್ಯಾದಿ. ಈ ಹೆಸರುಗಳಲ್ಲಿ ಬೇರಾವುದೇ ಲೇಖನಗಳು ಬರಲು ಸಾಧ್ಯತೆಗಳು ಅತ್ಯಂತ ಕಡಿಮೆ , ಹಾಗೆ ಬಂದರೂ ಆಗ ದ್ವಂದ್ವನಿವಾರಣೆಯನ್ನು ಹಾಕಿಕೊಳ್ಳಬಹುದು. ನಿಮ್ಮ ಅಭಿಪ್ರಾಯ ತಿಳಿಸಿ.

ಪ್ರತಿಯೊಂದು ಚಲನಚಿತ್ರ ಲೇಖನಕ್ಕೂ, ಅದು ಚಲನಚಿತ್ರದ ಬಗ್ಗೆಯ ಲೇಖನ ಎಂದು ಶೀರ್ಷಿಕೆಯಲ್ಲಿಯೇ ತಿಳಿಯಬೇಕು ಎಂದಾದಲ್ಲಿ, "ವಿಕಿಪೀಡಿಯ:", "ಸಹಾಯ:", "ವರ್ಗ:" ಇತ್ಯಾದಿ namespaceಗಳಂತೆ, "ಚಲನಚಿತ್ರ:" ಎಂಬ namespace ಮಾಡಿ ಅದರಲ್ಲಿ ಹಾಕುವ ಬಗ್ಗೆ ಯೋಚಿಸಬಹುದು. ಕನ್ನಡ ಚಲನಚಿತ್ರಗಳ ಲೇಖನ ಇನ್ನೂ ಸುಮಾರು ೧೫೦೦ ಬಾಕಿ ಇದೆ. ಆದ್ದರಿಂದ, ಇದರ ಬಗ್ಗೆ ನಾವು ಈಗಲೇ ರೂಪುರೇಷೆ ಸಿದ್ಧಪಡಿಸಿದಲ್ಲಿ, ಮುಂದಿನ ಲೇಖನಗಳು ಅದೇ ಹಾದಿಯಲ್ಲಿ ಸಾಗಲು ಸುಲಭವಾಗುತ್ತದೆ. - ಮನ|Mana Talk - Contribs ೧೬:೩೮, ೯ ಆಗಸ್ಟ್ ೨೦೦೬ (UTC)

ಇದರ ಬಗ್ಗೆ ಮೇಯ್ಲಿಂಗ್ ಲಿಸ್ಟಿನಲ್ಲಿ ಚರ್ಚಿಸಬಹುದು, ಆದರೆ ಹೀಗೆ ಚಲನಚಿತ್ರಗಳಿಗಾಗಿ ಪ್ರತ್ಯೇಕ namespace ಯಾವ ಪ್ರಾಜೆಕ್ಟಿನಲ್ಲೂ ಪ್ರಾರಂಭಿಸಿದ್ದಿಲ್ಲ. ಆದ್ದರಿಂದ ಆಲೋಚಿಸಿ ಹೆಜ್ಜೆಯಿಡುವುದು ಒಳ್ಳೆಯದು. ಈ ಚರ್ಚೆಯನ್ನು ಅರಳಿ ಕಟ್ಟೆಗೆ ಸೇರಿಸುವೆ, ಅಲ್ಲಿಯೇ ಚರ್ಚೆಯಾಗಬಹುದು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೨೯, ೨೬ ಆಗಸ್ಟ್ ೨೦೦೬ (UTC)
ಸರಿ. ಇದರ ಬಗ್ಗೆ mailing-list ನಲ್ಲಿ ಒಂದು ಚರ್ಚೆ ಆರಂಭಿಸೋಣ.
ಈ ವಿಷಯವು ಇತ್ಯರ್ಥವಾಗುವವರೆಗೂ ದಯವಿಟ್ಟು ಚಲನಚಿತ್ರ ಪುಟಗಳನ್ನು ಸ್ಥಳಾಂತರಿಸುವುದು ನಿಲ್ಲಿಸಿ. - ಮನ|Mana Talk - Contribs ೧೬:೫೫, ೨೬ ಆಗಸ್ಟ್ ೨೦೦೬ (UTC)
ಮನೋಹರ್, namespace ಪ್ರಸ್ತಾವನೆಗೂ, ಹೆಸರಿನೊಡನೆ ಚಲನಚಿತ್ರ ಎಂದು ಸೇರಿಸುವುದು ಬೇರೆ ಬೇರೆಯಾದ್ದರಿಂದ ನೀವು "ದಯವಿಟ್ಟು ಚಲನಚಿತ್ರ ಪುಟಗಳನ್ನು ಸ್ಥಳಾಂತರಿಸುವುದು ನಿಲ್ಲಿಸಿ" ಏಕೆ ಬರೆದಿದ್ದೀರೆಂಬುದು ಅರ್ಥವಾಗಲಿಲ್ಲ.
ವಿಕಿಪೀಡಿಯಾದ ಗುಣಮಟ್ಟ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ. ಚಲನಚಿತ್ರಗಳ ಪುಟಗಳ ಶೀರ್ಷಿಕೆಯಲ್ಲಿ ಏಕಸ್ವಾಮ್ಯತೆ ಕಲ್ಪಿಸುವ ವ್ಯವಸ್ಥೆಯ ಕುರಿತು ನಿಮಗೆ ಭಿನ್ನಮತವಿದ್ದರೆ ಕಾರಣಸಹಿತ ತಿಳಿಸಿ. "ದಯವಿಟ್ಟು ಹೀಗೆ ಮಾಡಬೇಡಿ" ಎಂದು ಕೆಡುಕುಂಟು ಮಾಡುತ್ತಿರುವವರಿಗೆ ಬರೆಯುವ ರೀತಿಯಲ್ಲಿ ಬರೆದರೆ ಸರಿ ಬೀಳುವುದಿಲ್ಲ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೮:೩೬, ೨೬ ಆಗಸ್ಟ್ ೨೦೦೬ (UTC)
ಚಲನಚಿತ್ರ ಲೇಖನಗಳ ಹೆಸರುಗಳಲ್ಲಿ (ಚಲನಚಿತ್ರ) ಎಂದು ಸೇರಿಸುವುದರ ಬಗ್ಗೆ mailing-list ನಲ್ಲಿ ಚರ್ಚೆ ನಡೆಯುತ್ತಿದೆ. ಅಲ್ಲಿ ನಾವೆಲ್ಲರೂ ಒಮ್ಮತದ ಅಭಿಪ್ರಾಯಕ್ಕೆ ಬರುವವರೆಗೂ ಪುಟಗಳನ್ನು ಸ್ಥಳಾಂತಿರಿಸುತ್ತಿರುವುದು ದಯವಿಟ್ಟು ನಿಲ್ಲಿಸಿ ಎಂದು ವಿನಮ್ರವಾಗಿ ಕೇಳಿಕೊಳ್ಳುತ್ತಿದ್ದೇನೆ. - ಮನ|Mana Talk - Contribs ೨೦:೪೦, ೨೬ ಆಗಸ್ಟ್ ೨೦೦೬ (UTC)
ಹೀಗೆ ವಿಕಿಪೀಡಿಯದಲ್ಲಿ ಬರೆಯುವುದು ಸೂಕ್ತವಲ್ಲ. ಇದರ ಬಗ್ಗೆ ನನ್ನ ಚರ್ಚೆ ಪುಟದಲ್ಲಿ ನಡೆದಿರುವ ಚರ್ಚೆಯಿಂದ ಒಮ್ಮತಕ್ಕೆ ಬಂದಿದ್ದೇವೆಂದು ಭಾವಿಸುತ್ತೇನೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೫:೪೬, ೨೭ ಆಗಸ್ಟ್ ೨೦೦೬ (UTC)

ಪರಿಹಾರದ ಕೆಲಸ ಬದಲಾಯಿಸಿ

ಪ್ರತಿಯೊಂದು ಚಲನಚಿತ್ರ ಲೇಖನದಲ್ಲಿಯೂ ಅದು ಒಂದು ಚಲನಚಿತ್ರದ ಬಗ್ಗೆ ಇರುವ ಪುಟ ಎಂದು ಓದುಗನಿಗೆ ತಿಳಿಯುವಂತೆ ಮಾಡಬೇಕಿದೆಯೆ? ಸರಿ, ಆ ನಿಟ್ಟಿನಲ್ಲಿ ಕೆಲಸ ಮಾಡೋಣ. ಶೀರ್ಷಿಕೆಯಲ್ಲಿ ಸಿನಿಮಾ ಎಂದು ಅಥವ ಚಲನಚಿತ್ರವೆಂದು ಸೇರಿಸುವುದು ಪರಿಹಾರವಲ್ಲ. ಈಗಾಗಲೇ ತಿಳಿಸಿದಂತೆ ಹಾಗೆ ಸೇರಿಸುವ ಸನ್ನಿವೇಶಗಳು, ಅಗತ್ಯಗಳೇ ಬೇರೆ. ಆ ಅಗತ್ಯಗಳು ಚಲನಚಿತ್ರಗಳಿಗೆ ಮಾತ್ರ ಸೀಮಿತವಲ್ಲ. ಎಲ್ಲಾ ರೀತಿಯ ಲೇಖನಗಳಿಗೆ ಅನ್ವಯಿಸುತ್ತದೆ.

ಓದುಗನು ಲೇಖನವನ್ನು ನೋಡಿದಾಗ ಆ ಲೇಖನವು ಒಂದು ಚಲನಚಿತ್ರದ ಬಗ್ಗೆಯೆ ಎಂದೂ, ಜೊತೆಗೆ ಆ ಚಿತ್ರವು ಯಾವ ಭಾಷೆಯದ್ದೆಂದೂ, ಅದು ಯಾವ ವರ್ಷ ಬಿಡುಗಡೆಯಾಯಿತೆಂದೂ, ಪ್ರತಿಯೊಂದು ಲೇಖನದಲ್ಲಿ ಸುಲಭವಾಗಿ ಕಾಣುವಂತೆ ಹಾಕಿದರೆ ಸಾಕೆ?

ಉದಾಹರಣೆ: ವಾತ್ಸಲ್ಯ ಪಥ - ವರ್ಷ ೧೯೮೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಈ ರೀತಿ ಬರೆಯುವುದರಿಂದ ಓದುಗನಿಗೆ, ತಾನು ಯಾವುದರ ಬಗ್ಗೆ ಲೇಖನ ನೋಡುತ್ತಿದ್ದೇನೆ ಎಂದು ಸ್ಪಷ್ಟವಾಗುತ್ತಾದಲ್ಲಿ, ಈ ಕೆಲಸವನ್ನು ಖಂಡಿತಾ ಮಾಡೋಣ.

ದಯವಿಟ್ಟು ತಿಳಿಸಿ. - ಮನ|Mana Talk - Contribs ೦೪:೩೯, ೨೭ ಆಗಸ್ಟ್ ೨೦೦೬ (UTC)

ಚಲನಚಿತ್ರ ಕುರಿತ ಲೇಖನಗಳಲ್ಲಿ ನೀವು ಮೇಲೆ ತಿಳಿಸಿದ ಕಾರ್ಯ ಮಾಡಬೇಕು ಮತ್ತು ಮಾಡಲೇಬೇಕು ಕೂಡ. ಸದ್ಯದ ಪರಿಸ್ಥಿತಿಯಲ್ಲಿ ಚಲನಚಿತ್ರ ಪುಟಗಳ ಮೇಲೆ ಎಷ್ಟು ಸಾಧ್ಯವೋ ಅಷ್ಟು ಕೆಲಸ ನಡೆಯಬೇಕಿದೆ. ಆದರೆ ಇದೊಂದೇ ಪರಿಹಾರವಲ್ಲ. ವಿಕಿಪೀಡಿಯದ ಗುಣಮಟ್ಟ ಸುಧಾರಿಸುವ ಎಲ್ಲ ಕಾರ್ಯಗಳನ್ನು ನಾವು ಹಮ್ಮಿಕೊಳ್ಳಬೇಕು. ಮೇಲೆ ಬರೆದಿರುವ ಪ್ರತಿಕ್ರಿಯೆಗಳಲ್ಲಿರುವಂತೆ ನಾನು ಎಲ್ಲ ಚಲನಚಿತ್ರ ಕುರಿತ ಪುಟಗಳಿಗೆ "(ಚಲನಚಿತ್ರ)" ಸೇರಿಸೋಣ ಎಂದು ಬರೆದಿರುವ ಹಿನ್ನೆಲೆ ಸ್ವಲ್ಪ ಅರ್ಥಮಾಡುಕೊಳ್ಳಿ.
ಮೊನ್ನೆ ಹಿರಿಯರೊಬ್ಬರಿಗೆ ವಿಕಿಪೀಡಿಯ ತೋರಿಸುವಾಗ random ಪುಟ ಕ್ಲಿಕ್ ಮಾಡಿದರೆ ಬಂದ ಪುಟ ಏನು ಗೊತ್ತ? "ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ"!!
ಇಂತಹ ಪುಟಗಳನ್ನು ವಿಕಿಪೀಡಿಯದಲ್ಲಿ ನೋಡುವ ಸಾಮಾನ್ಯ ಓದುಗರಾಗಿ ಚಿಂತಿಸಿ ನೋಡಿ. ಈ ಶೀರ್ಷಿಕೆಯೊಂದಿಗೆ "(ಚಲನಚಿತ್ರ)" ಎಂಬುದೊಂದಿದ್ದರೆ ವಿಕಿಪೀಡಿಯದಲ್ಲಿ ಅಂತಹ ಶೀರ್ಷಿಕೆಗಳು ಸೃಷ್ಟಿಸುವ ಆಭಾಸವನ್ನು ಕಡಿಮೆ ಮಾಡಬಹುದು. ಗಹನವಾಗಿ ಆಲೋಚಿಸಿ. ವೈಯಕ್ತಿಕ ಸಾಧನೆಗಳನ್ನು, affiliationsಗಳನ್ನು ಇದರಿಂದ ದೂರವಿಟ್ಟು ನೋಡೋಣ. cheers, -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೫:೫೭, ೨೭ ಆಗಸ್ಟ್ ೨೦೦೬ (UTC)
ಮೇಲೆ ತಿಳಿಸಿದ ಮಾಡಬೇಕಾದ ಮತ್ತು ಮಾಡಲೇಬೇಕಾದ ಕಾರ್ಯವನ್ನು ಎಲ್ಲರೂ ಸೇರಿ ಮಾಡೋಣ. ಆಗ ಯಾವುದೇ ಓದುಗರಿಗೂ ಅವರು ನೋಡುತ್ತಿರುವ ಲೇಖನ ಒಂದು ಚಲನಚಿತ್ರಕ್ಕೆ ಸಂಬಂಧಿಸಿದ್ದು ಎಂದು ಸುಲಭವಾಗಿ ತಿಳಿದು, ಯಾವುದೇ ಅಭಾಸ ಸೃಷ್ಟಿಯಾಗುವುದಿಲ್ಲ.
Infobox ಟೆಂಪ್ಲೇಟಿನಲ್ಲಿ ಏನಾದರೂ ಬದಲಾವಣೆ ಮಾಡಿ, ಆ ಸಾಲು (ಚಿತ್ರದ ಹೆಸರು, ವರ್ಷ, ಭಾಷೆ) ಆಟೋಮ್ಯಾಟಿಕ್ ಆಗಿ ಬರಲು ಸಾಧ್ಯವಾಗುವುದೇ? ಪ್ರಯತ್ನಿಸಿ ನೋಡೋಣ.
ಆಟೋಮ್ಯಾಟಿಕ್ ಆಗಿ ಬರಲು ಸಾಧ್ಯವಾಗದಿದ್ದರೆ, manual ಆಗಿ ಹಾಕೋಣ. ಹಾಗೆಯೇ ಮುಂದೆ ಸೇರಿಸುವ ಚಲನಚಿತ್ರಗಳ ಪುಟಗಳಲ್ಲಿಯೂ ಇದನ್ನು ಪಾಲಿಸೋಣ.
ಒಂದು ಸ್ಪಷ್ಟಿಕರಣ: ಈ ವಿಷಯದಲ್ಲಿಯೇ ಆಗಲಿ, ವಿಕಿಪೀಡಿಯದಲ್ಲಿನ ಇನ್ನಾವುದೇ ವಿಷಯದಲ್ಲಾಗಲಿ, ವೈಯುಕ್ತಿಕ ಸಾಧನೆಗಳನ್ನು, affiliationsಗಳನ್ನು ನಾನು ದೂರವಿಟ್ಟಿದ್ದೇನೆ. ಹಾಗೆಯೇ, ಇತರ ಸದಸ್ಯರು, ಸಂಪಾದಕರೂ, ಇದನ್ನು ಪಾಲಿಸುತ್ತಿದ್ದಾರೆ ಎಂದು ನಂಬಿರುತ್ತೇನೆ. In other words, I am following the policy of Wikipedia:Assume good faith in both English and Kannada wikipedias.
ಕನ್ನಡದ, ಕನ್ನಡ ವಿಕಿಪೀಡಿಯದ ಏಳಿಗೆಯೊಂದೇ ಧ್ಯೇಯ. ನನ್ನ ಕಾಣಿಕೆಗಳಿಂದ, ಚರ್ಚೆಗಳಿಂದ, ವೈಯುಕ್ತಿಕವಾದ ಲಾಭ, ನಷ್ಟ, ಹಿತಸಾಧನೆ ಏನೂ ಇಲ್ಲ ಎಂದು ಎಲ್ಲಾ ಸದಸ್ಯರಿಗು ತಿಳಿಯಪಡಿಸಲು ಇಚ್ಛಿಸುತ್ತೇನೆ.
- ಮನ|Mana Talk - Contribs ೧೭:೦೨, ೨೭ ಆಗಸ್ಟ್ ೨೦೦೬ (UTC)

ಇದೀಗ ವಾತ್ಸಲ್ಯ ಪಥ ಪುಟದಲ್ಲಿ, {{Infobox ಚಲನಚಿತ್ರ}}ದಲ್ಲಿ ಮತ್ತು ಮನ/ಪ್ರಯೋಗಶಾಲೆಯಲ್ಲಿ ಕೆಲವು ಪ್ರಯೋಗ ಮಾಡಿ, ಟೆಂಪ್ಲೇಟಿನಲ್ಲಿ ಈ ಸಾಲು ಸೇರಿಸಿದ್ದೇನೆ:

'''{{PAGENAME}}''' - [[ಕನ್ನಡ]] ಭಾಷೆಯಲ್ಲಿನ ಚಲನಚಿತ್ರಗಳಲ್ಲೊಂದು.

ಈ ಬದಲಾವಣೆಯಿಂದ, ಪ್ರತಿಯೊಂದು ಚಲನಚಿತ್ರ ಪುಟದಲ್ಲಿ (ಅಂದರೆ ಈ Infobox ಎಲ್ಲೆಲ್ಲಿ ಉಪಯೋಗಿಸಲಾಗಿದೆಯೊ ಅಲ್ಲಿ) ಅದು ಕನ್ನಡದ ಒಂದು ಚಲನಚಿತ್ರದ ಬಗ್ಗೆ ಇರುವ ಪುಟ ಎಂದು ಮೊದಲ ಸಾಲಿನಲ್ಲಿಯೇ ತಿಳಿಯುತ್ತದೆ.

ಕೆಳಕಂಡ ಸಾಲಿನಂತೆ, ವರ್ಷವೂ ಸಾಲಿನಲ್ಲಿಯೇ ಗೊತ್ತಾಗಬೇಕಿದ್ದರೆ, manual ಆಗಿ ಹಾಕೋಣ.

'''{{PAGENAME}}''' - ವರ್ಷ [[೧೯೮೦]]ರಲ್ಲಿ ಬಿಡುಗಡೆಯಾದ [[ಕನ್ನಡ]] ಚಲನಚಿತ್ರಗಳಲ್ಲೊಂದು.

ಇದಕ್ಕೂ ಒಂದು ಟೆಂಪ್ಲೇಟು ಮಾಡಿಕೊಳ್ಳಬಹುದು {{ಕನ್ನಡಚಿತ್ರ|ವರ್ಷ}} ಎಂದು. ಆಗ, ಸದಸ್ಯರು just {{ಕನ್ನಡಚಿತ್ರ|೧೯೮೦}} ಎಂದು ಹಾಕಿದರೆ ಈ ಮೇಲಿನ ಸಾಲು ಬರುತ್ತದೆ. ಅದರ ಅವಶ್ಯಕತೆ ಇದೆಯೆ ಇಲ್ಲವೆ ತಿಳಿಸಿ.

ಬಿಡುಗಡೆಯಾದ ವರ್ಷ ಯಾವುದೆಂದು, Infoboxನಲ್ಲಿರುವ ಮಾಹಿತಿಯಿಂದ ತಿಳಿಯುತ್ತದೆ, ಮತ್ತು ಆಯಾ ವರ್ಷದ ಬಿಡುಗಡೆಯಾದ ಚಲನಚಿತ್ರಗಳು ವರ್ಗದ mention ಮಾಡಿರುವುದರಿಂದ ತಿಳಿಯುತ್ತದೆ. - ಮನ|Mana Talk - Contribs ೧೮:೩೨, ೨೭ ಆಗಸ್ಟ್ ೨೦೦೬ (UTC)

ಮನೋಹರ್, ಮೇಲಿನ workaround ಸರಿಯಲ್ಲವೆಂದು ತೋರುತ್ತದೆ. ಹೊಸ ಸದಸ್ಯರಿಗೆ ಈ ವಾಕ್ಯ (ಇದೊಂದು ಚಲನಚಿತ್ರ ಎಂಬುವ ವಾಕ್ಯ) ಎಲ್ಲಿಂದ ಬಂತು ಎನ್ನುವುದು ತಿಳಿಯದೆಯೇ ಹೋಗುವ ಸಾಧ್ಯತೆಗಳುಂಟು. ಹಾಗೆ ಸಂಪಾದಿಸಲು ಬಂದ ಓದುಗರ ವಾಕ್ಯ ಸಂಯೋಜನೆ ಸರಿಯಾಗದೆ ಅವರು ಲೇಖನಗಳನ್ನು ಸಂಪಾದಿಸದೆ ಹಾಗೆಯೇ ಬಿಡುವ ಸಾಧ್ಯತೆಗಳೂ ಉಂಟು. ಲೇಖನದ ಮುಖ್ಯ ಭಾಗ (ಅಂದರೆ ಪ್ರಮುಖ ಮಾಹಿತಿಗೆ) ಇಂತಹ ಟೆಂಪ್ಲೇಟು ಬಳಸುವುದು ಸರಿಯಿರದು.
ನಮ್ಮ ಮುಖ್ಯ ಧ್ಯೇಯ ಇಲ್ಲಿ ಹೆಚ್ಚು ಮಾಹಿತಿ ಸೇರಿಸುವುದು, ಹಾಗೂ ಹೆಚ್ಚು ಮಾಹಿತಿ ಸೇರಿಸುವುದಕ್ಕೆ ಅನುವು ಮಾಡಿಕೊಡುವುದರ ಕಡೆಗಿರಬೇಕು.
ಮತ್ತೊಂದು ವಿಷಯ, ಹೊಸ ಚಲನಚಿತ್ರ ಪುಟಗಳನ್ನು ಸೇರಿಸುತ್ತಿದ್ದೀರ. ಅದರೊಂದಿಗೆ ಶೀರ್ಷಿಕೆಯಲ್ಲಿ "(ಚಲನಚಿತ್ರ)" ಎಂದು ಸೇರಿಸಿಬಿಡಿ. "ಇಬ್ಬರು ಹೆಂಡಿರ ಮುದ್ದಿನ ಪೋಲಿಸ್", "ಬಾಂಬೆ ದಾದ", "ಹಳ್ಳಿ ರಂಭೆ ಬೆಳ್ಳಿ ಬೊಂಬೆ‎" ಇಂತದ್ದೆಲ್ಲ ವಿಕಿಪೀಡಿಯದಲ್ಲಿ ಚೆನ್ನಾಗಿ ಕಾಣೋದಿಲ್ಲ ಕಣ್ರೀ. at least "(ಚಲನಚಿತ್ರ) ಎಂದು ಶೀರ್ಷಿಕೆಯಲ್ಲಿ ಸೇರಿಸಿ ಹಾಕಿ ಮಾರಾಯ್ರೇ! -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೪:೨೯, ೩೦ ಆಗಸ್ಟ್ ೨೦೦೬ (UTC)
ಈ ಕೆಲಸ priorityಯೆ? Infobox ನೋಡಿದರೆ ಅದು ಚಲನಚಿತ್ರ ಅಂತ ಸುಲಭವಾಗಿ ತಿಳಿಯುತ್ತದೆ. ಹೊಸ ಟೆಂಪ್ಲೇಟ್ ಹಾಕುವ ಸಮಯವನ್ನು ಚುಟುಕುಗಳ ವಿಸ್ತೀರ್ಣಕ್ಕೆ ಉಪಯೋಗಿಸಬಹುದಲ್ಲ! ಶುಶ್ರುತ ೨೧:೫೫, ೨೭ ಆಗಸ್ಟ್ ೨೦೦೬ (UTC)
ಸರಿ. - ಮನ|Mana Talk - Contribs ೦೧:೪೦, ೨೮ ಆಗಸ್ಟ್ ೨೦೦೬ (UTC)
"ಇಬ್ಬರು ಹೆಂಡಿರ ಮುದ್ದಿನ ಪೋಲೀಸ್"... ಇಂಥ ಹೆಸರುಗಳು ವಿಕಿಪೀಡಿಯಾದಲ್ಲಿ ಚೆನ್ನಾಗಿ ಕಾಣುವದಿಲ್ಲ ಎನ್ನುವದಾದರೆ,"ಸತ್ಯ ಹರಿಶ್ಚಂದ್ರ", "ಮಹಾಸತಿ ಅನಸೂಯಾ" ಇಂತಹ ಹೆಸರುಳ್ಳ ಸಿನಿಮಾಗಳನ್ನಷ್ಟೆ ವಿಕಿಪೀಡಿಯಾದಲ್ಲಿ ಸೇರಿಸಬೇಕಾದಿತು. ವಿಕಿಪೀಡಿಯಾ ಒಂದು amoral ವಿಶ್ವಕೋಶ.
ಬೇರೆಯವರ decency ಮೇಲೆ ನಿರ್ಣಯ ಕೊಡದೆ, ಮಾಹಿತಿ ನೀಡುವದಷ್ಟೆ ನಮ್ಮ ಕೆಲಸ. ಸರಿ ತಾನೆ?

Sunaath ೧೪:೫೩, ೩೦ ಆಗಸ್ಟ್ ೨೦೦೬ (UTC)ಸುನಾಥ

ಸುನಾಥರು ಸಂಪೂರ್ಣ ಚರ್ಚೆಯನ್ನು ಓದಿ ಪ್ರತಿಕ್ರಿಯೆ ಸೇರಿಸಿದರೆ ಉತ್ತಮ. ಪ್ರಧಾನ ವಿಷಯದಿಂದ ಚರ್ಚೆಯನ್ನು ದೂರ ಸೆಳೆಯುತ್ತಿದ್ದೀರಿ.
ಹೆಸರು ಸರಿ ಕಾಣುತ್ತದೋ ಇಲ್ಲವೋ ಎಂಬದಲ್ಲ ಮುಖ್ಯವಾದುದು. ಅದನ್ನು present ಮಾಡುವ ರೀತಿ! ಪಠ್ಯವೊಂದರಲ್ಲಿ "ಇಬ್ಬರು ಹೆಂಡಿರ ಮುದ್ದಿನ ಪೋಲೀಸ್" ಎಂಬ ಶೀರ್ಷಿಕೆಯ ಪುಟ ಸೇರಿಸಿದ್ದು ನೋಡಿದ್ದರೆ ದಯವಿಟ್ಟು ತಿಳಿಸಿ.
ಪಠ್ಯಪುಸ್ತಕಕ್ಕೂ, ವಿಕಿಪೀಡಿಯಕ್ಕೂ ವ್ಯತ್ಯಾಸವಿದೆ. ವಿಕಿಪೀಡಿಯ ಪಠ್ಯಪುಸ್ತಕವಲ್ಲ. ವಿಕಿಪೀಡಿಯ - ಒಂದು ಮುಕ್ತ ವಿಶ್ವಕೋಶ. - ಮನ|Mana Talk - Contribs ೨೨:೫೫, ೩೦ ಆಗಸ್ಟ್ ೨೦೦೬ (UTC)
ಮತ್ತೊಂದು ಅಂಶ ಇಲ್ಲಿ ನಾವೆಲ್ಲ ಮರೆಯುತ್ತಿರುವುದೇನೆಂದರೆ ಹೀಗೆ ಸೇರ್ಪಡೆಯಾಗುತ್ತಿರುವ ಪುಟಗಳು ಶುದ್ಧ stubಗಳು. ಮಾಹಿತಿಭರಿತ ಪುಟಗಳಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲದರ ಬಗ್ಗೆ ಆಗಲೇ ನಾನು ಅರಳಿಕಟ್ಟೆಯಲ್ಲಿ ಬರೆದಿದ್ದೆ. ಆ ಬಗ್ಗೆ ನಾವೆಲ್ಲ ಗಮನವಹಿಸದೆ ಹೆಸರಿಗೋಸ್ಕರ ಇಷ್ಟೊಂದು ಗಲಾಟೆ ಏತಕ್ಕೆ? ವಿಕಿಪೀಡಿಯದ ಕ್ವಾಲಿಟಿ ಹದಗೆಡುವಂತೆ, ಅಂಕಿ ಅಂಶಗಳೇ ಮುಖ್ಯವಾಗಿ ಲೇಖನಗಳನ್ನು ಸೇರಿಸಿಕೊಂಡು ಹೋಗುತ್ತೇವೆ ಎಂಬ ಹಠವಾದರೆ ಮುಂದುವರೆಸಿಕೊಂಡು ಹೋಗಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೮:೧೦, ೩೦ ಆಗಸ್ಟ್ ೨೦೦೬ (UTC)

ಎಲ್ಲಾ ಚಲನಚಿತ್ರ ಪುಟಗಳಿಗೂ (ಚಲನಚಿತ್ರ) ಎಂದು ಏಕೆ ಸೇರಿಸಬಾರದೆಂಬುದಕ್ಕೆ....

  • (ಚಲನಚಿತ್ರ) ಎಂದು ಸೇರಿಸುವ ಅವಶ್ಯಕತೆ ಬರುವುದು ದ್ವಂದ್ವ ನಿವಾರಣೆಯ ಸಲುವಾಗಿ ಮಾತ್ರ. ದ್ವಂದ್ವ ಇಲ್ಲದಿದ್ದಾಗ, ಚಿತ್ರದ ಹೆಸರೇ ಲೇಖನದ ಹೆಸರಾಗಿರುತುತ್ತದೆ.
  • ಅರಳಿಕಟ್ಟೆಯಲ್ಲಿ ನಡೆದ ಚರ್ಚೆಯಲ್ಲಿ, ಮೇಲಿನ ಅಭಿಪ್ರಾಯಕ್ಕೆ ಈಗಾಗಲೇ ಸದಸ್ಯರಾದ Sritri ಸಹಮತಿ ವ್ಯಕ್ತಪಡಿಸಿದ್ದಾರೆ.
  • mailing-list ನಡೆದ ಚರ್ಚೆಯಲ್ಲಿ, ಇದೇ ಅಭಿಪ್ರಾಯಕ್ಕೆ Tvsrinivas41 ಮತ್ತು Pavanaja(ಇವರಿಬ್ಬರೂ ಈಗ ಸಕ್ರಿಯ ಸದಸ್ಯರಲ್ಲದೆ ಇರಬಹುದು) ಅವರು ಸಹಮತಿ ಸೂಚಿಸಿದ್ದಾರೆ.
  • "Infobox ನೋಡಿದರೆ ಅದು ಚಲನಚಿತ್ರ ಅಂತ ಸುಲಭವಾಗಿ ತಿಳಿಯುತ್ತದೆ" ಎಂದು ಸದಸ್ಯರಾದ ಶುಶ್ರುತ ಹೇಳಿದ್ದಾರೆ. ಈ ಅಭಿಪ್ರಾಯವನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ.
  • ಎಲ್ಲಾ ಸಾಹಿತಿಗಳ ಪುಟಕ್ಕೆ (ಸಾಹಿತಿ) ಎಂದೂ, ಎಲ್ಲಾ ದೇಶಗಳ ಲೇಖನಗಳಿಗೆ (ದೇಶ) ಎಂದೂ, ಎಲ್ಲಾ ಊರುಗಳ ಹೆಸರಿಗೆ (ಊರು) ಎಂದೂ, ಎಲ್ಲಾ ರಾಜಕಾರಣಿಗಳ ಹೆಸರಿಗೆ (ರಾಜಕಾರಣಿ) ಎಂದು, ಎಲ್ಲಾ ಕ್ರೀಡಾಪಟುಗಳ ಹೆಸರಿಗೆ (ಕ್ರೀಡಾಪಟು) ಎಂದು ನಾವು ಸೇರಿಸುತ್ತಿಲ್ಲ. ಅದೇ ನೀತಿ ಚಲನಚಿತ್ರ ಪುಟಗಳಿಗೂ ಅನ್ವ್ಯವಾಗುತ್ತದೆ. ಹಾಗಾಗಿ, ಎಲ್ಲಾ ಚಲನಚಿತ್ರಪುಟಗಳಿಗೂ (ಚಲನಚಿತ್ರ) ಎಂದು ಸೇರಿಸುವುದು ಸಮಂಜಸವಾಗುವುದಿಲ್ಲ.
  • ಇದರ ಬಗ್ಗೆ ಆಂಗ್ಲ ವಿಕಿಪೀಡಿಯದಲ್ಲಿ ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಇಲ್ಲಿ ಕಾಣಬಹುದು.

http://en.wikipedia.org/wiki/Category:Indian_films

ಎಲ್ಲಾ ಚಿತ್ರಗಳಿಗೂ (film) ಎಂದು ಸೇರಿಸಿಲ್ಲ. ಎಲ್ಲೆಲ್ಲಿ ದ್ವಂದ್ವ ಇದೆಯೋ ಅಲ್ಲಲ್ಲಿ ಮಾತ್ರ ಸೇರಿಸಿದ್ದಾರೆ (ಉದಾ: ಅಶೋಕ್, ಅರ್ಜುನ್). ಮಿಕ್ಕೆಲ್ಲಾ ಚಿತ್ರಗಳ ಲೇಖನಗಳಿಗೂ ಚಿತ್ರದ ಹೆಸರೇ ಲೇಖನದ ಹೆಸರೂ ಆಗಿದೆ.

  • ಕೊನೆಯದಾಗಿ, ಸುನಾಥರು ಹೇಳಿದಂತೆ, ಮಾಹಿತಿಗೆ ಹೆಚ್ಚು ಒತ್ತು ಕೊಡೋಣ. ಚಿತ್ರದ ಹೆಸರು ಒಬ್ಬಬ್ಬರ ದೃಷ್ಟಿಯಲ್ಲಿ ಒಂದೊಂದು ರೀತಿ ಕಾಣಬಹುದು.

"ಇಬ್ಬರು ಹೆಂಡಿರ ಮುದ್ದಿನ ಪೋಲೀಸ್" ಆಗಲಿ, "ವಾತ್ಸಲ್ಯ ಪಥ" ಆಗಲಿ, "ಸತ್ಯ ಹರಿಶ್ಚಂದ್ರ", "ಮಹಾಸತಿ ಅನಸೂಯಾ" ಆಗಲಿ, ನನ್ನ ದೃಷ್ಟಿಯಲ್ಲಿ ಎಲ್ಲವೂ ಒಂದೆ.

ಚಲನಚಿತ್ರ ಪುಟದಲ್ಲಿರುವ ಮಾಹಿತಿ ಏನಾದರೂ ತಪ್ಪಿದ್ದರೆ, POV ಇದ್ದರೆ, ಅದರ ಬಗ್ಗೆ ಖಂಡಿತಾ ಚರ್ಚಿಸಿ ಸರಿಪಡಿಸುವತ್ತ ಮುನ್ನಡೆಯೋಣ. ಇನ್ನೂ ಹೆಚ್ಚು ಮಾಹಿತಿ ಹಾಕುವುದರ ಬಗ್ಗೆಯಂತೂ ಎರಡು ಮಾತಿಲ್ಲ. - ಮನ|Mana Talk - Contribs ೧೬:೩೦, ೩೦ ಆಗಸ್ಟ್ ೨೦೦೬ (UTC)

ಚರ್ಚೆ ಸುಮ್ಮನೆ ಹಠವುಳಿಸಿಕೊಳ್ಳುವ ಸ್ವರೂಪ ಪಡೆಯುತ್ತಿದೆ. ಈ ಪ್ರಾಜೆಕ್ಟಿನ ಪ್ರಾರಂಭದಿಂದ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಆದರೆ ಹೆಸರುಗಳಿಗಾಗಿ ಇಷ್ಟೊಂದು ಗುದ್ದಾಡುವಂತಾಗುತ್ತಿರುವುದು ಬಹುಶಃ ಇದೇ ಮೊದಲು. ಇಷ್ಟು ದಿನ ಸಮುದಾಯ ಕಟ್ಟಿದ ಅನುಭವದಿಂದ, ಗುಣಮಟ್ಟ ಕಾಯ್ದುಕೊಳ್ಳುವುದೂ ಮಾಹಿತಿ ಸೇರಿಸುವುದರ ಜೊತೆಗಿರುವ ಜವಾಬ್ದಾರಿ ಎಂಬ ಉದ್ದೇಶದಿಂದ ಮುಂದಿಟ್ಟ ಪ್ರಸ್ತಾವನೆ ಅದು. ನಿಮ್ಮದೇ ಸರಿ ಎಂಬ ಹಠವಾದರೆ ಹಾಗೇ ಮುಂದುವರೆಯಿರಿ.
ಹಠ ಸಾಧಿಸುವ ಉದ್ದೇಶ ಇಲ್ಲಿ ಯಾರಿಗೂ ಇದ್ದಂತಿಲ್ಲ. (ಚಲನಚಿತ್ರ) ಎಂದು ಎಲ್ಲಾ ಚಲನಚಿತ್ರ ಪುಟಗಳಲ್ಲಿ ಸೇರಿಸಬೇಕೆಂಬ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸುವ ಕಾರಣಗಳನ್ನು ಸಲ್ಲಿಸಿದ್ದೇನೆ. ಗುಣಮಟ್ಟ ಕಾಯ್ದುಕೊಳ್ಳುವುದು ಮಾಹಿತಿ ಸೇರಿಸುವುದರ ಜೊತೆಗಿರುವ ಜವಾಬ್ದಾರಿ ಎಂದು ಖಂಡಿತಾ ಒಪ್ಪುತ್ತೇನೆ. (ಚಲನಚಿತ್ರ) ಎಂದು ಸೇರಿಸುವುದರಿಂದ ಗುಣಮಟ್ಟ ಕಾಯ್ದುಕೊಂಡಂತಾಗುವುದಿಲ್ಲ.
ನಮ್ಮದೇ ಸರಿ ಎಂಬ ಹಠ ಖಂಡಿತಾ ಇಲ್ಲ. ವಸ್ತುನಿಷ್ಟ ಚರ್ಚೆಗೆ ಸದಾ ಮುಕ್ತ. - ಮನ|Mana Talk - Contribs ೨೨:೫೫, ೩೦ ಆಗಸ್ಟ್ ೨೦೦೬ (UTC)
ವಿಕಿಪೀಡಿಯದ ಮಟ್ಟಿಗೆ ಗಹನವಾದ ವಿಚಾರಗಳನ್ನು ಮಂಡಿಸಿದಾಗ ಉತ್ತರ ನೀಡದ ಕೆಲವರು ಮೇಯ್ಲಿಂಗ್ ಲಿಸ್ಟಿನಲ್ಲಿ ನಿಮ್ಮ ಪತ್ರಕ್ಕೆ ಉತ್ತರ ನೀಡುವುದು, ಹಾಗೂ ಅದನ್ನು ಇಲ್ಲಿ ನಿಮ್ಮ ಹಠ ಸಾಧಿಸಲು ಎತ್ತಿಹಿಡಿಯುವುದು ಶೋಚನೀಯ ವಿಷಯ. ವಿಕಿಪೀಡಿಯದಿಂದ ದೂರ ಸರಿದು ಒಂದಷ್ಟು ದಿನ ನಿಮ್ಮೆಲ್ಲರ ಕೈಯಲ್ಲಿ ಲಗಾಮು ಕೊಟ್ಟು ಹೋಗುವ ಸಮಯ ಈಗ ಬಂದಿದೆ. ನಿಮ್ಮ ಇಚ್ಛೆಯಂತೆ ನಡೆಸಿಕೊಂಡು ಹೋಗಿ. ಧನ್ಯವಾದಗಳು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೮:೨೧, ೩೦ ಆಗಸ್ಟ್ ೨೦೦೬ (UTC)
ವೈಯುಕ್ತಿಕ ಅವಹೇಳನ ಮಾಡದಿರೋಣ. ವಸ್ತುನಿಷ್ಠ ಚರ್ಚೆಯಿಂದ ದೂರ ಸರಿಯದಿರೋಣ. - ಮನ|Mana Talk - Contribs ೨೨:೫೫, ೩೦ ಆಗಸ್ಟ್ ೨೦೦೬ (UTC)

ಪ್ರಿಯ ನಾಡಿಗರೆ, ವಿಕಿಪೀಡಿಯಾ ನಿರ್ಮಾಣ ಹಾಗು ಬೆಳವಣಿಗೆಯ ಮುಂಚೂಣಿಯಲ್ಲಿದ್ದ ನೀವು ಲಗಾಮು ಚೆಲ್ಲುವ ಮಾತನಾಡಿದಾಗ ವಿಷಾದವಾಗುತ್ತದೆ. ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಗುಣಮಟ್ಟವನ್ನು ಬಿಟ್ಟುಕೊಟ್ಟು , ಅಂಕಿ ಸಂಖ್ಯೆಗಳನ್ನು ಬೆಳೆಸುವದು ಸರಿಯೆ ಎಂದು ನೀವು ಕೇಳುತ್ತಿದ್ದೀರಿ. ವಿಕಿಪೀಡಿಯಾದ ಗುಣಮಟ್ಟ ಬೇರೆ; ಚಲನಚಿತ್ರದ ಗುಣಮಟ್ಟ ಬೇರೆ. ಎರಡನ್ನೂ ಒಂದೆ ಎಂದು ಭ್ರಮಿಸುವದು ಬೇಡ. ಆದರೆ ವಿಕಿಪೀಡಿಯಾದ ಸಭ್ಯ ಶೋಧಕರಿಗೆ ಯಾದೃಚ್ಛಿಕ ಪುಟಗಳು ಭಯಾನಕವಾಗಬಾರದೆಂದಿದ್ದರೆ, ಒಂದೋ ಚಲನಚಿತ್ರಗಳನ್ನೇ ಯಾದೃಚ್ಛಿಕ ಪುಟದಿಂದ bar ಮಾಡಬೇಕು, ಇಲ್ಲವೆ ಚಲನಚಿತ್ರಗಳಿಗೆ ಮನ ಸೂಚಿಸಿದ infobox ಅಳವಡಿಸಿಕೊಳ್ಳಬೇಕು.infobox ಒಳ್ಳೆಯ via media ಎನ್ನಿಸುತ್ತೆ. ಏನು ಮಾಡೋಣ? Sunaath ೦೮:೦೦, ೩೧ ಆಗಸ್ಟ್ ೨೦೦೬ (UTC)ಸುನಾಥ

ಸುನಾಥರೆ, ಎಲ್ಲಾ ಚಲನಚಿತ್ರ ಪುಟಗಳಿಗೆ ಈಗಾಗಲೆ Infobox ಅನ್ನು ಹಾಕಲಾಗಿದೆ, ಹೊಸ ಪುಟಗಳಿಗೂ Infobox ಅನ್ನು ಸೇರಿಸಿಯೇ ಹಾಕಲಾಗುತ್ತಿದೆ. - ಮನ|Mana Talk - Contribs ೧೪:೧೨, ೩೧ ಆಗಸ್ಟ್ ೨೦೦೬ (UTC)

ಚಲನಚಿತ್ರ ಲೇಖನಗಳಿಗೆ ಸಂಬಂಧಿಸಿದಂತೆ ಮೇಲಿನ ಎಲ್ಲ ವಿಷಯಗಳನ್ನು ಓದಿಕೊಂಡು ಈ ನನ್ನ ಅಭಿಪ್ರಾಯ ಹಾಗು ಪರಿಹಾರ ಕಾರ್ಯವನ್ನು ಮಂಡಿಸುತ್ತಿರುವೆನು. ಆದ್ದರಿಂದ ಯಾವುದೇ ಸಂದೇಶಕ್ಕೆ ಉತ್ತರದಂತೆ ಬರೆಯುತ್ತಿಲ್ಲ. ಇಲ್ಲಿ ಒಟ್ಟಾರೆ ಮಹತ್ವ ಒಂದು ಚಲನಚಿತ್ರ Infobox ಇರುವ ಪುಟದ ಶೀರ್ಷಿಕೆಗಷ್ಟೇ ಸೀಮಿತವಾಗದೆ, ಚಿತ್ರಗಳ ಲೇಖನಗಳ ಒಟ್ಟು ಸಂಖ್ಯೆ (ವಿಕಿಯಲ್ಲಿರುವ ಎಲ್ಲ "ಸಂಪೂರ್ಣ" ಲೇಖನಗಳಿಗೆ ಹೋಲಿಸಿದಾಗ), ಅವುಗಳು ಸೇರ್ಪಡೆಯಾಗುತ್ತಿರುವ ವೇಗ ಇವುಗಳನ್ನು ಗಮನದಲ್ಲಿಟ್ಟುಕೊಂಡು ನೋಡಬೇಕು. ವರ್ಷಗಳ ಕ್ರಮದಲ್ಲಿ ಕನ್ನಡ ಚಿತ್ರರಂಗದ ಎಲ್ಲ ಚಿತ್ರಗಳ ಮಾಹಿತಿಯನ್ನು ಒಂದೆಡೆ ಒದಗಿಸುವ ಕಾರ್ಯ ಸರಿಯಷ್ಟೇ. ಹಾಗೆಯೇ ಸಂಪೂರ್ಣ ಸಾಹಿತ್ಯ ಕೃತಿಗಳ ಮಾಹಿತಿ, ಕರ್ನಾಟಕದ ಪ್ರತಿಯೊಂದು ಊರು (ನಗರ/ಜಿಲ್ಲಾಕೇಂದ್ರ/ಹೋಬಳಿ/ಹಳ್ಳಿ)ಗಳ ಮಾಹಿತಿ, ಎಲ್ಲ ಶಾಲಾ ಕಾಲೇಜುಗಳ ಪಟ್ಟಿ ಇವೇ ಮುಂತಾದ ಆನ್ಲೈನ್ ಡೇಟಾಬೇಸ್ ಮಾದರಿಯ ಪ್ರಾಜೆಕ್ಟ್ಗಳು - ಚಲನಚಿತ್ರಗಳ ಪುಟಗಳು ಸೇರುತ್ತಿರುವ ವೇಗದಲ್ಲೇ ನಡೆದುಕೊಂಡು ಬಂದರೆ, ಆಗ ಒಂದು ಸಮತೋಲನ ಬರುವ ಸಾಧ್ಯತೆಯಿದೆ. ವಿಕಿಯಲ್ಲಿ ಸಭ್ಯಾಸಭ್ಯತೆಯ ವಿಚಾರ ಇಲ್ಲದಿದ್ದರೂ, ಕನ್ನಡ ಗಣಕ ಜಗತ್ತಿನಲ್ಲಿ ಹಾಗು ವಿಕಿಯ ಮೂಲ ಉದ್ದೇಶಗಳಲ್ಲಿ ಒಂದಾದ "ಹಳ್ಳಿ ಹಳ್ಳಿಗಳಿಗೂ ಮುಕ್ತ ಮಾಹಿತಿ ತಲುಪಿಸುವ ಕೈಂಕರ್ಯ"ದ ದಿಸೆಯಲ್ಲಿ ಮುಂದುವರೆಯಬೇಕಾದರೆ, ವಿಕಿ ೮೦% ಚಲನಚಿತ್ರ ಡಿ.ಬಿ. ತಾಣದಂತಿರದೆ, ಇತರ ಮಾಹಿತಿಯೂ ಅದೇ ಪ್ರಮಾಣದಲ್ಲಿ ಶೇಖರಣೆಯಾಗಬೇಕಾಗಿದೆ. ಈಗ ಆಂಗ್ಲ ವಿಕಿಯಲ್ಲೂ ಚಿತ್ರಗಳ ಲೇಖನಗಳಿವೆ, "ಎಲ್ಲ" ರೀತಿಯ ಚಿತ್ರಗಳ ಲೇಖನಗಳಿವೆ, ಅವೇ ಬಹುಸಂಖ್ಯೆಯಲ್ಲಿಲ್ಲ. ಹಾಗೆಯೇ ಇವು ಸಂಪೂರ್ಣ ಲೇಖನಗಳಾಗಿವೆ, ಅಲ್ಲಿ ತೀರಾ ಸಾಧಾರಣ ಚಿತ್ರಕ್ಕೂ ಸಾಕಷ್ಟು ಮಾಹಿತಿ ಸೇರಿದೆ. ಹಾಗೆಯೇ ಶೀರ್ಷಿಕೆಯಲ್ಲಿ ಚಲನಚಿತ್ರ ಎಂದು ಸೇರಿಸಿದ ಮಾತ್ರಕ್ಕೆ ಸಮತೋಲನ/ಗುಣಮಟ್ಟ ಸುಧಾರಿಸದು. ಸಮತೋಲನ ಕಾಪಾಡುವ ದಿಸೆಯಲ್ಲಿ ಹಾಗು ಯಾಧೃಚ್ಛಿಕ ಪುಟದಲ್ಲಿ ವಿಹರಿಸುವಾಗ ಅದು ಚಲನಚಿತ್ರಮಯವಾಗದಿರಲು ಕೆಲವು ಸಲಹೆಗಳು:

೧. ಒಂದು ಚಲನಚಿತ್ರ ಪುಟ "ವಿಕಿ ಚಲನಚಿತ್ರ ಲೇಖನ"ವಾಗಲು ಸದ್ಯದ Title card Infobox ಅಲ್ಲದೇ, ಇತರ ಕನಿಷ್ಟ ಮಾಹಿತಿ ಏನಿರಬೇಕು ಎಂಬುದರ ನಿರ್ಧಾರ. ಆಂಗ್ಲ ವಿಕಿಯ ಚಲನಚಿತ್ರ ಪ್ರಾಜೆಕ್ಟ್ಗಳಿಂದ ಸ್ವಲ್ಪ ಉಪಯೋಗ ಪಡೆಯಬಹುದು. ಮುಖ್ಯವಾಗಿ ೨-೩ ಸಾಲುಗಳ ಸಾರಾಂಶ, ಪಾತ್ರ ಪರಿಚಯ, ಪ್ರಶಸ್ತಿ-ಪುರಸ್ಕಾರಗಳು, ಚಿತ್ರದ ಗಳಿಕೆ, ಸಾಧಿಸಿದ ಮೈಲಿಗಲ್ಲುಗಳು - ಹೀಗೆ ಒಂದಿಷ್ಟು ವಿಭಾಗಗಳನ್ನು ಮಾಡಿ ಅದನ್ನು "ಚಲನಚಿತ್ರ ಲೇಖನ" ಟೆಂಪ್ಲೇಟನ್ನಾಗಿ ಮಾಡುವುದು ಹಾಗು ಸಾಧ್ಯವಾದಷ್ಟು ಚಿತ್ರಗಳಿಗೆ ಈ ರೀತಿಯಾಗಿ ಮಾಹಿತಿಯನ್ನು ಹೂಡುತ್ತ ಬರೋಣ.

ಸಾರಾಂಶ, ಪಾತ್ರ ಪರಿಚಯ, ಪ್ರಶಸ್ತಿಗಳು ಇತ್ಯಾದಿ ಮಾಹಿತಿ ಸೇರಿಸುವ ಯೋಚನೆ ಉತ್ತಮವಾಗಿದೆ. ಇದನ್ನು ಒಂದು ಟೆಂಪ್ಲೇಟು ಮೂಲಕ ಹಾಕುವುದಕ್ಕಿಂತ, ನೇರವಾಗಿ ಹಾಕುವುದು ಉತ್ತಮ ಎಂದು ನನ್ನ ಅಭಿಪ್ರಾಯ. ಇದರ ಉಪಯೋಗ: ಲೇಖನದಲ್ಲಿಲ್ಲದ ಮಾಹಿತಿ ಯಾರಿಗಾದರು ತಿಳಿದಿದ್ದರೆ, ಅವರು ನೇರವಾಗಿ ಅದನ್ನು ಸೇರಿಸಬಹುದು.
ಚಲನಚಿತ್ರ ಪುಟಗಳಿಗೆ ಹಾಕಲೆಂದು ಈಗಾಗಲೆ ಎರಡು ಟೆಂಪ್ಲೇಟುಗಳಿವೆ (Infobox ಚಲನಚಿತ್ರ ಮತ್ತು Infobox ಚಿತ್ರಗೀತೆ). ಮತ್ತೊಂದು ಟೆಂಪ್ಲೇಟು ಸೇರಿಸಿದರೆ, ಲೇಖನದಲ್ಲಿ ಟೆಂಪ್ಲೇಟುಗಳು ಮಾತ್ರ ಉಳಿದು ನೇರವಾಗಿ ಸೇರಿಸುವ ಮಾಹಿತಿಯೇ ಇಲ್ಲವಾಗಬಹುದು.
ಎರಡೂ Infoboxಗಳ ಮಾಹಿತಿಯೊಂದಿಗೆ, ಮತ್ತಷ್ಟು ಮಾಹಿತಿಯನ್ನು ಸೇರಿಸಿದ ಪುಟಗಳ ಉದಾಹರಣೆ: ಆಪರೇಷನ್ ಡೈಮಂಡ್ ರ್ಯಾಕೆಟ್. - ಮನ|Mana Talk - Contribs

೨. ಈಗಿರುವ ಎಲ್ಲ ಚಲನಚಿತ್ರ ಪುಟಗಳಿಗೆ "ಚುಟುಕು-ಚಲನಚಿತ್ರ" ಲೇಖನ ಟ್ಯಾಗನ್ನು Bot ಅಥವಾ ಬೇರಾವುದೇ Automatic ವಿಧಾನದಿಂದ ಲಗತ್ತಿಸುವುದು. ಹಾಗು ಹೊಸ ಪುಟ ಸೇರಿಸುವಾಗ ಚುಟುಕು ಟ್ಯಾಗಿನೊಂದಿಗೆ ಸೇರಿಸೋಣ.

ಹೌದು. Bot ಮೂಲಕ {{ಚುಟುಕು-ಚಲನಚಿತ್ರ}} ಟ್ಯಾಗನ್ನು ಸೇರಿಸುವ ಸಲಹೆ ಒಪ್ಪುವಂತಹದು. ಮತ್ತಷ್ಟು ಮಾಹಿತಿ ಸೇರಿಸಿದ ಪುಟಗಳಿಗೆ, manual ಆಗಿ ಟ್ಯಾಗನ್ನು ತೆಗೆದು ಹಾಕಬಹುದು.
ಹೊಸಪುಟ ಸೇರಿಸುವಾಗ, ಚುಟುಕು ಟ್ಯಾಗಿನೊಂದಿಗೆ ಸೇರಿಸೋಣ ಎಂದು ಈಗಾಗಲೆ ಹೆಚ್.ಪಿ.ನಾಡಿಗ್ ಅವರು ಸಲಹೆಯಿತ್ತಿದ್ದಾರೆ ಮತ್ತು ಅದಕ್ಕೆ ನೆರವಾಗುವಂತೆ {{ಚುಟುಕು-ಚಲನಚಿತ್ರ}} ಟೆಂಪ್ಲೇಟನ್ನು ಸಿದ್ಧಪಡಿಸಿದ್ದಾರೆ. ಆಗಿನಿಂದ ಹಾಕಿರುವ ಎಲ್ಲಾ ಚಲನಚಿತ್ರ ಪುಟಗಳಲ್ಲಿಯೂ ಈ ಟ್ಯಾಗನ್ನು ಸೇರಿಸಲಾಗಿದೆ. ಮುಂದೆಯೂ ಇದನ್ನು ಪಾಲಿಸೋಣ.
ಈ ಸಲಹೆಯನ್ನು ಒಂದು ಪ್ರಸ್ತಾವನೆಯೆಂದು ಪರಿಗಣಿಸಿ, ಪ್ರತ್ಯೇಕ ತಲೆಬರಹದಡಿ ಚರ್ಚಿಸೋಣವೇ? - ಮನ|Mana Talk - Contribs

೩. ಯಾಥೃಚ್ಛಿಕ ಪುಟದಲ್ಲಿ ಯಾವುದೇ ರೀತಿಯ ಚುಟುಕು ಲೇಖನಗಳು ಬರದಿರುವಂತೆ ತಾಂತ್ರಿಕವಾಗಿ ನಿರ್ಬಂಧಿಸೋಣ.

ಸಲಹೆ ಸಮಂಜಸವಾಗಿದೆ. ಇದಕ್ಕೆ ತಾಂತ್ರಿಕ ತೊಡಕುಗಳೇನಾದರು ಇದೆಯೇ ಎಂಬುದನ್ನು ಕಂಡುಹಿಡಿಯಬೇಕಿದೆ.
ಇದನ್ನು ಕಾರ್ಯರೂಪಕ್ಕೆ ತಂದಲ್ಲಿ ವಿಕಿಪೀಡಿಯದಲ್ಲಿ ಈಗಿರುವ ಬಹಳಷ್ಟು ಖಾಲಿಪುಟಗಳು, ಒಂದು ಅಥವಾ ಎರಡು ಸಾಲುಗಳು ಮಾತ್ರ ಇರುವ ಚುಟುಕು ಪುಟಗಳು, ಯಾದೃಚ್ಛಿಕವಾಗಿ ವಿಕಿಪೀಡಿಯ ವಿಹರಿಸುತ್ತಿರುವವರಿಗೆ ದೊರಕುವುದು ತಪ್ಪುತ್ತದೆ.
ಈ ಸಲಹೆಯನ್ನು ಒಂದು ಪ್ರಸ್ತಾವನೆಯೆಂದು ಪರಿಗಣಿಸಿ, ಪ್ರತ್ಯೇಕ ತಲೆಬರಹದಡಿ ಚರ್ಚಿಸೋಣವೇ? - ಮನ|Mana Talk - Contribs

೪. ವಿಕಿಯಲ್ಲಿ ಇತರ ಉಪಯುಕ್ತ Listing Database Projectಗಳನ್ನು ಪ್ರಾರಂಭಿಸೋಣ - ಚಿತ್ರಗಳ ಪಟ್ಟಿಯ ಮಾದರಿಯಲ್ಲಿ ಸಾಹಿತ್ಯ ಭಂಡಾರ, ನಾಟಕಗಳ ಲಿಸ್ಟಿಂಗ್, "ಊರು-ಕೇರಿ"ಗಳ ಪಟ್ಟಿ (really, a "City and Streets" Database !) ಇತ್ಯಾದಿ. ಇವುಗಳನ್ನು ಚಲನಚಿತ್ರ ಪುಟಗಳ ಪ್ರಮಾಣದಲ್ಲೇ ಬೆಳಸುವುದು. ಸಮತೋಲನದ ದೃಷ್ಟಿಯಿಂದ ಪ್ರಾರಂಭದಲ್ಲಿ ಇವು ಚುಟುಕು ಲೇಖನಗಳಾದರೂ ಅಡ್ಡಿಯಿಲ್ಲ.

ಮಾಹಿತಿಯನ್ನೊದಗಿಸುವಂತಹ ಯಾವುದೇ ಯೋಜನೆಗಳನ್ನು ಪ್ರಾರಂಭಿಸಬಹುದು. ಸಮತೋಲನದ ಹಾದಿಯಲ್ಲಿ, ಚಲನಚಿತ್ರ ಪುಟಗಳಿಗೆ ಪೈಪೋಟಿಯಾಗಿ ಹೊಸ ಲೇಖನಗಳನ್ನು ಹಾಕದಿರೋಣ. ಸಮುದಾಯ ಪುಟದಲ್ಲಿನ 'ಇತರೆ ಸಹಯೋಗ' ಎಂಬ ವಿಭಾಗವೊಂದಿದೆ. ಅಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿ, ಯೋಜನೆಗಳಾವುವು, ಅವುಗಳ ಕಾರ್ಯ ನಿರ್ವಹಣೆ ಹೇಗೆ ಎಂಬ ರೂಪುರೇಷೆ ನಿರ್ಮಿಸಿ, ಮುನ್ನಡೆಯೋಣ. ಹಾಗೆಯೇ, ಸಮುದಾಯಪುಟದಲ್ಲಿನ, "ನೀವು ಮಾಡಬಹುದಾದ ಕೆಲಸಗಳು" ಎಂಬ ವಿಭಾಗದಲ್ಲಿಯೂ ಇದರ ಬಗ್ಗೆ ಬರೆಯಬಹುದು. ಆಗ ಹೊಸದಾಗಿ ಬರುವ ಸದಸ್ಯರಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯಿರುವವರು, ಕೆಲಸದಲ್ಲಿ ಕೈಸೇರಿಸುವ ಸಾಧ್ಯತೆ ಹೆಚ್ಚಾಗುತ್ತದೆ.
ಈ ಸಲಹೆಯನ್ನು ಒಂದು ಪ್ರಸ್ತಾವನೆಯೆಂದು ಪರಿಗಣಿಸಿ, ಪ್ರತ್ಯೇಕ ತಲೆಬರಹದಡಿ ಚರ್ಚಿಸೋಣವೇ? - ಮನ|Mana Talk - Contribs

೫. ಹೀಗೆ ಚಲನಚಿತ್ರಗಳಲ್ಲದೇ ಇತರ ವಿಷಯಗಳ Projectಗಳು ಒಂದು ಹಂತಕ್ಕೆ ಬಂದಾಗ, ಯಾಥೃಚ್ಛಿಕ ಪುಟದಲ್ಲಿ ಚುಟುಕು ಲೇಖನದ ನಿರ್ಬಂಧವನ್ನು ತೆಗೆಯೋಣ.

ಆ ಒಂದು ಹಂತವನ್ನು ನಿರ್ಧರಿಸುವುದು ಕಷ್ಟದ ಕೆಲಸ. ಚುಟುಕು ಲೇಖನಗಳು, ಒಂದು ಎರಡು ಸಾಲು ಮಾತ್ರ ಇರುವ ಪುಟಗಳು ಸೇರುತ್ತಲೆ ಇರುತ್ತವೆ. ಅವುಗಳು ಯಾದೃಚ್ಛಿಕ ಪುಟಗಳಲ್ಲಿ ಬರುವಂತೆ ಬಿಡುವುದು ಸರಿಕಾಣದು. ಯಾದೃಚ್ಛಿಕ ಪುಟಗಳಲ್ಲಿ ಚುಟುಕು ಲೇಖನಗಳನ್ನು ನಿರ್ಬಂಧಿಸುವುದು ಸಾಧ್ಯವೇ ಎಂದು ನಿರ್ಧಾರವಾದ ನಂತರ ಇದರ ಬಗ್ಗೆ ಚರ್ಚಿಸಿದರೆ ಸೂಕ್ತವೆಂದು ನನ್ನ ಅಭಿಪ್ರಾಯ. - ಮನ|Mana Talk - Contribs ೧೭:೫೮, ೧ September ೨೦೦೬ (UTC)

(ಸಹಿ ಹಾಕುವಷ್ಟರಲ್ಲಿ Timeout ಆಗಿತ್ತು, ಈಗ ಸಹಿ ಸೇರಿಸುತ್ತಿರುವೆ) -ಹಂಸವಾಣಿದಾಸ ೧೪:೨೯, ೩೧ ಆಗಸ್ಟ್ ೨೦೦೬ (UTC)

ಉತ್ತಮವಾದ ಸಲಹೆಗಳು; ಮಾಡಲೇಬೇಕಾದ ಕೆಲಸಗಳು.---Sunaath ೧೭:೧೯, ೩೧ ಆಗಸ್ಟ್ ೨೦೦೬ (UTC)ಸುನಾಥ