ವಿಕಿಪೀಡಿಯ:ಅರಳಿ ಕಟ್ಟೆ/ಇತರೆ-archive೨


ಅರಳಿಕಟ್ಟೆ.png

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ::

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು -

{{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.

  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.

justify

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧|೧೨|೧೩|೧೩|೧೪ |೧೫

ಇತರ ಚರ್ಚೆ: | | |

ಸದಸ್ಯರಲ್ಲಿ ಮನವಿ: ಸ್ವಾತಂತ್ರ್ಯ ಹೋರಾಟಗಾರರ ಪುಟಗಳನ್ನು, ಸ್ವಾತಂತ್ರ್ಯ ಕುರಿತ ಲೇಖನಗಳನ್ನು ಸಂಪೂರ್ಣಗೊಳಿಸೋಣಸಂಪಾದಿಸಿ

ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರ ಪುಟಗಳನ್ನು ಸಂಪೂರ್ಣಗೊಳಿಸಲು ಪ್ರಯತ್ನ ಮಾಡಬಹುದು. ಸಾಕಷ್ಟು ಮಾಹಿತಿ ಆಂಗ್ಲ ವಿಕಿಪೀಡಿಯದಲ್ಲಿ ಲಭ್ಯವಿದೆ ಹಾಗೂ ನಮಗೆಲ್ಲರಿಗೂ ಗೊತ್ತಿರುವ ವಿಷಯಗಳೇ - ಸುಲಭವಾಗಿ ಮುನ್ನಡೆಯಬಹುದು. ಏನಂತೀರಿ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೦:೦೫, ೪ ಆಗಸ್ಟ್ ೨೦೦೬ (UTC)

ವಿಕಿಪೀಡಿಯ / ವಿಕಿಪೀಡಿಯಾಸಂಪಾದಿಸಿ

ಇವೆರಡೂ ಪದಗಳು ಕನ್ನಡ Wikipedia ದಲ್ಲಿ ಬಳಕೆಯಾಗಿವೆ. ನಾವು ಎಲ್ಲೆಡೆ ಒಂದೇ ಪದ ಉಪಯೋಗಿಸಬೇಕು(consistently). ಕನ್ನಡ ವಿಕಿಪೀಡಿಯ ಲೋಗೊ ಚಿತ್ರದಲ್ಲಿ ವಿಕಿಪೀಡಿಯ ಎಂದಿದೆ. ಹಾಗೆಯೆ ಆಂಗ್ಲ ವಿಕಿಪೀಡಿಯದ ವಿಕಿಪೀಡಿಯ ವಿವರಣೆ ಪುಟದಲ್ಲಿ ಅದರ ಉಚ್ಛಾರಣೆಯನ್ನು ಕೊಡಲಾಗಿದೆ. ಅದರ ಪ್ರಕಾರ ಕೊನೆಯಲ್ಲಿ ದೀರ್ಘವಿರುವುದಿಲ್ಲ. ಆದ ಕಾರಣ ನಾವು ಎಲ್ಲೆಡೆ 'ವಿಕಿಪೀಡಿಯ' ಎಂದು ಉಪಯೋಗಿಸುವುದು ಸೂಕ್ತ ಎಂದು ನಿಮ್ಮೆಲ್ಲರ ಮುಂದೆ ಪ್ರಸ್ತಾಪ ಇಡುತ್ತಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. - ಮನ | Mana ೦೪:೩೫, ೨೬ May ೨೦೦೬ (UTC)

'ವಿಕಿಪೀಡಿಯ' ಎಂಬ ಬಳಕೆಯೇ ಸರಿಯಾದದ್ದು. ಎರಡನೆಯ ಬಳಕೆ ಕಂಡಲ್ಲಿ ತಿದ್ದುವುದು ಸೂಕ್ತ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೮:೧೦, ೨೬ May ೨೦೦೬ (UTC)

ಅಕ್ಷರಾನುಸಾರ ಪರಿವಿಡಿ (alphabetical index)ಸಂಪಾದಿಸಿ

ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಪಟ್ಟಿಯಲ್ಲಿ ಬಹಳಷ್ಟು ಹೆಸರುಗಳಿವೆ. ಇವು ಅಕ್ಷರಾನುಕ್ರಮಣಿಕೆಯಲ್ಲಿ ಇಲ್ಲದಿರುವದರಿಂದ, ಬೇಕಾದ ವ್ಯಕ್ತಿಯ ಹೆಸರನ್ನು ಹುಡುಕಲು ಅಥವಾ ಸೇರಿಸಲು ತೊಂದರೆಯಾಗುತ್ತಿದೆ. ಆದುದರಿಂದ ಈ ಪಟ್ಟಿಯನ್ನು Automatically alphabetical order ಬರುವಂತೆ ರಚಿಸಲಾದೀತೆ? ಒಂದು ವೇಳೆ ಹೀಗೆ ಮಾಡಲು ತಾಂತ್ರಿಕ ತೊಂದರೆಗಳಿದ್ದರೆ,ಅ ಕಾರ್ಯವನ್ನು ನಾವು manually ಮಾಡಲು ಅನುಮತಿ ಇದೆಯೆ?----Sunaath ೧೭:೨೧, ೩ July ೨೦೦೬ (UTC)ಸುನಾಥ.

ಲೇಖನದಲ್ಲಿ ಆಟೋಮ್ಯಾಟಿಕ್ ಆರ್ಡರ್ ಆಗಿ ಬರುವುದು ಕಷ್ಟವೇ. ಲೇಖನವನ್ನು ನಾವುಗಳೇ (ಅಂದರೆ ಮಾನವರು) ಬದಲಾಯಿಸುವುದರಿಂದ, ಪ್ರತಿಯೊಂದು ವ್ಯಕ್ತಿಯ ಹೆಸರನ್ನು ಸೇರಿಸಿದಾಗ, ಅದು ಆರ್ಡರ್ ನಲ್ಲಿ ಇಲ್ಲದೇ ಇರುವ ಸಾಧ್ಯತೆಗಳಿರುತ್ತವೆ. ಆದರೆ ಈ ಸಮಸ್ಯೆ ವರ್ಗದಲ್ಲಿ(category) ಇರುವುದಿಲ್ಲ. ಅಲ್ಲಿ, ಲೇಖನಗಳ ಹೆಸರುಗಳು ಆಟೋಮ್ಯಾಟಿಕ್ ಆಗಿ ಆರ್ಡರ್ ಆಗಿರುತ್ತವೆ. ಆದಕಾರಣ ನಾವು, ಸಾಧ್ಯವಾದಷ್ಟೂ ಲೇಖನಗಳನ್ನು ವರ್ಗೀಕರಣ ಮಾಡಿರಬೇಕು. ವರ್ಗಪುಟಗಳಲ್ಲಿ ನಾವು ಅಕ್ಷರಾನುಸಾರ ಪರಿವಿಡಿ ಬರುವಂತೆ ಮಾಡಬಹುದು.
ಪರಿವಿಡಿಯನ್ನು ಬರುವಂತೆ ಮಾಡಲು Template:ಅಕ್ಷರಾನುಸಾರ ಪರಿವಿಡಿ ಅನ್ನು ಉಪಯೋಗಿಸಿ.
ಉಪಯೋಗಿಸುವ ಬಗೆ: '''{{ಅಕ್ಷರಾನುಸಾರ ಪರಿವಿಡಿ}}'''
ಉದಾಹರಣೆಗೆ: ಕನ್ನಡ ಚಲನಚಿತ್ರಗಳು ಮತ್ತು ಸಾಹಿತಿಗಳು ವರ್ಗಗಳನ್ನು ಗಮನಿಸಿ. - ಮನ | Mana ೨೩:೫೮, ೩ July ೨೦೦೬ (UTC)

ಉಪಾಧಿ ವಿಸರ್ಜನೆಸಂಪಾದಿಸಿ

ಸಾಹಿತಿಗಳ ಹೆಸರು ಹಾಕುವಾಗ ಹೆಸರಿನ ಹಿಂದೆ ಅವರ ಉಪಾಧಿ ಹಾಕುವದರಿಂದ search ಮಾಡಲು ತೊಂದರೆಯಾಗು- ತ್ತಿದೆ. ಉದಾಹರಣೆಗೆ ನಾನು ಕೆ.ಎಸ್.ನಿಸಾರ್ ಅಹಮದ್ ರವರನ್ನು "ಕ" ದಲ್ಲಿ ಹುಡುಕಿದಾಗ ಅವರ ಹೆಸರು ಸಿಗಲಿಲ್ಲ. ಆಮೇಲೆ ಅಕಸ್ಮಾತ್ತಾಗಿ "ಪ"ದಲ್ಲಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಎಂದು ಸಿಕ್ಕಿತು. ಅದರಂತೆ "ಅನ್ನದಾನಯ್ಯ ಪುರಾಣಿಕ" ಇವರನ್ನೂ ಯಾರೂ "ಸ" ದ ಕೆಳಗೆ ಹುಡುಕುವದಿಲ್ಲ. ಆದರೆ ಇವರ ಹೆಸರು "ಸ"ದ ಕೆಳಗೆ "ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ " ಎಂದು ಬಂದಿದೆ. ಈ ರೀತಿಯಾಗಿ ನಾವು ಉಪಾಧಿಯನ್ನು ಹಚ್ಚುತ್ತ ಹೋದರೆ ಬೇಂದ್ರೆ,ಕುವೆಂಪು ಇವರನ್ನೆಲ್ಲ "ಪ" ದ ಕೆಳಗೆ ಹುಡುಕಬೇಕಾದೀತು; ಏಕೆಂದರೆ ಇವರು ಪದ್ಮಶ್ರೀಗಳು.

ಆದುದರಿಂದ ದಯವಿಟ್ಟು ಉಪಾಧಿಗಳನ್ನು ಅಳಿಸಿ ಹಾಕುವದನ್ನು ಕಾರ್ಯನೀತಿಯನ್ನಾಗಿ ಮಾಡಿಕೊಳ್ಳಬೇಕೆಂದು ನನ್ನ ವಿನಂತಿ--Sunaath ೧೭:೪೨, ೧೫ July ೨೦೦೬ (UTC)Sunaath

ಉತ್ತಮ ಪ್ರಶ್ನೆ ಕೇಳಿದ್ದೀರಿ ಸುನಾಥ. ಈ ಸಮಸ್ಯೆಗೆ ಎಂದೇ, ಪರಿಹಾರವಾಗಿ ಒಂದು ಸೌಲಭ್ಯವನ್ನು ವಿಕಿ ತಂತ್ರಾಂಶ ಒದಗಿಸಿದೆ. ಇದರ ಬಗ್ಗೆ ಎಲ್ಲಾ ವಿಕಿಪೀಡಿಯ ಸಂಪಾದಕರುಗಳಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕಿದೆ.
ಆ ಸೌಲಭ್ಯ ಏನಂದರೆ, ವರ್ಗಕ್ಕೆ ಹಾಕುವಾಗ, ವರ್ಗದಲ್ಲಿ ಯಾವ ಅಕ್ಷರದಡಿ ಸೇರಬೇಕು ಎಂಬುದನ್ನು ನಾವು ಪ್ರತ್ಯೇಕವಾಗಿ ಹಾಕಬಹುದು. ಹಾಗೆ ಹಾಕದಿದ್ದರೆ, ಅದರಷ್ಟಕ್ಕೆ ಅದೇ, ಲೇಖನದ ಮೊದಲ ಅಕ್ಷರವನ್ನು ಆರಿಸಿಕೊಳ್ಳುತ್ತದೆ.
ಪ್ರತ್ಯೇಕವಾಗಿ ಹಾಕುವ ಬಗೆ: [[ವರ್ಗ:<ವರ್ಗದ ಹೆಸರು> | <ಯಾವ ಅಕ್ಷರದಡಿ ಬರಬೇಕು ಅನ್ನುವ ಅಕ್ಷರ>>]]
ಉದಾಹರಣೆ: ಪ್ರೊ.ಕೆ.ಎಸ್.ನಿಸಾರ್ ಅಹಮದ್ ಲೇಖನವು ಪ್ರೊ ಅನ್ನುವ ಅಕ್ಷರದಿಂದ ಪ್ರಾರಂಭವಾದರೂ, ವರ್ಗಕ್ಕೆ ಸೇರಿಸುವಾಗ ನಾವು, ಕ ಅಕ್ಷರದಡಿ ಹಾಕಬಹುದು.
[[ವರ್ಗ:ಸಾಹಿತಿಗಳು | ಕ]]
ಹೀಗೆ ಹಾಕುವುದರಿಂದ ಕೆಲವರಿಗೆ ಗೊಂದಲವಾದರೂ ಆಗಬಹುದು, " 'ಕ' ಯಾಕೆ ಬಂತು? " ಎಂದು. ಆದ್ದರಿಂದ ಇದನ್ನು ಕೆಳಗಿನಂತೆ ಹಾಕಿದರೆ, ಯಾವುದೇ ಗೊಂದಲವಿಲ್ಲದೆ ಸಮಸ್ಯೆ ಬಗೆಹರಿಯುವುದು.
[[ವರ್ಗ:ಸಾಹಿತಿಗಳು | ಕೆ.ಎಸ್.ನಿಸಾರ್ ಅಹಮದ್]]
ಇದೀಗ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಮತ್ತು ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ ಅವರ ಲೇಖನಗಳನ್ನು ಇದೇ ರೀತಿ ವರ್ಗಕ್ಕೆ ಸೇರಿಸಿದ್ದೇನೆ. ಹಾಗಾಗಿ, ನೀವು ಹೇಳಿದಂತೆ ಇನ್ನು ಮೇಲೆ, ಸಾಹಿತಿಗಳು ವರ್ಗದಲ್ಲಿ ಈ ಲೇಖನಗಳನ್ನು ಕ ಮತ್ತು ಅ ಅಕ್ಷರದಡಿ ಕಾಣಬಹುದಾಗಿದೆ. - ಮನ | Mana ೧೮:೩೯, ೧೫ July ೨೦೦೬ (UTC)

ಸಹಯೋಗದ ಕೆಲಸಗಳುಸಂಪಾದಿಸಿ

ಕರಿಮೆಣಸು - ಲೇಖನದ ನಂತರ ರಾಮಾಯಣ - ಇಂಗ್ಲೀಷ್ ಲೇಖನವನ್ನು ಅನುವಾದಕ್ಕೆ ಹಾಕಬಹುದಲ್ಲವೇ? Sritri

ಖಂಡಿತಾ ಹಾಕಬಹುದು. ಆದರೆ, ಕರಿಮೆಣಸು ಲೇಖನದ ಕಾರ್ಯ ಮುಗಿಯುವವರೆಗೂ ಅದಕ್ಕಾಗಿ ಕಾಯಬೇಕಿಲ್ಲ. ವಾರದ ಸಹಯೋಗದ ಜೊತೆಗೆ, ಇತರೆ ಸಹಯೋಗ ಕೂಡ ಇದೆ. ಈ ರೀತಿಯ ಕೆಲಸಗಳು ಆ ಮೂಲಕವೂ ನಡೆಯಬಹುದು. ಇದೀಗ ರಾಮಾಯಣ ಲೇಖನದ ಅನುವಾದವನ್ನು ಇತರೆ ಸಹಯೋಗಕ್ಕೆ ಸೇರಿಸಿರುವೆ. ವಿವರಗಳಿಗೆ ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಕರಿಮೆಣಸು ಲೇಖನವು ಪೂರ್ಣವಾದ ನಂತರ, ಇತರೆ ಸಹಯೋಗದಿಂದಲೇ ಮುಂದಿನ ವಾರದ ಸಹಯೋಗಕ್ಕೆ ಆಯ್ಕೆ ಮಾಡಿಕೊಳ್ಳಬಹುದು. - ಮನ | Mana ೦೭:೧೧, ೧೬ July ೨೦೦೬ (UTC)
ಐಡಿಯ ಪ್ರಸ್ತುತವಾಗಿದೆ. ಇತರ ಸಹಯೋಗಗಳ ಬಗ್ಗೆ ಚುಟುಕೊಂದನ್ನು ಮುಖಪುಟದ ವಿಕಿಪೀಡಿಯ ಸುದ್ದಿ ಕಾಲಂಗೆ ಕೂಡ ಸೇರಿಸಬಹುದು - ಕೂಡಲೆ ಗಮನಕ್ಕೆ ಬರುವಂತಾಗುತ್ತದೆ. ಇದಲ್ಲದೆ, ಕನ್ನಡ ವಿಕಿಪೀಡಿಯದಲ್ಲಿ ಸೇರಿಸಲೇಬೇಕಾದ ವಿಷಯಗಳ ಪಟ್ಟಿಯೊಂದನ್ನು ತಯಾರಿಸಿ ಅದರಂತೆ ವಿಷಯಗಳ ಪುಟಗಳನ್ನು ಸೇರಿಸುತ್ತ ಮುನ್ನಡೆಯಬೇಕಿದೆ. ಸದ್ಯಕ್ಕೆ ದೋಣಿ ತನ್ನಷ್ಟಕ್ಕೆ ದಿಕ್ಕು ದೆಸೆಯಿಲ್ಲದೆ ಸಾಗಿದೆಯಾದರೂ ಮುನ್ನಡೆದಿದೆ, ಇನ್ನು ಮುಂದೆ ಒಂದು ದಿಕ್ಕು ಮನದಲ್ಲಿಟ್ಟುಕೊಂಡು ಮುಂದವರೆಯಬಹುದು - ಏನಂತೀರಿ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೩೧, ೧೬ July ೨೦೦೬ (UTC)
ಕನ್ನಡ ವಿಕಿಪೀಡಿಯದಲ್ಲಿ ಸೇರಿಸಲೇಬೇಕಾದ ಲೇಖನಗಳ ಪಟ್ಟಿ ತಯಾರಿಸುವ ಯೋಚನೆ ಚೆನ್ನಾಗಿದೆ! - ಮನ | Mana ೧೬:೩೭, ೧೭ July ೨೦೦೬ (UTC)
ಚೆನ್ನಾಗಿದೆ, ಸರಿ. ಅದನ್ನ implement ಮಾಡೋದು ಯಾವಾಗ? ;) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೩೩, ೨೩ July ೨೦೦೬ (UTC)
ಕನ್ನಡ ವಿಕಿಪೀಡಿಯದಲ್ಲಿ ಸೇರಿಸಬೇಕಿರುವ ಒಂದು ಪಟ್ಟಿಯನ್ನು ವಿಕಿಪೀಡಿಯ:ಸಿದ್ಧಪಡಿಸಬೇಕಿರುವ ಲೇಖನಗಳು ಪುಟದಲ್ಲಿ ತಯಾರಿಸಿರುವೆ. ಈ ಪಟ್ಟಿಯನ್ನು ದಿನನಿತ್ಯ ಪರಿಷ್ಕರಿಸುತ್ತಾ, ಅದರಲ್ಲಿನ ಒಂದೊಂದೇ ಲೇಖನದ ಅಭಿವೃದ್ಧಿಯ ಕಡೆ ಗಮನ ಹರಿಸಬಹುದು. ಇದನ್ನು, ವಿಕಿಪೀಡಿಯ:ಸಮುದಾಯ ಪುಟದಲ್ಲಿಯೂ ಹಾಕಿದ್ದೇನೆ. - ಮನ|Mana Talk - Contribs ೦೪:೧೯, ೨೪ July ೨೦೦೬ (UTC)
ಮೇಲ್ಕಂಡ ಚರ್ಚೆಯ ಪ್ರಕಾರ, ಕರಿಮೆಣಸು ಲೇಖನದ ಅನುವಾದದ ನಂತರ ರಾಮಾಯಣ ಲೇಖನದ ಅನುವಾದವನ್ನು ವಾರದ ಸಹಯೋಗಕ್ಕೆ ಹಾಕಲಾಗಿದೆ. - ಮನ|Mana Talk - Contribs ೦೪:೩೭, ೪ ಆಗಸ್ಟ್ ೨೦೦೬ (UTC)

ಟೆಂಪ್ಲೇಟ್ಸಂಪಾದಿಸಿ

ಟೆಂಪ್ಲೇಟ್ ಅಂದರೆ ಏನೆಂದು ನನಗೆ ಅರ್ಥವಾಗಿಲ್ಲ. 'ಸಾಹಿತಿಗಳು' ಈ ಟೆಂಪ್ಲೇಟ್ ಈಗಾಗಲೆ ಉದ್ದವಾಗಿದೆ; ಕಂಡಲ್ಲಿ ಅದನ್ನು ಅಳಿಸಿ ಹಾಕಿ ಎನ್ನುವ ಸಂದೇಶವನ್ನು ನಾನು ನೋಡಿದ್ದೇನೆ.ಸಾಹಿತಿಗಳ ಟೆಂಪ್ಲೇಟ್ ಹಾಗು ಸಾಹಿತಿಗಳ 'ವರ್ಗ' ಯಾವ ರಿತಿಯಿಂದ ಬೇರೆಯಾಗಿವೆ ಎನ್ನುವದನ್ನು ಈ ಮಂದಮತಿಗೆ ಸ್ವಲ್ಪ ತಿಳಿಸುವಿರಾ,please?Sunaath ೧೭:೫೨, ೧೬ July ೨೦೦೬ (UTC)Sunaath

ಟೆಂಪ್ಲೇಟು (Template) ಅಂದರೆ, ವಿವಿಧ ಲೇಖನಗಳಲ್ಲಿ ಮತ್ತೆ ಮತ್ತೆ ಉಪಯೋಗಿಸಬಹುದಾದಂತಹ ಸಾಧನ("Reusable component"). ಕೆಲವು ಪದಗಳನ್ನು, ಅಥವಾ ವಾಕ್ಯಗಳನ್ನು ಹಲವಾರು ಲೇಖನಗಳಲ್ಲಿ ಉಪಯೋಗಿಸುವಂತಹ ಸಂದರ್ಭದಲ್ಲಿ, ಆ ಎಲ್ಲಾ ಲೇಖನಗಳಲ್ಲಿ ಬರೆಯುವುದಕ್ಕಿಂತ, ಅದೇ ವಿಷಯವನ್ನು ಒಂದು ಟೆಂಪ್ಲೇಟಿಗೆ ಹಾಕಿ, ಆ ಟೆಂಪ್ಲೇಟಿನ ಹೆಸರನ್ನು ಮಾತ್ರ ಲೇಖನದಲ್ಲಿ ಹಾಕುವ ಸೌಲಭ್ಯ ವಿಕಿಪೀಡಿಯ ಮಾಡಿಕೊಟ್ಟಿದೆ. ಹಾಗೆ ಮಾಡಿದಾಗ, ಟೆಂಪ್ಲೇಟಿನಲ್ಲೇನಿದೆಯೋ, ಅದು ಲೇಖನಗಳಲ್ಲಿ ಬರುತ್ತದೆ.
ಉದಾ: Template:ಸುಸ್ವಾಗತ. ಇದನ್ನು, ಹೊಸದಾಗಿ ಸೇರುವ ಎಲ್ಲಾ ಸದಸ್ಯರಿಗೆ ತಿಳಿಸುವ ಮಾಹಿತಿಯಾಗಿ ರೂಪಿಸಲಾಗಿದೆ. ಹೊಸ ಸದಸ್ಯರ ಚರ್ಚೆಪುಟದಲ್ಲಿ {{ಸುಸ್ವಾಗತ}} ಎಂದು ಹಾಕಿದರಾಯಿತಷ್ಟೆ.
ವರ್ಗ ಮತ್ತು ಟೆಂಪ್ಲೇಟು ಎರಡೂ ಬೇರೆ ಬೇರೆ ಆಯಾಮಗಳು. ವರ್ಗವೆಂದರೆ, 'ಸಂಬಂಧಪಟ್ಟ ಲೇಖನಗಳ ಗುಂಪು' ಎಂದು ಅರ್ಥೈಸಿಕೊಳ್ಳಬಹುದು.
ಸಾಹಿತಿಗಳು ವರ್ಗದಲ್ಲಿರುವ ಎಲ್ಲಾ ಲೇಖನಗಳು ಸಾಹಿತಿಗಳ ಬಗ್ಗೆಯಾಗಿರುತ್ತದೆ. Template:ಸಾಹಿತಿಗಳು ಟೆಂಪ್ಲೇಟಿನಲ್ಲಿ ಎಲ್ಲಾ ಸಾಹಿತಿಗಳ ಹೆಸರುಗಳನ್ನು ಹಾಕಿ, ಎಲ್ಲಾ ಸಾಹಿತಿಗಳ ಲೇಖನಗಳ ಕೊನೆಯಲ್ಲಿ ಹಾಕಲಾಗುತ್ತಿತ್ತು. ಟೆಂಪ್ಲೇಟು ಬಹಳ ಉದ್ದವಾದ್ದರಿಂದ, ಆ ಟೆಂಪ್ಲೇಟನ್ನು ಲೇಖನಗಳಿಂದ ಕೈಬಿಡುವ ತೀರ್ಮಾನವಾಯಿತು.
ಸುನಾಥರೆ, ನಿಮ್ಮ ಗೊಂದಲ ನಿವಾರಣೆಯಾಯಿತೆಂದು ಭಾವಿಸುವೆ. - ಮನ | Mana ೧೬:೩೩, ೧೭ July ೨೦೦೬ (UTC)
ಧನ್ಯವಾದಗಳು,ಮನ! ಟೆಂಪ್ಲೇಟ್ ಎಂದರೆ ಒಂದು ಸಿದ್ಧ ಚೌಕಟ್ಟು ಎಂದು ಈಗ ಗೊತ್ತಾಯಿತು. ಇದರ ಇತಿಮಿತಿಗಳೂ ಗೊತ್ತಾದವು.-Sunaath ೧೭:೦೪, ೧೭ July ೨೦೦೬ (UTC)ಸುನಾಥ
ಸುನಾಥ್, ನೀವು ತಿಳಿದುಕೊಂಡದ್ದನ್ನು ಸಹಾಯ ಪುಟದಲ್ಲಿ ದಾಖಲಿಸುವುದು ಸಾಧ್ಯವೆ? ಧನ್ಯವಾದಗಳು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೩೫, ೨೩ July ೨೦೦೬ (UTC)
ನಾಡಿಗ್, ಟೆಂಪ್ಲೇಟ್ ಹಾಗು ವರ್ಗಗಳ ಬಗೆಗೆ ನಾನು ತಿಳಿದುಕೊಂಡಿದ್ದನ್ನು " ಸಹಾಯ " ಪುಟದಲ್ಲಿ Templates and Categories ಎಂದು ಬರೆದಿದ್ದೇನೆ. ಬರಹದಲ್ಲಿ clarity ಇರದೆ ಇದ್ದರೆ, ಹೆಚ್ಚಿನ ಮಾಹಿತಿ ಅಥವಾ ತಿಳುವಳಿಕೆ ಇದರಿಂದ ಬರದೆ ಇದ್ದರೆ, ಇದು redundant ಬರಹವಾಗುತ್ತಿದ್ದರೆ, ದಯವಿಟ್ಟು ಈ ಬರಹವನ್ನು ಕತ್ತರಿಸಿ ಹಾಕಿರಿ. --Sunaath ೧೭:೪೫, ೨೮ July ೨೦೦೬ (UTC)Sunaath

ಜನನ/ನಿಧನ ಟೆಂಪ್ಲೇಟುಸಂಪಾದಿಸಿ

ಸಾಹಿತಿಗಳು/ಸ್ವಾತಂತ್ರ್ಯ ಹೋರಾಟಗಾರರು/ನಟ/ನಟಿಯರು ಮುಂತಾದ ವ್ಯಕ್ತಿಗಳ ಪುಟವನ್ನು ಪ್ರಾರಂಭಿಸುವವರು {{ಜನನನಿಧನ}} ಟೆಂಪ್ಲೇಟನ್ನು ಬಳಸಿ, ಜನನ ಮತ್ತು ನಿಧನದ ವರ್ಷಗಳನ್ನು ದಾಖಲಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಈಗಿರುವ ಎಲ್ಲಾ (ವ್ಯಕ್ತಿ)ಪುಟಗಳಿಗೂ ಈ ಟೆಂಪ್ಲೇಟ್ ಹೊಂದಿಸುವ ಕೆಲಸ ನಡೆಯಬೇಕಾಗಿದೆ ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೫:೪೧, ೩ October ೨೦೦೬ (UTC)

ಜೀವಂತ ವ್ಯಕ್ತಿಗಳ ಲೇಖನಗಳಿಗೆ, ಈ ಟೆಂಪ್ಲೇಟನ್ನು ಬಳಸದೆ ಎಂದಿನಂತೆ [[:ವರ್ಗ: xxxx ಜನನ]] ಎಂದು ಸೇರಿಸಬೇಕು. ಜನನ ಮತ್ತು ನಿಧನ ಎರಡೂ ವರ್ಷಗಳು ತಿಳಿದಿದ್ದಲ್ಲಿ {{ಜನನನಿಧನ|xxxx|yyyy}} ಎಂದು ಬಳಸಬಹುದು (xxxx = ಜನನದ ವರ್ಷ ಮತ್ತು yyyy = ನಿಧನದ ವರ್ಷ). - ಮನ|Mana Talk - Contribs ೨೩:೨೯, ೩ October ೨೦೦೬ (UTC)

ಖಾಲಿ ಪುಟಗಳುಸಂಪಾದಿಸಿ

ಬಹಳಷ್ಟು ಪುಟಗಳಿಗೆ ತಲೆಬರಹ ಮಾತ್ರ ಇದೆ, ಪುಟ ಮಾತ್ರ ಖಾಲಿ ಇರುವುದನ್ನು ಗಮನಿಸಿದೆ. ಇಂತಹ ಪುಟಗಳಿಗಾಗಿ {{ಖಾಲಿ ಪುಟಗಳು]] ಎಂದು ಒಂದು template ತಯಾರಿಸಿ, ಇಂತಹ ಪುಟಗಳನ್ನು ಗುರುತಿಸಬಹುದು. ಸಾಧ್ಯವಾದಷ್ಟು ಮಾಹಿತಿ ತುಂಬಿಸಲು ಪ್ರಯತ್ನಿಸಬಹುದು. Sritri ೨೦:೩೪, ೨೩ July ೨೦೦೬ (UTC)

Template:ಖಾಲಿ ಪುಟ ( ಉಪಯೋಗ: {{ಖಾಲಿ ಪುಟ}} ) ತಯಾರಿಸಲಾಗಿದೆ. ಎಲ್ಲಾ ಖಾಲಿ ಪುಟಗಳನ್ನು ಈಗ ಖಾಲಿ ಪುಟಗಳು ವರ್ಗದಲ್ಲಿ ಕಾಣಬಹುದಾಗಿದೆ. - ಮನ|Mana Talk - Contribs ೧೭:೧೦, ೨೪ July ೨೦೦೬ (UTC)
ಖಾಲಿ ಪುಟಗಳು ಎಂಬ ಟೆಂಪ್ಲೇಟು ಯಾವ ವಿಕಿಪೀಡಿಯದಲ್ಲೂ ಇದ್ದಂತಿಲ್ಲ. ನಾವು ಆ ದಾಖಲೆ ಮಾಡುವುದು ಬೇಡ. ಹಾಗೆ ಪುಟ ಖಾಲಿ ಕಂಡಾಗೆಲ್ಲ ಒಂದೆರಡು ಲೈನು ಸೇರಿಸಿ ಇಲ್ಲವೇ ಅಳಿಸುವಿಕೆಗೆ ಹಾಕಿ. ಖಾಲಿ ಪುಟ ಟೆಂಪ್ಲೇಟು ಹಾಕುವ ಕೆಲಸದ ಬದಲು ಒಂದೆರಡು ಲೈನು ಸೇರಿಸಿಯೇ ಬಿಡಬಹುದಲ್ಲವೆ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೮:೫೭, ೨೪ July ೨೦೦೬ (UTC)
ಮೊದಲು ಪುಟಗಳನ್ನು ಗುರುತಿಸಿಕೊಂಡರೆ, ನಂತರ ಮಾಹಿತಿ ತುಂಬಿಸಲು ಅನುಕೂಲ. ಮಾಹಿತಿಯನ್ನು ಹುಡುಕಿ ಬರೆಯಬೇಕಾಗುತ್ತದೆ. ಅಥವಾ ನೀವಂದಂತೆ ಅಳಿಸುವಿಕೆಗೆ ಹಾಕುವುದೇ ಸರಿಯಾಗಬಹುದು. ವಿಷಯವಿಲ್ಲದೆ ಪುಟ ಪ್ರಾರಂಭಿಸುವುದು ನಿಲ್ಲುತ್ತದೆ.Sritri ೧೯:೦೨, ೨೪ July ೨೦೦೬ (UTC)

ಲೇಖನಗಳಲ್ಲಿ ವರ್ಗಗಳಿಗೆ ಗರಿಷ್ಟ ಮಿತಿಸಂಪಾದಿಸಿ

ಒಂದು ಲೇಖನವನ್ನು ಗರಿಷ್ಟ ಎಷ್ಟು Category(ವರ್ಗ)ಗೆ ಸೇರಿಸಬಹುದು? :) Sritri ೧೫:೦೧, ೨೬ July ೨೦೦೬ (UTC)

ಗರಿಷ್ಟ ಮಿತಿಯಿಲ್ಲ. ಆದರೆ ಕನಿಷ್ಟ ಒಂದು ವರ್ಗಕ್ಕಾದರೂ ಸೇರಿಸುವುದು ಅತ್ಯಾವಶ್ಯಕ. ಲೇಖನವು "ಈ ವರ್ಗದ ಒಂದು ಭಾಗ" ಎಂದು ಅನಿಸಿದ ವರ್ಗಗಳಿಗೆಲ್ಲಾ ಸೇರಿಸಬಹುದು. ಆಂಗ್ಲವಿಕಿಯಲ್ಲಿ, ೮, ೧೦ ವರ್ಗಗಳನ್ನು ಒಂದೇ ಲೇಖನಕ್ಕೆ ಹಾಕಿರುವ ಹಲವಾರು ಉದಾಹರಣೆಗಳಿವೆ.
en:English language ಲೇಖನವನ್ನು ೧೫ ವರ್ಗಗಳಿಗೆ ಸೇರಿಸಲಾಗಿದೆ.
ಗಮನದಲ್ಲಿಡಬೇಕಾದದ್ದು, ಲೇಖನವು ವರ್ಗಕ್ಕೆ ಸರಿಯಾಗಿ ಹೊಂದುತ್ತದೆಯೇ ಇಲ್ಲವೆ ಎಂಬುದು. - ಮನ|Mana Talk - Contribs ೧೮:೪೯, ೨೬ July ೨೦೦೬ (UTC)

Search Termsಸಂಪಾದಿಸಿ

ಎಲ್ಲಾ ಲೇಖನಗಳ ಕೊನೆಯಲ್ಲಿ ಲೇಖನದ ಹೆಸರನ್ನು ಆಂಗ್ಲ ಭಾಷೆಯಲ್ಲಿ ಬರೆಯುವುದು ಎಂದು ನನ್ನ ಸಲಹೆ. ಇದರಿಂದ ಹುಡುಕುವಿಕೆಯು ಸುಲಭಗೊಳ್ಳುತ್ತದೆ. ಅದಲ್ಲದೆ, ಕನ್ನಡದಲ್ಲಿ ಲೇಖನದ ಹೆಸರುಗಳು ಕೆಲೆವೆಡೇ ತಪ್ಪಾಗಿವೆ ಅಥವ ಬೆರೆ ರೀತಿ ಬರೆಯಲ್ಪಟ್ಟಿದೆ (ಉದಾ. ಹಿಂದಿ ಮತ್ತು ಹಿ೦ದಿ). ನಿಮ್ಮ ಒಪ್ಪಿಗೆ ಇದೆಯೆ? ಶುಶ್ರುತ ೦೯:೦೧, ೩೧ July ೨೦೦೬ (UTC)

ಈ ಬಗ್ಗೆ ಹಿಂದೆಯೂ ಚರ್ಚೆ ನಡೆದಿದೆ. ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೨ ನೋಡಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೮:೦೬, ೪ ಆಗಸ್ಟ್ ೨೦೦೬ (UTC)

Wikipedia namespace -> ವಿಕಿಪೀಡಿಯಸಂಪಾದಿಸಿ

Wikipedia namespace ಅನ್ನು ವಿಕಿಪೀಡಿಯ ಆಗಿ ರೂಪಿಸಲಾಗಿದೆಯೇ? ವಿಕಿಪೀಡಿಯ:ಅರಳಿ ಕಟ್ಟೆ, ವಿಕಿಪೀಡಿಯ:ಸಮುದಾಯ ಪುಟ ಇತ್ಯಾದಿ ಲೇಖನಗಳಿವೆ. ಆದರೆ, ಇವು Wikipedia namespaceನಲ್ಲಿ ಕೆಲಸಮಾಡಬೇಕಾದ ರೀತಿಯಲ್ಲಿ ಕೆಲಸಮಾಡುತ್ತಿಲ್ಲ.

ಉದಾಹರಣೆಗೆ, Wikipedia:Test ಮತ್ತು ವಿಕಿಪೀಡಿಯ:Test ಲೇಖನಗಳನ್ನು ನೋಡಿ. ಬೇರೊಂದು ಲೇಖನದಲ್ಲಿ {{Wikipedia:Test}} ಎಂದು ಉಪಯೋಗಿಸಿದರೆ, ಅದೊಂದು ಟೆಂಪ್ಲೇಟಿನಂತೆ ಬದಲಾಗಿ ಕಾರ್ಯನಿರ್ವಹಿಸುತ್ತದೆ. ಆದರೆ {{ವಿಕಿಪೀಡಿಯ:Test}} ಎಂದು ಉಪಯೋಗಿಸಿದರೆ, ಟೆಂಪ್ಲೇಟಿನಂತೆ ಬದಲಾಗುತ್ತದೆ, ಆದರೆ ಟೆಂಪ್ಲೇಟು ಸಿಗಲಿಲ್ಲವೆಂದು ಕೆಂಪು ಬಣ್ಣದಲ್ಲಿ ಲಿಂಕ್ ಮಾತ್ರ ಬರುತ್ತದೆ. ನಿಖರವಾಗಿ ಇವೆರಡೂ ಹೇಗೆ ಬರುತ್ತದೆ ಎಂಬುದಕ್ಕೆ ವಿಕಿಪೀಡಿಯ:ಪ್ರಯೋಗ ಶಾಲೆ ನೋಡಿ.

ಹಾಗೆಯೇ, Wikipedia:Test, ವಿಕಿಪೀಡಿಯ:Test ಪುಟಗಳನ್ನು create ಮಾಡದೇ, ಪ್ರಯೋಗ ಶಾಲೆಯಲ್ಲಿ ಈ ರೀತಿಯ ಪರೀಕ್ಷೆ/ಪ್ರಯೋಗ ಮಾಡುವುದು ಹೇಗೆಂದು ತಿಳಿಸಿರಿ. - ಮನ|Mana Talk - Contribs ೧೭:೨೪, ೧೩ ಆಗಸ್ಟ್ ೨೦೦೬ (UTC)

ಈ ಕುರಿತು wikimedia bugzillaದಲ್ಲಿ ಒಂದು ಬಗ್ ಸೇರಿಸಿದರೆ ಉತ್ತಮ. ಈ ಬಗ್ಗೆ ನಾವು ಮಾಡಬಹುದಾದದ್ದು ಏನೂ ಇಲ್ಲ. ಅಲ್ಲಿನ ಡೆವಲಪರ್ಸ್ ಮಾಡಬೇಕು. ಬಗ್ ಫೈಲ್ ಮಾಡಿದಲ್ಲಿ ಅದರ ಸಂಪರ್ಕ ಇಲ್ಲೂ ಹಾಕಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೧:೨೮, ೨೧ ಆಗಸ್ಟ್ ೨೦೦೬ (UTC)

ಬುಧ್ದ ಧರ್ಮಸಂಪಾದಿಸಿ

I am writing some pages on Buddha and Buddhism. Can someone suggest to me the right variants among these spellings ಬುದ್ಧ, ಬುಧ್ದ, ಬೌಧ್ದ ಧರ್ಮ, ಭೌಧ್ದ ಧರ್ಮ. ಧನ್ಯವಾದಗಳು ಶುಶ್ರುತ ೧೫:೪೨, ೧೩ ಆಗಸ್ಟ್ ೨೦೦೬ (UTC) Sorry... also ಸಿಧ್ದಾರ್ತ, ಸಿದ್ಧಾರ್ಥ...ಇತ್ಯಾದಿ. ಶುಶ್ರುತ ೧೫:೪೪, ೧೩ ಆಗಸ್ಟ್ ೨೦೦೬ (UTC)

ಬುದ್ಧ, ಬೌದ್ಧ ಧರ್ಮ, ಸಿದ್ದಾರ್ಥ. - ಮನ|Mana Talk - Contribs ೧೬:೧೮, ೧೩ ಆಗಸ್ಟ್ ೨೦೦೬ (UTC)
ಮನ, ಉತ್ತರ ನೀಡುವುದರೊಂದಿಗೆ ಹೊಸ ಸದಸ್ಯರಿಗೆ ಇಂತಹವುಗಳನ್ನು ಬರೆಯಲು ಮೀಸಲಾದ ಪುಟವನ್ನೂ ತೋರಿಸಿಕೊಟ್ಟರೆ ಇನ್ನೂ ಉತ್ತಮ. :-) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೧:೨೧, ೨೧ ಆಗಸ್ಟ್ ೨೦೦೬ (UTC)

ಸದಸ್ಯರಲ್ಲವರಿಂದ ಲೇಖನ ಪ್ರಾರಂಭಸಂಪಾದಿಸಿ

ಕನ್ನಡ ವಿಕಿಪೀಡಿಯದಲ್ಲಿ ಸದಸ್ಯರಲ್ಲದವರೂ(anonymous users) ಲೇಖನಗಳನ್ನು ಪ್ರಾರಂಭಿಸಬಹುದಾಗಿದೆ. ಆಂಗ್ಲ ವಿಕಿಪೀಡಿಯದಲ್ಲಿ ನೋಂದಾಯಿತ ಸದಸ್ಯರು ಮಾತ್ರ ಪ್ರಾರಂಭಿಸಬಹುದಾಗಿದೆ. ಕನ್ನಡ ವಿಕಿಪೀಡಿಯದಲ್ಲೂ ಈ ಕಾರ್ಯನೀತಿ ಅನುಷ್ಠಾನಕ್ಕೆ ತರಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಸಂಪಾದನೆಗಳು (edits) ಎಂದಿನಂತೆ ಅನಾಮಧೇಯರೂ ಕೂಡ ಮಾಡಬಹುದು.

anonymous ಸದಸ್ಯರೂ ಕೂಡ indirect ಆಗಿ, ಹೊಸ ಲೇಖನಗಳನ್ನು ಪ್ರಾರಂಭಿಸುವ ರೀತಿ ಆಂಗ್ಲ ವಿಕಿಪೀಡಿಯದಲ್ಲಿ ಬಳಕೆಯಲ್ಲಿದೆ. ಅದನ್ನೇ ಇಲ್ಲಿಯೂ ನಾವು ಪಾಲಿಸಬಹುದು.

ಈ ಕಾರ್ಯನೀತಿಯ ರೂಪುರೇಷೆಗಳ ವಿವರ en:Wikipedia:Articles_for_creation - ಮನ|Mana Talk - Contribs ೨೧:೪೧, ೧೩ ಆಗಸ್ಟ್ ೨೦೦೬ (UTC)

ನನ್ನ ಸಮ್ಮತಿಯಿದೆ. ಆದರೆ anonymous userಗಳಿಗೆ 'request an article' link ಸುಲಭವಾಗಿ ದೊರೆಯುವಂತೆ ಮಾಡಬೇಕು. ಅದಕ್ಕೆ ಸಮುದಾಯ ಪುಟವನ್ನು clean up ಮಾಡಬೇಕು. ನಾನು ಪ್ರಯತ್ನಿಸಿದೆ - ಆದರೆ htmlನ ತಲೆಬುಡ ತಿಳಿಯದ ನಾನಗೆ ಸಾಧ್ಯವಾಗಲಿಲ್ಲ. ಶುಶ್ರುತ ೦೫:೩೯, ೧೪ ಆಗಸ್ಟ್ ೨೦೦೬ (UTC)
ಸಮ್ಮತಿ ನನ್ನದೂ ಉಂಟು. ಆದರೆ ಇದರ ನಿರ್ಧಾರ ಕೊನೆಗೆ ವಿಕಿಮೀಡಿಯ ಫೌಂಡೇಶನ್ನಿಗೆ ಬಿಟ್ಟದ್ದು. ಅವರಿಗೆ ಕೋರಿಕೆ ಸಲ್ಲಿಸಬೇಕು. ಅನಾಮಿಕ ಸದಸ್ಯರಿಂದ ತುಂಬ vandalism ನಡೆಯುತ್ತಿದ್ದರೆ ಈ ಸವಲತ್ತು ಕೇಳುವುದಕ್ಕೆ ಕಾರಣವೊಂದಿರುತ್ತದೆ. ಆದರೆ ಈಗಿನಂತೆ ಹಾಗಲ್ಲವಲ್ಲ. ಆಗೊಮ್ಮೆ ಹೀಗೊಮ್ಮೆ ಒಂದೆರಡು ಆ ರೀತಿಯಾಗುತ್ತಿದೆಯಾದ್ದರಿಂದ ಸದ್ಯಕ್ಕೆ ಹೀಗೆಯೇ ನಡೆಸಿಕೊಂಡು ಹೋಗಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೧:೨೩, ೨೧ ಆಗಸ್ಟ್ ೨೦೦೬ (UTC)

is it possible to create our own website using wikisಸಂಪಾದಿಸಿ

This is very general question. Wikipedia is a wonderful idea and I am experiencing the power of this idea. Is it possible to create our own web site using the wiki principles? If yes, what does it take to do so ? A typical example could be a department or a clan creating their own web site which any one can within that group can edit. Narayana ೧೫:೫೧, ೪ September ೨೦೦೬ (UTC)

Wikipedia uses 'MediaWiki' software. Yes, it is definetely possible to create your own website using MediaWiki. It is available under GNU General Public License and as such you dont have to purchase the software.
More and exhaustive information on MediaWiki, here.
Official website of MediaWiki is, this one
You can download directly from this site as well.
- ಮನ|Mana Talk - Contribs ೦೨:೨೭, ೧೨ September ೨೦೦೬ (UTC)

ರೀಡೈರೆಕ್ಷನ್ಸಂಪಾದಿಸಿ

ಕನ್ನಡದಲ್ಲಿ ಹೆಸರಿರಲ್ಲೆಂದು ನವೀನ್ ಎಂದು ಹೊಸದಾಗಿ register ಮಾಡಿದೆ. ಈಗ ಇದರ ಸದಸ್ಯಪುಟ User:ನವೀನ್ ಇಂದ ನನ್ನ ಪ್ರಾಥಮಿಕ ಸದಸ್ಯ ಪುಟ User:Naveenbm ಗೆ Redirect ಮಾಡಲು User:ನವೀನ್ ಪುಟದಲ್ಲಿ "REDIRECT User:Naveenbm" ಸೇರಿಸಿದೆ, ಆದರೂ ಸಹ Redirect ಆಗುತ್ತಿಲ್ಲ. ಏನಾದರು miss ಮಾಡಿದ್ದೀನಾ. ನವೀನ್ ೦೨:೦೬, ೧೨ September ೨೦೦೬ (UTC)

ಈಗ ತಾನೆ ನನ್ನ ಚರ್ಚೆಪುಟವನ್ನು redirect ಮಾಡಿದೆ (ಸದಸ್ಯರ ಚರ್ಚೆಪುಟ:ನವೀನ್ ದಿಂದ ನನ್ನ ಪ್ರಾಥಮಿಕ ಸದಸ್ಯ ಪುಟ ಸದಸ್ಯರ ಚರ್ಚೆಪುಟ:Naveenbm. ಅದು ಸರಿಯಾಗಿ Redirect ಆಯಿತು.
ಎರಡನೆ ಸಾಲಿನಲ್ಲಿ ಒಂದು ಖಾಲಿ space ಉಳಿದುಕೊಂಡಿತ್ತು. ಅದನ್ನು ಇದೀಗ ತೆಗೆದು save ಮಾಡಿದೆ. ನಾನು ಮಾಡಿದ edit ಕಾಣಿಸುತ್ತಿಲ್ಲ, ಆದರೆ ಈಗ ನಿಮ್ಮ ಪುಟ ಸರಿಯಾಗಿ ರೀಡೈರೆಕ್ಟ್ ಆಗಿದೆ. - ಮನ|Mana Talk - Contribs ೦೨:೧೫, ೧೨ September ೨೦೦೬ (UTC)

ಪರಭಾಷೆ ಪುಟಗಳಿಂದ ಅನುವಾದಸಂಪಾದಿಸಿ

ಬೇರೆ ಭಾಷೆಗಳ ವಿಕಿಪೀಡಿಯ ಪುಟಗಳಿಂದ ಕನ್ನಡಕ್ಕೆ ಅನುವಾದ ಮಾಡುವುದು ಹೇಗೆಂದು ದಯವಿಟ್ಟು ತಿಳಿಸಿ. ksj_dr ೧೪ ಸೆಪ್ಟೆಂಬರ್ ೨೦೦೬ (ksj drರವರು ಇದನ್ನು ಆರ್ಕೈವ್ ಪುಟದಲ್ಲಿ ಬರೆದ್ದಿದ್ದರು. ಅದನ್ನು ನಾನು ಇಲ್ಲಿಗೆ ಸ್ಥಳಾಂತರಿಸಿರುವೆ.) ಶುಶ್ರುತ \ಮಾತು \ಕತೆ ೧೭:೪೮, ೧೪ September ೨೦೦೬ (UTC)

ಅನುವಾದ ಮಾಡಲು ಯಾವುದೇ guidelines ಇಲ್ಲ. ನಾನು ಅನುವಾದ ಮಾಡುವಾಗ ಎರಡು ರೀತಿಗಳನ್ನು ಪಾಲಿಸುತ್ತೇನೆ. ಕ್ಲಿಷ್ಟವಾದ paragraphಗಳನ್ನು ವಾಕ್ಯದಿಂದ ವಾಕ್ಯಕ್ಕೆ ಅನುವಾದ ಮಾಡುತ್ತೇನೆ. ನನಗೆ ಸುಲಭವಾಗಿ ಅರ್ಥವಾಗುವ paragraphಗಳಾದರೆ ಸಾರವನ್ನು ಗ್ರಹಿಸಿ ನನ್ನದೇ ವಾಕ್ಯಗಳಲ್ಲಿ ಬರೆಯುತ್ತೇನೆ. ಪದಗಳ ಕನ್ನಡ equivalent ಗೊತ್ತಿಲ್ಲದಿದ್ದರೆ ಕನ್ನಡ ಕಸ್ತೂರಿ ಎಂಬ online ಕನ್ನಡ ಪದಕೋಶವನ್ನು ಉಪಯೋಗಿಸುತ್ತೇನೆ.
ನೆನಪಿಡಿ ksjರವರೆ - ಇದೊಂದು ವಿಕಿ! ನಿಮ್ಮ ಸಂಪಾದನೆಗಳು 5 pillar principles of wikipediaಗೆ ಬದ್ಧವಾಗಿರಬೇಕಷ್ಟೆ - ಅದರ ಮೇಲೆ ನಿಮಗಿಷ್ಟ ಬಂದಂತೆ ಬರೆಯಬಹುದು! BE BOLD :-) ಶುಶ್ರುತ \ಮಾತು \ಕತೆ ೧೮:೦೧, ೧೪ September ೨೦೦೬ (UTC)
ಧನ್ಯವಾದ ಶುಶ್ರುತರೆ. ನಾನು ಕೆಲವು "ಅನುವಾದ ಮಾಡಬೇಕಿರುವ ಲೇಖನ"ಗಳನ್ನು ಸಂಪಾದಿಸಿದ್ದೇನೆ, ಆದರೆ ನಾನು ಅನುವಾದ ಮಾಡಬೇಕೆಂದಿರುವ ಬೇರೆ ಭಾಷೆಯ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸುವ ಕ್ರಿಯೆಯನ್ನು ಆರಂಭಿಸುವುದು ಹೇಗೆಂದು ತಿಳಿಸಿ. ಉದಾ: ಆಂಗ್ಲ ಭಾಷೆಯಲ್ಲಿರುವ ಲೇಖನವನ್ನು ಕನ್ನಡಕ್ಕೆ ಭಾಷಾಂತರ ಮಾಡಲು ಪ್ರಾರಂಭಿಸುವುದು ಹೇಗೆ? ksj_dr ೧೭ ಸೆಪ್ಟೆಂಬರ್ ೨೦೦೬
ವರ್ಗ: ಅನುವಾದ ಮಾಡಬೇಕಿರುವ ಲೇಖನಗಳು - ಈ ವಿಭಾಗದಲ್ಲಿ ಈಗಾಗಲೇ ಅನುವಾದಕ್ಕೆ ಹಾಕಿರುವ ಕೆಲವು ಲೇಖನಗಳಿವೆ.ಇದರಲ್ಲಿ ಒಂದನ್ನು ನೀವು ಅನುವಾದಿಸಬಹುದು. ಅಥವಾ ನೀವು ಬೇರೆ ಲೇಖನ ಅನುವಾದಿಸಬೇಕೆಂದಿದ್ದರೆ ಆ ಪುಟವನ್ನು ಹೊಸದಾಗಿ ಪ್ರಾರಂಭಿಸಿ, ಅನುವಾದ ಮುಂದುವರೆಸಬಹುದು. ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೮:೦೮, ೧೭ September ೨೦೦೬ (UTC)
ಉತ್ತರಿಸಿದ ಎಲ್ಲರಿಗೂ ಧನ್ಯವಾದಗಳು, ನಾನು ಪದ್ಮ ವಿಭೂಷಣ ಪುಟವನ್ನು ಆಂಗ್ಲಭಾಷೆಯ ಪುಟದಿಂದ ಅನುವಾದಿಸಿದ್ದೇನೆ. ದಯವಿಟ್ಟು ಇದನ್ನು ನೋಡಿ ಪುಟವನ್ನು ಇನ್ನೂ ಚೊಕ್ಕಗೊಳಿಸಲು ಸಲಹೆ ಮಾಡಿ. ಈ ಪುಟದಲ್ಲಿರುವ ಟೆಂಪ್ಲೇಟುಗಳನ್ನು ಅನುವಾದ ಮಾಡುವುದು ಹೇಗೆಂದು ತಿಳಿಸಿಕೊಟ್ಟರೆ ಈ ಪುಟ ಮತ್ತು ಇಂತಹ ಹಲವು ಪುಟಗಳನ್ನು ಇನ್ನೂ ಉಪಯುಕ್ತ ಮಾಡಲು ಸಹಾಯವಾಗುತ್ತದೆ. ಧನ್ಯವಾದಗಳು Ksj dr ೧೮:೨೦, ೨೪ September ೨೦೦೬ (UTC)
ಇದರ ಜೊತೆಗೇ, ವೇದವ್ಯಾಸ ಪುಟವನ್ನೂ ಆಂಗ್ಲಭಾಷೆಯಿಂದ ಅನುವಾದ ಮಾಡಿದ್ದೇನೆ. ಸಂತೋಷದ ಸುದ್ದಿಯೆಂದರೆ, ಜೊತೆಗೆ ಟೆಂಪ್ಲೇಟನ್ನೂ ಸಹ ಅನುವಾದ ಮಾಡಿ ಈ ಲೇಖನದಲ್ಲಿ ಉಪಯೋಗಿಸಿದ್ದೇನೆ. ಪ್ರೋತ್ಸಾಹಿಸಿದ ಎಲ್ಲ ಮಿತ್ರರಿಗೂ ವಂದನೆಗಳು Ksj dr ೦೧:೦೮, ೨೬ September ೨೦೦೬ (UTC)

ಪರಭಾಷೆಯಿಂದ (ಮುಖ್ಯವಾಗಿ ಆಂಗ್ಲ ಭಾಷೆ) ಅನುವಾದ ಮಾಡುವಾಗ google translator ಉಪಯೋಗಿಸಿ ಭಾಷಾಂತರ ಮಾಡಿ ಹಾಕಿರುತ್ತಾರೆ. ಇದರಿಂದ ನಮ್ಮ ಕನ್ನಡ ಭಾಷೆಯ ಸೊಗಡೇ ನಾಶವಾಗುತ್ತದೆ. ಇದನ್ನು ತಡೆಗಟ್ಟಲು ಸಾಧ್ಯವಿಲ್ಲವೇ?

ಪುಸ್ತಕಗಳು - ಒಂದು ಹೊಸ ವರ್ಗ?ಸಂಪಾದಿಸಿ

ಮಾನ್ಯರೆ, ಪುಸ್ತಕಗಳು ಎಂಬ ಒಂದು ಹೊಸ ವರ್ಗ ಬೇಕಿದೆ ಎಂದು ನನ್ನ ಅಭಿಪ್ರಾಯ. ಇದುವರೆಗೆ ಇರುವ ವರ್ಗಗಳು ಬಹುಪಾಲು ಸಾಹಿತ್ಯಕ್ಕೆ ಸೇರಿವೆ ಹಾಗು ಪ್ರಮುಖ ಲೇಖಕರ ಬಗ್ಗೆ ಮಾತ್ರವಿದೆ. ಒಂದು ಪುಸ್ತಕವಿದ್ದು, ಅದರ ಲೇಖಕರ ಬಗ್ಗೆ ಜನಕ್ಕೆ ಗೊತ್ತಿಲ್ಲದಿದ್ದರೆ ಸಾಹಿತ್ಯ ವರ್ಗದಲ್ಲಿ ಸೇರಿಸುವುದು ತುಂಬಾ ಕಷ್ಟ. ಆದುದರಿಂದ, ಪುಸ್ತಕ ಎಂಬ ಹೊಸ ವರ್ಗ ತೆರೆಯಬಹುದೆ? ನಟರಾಜ ೦೧:೨೯, ೧ October ೨೦೦೬ (UTC)

ಈ ವರ್ಗ ಆಗಲೇ ಇಲ್ಲಿ ಇದೆ. :-) ಶುಶ್ರುತ \ಮಾತು \ಕತೆ ೦೭:೧೦, ೩೦ September ೨೦೦೬ (UTC)


ಅಲ್ಪಪ್ರಾಣ,ಮಹಾಪ್ರಾಣಗಳುಸಂಪಾದಿಸಿ

ಭಾರತದ ಇತರ ಭಾಷೆಗಳಲ್ಲಿ ಮಹಾಪ್ರಾಣವಾಗಿ ಉಚ್ಚರಿಸುವದನ್ನು, ನಾವು ಕನ್ನಡದಲ್ಲಿ ಅಲ್ಪಪ್ರಾಣವಾಗಿ ಬದಲಾಯಿಸಿ ಉಚ್ಚರಿಸುವದು ಸರಿಯಲ್ಲ.ಉದಾಹರಣೆಗೆ " ಝಾರ್ಖಂಡ".ಇದು ಝಾರ್ಕಂಡ ಅಲ್ಲ. ಝಾರ್ಖಂಡ ಈ ಶಬ್ದದ ಅರ್ಥ ಝಾರ ಜನಾಂಗ ಇರುವ ಪ್ರದೇಶ.ಇದೇ ರೀತಿಯಾಗಿ ಚತ್ತೀಸಘಡ ಸರಿಯಾದದ್ದಲ್ಲ. ಛತ್ತೀಸಘಡ ಸರಿಯಾದ ಶಬ್ದ. ಹಿಂದಿಯಲ್ಲಿ ಛತ್ತೀಸ ಎಂದರೆ ಮೂವತ್ತಾರು;ಘಡ ಎಂದರೆ ಘಟಕಗಳು.

ದಯವಿಟ್ಟು ಸರಿಪಡಿಸುವಿರಾ?

Sunaath ೧೭:೨೮, ೪ October ೨೦೦೬ (UTC)ಸುನಾಥ