ಚರ್ಚೆಪುಟ:ಭಾರತದ ಇತಿಹಾಸ
ಭಾರತದ ಇತಿಹಾಸ : ಲೇಖನದಲ್ಲಿ ಮಾಡಬೇಕಾದ ಕೆಲಸಗಳು |
ಈ ಪಟ್ಟಿಯನ್ನು ಬದಲಿಸಿ | |
---|---|---|
ಆಂಗ್ಲ ವಿಕಿಪೀಡಿಯದಲ್ಲಿನ ಈ ಟೆಂಪ್ಲೇಟುಗಳನ್ನು ಕನ್ನಡಕ್ಕೆ ತರಬೇಕಿದೆ ಆಂಗ್ಲ ವಿಕಿಪೀಡಿಯದಲ್ಲಿನ ಚಿತ್ರಗಳು
|
ಯಾವುದು ಸರಿ ?
ಬದಲಾಯಿಸಿಸೇವುಣ ಅಥವಾ ಸೇಉಣ Narayana ೧೫:೪೦, ೧೫ ಆಗಸ್ಟ್ ೨೦೦೬ (UTC)
Empire, Dynasty, Kingdom
ಬದಲಾಯಿಸಿಲೇಖನದಲ್ಲಿ ಈ ಪದಗಳು ಯಥೇಚ್ಛವಾಗಿ ಬಳಕೆಯಾಗಿವೆ. ಈ ಪದಗಳ ಕನ್ನಡ ಅವತರಿಣಿಕೆಯನ್ನು ನಾವು ಏಕಸಾಮ್ಯವಾಗಿ ಬಳಸಬೇಕಿರುವುದು ಅವಶ್ಯವಾಗಿದೆ.
Empire - ಸಾಮ್ರಾಜ್ಯ
Dynasty - ರಾಜವಂಶ (ಅಥವಾ ಇದಕ್ಕಿಂತಲೂ ಸೂಕ್ತವಾದ ಪದವಿದ್ದರೆ ತಿಳಿಸಿ)
Kingdom - ರಾಜ್ಯ / ರಾಜ್ಯಭಾರ (ಅಥವಾ ಇದಕ್ಕಿಂತಲೂ ಸೂಕ್ತವಾದ ಪದವಿದ್ದರೆ ತಿಳಿಸಿ)
ಗಾತ್ರ
ಬದಲಾಯಿಸಿಈ ಲೇಖನ ೧೦೦ ಕೆ.ಬಿ.ಗಿಂತ ದೊಡ್ಡದಾಗಿದೆ. ಇದನ್ನು ಸಣ್ಣದಾಗಿ ಮಾಡಿ ಇದರಲ್ಲಿರುವ ವಿಷಯಗಳನ್ನು ಹಲವು ಲೇಖನಗಳಾಗಿ ಕತ್ತರಿಸುವುದು ಒಳ್ಳೆಯದಲ್ಲವೆ? ಇದರ ಬಗ್ಗೆ ಯಾರಾದರೂ ಆಲೋಚಿಸಿದ್ದೀರ? — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Bharath (ಚರ್ಚೆ • ಸಂಪಾದನೆಗಳು)
ಸಿಂಧು ನಾಗರಿಕತೆ
ಬದಲಾಯಿಸಿಈ ನಾಗರಿಕತೆಯ ಬಗ್ಗೆ ಮಾತನಾಡುವಾಗ ನಾನಾ ಹೆಸರುಗಳ ಬಳಕೆಯಿದೆ.
- ಸಿಂಧು ಕಣಿವೆಯ ನಾಗರಿಕತೆ
- ಸಿಂಧು ನದಿಯ ನಾಗರಿಕತೆ
- ಸಿಂಧು ತಟದ ನಾಗರಿಕತೆ
ಈ ಹೆಸರುಗಳಲ್ಲೂ "ಸಿಂಧೂ" ಹಾಗೂ "ಸಿಂಧು" ಎರಡೂ ಬಳಕೆಯಲ್ಲಿದೆ. ಯಾವುದು ಹೆಚ್ಚು ಸೂಕ್ತ? — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Bharath (ಚರ್ಚೆ • ಸಂಪಾದನೆಗಳು)
- ಪ್ರಸ್ತುತವಾಗಿ ಈ ಲೇಖನ ಸಿಂಧೂತಟದ ನಾಗರೀಕತೆ ಹೆಸರಿನಲ್ಲಿ ಇದೆ. ಎಲ್ಲರೂ ಸೇರಿ ಒಂದು ಹೆಸರನ್ನು ನಿರ್ಧರಿಸಿದರೆ ಬೇರೆಲ್ಲ ಪುಟಗಳನ್ನು ಅದಕ್ಕೆ ರೀಡೈರೆಕ್ಟ್ ಮಾಡಬಹುದು.ನನ್ನ ಅಭಿಪ್ರಾಯದಲ್ಲಿ ಸಿಂಧು ತಟದ ನಾಗರಿಕತೆ ಸೂಕ್ತವೆನಿಸುತ್ತದೆ. ಶುಶ್ರುತ \ಮಾತು \ಕತೆ ೧೩:೦೦, ೨೭ October ೨೦೦೬ (UTC)
ಲೇಖನಗಳ ಹೆಸರು
ಬದಲಾಯಿಸಿಲೇಖನಗಳ ಹೆಸರುಗಳನ್ನು uniformಆಗಿ ಇಡುವುದಕ್ಕೆ ಯಾವುದಾದರೂ ಒಂದು policy ಇದೆಯೆ? ಇದು ಮುಖ್ಯವೆಂದು ನನ್ನ ಅಭಿಪ್ರಾಯ. ನನ್ನ ಸಲಹೆಗಳು:
- ಆದಷ್ಟು ಹ್ರಸ್ವಗಳನ್ನು ಬಳಸುವುದು
- ಹೆಸರಿನ ಅಂತ್ಯಾಕ್ಷರ ಹ್ರಸ್ವವಾಗಿರಬೇಕು
ಇದಲ್ಲದೆ ಆಂಗ್ಲ ವಿಕಿಪೀಡಿಯದ ನಿಯಮಗಳನ್ನು ಪಾಲಿಸಬಹುದು. — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Bharath (ಚರ್ಚೆ • ಸಂಪಾದನೆಗಳು)
ಜೈನ ಧರ್ಮ
ಬದಲಾಯಿಸಿವಿಕಿಪೀಡಿಯಾವು ಒಂದು ಸ್ವತಂತ್ರ, ಮುಕ್ತ ಮತ್ತು ಪೂರ್ವಾಭಿಪ್ರಾಯ ಸೊಂಕಿಲ್ಲದ ಮೊದಲ ವಿಶ್ವಕೋಶವೆಂದು ನಂಬಿದ್ದೇನೆ. ಆದರೆ ಜೈನ ಧರ್ಮದ ಬಗ್ಗೆ ಈ ಲೇಖನದಲ್ಲಿರುವ ಮಾಹಿತಿಯು ಸರ್ಕಾರ ಹೊರತರುವ ಪಠ್ಯದಂತೆ "...ಮಹಾವೀರನು ಜೈನ ಧರ್ಮವನ್ನು ಸ್ಥಾಪಿಸಿದನು..." ಎಂದು ಘೋಶಿಸಿದೆ. ಜೈನ ಧರ್ಮದ ಇತಿಹಾಸವು ಮಹಾವೀರನ ನಂತರ ಎಂಬ ನೇರವಾದ ಸಂದೇಶವನ್ನು ಸಾರುತ್ತಿದೆ. ಇದು ಮುಕ್ತ ವಿಶ್ವಕೋಶವಾಗಿದ್ದರೂ ಈ ವಿಷಯ ಚರ್ಚಾಪುಟದಲ್ಲಿ ವೀಕ್ಷಕರ ಒಪ್ಪಿಗೆ ಪಡೆಯದೆ ನಾನು ಈ ಲೇಖನವನ್ನು ಸರಿಪಡಿಸಲು ಪ್ರಯತ್ನಿಸುವುದಿಲ್ಲ.
ಸಲಹೆಗಳಿಗೆ ಸ್ವಾಗತ... - ಮಹಾವೀರನು ಜೈನ ಧರ್ಮವನ್ನು ಸ್ಥಾಪಿಸಿಲ್ಲ. ಜೈನ ಧರ್ಮದ ಇತಿಹಾಸವು ಮಹಾವೀರನ ಮೊದಲು ಇತ್ತು. ಜೈನ ಧರ್ಮವನ್ನು ಯಾರು ಸ್ಥಾಪಿಸಿಲ್ಲ. ಜೈನ ಧರ್ಮವು ಅನಾದಿ. ಜೈನ ಧರ್ಮದಲ್ಲಿ ೨೪ ಜನ ಪ್ರಚಾರಕರು.