ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೧೩

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ:

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು - {{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.

justify

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧ | ೧೨|೧೩ | ೧೩ | ೧೪ |೧೫ | ೧೬ | ೨೦ | ೨೧

ಇತರ ಚರ್ಚೆ: | | |


ಸಿಐಎಸ್-ಎ೨ಕೆಯ ಜುಲೈ೨೦೧೮- ಜೂನ್೨೦೧೯ನೇ ಸಾಲಿನ ಕಾರ್ಯಯೋಜನೆ ಬದಲಾಯಿಸಿ

ಸಿಐಎಸ್-ಎ೨ಕೆಯು ಮುಂದಿನ ವರ್ಷದ ಕಾರ್ಯ ಯೋಜನೆಯನ್ನು ವಿಕಿಮೀಡಿಯ ಫೌಂಡೇಶನಿಗೆ ಸಲ್ಲಿಸಿದೆ. ಅದರ ಸಂಕ್ಷಿಪ್ತ ವಿವರಗಳು ಇಲ್ಲಿವೆ.
ಮುಂದಿನ ವರ್ಷ ಸಿಐಎಸ್-ಎ೨ಕೆ ಕಾರ್ಯನಿರ್ವಹಿಸುವ ಭಾಷೆಗಳು ತೆಲುಗು, ಮರಾಠಿ, ಪಂಜಾಬಿ, ಕನ್ನಡ ಮತ್ತು ಒಡಿಯಾ. ಮುಂದಿನ ವರ್ಷ ಎ೨ಕೆಯು ವಿಕಿಸೋರ್ಸ್‌ಅನ್ನು ಮುಖ್ಯ ಅಂಶವಾಗಿ ತೆಗೆದುಕೊಳ್ಳಲಿದ್ದು ಭಾರತದಲ್ಲಿ ರಾಷ್ಟ್ರೀಯ ಮಟ್ಟದ ವಿಕಿಸೋರ್ಸ್ ಕಾನ್ಪರೆನ್ಸ್ ನಡೆಸುವ ಯೋಜನೆಯನ್ನು ಹೊಂದಿದೆ. ಇದಲ್ಲದೆ TTT-2.0 ಅನ್ನು ನಡೆಸುವ ಯೋಜನೆಯನ್ನು ಹೊಂದಿದೆ. ಇದಲ್ಲದೆ ಎ೨ಕೆ ಮುಂದಿನ ವರ್ಷದ ಕಾರ್ಯಕ್ರಮಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದೆ. ಅವುಗಳು

  • ವಿಷಯಗಳನ್ನು ಹೆಚ್ಚಿಸುವುದು
ಕರ್ನಾಟಕ ರಾಜ್ಯೋತ್ಸವ ಸಂಪಾದನೋತ್ಸವ ೨೦೧೮
ಸಿಐಎಸ್-ಎ೨ಕೆಯ ಪುಸ್ತಕ ಭಂಡಾರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವುದು.
  • ತಾಂತ್ರಿಕ ಕೌಶಲ್ಯ ಅಭಿವೃದ್ಧಿ
Mini TTT, ಟೆಂಪ್ಲೇಟು, AWB, ವಿಕಿಸೋರ್ಸ್ OCR ಕಾರ್ಯಾಗಾರಗಳು
  • ವಿಕಿಮೀಡಿಯ ಯೋಜನೆಗಳಲ್ಲಿ ಸಂಸ್ಥೆಗಳ ಪಾಲುಗಾರಿಕೆ
ಹಂಪಿ ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯ
  • ಸಮುದಾಯ ಸದಸ್ಯರಲ್ಲಿ ನಾಯಕತ್ವ ಅಭಿವೃದ್ಧಿ
ಸಕ್ರಿಯ ಸಂಪಾದಕರಿಗೆ ಕಾರ್ಯಾಗಾರಗಳನ್ನು ನಡೆಸಲು ಮತ್ತು Technical skill ಹೆಚ್ಚಿಸಲು ಸಹಕಾರ ಮತ್ತು ತರಬೇತಿ.
ಬಳಕೆದಾರರ ಗುಂಪುಗಳಿಗೆ ಸಂಪೂರ್ಣ ಸಹಕಾರ.

ಸಂಪೂರ್ಣ ಕಾರ್ಯಯೋಜನೆಯ ವಿವರ ಇಲ್ಲಿದೆ. ಇದಲ್ಲದೇ ಯೋಜನೆಯನ್ನು ನಡೆಸುವಲ್ಲಿ ಸಲಹೆ ಮತ್ತು ಸೂಚನೆಗಳನ್ನು ನೀಡಬೇಕಾಗಿ ವಿನಂತಿ. ಇದಕ್ಕಾಗಿ tanveer cis-india.org ಅಥವಾ tito cis-india.org ಅಥವಾ gopala cis-india.org ಅವರನ್ನು ಮಿಂಚಂಚೆ ಮೂಲಕ ಸಂಪರ್ಕಿಸಬೇಕಾಗಿ ವಿನಂತಿ. Gopala Krishna A (CIS-A2K) (ಚರ್ಚೆ)

ಮುಂದಿನ ತಿಂಗಳ ವಿಕಿಪೀಡಿಯ ಸಾಧಕರ ಆಯ್ಕೆ ಬದಲಾಯಿಸಿ

ಮುಂದಿನ ತಿಂಗಳ ವಿಕಿಪೀಡಿಯ ಸಾಧಕರನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ಸಮುದಾಯ ನಿರ್ಧರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಈ ವರೆಗಿನ ವಿಕಿಪೀಡಿಯ ಸಾಧಕರ ಪಟ್ಟಿ ಇಲ್ಲಿದೆ. --ಗೋಪಾಲಕೃಷ್ಣ (ಚರ್ಚೆ)

ಅನೂಪ್ ರಾವ್ ಅವರನ್ನು‌ ಈ ಪ್ರಶಂಸೆಗೆ ಸಲಹೆ ಮಾಡುತ್ತೇನೆ. -Vikashegde (ಚರ್ಚೆ) ೦೯:೨೮, ೧ ಮೇ ೨೦೧೮ (UTC)
ಅನೂಪ್ ರಾವ್ ಆಗಬಹುದು--ಪವನಜ (ಚರ್ಚೆ) ೦೪:೫೯, ೩ ಮೇ ೨೦೧೮ (UTC)
ಅನೂಪ್ ರಾವ್ ಅವರನ್ನು ಆಯ್ಕೆ ಮಾಡಬಹುದು Manjappabg (ಚರ್ಚೆ) ೧೭:೩೬, ೫ ಮೇ ೨೦೧೮ (UTC)
ಅನೂಪ್ ರಾವ್ ಆಗಬಹುದು --Divya h m (ಚರ್ಚೆ) ೦೯:೫೯, ೯ ಮೇ ೨೦೧೮ (UTC)

ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆಯ ಬಗ್ಗೆ ಬದಲಾಯಿಸಿ

ಈಗ ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆಯಲ್ಲಿ ಸ್ಥಳೀಯ (ಕನ್ನಡ ವಿಕಿಪೀಡಿಯಕ್ಕೆ ಮುಖ್ಯವಾದದ್ದು) ೫೦೦ ವಿಷಯಗಳಿಗೆ ಸಂಬಂಧಿತ ಲೇಖನಗಳನ್ನು ಸೇರಿಸಲು ಅನುವು ಮಾಡುತ್ತಿದ್ದಾರೆ. ಅದಕ್ಕಾಗಿ ಯಾವ ಪುಟಗಳನ್ನು ಸೇರಿಸಬಹುದು ಎಂಬುದನ್ನು ಇಲ್ಲಿ ಚರ್ಚಿಸೋಣ. ನಂತರ ಅದನ್ನು ಮುಖ್ಯ ಪಟ್ಟಿಗೆ ಸೇರಿಸೋಣ. --ಗೋಪಾಲಕೃಷ್ಣ (ಚರ್ಚೆ) ೦೮:೨೬, ೨ ಮೇ ೨೦೧೮ (UTC) (ಸ್ಪರ್ಧೆಯ ಸ್ಥಳೀಯ ಆಯೋಜಕರ ಪರವಾಗಿ)

how many Typos are ok in a Wiki article? Mallikarjunasj ೦೬:೧೮, ೨೫ ಮೇ ೨೦೧೮ (UTC) Was just browsing thru & https://kn.wikipedia.org/wiki/%E0%B2%AE%E0%B2%A6%E0%B3%8D%E0%B2%B0%E0%B2%BE%E0%B2%B8%E0%B3%8D_%E0%B2%AA%E0%B3%8D%E0%B2%B0%E0%B3%86%E0%B2%B8%E0%B2%BF%E0%B2%A1%E0%B3%86%E0%B2%A8%E0%B3%8D%E0%B2%B8%E0%B2%BF There are a bit too many for comfort, ..

Birgit Müller (WMDE) ೧೪:೫೩, ೭ ಮೇ ೨೦೧೮ (UTC)

ವೈಟ್‌ಸ್ವಾನ್ ಫೌಂಡೇಶನ್‌ನೊಂದಿಗೆ ಕೈಜೋಡಣೆ ಬದಲಾಯಿಸಿ

ಬೆಂಗಳೂರಿನಲ್ಲಿರುವ ವೈಟ್‌ಸ್ವಾನ್ ಫೌಂಡೇಶನ್ ಮಾನಸಿಕ ಸಮಸ್ಯೆಗಳ ಬಗ್ಗೆ ಅಧ್ಯಯನ ಮತ್ತು ಸಮಾಲೋಚನೆಗಳ ಬಗ್ಗೆ ಕೆಲಸ ಮಾಡುತ್ತಿದೆ. ಅವರ ವೆಬ್‌ಸೈಟಿನಲ್ಲಿ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ಅನೇಕ ಲೇಖನಗಳು ಪ್ರಕಟಗೊಂಡಿವೆ. ಇದನ್ನು ವಿಕಿಪೀಡಿಯಕ್ಕೆ ಬೇಕಾದಂತೆ ಬದಲಾಯಿಸಿಕೊಂಡು ಸಂಸ್ಥೆಯೊಂದಿಗೆ ಕೈಜೋಡಿಸುವ ಕೆಲಸ ಮಾಡುತ್ತೇವೆ ಎಂದು CIS-A2K ಈ ವರ್ಷದ ಕಾರ್ಯಯೋಜನೆಯಲ್ಲಿ ಉಲ್ಲೇಖಿಸಿದ್ದೆವು. ಹೀಗಾಗಿ ನಾನು ತಾರೀಕು ೭ ಮೇ ೨೦೧೮ರಂದು ಅಲ್ಲಿಗೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ.

ಮಾತುಕತೆಯ ಸಂಕ್ಷಿಪ್ತ ವಿವರಗಳು
  • ವೈಟ್‌ಸ್ವಾನ್ ಸಂಸ್ಥೆಯು ಪ್ರಕಟಿಸಿದ ಎಲ್ಲಾ ಲೇಖನಗಳ ಮಾಹಿತಿಯನ್ನು ನೀಡಲು ತಯಾರಿದ್ದಾರೆ. ನಾವು ಅದನ್ನು ವಿಕಿಪೀಡಿಯಕ್ಕೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಂಡು ವಿಕಿಪೀಡಿಯದಲ್ಲಿ ಲೇಖನ ತಯಾರಿಸಬಹುದಾಗಿದೆ.
  • ಸಂಸ್ಥೆಯು ಲಭ್ಯ ಇರುವ ಕನ್ನಡ ಬಲ್ಲ ಲೇಖಕರನ್ನು ನಾವು ವಿಕಿಪೀಡಿಯಕ್ಕೆ ಬೇಕಾದಂತೆ ಬದಲಾಯಿಸಿದ ಲೇಖನದ ಮಾಹಿತಿಯನ್ನು ಪರಿಶೀಲಿಸಲು ತಯಾರಿದ್ದಾರೆ.
  • ಸಮುದಾಯವು ವಿಕಿಪೀಡಿಯಕ್ಕೆ ಅಗತ್ಯ ಇರುವ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ಲೇಖನವನ್ನು ಮೊದಲನೆಯದಾಗಿ ಪಟ್ಟಿ ಮಾಡಿ ಜೂನ್ ಮೊದಲನೆಯ ವಾರಾಂತ್ಯರದಲ್ಲಿ ಸಮುದಾಯದ ಸದಸ್ಯರು, CIS-A2K ಮತ್ತು ವೈಟ್‌ಸ್ವಾನ್ ಫೌಂಡೇಶನ್‌ನ ಸಹಭಾಗಿತ್ವದಲ್ಲಿ ಒಂದು ಕಾರ್ಯಾಗಾರ ಮತ್ತು ಸಂಪಾದನೋತ್ಸವವನ್ನು ನಡೆಸುವುದು.

ಈ ಮೇಲಿನ ಯೋಜನೆಯ ಬಗ್ಗೆ ಸಮುದಾಯ ಸದಸ್ಯರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. --Gopala Krishna A (CIS-A2K) (ಚರ್ಚೆ) ೦೬:೨೨, ೯ ಮೇ ೨೦೧೮ (UTC)

ಉತ್ತಮ ಯೋಜನೆ. ಕನ್ನಡ ವಿಕಿಯಲ್ಲಿ ವೈದ್ಯಕೀಯ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳ ಅಗತ್ಯ ಬಹಳ ಇದೆ. --Vikashegde (ಚರ್ಚೆ) ೦೮:೧೬, ೯ ಮೇ ೨೦೧೮ (UTC)
ಕನ್ನಡ ವಿಕಿಪೀಡಿಯದಲ್ಲಿ ಮೊದಲನೆಯದಾಗಿ ಸೇರಿಸಬಹುದಾದ ಲೇಖನಗಳ ಪಟ್ಟಿ ತಯಾರಿಸಿದ್ದೇನೆ. ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ಇತರ ಲೇಖನಗಳನ್ನು ಸೇರಿಸಬೇಕಾದಲ್ಲಿ ದಯವಿಟ್ಟು ಸೇರಿಸಬೇಕಾಗಿ ವಿನಂತಿ. ಅದರೊಂದಿಗೆ ಸಲಹೆ ಮತ್ತು ಸೂಚನೆಗಳನ್ನೂ ನೀಡಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೯:೧೭, ೨೯ ಮೇ ೨೦೧೮ (UTC)

'ಬೆಂಗಳೂರು ಶಿಲಾಶಾಸನಗಳು' ಸಂಪಾದನೋತ್ಸವ ಬದಲಾಯಿಸಿ

ಬೆಂಗಳೂರಿನಲ್ಲಿ ಇರುವ ಶಿಲಾಸಾಸನಗಳ ಬಗ್ಗೆ ಲೇಖನಗಳನ್ನು ಸೇರಿಸುವ ಸಲುವಾಗಿ ಎರಡು ದಿನದ ಸಂಪಾದನೋತ್ಸವವನ್ನು ಆಯೋಜಿಸುವ ಯೋಚನೆ ಇದೆ. ಎಲ್ಲರಿಗೂ ಬಿಡುವು ಇರುವ ಒಂದು ವಾರಾಂತ್ಯದಲ್ಲಿ ನಡೆಸಬಹುದೇ? ಸೂಚಿಸುವ ದಿನಾಂಕ ೧೬ ಮತ್ತು ೧೭ನೇ ಜೂನ್ ೨೦೧೮. ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೧೪:೫೫, ೨೯ ಮೇ ೨೦೧೮ (UTC)

ನಾನು ಇರುವುದಿಲ್ಲ. ಊರಿಗೆ ಹೋಗುವವನಿದ್ದೇನೆ.--ಪವನಜ (ಚರ್ಚೆ) ೧೫:೧೭, ೨೯ ಮೇ ೨೦೧೮ (UTC)
ಖಂಡಿತ ನಡೆಸಬಹುದು. ದಿನಾಂಕಗಳು ಸೂಕ್ತವಾಗಿವೆ. ಅಥವಾ ಬೇರೆ ಎಲ್ಲರಿಗೂ ಅನುಕೂಲವಾಗುವುದಾದರೆ ಬೇರೆ ದಿನಾಂಕಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು.--Vikashegde (ಚರ್ಚೆ) ೧೨:೫೮, ೩೧ ಮೇ ೨೦೧೮ (UTC)
ಸಮುದಾಯದವರು ಸೂಕ್ತ ದಿನವನ್ನು ಸೂಚಿಸಿ. ನಾನು ಉದಯ್ ಸರ್ ಜೊತೆ ಮಾತಾಡುತ್ತೇನೆ. --ಗೋಪಾಲಕೃಷ್ಣ (ಚರ್ಚೆ) ೦೬:೧೦, ೧ ಜೂನ್ ೨೦೧೮ (UTC)

New Wikipedia Library Accounts Available Now (May 2018) ಬದಲಾಯಿಸಿ


Hello Wikimedians!

 
The TWL OWL says sign up today!

The Wikipedia Library is announcing signups today for free, full-access, accounts to research and tools as part of our Publisher Donation Program. You can sign up for new accounts and research materials on the Library Card platform:

  • Rock's Backpages – Music articles and interviews from the 1950s onwards - 50 accounts
  • Invaluable – Database of more than 50 million auctions and over 500,000 artists - 15 accounts
  • Termsoup – Translation tool

Expansions

Many other partnerships with accounts available are listed on our partners page, including Baylor University Press, Loeb Classical Library, Cairn, Gale and Bloomsbury.

Do better research and help expand the use of high quality references across Wikipedia projects: sign up today!
--The Wikipedia Library Team ೧೮:೦೩, ೩೦ ಮೇ ೨೦೧೮ (UTC)

You can host and coordinate signups for a Wikipedia Library branch in your own language. Please contact Ocaasi (WMF).
This message was delivered via the Global Mass Message tool to The Wikipedia Library Global Delivery List.

ವಿಕಿಪೀಡಿಯದ ಮುಂದುವರಿದ ತರಬೇತಿ/Wiki Advanced Training (WAT) ಬದಲಾಯಿಸಿ

ನಮಸ್ಕಾರ. ವಿಕಿಪೀಡಿಯದಲ್ಲಿ ಈಗಾಗಲೇ ಗೊತ್ತಿರುವ ಅಂಶಗಳಿಂದ ಮುಂದುವರಿದ ಹಿಚ್ಚಿನ ವಿಷಯಗಳನ್ನು ತಿಳಿದು ಅದನ್ನು ನಮ್ಮ ಸಂಪಾದನೆಯಲ್ಲಿ ಅಳವಡಿಸಿಕೊಂಡರೆ ಅದರಿಂದ ನಮ್ಮ ಸಂಪಾದನೆಯನ್ನು ಉತ್ತಮಪಡಿಸಬಹುದು. ಸಿಐಎಸ್-ಎ೨ಕೆ ತಂಡವು ಇದಕ್ಕಾಗಿ ರಾಂಚಿಯಲ್ಲಿ ಮುಂದಿನ ತಿಂಗಳು ಜೂನ್ 29 ರಿಂದ ಜುಲೈ 1ರ ವರೆಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಅರ್ಜಿ]ಯನ್ನೂ ಆಹ್ವಾನಿಸಿದ್ದಾರೆ. ನಮ್ಮ ಕನ್ನಡ ಸಮುದಾಯದಿಂದ ನಾವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಯನ್ನು ಭರಿಸಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಯತ್ನಿಸೋಣ. ಅರ್ಹತೆ 2000 ಒಟ್ಟಾರೆ ಸಂಪಾದನಾ ಸಂಖ್ಯೆ. ಅದರಲ್ಲಿ 500 ಕನ್ನಡ ವಿಕಿಪೀಡಿಯದಲ್ಲಿ ಮುಖ್ಯಪುಟದ ಸಂಪಾದನೆ ಆದರೂ ಇರಬೇಕೆಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೆಟಾ ಪುಟಕ್ಕೆ ಭೇಟಿನೀಡಿ. ಅರ್ಜಿ ಭರಿಸುವಲ್ಲಿ ಸಹಾಯ ಬೇಕಿದ್ದರೆ ನನಗೆ ನಿಮ್ಮ ದೂರವಾಣಿ ಸಂಖ್ಯೆಯೊಂದಿಗೆ ಮಿಂಚಂಚೆ ಕಳುಹಿಸಿ. ನಾನು ನಿಮಗೆ ಕರೆ ಮಾಡಿ ಸಹಾಯ ಮಾಡುವೆ. ವಿಳಾಸ gopala cis-india.org . ನೀವು ಸಲಹೆ ಸೂಚನೆ ನೀಡಬೇಕಾಗಿ ವಿನಂತಿ ಮತ್ತು ಪ್ರಶ್ನೆಗಳನ್ನೂ ಈ ಮಿಂಚಂಚೆಗೆ ಕಳುಹಿಸಬಹುದಾಗಿದೆ. --ಗೋಪಾಲಕೃಷ್ಣ (ಚರ್ಚೆ) ೧೧:೩೦, ೧ ಜೂನ್ ೨೦೧೮ (UTC)

ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೮ ಬದಲಾಯಿಸಿ

ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೮ರ ವಿವರಗಳು ಈ ಪುಟದಲ್ಲಿವೆ. ಕನ್ನಡ ವಿಕಿಪೀಡಿಯ/ವಿಕಿಸೋರ್ಸ್ ಸಮುದಾಯ ಮತ್ತು ಸಿಐಎಸ್-ಎ೨ಕೆ ಜೊತೆಗೂಡಿ ಕ್ರೈಸ್ಟ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಯೋಜನೆಯನ್ನು ನಡೆಸಲಾಗುತ್ತಿದೆ. ಈ ಯೋಜನೆಯಲ್ಲಿ ಕೈಜೋಡಿಸಲು ಆಸಕ್ತಿ ಇರುವವರು ದಯವಿಟ್ಟು ತಮ್ಮ ಹೆಸರನ್ನು ಅದೇ ಪುಟದಲ್ಲಿ ನೋಂದಾಯಿಸಬೇಕಾಗಿ ವಿನಂತಿ. --Ananth Subray (ಚರ್ಚೆ) ೧೬:೩೫, ೩ ಜೂನ್ ೨೦೧೮ (UTC)

ಪ್ರಾಯೋಗಿಕ ವೀಕ್ಷಣಾ ಪಟ್ಟಿ ಬದಲಾಯಿಸಿ

ಪ್ರಾಯೋಗಿಕ ವೀಕ್ಷಣಾ ಪಟ್ಟಿಯಲ್ಲಿನ ಹೊಸ ಶೋಧಕಗಳು ಬೀಟಾ ಆವೃತ್ತಿಯಿಂದ ಬಡ್ತಿ ಪಡೆದಿದೆ. ಇದು ವಿಕಿಯಲ್ಲಿ ನಿಯೋಜನೆಯಾದ ಮೇಲೆ ನೀವು ಆದ್ಯತೆಗಳ ಮೂಲಕ ಹೊಸ ಶೋಧಕಗಳನ್ನು ನಿರ್ಬಂಧಿಸಬಹುದು. ಹೆಚ್ಚಿನ ವಿವರಗಳಿಗೆ ಈ ಪುಟಕ್ಕೆ ಭೇಟಿ ನೀಡಿ . ★ Anoop / ಅನೂಪ್ © ೧೬:೩೪, ೫ ಜೂನ್ ೨೦೧೮ (UTC)

Wikigraphists Bootcamp (2018 India) ಬದಲಾಯಿಸಿ

ವಿಕಿಪೀಡಿಯದಲ್ಲಿ ಗ್ರಾಫಿಕ್ಸ್, ಇಲ್ಯೂಸ್ಟ್ರೇಷನ್ ಸಂಬಂಧಿತ ಸಂಪಾದನೆಯನ್ನು ಹೆಚ್ಚಿಸಲು, ಈಗಿರುವ ಸಂಪಾದಕರಿಗೆ ಹೆಚ್ಚಿನ ತರಬೇತಿ ನೀಡಲು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಫಾರ್ಮ್ ಭರಿಸಬೇಕಾಗಿ ವಿನಂತಿ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಪುಟಕ್ಕೆ ಭೇಟಿನೀಡಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೧೧:೦೨, ೧೨ ಜೂನ್ ೨೦೧೮ (UTC)

Wikigraphists Bootcamp (2018 India): Applications are open ಬದಲಾಯಿಸಿ

Wikigraphists Bootcamp (2018 India) is to be tentatively held in the last weekend of September 2018. This is going to be a three-day training workshop to equip the participants with the skills to create illustrations and digital drawings in SVG format, using software like Inkscape.

Minimum eligibility criteria to participate is as below:

  • Active Wikimedians from India contributing to any Indic language Wikimedia projects
  • At least 1,500 global edits till 30 May 2018
  • At least 500 edits to home-Wikipedia (excluding User-space)

Please apply at the following link before 16th June 2018: Wikigraphists Bootcamp (2018 India) Scholarships. MediaWiki message delivery (ಚರ್ಚೆ) ೧೧:೧೨, ೧೨ ಜೂನ್ ೨೦೧೮ (UTC)

Update on page issues on mobile web ಬದಲಾಯಿಸಿ

CKoerner (WMF) (talk) ೨೦:೫೮, ೧೨ ಜೂನ್ ೨೦೧೮ (UTC)

ವಿಕಿಪೀಡಿಯ ಮುಂದುವರೆದ ತರಬೇತಿಗೆ ಆಯ್ಕೆ ಬದಲಾಯಿಸಿ

ಜೂನ್ ೨೯, ೩೦ ಮತ್ತು ಜುಲೈ ೧, ಮೂರು ದಿನಗಳ ಕಾಲ ರಾಂಚಿಯಲ್ಲಿ ನಡೆಯಲಿರುವ ವಿಕಿಪಿಡಿಯ ಮುಂದುವರೆದ ತರಬೇತಿ'ಗೆ (Advanced training) ನಾನು ಆಯ್ಕೆಯಾಗಿದ್ದೇನೆ. ಈ ಮೂಲಕ ತರಬೇತಿ ಪಡೆದು ಹೆಚ್ಚಿನ ವಿಕಿಸಂಪಾದನೆ ಮಾಡಲು ಉತ್ಸುಕನಾಗಿದ್ದೇನೆ. ಕನ್ನಡ ವಿಕಿಸಮುದಾಯ ಮೆಟಾಪುಟದಲ್ಲಿರುವ ತರಬೇತಿಯ ವಿಷಯಗಳನ್ನು ಪರಿಶೀಲಿಸಿ ಈ ಸಂಬಂಧ ತಮ್ಮ ಅಗತ್ಯಗಳೇನಾದರೂ ಇದ್ದಲ್ಲಿ ಇಲ್ಲಿ ತಿಳಿಸಬಹುದು. ಧನ್ಯವಾದಗಳು --Vikashegde (ಚರ್ಚೆ) ೧೪:೨೭, ೧೯ ಜೂನ್ ೨೦೧೮ (UTC)

ವಿಕಾಸರ ಜೊತೆಗೆ ನನ್ನದೂ ಕೂಡ ಇದೇ ನಿವೇದನೆ, ಧನ್ಯವಾದಗಳು Mallikarjunasj ೧೭:೩೪, ೧೯ ಜೂನ್ ೨೦೧೮ (UTC)
ಅಭಿನಂದನೆಗಳು. ನೀವು ತರಬೇತಿ ಪಡೆದ ನಂತರ, ನಾವು ಕೂಡ ನಿಮ್ಮಿಂದ ತರಬೇತಿ ಪಡೆಯಲು ಉತ್ಸುಕವಾಗಿದ್ದೇವೆ.ವಿದ್ಯಾಧರ ಚಿಪ್ಳಿ (ಚರ್ಚೆ) ೦೮:೧೩, ೨೦ ಜೂನ್ ೨೦೧೮ (UTC)
ಅಭಿನಂದನೆಗಳು. ಆಯ್ಕೆಯಾಗಿದ್ದು ತುಂಬಾ ಸಂತೋಷ. ನೀವು ತಿಳಿದುಕೊಂಡ ವಿಷಯಗಳನ್ನು ನಮಗೂ ತಿಳಿಸಿ. ಅದಕ್ಕಾಗಿ ಕಾರ್ಯಾಗಾರ ನಡೆಸೋಣ. --ಗೋಪಾಲಕೃಷ್ಣ (ಚರ್ಚೆ) ೦೬:೧೭, ೨೧ ಜೂನ್ ೨೦೧೮ (UTC)

ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನ ೨೦೧೮ ಬದಲಾಯಿಸಿ

ನಾನು ಇದೇ ಬರುವ ೨೪ ಜೂನ್ ೨೦೧೮ ರಿಂದ ೨೬ ಜೂನ್ ೨೦೧೮ರ ವರೆಗೆ ನಡೆಯಲಿರುವ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದೇನೆ. ಅಲ್ಲಿ ಪುಸ್ತಕಗಳ digitisation ಮತ್ತು ಆಧುನಿಕತೆ ಮತ್ತು ಹಳಗನ್ನಡದ ಬಗ್ಗೆ ಒಳ್ಳೆಯ ಚರ್ಚೆಗಳು ನಡೆಯಲಿದೆ ಎಂದು ಆಶಿಸಿದ್ದೇನೆ. ನನ್ನೊಂದಿಗೆ ಸಮುದಾಯ ಸದಸ್ಯರೂ ಭಾಗವಹಿಸುವಬೇಕೆಂದು ಆಸಕ್ತಿ ಹೊಂದಿದ್ದಲ್ಲಿ ಸ್ವಾಗತ. ಸದಸ್ಯರ ಪ್ರಯಾಣ ಮತ್ತು ವಸತಿಯ ಖರ್ಚನ್ನು ಸಿಐಎಸ್-ಎ೨ಕೆ ತಂಡವು ಭರಿಸಲಿದೆ. ಆಸಕ್ತರು ನನಗೆ ಮಿಂಚಂಚೆ ಮೂಲಕ ಸಂಪರ್ಕಿಸ ಬೇಕಾಗಿ ವಿನಂತಿ. ಸಲಹೆ ಸೂಚನೆಗಳನ್ನೂ ನೀಡಬೇಕಾಗಿ ವಿನಂತಿ. ವಿಳಾಸ gopala cis-india.org. ಸಮ್ಮೇಳನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. --Gopala Krishna A (CIS-A2K) (ಚರ್ಚೆ) ೦೭:೧೮, ೨೨ ಜೂನ್ ೨೦೧೮ (UTC)

ನಾನು ಶ್ರವಣಬೆಳಗೊಳದಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. ನನ್ನ ಭಾಷಣವೂ ಇತ್ತು. ಓಂಶಿವಪ್ರಕಾಶ ಕೂಡ ಮಾತನಾಡಿದ್ದರು. ಮೂರು ದಿನ ವಿಕಿಪೀಡಿಯ ಸ್ಟಾಲ್ ಹಾಕಿ ನಿಂತಿದ್ದೆ. ಒಂದು ದಿನ ತನ್ವೀರ್ ಕೂಡ ಬಂದಿದ್ದರು. ಫಲಿತಾಂಶ ಸೊನ್ನೆ--ಪವನಜ (ಚರ್ಚೆ) ೦೭:೪೩, ೨೨ ಜೂನ್ ೨೦೧೮ (UTC)
ನಾನು ಸಮುದಾಯದ ಸದಸ್ಯನಾಗಿ ಭಾಗವಹಿಸಲು ಆಸಕ್ತಿ ಇದೆ.--Lokesha kunchadka (ಚರ್ಚೆ) ೦೮:೫೪, ೨೨ ಜೂನ್ ೨೦೧೮ (UTC)
Abridged version ಹಳಗನ್ನಡ ಕೃತಿಗಳನ್ನು ಚಿಕ್ಕದಾಗಿ-ಚೊಕ್ಕವಾಗಿ ಪ್ರಕಟಿಸುವ ಪರಂಪರೆ ಮುಂಚೆ ಇತ್ತು. ಇದೀಗ ಅವು ಸಿಗುತ್ತಿಲ್ಲ. ಹಾಗೆ ಪ್ರಕಟಿಸಿದರೆ, ಹಳಗನ್ನಡದ ಸ್ವಾದ ಜನರಿಗೆ ಸಿಗುವ ಸಾಧ್ಯತೆ ಹೆಚ್ಚು. ಅಗತ್ಯ ಬಿದ್ದಲ್ಲಿ, ಬೋಳುವಾರು ಮೊಹಮದ್ ಕು~ಯಿಯವರಂತೆ ದಿನವೂ ಫೇಸ್ ಬುಕ್ ನಲ್ಲಿ ಅಥವಾ ಟ್ವಿಟರ್ ನಲ್ಲಿ ಧಾರಾವಾಹಿಯಂತೆ ಪ್ರಕಟಿಸಬಹುದು.Mallikarjunasj ೦೪:೨೦, ೨೪ ಜೂನ್ ೨೦೧೮ (UTC)

ಸಲಹೆ - ಕೋರಿಕೆ ಬದಲಾಯಿಸಿ

ಮಾನ್ಯ ಪವನಜರೇ,

ಇಂಗ್ಲಿಷ್ ಭಾಷೆಯ ಎಲ್ಲಾ ಹಿಂದಿನ ಕಾವ್ಯಗಳನ್ನೂ ಇಂ.ವಿಕಿಸೋರ್ಸಿಗೆ ಸಂಪಾದನಾ ಪಠ್ಯವಾಗಿ ತುಂಬಿದ್ದಾರೆ. ಅದೇ ರೀತಿ ಕನ್ನಡದಲ್ಲೂ ಎಲ್ಲ ಕಾವ್ಯಗಳನ್ನೂ ಟೈಪ್ ಮಾಡಿಸಿ ತುಂಬಿಸಲು ಸಾಧ್ಯವಿಲ್ಲವೇ. ಸರ್ಕಾರ ಕೊಡುವ ಗ್ರಾಂಟ್‍ನಲ್ಲಿ ಸ್ವಲ್ಪ ಭಾಗ ಒಂದು ಯೋಗ್ಯ ಬೆರಳಚ್ಚುಗಾರರ ಟೀಮ್ ಮತ್ತು ಪರಿಶೀಲಕರ ಟೀಮ್ ಮಾಡಿ, ಸೂಕ್ತ ಸಂಭಾವನೆ ಕೊಟ್ಟು ಕನ್ನಡ ವಿಕಿಸೋರ್ಸಿಗೆ ಹಾಕಬಹುದು. ನಡುಗನ್ನಡ ಮತ್ತು ಆಧುನಿಕ ಸಾಹಿತಿಗಳ ಅನುಮತಿಯಿಂದಲೂ ಅವರ ಕಾವ್ಯ, ಕವಿತೆ, ಸಾಹಿತ್ಯವನ್ನು ವಿಕಿಸೋರ್ಸಿಗೆ ಹಾಕಬಹುದು, ಸಾರ್ವಜನಿಕ ಸಂಸ್ಥೆಗಳಿಂದ, ಉದಾರಿಗಳಿಂದ ಅದಕ್ಕಾಗಿ ಹಣ ಸಂಗ್ರಹಿಸಬಹುದು. ಈಗ ಅವುಗಳನ್ನು ಓದುವವರು ಕಡಿಮೆಯಾಗಿರುವುದರಿಂದ ಆಸಕ್ತ ಕನ್ನಡ ಓದುಗರಿಗೆ ಸುಲಭವಾಗಿ ಉಚಿತವಾಗಿ ಕನ್ನಡ ಸಾಹಿತ್ಯ - ವಿಮರ್ಶೆಗಳು ಸಿಕ್ಕರೆ ಕನ್ನಡದ ನಿಜವಾದ ಸೇವೆಯಾಗುವುದೆಂದು ನನ್ನ ಭಾವನೆ. ತಾವು ಈ ವಿಷಯವನ್ನು ಮಂಡಿಸಬೇಕೇಂದು ಪ್ರಾರ್ಥಿಸುತ್ತೇನೆ. ಅಲ್ಲಿ ಮೇಲಿರುವ ಕೆಲವರಿಗೆ ಸಂಪಾದನಾ ಪಠ್ಯ ಅಥವಾ ಪಿಡಿಎಫ್ ಪಠ್ಯವನ್ನು ಅಂತರ್‍ಜಾಲ ಜಾಲದಲ್ಲಿ ಹಾಕಿದರೆ ಜನರು ಪುಕ್ಕಟೆಯಾಗಿ ಓದಿಬಿಡುವರಲ್ಲಾ ಎಂಬ ಭಾವನೆ ಇದ್ದಂತೆ ಕಾಣುವುದು. ಪರಿಷತ್ತಿನ ನೆಡವಳಿಕೆ ನೋಡಿ, ಇದು ನನ್ನ ಊಹೆ! 'ಇಂಗ್ಲಿಷ್ - ಕನ್ನಡದ ಒಸಿಆರ್' ಸರ್ಕಾರದ ತಂತ್ರಜ್ಞಾನ ವಿಭಾಗದಲ್ಲಿ ೨ ವರ್ಷದ ಹಿಂದೆ ಸಿದ್ಧವಾಗಿದ್ದರೂ ಸಾರ್ಜನಿಕರಿಗೆ ಬಿಡುಗಡೆ ಮಾಡಿಲ್ಲವೆಂದು ಯಾರೋ ಬರೆದಿದ್ದರು. ಅದನ್ನೂ ಎಲ್ಲರಿಗೂ ಸಿಗುವಂತೆ ಉಚಿತವಾಗಿ ಬಿಡುಗಡೆ ಮಾಡಲು ಒತ್ತಾಯಿಸಬೇಕು. ಸರ್ಕಾರ ಕೊಡುವ ಗ್ರಾಂಟ್ ಕನ್ನಡದ ಪ್ರಸರಣಕ್ಕೆ - ಉನ್ನತಿಗೆ ಸಹಾಯವಾಗುವ ಹಾಗೆ ಪ್ರಯತ್ನಿಸಲು ನನ್ನ ಕೋರಿಕೆ. ಸಭೆ ಸಮ್ಮೇಳನ, ಸಮಾರಂಭ ನೆಡೆಯಲ್ಲಿ, ಅದು ಅಲ್ಲಿಗೇ ಮುಗಿಯದೆ ಅದರ ಫಲ ಜನರಿಗೆ ಸಿಗುವಂತಾಗಲಿ; ಅದಕ್ಕಾಗಿ ತಾವು ಪ್ರಯತ್ನ ಮಾಡಲಿ ಎಂದು ಕೋರುತ್ತೇನೆ. Bschandrasgr (ಚರ್ಚೆ) ೦೮:೪೭, ೨೨ ಜೂನ್ ೨೦೧೮ (UTC)

Wiki Loves Amphibians ಬದಲಾಯಿಸಿ

ನಮ್ಮ ಕರ್ನಾಟಕ ಅದರಲ್ಲಿಯೂ ಪಶ್ಚಿಮ ಘಟ್ಟಗಳ ಶ್ರೇಣಿ ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಜೀವಶಾಸ್ತ್ರದ ಪ್ರಮುಖ ಅಂಶಗಳಾದ ಉಭಯಚರಿಗಳ ಬಗ್ಗೆ ಕನ್ನಡ ವಿಕಿಪೀಡಿಯ ಮತ್ತು Wikispecies ಮತ್ತು commonsಗೆ ಮಾಹಿತಿ ಸೇರಿಸುವುದರಿಂದ ಉಭಯಚರಿಗಳ ಬಗ್ಗೆ ಮಾಹಿತಿ ಪ್ರತಿಯೊಬ್ಬರಿಗೂ ತಮ್ಮ ಮಾತೃ ಭಾಷೆಯಲ್ಲಿಯೇ ತಿಳಿಸಬಹುದು. ಆಗ ಅವುಗಳ ಬಗ್ಗೆ ಜನರಲ್ಲಿ ಇರುವ ಭಯ ಮತ್ತು ಕೆಲವು ಕೆಟ್ಟ ನಂಬಿಕೆಗಳನ್ನು ಹೋಗಲಾಡಿಸಿ ಜೀವಸಂಕುಲವನ್ನು ರಕ್ಷಿಸುವುದರಲ್ಲಿ ನಮ್ಮ ಕೊಡುಗೆಯನ್ನೂ ನೀಡಬಹುದಾಗಿದೆ. ಸುಮಾರು ೨೦೦೫ರ ನಂತರ ಉಭಯಚರಿಗಳ ಮೇಲೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಅವುಗಳ ಆಯಾ ಪ್ರದೇಶಕ್ಕೆ ಸೀಮಿತವಾದುದರಿಂದ ಅವುಗಳ ಪ್ರಾದೇಶಿಕ ಹೆಸರನ್ನೂ ಗುರುತು ಮಾಡುವ ಕಾರ್ಯಗಳು ನಡೆಯುತ್ತಿದೆ. ಅಂತಹ ಗುಂಪಿನೊಂದಿಗೆ ಕನ್ನಡ ಸಮುದಾಯ ಸೇರಿ, ಅವರನ್ನೂ ಸಮುದಾಯವನ್ನಾಗಿಸಿ ಈ ಕೆಲಸವನ್ನು ಮಾಡಬಹುದಾಗಿದೆ. ಇದಕ್ಕೆ ಕೆಲವು ಉಭಯಚರಿ ಛಾಯಾಗ್ರಾಹಕರು, ಅಧ್ಯಯನ ತಂಡವೂ ಕೈಜೋಡಿಸುತ್ತಿದ್ದಾರೆ. Wiki Loves Butterfly ತಂಡದೊಂದಿಗೂ ಚರ್ಚೆ ನಡೆಸಿ ಅವರ ಅನುಭವವ, ಸಲಹೆಯನ್ನೂ ಪಡೆದುಕೊಂಡಿದ್ದೇನೆ. ಇದರಲ್ಲಿ ನನಗೆ ಇರುವ ಪ್ರಮುಖ ಸಂದೇಹಗಳೆಂದರೆ

  • ಹೆಚ್ಚಿನದಕ್ಕೆ ಕನ್ನಡ ಹೆಸರುಗಳು ಇಲ್ಲದ ಕಾರಣ ಯಾವ ರೀತಿ ಲೇಖನಗಳ ಹೆಸರನ್ನು ಬರೆಯಬಹುದು? (ಕನ್ನಡ ಹೆಸರುಗಳು ಗೊತ್ತಿರುವವರನ್ನು ಸಂಪರ್ಕಿಸುತ್ತಿದ್ದೇನೆ.)
  • ಸಂಪಾದನೋತ್ಸವ ಮಾಡಬೇಕೆಂಬ ಆಶಯ ಇದೆ. ಇದಕ್ಕೆ ಶಿವಮೊಗ್ಗ ಅಥವಾ ಸಾಗರ ಸ್ಥಳಗಳನ್ನು ಆಯ್ಕೆ ಮಾಡಬಹುದೇ?
  • ಮುಖ್ಯವಾಗಿ ಉಲ್ಲೇಖಗಳು ಕನ್ನಡದಲ್ಲಿ ಲಭ್ಯ ಇಲ್ಲ. ಇದಕ್ಕಾಗಿ ಇಂಗ್ಲಿಷ್ ಉಲ್ಲೇಖಗಳನ್ನು ಕೊಡಬಹುದೇ? --ಗೋಪಾಲಕೃಷ್ಣ (ಚರ್ಚೆ) ೦೭:೧೯, ೨ ಜುಲೈ ೨೦೧೮ (UTC)
ಸ್ಥಳೀಯ ಜೀವಿಗಳಾದರೆ ಕನ್ನಡ ಹೆಸರುಗಳು ಇದ್ದೇ ಇರುತ್ತವೆ. ಆಯಾ ಪ್ರದೇಶದಲ್ಲಿ ಬಳಕೆಯಲ್ಲಿರುವ ಹೆಸರುಗಳನ್ನು ಪತ್ತೆಹಚ್ಚಬೇಕು. ಉಳಿದವಕ್ಕೆ ಇಂಗ್ಲೀಶ್ ಹೆಸರೇ ಬಳಸಿಕೊಳ್ಳಬಹುದು. ಸಂಪಾದನೋತ್ಸವದ ಸ್ಥಳವನ್ನು ಆಸಕ್ತ ಸಮುದಾಯದ ಸದಸ್ಯರ ಆಧಾರದಲ್ಲಿ ತೀರ್ಮಾನಿಸಬಹುದು. ಯಾಕಂದ್ರೆ ನಿರ್ದಿಷ್ಟ ವಿಷಯಗಳ ಬಗ್ಗೆ ಎಲ್ಲರಿಗೂ ಆಸಕ್ತಿಯಿರುವುದಿಲ್ಲ. ಇಂಗ್ಲೀಶ್ ಉಲ್ಲೇಖಗಳು ಕನ್ನಡ ವಿಕಿಯಲ್ಲಿ ಮಾನ್ಯ.--Vikashegde (ಚರ್ಚೆ) ೧೮:೦೨, ೧೭ ಜುಲೈ ೨೦೧೮ (UTC)

Global preferences are available ಬದಲಾಯಿಸಿ

೧೯:೧೯, ೧೦ ಜುಲೈ ೨೦೧೮ (UTC)

Consultation on the creation of a separate user group for editing sitewide CSS/JS ಬದಲಾಯಿಸಿ

ಕನ್ನಡ - ತುಳು ವಿಕಿ ಸಮುದಾಯದ ಭೇಟಿ ಬದಲಾಯಿಸಿ

ಮುಂದಿನ ತಿಂಗಳು ಆಗಸ್ಟ್ ೧೯ನೇ ಭಾನುವಾರ ಕನ್ನಡ ಮತ್ತು ತುಳು ವಿಕಿ ಸಂಪಾದಕರ ಸಭೆಯನ್ನು ಬೆಂಗಳೂರಿನಲ್ಲಿ ನಡೆಸೋಣವೇ? ದಿನಾಂಕ ಎಲ್ಲರಿಗೂ ಒಪ್ಪಿಗೆ ಇದ್ದರೆ ತಿಳಿಸಿ. ಅಲ್ಲದೇ ಇದ್ದರೆ ದಿನಾಂಕವನ್ನು ಬದಲಾಯಿಸೋಣ. --ಗೋಪಾಲಕೃಷ್ಣ (ಚರ್ಚೆ) ೦೯:೦೫, ೧೭ ಜುಲೈ ೨೦೧೮ (UTC)

ಒಪ್ಪಿಗೆ/ಸಲಹೆಗಳು ಬದಲಾಯಿಸಿ

  • ಎರಡನೇ ಶನಿವಾರದಂದು ನಡೆಸಿದರೆ ಹೆಚ್ಚು ಸೂಕ್ತ. ಮಂಗಳೂರಿನಲ್ಲಿ ನಡೆಸಿದರೆ ಒಳ್ಳೆಯದು.--Lokesha kunchadka (ಚರ್ಚೆ) ೧೧:೦೨, ೧೭ ಜುಲೈ ೨೦೧೮ (UTC)
@Lokesha kunchadka: ಬೆಂಗಳೂರಿನಲ್ಲಿ ಸೂಚಿಸಿದ ಕಾರಣ ಉತ್ತಮ ಇಂಟರ್ನೆಟ್ ಮತ್ತು ಸಂಪರ್ಕಕ್ಕಾಗಿ. ಇಂಟರ್ನೆಟ್ ಯಾಕೆಂದರೆ ಉಲ್ಲೇಖಗಳನ್ನು ಸೇರಿಸುವ ಸಂಪಾದನೋತ್ಸವ ನಡೆಸಬಹುದು ಎಂದು ಅಂದುಕೊಂಡೆ. ಬೇರೆಯವರ ಸಲಹೆ ನೋಡೋಣ. ಧನ್ಯವಾದಗಳು. --ಗೋಪಾಲಕೃಷ್ಣ (ಚರ್ಚೆ) ೧೧:೨೭, ೧೭ ಜುಲೈ ೨೦೧೮ (UTC)
  • ಮಂಗಳೂರಿನಲ್ಲಿ ಆದರೆ ಉತ್ತಮ--ಬೆನೆಟ್ ಅಮ್ಮನ್ನ
  • ಮ೦ಗಳೂರುಲಿ ಆದರೆ ಒಳ್ಳೆಯದಿತ್ತು ಬೆಂಗಳೂರಿನಲಿಯಾದರೆ ನಾನು ಹಾಜರಾಗುವುದು ಸಾಧ್ಯ ಇಲ್ಲ -#--Vinoda mamatharai (ಚರ್ಚೆ) ೧೬:೧೨, ೧೭ ಜುಲೈ ೨೦೧೮ (UTC)
  • ದಿನಾಂಕ ಮತ್ತು ಸ್ಥಳ ನನಗೆ ಒಪ್ಪಿಗೆ ಇದೆ. ಆಗಸ್ಟ್ ೧೮ ಶನಿವಾರ ಕೂಡ ಓಕೆ. ನಾನು ಇತ್ತೀಚೆಗೆ ರಾಂಚಿಯಲ್ಲಿ ನಡೆದ ತರಬೇತಿಯಲ್ಲಿ ತಿಳಿದುಕೊಂಡ ಕೆಲವಿಷಯಗಳನ್ನೂ ಸಮುದಾಯದೊಂದಿಗೆ ಹಂಚಿಕೊಳ್ಳಲು ತಯಾರಿದ್ದೇನೆ. ವ್ಯವಸ್ಥೆಯ ಕಾರಣದಿಂದ ಬೆಂಗಳೂರು ಒಳ್ಳೆಯದು. ಮಂಗಳೂರಿನ ಕೆಲಗೆಳೆಯರು ಬರಲು ಆಗುವುದಿಲ್ಲ ಎನ್ನುತ್ತಿದ್ದಾರೆ. ಹಾಗಾಗಿ ನನ್ನ ಸಲಹೆ ಏನೆಂದರೆ, ಬರಲು ಸಾಧ್ಯವಾಗುವ ಮಂಗಳೂರಿನ ಕೆಲ ಪ್ರತಿನಿಧಿಗಳು ಬೆಂಗಳೂರಿಗೆ ಬಂದರೆ ಒಳ್ಳೆಯದು. ಅನಂತರ ಅವರು ದ.ಕ. ಪ್ರದೇಶದ ವಿಕಿಸಮುದಾಯಕ್ಕೋಸ್ಕರ ಮಂಗಳೂರಲ್ಲಿ ಒಂದು ಸಮ್ಮಿಲನ ಮಾಡಬಹುದು.--Vikashegde (ಚರ್ಚೆ) ೧೭:೪೧, ೧೭ ಜುಲೈ ೨೦೧೮ (UTC)

Mini Train the Trainer 2018 ಬದಲಾಯಿಸಿ

ಕನ್ನಡ ವಿಕಿ ಸಮುದಾಯಕ್ಕೆ ವಿಕಿಪೀಡಿಯದ ಹೆಚ್ಚಿನ ತರಬೇತಿ (Mini TTT 2018) ನಡೆಸುವುದಕ್ಕಾಗಿ ಸ್ಥಳವನ್ನು ನಿರ್ಧರಿಸಬೇಕಿದೆ. ಇದನ್ನು ಸೆಪ್ಟೆಂಬರ್ ತಿಂಗಳ ಮಧ್ಯದಲ್ಲಿ ನಡೆಸಬಹುದೇ? ಸ್ಥಳ ಶಿವಮೊಗ್ಗ ಅಥವಾ ಸಾಗರ. --ಗೋಪಾಲಕೃಷ್ಣ (ಚರ್ಚೆ) ೦೮:೦೬, ೧೮ ಜುಲೈ ೨೦೧೮ (UTC)

ಸಲಹೆಗಳು ಬದಲಾಯಿಸಿ

  • ಆಗಬಹುದು. ಸ್ಥಳ ಶಿವಮೊಗ್ಗ ಆಗಬಹುದು.--Lokesha kunchadka (ಚರ್ಚೆ) ೧೩:೩೪, ೧೮ ಜುಲೈ ೨೦೧೮ (UTC)
  • ಬೆಂಗಳೂರು ಅಲ್ಲದಿದ್ದರೆ ಶಿವಮೊಗ್ಗ ಆಗಬಹುದು. ಅಕ್ಟೋಬರ್ ಹೆಚ್ಚು ಪ್ರಶಸ್ತ ಅನ್ನಿಸುತ್ತೆ. ರಜೆಯೂ ಇರುತ್ತದೆ. ಹಲವು ರೀತಿ ಪ್ರಯೋಜನ ಆಗಬಹುದು. --Vikashegde (ಚರ್ಚೆ) ೦೯:೫೫, ೧೯ ಜುಲೈ ೨೦೧೮ (UTC)
@Vikashegde: ಅಕ್ಟೋಬರ್ ತಿಂಗಳಿನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತವೆ. --ಗೋಪಾಲಕೃಷ್ಣ (ಚರ್ಚೆ) ೧೪:೦೧, ೧೯ ಜುಲೈ ೨೦೧೮ (UTC)

ತುಮಕೂರು ವಿಶ್ವವಿದ್ಯಾಲಯ ಕಾರ್ಯಾಗಾರ ಜುಲೈ ೨೦೧೮ ಬದಲಾಯಿಸಿ

ತುಮಕೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಜುಲೈ ೨೫ರಂದು ಬುಧವಾರ ಕಾರ್ಯಾಗಾರ ನಡೆಸುವುದೆಂದು ತೀರ್ಮಾನಿಸಲಾಗಿದೆ. ಸಮುದಾಯದಿಂದ ಒಬ್ಬರು ಸದಸ್ಯರನ್ನು ಕರೆತರುವಂತೆಯೂ ಕೇಳಿಕೊಂಡಿದ್ದಾರೆ. ಆಸಕ್ತಿ ಇರುವವರು ನನ್ನನ್ನು ಸಂಪರ್ಕಿಸಬೇಕಾಗಿ ವಿನಂತಿ. gopala cis-india.org --ಗೋಪಾಲಕೃಷ್ಣ (ಚರ್ಚೆ) ೦೮:೩೨, ೧೮ ಜುಲೈ ೨೦೧೮ (UTC)

ಕನ್ನಡ ವಿಕಿಪೀಡಿಯದಲ್ಲಿ ಕೆಲವು Gadget ಗಳನ್ನು ಸಕ್ರಿಯಗೊಳಿಸಲು ಕೋರಿಕೆ ೨   ಬದಲಾಯಿಸಿ

ಕನ್ನಡ ವಿಕಿಪೀಡಿಯದಲ್ಲಿ ಲೇಖನದ ವೀಕ್ಷಣೆ, ಸೃಷ್ಟಿಸಿದ ದಿನಾಂಕ ಮತ್ತು ಇತರ ಮಾಹಿತಿಗಳನ್ನು ಪಡೆಯಲು Xtools ಎಂಬ ಹೊರಗಿನ ಒಂದು ಟೂಲ್‍ನ ಸಹಾಯದಿಂದ ಪಡೆಯಬಹುದು. ಆದರೆ ಇದನ್ನೇ ಲೇಖನದ ಮೇಲ್ಬಾಗದಲ್ಲಿ ಗ್ಯಾಜೆಟ್ಟುಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು. ಇದಕ್ಕಾಗಿ ಈ ಗ್ಯಾಜೆಟ್ಟನ್ನು ಅಳವಡಿಸಿಕೊಡುವಂತೆ ನಿರ್ವಾಹಕರಲ್ಲಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೭:೩೫, ೨೦ ಜುಲೈ ೨೦೧೮ (UTC)

✓ ನಿಯೋಜಿಸಲಾಗಿದೆ. ★ Anoop / ಅನೂಪ್ © ೦೭:೫೮, ೨೦ ಜುಲೈ ೨೦೧೮ (UTC)
ಧನ್ಯವಾದಗಳು. --ಗೋಪಾಲಕೃಷ್ಣ (ಚರ್ಚೆ) ೦೮:೦೨, ೨೦ ಜುಲೈ ೨೦೧೮ (UTC)

ಅನಿಸಿಕೆ ಬದಲಾಯಿಸಿ

ಉದಾ: ನಾನು ಒಂದು ಲೇಖನವನ್ನು ೧೦ ಸಾಲುಗಳಿಂದ ಬರೆದು ರಚಿಸಿ ಬಿಡುತ್ತೇನೆ. ನಂತರ ರಚಿಸಿದವರ(ನನ್ನ) ಹೆಸರು ಮಾತ್ರ ಲೇಖನದ ಮೇಲೆ ಕಾಣಿಸುವದರಿಂದ ಲೇಖನ ಅಭಿವೃದ್ಧಿಪಡಿಸುವ ಸಂಭವನೀಯತೆ ಕಡಿಮೆಯಾಗುವದು ಎಂಬುವದು ನನ್ನ ಅನಿಸಿಕೆ. Sangappadyamani (ಚರ್ಚೆ) ೧೬:೪೬, ೨೦ ಜುಲೈ ೨೦೧೮ (UTC)

ರಚಿಸಿದವರ ಹೆಸರನ್ನು ಮರೆಮಾಡಲು ಸಾಧ್ಯವಿಲ್ಲ. ಏಕೆಂದರೆ ಗ್ಯಾಜೆಟ್ಗಳು ಬಾಹ್ಯ ಸ್ಕ್ರಿಪ್ಟ್ನಿಂದ ಲೋಡ್ ಆಗುತ್ತವೆ. ನಾನು ಇದನ್ನು ಡೀಫಾಲ್ಟ್ ಬದಲಿಗೆ ವಿಶೇಷ:Preferences ನಿಂದ ಲೋಡ್ ಮಾಡಲು ಬದಲಿಸಿದ್ದೇನೆ. ★ Anoop / ಅನೂಪ್ © ೧೭:೦೩, ೨೦ ಜುಲೈ ೨೦೧೮ (UTC)
ಹಾಗಿದ್ದರೆ ಆ ಗ್ಯಾಜೆಟ್ ತೆಗೆಯುವುದೊಳಿತು--Vikashegde (ಚರ್ಚೆ) ೦೯:೨೬, ೨೩ ಜುಲೈ ೨೦೧೮ (UTC)
ತೆಗೆಯುವುದರಿಂದ ಈಗ ಇರುವಂತೆ ಇರುವುದು ಉತ್ತಮ ಎಂದು ನನ್ನ ಅನಿಸಿಕೆ. ಬೇಕಾದವರು ಅಳವಡಿಸಿಕೊಳ್ಳಬಹುದು ಅಷ್ಟೇ. --ಗೋಪಾಲಕೃಷ್ಣ (ಚರ್ಚೆ) ೦೬:೦೨, ೨೬ ಜುಲೈ ೨೦೧೮ (UTC)

ಮೊಬೈಲಿನಲ್ಲಿ ಟೈಪಿಂಗ್ ಸಮಸ್ಯೆಗಳು ಮತ್ತು ಪರಿಹಾರ ಬದಲಾಯಿಸಿ

ನಿನ್ನೆ ನಾನು ಮೈಕ್ರೋಹೈಲ ಶೋಲಿಗರಿ ಎಂದು ಮೊಬೈಲಿನಲ್ಲಿ ಜಸ್ಟ್ ಕನ್ನಡ ತಂತ್ರಾಂಶದಿಂದ ಬರೆಯಲು ಪ್ರಯತ್ನಿಸಿದಾಗ ಅದರಲ್ಲಿ ಸರಿಯಾಗಿ ಬರಲಿಲ್ಲ. ಕೊನೆಗೆ Vikashegde ಅವರು ಪರಿಗಾರ ಸೂಚಿಸಿದರು. ಇದರ ಬಗ್ಗೆ ಒಂದು ಸರ್ವೇ ನಡೆಸಬಹುದೇ? ಬಳಕೆದಾರರು ತಮ್ಮ ಬಳಿ ಇರುವ smartphone ಗಳಲ್ಲಿ ವಿವಿಧ ಕಿಬೋರ್ಡುಗಳನ್ನು ಬಳಸಬಹುದು. ವಿವಿಧ smartphoneಗಳನ್ನು ಬಳಸುತ್ತಾರೆ. ಹೀಗಾಗಿ ನೀವೂ ನಿಮ್ಮ ಮೊಬೈಲುಗಳಲ್ಲಿ ವಿವಿಧ ಕೀಬೋರ್ಡುಗಳನ್ನು ಪ್ರಯತ್ನಿಸಬೇಕಾಗಿ ವಿನಂತಿ. ಟೈಪಿಂಗ್‍ ತೊಂದರೆಗಳು ಎದುರಾದಲ್ಲಿ ಅದಕ್ಕೆ ಎಲ್ಲರೂ ಸೇರಿ ಪರಿಹಾರಗಳನ್ನು ಕೈಗೊಳ್ಳಲು ಪ್ರಯತ್ನಿಸೋಣ. ಇದರ ಬಗ್ಗೆ ಸಮುದಾಯದ ಗೆಳೆಯರೊಂದಿಗೆ email ಮೂಲಕ ಚರ್ಚೆ ನಡೆಸೋಣ. ನನ್ನ ಇಮೇಲ್ ವಿಳಾಸ bhat.gka666 gmail.com. ನಿಮ್ಮ email ವಿಳಾಸವನ್ನು ಯಾರ ಬಳಿಯೂ ಹಂಚಿಕೊಳ್ಳುವುದಿಲ್ಲ. ಸಮುದಾಯದ ಇತರ ಗೆಳೆಯರೊಂದಿಗೆ ಹಂಚಿಕೊಳ್ಳಲು ನಿಮ್ಮ ಒಪ್ಪಿಗೆ ಇದ್ದಲ್ಲಿ ತಿಳಿಸಬೇಕಾಗಿ ವಿನಂತಿ. ಈ ಬಗ್ಗೆ ಸಲಹೆಗಳನ್ನು ನೀಡಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೬:೧೩, ೨೬ ಜುಲೈ ೨೦೧೮ (UTC)

ಹೆಚ್ಚಿನ ವಿವರ ಬೇಕು -ಯಾವ ಮೊಬೈಲ್, ಯಾವ ಕಾರ್ಯಾಚರಣ ವ್ಯವಸ್ಥೆ? ಜಸ್ಟ್‍ಕನ್ನಡದಲ್ಲಿ ಕನ್ನಡಕ್ಕೆ ಮೂರು ಕೀಲಿಮಣೆ ವಿನ್ಯಾಸಗಳಿವೆ. ಯಾವ ವಿನ್ಯಾಸದಲ್ಲಿ ಪ್ರಯತ್ನಿಸಿದ್ದು? ಯಾವ ರೀತಿಯಲ್ಲಿ ಮೂಡಿಬಂತು? ವಿಕಾಸ ಹೆಗಡೆ ಯಾವ ಪರಿಹಾರ ಸೂಚಿಸಿದ್ದು?--ಪವನಜ (ಚರ್ಚೆ) ೧೦:೨೧, ೨೬ ಜುಲೈ ೨೦೧೮ (UTC)
@Pavanaja: ಉತ್ತರಕ್ಕೆ ಧನ್ಯವಾದಗಳು. ೋನ್ (ಪೋನ್) Honor on Android 8.0.0. ಜಸ್ಟ್ ಕನ್ನಡ(5.0.3724).ೋಮ್(ಕ್ರೋಮ್) ಬ್ರೌಸರ್ (67.0.3396.87) desktop version with ದೇಶೀಯ ಕೀಬೋರ್ಡ್. ವಿಕಾಸ್ ಅವರು ಮೈಕ್ರೋಹೈಲ ಬರೆಯಲು ಮ+ಕ+್+ರ+Shift+ಒ(ಓ) ಎಂದು ಬರೆಯಲು ೇಳಿದಾಗ ಸರಿಯಾಗಿ ಬಂತು. ಮೇಲೆ ತಿಳಿಸಿದಂತೆ ಇತರ ಅಕ್ಷರಗಳೊಂದಿಗೆ 'ಓ' ದೀರ್ಘ ಸರಿಯಾಗಿ ಬರುತ್ತಿರಲಿಲ್ಲ. ಜಸ್ಟ್ ಕನ್ನಡದಲ್ಲಿರುವ ಕನ್ನಡ (Nudi) ವಿನ್ಯಾಸದಲ್ಲಿ ಬಳಕೆ ಮಾಡಿದ್ದು. --ಗೋಪಾಲಕೃಷ್ಣ (ಚರ್ಚೆ) ೧೨:೧೪, ೨೬ ಜುಲೈ ೨೦೧೮ (UTC)
  Working ಇದೇ ರೀತಿ Firefox mobile browser (61.0)ನಲ್ಲಿ desktop version ದೇಶೀಯ ಕೀಬೋರ್ಡ್ ಬಳಸಿ ಪ್ರಯತ್ನಿಸಿದಾಗ ಸರಿಯಾಗಿ ಬಂತು. --ಗೋಪಾಲಕೃಷ್ಣ (ಚರ್ಚೆ) ೧೨:೩೬, ೨೬ ಜುಲೈ ೨೦೧೮ (UTC)

ಜಿ ಬೋರ್ಡ್ - ಗೂಗಲ್ ಕೀಬೋರ್ಡ್ ಹೊಸ ವರಸೆಯಲ್ಲಿ ಸುಲಭ, ಪ್ರಯತ್ನಿಸಿ Mallikarjunasj (talk) ೧೭:೫೯, ೩೧ ಜುಲೈ ೨೦೧೮ (UTC)

ಖಾತೆ ಸೃಷ್ಟಿಸುವ ಹಕ್ಕಿಗಾಗಿ ಮನವಿ ಬದಲಾಯಿಸಿ

ನಾನು ಕನ್ನಡ ವಿಕಿಪೀಡಿಯದ ಕಾರ್ಯಾಗಾರಗಳನ್ನು ನಡೆಸುವಾಗ ಖಾತೆಗಳನ್ನು ಸೃಷ್ಟಿಸುವುದರಲ್ಲಿ ತೊಂದರೆಗಳನ್ನು ಅನುಭವಿಸಿದ್ದೇನೆ ಮತ್ತು ಅನುಭವಿಸುತ್ತಿದ್ದೇನೆ. ಇದಕ್ಕೆ ಕಾರಣ ವಿಕಿಪೀಡಿಯವು ಒಂದು IP address ನಿಂದ 24 ಘಂಟೆಗಳ ಅವಧಿಯಲ್ಲಿ ಕೇವಲ ೬ ಖಾತೆಗಳನ್ನು ಸೃಷ್ಟಿಸಲು ಅನುವು ಮಾಡಿಕೊಡುತ್ತದೆ. ಆ ಸಮಯದಲ್ಲಿ ಒಂದೋ ಅಂತರ್ಜಾಲ ಸಂಪರ್ಕ ಬೇರೆ ಬೇರೆ ಬಳಸಬೇಕಾಗಿ ಬರುತ್ತದೆ ಅಥವಾ ನಿರ್ವಾಹಕರ ಸಹಾಯ ಪಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ನನಗೆ ಖಾತೆ ಸೃಷ್ಟಿಸುವ ಹಕ್ಕು ಹೊಂದಿದ್ದರೆ ತುಂಬಾ ಅನುಕೂಲವಾಗುತ್ತದೆ. ಸಮುದಾಯ ಸದಸ್ಯರು ಸಮ್ಮತಿಯನ್ನು ಸೂಚಿಸಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೮:೫೮, ೩೦ ಜುಲೈ ೨೦೧೮ (UTC)

ಸಮ್ಮತಿ ಬದಲಾಯಿಸಿ

ಅಸಮ್ಮತಿ ಬದಲಾಯಿಸಿ

ಎಲ್ಲರಿಗೂ ಧನ್ಯವಾದಗಳು. ನನಗೆ ಒಂದು ವರ್ಷದ ವರೆಗೆ ಈ ಖಾತೆ ಸೃಷ್ಟಿಸಲು ಇದೆ. --ಗೋಪಾಲಕೃಷ್ಣ (ಚರ್ಚೆ) ೧೩:೪೨, ೩ ಆಗಸ್ಟ್ ೨೦೧೮ (UTC)

New user group for editing sitewide CSS/JS ಬದಲಾಯಿಸಿ

IMPORTANT: Admin activity review ಬದಲಾಯಿಸಿ

Hello. A policy regarding the removal of "advanced rights" (administrator, bureaucrat, etc. ) was adopted by global community consensus in 2013. According to this policy, the stewards are reviewing administrators' activity on all Wikimedia Foundation wikis with no inactivity policy. To the best of our knowledge, your wiki does not have a formal process for removing "advanced rights" from inactive accounts. This means that the stewards will take care of this according to the admin activity review.

We have determined that the following users meet the inactivity criteria (no edits and no log actions for more than 2 years):

  1. HPNadig (bureaucrat, administrator)

These users will receive a notification soon, asking them to start a community discussion if they want to retain some or all of their rights. If the users do not respond, then their advanced rights will be removed by the stewards.

However, if you as a community would like to create your own activity review process superseding the global one, want to make another decision about these inactive rights holders, or already have a policy that we missed, then please notify the stewards on Meta-Wiki so that we know not to proceed with the rights review on your wiki. Thanks,

— regards, Revi ೦೮:೪೧, ೩೧ ಜುಲೈ ೨೦೧೮ (UTC)

ಮುಂದಿನ ವಿಕಿಪೀಡಿಯ ಸಾಧಕ ಬದಲಾಯಿಸಿ

ಮುಂದಿನ ವಿಕಿಪೀಡಿಯ ಸಾಧಕರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂದು ಸಮುದಾಯದ ಸದಸ್ಯರು ತಿಳಿಸಬೇಕಾಗಿ ವಿನಂತಿ. ಈ ವರೆಗೆ ಆಯ್ಕೆಯಾದ ಸಾಧಕರ ಪಟ್ಟಿ ಇಲ್ಲಿದೆ. --ಗೋಪಾಲಕೃಷ್ಣ (ಚರ್ಚೆ) ೧೩:೨೮, ೫ ಆಗಸ್ಟ್ ೨೦೧೮ (UTC)

ಈ ತಿಂಗಳು ಸಂಗಪ್ಪ ದ್ಯಾಮಣಿ ಅವರು ಆಗಬಹುದು.--Lokesha kunchadka (ಚರ್ಚೆ) ೧೬:೩೦, ೫ ಆಗಸ್ಟ್ ೨೦೧೮ (UTC)
@Lokesha kunchadka ರವರೆ ನನಗೆ ವೈಯಕ್ತಿಕ ಕಾರಣಗಳಿಂದ ಇದರಲ್ಲಿ ಆಸಕ್ತಿ ಇಲ್ಲದ ಕಾರಣ ದಯವಿಟ್ಟು ಬೇರೆಯವರನ್ನು ಪರಿಗಣಿಸಲು ವಿನಂತಿ.ಧನ್ಯವಾದ.Sangappadyamani (ಚರ್ಚೆ) ೧೭:೦೨, ೫ ಆಗಸ್ಟ್ ೨೦೧೮ (UTC)

ನಾಮನಿರ್ದೇಶನ ಬದಲಾಯಿಸಿ

  • Pavithrah ರವರು ಕನ್ನಡ ವಿಕಿಕೊಟ್ ಗೆ ಉತ್ತಮ ಕೊಡುಗೆ ನೀಡಿರುತ್ತಾರೆ.ಅವರನ್ನು ಪರಿಗಣಿಸಬಹುದು.Sangappadyamani (ಚರ್ಚೆ) ೧೭:೨೩, ೫ ಆಗಸ್ಟ್ ೨೦೧೮ (UTC)
@Manjappabg: ತಮ್ಮ ಪ್ರೀತಿ ವಿಶ್ವಾಸಕ್ಕೆ ಧನ್ಯವಾದಗಳು. ಆದರೆ ನನಗೆ ಸದ್ಯ ಆಸಕ್ತಿ ಇಲ್ಲ. ನನ್ನಿಂದ ಹೆಚ್ಚಿನ ಸಾಧನೆ ಮಾಡಿದವರು ಅನೇಕರಿದ್ದಾರೆ. ಅವರ ಹೆಸರನ್ನು ಪರಿಗಣಿಸಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೧೧:೩೭, ೮ ಆಗಸ್ಟ್ ೨೦೧೮ (UTC)
Akasmita ಮತ್ತು Durga bhat bollurodi ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದು--Lokesha kunchadka (ಚರ್ಚೆ) ೧೩:೦೯, ೧೬ ಆಗಸ್ಟ್ ೨೦೧೮ (UTC)
Akasmita ಅವರು ಕೆಲವು ವರ್ಷಗಳಿಂದ ಸಕ್ರಿಯವಾಗಿ ಸಂಪಾದನೆಗಳನ್ನು ಮಾಡುತ್ತಿರುವುದರಿಂದ ಅವರನ್ನು ನಾನು ಅನುಮೋದಿಸುತ್ತೇನೆ.--Vikashegde (ಚರ್ಚೆ) ೧೪:೪೨, ೨೧ ಆಗಸ್ಟ್ ೨೦೧೮ (UTC)

Enabling a helpful feature for Template editors ಬದಲಾಯಿಸಿ

CKoerner (WMF) (talk) ೨೧:೨೮, ೬ ಆಗಸ್ಟ್ ೨೦೧೮ (UTC)

ಮೈಸೂರು ಭೇಟಿ ಬದಲಾಯಿಸಿ

ಮೈಸೂರಿನಲ್ಲಿ ವಿವಿಧ ವಿಕಿಮೀಡಿಯನ್ನರ ಭೇಟಿಗಾಗಿ ಮತ್ತು ಕೆಲವರಿಗೆ ವಿಕಿಪೀಡಿಯ ಹೇಳಿಕೊಡಲು (ಸದಸ್ಯ:PUNEETH h pruthwi, ಸದಸ್ಯ:Dr.K.Soubhagyavathi) ದಿನಾಂಕ ೭ ಆಗಸ್ಟ್ ೨೦೧೮ ರಂದು ಮೈಸೂರಿನಲ್ಲಿ ಇರುತ್ತೇನೆ. ಭೇಟಿಯಾಗೋಣ. --ಗೋಪಾಲಕೃಷ್ಣ (ಚರ್ಚೆ) ೦೩:೪೨, ೭ ಆಗಸ್ಟ್ ೨೦೧೮ (UTC)

ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ - ಸಂಪಾದನೋತ್ಸವ ಬದಲಾಯಿಸಿ

ಆಗಸ್ಟ್ ೧೫ರಂದು ಭಾರತ ದೇಶದಲ್ಲಿ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತಯದೆ. ಇದರ ಪ್ರಯುಕ್ತ ವಿವಿಧ ವಿಕಿಪೀಡಿಯ ಸಮುದಾಯಗಳು ಸಂಪಾದನೋತ್ಸವವನ್ನು ಏರ್ಪಡಿಸಿವೆ. ಇದು ಸರಿ ಸುಮಾರು ಆಗಸ್ಟ್ ೧೦-೨೦ರ ವರೆಗೆ ಹಮ್ಮಿಕೊಂಡಿವೆ. ನಮ್ಮಲ್ಲಿಯೂ ಈ ಸಂಪಾದನೋತ್ಸವವನ್ನು ಏರ್ಪಡಿಸಬಹುದು. ಯಾವ ದಿನಗಳಲ್ಲಿ ಮತ್ತು ಎಷ್ಟು ದಿನ ಈ ಸಂಪಾದನೋತ್ಸವವನ್ನು ಹಮ್ಮಿಕೊಳ್ಳಬಹುದು ಎಂದು ಚರ್ಚೆ ನಡೆಸೋಣ. ನಿಮ್ಮ ಸಲಹೆಗಳು ಅಭಿಪ್ರಾಯಗಳನ್ನೂ ತಿಳಿಸಬೇಕಾಗಿ ವಿನಂತಿ--ಗೋಪಾಲಕೃಷ್ಣ (ಚರ್ಚೆ) ೧೧:೨೫, ೮ ಆಗಸ್ಟ್ ೨೦೧೮ (UTC)

ಸ್ವತಂತ್ರ ದಿನದ ಪುಟ, [ವರ್ಗ:ಸ್ವಾತಂತ್ರ್ಯ_ಹೋರಾಟಗಾರರು] , ಸ್ವತಂತ್ರ ಸೇನಾನಿಗಳ ಪುಟಗಳು ಇವನ್ನ ಬರೆವ/ವಿಸ್ತಾರ ಮಾಡುವ/ಸರಿಪಡಿಸುವ/ಅಳಿಸುವ ಕಾರ್ಯ...
ಸ್ವತಂತ್ರ ದಿನದ ಪುಟ ಶುರು ಮಾಡಿದೆ.-Mallikarjunasj (talk) ೧೧:೪೧, ೮ ಆಗಸ್ಟ್ ೨೦೧೮ (UTC)
ನಮ್ಮಲ್ಲೂ ಆಗಸ್ಟ್ ತಿಂಗಳು ಪೂರ್ತಿ ಮಾಡೋಣ.--Vikashegde (ಚರ್ಚೆ) ೧೦:೩೧, ೯ ಆಗಸ್ಟ್ ೨೦೧೮ (UTC)
ಆಗಬಹುದು. ಮಲ್ಲಿಕಾರ್ಜುನರು ಹೇಳಿದ ವರ್ಗವನ್ನು ಅಭಿವೃದ್ಧಿಪಡಿಸೋಣ. ಜೊತೆಗೆ ವಿಕಿಟೇಟಾವನ್ನೂ ಅಭಿವೃದ್ಧಿಪಡಿಸೋಣ. --ಗೋಪಾಲಕೃಷ್ಣ (ಚರ್ಚೆ) ೧೫:೩೭, ೯ ಆಗಸ್ಟ್ ೨೦೧೮ (UTC)
ಆಗಬಹುದು . ಇದನ್ನು ಒಂದು ಉತ್ಸವದ ರೀತಿಯಲ್ಲಿ ಆಚರಿಸೋಣ.--Lokesha kunchadka (ಚರ್ಚೆ) ೦೩:೧೮, ೧೦ ಆಗಸ್ಟ್ ೨೦೧೮ (UTC)