ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೪

ಅರಳಿಕಟ್ಟೆ.png

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ::

 • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

 • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
 • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು -

{{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.

 • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
 • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
 • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.

justify

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧|೧೨|೧೩|೧೩|೧೪ |೧೫

ಇತರ ಚರ್ಚೆ: | | |

ವಿಕಿಯಲ್ಲಿ ಸಮತೋಲನಸಂಪಾದಿಸಿ

ವಿಕಿಯಲ್ಲಿ ಸಮತೋಲನ ಸಾಧಿಸಲು ಚಲನಚಿತ್ರ ಚುಟುಕು ಪುಟಗಳ ಪ್ರಮಾಣದಲ್ಲಿ ಇತರ ಯೋಜನೆಗಳ ಪುಟಗಳು ಬೆಳಯಬೇಕಾದ ಅಗತ್ಯವಿದೆ. ಇದರ ಬಗ್ಗೆ ಮೇಲಿನ ಪರಿಹಾರದ ಕೆಲಸಗಳಲ್ಲಿ ಈ ಹಿಂದೆ ಮಂಡಿಸಿದ್ದೆ. ಆ ಚರ್ಚೆಯ ವಿಭಾಗ ದೊಡ್ಡದಾಯಿತೆಂದು ಸಂಪಾದಿಸುವಾಗ ವಿಕಿಯಲ್ಲಿ Warning Message ಕಾಣಿಸಿದ್ದರಿಂದ ಅದಕ್ಕೆ ಉಪ ವಿಭಾಗದಲ್ಲಿ ಬರೆಯುತ್ತಿರುವೆನು. ಮನ - ನೀವು ಅಲ್ಲಿ ಬರೆದಿರುವಂತೆ ಈ ಚಲನಚಿತ್ರ ಪುಟಗಳಿಗೆ ಪೈಪೋಟಿಯ ಸ್ವರೂಪವನ್ನು ಕೊಡುವುದಕ್ಕಾಗಲಿ ಇತರ ಯೋಜನೆಗಳ ಪ್ರಮಾಣ ಹೆಚ್ಚಲಿ ಎಂದು ಬರೆದಿಲ್ಲ. ವೈವಿಧ್ಯಮಯ ಹಾಗು ಉಪಯುಕ್ತ ಮಾಹಿತಿ ಈ ವಿಶ್ವಕೋಶದಲ್ಲಿ ಸೇರಲೆಂದು ಬರೆದದ್ದು. ವಿಕಿಪೀಡಿಯ ಒಂದು ಪಠ್ಯಪುಸ್ತಕವಲ್ಲದಿರಬಹುದು, ಆದರೆ ಒಂದು ಗ್ರಂಥಾಲಯಕ್ಕೆ ಹೋಲಿಸಬಹುದೆಂದು ಅಂದುಕೊಳ್ಳುತ್ತೇನೆ. ಈ ಗ್ರಂಥಾಲಯದಲ್ಲಿ ಸುಮಾರು ಅನೇಕ ವಿಷಯಗಳಿಗೆ ಸಂಬಂಧಿಸಿದ ೧೦೦ ಪುಸ್ತಕಗಳನ್ನಿಟ್ಟು , ಚಲನಚಿತ್ರಗಳ ಹೆಸರು, ಪಾತ್ರವರ್ಗ, ಕೆಲವು ತಾಂತ್ರಿಕ ವರ್ಗದ ಹೆಸರುಗಳನ್ನುಳ್ಳ ೨೫೦೦ Cardಗಳನ್ನಿಡುವುದರಿಂದ ಆ ಗ್ರಂಥಾಲಯದ ಉತ್ತಮ ಗುಣಮಟ್ಟದ್ದು ಎನಿಸಿಕೊಳ್ಳುವುದೆ ? ಮೇಲಿನ ಸಲಹೆಗಳಲ್ಲಿ ಇದೇ ಮಾದರಿಯ ಇನ್ನಷ್ಟು ಯೋಜನೆಗಳನ್ನು ಪ್ರಾರಂಭಿಸಬಹುದು ಎಂದಿದ್ದೆ. ಉದಾ. ಜಿಲ್ಲೆ/ಹಳ್ಳಿ ಇತ್ಯಾದಿಗಳ ಮಾಹಿತಿ, ಆಗ ಇವು ಚುಟುಕು ಹಾಳೆಗಳಾದರೂ ಅಡ್ಡಿಯಿಲ್ಲ ಎನಿಸಿತು. ಆದರೆ ಹೀಗೆ ಸೇರಿಸುತ್ತ ಹೋದರೆ ವಿಕಿಯಲ್ಲಿ ೧೦೦ ಪುಸ್ತಕಗಳಷ್ಟೇ ಇದ್ದು, ೨೫೦೦ ಚಲನಚಿತ್ರದ Cardಗಳ ಜೊತೆ, ಒನ್ದು ೫೦೦ ಊರುಗಳ ಹೆಸರಿನ Cardಗಳು ಒಂದು ೧೦೦೦ ಸಾಹಿತ್ಯ ಕೃತಿಗಳ Cardಗಳು ಸೇರುತ್ತವಷ್ಟೇ. ಒಟ್ಟಿನಲ್ಲಿ ವಿಕಿ ಒಂದು ಚುಟುಕ ಪುಟಗಳ ತಂಗುದಾಣವಾಗದಿರಬೇಕಾದರೆ, ಈ ಚುಟುಕು Cardಗಳು ಕಮ್ಮಿ ಅಂದರು ಒಂದೆರಡು ಹಾಳೆಯ ಪುಟಗಳಷ್ಟಾದರೂ ಆಗಬೇಕಲ್ಲವೆ. ಈಗ ತೀವ್ರ ಗತಿಯಲ್ಲಿ ಮತ್ತಷ್ಟು ಚುಟುಕು ಚಲನಚಿತ್ರ ಪುಟಗಳು ಶೇಖರಿಸಿದರೆ, ಈ ಸಮತೋಲನ ಸಾಧಿಸುವ ಕಾರ್ಯ ಇನ್ನೂ ಕಷ್ಟವಾಗುತ್ತದೆ. ಆದ್ದರಿಂದ ಇನ್ನು ಮುಂದೆ ಒಂದು ಚಲನಚಿತ್ರ ಪುಟವನ್ನು ಬರೆಯಬೇಕಿದ್ದಲ್ಲಿ, ದಯವಿಟ್ಟು ಆ ಚಲನಚಿತ್ರ ಪುಟದಲ್ಲಿ ಆದಷ್ಟು ಹೆಚ್ಚು ಮಾಹಿತಿ ಇರುವವರೆಗೂ ಆ ಪುಟವನ್ನು ಹಾಕದಿರೋಣ. ಈಗಿರುವ ಅಷ್ಟೂ ಚುಟುಕು ಚಲನಚಿತ್ರ ಪುಟಗಳು ವಿಕಿ ಮಾದರಿಯ ಲೇಖನವಾಗಲು "ಬಹಳಷ್ಟು" ಕೆಲಸವಂತೂ ಆಗಬೇಕಿದೆ, ಆದ್ದರಿಂದ ಸಮತೋಲನ ಸಾಧ್ಯವಾಗಿ, ಈ ಚುಟುಕುಗಳೆಲ್ಲವೂ ಒಂದು ಪ್ರಮಾಣದಲ್ಲಿ ಬೆಳೆಯುವಂತಾಗುವವರೆಗೂ, ಮತ್ತಷ್ಟು ಚುಟುಕು ಚಲನಚಿತ್ರಗಳನ್ನು ಸೇರಿಸದಿರೋಣ. -ಹಂಸವಾಣಿದಾಸ ೨೧:೩೪, ೧೧ September ೨೦೦೬ (UTC)

ಚುಟುಕು ಪುಟಗಳ ಬಗ್ಗೆ ಆಂಗ್ಲ ವಿಕಿಪೀಡಿಯದಲ್ಲಿರುವ en:Wikipedia:Stub ಪುಟದಲ್ಲಿನ definition ಹೀಗಿದೆ:
Stubs are Wikipedia entries that have not yet received substantial attention from the editors of Wikipedia, and do not yet contain sufficient information on their subject matter. In other words, they are short or insufficient pieces of information and require additions to further increase Wikipedia's usefulness. The community values stubs as useful first steps toward complete articles. Anyone can complete a stub.
ಇಲ್ಲಿ ನಾವು ಗಮನಿಸಬೇಕಿರುವುದು ಮುಖ್ಯವಾಗಿ ಎರಡು ಅಂಶಗಳು.
ಚಲನಚಿತ್ರ ಚುಟುಕುಪುಟಗಳು ಇತರೆ ವರ್ಗಗಳ ಲೇಖನಗಳ ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆಯೆ? ಅಡ್ಡಿಯಾಗುತ್ತಿಲ್ಲ. ಆಗುತ್ತಿದ್ದರೆ ತಿಳಿಸಿ.
ಚಲನಚಿತ್ರ ಚುಟುಕುಪುಟಗಳಿಗೆ ಮತ್ತಷ್ಟು ಮಾಹಿತಿಯನ್ನು ಆಯಾ ಚಲನಚಿತ್ರಗಳ ಬಗ್ಗೆ ತಿಳಿದವರು ಸೇರಿಸಲು ಸಾಧ್ಯವಿಲ್ಲವೆ? ಖಂಡಿತಾ ಸಾಧ್ಯವಿದೆ. ಚಲನಚಿತ್ರ ಪುಟಗಳಲ್ಲಿ {{ಚುಟುಕು-ಚಲನಚಿತ್ರ}} ಎಂದು ಸೇರಿಸಿ ಹಾಕುತ್ತಿರುವ ಉದ್ದೇಶವೇ ಅದರ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದವರು ಸೇರಿಸಲಿ ಎಂದು.
ಬೇರೆ ವರ್ಗಗಳು ಖಂಡಿತಾ ಬೆಳೆಯಬೇಕು, ಅದರಲ್ಲಿ ಎರಡು ಮಾತಿಲ್ಲ. ಬೆಳೆಯುತ್ತಿವೆ ಕೂಡ. ಆದರೆ, ಬೇರೆ ವರ್ಗಗಳ ಲೇಖನಗಳು ಬೆಳೆಯುವಂತಾಗಬೇಕು ಎಂದು ಬೆಳೆಯುತ್ತಿರುವ ವರ್ಗವನ್ನು ನಿಲ್ಲಿಸುವುದು ಸೂಕ್ತವಾಗುವುದಿಲ್ಲ.
ಸಮತೋಲನವು ಬೆಳವಣಿಗೆಯ ಹಾದಿಯಲ್ಲಿರಬೇಕು. ಬೆಳವಣಿಗೆಯನ್ನು ಕುಂಠಿತಗೊಳಿಸುವ ಮೂಲಕ ಸಮತೋಲನ ಸಾಧಿಸಲು ಪ್ರಯತ್ನಿಸುವುದು ಸರಿಯಾದ ಮಾರ್ಗವಲ್ಲ ಎಂದು ನನ್ನ ಪ್ರಾಮಾಣಿಕ ಅಭಿಪ್ರಾಯ.
ಇತರೆ ವರ್ಗಗಳ ಮೇಲೆ ಹೆಚ್ಚು ಹೆಚ್ಚು ಕೆಲಸಗಳು ಆರಂಭವಾಗಬೇಕಿದೆ, ಆ ಮೂಲಕ ನಾವು ಸಮತೋಲನವನ್ನು ಸಾಧಿಸಬೇಕಿದೆ. - ಮನ|Mana Talk - Contribs ೨೩:೨೫, ೧೧ September ೨೦೦೬ (UTC)
ಆಂಗ್ಲ ವಿಕಿಪೀಡಿಯದಲ್ಲಿರುವ en:Wikipedia:Stub ಪುಟದಲ್ಲೇ ಈ ಚುಟುಕು ಪುಟಗಳನ್ನು ಸೇರಿಸುವ ಕುರಿತು Ideal stub article ಎಂಬ ಶೀರ್ಷಿಕೆಯಡಿ ಇರುವ ಸಾಲುಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. "When you write a stub article, it is important to bear in mind that its main interest is to be expanded, and that thus it ideally contains enough information to give a basis for other editors to expand upon." ಹೀಗಿರಬೇಕಾದರೆ, ಈ ೨೫೦೦+ ಚಲನಚಿತ್ರ ಚುಟುಕು ಪುಟಗಳಲ್ಲಿ ದೀರ್ಘ ಲೇಖನವಾಗುವಷ್ಟು ಮಾಹಿತಿಯಿದೆಯೇ ? ಇಲ್ಲದಿದ್ದರೆ ಇಷ್ಟು ಗಾತ್ರದ ಚುಟುಕುಗಳು ಬೇಕೆ ? ಮತ್ತಷ್ಟು ಮಾಹಿತಿಯನ್ನು ತಿಳಿದವರೆಲ್ಲರೂ ಸೇರಿಸುತ್ತಾರೆ ಎಂದು ಹೇಳುತ್ತಾ ಚಿತ್ರರಂಗದಲ್ಲಿರುವ "ಪ್ರತಿಯೊಂದು" ಚಿತ್ರಕ್ಕೆ ಅದರದೇ ಪುಟದ ಅಗತ್ಯವಿದೆಯೇ ? ಬೆಳೆಯುತ್ತಿರುವ ವರ್ಗವನ್ನು ಕುಂಠಿತ ಗೊಳಿಸುವುದರಿಂದ ಖಂಡಿತ ಸಮತೋಲನ ಬರದು, ಆದರೆ ಚುಟುಕುಗಳನ್ನು ತುಂಬಿಸಿ ಯಾವುದೇ ವರ್ಗವನ್ನು ಬೆಳಸುವ ಅಗತ್ಯ ವಿಕಿಗೆ ಇಲ್ಲ ಎಂದು ನನ್ನ ಅಭಿಪ್ರಾಯ. -ಹಂಸವಾಣಿದಾಸ ೨೩:೫೦, ೧೧ September ೨೦೦೬ (UTC)
ಪ್ರತಿಯೊಂದು ಚಿತ್ರಕ್ಕೆ ಅದರದೆ ಪುಟದ ಅಗತ್ಯವಿದೆಯೆ? ಪುಟವು ಮಾಹಿತಿಯನ್ನೊದಗಿಸುವಂತಿದ್ದರೆ, ಖಂಡಿತಾ ಇದೆ.
ಈಗಿರುವ "ಬಹುತೇಕ" ಚಲನಚಿತ್ರ ಪುಟಗಳು ಮಾಹಿತಿಯನ್ನೊದಗಿಸುವಂತ ಪುಟಗಳಾಗಿಲ್ಲ. XXXX ವರ್ಷದಲ್ಲಿ "ಅ.ಬ.ಕ.ಡ" ಚಿತ್ರ, ನಟ,ನಟಿ, ನಿರ್ದೇಶಕ, ಸಂಗೀತ ಇವಿಷ್ಟೇ ಮಾಹಿತಿಅನ್ನು ಪಟ್ಟಿಯ ರೂಪದಲ್ಲೂ ಕೊಡಬಹುದು. ಯಾವುದೇ ಚಿತ್ರದ ಕುರಿತು ಹೆಚ್ಚು ಮಾಹಿತಿ ತಿಳಿದಿರುವ ಆವುದೇ ಸದಸರು ಈ ಪಟ್ಟಿಯಿಂದ ಚಿತ್ರವನ್ನು ತೆಗೆದು ವಿಸ್ತರಿಸಲೂ ಬಹುದು. -ಹಂಸವಾಣಿದಾಸ ೧೬:೦೫, ೧೨ September ೨೦೦೬ (UTC)
ಪುಟಗಳನ್ನು ವಿಸ್ತರಿಸಲು ಆಸಕ್ತರಾದವರಿಗೆ ಅವಶ್ಯಕವಿರುವ ಚಿತ್ರದ ಬಗ್ಗೆ basic information ಕೂಡ ಈಗಿರುವ ಚುಟುಕುಪುಟಗಳಲ್ಲಿ ಲಭ್ಯವಿದೆ. ವಿಸ್ತರಣೆ(expand) ಮಾಡಲು ಆಗುತ್ತಿಲ್ಲ/ತಿಳಿಯುತ್ತಿಲ್ಲ ಎಂದು ಇತರೆ ಸಂಪಾದಕರುಗಳಿಂದ ಇದುವರೆಗೂ ಯಾವುದೇ ದೂರು ಬಂದಿಲ್ಲ. ಬದಲಾಗಿ, ಹಲವಾರು ಲೇಖನಗಳಿಗೆ ಮತ್ತಷ್ಟು ಮಾಹಿತಿಯನ್ನು ಇತರ ಸದಸ್ಯರು ಸೇರಿಸಿದ್ದಾರೆ. ಆ ರೀತಿ ಇನ್ನಷ್ಟು ಮಾಹಿತಿ ಸೇರಿಸುವ ಕೆಲಸ ಹೆಚ್ಚಬೇಕಿದೆ.
ಒಂದು ಚಲನಚಿತ್ರ ಚುಟುಕವು ಒಂದು "ಲೇಖನ"ವಾಗಲು ಕನಿಷ್ಟ ಪ್ರಮಾಣದ ಮಾಹಿತಿ ಏನಿರಬೇಕೆಂಬುದರ ಬಗ್ಗೆ ಕಾರ್ಯನೀತಿ ರೂಪಿಸುವ ಅಗತ್ಯವಿದೆ. ಇದರ ಬಗ್ಗೆ ಪ್ರತ್ಯೇಕ ಶೀರ್ಷಿಕೆಯಡಿ ಚರ್ಚಿಸೋಣ -ಹಂಸವಾಣಿದಾಸ ೧೬:೦೫, ೧೨ September ೨೦೦೬ (UTC)
ಚುಟುಕುಗಳನ್ನು ತುಂಬಿಸಿ ವರ್ಗವನ್ನು ಬೆಳೆಸುವ ಅಗತ್ಯವಿದೆಯೆ? ಚುಟುಕುಗಳು ಚುಟುಕುಗಳಾಗಿಯೇ ಇರಬೇಕೆಂದೇನಿಲ್ಲ. ವಿಷಯದ ವ್ಯಾಪ್ತಿಗನುಗುಣವಾಗಿ, ಚುಟುಕುಪುಟಗಳು ಮಾಹಿತಿಯು ಸೇರಿದಂತೆಲ್ಲಾ ಲೇಖನಗಳಾಗುವುವು. ಆಂಗ್ಲ ವಿಕಿಪೀಡಿಯದಲ್ಲಿರುವ en:Wikipedia:Stub ಪುಟದಲ್ಲಿನ ಈ ವಾಕ್ಯ ಗಮನಿಸಿ ನೋಡೋಣ.
Note that even a longer article on a complicated topic may be a stub; conversely, a short article on a topic of narrow scope may not be a stub.
ಚಲನಚಿತ್ರ ಪುಟಗಳು ರಾಮಾಯಣ, ಡಾ.ರಾಜ್‍ಕುಮಾರ್, ಭಾರತದ ಸ್ವಾತಂತ್ರ್ಯ ಲೇಖನಗಳಂತೆ ವಿಷಯವ್ಯಾಪ್ತಿಯನ್ನು ಹೊಂದಿರುವುದಿಲ್ಲ. ಚಲನನಚಿತ್ರ ಪುಟಗಳಿಗೆ ಅದರದೇ ಆದ ಚೌಕಟ್ಟಿದ್ದು, ಅದಕ್ಕನುಗುಣವಾಗಿ ಮಾಹಿತಿ ಸೇರಿಸಬೇಕಿದೆ. ಆಗ ಚುಟುಕುಪುಟಗಳು ಚುಟುಕುಗಳಾಗಿಯೇ ಉಳಿಯುವುದಿಲ್ಲ. ಚಲನಚಿತ್ರಗಳ ಬಗ್ಗೆ ಮಾಹಿತಿಯಿರುವ ಎಲ್ಲಾ ಸದಸ್ಯರು/ಸಂಪಾದಕರು ತಮಗೆ ತಿಳಿದಿರುವ ಮಾಹಿತಿಯನ್ನು ಚುಟುಕುಪುಟಗಳಿಗೆ ಸೇರಿಸಬೇಕೆಂದು ಕೋರಿಕೊಳ್ಳುತ್ತೇನೆ.
- ಮನ|Mana Talk - Contribs ೧೫:೪೧, ೧೨ September ೨೦೦೬ (UTC)
ಇಲ್ಲಿನ ಚಲನಚಿತ್ರ ಪುಟಗಳು ಸುಮಾರು ೩ ತಿಂಗಳುಗಳಿಂದ ಸೇರುತ್ತಲೇ ಬಂದಿವೆ, ಇವುಗಳಲ್ಲಿ ಬಹಳಷ್ಟು ಪುಟಗಳು ಹಾಗೆಯೇ ಚುಟುಕಗಳಾಗೇ ಉಳಿಯುವ ಸಾಧ್ಯತೆಯೇ ಹೆಚ್ಚಾಗಿ ಕಾಣಿಸಿತು. ಇದೇ ಅನಿಸಿಕೆ ಈ ಹಿಂದೆಯೂ ವ್ಯಕ್ತವಾಗಿದೆ. I strongly recommend to NOT make wiki a dumping ground for stubs. -ಹಂಸವಾಣಿದಾಸ ೧೬:೦೭, ೧೨ September ೨೦೦೬ (UTC)

ವಿಕಿಯು ಯಾವು ದಾರಿಯಲ್ಲಿ ಸಾಗಬೇಕು ಎಂದು ೪-೫ ಜನ ನಿರ್ಧರಿಸಲು ಬರುವುದಿಲ್ಲ. ವಿಕಿಯು ಒಂದು evolving organism. ಕನ್ನಡ ವಿಕಿ ಇನ್ನೂ ಒಂದು ಎಳೆ ಕೂಸು. ವಿಕಿ ಬೆಳೆದಂತೆ ಇತರ ವಿಷಯಗಳ ಬಗೆಗಿನ ಲೇಖನಗಳು ಬೆಳೆಯುತ್ತವೆ. ನಮ್ಮ ಕೆಲಸ ವಿಕಿಗೆ content ತುಂಬುವುದಷ್ಟೆ. ಎಲ್ಲಿಯವರೆಗೆ en:WP:5P ಪ್ರಕಾರ ಇರುವ content (1)supported by facts (2)neutral point of view (2)not an indiscriminate piece of information ಆಗಿರುತ್ತದೆಯೋ, ಅಲ್ಲಿಯವರೆಗೆ ಅದು ಎಷ್ಟು ಉದ್ದ, ಎಷ್ಟು percentage of content, ಮುಂತಾದವುಗಳು ಮುಖ್ಯವಲ್ಲ ಎಂದು ನನ್ನ ಅಭಿಪ್ರಾಯ. ಯಾವುದರ ಬಗ್ಗೆ ಎಷ್ಟು content ತುಂಬಬೇಕು ಎಂಬುದು individual contributorಗೆ ಬಿಟ್ಟಿದ್ದು. ನಾನು ಯಾವ ಕನ್ನಡ ಚಲನಚಿತ್ರದ ಬಗೆಗಿನ ಪುಟವನ್ನೂ ಬರೆದಿಲ್ಲ. ಕೆಲವೊಮ್ಮೆ random article link ತೆರೆದಾಗ invariably ಯಾವುದಾದರೂ ಚಲನಚಿತ್ರ ಪುಟಕ್ಕೆ ಹೋಗುತ್ತದೆ. ಅದರಿಂದ ನನಗೆ ೨ ವಿಷಯಗಳು ಮನದಟ್ಟುತ್ತದೆ.(೧) ಇಲ್ಲಿ ಮಾಡಬೇಕಿರುವ ಕೆಲಸ ಬಹಳಷ್ಟು ಇದೆ (೨)ಈ ವಿಕಿ ಒಂದು ಮಟ್ಟಕ್ಕೆ ಬರುವವರೆಗೆ ತಾಳ್ಮೆಯನ್ನು ಹೊಂದಬೇಕು. ಶುಶ್ರುತ \ಮಾತು\ಕತೆ ೦೬:೨೫, ೧೨ September ೨೦೦೬ (UTC)

ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು ಶುಶ್ರುತ. ಚಲನಚಿತ್ರ ಪುಟಗಳಲ್ಲಿ ಮಾಡಬೇಕಿರುವ ಕೆಲ್ಸ ಬಹಳಷ್ಟು ಇದ್ದು, ಆ ಕೆಲಸಗಳನ್ನು ಒಂದು ಯೋಜನೆಯಡಿ ಮಾಡುತ್ತ ಹೋದರೆ ಹೇಗೆ ಎಂದು ಯೋಚಿಸುತ್ತಿರುವೆ. ಆಂಗ್ಲ ವಿಕಿಪೀಡಿಯದಲ್ಲಿರುವಂತೆ, ಕನ್ನಡ ವಿಕಿಪೀಡಿಯದಲ್ಲಿಯೂ WikiProject ಗಳು ಆರಂಭವಾಗಬೇಕಿದೆ. ಆ ಮೂಲಕ ಆ ಯೋಜನೆಯಲ್ಲಿ ಆಸಕ್ತಿಯಿರುವ ಸದಸ್ಯರೆಲ್ಲರೂ ಒಟ್ಟಾಗಿ ಕೆಲಸಗಳನ್ನು ಹಂಚಿಕೊಂಡು, ಯೋಜನೆಯಲ್ಲಿ ಆಗಬೇಕಿರುವ ಕೆಲಸಗಳನ್ನು ರೂಪಿಸಿ ಒಂದೊಂದೇ ಮಾಡುತ್ತಾ ಸಾಗಬಹುದಲ್ಲವೇ? ಕನ್ನಡ ವಿಕಿಪೀಡಿಯದಲ್ಲಿ "ಸಾಹಿತಿಗಳು", "ಕನ್ನಡ ಚಿತ್ರರಂಗ", "ಭೂಗೋಳ" ಯೋಜನೆಗಳು ಸಧ್ಯಕ್ಕೆ ಅತ್ಯವಶ್ಯವಾಗಿದೆ. ಈ ವಿಷಯಗಳಲ್ಲಿ ತಿಳಿದವರು, ಆಸಕ್ತಿಯಿರುವವರು(volunteers) ಯೋಜನೆಗಳಲ್ಲಿ ಪಾಲ್ಗೊಂಡು ಒಂದು ಕ್ರಮಬದ್ಧವಾಗಿ, consistent ಆಗಿ, ಲೇಖನಗಳನ್ನು ಸಿದ್ಧಪಡಿಸುತ್ತಾ ಹೋಗುವುದು ಸೂಕ್ತವೆನಿಸುತ್ತದೆ.
ಇದಕ್ಕೆ ಎಲ್ಲಾ ಸದಸ್ಯರು, ಸಂಪಾದಕರು ತಮ್ಮ ಅಭಿಪ್ರಾಯಗಳನ್ನು ದಯವಿಟ್ಟು ತಿಳಿಸಬೇಕೆಂದು ಕೋರುತ್ತೇನೆ. - ಮನ|Mana Talk - Contribs ೧೫:೫೩, ೧೨ September ೨೦೦೬ (UTC)
ಹೌದು, ಹೊಸದಾಗಿ ನೋಂದಾಯಿಸಿಕೊಳ್ಳುವ ಎಲ್ಲ ಸದಸ್ಯರಿಗೂ ಈ ಯೋಜನೆಗಳ ಮನವರಿಕೆಯಾಗಬೇಕಿದೆ. ಯಾವುದೇ ಯೋಜನೆಯು Stubsಗಳಿಂದ ತುಂಬಿಕೊಳ್ಳದಿರುವಂತೆ ನೋಡಿಕೊಳ್ಳುವ ಕಾರ್ಯವು ಅತ್ಯಂತ ಮಹತ್ವಪೂರ್ಣ. ಆಂಗ್ಲ ವಿಕಿಯ Stubs Sorting ನೋಡಿದರೆ, ಈ ಚುಟುಕುಗಳು ಹೆಚ್ಚಿದಂತೆ ಅದರ Management ಕೂಡ ಕಷ್ಟವಾಗುವುದು ತಿಳಿಯುತ್ತದೆ. ಅದಕ್ಕಾಗಿಯೇ ಒಂದು WikiProject ಕೂಡ ಮಾದಲಾಗಿದೆ. ನಾವು ಅದೇ ತುಳಿಯದಿರಲೆಂದು ಚುಟುಕಗಳ ನಿಯಂತ್ರಣ ಬೇಕೆಂದಿರುವೆ -ಹಂಸವಾಣಿದಾಸ ೧೬:೧೪, ೧೨ September ೨೦೦೬ (UTC)
Stub sorting ಮತ್ತು Wikiproject ಎರಡೂ ತುಂಬಾ ಒಳ್ಳೆಯ ಯೋಜನೆಗಳು. ಇವುಗಳ ಬಗ್ಗೆ ಮಾತುಕತೆಯನ್ನು ಪ್ರತ್ಯೇಕ headingಗಳಡಿಯಲ್ಲಿ ಪುಟದ ಕೊನೆಯಲ್ಲಿ ಸ್ಥಾಪಿಸೋಣವೆ? ಶುಶ್ರುತ \ಮಾತು\ಕತೆ ೦೫:೦೮, ೧೩ September ೨೦೦೬ (UTC)

(ಚಲನಚಿತ್ರ) ಬಳಕೆಯ ಬಗ್ಗೆಸಂಪಾದಿಸಿ

ಚಲನಚಿತ್ರ ಪುಟಗಳ ಬಗ್ಗೆ ನಾನು ಅರ್ಥ ಮಾಡಿಕೊಂಡಂತೆ ದ್ವಂದ್ವಕ್ಕೀಡು ಆಗುವ ಪುಟಗಳಿಗೆ ಮಾತ್ರ bracketನಲ್ಲಿ ಚಲನಚಿತ್ರ ಎಂದು ಪ್ರಯೋಗಿಸುವುದು ಎಂದಲ್ಲವೆ? ಇತ್ತೀಚೆಗೆ ನಾನು ಭೌಗೋಳಿಕ ದ್ವೀಪಗಳ ಬಗ್ಗೆ ಬರೆಯಲು ದ್ವೀಪ ಲೇಖನವನ್ನು ದ್ವೀಪ (ಚಲನಚಿತ್ರ) ಕ್ಕೆ ವರ್ಗಾಯಿಸಿದೆ. ಹಳೆ ಲಿಂಕ್‍ಗಳನ್ನು ಸರಿಪಡಿಸಲು ಸ್ವಲ್ಪ ಸಮಯ ಹಿಡಿಯಿತು. ವಿಕಿ ದೊಡ್ಡದಾದಂತೆ ಇಂತಃ ಲಿಂಕ್ correction ಹೆಚ್ಚು ಕಷ್ಟವಾಗುತ್ತದೆ. ಆದ್ದರಿಂದ ದಯವಿಟ್ಟು bracketನಲ್ಲಿ ಚಲನಚಿತ್ರ ಎಂದು ನಮೂದಿಸುವ criteria ಹೆಚ್ಚು strict ಮಾಡಬೇಕೆಂದು ನನ್ನ ಕೋರಿಕೆ. ಉದಾ. ಮುಸುಕು ಪುಟ. ಶುಶ್ರುತ \ಮಾತು\ಕತೆ ೦೬:೫೯, ೧೨ September ೨೦೦೬ (UTC)

ದ್ವೀಪ ಲೇಖನದ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು. ಸಾಮಾನ್ಯವಾಗಿ, ಲೇಖನದ ಹೆಸರಾಗಬಹುದಾಂತಹ ಯಾವುದೇ ಚಿತ್ರದ ಹೆಸರಿಗೆ (ಚಲನಚಿತ್ರ) ಎಂದು ಸೇರಿಸಿಯೇ ಹಾಕಲಾಗುತ್ತಿದೆ. ದ್ವೀಪ ಲೇಖನವು ೨೦೦೫ ಜುಲೈನಲ್ಲಿ ಅನಾಮಧೇಯ ಸದಸ್ಯರೊಬ್ಬರಿಂದ ಪ್ರಾರಂಭಿಸಲಾಗಿದೆ ಎಂದು ಆ ಪುಟದ ಇತಿಹಾಸದಿಂದ ತಿಳಿಯಿತು. ಈ ರೀತಿ, ಇತರೆ ಲೇಖನಗಳಿಗೆ ದ್ವಂದ್ವವಾಗುವಂತಹ ಚಲನಚಿತ್ರ ಪುಟಗಳನ್ನು ಕಂಡುಹಿಡಿದು, ಅವುಗಳಿಗೆ (ಚಲನಚಿತ್ರ) ಎಂದು ಸೇರಿಸಿ ಸ್ಥಳಾಂತರಿಸೋಣ. - ಮನ|Mana Talk - Contribs ೧೬:೦೨, ೧೨ September ೨೦೦೬ (UTC)

ದೇಶ ಮಾಹಿತಿ ಟೆಂಪ್ಲೇಟುಸಂಪಾದಿಸಿ

English Wikiಯಲ್ಲಿರುವ Infobox Country ಟೆಂಪ್ಲೇಟನ್ನು ಅಳವಡಿಸಲು ಪ್ರಯತ್ನಿಸಿದೆ. ಆದರೆ ಆ ಟೆಂಪ್ಲೇಟು ಬೇರೆ ಹಲವಾರು ಟೆಂಪ್ಲೇಟ್ಗಳ ಮೇಲೆ depend ಆಗಿದೆ. ಎಲ್ಲಾ ಟೆಂಪ್ಲೇಟ್ಗಳನ್ನು import ಮಾಡದಿದ್ದರೆ, flexibility ಇರುವುದಿಲ್ಲ. ಅದಕ್ಕೆ ನಾನು ಆ ಟೆಂಪ್ಲೇಟನ್ನು simplify ಮಾಡಿ ಫಿಲಿಪ್ಪೀನ್ಸ್ ಲೇಖನಕ್ಕೆ ಪ್ರಯೋಗಾರ್ಥವಾಗಿ ಹಾಕಿದ್ದೇನೆ. ಆದರೆ ಇದು ಈಗ ಟೆಂಪ್ಲೇಟ್ ಆಗಿ ಕೆಲಸ ಮಾಡುವುದಿಲ್ಲ. ಇಡಿ codeಅನ್ನು copy-paste ಮಾಡಿ ಒಳಗೆ edit ಮಾಡಬೇಕಾಗಿದೆ.

 1. Disadvantages : (೧) ಹೊಸ usersಗೆ edit ಮಾಡುವುದು ಕಷ್ಟವಾಗುತ್ತದೆ. (೨) copy – paste ಆಗಿರುವ ಭಾಗ ಲೇಖನದ ಪ್ರಾರಂಭದಲ್ಲಿ ತುಂಬ ಜಾಗ ಹಿಡಿಯುತ್ತದೆ. Inexperienced usersಗೆ ಇದು confuse ಮಾಡಬಹುದು - ಅಥವ discourage ಕೂಡ ಮಾಡಬಹುದು.
 2. Advantages: ಲೇಖನದ ದೇಶಕ್ಕನುಸಾರವಾಗಿ flexibleಆಗಿ ಮಾಹಿತಿಯನ್ನು ಅಳವಡಿಸಬಹುದು

ಇದರಂತೆ ಮುಂದೆ ನಾನು ಬೇರೆ ದೇಶಗಳ ಲೇಖನಗಳಿಗೆ ಈ pseudo-template ಅಳವಡಿಸಲೋ ಅಥವ ಇದು more harmful than useful ideaನೋ?

ಶುಶ್ರುತ ೦೮:೧೫, ೩೦ ಆಗಸ್ಟ್ ೨೦೦೬ (UTC)

ಇದು 'more harmful than useful idea' ಅಲ್ಲವೇ ಅಲ್ಲ :)
ನಿಮ್ಮ ಸದಸ್ಯಪುಟದಡಿಯ ಪ್ರಯೋಗಶಾಲೆಯಲ್ಲಿ ನೀವು ತಯಾರಿಸಿರುವ Infobox ಟೆಂಪ್ಲೇಟು ಸರಿಯಾಗಿಯೇ ಇದೆ. ಅದಕ್ಕೆ ಕೆಲವು ಮಾರ್ಪಾಡುಗಳನ್ನು ಮಾಡಬೇಕಿದೆಯಷ್ಟೆ.
ಫಿಲಿಪ್ಪೀನ್ಸ್ ಲೇಖನದಲ್ಲಿ ಹಾಕಿರುವಂತೆ code ಅನ್ನು ಕಾಪಿ-ಪೇಸ್ಟ್ ಮಾಡಿ ಹಾಕುವುದು ಸೂಕ್ತವಾಗಿರಲಾರದು. ಕಾರಣ, ನೀವೆ ಮೇಲೆ ಬರೆದಿರುವ Disadvantages. ಆದರೆ, ಆ ಕಾರಣಕ್ಕಾಗಿ Advantages ಅನ್ನೂ ಕೂಡ ನಾವು ಕಡೆಗಣಿಸದಿರೋಣ.
ಇದನ್ನು ಒಂದು ಪರಿಪೂರ್ಣ Infobox ಟೆಂಪ್ಲೇಟಾಗಿಸುವತ್ತ ಕೆಲಸ ಮಾಡೋಣ. ಆಗ, ಹೊಸ ಸದಸ್ಯರಿಗೆ edit ಮಾಡುವುದೂ ಸುಲಭ, code ಬಗ್ಗೆ ಎಲ್ಲಾ ಸದಸ್ಯರು ತಲೆಕೆಡಿಸಿಕೊಳ್ಳಬೇಕಿಲ್ಲ (no confusion).
ಆಂಗ್ಲ ವಿಕಿಪೀಡಿಯದಂತೆಯೇ Template:Infobox ದೇಶ ಎಂದು ಸಿದ್ಧಪಡಿಸಿ, ಕನ್ನಡ ವಿಕಿಪೀಡಿಯದಲ್ಲಿನ ಎಲ್ಲಾ ದೇಶಗಳ ಲೇಖನಗಳಲ್ಲಿ ಇದನ್ನು ಬಳಸೋಣವೇ? - ಮನ|Mana Talk - Contribs ೧೭:೩೦, ೩೦ ಆಗಸ್ಟ್ ೨೦೦೬ (UTC)
ಆಂಗ್ಲ ಟೆಂಪ್ಲೇಟನ್ನು ಅಕ್ಷರಸಹ ಅನುವಾದ ಮಾಡುವಶ್ಟು ನನಗೆ code ಅರ್ಥವಾಗಿಲ್ಲ. simple ಆಗಿರುವ ಟೆಂಪ್ಲೇಟನ್ನು ನಾನು ತಯಾರಿಸಬಲ್ಲೆ - ಆದರೆ ಅವಾಗ ಆ ಟೆಂಪ್ಲೇಟ್ ತುಂಬಾನೆ inflexible ಆಗುತ್ತದೆ. ಉದಾ. ಕೆಲವು ದೇಶಗಳಿಗೆ ಸ್ವಾತಂತ್ರ್ಯ ದಿನ ಇರುತ್ತದೆ, ಕೆಲವಕ್ಕೆ ಗಣರಾಜ್ಯ ದಿನ, ಮತ್ತೆ ಕೆಲವಕ್ಕೆ ಯುರೋಪಿಯನ್ ಒಕ್ಕೂಟ ಸೇರಿದ ದಿನ. ಕೆಲವೆಡೆ ರಾಷ್ಟ್ರಪತಿ, ಕೆಲೆವೆಡೆ dictator...ಹೀಗೆ ಹಲವು ವಿಷಯಗಳು. ಇವೆಲ್ಲವನ್ನು include ಮಾಡಬಹುದಂತ ಟೆಂಪ್ಲೇಟ್ ನನ್ನ ಕೈಯಲ್ಲಿ ಆಗುವುದಿಲ್ಲ....ಮತ್ತಲ್ಲದೆ ಟೆಂಪ್ಲೇಟ್ ತಯಾರಾಗುವವರೆಗೆ ಯಾವ entry ಮಾಡಲಾಗುವುದಿಲ್ಲ. ಏನು ಮಾಡುವುದು? ಶುಶ್ರುತ ೦೪:೪೧, ೩೧ ಆಗಸ್ಟ್ ೨೦೦೬ (UTC)
ಸರಿ. ಇದನ್ನು ಒಬ್ಬರ ಕೆಲಸ ಎಂದು ಪರಿಗಣಿಸದೆ, ಸಹಯೋಗವೆಂದು ಭಾವಿಸಿ, ಈ ಟೆಂಪ್ಲೇಟನ್ನು ತಯಾರಿಸುವ ಕೆಲಸ ಪ್ರಾರಂಭಿಸೋಣ. Template:Infobox ದೇಶ ಎಂದು ಆಂಗ್ಲವಿಕಿಪೀಡಿಯದಿಂದ Infobox Country ಅನ್ನು ಕನ್ನಡಕ್ಕೆ ತರೋಣ. ಕನ್ನಡ ವಿಕಿಪೀಡಿಯಗೆ ತಕ್ಕಂತೆ ಮಾರ್ಪಾಡು ಮಾಡೋಣ. ಇದಕ್ಕೆ ಬೇಕಿರುವ ಇತರೆ ಟೆಂಪ್ಲೇಟುಗಳನ್ನೂ (dependents) ಇದರೊಟ್ಟಿಗೆ ಸಿದ್ಧಪಡಿಸೋಣ. ಸರಿಯೆ? - ಮನ|Mana Talk - Contribs ೧೮:೦೨, ೧ September ೨೦೦೬ (UTC)
ನೀವು ಕೆಲಸವನ್ನು ಶುರುಮಾಡಿರುವುದನ್ನು ನೋಡಿದೆ. ನಾನೂ ಕೈಲಾದಶ್ಟು ಮಾಡುತ್ತೇನೆ. ಶುಶ್ರುತ ೧೯:೩೨, ೪ September ೨೦೦೬ (UTC)
ಈ ಟೆಂಪ್ಲೇಟು ಟೆಂಪ್ಲೇಟು:! ಮೇಲೆ ಅವಲಂಭಿಸಿದೆ (dependent). ಟೆಂಪ್ಲೇಟು:! protected template ಆಗಿದ್ದು, ಅದಕ್ಕೆ ಬೇಕಿರುವ ಮಾರ್ಪಾಡನ್ನು ಅದರ ಚರ್ಚಾಪುಟದಲ್ಲಿ ಬರೆದಿದ್ದೇನೆ. - ಮನ|Mana Talk - Contribs ೧೯:೪೫, ೪ September ೨೦೦೬ (UTC)

ನಿಲ್ದಾಣಗಳುಸಂಪಾದಿಸಿ

ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಹಡಗು ನಿಲ್ದಾಣ ಮುಂತಾದ ಲೇಖನಗಳನ್ನು ಯಾವ ವರ್ಗದಡಿ ಸೇರಿಸಿದರೆ ಉತ್ತಮ?

ಸಧ್ಯಕ್ಕೆ ವರ್ಗ:ಸಮಾಜ ವರ್ಗದಡಿ ಈ ಲೇಖನಗಳು ಇವೆ. ವರ್ಗ:ಸಂಚಾರಿ ವ್ಯವಸ್ಥೆ ಎಂದು ಹೊಸ ವರ್ಗ ಸ್ಥಾಪಿಸಿ ಅದರಲ್ಲಿ ಹಾಕೋಣವೆ? ಅಥವಾ ಮತ್ತಾವುದಾದರೂ ವರ್ಗ ಸೂಕ್ತವಾಗಬಹುದೇ? ದಯವಿಟ್ಟು ತಿಳಿಸಿ. - ಮನ|Mana Talk - Contribs ೦೨:೫೪, ೧೦ September ೨೦೦೬ (UTC)

ಈ ಲೇಖನಗಳಿಗಾಗಿ ವರ್ಗ:ಸಂಚಾರಿ ವ್ಯವಸ್ಥೆ ಸೃಷ್ಟಿಸಿ, ಅ ವರ್ಗವನ್ನು :ವರ್ಗ:ಸಮಾಜದ ಉಪವಿಭಾಗ ಮಾಡಬಹುದೆನಿಸುತ್ತದೆ. Naveenbm ೦೩:೦೯, ೧೦ September ೨೦೦೬ (UTC)
ಈ ಎಲ್ಲ ವ್ಯವಸ್ಥೆಗಳು infra structureಗೆ ಸಂಬಂಧಿಸಿವೆ ಅಥವಾ ನಾಗರಿಕ ಸೌಲಭ್ಯಗಳಿಗೆ ಸಂಬಂಧಿಸಿವೆ. ಆದುದರಿಂದ ಸಮಾಜ ಮುಖ್ಯ ವರ್ಗದಲ್ಲಿ , ನಾಗರಿಕ ಸೌಲಭ್ಯ ಉಪವರ್ಗ ಅಥವಾ infra structure ಉಪವರ್ಗದಲ್ಲಿ, ಸಂಚಾರ ವ್ಯವಸ್ಥೆ ಎನ್ನುವ ಉಪ-ಉಪ ವರ್ಗ ಮಾಡಬಹುದು ಅಂತ ಅನಿಸುತ್ತದೆ.Sunaath ೦೭:೦೪, ೧೦ September ೨೦೦೬ (UTC)ಸುನಾಥ
Sunaathರವರ ಯೋಚನೆ ಸರಿಯೆಂದು ನನ್ನ ಅಭಿಪ್ರಾಯ. ಆದರೆ infrastructureಗೆ ಸಮನಾದ ಪದ ನನಗೆ ಗೊತ್ತಿಲ್ಲ. ಈಗಿನ ಮಟ್ಟಿಗೆ ಇವೆಲ್ಲ ಸಂಚಾರಿ ವ್ಯವಸ್ಥೆಯಡಿಯಲ್ಲಿರಲಿ. ನಂತರ ಇತರ ವರ್ಗಗಳನ್ನು ಸ್ಥಾಪಿಸಬಹುದು. It is easy to create supracategories than it is to create subcategories! ಶುಶ್ರುತ \ಮಾತು\ಕತೆ ೦೯:೧೭, ೧೦ September ೨೦೦೬ (UTC)
ನವೀನ್, ಸುನಾಥ, ಶುಶ್ರುತ: ನಿಮ್ಮ ಸಲಹೆ/ಅಭಿಪ್ರಾಯಗಳಿಗೆ ಧನ್ಯವಾದಗಳು. ಈ ನಿಲ್ದಾಣಗಳ ಲೇಖನಗಳನ್ನು 'ಸಂಚಾರಿ ವ್ಯವಸ್ಥೆ' ವರ್ಗದಡಿ ಸೇರಿಸಿ, ಆ ವರ್ಗವನ್ನು 'ಮೂಲಭೂತ ಸೌಕರ್ಯಗಳು' ವರ್ಗಕ್ಕೆ ಉಪವರ್ಗ ಮಾಡೋಣ. 'ಸಂಚಾರಿ ವ್ಯವಸ್ಥೆ'ಯ ಜೊತೆಗೆ ಆಸ್ಪತ್ರೆ, ಪೋಲಿಸ್ ಸ್ಟೇಷನ್, ಮುಂತಾದವುಗಳನ್ನು ಒಳಗೊಂಡ 'ಮೂಲಭೂತ ಸೌಕರ್ಯಗಳು' ವರ್ಗವನ್ನು 'ಸಮಾಜ' ವರ್ಗದಡಿ ಹಾಕೋಣ. - ಮನ|Mana Talk - Contribs ೧೪:೧೭, ೧೦ September ೨೦೦೬ (UTC)

ಸಾಮಾಜಿಕ ಅಥವಾ ಸಾಂಸ್ಕೃತಿಕ ಸಂಘಟನೆ ಅಥವಾ ಸಂಸ್ಥೆಗಳನ್ನು ಯಾವ ಯಾವ ವರ್ಗದಡಿ ಹಾಕಬೇಕು? ಉದಾ: 'ಕರ್ನಾಟಕ ವಿದ್ಯಾವರ್ಧಕ ಸಂಘ', 'ಕರ್ನಾಟಕ ಸಂಘ','ದೇವದಾಸಿ ವಿಮೋಚನಾ ಸಂಸ್ಥೆ' ಇತ್ಯಾದಿ. 'ಸಮಾಜ' ವರ್ಗದಡಿ ಮತ್ತೊಂದು ಉಪವರ್ಗ ಸೃಷ್ಟಿಸಬೇಕೊ, ಹೇಗೆ?--Sunaath ೧೭:೫೧, ೧೬ September ೨೦೦೬ (UTC)ಸುನಾಥ

ಈ hierarchy ಸರಿಹೊಂದುವುದೆ? ಸಮಾಜ - ಸಂಘ-ಸಂಸ್ಥೆಗಳು - ಸಾಮಾಜಿಕ ಸಂಘಗಳು - ಕರ್ನಾಟಕದ ಸಾಮಾಜಿಕ ಸಂಘಗಳು ಶುಶ್ರುತ \ಮಾತು \ಕತೆ ೨೦:೨೯, ೧೬ September ೨೦೦೬ (UTC)

ಧನ್ಯವಾದಗಳು, ಶುಶ್ರುತ! ಈ hierarchy perfectly suitable. ಆದರೆ ಕರ್ನಾಟಕದ ಸಾಮಾಜಿಕ ಸಂಘಗಳು ಎನ್ನುವ ವರ್ಗಸೃಷ್ಟಿಯಿಂದ ಒಂದು limitation ಬರಬಹುದು. ಉದಾಹರಣೆಗೆ, ನೀವು 'ರೋಟರಿ ಕ್ಲಬ್' ಬಗ್ಗೆ ಲೇಖನ ಬರೆಯುತ್ತಿದ್ದರೆ, ಆವಾಗ ಕರ್ನಾಟಕದ ಸಾಮಾಜಿಕ ಸಂಘಗಳು ಎನ್ನಲು ಆಗುವದಿಲ್ಲ. ಆದುದರಿಂದ ಇದು ಬಿಟ್ಟು ಉಳಿದ hierarchy ಇಟ್ಟುಕೊಳ್ಳಬಹುದಲ್ಲವೆ? --Sunaath ೧೨:೦೪, ೧೭ September ೨೦೦೬ (UTC)ಸುನಾಥ

ಹಾಗೂ ಮಾಡಬಹುದು. ಅಲ್ಲದೆ ಸಾಮಾಜಿಕ ಸಂಘಗಳಡಿಯಲ್ಲಿ ಅಂತರರಾಷ್ಟ್ರೀಯ ಸಂಘಗಳು ಎಂಬ ಇನ್ನೊಂದು ವರ್ಗ ಸ್ಥಾಪಿಸಿದರೆ ಅದರಲ್ಲಿ ರೋಟರಿ ಮುಂತಾದವುಗಳನ್ನು include ಮಾಡಬಹುದು. ಶುಶ್ರುತ \ಮಾತು \ಕತೆ ೦೦:೦೪, ೧೮ September ೨೦೦೬ (UTC)

ವರ್ಗೀಕರಣಸಂಪಾದಿಸಿ

ವರ್ಗಗಳ ಬಗ್ಗೆ ಸಮುದಾಯಕ್ಕೆ ನನ್ನ ಕೆಲವು ಕೋರಿಕೆಗಳಿವೆ.

 1. ಪುಟಗಳ ವರ್ಗೀಕರಣದ hierarchyಅನ್ನು ಆಂಗ್ಲ ವಿಕಿಯ ಮಾದರಿಯಲ್ಲಿ reorganize (ಅಕ್ಷರಶಃ ಅಲ್ಲ - ಕೇವಲ concept ಆಧಾರಿತ) ಮಾಡುವುದರ ಬಗ್ಗೆ ಎಲ್ಲರ ಅಭಿಪ್ರಾಯವೇನು?
 2. ಈ ವರ್ಗೀಕರಣದ ಬಗೆಗಿನ ಚರ್ಚೆಗಳನ್ನೆಲ್ಲಾ [[ಚರ್ಚೆಪುಟ:ವಿಕಿಪೀಡಿಯ:ವಿಹರಿಸಿ | ವಿಹರಣೆಯ ಚರ್ಚೆ ಪುಟದಲ್ಲಿ]] ಮಾತ್ರ ನಡೆಸುವುದರ ಬಗ್ಗೆ ಸಮುದಾಯದ ಅಭಿಪ್ರಾಯವೇನು?

Sidebar Redesignಆಗುತ್ತಿದೆ. ಅದರಲ್ಲಿ ಪ್ರಾಯಶಃ ವರ್ಗಗಳಿಗೆ ಲಿಂಕ್ ಸೇರಬಹುದು. ಅದಕ್ಕೆ ಈ ಕಾರ್ಯಕ್ಕೆ ಒತ್ತು ಕೊಡಬೇಕೆಂದು ನನ್ನ ಅಭಿಪ್ರಾಯ. ಶುಶ್ರುತ \ಮಾತು \ಕತೆ ೦೦:೩೦, ೧೮ September ೨೦೦೬ (UTC)

Wikiprojects (ವಿಕಿಯೋಜನೆಗಳು?)ಸಂಪಾದಿಸಿ

ಮನರವರು ಆಂಗ್ಲ ವಿಕಿಯಂತೆ wikiprojects ಇಲ್ಲೂ ಶುರುಮಾಡಬಹುದೆಂಬ ಉತ್ತಮ ಸಲಹೆ ಇಟ್ಟಿದ್ದಾರೆ. ಅದರಂತೆ ನಾನು Wikiproject:ಭೂಗೋಳ ವನ್ನು ಸ್ಥಾಪಿಸಿ ಅದರ ಮುಂದಾಳುತ್ವವನ್ನು ಹೋರಲು ಬಯಸುತ್ತೇನೆ. ಇದಕ್ಕೆ ಸಮುದಾಯದ ಒಪ್ಪಿಗೆಯನ್ನು ಕೋರುತ್ತೇನೆ. ಇದನ್ನು ವಿಕಿಯೋಜನೆ:ಭೂಗೋಳ ಎಂದು ಕರೆಯಬಹುದೆ, ಅಥವ ಬೇರೆ ಹೆಸರುಗಳ್ಯಾವಾದರು ಸಮರ್ಪಕವೆ? ಶುಶ್ರುತ \ಮಾತು \ಕತೆ ೦೦:೩೫, ೧೮ September ೨೦೦೬ (UTC)

opens too slowಸಂಪಾದಿಸಿ

How to add a new thread here? Th epae opens too slow here — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು ವಿಷ್ಣು (ಚರ್ಚೆಸಂಪಾದನೆಗಳು)

ನನಗೂ ಈ ತೊಂದರೆ ಹಲವು ಬಾರಿ ಆಗಿದೆ. ಚಲನಚಿತ್ರದ ಬಗೆಗಿನ ಮಾತುಕತೆಯನ್ನು ಆರ್ಕೈವ್ ಮಾಡಬಹುದೆ? ಶುಶ್ರುತ \ಮಾತು \ಕತೆ ೧೯:೩೮, ೮ October ೨೦೦೬ (UTC)
ಆರ್ಕೈವ್ ಮಾಡಿರುವೆ ಶುಶ್ರುತ \ಮಾತು \ಕತೆ ೦೪:೧೨, ೧೦ October ೨೦೦೬ (UTC)

ಲೇಖನಗಳ ಹೆಸರುಸಂಪಾದಿಸಿ

ಲೇಖನಗಳ ಹೆಸರುಗಳನ್ನು uniformಆಗಿ ಇಡುವುದಕ್ಕೆ ಯಾವುದಾದರೂ ಒಂದು policy ಇದೆಯೆ? ಇದು ಮುಖ್ಯವೆಂದು ನನ್ನ ಅಭಿಪ್ರಾಯ. ನನ್ನ ಸಲಹೆಗಳು:

 1. ಆದಷ್ಟು ಹ್ರಸ್ವಗಳನ್ನು ಬಳಸುವುದು
 2. ಹೆಸರಿನ ಅಂತ್ಯಾಕ್ಷರ ಹ್ರಸ್ವವಾಗಿರಬೇಕು

ಇದಲ್ಲದೆ ಆಂಗ್ಲ ವಿಕಿಪೀಡಿಯದ ನಿಯಮಗಳನ್ನು ಪಾಲಿಸಬಹುದು. (Bharathರವರು ಈ ಪುಟದಲ್ಲಿ ಮಾಡಿರುವ ಸಲಹೆಯನ್ನು ಇಲ್ಲಿಗೆ ವರ್ಗಾಯಿಸಿರುವೆ. ಶುಶ್ರುತ \ಮಾತು \ಕತೆ ೧೨:೫೭, ೨೭ October ೨೦೦೬ (UTC))

ಒಂದು ಮುಖ್ಯವಾದ ವಿಷಯವನ್ನು ನೀವು ಹೊರತಂದಿರುವಿರಿ. ನಿಮ್ಮ ಸಲಹೆ ಉತ್ತಮವಾದುದು ಕೂಡ. ನನ್ನ ಸಮ್ಮತಿಯಿದೆ. ಆದರೆ ಕೆಲವೆಡೆ ಆಂಗ್ಲ ವಿಕಿಯಲ್ಲಿ ಅಂತರರಾಷ್ಟ್ರೀಯ ಅಕ್ಷರಗಳಲ್ಲಿ ಪದಗಳ ಉಚ್ಛಾರಣೆ ನೀಡಲಾಗಿರುತ್ತದೆ. ಅಂತಃ ಸಂದರ್ಭಗಳಲ್ಲಿ ದೀರ್ಘವಿದ್ದರೆ ಅದನ್ನು ಉಪಯೋಗಿಸುವುದು ಎಂದು ನನ್ನ ಅಭಿಪ್ರಾಯ. ಈ ಮಾಹಿತಿ ಇಲ್ಲದಿದ್ದರೆ, Bharathರವರ ಸಲಹೆಯಂತೆ ಎಲ್ಲೆಡೆ ಹ್ರಸ್ವವನ್ನು ಉಪಯೋಗಿಸುವುದು. ಶುಶ್ರುತ \ಮಾತು \ಕತೆ ೧೨:೫೭, ೨೭ October ೨೦೦೬ (UTC)
ಒಂದು ಪದ ಅಥವಾ ಒಂದು ಹೆಸರಿನ ಅಂತ್ಯಾಕ್ಷರವನ್ನು ಅದು ಇದ್ದಂತಯೇ ನಾವು ಉಪಯೋಗಿಸುವದು ಉಚಿತವಾದದ್ದು. "ಸಿಂಧು " ಎನ್ನುವ ಪದವೇ ಸರಿಯಾದ ಪದವಾಗಿದ್ದು ಇದರಂತೆಯೇ ಬರೆಯುವದು ಉಚಿತವಾಗಿದೆ.

ಲೇಖನಗಳಲ್ಲಿ uniformity ತರುವ ಸಲುವಾಗಿ ಪದಗಳನ್ನು ಹ್ರಸ್ವಗೊಳಿಸುವದು ತಪ್ಪ್ಪಾಗುತ್ತದೆ. ಉದಾಹರಣೆಗೆ 'ದುರ್ಗಾ' ಎನ್ನುವ ದೇವಿಯ ಹೆಸರಿನ ಅಂತ್ಯವನ್ನು ಹ್ರಸ್ವ ಮಾಡಿ 'ದುರ್ಗ' ಎಂದು ಬರೆದರೆ ಆ ಪದಕ್ಕೆ 'ಕೋಟೆ' ಎನ್ನುವ ಅರ್ಥ ಬರುತ್ತದೆ.--Sunaath ೧೭:೧೭, ೨೭ October ೨೦೦೬ (UTC)ಸುನಾಥ

Of course, ಕನ್ನಡ ಪದಗಳನ್ನು ಆ ರೀತಿ ಮಾಡುವುದು ಅನುಚಿತ. ಆದರೆ ಉಚ್ಛಾರಣೆ ತಿಳಿಯದ ಇತರ ಭಾಷಾ ಪದಗಳ ಬಗ್ಗೆ ಒಂದು informal guidelineಆಗಿ ಇದನ್ನು ಉಪಯೋಗಿಸಬಹುದು ಎಂದು ನನ್ನ ಅಭಿಪ್ರಾಯವಾಗಿತ್ತು. ಉದಾ. ಅರ್ಜೆಂಟಿನ, ಅರ್ಜೆಂಟೀನ, ಅರ್ಜೆಂಟೀನಾ, ಅರ್ಜೆಂಟಿನಾ...ಹೀಗೆ ಹಲವಾರು ಪದಗಳಿವೆ. ಶುಶ್ರುತ \ಮಾತು \ಕತೆ ೨೧:೩೭, ೨೭ October ೨೦೦೬ (UTC)


ವಿಕಿಪೀಡಿಯದ ಮೂಲ ಕಾರ್ಯನೀತಿಗಳ ಹೆಸರುಗಳುಸಂಪಾದಿಸಿ

ಕನ್ನಡ ವಿಕಿಪೀಡಿಯಾಕ್ಕೆ ಅತ್ಯಂತ ಮುಖ್ಯವಾಗಿ ಬೇಕಾಗಿರುವ ಕಾರ್ಯನೀತಿಯ ಲೇಖನಗಳನ್ನು ಆಂಗ್ಲ ವಿಕಿಪೀಡಿಯಾದಿಂದ ಅನುವಾದಿಸ ಬೇಕಾಗಿದೆ. ಈ ಲೇಖನಗಳ ಆಂಗ್ಲ ಹೆಸರುಗಳಿಗೆ ಸಮಾನಾರ್ಥ ಪದಗಳನೊಳಗೊಂಡ ಟೆಂಪ್ಲೇಟನ್ನು ಮಾಡಿದ್ದೇನೆ (ಟೆಂಪ್ಲೇಟು:ನೀತಿಗಳ ಪಟ್ಟಿ ). ಅಲ್ಲಿ ಪ್ರಮುಖ ವಿಕಿಪೀಡಿಯ ನೀತಿಗಳಿಗೆ ಸಮಾನಾರ್ಥಕ ಕನ್ನಡ ಹೆಸರುಗಳನ್ನು ಸೂಚಿಸಿದ್ದೇನೆ.

Wikipedia policies - ವಿಕಿಪೀಡಿಯ ನೀತಿಗಳು
Article standards - ಲೇಖನಗಳ ಗುಣಮಟ್ಟ
Neutral point of view - ತಟಸ್ತ ದೃಷ್ಟಿಕೋಣ
Verifiability / Verifiable information only - ಪರಿಶೀಲಾರ್ಹತೆ /ಪರಿಶೀಲಿಸಬಲ್ಲ ಮಾಹಿತಿ ಮಾತ್ರ
No original research - ಸ್ವಂತ ಸಂಶೋಧನೆ ಸಲ್ಲದು
Citing sources - ಮೂಲಗಳ ಉಲ್ಲೇಖ / ಉಲ್ಲೇಖಗಳು
What Wikipedia is not - ವಿಕಿಪೀಡಿಯ ಎಂದರೆ ಏನಲ್ಲ
Biographies of living persons - ಜೀವಂತವಾಗಿರುವರ ಆತ್ಮಚರಿತ್ರೆಗಳು
Working with others - ಇತರರೊಡನೆ ಸಹಯೋಗ
Assume good faith - ಸದುದ್ದೇಶವಿದೆಯೆಂದು ನಂಬಿ
Civility and etiquette - ನಾಗರೀಕತೆ ಹಾಗು ಶಿಷ್ಟಾಚಾರ
No personal attacks - ವೈಯುಕ್ತಿಕ ದಾಳಿ ಸಲ್ಲದು
Resolving disputes - ಬಿಕ್ಕಟ್ಟು ನಿವಾರಣೆ

ಈ ಲೇಖನಗಳಿಗೆ ಇನ್ಯಾವುದಾದರು ಹೆಸರುಗಳು ಸೂಕ್ತವೆನಿದರೆ ಅದನ್ನು ಚರ್ಚಿಸಿ ಸರಿಪಡಿಸೋಣ. ನವೀನ್ (ಚರ್ಚೆ) ೧೫:೩೦, ೪ November ೨೦೦೬ (UTC)

"ತಟಸ್ತ ದೃಷ್ಟಿಕೋಣ" ಎಂಬುದು Stationary viewpoint ಎಂದು ಸೂಚಿಸುತ್ತದೆ. "ಸಮಾನತೆಯ ದೃಷ್ಟಿಕೋನ" ಉಪಯೋಗಿಸಬಹುದೆ? "ವಿಕಿಪೀಡಿಯ ಎಂದರೆ ಏನಲ್ಲ" ಎಂಬುದು What wikipedia does not mean ಎಂದು ಸೂಚಿಸುತ್ತದೆ. "ವಿಕಿಪೀಡಿಯ ಏನಲ್ಲ" ಎಂಬುದು ಸಮಂಜಸವೆ? ಇವೆರಡನ್ನು ಬಿಟ್ಟರೆ ಬೇರೆಲ್ಲ ನನಗೆ ಸರಿಯೆನಿಸುತ್ತವೆ. User:Naveenbmರವರು ಈ ಮುಖ್ಯ ಭಾಗವಾದ ಕಾರ್ಯನೀತಿಗಳಿಗೆ ಗಮನ ಹರಿಸಿರುವ ಸಕಾಲಿಕ ಮತ್ತು ಉತ್ತಮ ಕೆಲಸ. ಶುಶ್ರುತ \ಮಾತು \ಕತೆ ೨೨:೦೯, ೪ November ೨೦೦೬ (UTC)
ವಿಕಿಪೀಡಿಯ ನೀತಿಗಳು --> ವಿಕಿಪೀಡಿಯ ಕಾರ್ಯನೀತಿಗಳು
ಲೇಖನಗಳ ಗುಣಮಟ್ಟ --> ಲೇಖನದ ಗುಣಮಟ್ಟ
POV --> ದೃಷ್ಟಿಕೋನ;
ಎಂದಾಗಬೇಕು.
NPOV ಗೆ "ತಟಸ್ಥ ದೃಷ್ಟಿಕೋನ" ಸಮಂಜಸವಾದುದು. ಮಾಧ್ಯಮಗಳಲ್ಲಿ ಇದನ್ನು ಬಹುತೇಕವಾಗಿ ಉಪಯೋಗಿಸಲಾಗುತ್ತದೆ. ಉದಾ: "ಅಮೇರಿಕೆಯು ಭಾರತ ಮತ್ತು ಪಾಕಿಸ್ತಾನ ದೇಶಗಳ ಬಗ್ಗೆ ತಟಸ್ಥ ನೀತಿಯನ್ನು ಮುಂದುವರೆಸಿದೆ.", "ಐಸಿಸಿ ನಿಯಮ: ಅಂತರಾಷ್ಟ್ರೀಯ ಪಂದ್ಯಗಳಿಗೆ ತಟಸ್ಥ ಅಂಪೈರ್", ಇತ್ಯಾದಿ.
"ಸಮಾನತೆಯ ದೃಷ್ಟಿಕೋನ", "ನಿಸ್ಪಕ್ಷಪಾತ ದೃಷ್ಟಿಕೋನ", "ನಿರ್ದಾಕ್ಷಿಣ್ಯ ದೃಷ್ಟಿಕೋನ" - ಪರಿಗಣಿಸಲರ್ಹ. ಪ್ರಸ್ತುತ contextನಲ್ಲಿ, NPOV ಗೆ "ತಟಸ್ಥ ದೃಷ್ಟಿಕೋನ" ಎಂಬುದು ನನ್ನ ಅಭಿಪ್ರಾಯ.
ಅಥವಾ NPOV ಎಂಬುದರ ಅರ್ಥವನ್ನು ಸವಿವರವಾಗಿ ತಿಳಿಸಿ, "NPOV" ಎಂಬ ಪದವನ್ನೇ ಉಪಯೋಗಿಸಬಹುದು. - ಮನ|Mana Talk - Contribs ೦೬:೩೧, ೫ November ೨೦೦೬ (UTC)