ಆಪರೇಷನ್ ಡೈಮಂಡ್ ರಾಕೆಟ್ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ
(ಆಪರೇಷನ್ ಡೈಮಂಡ್ ರ್ಯಾಕೆಟ್ ಇಂದ ಪುನರ್ನಿರ್ದೇಶಿತ)

ಆಪರೇಷನ್ ಡೈಮಂಡ್ ರಾಕೆಟ್ - ಜೇಮ್ಸ್ ಬಾಂಡ್ ಮಾದರಿಯಲ್ಲಿನ ಕನ್ನಡ ಚಲನಚಿತ್ರಗಳಲ್ಲೊಂದು. ಡಾ.ರಾಜ್‍ಕುಮಾರ್ ಸಿ.ಐ.ಡಿ ಏಜೆಂಟ್ 999 ಪಾತ್ರದಲ್ಲಿ ನಟಿಸಿದ ಈ ಚಿತ್ರದಲ್ಲಿ, ಪದ್ಮಪ್ರಿಯ ನಾಯಕಿಯಾಗಿ ನಟಿಸಿದ್ದು, ಚಿ.ಉದಯಶಂಕರ್ ರಚಿಸಿರುವ ಸಂಪೂರ್ಣ ಆಂಗ್ಲ ಸಾಹಿತ್ಯ ಇರುವ "If you come today" ಎಂಬ ಗೀತೆಯಿದೆ. ಚಿತ್ರದ ಉತ್ತರಾರ್ಧದ ಬಹುಭಾಗ ನೇಪಾಳದಲ್ಲಿ ಚಿತ್ರೀಕರಿಸಲಾಗಿದೆ. ಡಾ.ರಾಜ್ ಅಭಿನಯದ ಬಾಂಡ್ ಸರಣಿ ಚಿತ್ರಗಳಲ್ಲಿ ಈ ಚಿತ್ರವು ಕೊನೆಯದು.

ಆಪರೇಷನ್ ಡೈಮಂಡ್ ರಾಕೆಟ್ (ಚಲನಚಿತ್ರ)
ನಿರ್ದೇಶನದೊರೈ-ಭಗವಾನ್
ನಿರ್ಮಾಪಕದೊರೈ-ಭಗವಾನ್
ಚಿತ್ರಕಥೆದೊರೈ-ಭಗವಾನ್
ಕಥೆದೊರೈ-ಭಗವಾನ್
ಸಂಭಾಷಣೆಚಿ.ಉದಯಶಂಕರ್
ಪಾತ್ರವರ್ಗಡಾ.ರಾಜ್‍ಕುಮಾರ್ ಪದ್ಮಪ್ರಿಯ,ಮಂಜುಳ ರಾಜಿ, ಚಂದ್ರಲೇಖ, ವಜ್ರಮುನಿ, ಪ್ರಭಾಕರ್, ತೂಗುದೀಪ ಶ್ರೀನಿವಾಸ್, ರಾಜಾನಂದ್, ಶನಿಮಹಾದೇವಪ್ಪ, ಆಗ್ರೋ ಚಿಕ್ಕಣ್ಣ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಪಿ.ಎಸ್.ಪ್ರಕಾಶ್
ಬಿಡುಗಡೆಯಾಗಿದ್ದು೧೯೭೮
ನೃತ್ಯಉಡುಪಿ ಜಯರಾಂ
ಚಿತ್ರ ನಿರ್ಮಾಣ ಸಂಸ್ಥೆಅನುಪಮ ಮೂವೀಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್, ಎಸ್.ಜಾನಕಿ, ವಾಣಿ ಜಯರಾಂ
ಇತರೆ ಮಾಹಿತಿಸಹ ನಿರ್ದೇಶಕರು: ಎಂ.ಎಸ್.ರಾಜಶೇಖರ್, ರೇಣುಕಾಶರ್ಮ

ಸ್ವಾರಸ್ಯ

ಬದಲಾಯಿಸಿ
  • ಬಾಂಡ್ ಸರಣಿಯ ನಾಲ್ಕು ಚಿತ್ರಗಳಲ್ಲಿ ಡಾ.ರಾಜ್‍ಕುಮಾರ್ ಅಭಿನಯಿಸಿರುವ ಪಾತ್ರದ ಹೆಸರು ಪ್ರಕಾಶ್ (ಸಿ.ಐ.ಡಿ. ೯೯೯)
  • ನಾಲ್ಕೂ ಚಿತ್ರಗಳ ನಿರ್ದೇಶಕರು ದೊರೆ-ಭಗವಾನ್ ಮತ್ತು ನಾಲ್ಕೂ ಚಿತ್ರಗಳಿಗೆ ಸಂಗೀತ ನೀಡಿದವರು ಜಿ.ಕೆ.ವೆಂಕಟೇಶ್
  • ಈ ಚಿತ್ರವು ಮಾತ್ರ ವರ್ಣಚಿತ್ರ; ಉಳಿದವು ಕಪ್ಪುಬಿಳುಪು ಚಿತ್ರ.
  • ಈ ಚಿತ್ರದಲ್ಲಿ ಮಾತ್ರ ಹಾಸ್ಯನಟ ನರಸಿಂಹರಾಜು ಅಭಿನಯಿಸಿಲ್ಲ; ಉಳಿದ ಮೂರು ಚಿತ್ರಗಳಲ್ಲಿ ಬೇಬಿ ಎಂಬ ಹೆಸರಿನ ಸಿ.ಐ.ಡಿ. ಸಹಾಯಕನ/ಕಾರ್ ಚಾಲಕನ ಪಾತ್ರ ನಿರ್ವಹಿಸಿದ್ದಾರೆ.
  • ಗುಬ್ಬಿ ವೀರಣ್ಣ ಮತ್ತು ತಮ್ಮ ತಾಯಿ, ಬಾಂಡ್ ಶೈಲಿಯ ಪಾತ್ರಗಳನ್ನು ನಿರ್ವಹಿಸಿದಕ್ಕೆ ಅಸಮಾಧಾನ ತೋರಿಸಿದ್ದರು. ಅದರಿಂದ, ರಾಜ್‍ಕುಮಾರ್ ಮತ್ತೆ ಆ ರೀತಿಯ ಪಾತ್ರಗಳನ್ನು ಮಾಡಲಿಲ್ಲ.
  • ಹೆಂಗಳೆಯರೊಂದಿಗೆ ಸರಸ ಮತ್ತು ಹೆಚ್ಚು ಮಂದಿಯನ್ನು ಕೊಲೆಗೈವ ಬಾಂಡ್ ಪಾತ್ರಗಳು, ನೋಡುಗರಿಗೆ ಕೆಟ್ಟ ಮಾದರಿಯಾಗುತ್ತವೆ ಎಂಬುದು ವೀರಣ್ಣನವರ ವಾದವಾಗಿತ್ತು.
  • ನಾಲ್ಕು ಮಂದಿ, ನತನೆಯನ್ನು ಮೆಚ್ಚುವುದು ಮಾತ್ರವಲ್ಲದೆ, ಒಳ್ಳೆಯ ಬುದ್ಧಿ ಕಲಿಯಬೇಕು ಎಂಬುದು ರಾಜ್‍ಕುಮಾರ್‌ರ ತಾಯಿಯ ಒತ್ತಾಸೆಯಾಗಿತ್ತು.
  • ಹೀಗಾಗಿ, ರಾಜ್ ಮುಂದೆ ಖಳನಟರಾಗಿ ನಟಿಸಿದರೂ, ಆ ಚಿತ್ರದಲ್ಲಿ ರಾಜ್‌ರ ಒಂದು ಒಳ್ಳೆ ಪಾತ್ರವೂ ಇರುವಂತೆ ಚಿತ್ರಕಥೆ ತಯಾರು ಮಾಡಲಾಗುತ್ತಿತ್ತು. ನಾನೊಬ್ಬ ಕಳ್ಳ, ರವಿಚಂದ್ರ ಚಿತ್ರಗಳ ದ್ವಿಪಾತ್ರಕ್ಕೆ ಇದೇ ನಾಂದಿಯಾಯ್ತು.

ಇವನ್ನೂ ನೋಡಿ

ಬದಲಾಯಿಸಿ
ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
If you come today ಚಿ.ಉದಯಶಂಕರ್ ಡಾ.ರಾಜ್‍ಕುಮಾರ್
ಚಳಿ ಚಳಿ ಚಿ.ಉದಯಶಂಕರ್ ಡಾ.ರಾಜ್‍ಕುಮಾರ್, ಎಸ್.ಜಾನಕಿ
ನೀ ನಡುಗುವೆ ಏಕೆ, ಬಾ ಭಯವನು ಬಿಡು ಚಿ.ಉದಯಶಂಕರ್ ಡಾ.ರಾಜ್‍ಕುಮಾರ್
ಅಲ್ಲಿ ಇಲ್ಲಿ ನೋಡುವೆ ಏಕೆ ಚಿ.ಉದಯಶಂಕರ್ ಡಾ.ರಾಜ್‍ಕುಮಾರ್, ವಾಣಿ ಜಯರಾಂ