ಗಂಟಲುವಾಳ ರೋಗ (ಗಳಗಂಡ, ಗಂಡಮಾಲೆ) ಅಥವಾ goiter (ಲ್ಯಾಟಿನ್‌ನಲ್ಲಿ ಗುಟೇರಿಯಾ , ಸ್ಟ್ರುಮಾ ) ಥೈರಾಯ್ಡ್ ಗ್ರಂಥಿಯಲ್ಲಿನ[] ಊತವಾಗಿದೆ. ಇದು ಕುತ್ತಿಗೆಯ ಊತ ಅಥವಾ ಗಂಟಲಗೂಡಿನ (ಧ್ವನಿ ಪೆಟ್ಟಿಗೆ) ಊತಕ್ಕೆ ಕಾರಣವಾಗುತ್ತದೆ. ಗಂಟಲುವಾಳ ರೋಗವು ಸಾಮಾನ್ಯವಾಗಿ ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲದ ಸಂದರ್ಭದಲ್ಲಿ ಸಂಭವಿಸುತ್ತದೆ.

Goitre
Classification and external resources
Woman with a class III goitre.
ICD-10E01-E05
ICD-9240.9
DiseasesDB5332
MedlinePlus೦೦೧೧೭೮
MeSHD೦೦೬೦೪೨

ಸಾಮಾನ್ಯವಾಗಿ ಬೆಟ್ಟಪ್ರದೇಶಗಳಲ್ಲಿ ಅಂದರೆ ಆಲ್ಪ್ಸ್, ಪಿರನೀಸ್, ಕಾರ್ಪೇತಿಯನ್ಸ್, ಆಂಡೀಸ್ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಇದು ಸಾಮಾನ್ಯ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಇದು ತಲೆದೋರಿದುದುಂಟು. ವಿಟಮಿನುಗಳ ಕೊರತೆಯ ಜೊತೆಗೆ ಆಹಾರದಲ್ಲಿ ಸಾಕಷ್ಟು ಅಯೋಡೀನ್ ಇಲ್ಲದಲ್ಲಿ ಈ ರೋಗ ಉಂಟಾಗುತ್ತದೆಂದು ತಿಳಿದು ಬಂದಿದೆ. ಸಾಮಾನ್ಯವಾಗಿ ಇದು ವಯಸ್ಕರಲ್ಲಿ ಹೆಚ್ಚು. ಅದರಲ್ಲೂ ಗಂಡಸರಿಗಿಂತ ಹೆಂಗಸರಲ್ಲಿ ಎಂಟು ಪಟ್ಟು ಹೆಚ್ಚು. ಕೆಲವೇಳೆ ಅನುವಂಶಿಕ ಕಾರಣಗಳಿಂದಾಗಿ ಎಳೆಯವರಿಗೂ ಬರಬಹುದು.

ವರ್ಗೀಕರಣ

ಬದಲಾಯಿಸಿ

ಇದನ್ನು ಹಲವಾರು ವಿಧಗಳಲ್ಲಿ ವರ್ಗೀಕರಿಸಲಾಗಿದೆ:

  • "ಪ್ರಸರಿತ ಗಂಟಲುವಾಳ" ಎಲ್ಲ ಥೈರಾಯ್ಡ್‌ನಾದ್ಯಂತ ವ್ಯಾಪಿಸಿರುವ ಗಂಡಮಾಲೆ (ಮತ್ತು ಇದು "ಸರಳವಾದ ಗಂಟಲುವಾಳ", ಅಥವಾ "ಬಹುಗ್ರಂಥೀಯ ಗಂಟಲುವಾಳ" ಆಗಿರಬಹುದು).
  • "ವಿಷಯುಕ್ತ ಗಂಟಲುವಾಳ"ವು ಹೈಪರ್‌ಥೈರೊಯ್ಡಿಸಮ್ (ಹೆಚ್ಚಿನ ಮಟ್ಟದ ಥೈರಾಯ್ಡ್) ಇರುವ ಗಂಟಲುವಾಳ. ಇವುಗಳು ಹೆಚ್ಚಾಗಿ ಗ್ರೇವ್ಸ್ ರೋಗದ ಕಾರಣದಿಂದಾಗಿ ಉಂಟಾಗುತ್ತವೆ. ಆದರೆ ಇದು ಉರಿಯೂತ ಅಥವಾ ಬಹುಗ್ರಂಥೀಯ ಗಂಡಮಾಲೆಯಿಂದ ಕೂಡ ಉಂಟಾಗಬಹುದು.
  • "ವಿಷಯುಕ್ತ ಅಲ್ಲದ ಗಂಟಲುವಾಳ"ವನ್ನು (ಸಾಮಾನ್ಯ ಅಥವಾ ಕಡಿಮೆ ಥೈರಾಯ್ಡ್ ಮಟ್ಟಕ್ಕೆ ಸಂಬಂಧಿಸಿದೆ) ಎಲ್ಲಾ ಇತರ ವಿಧಗಳ ಗಂಟಲುವಾಳವಾಗಿದೆ (ಅಂದರೆ ಲೀಥಿಯಮ್ ಅಥವಾ ಇತರ ನಿರ್ದಿಷ್ಟ ಸ್ವಯಂ ನಿಯಂತ್ರಕ ರೋಗಗಳಿಂದ ಉಂಟಾದ ವಿಧಗಳು).

ವರ್ಗೀಕರಣದ ಇತರ ವಿಧಗಳು:

  • ಶ್ರೇಣಿ I - ಪರಿಸ್ಪರ್ಶನ (ಸ್ಪರ್ಶ ಪರೀಕ್ಷೆ) ಸ್ಟ್ರೂಮ - ತಲೆಯ ಸ್ವಾಭಾವಿಕವಾದ ಭಂಗಿಯಲ್ಲಿ ಇದನ್ನು ನೋಡಲು ಸಾಧ್ಯವಾಗುವುದಿಲ್ಲ; ಇದನ್ನು ಕೇವಲ ಪರಿಸ್ಪರ್ಶನದ ಮೂಲಕ ಮಾತ್ರ ನೋಡಲು ಸಾಧ್ಯವಾಗುತ್ತದೆ.
  • ಶ್ರೇಣಿ II - ಸ್ಟ್ರೂಮಾವು ಪರಿಸ್ಪರ್ಶಕವಾಗಿರುತ್ತದೆ ಮತ್ತು ಸುಲಭವಾಗಿ ನೋಡಲು ಸಾಧ್ಯವಾಗುತ್ತದೆ.
  • ಶ್ರೇಣಿ III - ಸ್ಟ್ರೂಮಾವು ತುಂಬಾ ದೊಡ್ದದಾಗಿರುತ್ತದೆ ಮತ್ತು ರೆಟ್ರೋಸ್ಟರ್ನಲ್ (ಎದೆ ಎಲುಬಿನ ಹಿಂಭಾಗದಲ್ಲಿರುತ್ತದೆ) ಆಗಿರುತ್ತದೆ; ಒತ್ತಡವು ಸಂಕುಚನದ ಗುರುತುಗಳಿಗೆ ಕಾರಣವಾಗುತ್ತದೆ.

ಚಿಹ್ನೆಗಳು ಹಾಗು ರೋಗ-ಲಕ್ಷಣಗಳು

ಬದಲಾಯಿಸಿ

ಸಾಮಾನ್ಯವಾಗಿ, ಗಂಟಲುವಾಳವು ಹಾರ್ಮೋನ್‌ನ ಅಸಮರ್ಪಕತೆಗಳಿಗೆ (ಅಪಸಾಮಾನ್ಯತೆ) ಸಂಬಂಧಿಸಿಲ್ಲ. ಹಾರ್ಮೋನ್‌ಗಳ ಅಪಸಾಮಾನ್ಯತೆಗಳು ಮುಂಭಾಗದ ಕತ್ತಿನ ರಾಶಿಯ ಹೊರತಾಗಿ ಬೇರೆ ಯಾವುದೇ ರೋಗ ಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಆದಾಗ್ಯೂ, ನಿರ್ದಿಷ್ಟವಾಗಿ ದೊಡ್ದದಾದ ರಾಶಿಗಳಿಗೆ, ಆಂತರಿಕ ಗುಣಲಕ್ಷಣಗಳ ಸಂಕುಚನವು ಉಸಿರಾಟದಲ್ಲಿ ಅಥವಾ ಅಗಿಯುವಲ್ಲಿ ಕಷ್ಟವನ್ನು ಉಂಟುಮಾಡಬಹುದು. ಈ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಹಾನಿಕಾರಕ-ಸ್ವಭಾವವು ಪರಿಗಣಿಸಬೇಕಾದ ಅಂಶವಾಗಿರುತ್ತದೆ.

ಅದೇ ಸಮಯದಲ್ಲಿ, ವಿಷಯುಕ್ತ ಗಂಟಲುವಾಳಗಳು ಥೈರೋಟೊಕ್ಸಿಕೋಸಿಸ್‌ನ (ಥೈರಾಯ್ಡ್ ಗ್ರಂಥಿಯ ವಿಷಯುಕ್ತತೆ) ಅಂದರೆ ಪರಸ್ಪರ್ಶನ, ಹೆಚ್ಚಿನ ಕಾರ್ಯಗಳು, ಹೆಚ್ಚಿದ ಜೀರ್ಣಕ್ರಿಯೆಯ ಹೊರತಾಗಿಯೂ ತೂಕದ ಇಳಿತ, ಮತ್ತು ತಾಪದ ಅಸಹನೀಯತೆ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಕಂಡುಬರುತ್ತವೆ.

ಈ ರೋಗ ತಗಲಿದಾಗ ಗುರಾಣಿಕಗ್ರಂಥಿಯ (thyroid gland) ಕಾರ್ಯಪಟುತ್ವ ತುಂಬ ಹೆಚ್ಚಬಹುದು, ಇಲ್ಲವೆ ತೀರ ಕುಗ್ಗಲೂಬಹುದು. ಗಡ್ಡೆ ದಪ್ಪನಾದಂತೆಲ್ಲ ಸುತ್ತಲಿನ ಭಾಗಗಳ ಮೇಲಿನ ಒತ್ತಡ ಹೆಚ್ಚುವುದು ಉಸಿರಾಡುವುದಕ್ಕೆ ತೊಂದರೆಯಾಗಿ ಕೆಮ್ಮು, ಒಡಕು ಧ್ವನಿ ಕಾಣಿಸಬಹುದು. ಒತ್ತಡದಿಂದ ರಕ್ತನಾಳಗಳ ಬಣ್ಣ ನೀಲಿಯಾಗಬಹುದು, ಅಪರೂಪವಾಗಿ ನುಂಗುವುದಕ್ಕೆ ಕಷ್ಟವಾಗಬಹುದು. ಕಣ್ಣು ಪಾಪೆ ಅಗಲವಾಗಿ ಮುಖ ಬೆವರಬಹುದು. ಶೇಕಡ ಎರಡರಷ್ಟು ರೋಗಿಗಳಲ್ಲಿ ಪರಿಸ್ಥಿತಿ ವಿಷಮಿಸಿ ಏಡಿಗಂತಿ (ಕ್ಯಾನ್ಸರ್) ಕಾಣಿಸಬಹುದು. ಗಡ್ಡೆ ಬೇಗ ದಪ್ಪವಾಗುವುದು, ಗಟ್ಟಿಯಾಗುವುದು ಮತ್ತು ಒತ್ತಡದ ಚಿಹ್ನೆಗಳು ಹೆಚ್ಚುವುದು-ಇವು ಏಡಿಗಂತಿಯ ಚಿಹ್ನೆಗಳು. ಕ್ರಮೇಣ ರೋಗವು ಪಿತ್ತಜನಕಾಂಗ, ಶ್ವಾಸಕೋಶಗಳು ಮತ್ತು ಮೂಳೆಗಳಿಗೆ ಹರಡಬಹುದು.

ಕಾರಣಗಳು

ಬದಲಾಯಿಸಿ

ಜಗತ್ತಿನಾದ್ಯಂತ, ಗಂಟಲುವಾಳ ರೋಗದ ಪ್ರಮುಖ ಕಾರಣವೆಂದರೆ ಅಯೋಡಿನ್‌ ಕೊರತೆ. ಅಯೋಡೀಕೃತ ಉಪ್ಪನ್ನು ಬಳಸುವ ದೇಶಗಳಲ್ಲಿ, ಹಾಷಿಮೋಟೋನ ಥೈರೋಡಿಟಿಸ್ ಹೆಚ್ಚು ಸಾಮಾನ್ಯವಾದ ಕಾರಣವಾಗಿದೆ.[]

ಇತರ ಕಾರಣಗಳು ಯಾವುವೆಂದರೆ: ಹಾರ್ಮೋನ್‌ಗಳ ಹೆಚ್ಚು ಉತ್ಪಾದನೆ ಅಥವಾ ಕಡಿಮೆ ಉತ್ಪಾದನೆ

ಹೈಪೋಥೈರಾಯ್ಡ್

ಬದಲಾಯಿಸಿ
  • ಥೈರಾಯ್ಡ್ ಹಾರ್ಮೋನ್ ಸಂಯೋಜನೆಗಳ ಹುಟ್ಟಿನಿಂದ ಬಂದ ದೋಷಗಳು. ಇವು ಆಜನ್ಮ (ಜನ್ಮಜಾತ) ಹೈಪೋಥೈರಾಯ್ಡಿಸಮ್ ಅನ್ನು ಉಂಟುಮಾಡುತ್ತವೆ (E೦೩.೦)
  • ಮರಗೆಣಸಿನಂತಹ ಗೊಯಟ್ರೋಜೆನ್‌ಗಳನ್ನು ಸೇವಿಸುವುದು.
  • ಔಷಧೀಯ ಚಿಕಿತ್ಸೆಗಳ ಅಡ್ಡ-ಪರಿಣಾಮಗಳು (E೦೩.೨)

ಹೈಪರ್ ಥೈರಾಯ್ಡ್

ಬದಲಾಯಿಸಿ
  • ಗ್ರೇವ್ಸ್‌ನ ಕಾಯಿಲೆಗಳು (E೦೫.೦)
  • ಥೈರಾಯ್ಡಿಟಿಸ್ (ತೀವ್ರ ಅಥವಾ ತೀಕ್ಷ್ಣವಾದ) (E೦೬)
  • ಥೈರಾಯ್ಡ್ ಕ್ಯಾನ್ಸರ್

ಚಿಕಿತ್ಸೆ

ಬದಲಾಯಿಸಿ

ಗಂಟಲುವಾಳವು ಚಿಕ್ಕದಾಗಿದ್ದರೆ ಅದಕ್ಕೆ ಚಿಕಿತ್ಸೆಯು ಅವಶ್ಯಕವಾಗಿರುವುದಿಲ್ಲ. ಗಂಟಲುವಾಳವು ಹೈಪರ್- ಮತ್ತು ಹೈಪೋಥೈರಾಯ್ಡಿಸಮ್‌ಗೆ (ಪ್ರಮುಖವಾಗಿ ಗ್ರೇವ್‌ನ ಕಾಯಿಲೆಗಳಿಗೆ) ಸಂಬಂಧಿತವಾಗಿರಬಹುದು ಮತ್ತು ಚಿಕಿತ್ಸೆಯು ಇದನ್ನು ಇಲ್ಲದಂತೆ ಮಾಡಬಹುದು. ಗ್ರೇವ್ಸ್‌ನ ಕಾಯಿಲೆಗಳನ್ನು ಪ್ರತಿಥೈರಾಯ್ಡ್ ಔಷಧಗಳ (ಅಂದರೆ ಪ್ರಾಪಿಲ್‌ಥಿಯೋರಾಸಿಲ್ ಮತ್ತು ಮೆಥಿಮಾಜೋಲ್), ಥೈರಾಯ್ಡೆಕ್ಟಮಿ (ಥೈರಾಯ್ಡ್ ಗ್ರಂಥಿಯ ಶಸ್ತ್ರಚಿಕಿತ್ಸಾ ನಿರ್ಮೂಲನೆ), ಮತ್ತು ಅಯೋಡಿನ್-೧೩೧ (ಥೈರಾಯ್ಡ್ ಗ್ರಂಥಿಯ ಮೂಲಕ ಹೀರಿಕೊಳ್ಳಲ್ಪಟ್ಟು ಅದನ್ನು ನಾಶಗೊಳಿಸುವ ಅಯೋಡಿನ್‌ನ ಒಂದು ವಿಕಿರಣಶೀಲ ಐಸೋಟೋಪ್ (ಸಮಸ್ಥಾನಿ)) ಮೂಲಕ ಸರಿಪಡಿಸಬಹುದಾಗಿದೆ. ಹೈಪೋಥೈರಾಯ್ಡಿಸಮ್ ಗಂಟಲುವಾಳದ ಅಪಾಯವನ್ನು ಹೆಚ್ಚಿಸಬಹುದು ಏಕೆಂದರೆ ಇದು ಸಾಮಾನ್ಯವಾಗಿ ಟಿಆರ್‌ಎಚ್ ಮತ್ತು ಟಿಎಸ್‌ಎಚ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹೈಪೋಥೈರಾಯ್ಡಿಸಮ್‌ಗೆ ಚಿಕಿತ್ಸೆ ನೀಡಲು ಬಳಸಲ್ಪಡುವ ಲಿವೋಥೈರಾಕ್ಸಿನ್ ಗಂಟಲುವಾಳದ ಚಿಕಿತ್ಸೆಗೆ ಯುಥೈರಾಯ್ಡ್ ರೋಗಿಗಳಲ್ಲಿಯೂ ಬಳಸಲ್ಪಡಬಹುದು. ಲಿವೋಥೈರಾಕ್ಸಿನ್ ಪ್ರತಿಬಂಧಕ ಚಿಕಿತ್ಸೆಯು ಟಿಆರ್‌ಎಚ್ ಮತ್ತು ಟಿಎಸ್‌ಎಚ್‌‍ಗಳ ಉತ್ಪತ್ತಿಯನ್ನು ಕಡಿಮೆಗೊಳಿಸುತ್ತದೆ ಮತ್ತು ಗಂಟಲುವಾಳ, ಥೈರಾಯ್ಡ್ ಗಡ್ಡೆಗಳು, ಮತ್ತು ಥೈರಾಯ್ಡ್ ಕ್ಯಾನ್ಸರ್ ಅನ್ನು ಕಡಿಮೆಗೊಳಿಸುತ್ತದೆ. ಟಿಎಸ್‌ಎಚ್ ಇನ್ನೂ ಕೂಡ ತನ್ನ ಪರಿಮಿತಿಯಲ್ಲಿಯೇ ಇದೆ ಮತ್ತು ರೋಗಿಯು ಉಪವೈದ್ಯಕೀಯವಾಗಿ ಹೈಪರ್‌ಥೈರಾಯ್ಡ್ ಆಗಿಲ್ಲ ಎಂಬುದನ್ನು ಕಂಡುಹಿಡಿಯುವುದಕ್ಕೆ ರಕ್ತ ಪರೀಕ್ಷೆಗಳು ಅವಶ್ಯಕವಾಗುತ್ತವೆ. ಟಿಎಸ್‌ಎಚ್ ಮಟ್ಟಗಳನ್ನು ಸರಿಯಾಗಿ ಪರೀಕ್ಷಿಸದಿದ್ದರೆ ಮತ್ತು ಸಾಮಾನ್ಯ ಮಟ್ಟಗಳ ಅತ್ಯಂತ ಕೆಳಗಿನ ಮಟ್ಟಗಳಿಗಿಂತ ತುಂಬಾ ಕಡಿಮೆ ಪ್ರಮಾಣದಲ್ಲಿ (೦.೧ mIU/L or IU/IU/mL ಗಿಂತ ಕಡಿಮೆ) ಇದ್ದರೆ, ಅಲ್ಲಿ ಲಿವೋಥೈರಾಕ್ಸಿನ್ ಅಸ್ಥಿರಂಧ್ರತೆ ಮತ್ತು ಸೊಂಟ ಹಾಗೂ ಬೆನ್ನುಮೂಳೆ ಈ ಎರಡರ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಅಲ್ಲಿ ಸಾಂಕ್ರಾಮಿಕಶಾಸ್ತ್ರೀಯ ಸಾಕ್ಷ್ಯವು ದೊರೆಯುತ್ತದೆ.[] (ಆದ್ದರಿಂದ ಅಂತಹ ಕಡಿಮೆ ಮಟ್ಟಗಳು ಸಾಂದರ್ಭಿಕವಾಗಿ ಟಿಎಸ್‌ಎಚ್-ಅವಲಂಬಿತ ಥೈರಾಯ್ಡ್ ಕ್ಯಾನ್ಸರ್‌ಗಳ ಚಿಕಿತ್ಸೆಯನ್ನು ಹೊರತುಪಡಿಸಿ, ದೀರ್ಘ ಅವಧಿಗಳವರೆಗೆ ಉದ್ದೇಶಪೂರ್ವಕವಾಗಿ ಉತ್ಪತ್ತಿಯಾಗುವುದಿಲ್ಲ.)

೧೩೧I ಇಂದ ಥೈರಾಯ್ಡೆಕ್ಟಮಿಯು ಲಿವೋಥೈರಾಕ್ಸಿನ್ ಚಿಕಿತ್ಸೆಗೆ ಪ್ರತಿಕ್ರಿಯಿಸದ ಯುಥೈರಾಯ್ಡ್ ಗಂಟಲುವಾಳವನ್ನು ಹೊಂದಿರುವ ರೋಗಿಗಳಲ್ಲಿ ಅವಶ್ಯಕವಾಗುತ್ತದೆ, ಪ್ರಮುಖವಾಗಿ ಉಸಿರಾಡುವುದಕ್ಕೆ ಮತ್ತು ಆಹಾರವನ್ನು ಅಗಿಯುವುದಕ್ಕೆ ಕಷ್ಟವನ್ನು ಹೊಂದಿರುವ ರೋಗಿಗಳಲ್ಲಿ ಅವಶ್ಯಕವಾಗುತ್ತದೆ. ಸಂಶ್ಲೇಷಿತ ಟಿಎಸ್‌ಎಚ್‌ನ ಚುಚ್ಚುಮದ್ದಿನ ಜೊತೆಗೆ ಅಥವಾ ಅದಿಲ್ಲದೆ ೧೩೧I ಪ್ರತಿರೋಧವನ್ನು ಉಪಶಮನಗೊಳಿಸಬಹುದು ಮತ್ತು ಮೂವತ್ತರಿಂದ ಅರವತ್ತೈದು ಪ್ರತಿಶತ ಗಂಟಲುವಾಳದ ಗಾತ್ರವನ್ನು ಕಡಿಮೆ ಮಾಡಬಹುದು. ಗಂಟಲುವಾಳವು ಎಷ್ಟು ದೊಡ್ಡದಾಗಿದೆ ಮತ್ತು ಥೈರಾಯ್ಡ್ ಗ್ರಂಥಿಯನ್ನು ಎಷ್ಟು ಪ್ರಮಾಣದಲ್ಲಿ ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು ಎಂಬುದನ್ನು ಆಧರಿಸಿ ಥೈರಾಯ್ಡೆಕ್ಟಮಿ ಮತ್ತು/ಅಥವಾ ೧೩೧I ಚಿಕಿತ್ಸೆಯು ಹೈಪೋಥೈರಾಯ್ಡಿಸಮ್ ಅನ್ನು ಉಂಟುಮಾಡುವ ಸಲುವಾಗಿ ಸಾಕಷ್ಟು ಥೈರಾಯ್ಡ್ ಅಂಗಾಂಶಗಳನ್ನು ನಾಶಗೊಳಿಸುತ್ತವೆ. ಇದಕ್ಕೆ ಥೈರಾಯ್ಡ್ ಹಾರ್ಮೋನ್ ಗುಳಿಗೆಗಳಿಂದ ಆಜೀವಪರ್ಯಂತದ ಚಿಕಿತ್ಸೆ ಅವಶ್ಯಕ.

ಸಾಂಕ್ರಾಮಿಕಶಾಸ್ತ್ರ

ಬದಲಾಯಿಸಿ
 
2002 ರಲ್ಲಿ ಪ್ರತಿ 100,000 ಆವಾಸಿಗಳಿಗೆ ಅಯೋಡಿನ್ ಕೊರತೆಯ ಅಸಮರ್ಥತೆಯನ್ನು-ಸರಿಹೊಂದಿಸಿದ ಜೀವನ ವರ್ಷಗಳು

ಥೈರಾಕ್ಸಿನ್ (T4) ಮತ್ತು ಟ್ರೈಐಯೋಡೊಥೈರೋನಿನ್ (T3) ಥೈರಾಯ್ಡ್ ಹಾರ್ಮೋನ್‌ಗಳ ಸಂಶ್ಲೇಷಣೆಗೆ ಅಯೋಡಿನ್ ಅವಶ್ಯಕವಾಗಿದೆ. ಸ್ಥಾನಿಕ ಗಂಟಲುವಾಳದಲ್ಲಿ, ಪ್ರಬುದ್ಧ ಹಾರ್ಮೋನ್ ಅಣುಗಳು ಸಂಯೋಜನೆಗೊಳ್ಳುವುದಕ್ಕೆ ಅಯೋಡಿನ್ ಅವಶ್ಯಕವಾಗಿರುವ ಕಾರಣದಿಂದ ಅಯೋಡಿನ್‌ನ ಕೊರತೆಯು ಥೈರಾಯ್ಡ್ ಗ್ರಂಥಿಯು ತನ್ನ ಹಾರ್ಮೋನ್‌ಗಳನ್ನು ಉತ್ಪಾದಿಸುವುದಕ್ಕೆ ಅಸಮರ್ಥವಾಗುವಂತೆ ಮಾಡುತ್ತದೆ. ಥೈರಾಯ್ಡ್ ಹಾರ್ಮೋನ್‌ಗಳ ಮಟ್ಟಗಳು ಕುಸಿದಲ್ಲಿ, ಥೈರೊಟ್ರೊಪಿನ್-ಬಿಡುಗಡೆ ಮಾಡುವ ಹಾರ್ಮೋನ್ (ಟಿಆರ್‌ಎಚ್) ದೇಹದ ಉಷ್ಣತೆಯ ಮೂಲಕ ಉತ್ಪತ್ತಿಯಾಗುತ್ತದೆ. ನಂತರ ಟಿಆರ್‌ಎಚ್ ಥೈರೋಟ್ರೊಪಿನ್ ಅಥವಾ ಥೈರಾಯ್ಡ್ ಅನ್ನು ಪ್ರಚೋದಿಸುವ ಹಾರ್ಮೋನ್‍ನ್ನು (ಟಿಎಸ್‌ಎಚ್) ತಯಾರಿಸುವುದಕ್ಕೆ ಪಿಟ್ಯುಟರಿ ಗ್ರಂಥಿಯನ್ನು ಪ್ರಚೋದಿಸುತ್ತದೆ. ಅದು ಥೈರಾಯ್ಡ್ ಗ್ರಂಥಿಯ T4 ಮತ್ತು T3 ಗಳ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಇದು ಕೋಶ ವಿಭಜನೆಯನ್ನು ಹೆಚ್ಚಿಸುವ ಮೂಲಕ ಥೈರಾಯ್ಡ್ ಗ್ರಂಥಿಯು ಗಾತ್ರದಲ್ಲಿ ಬೆಳೆಯಲು ಕೂಡ ಪ್ರಚೋದಿಸುತ್ತದೆ.

ಗಂಟಲುವಾಳವು ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ. ಆದರೆ ಇದು ಸ್ವರಕ್ಷಿತ ಸಮಸ್ಯೆಗಳಿಂದ ಉಂಟಾದ, ಮತ್ತು ಕೇವಲ ಅಯೋಡಿನ್‌ನ ಕೊರತೆಯಿಂದ ಉಂಟಾಗುವ ಗಂಟಲುವಾಳಗಳನ್ನು ಹೊರತುಪಡಿಸಿ ಹಲವಾರು ವಿಧದ ಗಂಟಲುವಾಳಗಳನ್ನು ಒಳಗೊಳ್ಳುತ್ತದೆ.

ಕೆಲವು ಸಂಶೋಧಕರು[] ಅಯೋಡಿನ್-ಪ್ರೊಫೈಲ್ಯಾಕ್ಸಿಸ್‌ನ ಕಾರ್ಯಗತಗೊಳಿಸುವಿಕೆಯ ನಂತರ ಅಯೋಡಿನ್-ಕೊರತೆಯಿರುವ ಗಂಟಲುವಾಳ ಮತ್ತು ಜಠರದ ಕ್ಯಾನ್ಸರ್‌ಗಳ ನಡುವೆ ಸಹಸಂಬಂಧತೆಯನ್ನು ತೋರಿಸಿದರು, ಮತ್ತು ಗಂಟಲುವಾಳದ ಪ್ರಾಂತಗಳಲ್ಲಿ ಗಂಟಲುವಾಳದ ಪ್ರಮಾಣ ಹಾಗೂ ಉದರದ ಕ್ಯಾನ್ಸರ್ ಕಡಿಮೆಯಾಗಿದ್ದನ್ನು ವರದಿಮಾಡಿದರು.[] ಕಾರ್ಯದ ಪ್ರಸ್ತಾಪಿತ ಕಾರ್ಯರೀತಿಯೆಂದರೆ ಅಯೋಡೈಡ್ ಅಯಾನ್ (I-) ಥೈರಾಯ್ಡ್ ಗ್ರಂಥಿಯಲ್ಲಿ ಮತ್ತು ಜಠರದ ಲೋಳೆಪೊರೆಯಲ್ಲಿ ಪ್ರತಿಉತ್ಕರ್ಷಕವಾಗಿ ಕಾರ್ಯನಿರ್ವಹಿಸುತ್ತದೆ.[] ಅಪಕರ್ಷಿಸುವ ವಿಧಗಳು ಹೈಡ್ರೋಜನ್ ಪೆರಾಕ್ಸೈಡ್‍ನಂತಹ ವಿಷಯುಕ್ತ ಪ್ರತಿಕ್ರಿಯಾತ್ಮಕ ಆಮ್ಲಜನಕ ವಿಧಗಳನ್ನು ನಿರ್ವಿಷೀಕರಿಸಬಲ್ಲವು.

ಇತಿಹಾಸ

ಬದಲಾಯಿಸಿ

ಟ್ಯಾಂಗ್ ರಾಜವಂಶದ (೬೧೮–೯೦೭) ಚೀನಾದ ವೈದ್ಯರು ಪ್ರಾಣಿಗಳ ಅಂದರೆ ಕುರಿ ಮತ್ತು ಹಂದಿಗಳ ಅಯೋಡಿನ್-ಸಮೃದ್ಧ ಥೈರಾಯ್ಡ್ ಗ್ರಂಥಿಗಳನ್ನು ಬಳಸಿಕೊಂಡು ಗಂಟಲುವಾಳ ರೋಗವಿರುವ ರೋಗಿಗಳ ಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾದವರಲ್ಲಿ ಮೊದಲಿಗರಾಗಿದ್ದರು. ಅವರು ಕಚ್ಚಾ ಗುಳಿಗೆಗಳು ಅಥವಾ ಹೆಂಡದ-ಶಕ್ತಿಯುತ-ಮಿಶ್ರಣ ವಿಧದಲ್ಲಿ ಪ್ರಾಣಿಗಳ ಗ್ರಂಥಿಗಳನ್ನು ಬಳಸಿಕೊಂಡರು.[] ಇದು ಝೆನ್ ಕ್ವಾನ್‌ನ (ದಿನಾಂಕ ಕ್ರಿ.ಶ. ೬೪೩) ಪುಸ್ತಕ, ಆಸ್ ವೆಲ್ ಆಸ್ ಸೆವರಲ್ ಅದರ್ಸ್ ನಲ್ಲಿ ವಿವರಿಸಲ್ಪಟ್ಟಿದೆ.[] ಚೀನಾದ ಒಂದು ಪುಸ್ತಕವು (ಅದೆಂದರೆ ದ ಫಾರ್ಮಾಕೋಪಿಯಿಯಾ ಆಫ್ ದ ಹೆವನ್ಲಿ ಹಸ್ಬಂಡ್‌ಮ್ಯಾನ್ ) ಕ್ರಿಪೂ ೧ ನೆಯ ಶತಮಾನದ ವೇಳೆಗೆ ಅಯೋಡಿನ್-ಸಮೃದ್ಧ ಸಾರ್ಗ್ಯಾಸಮ್‍ನ್ನು ಗಂಟಲುವಾಳ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿತ್ತು ಎಂದು ಪ್ರತಿಪಾದಿಸಿತು, ಆದರೆ ಈ ಪುಸ್ತಕವನ್ನು ಬಹಳ ಕಾಲದ ನಂತರದಲ್ಲಿ ಬರೆಯಲಾಗಿತ್ತು.[]

೧೨ ನೆಯ ಶತಮಾನದಲ್ಲಿ, ಒಬ್ಬ ಪರ್ಷಿಯನ್ ವೈದ್ಯನಾದ ಜ಼ೈನ್ ಆಲ್-ದಿನ್ ಆಲ್-ಜುರ್ಜಾನಿಯು ಆ ಸಮಯದ ಪ್ರಮುಖ ವೈದ್ಯಕೀಯ ಶಬ್ದಕೋಶವಾದ ತನ್ನ ಥಿಸಾರಸ್ ಆಫ್ ದ ಶಾಹ್ ಆಫ್ ಕ್ವಾರಜ್ಮ್‌ ನಲ್ಲಿ ಗಂಟಲುವಾಳ ಮತ್ತು ಮೆಡ್ಡಗಣ್ಣಿನ ನಡುವಿನ ಸಂಬಂಧವನ್ನು ಟಿಪ್ಪಣಿ ಮಾಡಿದ ನಂತರ ಗ್ರೇವ್ಸ್‌ ರೋಗದ ಮೊದಲ ವಿವರಣೆಯನ್ನು ನೀಡಿದನು.[೧೦][೧೧] ಆಲ್-ಜುರ್ಜಾನಿಯು ಗಂಟಲುವಾಳ ಮತ್ತು ಹೃದಯಾತಿಸ್ಪಂದನದ ನಡುವಿನ ಸಂಬಂಧವನ್ನೂ ಪ್ರಮಾಣೀಕರಿಸಿದನು.[೧೨] ಈ ರೋಗಕ್ಕೆ ಐರಿಶ್ ಡಾಕ್ಟರ್ ರಾಬರ್ಟ್ ಜೇಮ್ಸ್ ಗ್ರೇವ್ಸ್‌ನ ನಂತರದಲ್ಲಿ ಅವನ ಹೆಸರನ್ನು ನೀಡಲಾಯಿತು.[೧೩] ಅವನು ೧೮೩೫ ರಲ್ಲಿ ಮೆಡ್ಡಗಣ್ಣು ಉಳ್ಳ ಗಂಟಲುವಾಳದ ಒಂದು ಪ್ರಕರಣವನ್ನು ವರ್ಣಿಸಿದ್ದನು. ಜರ್ಮನಿಯ ಕಾರ್ಲ್‌ ಅಡಾಲ್ಫ್‌ ವಾನ್‌ ಬೇಸ್‌ಡೋವ್‌ ಎಂಬಾತ ಕೂಡಾ ೧೮೪೦ರಲ್ಲಿ ಚಿಹ್ನೆಗಳ ಅದೇ ಸಮೂಹವನ್ನು ಸ್ವತಂತ್ರವಾಗಿ ದಾಖಲಿಸಿದರೆ, ಇದಕ್ಕೂ ಮುಂಚಿತವಾಗಿ ಕ್ರಮವಾಗಿ ೧೮೦೨ ಮತ್ತು ೧೮೧೦ರಲ್ಲಿ ಗಿಯುಸೆಪ್ಪೆ ಫ್ಲಾಜಾನಿ ಮತ್ತು ಆಂಟೋನಿಯೋ ಗಿಯುಸೆಪ್ಪೆ ಟೆಸ್ಟಾ ಎಂಬ ಇಬ್ಬರು ಇಟಾಲಿಯನ್ನರು ರೋಗದ ಕುರಿತಾದ ವರದಿಗಳನ್ನು ಪ್ರಕಟಿಸಿದ್ದರು.[೧೪] ಅಷ್ಟೇ ಅಲ್ಲ, ೧೮ನೇ ಶತಮಾನದ ಅಂತ್ಯದ ವೇಳೆಗೆ ಕ್ಯಾಲೆಬ್‌ ಹಿಲಿಯರ್‌ ಪ್ಯಾರಿ (ಎಡ್ವರ್ಡ್‌ ಜೆನ್ನರ್‌‌‌ನ ಓರ್ವ ಸ್ನೇಹಿತ) ಎಂಬ ಇಂಗ್ಲಿಷ್‌ ವೈದ್ಯ ಕೂಡಾ ರೋಗದ ಕುರಿತಾದ ವರದಿಗಳನ್ನು ದಾಖಲಿಸಿದ್ದನು.[೧೫]

ಪ್ಯಾರಾಸೆಲ್ಸಸ್ (೧೪೯೩–೧೫೪೧)ನು ಗಂಟಲುವಾಳ ಮತ್ತು ಕುಡಿಯುವ ನೀರಿನಲ್ಲಿನ ಖನಿಜಗಳ (ನಿರ್ದಿಷ್ಟವಾಗಿ ಸೀಸ) ನಡುವಣ ಒಂದು ಸಂಬಂಧವನ್ನು ಪ್ರಸ್ತಾಪಿಸಿದವರಲ್ಲಿ ಮೊದಲಿಗನಾಗಿದ್ದನು.[೧೬] ನಂತರ ೧೮೧೧ ರಲ್ಲಿ ಕಡಲಕಳೆಯ ಬೂದಿಯಿಂದ ಬೆರ್ನಾರ್ಡ್ ಕೌರ್ಟೋಸಿಸ್‌‍ನು ಅಯೋಡಿನ್‍ನ್ನು ಸಂಶೋಧಿಸಿದನು.

ಗಂಟಲುವಾಳವು ಮುಂಚಿನ ದಿನಗಳಲ್ಲಿ ಮಣ್ಣಿನಲ್ಲಿ ಅಯೋಡಿನ್ ಕೊರತೆಯಿರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿತ್ತು. ಉದಾಹರಣೆಗೆ, ಇಂಗ್ಲಿಷ್ ಮಿಡ್‌ಲ್ಯಾಂಡ್‌ಗಳಲ್ಲಿ ಈ ಸ್ಥಿತಿಯನ್ನು ಡರ್ಬಿಶೈರ್ ನೆಕ್ ಎಂದು ಕರೆಯಲಾಗುತ್ತಿತ್ತು. ಅಮೇರಿಕದಲ್ಲಿ, ಗಂಟಲುವಾಳವು ಗ್ರೇಟ್ ಲೇಕ್ಸ್, ಮಿಡ್‌ವೆಸ್ಟ್, ಮತ್ತು ಇಂಟರ್‌ಮೌಂಟೇನ್ ಪ್ರದೆಶಗಳಲ್ಲಿ ಕಂಡುಬಂದಿತು. ಈ ಸ್ಥಿತಿಯು ಪ್ರಸ್ತುತದಲ್ಲಿ ಪುಡಿ ಉಪ್ಪಿನಲ್ಲಿ ಅಯೋಡಿನ್ ಸೇರಿಸಿರುವ ಪ್ರದೇಶಗಳಲ್ಲಿ, ಅಂದರೆ ಸಮೃದ್ಧ ದೇಶಗಳಲ್ಲಿ ಪ್ರಾಯೋಗಿಕವಾಗಿ ಅನುಪಸ್ಥಿತವಾಗಿದೆ. ಆದಾಗ್ಯೂ, ಇದು ಈಗಲೂ ಕೂಡ ಭಾರತ, ಚೀನಾ[೧೭] ಮಧ್ಯ ಏಷಿಯಾ ಮತ್ತು ಮಧ್ಯ ಆಫ್ರಿಕಾಗಳಲ್ಲಿ ಅಸ್ತಿತ್ವದಲ್ಲಿದೆ.

ಪ್ರಾಣಿಗಳಲ್ಲಿ

ಬದಲಾಯಿಸಿ

ದೇಹದಲ್ಲಿನ ಅಯೊಡಿನ್ ಅಂಶದಲ್ಲಿ ತುಸು ಏರುಪೇರು ಆದರೂ ಸಾಕು, ಪ್ರಾಣಿಗಳಲ್ಲಿ ಗಂಡಮಾಲೆ ಬೇನೆಯ ಅನೇಕ ರೂಪಗಳು ಕಾಣಿಸಿಕೊಳ್ಳುತ್ತವೆ. ದೇಹದಲ್ಲಿನ ಅಯೊಡಿನ್ ಪ್ರಮಾಣ 30 ಲಕ್ಷಗಳಲ್ಲಿ ಕೇವಲ 1 ಪಾಲಾದರೂ ಅದಿಲ್ಲದೆ ಗುರಾಣಿಕ ಗ್ರಂಥಿ ದೇಹಪೋಷಕವಾದ ತೈರಾಕ್ಸಿನ್ ಚೋದನಿಕವನ್ನು (hormone) ಉತ್ಪತ್ತಿ ಮಾಡದು. ತೈರಾಕ್ಸಿನ್ ಬೆಳೆಯುವ ಪ್ರಾಣಿಗಳ ಹಾಗು ಪಿಂಡ ಹೊತ್ತಿರುವ ತಾಯಿ ಪ್ರಾಣಿಗಳ ಆಹಾರಕ್ರಿಯೆಯಲ್ಲಿ ತನ್ನದೇ ಆದ ಪ್ರಮುಖಪಾತ್ರವನ್ನು ವಹಿಸಿದೆ. ಚರ್ಮ ಹಾಗು ಕೂದಲು ನುಣುಪಾಗಲು ಖನಿಜ ಹಾಗೂ ಸಾರಜನಕಗಳು ಈ ದೇಹದಲ್ಲಿ ಸೇರಿಹೋಗಲು ಈ ಚೋದನಿಕದ ಅವಶ್ಯಕತೆ ಇದೆ.

ಆಹಾರ ಹಾಗೂ ನೀರಿನ ಮೂಲಕ ಅಯೊಡಿನ್ ಪೂರೈಕೆ ಸರಿಯಾಗಿ ಸಾಗದೆ ಹೋದರೆ ದೇಹದಲ್ಲಿ ಇದರ ಅಂಶ ಕಡಿಮೆಯಾಗುವುದು. ಆಗ ದೇಹದಲ್ಲಿ ಅವಶ್ಯವಾಗಿರುವ ಅಯೊಡಿನನ್ನು ಹೆಚ್ಚಾಗಿ ಉತ್ಪಾದನೆ ಮಾಡಲು ಗುರಾಣಿಕ ಗ್ರಂಥಿ ತನ್ನಷ್ಟಕ್ಕೆ ತಾನೇ ದೊಡ್ಡದಾಗಿ ಊದಿಕೊಳ್ಳುತ್ತದೆ.

ಗಳಗಂಟಲ ಬೇನೆ ಸಾಮಾನ್ಯವಾಗಿ ಎಲ್ಲ ಪ್ರಾಣಿಗಳಲ್ಲಿಯೂ ಕಾಣಬರುತ್ತದೆ. ನಾಯಿಮರಿ, ಕುದುರೆಮರಿ, ಕುರಿಮರಿ ಹಾಗೂ ಕರುಗಳಲ್ಲಿ ಈ ಬೇನೆ ವಿಶಿಷ್ಟವಾಗಿ ಕಾಣಬರುತ್ತದೆ. ಸಾಮಾನ್ಯವಾಗಿ ನೆಲ, ನೀರು ಹಾಗೂ ಆಹಾರದಲ್ಲಿ ಅಯೊಡಿನ್ ಅಂಶದ ಕೊರತೆ ಕಾಣಬಂದಾಗ ಈ ಬೇನೆ ಬರುವುದು.

ಅಯೊಡಿನ್ ಅಂಶ ಪ್ರಧಾನವಾಗಿ ನೆಲದಲ್ಲಿದೆ. ಸಸ್ಯಗಳ ಹಾಗೂ ಹುಲ್ಲಿನ ಮೂಲಕ ಅದು ಪ್ರಾಣಿ ದೇಹವನ್ನು ಸೇರುತ್ತದೆ. ನೆಲದಲ್ಲಿ ಅಯೊಡಿನ್ ಅಂಶ ಕಡಿಮೆಯಾದರೆ ಸಸ್ಯ ಹಾಗು ನೀರಿನಲ್ಲೂ ಅದರ ಅಂಶ ಇಲ್ಲವಾಗುವುದು. ನೆಲದಲ್ಲಿ ಸಸ್ಯಸಂಬಂಧವಾದ ಗೊಬ್ಬರವಿದ್ದು, ಲವಣಾಂಶವೂ ಹೆಚ್ಚಾಗಿದ್ದರೆ ಅಯೊಡಿನ್ ಅಂಶ ಕಡಿಮೆಯಾಗುವುದು. ಗೊಬ್ಬರ ರೂಪದಲ್ಲಿ ಲವಣವನ್ನು ಹೆಚ್ಚಿಗೆ ಉಪಯೋಗಿಸಿದರೂ ಅಷ್ಟೆ. ಸಸ್ಯಗಳಲ್ಲಿನ ಅಯೊಡಿನ್ ಅಂಶ ಪ್ರಮುಖವಾಗಿ ನೆಲದ ಗುಣ, ಮಣ್ಣಿನ ಗುಣ ಹಾಗೂ ಕಾಲವನ್ನು ನಿರ್ಧರಿಸುವುದು.

ಸಸ್ಯಗಳಿಂದ ಗಂಡಮಾಲೆ ಬರುವುದು

ಬದಲಾಯಿಸಿ

ಪ್ರಾಣಿಗಳು ಬಳಸುವ ವಿವಿಧ ರೀತಿಯ ಆಹಾರಗಳಲ್ಲಿ ಸಸ್ಯಸಂಬಂಧವಾದ ಆಹಾರ ಪ್ರಧಾನವಾದದು. ಅಯೊಡಿನ್ ಕೊರತೆ ಇರುವ ಹುಲ್ಲುಗಾವಲಿನಲ್ಲಿ ಮೇಯುವಾಗ, ಮೇಲಾಗಿ ಆಹಾರದಲ್ಲಿ ಹೆಚ್ಚಿಗೆ ಲವಣಾಂಶವನ್ನು ಸೇರಿಸಿದಾಗ ಅಯೊಡಿನ್ ಕೊರತೆ ಉಂಟಾಗುತ್ತದೆ. ಅನೇಕ ರೀತಿಯ ಹುಲ್ಲುಗಳಲ್ಲಿ ಈ ಬೇನೆ ತರುವ ವಸ್ತುವಿದೆ. ಕಾಳೆ, ಕೋಸು, ಟರ್ನಿಪ್, ಬ್ರಸಲ್ಸ್ ಚಿಗುರು, ಸೋಯ ಅವರೆಗಳಲ್ಲಿ ರೋಗಕಾರಕವಾದ ತಯೋಸಿನೇಟ್ ಎಂಬ ವಸ್ತುವಿದೆ. ನಾರಗಸೆಯಲ್ಲಿ ಸಿಗುವ ಲಿನಾಮಾರಿನ್ ಎಂಬ ಗ್ಲೂಕೋಸೈಡು ಸಹ ಇದೇ ರೀತಿಯದೆಂದು ತಿಳಿದುಬಂದಿದೆ. ಆದುದರಿಂದ ಈ ಸಸ್ಯಗಳನ್ನು ಬಹಳ ದಿನಗಳ ಕಾಲ ಆಹಾರವಾಗಿ ಕೊಡಬಾರದು. ಕುರಿಗಳ ಮೇವಿಗಾಗಿ ಬೆಳೆಸುವ ರೇಪ್‍ಗಿಡದ ಬೀಜವನ್ನು ಹಾಗೂ ನೆಲಗಡಲೆಯನ್ನು ಪ್ರಾಯೋಗಿಕವಾಗಿ ಇಲಿಗಳಿಗೆ ತಿನ್ನಿಸಿದಾಗ ಈ ಬೇನೆ ಬಂದಿದೆ. ಈ ವಸ್ತುಗಳಲ್ಲೂ ರೋಗಕಾರಕ ವಸ್ತುವಿದೆ. ನಾರಗಸೆ ಹಾಗೂ ಕಾಳೆ ಸಸ್ಯಗಳನ್ನ ಬಸಿರಾದ ಕುರಿಗಳಿಗೆ ಕೊಡುವುದರಿಂದ ಹುಟ್ಟುವ ಕುರಿಮರಿಗಳು ಈ ರೋಗದಿಂದ ನರಳುತ್ತವೆ. ಬ್ಯಾಕ್ಟೀರಿಯಗಳಿಂದ ಕೆಟ್ಟಹೋದ ನೀರು ಹಾಗೂ ಆಹಾರವಸ್ತುಗಳನ್ನು ಪ್ರಾಣಿಗಳಿಗೆ ಕೊಟ್ಟಾಗಲೂ ಈ ಬೇನೆ ಕಾಣಿಸುತ್ತದೆ. ಒಟ್ಟಾರೆ ಆಹಾರದಲ್ಲಿ ಸಯನೋಜೆನಿಟಿಕ್ ಗ್ಲೂಕೋಸೈಡ್ ಅಂಶದ ಕೊರತೆ ಕಾಣಬಂದರೆ ಗಂಡಮಾಲೆ ಬರುತ್ತದೆ.

ಅಯೊಡಿನ್ ಅಂಶ ದೇಹದಲ್ಲಿ ಕಡಿಮೆ ಆದಾಗ ತೈರಾಕ್ಸಿನ್ ಉತ್ಪಾದನೆ ಸ್ಥಗಿತಗೊಳ್ಳುತ್ತದಷ್ಟೆ. ಆಗ ಗುರಾಣಿಕ ಗ್ರಂಥಿ ಹೆಚ್ಚಿಗೆ ಕೆಲಸ ಮಾಡಲು ಸಹಾಯವಾಗುವಂತೆ ಪಿಟ್ಯುಟರಿ ಗ್ರಂಥಿ ತೈರೊಟ್ರೊಫಿಕ್ ಚೋದನಿಕವನ್ನು ಉತ್ಪಾದನೆ ಮಾಡಿ ಗುರಾಣಿಕವನ್ನು ಎಚ್ಚರಿಸುತ್ತದೆ. ಇದರಿಂದ ಗುರಾಣಿಕ ತನ್ನ ಸ್ವಾಭಾವಿಕ ಗಾತ್ರಕ್ಕಿಂತ ದೊಡ್ಡದಾಗುವುದು. ಧ್ವನಿಪೆಟ್ಟಿಗೆ ಬಳಿ ಈ ಬಾವು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಎಳೆ ಪ್ರಾಣಿಗಳಲ್ಲಿ ಬೇನೆ ಈ ರೀತಿಯದು ಅಷ್ಟೆ. ಅವುಗಳಲ್ಲಿ ಸ್ಪಷ್ಟವಾಗಿ ರೋಗಲಕ್ಷಣಗಳೇನೂ ಕಾಣಬರವು. ಬಂದ ಬೇನೆ ಕೆಲವೊಮ್ಮೆ ಹಠಾತ್ತನೆ ಮರೆಯಾಗುವುದೂ ಉಂಟು.

ಅಯೊಡಿನ್ ಕೊರೆಯಿರುವ ಮೇವನ್ನು ಸೇವಿಸುವ ಕುರಿಗಳ ಮತ್ತು ಮೇಕೆಗಳ ಮರಿಗಳಿಗೂ ಗಂಡಮಾಲೆ ಬರುತ್ತದೆ. ಡಾರ್ಸೆಟ್ ಹಾರ್ನ್ ಕುರಿಗಳಲ್ಲಿದು ಸಾಮಾನ್ಯ. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಯೂರೋಪುಗಳಲ್ಲಿ ಈ ರೋಗ ಅಷ್ಟು ಸ್ಪಷ್ಟವಾಗಿ ಕಾಣಬರುವುದಿಲ್ಲ. ಕುರಿಗಳಲ್ಲಿರುವ ಹುಳುಗಳನ್ನು ಹೊರಹಾಕಲು ಉಪಯೋಗಿಸುವ ಹುಳುನಿವಾರಕಗಳನ್ನು ಎಡೆಬಿಡದೆ ಕೊಟ್ಟಾಗಲೂ ಹೆಚ್ಚಿನ ಅಂಶದಲ್ಲಿ ಫ್ಲೋರಿನ್ನನ್ನು ಸೇವಿಸಿದಾಗಲು ಈ ಬೇನೆ ಬರುತ್ತದೆನ್ನಲಾಗಿದೆ. ಕುರಿಗಳಲ್ಲಿ ಗಂಟಲ ಬಾವು ಬಹಳ ಸ್ಪಷ್ಟವಾಗಿ ಕಾಣಿಸಿಕೊಳ್ಳುವುದು ಆಗತಾನೆ ಹುಟ್ಟಿದ ಕುರಿಮರಿಗಳಿಗೆ. ರೋಗದ ಸೊಂಕಿದ್ದಲ್ಲಿ ಅವು ಶಕ್ತಿಹೀನವಾಗುವುವು. ದೇಹಭಾಗದ ಕೆಲವಡೆ ಕೂದಲೇ ಇರುವುದಿಲ್ಲ. ಕೆಲವೊಮ್ಮೆ ಮೇಕೆಗಳಲ್ಲಿ ಈ ರೋಗ ವಿಪರೀತ ಮಟ್ಟಕ್ಕೇರುವುದುಂಟು.

ನಾಯಿಗಳಲ್ಲಿ ಗಂಡಮಾಲೆ ವಿವಿಧ ರೀತಿಯಲ್ಲಿ ಕಾಣಬರುವುದು. ಗ್ರೇವ್ಸನ ರೋಗವೆಂದು ಕರೆಯುವ ಊದುಗಣ್ಣು (ಎಕ್ಸಾಪ್ತಾಲ್ಮಿಕ್ ಗಾಯ್ಟರ್) ಒಮ್ಮೊಮ್ಮೆ ಕಾಣಬರುವುದುಂಟು. ಈ ಪರಿಸ್ಥಿತಿಯಲ್ಲಿ ಗುರಾಣಿಕ ಗ್ರಂಥಿ ಊದಿಕೊಳ್ಳುವುದಲ್ಲದೆ ಕಣ್ಣಗುಡ್ಡೆಗಳು ದೊಡ್ಡವಾಗಿ ಹೊರಗೆ ಚಾಚಿಕೊಂಡು ಕಣ್ಣು ಊದಿದಂತೆ ಕಾಣುವುದು. ಮನಸ್ಸಿನ ನೆಮ್ಮದಿ ಕೆಟ್ಟು ಪ್ರಾಣಿ ವಿಪರೀತ ಬೇಗನೆ ಕೆರಳುವುದು. ನಾಯಿಯಲ್ಲಿ ಒಮ್ಮೊಮ್ಮೆ ಪೂತಿಕೋಶದ ಗಂಡಮಾಲೆ (ಸಿಸ್ಟಿಕ್ ಗಾಯ್ಟರ್) ಕಾಣಬರುವುದೂ ಉಂಟು.

ತಾಯಿಯಲ್ಲಿ ಅಯೊಡಿನ್ ಕೊರತೆ ಇದ್ದರೆ ಹುಟ್ಟಿದ ಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸತ್ತುಹೋಗುತ್ತವೆ. ಬದುಕಿದ ಕರುಗಳು ಹಾಲನ್ನು ಕುಡಿಯಲಾಗದಷ್ಟು ದುರ್ಬಲವಾಗಿರುತ್ತವೆ. ಅಲ್ಲಲ್ಲಿ ಕೂದಲು ಬಿದ್ದು ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ. ಆಗತಾನೆ ಹುಟ್ಟಿದ ಕರುಗಳಲ್ಲಿ ದಪ್ಪ ಕತ್ತಿನ (ಬಿಗ್ ನೆಕ್) ರೋಗದ ರೂಪದಲ್ಲಿ ಈ ಬೇನೆ ಕಾಣಿಸಿಕೊಳ್ಳುತ್ತದೆ. ವಯಸ್ಕ ಪ್ರಾಣಿಗಳಲ್ಲಿ ಗುರಾಣಿಕಗ್ರಂಥಿ ಸ್ಪಷ್ಟವಾಗಿ ಎದ್ದುಕಾಣುತ್ತದೆ. ಇದರಿಂದ ಉಸಿರಾಟಕ್ಕೂ ತೊಂದರೆಯಾಗುವುದುಂಟು.

ಕುದುರೆ

ಬದಲಾಯಿಸಿ

ಕುದುರೆಗಳು ಈ ಬೇನೆಯಿಂದ ಬಳಲುತ್ತಾವಾದರೂ ಕೂದಲ ಬೆಳವಣಿಗೆಯಲ್ಲಿ ವ್ಯತ್ಯಾಸ ಕಾಣದು. ಗ್ರಂಥಿ ಸ್ಪಷ್ಟವಾಗಿ ಊದಿಕೊಳ್ಳುತ್ತದೆ. ರೋಗ ತಗಲಿದ ಕುದುರೆಮರಿ ತುಂಬ ನಿಶ್ಶಕ್ತವಾಗಿರುತ್ತದೆ.

ತಾಯಿಗೆ ರೋಗವಿದ್ದಲ್ಲಿ ಹುಟ್ಟಿದ ಮರಿಗಳಲ್ಲಿ ಕೂದಲಿನ ಅಭಾವವು ಶಕ್ತಿಹೀನತೆಯೂ ಕಂಡುಬರುತ್ತದೆ. ಚರ್ಮದ ಊತ ಕಾಣಬರುತ್ತದೆ. ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮರಿಗಳೂ ನರಳಿ ಸುತ್ತುಹೋಗುವುವು. ಹಂದಿಗಳಲ್ಲಿ ಗ್ರಂಥಿಯ ಊತವಿದ್ದರೂ ಅಷ್ಟು ಸ್ಪಷ್ಟವಾಗಿ ಕಾಣಬರುವುದಿಲ್ಲ.

ಮರಣೋತ್ತರ ಪರೀಕ್ಷೆಯ ವೇಳೆಯಲ್ಲಿ ರೋಗಗ್ರಸ್ತ ಪ್ರಾಣಿಯ ಗ್ರಂಥಿಗಳು ಸ್ಪಷ್ಟವಾಗಿ ದೊಡ್ಡದಾಗಿರುವುದನ್ನು ಗಮನಿಸಬಹುದಲ್ಲದೆ ಅದರ ತೂಕದ ವ್ಯತ್ಯಾಸವನ್ನೂ ಕಾಣಬಹುದು.

ಚಿಕಿತ್ಸೆ

ಬದಲಾಯಿಸಿ

ಬೇನೆ ವಾಸಿಯಾಗಲು ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಅಯೊಡಿನ್ ಅಂಶ ಸಿಗುವಂತೆ ಮಾಡಬೇಕು. ಸಸ್ಯಗಳಿಗೆ ಗೊಬ್ಬರದ ಮೂಲಕ ಅಯೊಡಿನ್ನನ್ನು ಕೊಡುವುದರಿಂದ ಮುಂದೆ ಅದು ಪ್ರಾಣಿಯ ದೇಹವನ್ನು ಆಹಾರದ ಮೂಲಕ ಸೇರುತ್ತದೆ. ಪ್ರಾಣಿಗಳು ನೆಕ್ಕುವ ಖನಿಜಗಳಲ್ಲಿ ಅಯೊಡಿನ್ನನ್ನು ಸೇರಿಸುವುದು ಇನ್ನೊಂದು ಕ್ರಮ. ಪ್ರತಿ ಒಂದು ಟನ್ ಉಪ್ಪಿಗೆ ಐದು ಔನ್ಸ್ ಪೊಟಾಸಿಯಂ ಅಯೋಡೇಟನ್ನು 8% ಕ್ಯಾಲ್ಸಿಯಂ ಸ್ಟಿಯರೇಟಿನ ಜೊತೆ ಕೊಡಬೇಕು. ಹೀಗೆ ಬೆರಕೆ ಮಾಡದೆ. ಪೊಟ್ಯಾಸಿಯಂ ಅಯೋಡೇಟನ್ನು ಹಾಗೆಯೇ ಉಪಯೋಗಿಸಬಹುದು. ರೋಗ ತಗಲಿದ ಪ್ರತಿ ಕುರಿಗೂ 280 ಮಿ.ಗ್ರಾಮಿನಷ್ಟು ಪೊ. ಅಯೊಡೈಡ್ ಇಲ್ಲವೆ 369 ಮಿ.ಗ್ರಾಂ.ಪೊ. ಅಯೋಡೇಟನ್ನು ಕೊಟ್ಟರೆ ಉತ್ತಮ. ಪ್ರತಿ ಪ್ರಾಣಿಗೂ ಪ್ರತಿ ವಾರವೂ ಪಕ್ಕೆಯ ಒಳಗಡೆಯ ಭಾಗದಲ್ಲಿ, ಹಸುವಾದರೆ 4 ಮಿ.ಲೀ. ಮತ್ತು ಹಂದಿ ಹಾಗೂ ಕುರಿಗಳಾದರೆ 2 ಮಿ.ಲೀ. ನಂತೆ ಅಯೊಡಿನ್ನನ್ನು ಬಳಿದರೆ ಒಳ್ಳೆಯದು. ಆಗಾಗ್ಗೆ ಪ್ರಾಣಿಗಳು ಈ ಭಾಗಗಳನ್ನು ನೆಕ್ಕುವದರಿಂದ ನಿಧಾನವಾಗಿ ಅಯೊಡಿನ್ ಹೊಟ್ಟಿಗೆ ಸೇರಿ ಹೋಗುತ್ತದೆ. 0.007 ಅಯೊಡಿನ್ ಅಂಶವಿರುವ ಉಪ್ಪನ್ನು ಬಸಿರಾದ ಹಸುಗಳಿಗೆ ನೆಕ್ಕಲು ಕೊಡುವುದರಿಂದ ಮುಂದೆ ಹುಟ್ಟುವ ಕರುಗಳನ್ನು ಈ ಬೇನೆಯಿಂದ ಪಾರುಮಾಡಬಹುದು. ಗ್ರಂಥಿಯನ್ನು ಮೊದಲಿನ ಸ್ಥಿತಿಗೆ ತರಲು ಕ್ಷ ಕಿರಣಗಳನ್ನು ಉಪಯೋಗಿಸಬೇಕು. ಗ್ರಂಥಿಗೆ ರಕ್ತ ಪೊರೈಸಲು ಧಮನಿಗಳನ್ನು ಹಿಡಿತದಲ್ಲಿಡುವುದೂ ಅಗತ್ಯ.

ಸಮಾಜ ಮತ್ತು ಸಂಸ್ಕೃತಿ

ಬದಲಾಯಿಸಿ

ಜನಪ್ರಿಯ ಗಂಟಲುವಾಳ ರೋಗಿಗಳು

ಬದಲಾಯಿಸಿ
  • ಎಡ್‌ವರ್ಡ್ ಗಿಬನ್
  • ಕಿಮ್ Il-ಸಂಗ್
  • ಹಿಂದಿನ ಅಧ್ಯಕ್ಷ ಜಾರ್ಜ್ ಎಚ್. ಡಬ್ಲು. ಬುಷ್ ಮತ್ತು ಅವರ ಪತ್ನಿ ಬಾರ್ಬರಾ ಬುಷ್ ಇಬ್ಬರಿಗೂ, ಒಬ್ಬರಾದ ನಂತರ ಒಬ್ಬರಿಗೆ ಎರಡು ವರ್ಷಗಳ ಒಳಗೆ ಗ್ರೇವ್ಸ್‌ನ ರೋಗ ಮತ್ತು ಗಂಟಲುವಾಳ ರೋಗ ಇದೆಯೆಂದು ರೋಗನಿದಾನ ಮಾಡಲಾಯಿತು. ಅಧ್ಯಕ್ಷರ ವಿಷಯದಲ್ಲಿ, ರೋಗವು ಹೈಪರ್‌ಥೈರಾಯ್ಡಿಸಮ್ ಮತ್ತು ಹೃದಯ ಡೈಸ್ರಿಥ್ಮಿಯಾ ರೋಗವನ್ನು ಉಂಟುಮಾಡಿತು.[೧೮][೧೯][೨೦][೨೧] ಜಾರ್ಜ್ ಮತ್ತು ಬಾರ್ಬರಾ ಬುಷ್‍ರಿಗೆ ಗ್ರೇವ್ಸ್‌ನ ರೋಗವಿರುವ ಸಂಭಾವ್ಯತೆ ೧೦೦,೦೦೦ ದಲ್ಲಿ ೧ ಇರಬಹುದು ಅಥವಾ ೩,೦೦೦,೦೦೦ ದಲ್ಲಿ ೧ ಇರಬಹುದು ಎಂಬುದಾಗಿ ವಿಜ್ಞಾನಿಗಳು ಹೇಳಿದರು.[೨೨]
  • ಆಂಡ್ರಿಯಾ ಟ್ರ್ಯೂ (ವಿಎಚ್೧ ದ ಒಂದು ಸಂದರ್ಶನದ ಪ್ರಕಾರ)[೨೩]
  • ಈಜಿಪ್ಟ್‌ನ ಜನಪ್ರಿಯ ಸಂಗೀತಗಾರ ಉಮ್ ಕುಲ್ಥುಮ್‌ನು ಕಂಠಕುಹರ ನರಗಳ ಆಕಸ್ಮಿಕ ಹಾನಿಯ ಹೆದರಿಕೆಯಿಂದ ಶಸ್ತ್ರಚಿಕಿತ್ಸೆಗೆ ಒಳಪಡುವುದಕ್ಕೆ ನಿರಾಕರಿಸಿದನು.

ಉಲ್ಲೇಖಗಳು

ಬದಲಾಯಿಸಿ
  1. "goiter" at Dorland's Medical Dictionary
  2. Mitchell, Richard Sheppard; Kumar, Vinay; Abbas, Abul K.; Fausto, Nelson. Robbins Basic Pathology. Philadelphia: Saunders. ISBN 1-4160-2973-7.{{cite book}}: CS1 maint: multiple names: authors list (link) ೮ನೆಯ ಆವೃತ್ತಿ.
  3. Annals of Internal Medicine 2001;134:561-568, 3 April 2001 Volume 134 Number 7
  4. Abnet CC, Fan JH, Kamangar F; et al. (2006). "Self-reported goiter is associated with a significantly increased risk of gastric noncardia adenocarcinoma in a large population-based Chinese cohort". Int. J. Cancer. 119 (6): 1508–10. doi:10.1002/ijc.21993. PMID 16642482. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
    Venturi S, Venturi A, Cimini D, Arduini C, Venturi M, Guidi A (1993). "A new hypothesis: iodine and gastric cancer". Eur. J. Cancer Prev. 2 (1): 17–23. doi:10.1097/00008469-199301000-00004. PMID 8428171. {{cite journal}}: Unknown parameter |month= ignored (help)CS1 maint: multiple names: authors list (link)
    Venturi S, Donati FM, Venturi A, Venturi M, Grossi L, Guidi A (2000). "Role of iodine in evolution and carcinogenesis of thyroid, breast and stomach". Adv Clin Path. 4 (1): 11–7. PMID 10936894. {{cite journal}}: Unknown parameter |month= ignored (help)CS1 maint: multiple names: authors list (link)
  5. Gołkowski F, Szybiński Z, Rachtan J; et al. (2007). "Iodine prophylaxis--the protective factor against stomach cancer in iodine deficient areas". Eur J Nutr. 46 (5): 251–6. doi:10.1007/s00394-007-0657-8. PMID 17497074. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  6. Venturi S, Venturi M (1999). "Iodide, thyroid and stomach carcinogenesis: evolutionary story of a primitive antioxidant?". Eur. J. Endocrinol. 140 (4): 371–2. doi:10.1530/eje.0.1400371. PMID 10097259. {{cite journal}}: Unknown parameter |month= ignored (help)[ಶಾಶ್ವತವಾಗಿ ಮಡಿದ ಕೊಂಡಿ]
  7. Temple, Robert. (1986). The Genius of China: 3,000 Years of Science, Discovery, and Invention. With a forward by Joseph Needham. New York: Simon and Schuster, Inc. ISBN 0671620282. Pages 133–134.
  8. Temple, Robert. (1986). The Genius of China: 3,000 Years of Science, Discovery, and Invention. With a forward by Joseph Needham. New York: Simon and Schuster, Inc. ISBN 0671620282. Page 134.
  9. Temple, Robert. (1986). The Genius of China: 3,000 Years of Science, Discovery, and Invention. With a forward by Joseph Needham. New York: Simon and Schuster, Inc. ISBN 0671620282. Pages 134–135
  10. Basedow's syndrome or disease at Who Named It? - the history and naming of the disease
  11. Ljunggren JG (1983). "[Who was the man behind the syndrome: Ismail al-Jurjani, Testa, Flagani, Parry, Graves or Basedow? Use the term hyperthyreosis instead]". Lakartidningen. 80 (32–33): 2902. PMID 6355710. {{cite journal}}: Unknown parameter |month= ignored (help)
  12. Nabipour, I. (2003). "Clinical Endocrinology in the Islamic Civilization in Iran". International Journal of Endocrinology and Metabolism. 1: 43–45 [45].
  13. Robert James Graves at Who Named It?
  14. Giuseppe Flajani at Who Named It?
  15. Hull G (1998). "Caleb Hillier Parry 1755-1822: a notable provincial physician". Journal of the Royal Society of Medicine. 91 (6): 335–8. PMC 1296785. PMID 9771526.
  16. "Paracelsus" Britannica
  17. "In Raising the World’s I.Q., the Secret’s in the Salt", article by Donald G. McNeil, Jr., December 16, 2006, New York Times
  18. The Health and Medical History of President George Bush Archived 2007-12-09 ವೇಬ್ಯಾಕ್ ಮೆಷಿನ್ ನಲ್ಲಿ. DoctorZebra.com. 8 August 2004. Retrieved 8 October 2006.
  19. "George H.W. Bush." NNDB.
  20. Robert G. Lahita and Ina Yalof. Women and Autoimmune Disease: The Mysterious Ways Your Body Betrays Itself. Page 158.
  21. Lawrence K. Altman, M.D. “Doctors Say Bush Is in Good Health.” The New York Times. September 14, 1991.
  22. Lawrence K. Altman, M.D. “The Doctor’s World; A White House Puzzle: Immunity Ailments.”, The New York Times. May 28, 1991]
  23. “Andrea True.” Elle.

ಬಾಹ್ಯ ಕೊಂಡಿಗಳು

ಬದಲಾಯಿಸಿ