HPNadig
Contributions : kn : en : | TODO | Kannada | Leave a Message
Home Page | Blog | Art Gallery | | Contact me
ನಮಸ್ಕಾರ, ನೀವು ಹರಿ ಪ್ರಸಾದ್ ನಾಡಿಗ್ನ ಬಳಕೆಯ ಪುಟಕ್ಕೆ ಬಂದು ಸೇರಿದ್ದೀರಿ. . .
ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ತಮ್ಮ ನಿಜ ಜೀವನದ ಕೆಲಸ ಒತ್ತಡಗಳಿಂದ ಬಿಡುವಿಲ್ಲದ ಕಾರಣ ವಿಕಿ ವಿರಾಮ ತೆಗೆದುಕೊಂಡಿದ್ದಾರೆ. ಇವರು ನಿಮ್ಮ ಸಂದೇಶಗಳಿಗೆ ಕ್ಷಿಪ್ರವಾಗಿ ಉತ್ತರ ನೀಡದೆ ಇರುವ ಸಾಧ್ಯತೆಗಳಿವೆ.
ಕನ್ನಡ ವಿಕಿಪೀಡಿಯದಲ್ಲಿ ನಾನೊಬ್ಬ ನಿರ್ವಾಹಕ. ನಿರ್ವಾಹಕರನ್ನು ನೇಮಿಸಬಲ್ಲ ಬ್ಯೂರೋಕ್ರಾಟ್ ಕೂಡ. ಕೆಲವು ವರ್ಷ ವಿಕಿಪೀಡಿಯ ಯೋಜನೆಗಳ ಹಿಂದಿರುವ ವಿಕಿಮೀಡಿಯ ಫೌಂಡೇಶನ್ನಿನ ಚ್ಯಾಪ್ಟರ್ಸ್ ಕಮಿಟಿಯ ಸದಸ್ಯನಾಗಿದ್ದೆ. ಕನ್ನಡ, ಸಂಸ್ಕೃತದ ಇತರ ಪ್ರಾಜೆಕ್ಟುಗಳಲ್ಲಿ ಕೂಡ ನಿರ್ವಾಹಕ. ಸೆಪ್ಟೆಂಬರ್ ೨೦೦೪ರಿಂದ ಕನ್ನಡ ವಿಕಿಪೀಡಿಯವನ್ನು ಪ್ರಾರಂಭಿಸಿ ಒಂದೆರಡು ಪುಟಗಳಿಂದ ಎತ್ತಿ ಹಿಡಿದು ದೊಡ್ಡದಾಗಿಸಿ ಹೊಸ ಡಿಸೈನುಗಳಿಂದ ಕೆಲಸ ಪ್ರಾರಂಭಿಸಿದ್ದೆ. ಇಲ್ಲಿ "ಹೊಸ ಸಮುದಾಯವೊಂದನ್ನು ಕಟ್ಟಿದೆ" ಎಂದು ಹೇಳಿಕೊಳ್ಳಲೂಬಹುದು. ಹಲವು ದಿನಗಳ ಕಾಲ "ಮೈ ಪ್ರೆಶಿಯಸ್" ಎಂದುಕೊಳ್ಳುತ್ತ (Lord of the rings ಓದಿದ್ದೀರ?) ಒಬ್ಬನೇ ಕನ್ನಡ ವಿಕಿಪೀಡಿಯದಲ್ಲಿ ಕೆಲಸ ಮಾಡುತ್ತ ಸಮಯ ಕಳೆದದ್ದುಂಟು. ;-)
ಎರಡು ವರ್ಷಗಳಿಗೂ ಹೆಚ್ಚು ಕಾಲ ಇಲ್ಲಿ ಸಂಪಾದನೆ ಮಾಡುವಲ್ಲಿ, ಸಮುದಾಯ ಕಟ್ಟುವಲ್ಲಿ ಸಮಯ ಕಳೆದ ತರುವಾಯ ಈಗ ಹೊಸ ಬುದ್ಧಿಜೀವಿಗಳಿಗೆ ಸಂಪಾದನೆ ಮಾಡಲು ಜಾಗ ಮಾಡಿಕೊಟ್ಟು ಅವರಿಗೆ ಸದ್ಯಕ್ಕೆ ಹೆಚ್ಚು ತೊಂದರೆ ಕೊಡದೆ ಬರಿಯ ನಿರ್ವಾಹಕ ಹಾಗೂ ಒಂದು ರೀತಿ self-proclaimed ಮೆಂಟರ್ ತರಹ ಆಗಿ ದೂರವಿದ್ದುಕೊಂಡು ನಡೆಯುತ್ತಿರುವೆ. ಸಮಯಾಭಾವ ಕೂಡ ಇದಕ್ಕೆ ಪೂರಕವಾಗಿದೆ.
ನನ್ನ ಬಗ್ಗೆ ಹೇಳಿಕೊಳ್ಳುವಂತಾದ್ದು ಇನ್ನೇನೂ ಇಲ್ಲ. By any chance ನಿಮಗೆ ನನ್ನ ಬಗ್ಗೆ ತಿಳಿಯಲು ಆಸಕ್ತಿಯಿದ್ದರೆ ನನ್ನ ವೆಬ್ಸೈಟ್ ನೋಡಿ. ಹಿಂದೆ ಇಲ್ಲಿದ್ದ ಬಯೋ ಒಂದಷ್ಟು ಜನರಿಗೆ ನಗು ತರಿಸಿದ್ದರೂ ಅದರ ಸಾರ್ಥಕತೆ ಈಡೇರಿತು ಎಂಬಂತಿತ್ತು. ಈ ಬಾರಿ ಕೆಲವು ಲೈನುಗಳು ಮಾತ್ರ -- ಮತ್ತೊಂದು ವರುಷದ ನಂತರ ಬಂದು ಇದನ್ನೋದುವಾಗ ನನಗೇ ನಗು ಬರುವಂತಾದರೂ ಸಾಕು.
ನಮ್ಮ ನಿಮ್ಮೆಲ್ಲರ ಅಮೂಲ್ಯವಾದ ಸಮಯದಿಂದ ಹುಟ್ಟಿದ ವಿಕಿಪೀಡಿಯ ದೊಡ್ಡದಾಗುವಂತೆ, ಹಾಗೂ ಅತಿ ಮುಖ್ಯವಾಗಿ ಉಪಯುಕ್ತವಾಗುವಂತೆ ಬೆಳೆಸುವತ್ತ ಎಲ್ಲರೂ ಶ್ರಮವಹಿಸೋಣ.
ಸೂ: ಕನ್ನಡ ವಿಕಿಪೀಡಿಯ ಕುರಿತು ಏನೇ ಸಹಾಯ ಬೇಕಿದ್ದರೂ ನನ್ನನ್ನು ಸಂಪರ್ಕಿಸಬಹುದು. ಆದರೆ ನಿಮ್ಮ ಸಂದೇಶಕ್ಕೆ ತಕ್ಷಣ ಪ್ರತಿಕ್ರಿಯೆ ದೊರೆಯುದೇ ಹೋಗಬಹುದು. ಹಾಗೆ ಪ್ರತಿಕ್ರಿಯೆ ಬರದಿದ್ದಲ್ಲಿ ಮತ್ತೊಮ್ಮೆ ಇ-ಮೇಯ್ಲ್ ಮಾಡಿ!
ಈ ಪುಟ ವೀಕ್ಷಿಸಿ ಓದಲು ಸಮಯ ಮಾಡಿಕೊಂಡ ನಿಮಗೆ ವಂದನೆಗಳು! - ಹರಿ ಪ್ರಸಾದ್ ನಾಡಿಗ್
ಕನ್ನಡಿಗರಿಗಾಗಿ ಕೆಲವು ಅಂತರಜಾಲ ತಾಣಗಳು
ಅಂತರಜಾಲದಲ್ಲಿ ನನ್ನ ಪುಟಗಳು
ಅಂತರಜಾಲದ ಮನೆ | ಪರಿವೇಷಣ - ನನ್ನ ಬ್ಲಾಗ್
- ಹರಿಪ್ರಸಾದ್ ನಾಡಿಗ್ (ನವೆಂಬರ್ ೨೭, 2006 ಫೆಬ್ರವರಿ ೨ ೨೦೦೭)