ಪಿಟ್ಯುಟರಿ ಗ್ರಂಥಿ

ಪಿಟ್ಯುಟರಿ ಗ್ರಂಥಿ ಅಥವಾ ಹೈಪೋಫೈಸಿಸ್ ಅನ್ನುವುದು ಒಂದು ಬಟಾಣಿ ಗಾತ್ರದ ಮತ್ತು 0.5 ಗ್ರಾಂ(0.02 oz.) ತೂಕವಿರುವ ಎಂಡೊಕ್ರೈನ್ ಗ್ರಂಥಿ. ಇದು ಮಿದುಳಿನ ತಳಭಾಗದಲ್ಲಿರುವ ಮಸ್ತಿಷ್ಕನಿಮ್ನಾಂಗದ ಚಾಚಿರುವ ಕೆಳಭಾಗವಾಗಿದೆ, ಮತ್ತು ಎರಡು ಪದರ (ದಯಾಫ್ರಾಗ್ಮ ಸೆಲ್ಲೆ)ಗಳಿಂದ ಆವರಿಸಿಕೊಂಡಿರುವ ಚಿಕ್ಕ, ಎಲುಬುಗೂಡಿನಲ್ಲಿ (ಸೆಲ್ಲಾ ಟರ್ಕಿಕ) ಸ್ಥಿತವಾಗಿದೆ.

Pituitary gland
Gray1180.png
Located at the base of the brain, the pituitary gland is protected by a bony structure called the sella turcica (also known as turkish saddle) of the sphenoid bone.
Gray1181.png
Median sagittal through the hypophysis of an adult monkey. Semidiagrammatic.
ಲ್ಯಾಟಿನ್ hypophysis, glandula pituitaria
Gray's subject #275 1275
Artery superior hypophyseal artery, infundibular artery, prechiasmal artery, inferior hypophyseal artery, capsular artery, artery of the inferior cavernous sinus[೧]
Precursor neural and oral ectoderm, including Rathke's pouch
MeSH Pituitary+Gland
Dorlands/Elsevier Pituitary gland

ಪಿಟ್ಯುಟರಿ ಕುಳಿಯಲ್ಲಿ ಪಿಟ್ಯುಟರಿ ಗ್ರಂಥಿಯು ನೆಲೆಸಿದ್ದು, ಅದು ಮಿದುಳಿನ ತಳಭಾಗದ ತಲೆಬುರುಡೆ ಮಧ್ಯದ ಕುಳಿಯಲ್ಲಿರುವ ಸ್ಫಿನಾಯ್ಡ್ ಮೂಳೆಯಲ್ಲಿ ನೆಲೆಸಿದೆ.

ಇದನ್ನು ಪ್ರಧಾನ ಗ್ರಂಥಿ ಎಂದು ಪರಿಗಣಿಸಲಾಗಿದೆ. ಪಿಟ್ಯುಟರಿ ಗ್ರಂಥಿಯು ಬೇರೆ ಎಂಡೊಕ್ರೈನ್ ಗ್ರಂಥಿಗಳನ್ನು ಉತ್ತೇಜಿಸುವ ಟ್ರಾಪಿಕ್ ಹಾರ್ಮೋನ್‌ಗಳನ್ನು ಒಳಗೊಂಡಂತೆ, ಹಾರ್ಮೋನ್‌‌ಗಳನ್ನು ಕ್ರಮಬದ್ಧವಾಗಿಸುವ ಹೋಮಿಯೋಸ್ಟಾಸಿಸ್ ಅನ್ನು ಸ್ರವಿಸುತ್ತದೆ.

ಅದು ಒಂದು ಮಧ್ಯವರ್ತಿ ದಿಣ್ಣೆಯಿಂದ ಮಸ್ತಿಷ್ಕನಿಮ್ನಾಂಗದ ಜೊತೆ ಕಾರ್ಯಸಂಬಂಧವಾಗಿ ಸಂಪರ್ಕ ಹೊಂದಿದೆ.

ವಿಭಾಗಗಳುಸಂಪಾದಿಸಿ

ಪಿಟ್ಯುಟರಿಯು ಮೆದುಳಿನ ಕೆಳಭಾಗದಲ್ಲಿ ನೆಲೆಸಿದ್ದು, ಎರಡು ಪಾಲಿಗಳಿಂದ ಕೂಡಿಕೊಂಡಿದೆ: ಮುಂಭಾಗದ ಪಿಟ್ಯುಟರಿ (ಅಡೆನೊಹೈಪೊಫೈಸ್ಸಿಸ್) ಮತ್ತು ಹಿಂಭಾಗದ ಪಿಟ್ಯುಟರಿ(ನ್ಯೂರೊಹೈಪೊಫೈಸಿಸ್).

ಪಿಟ್ಯುಟರಿಯ ಕ್ರಿಯೆಯು ಮಸ್ತಿಷ್ಕನಿಮ್ನಾಂಗದ ಜೊತೆ ಪಿಟ್ಯುಟರಿ ಸ್ಟಾಕ್‌ನಿಂದ ಕಾರ್ಯಸಂಬಂಧವಾಗಿ ಸಂಪರ್ಕದಲ್ಲಿದ್ದು, ಆ ಮೂಲಕ ಮಸ್ತಿಷ್ಕನಿಮ್ನಾಂಗದಿಂದ ಬಿಡುಗಡೆಯಾಗುವ ಅಂಶಗಳು ಬಿಡುಗಡೆಯಾಗುತ್ತವೆ ಮತ್ತು ಪಿಟ್ಯುಟರಿ ಹಾರ್ಮೋನುಗಳ ಬಿಡುಗಡೆ ಕ್ರಿಯೆಯನ್ನು ಉತ್ತೇಜಿಸುತ್ತವೆ ಪಿಟ್ಯುಟರಿ ಗ್ರಂಥಿಯನ್ನು ಪ್ರಧಾನ ಎಂಡೊಕ್ರೈನ್ ಗ್ರಂಥಿ ಎಂದು ಪರಿಗಣಿಸಿದ್ದರೂ, ಅದರ ಎರಡೂ ಪಾಲಿಗಳು ಮಸ್ತಿಷ್ಕನಿಮ್ನಾಂಗದ ನಿಯಂತ್ರಣದಲ್ಲಿರುತ್ತವೆ.

ಮುಂಭಾಗದ ಪಿಟ್ಯುಟರಿ (ಅಡೆನೊಹೈಪೊಫೈಸಿಸ್)ಸಂಪಾದಿಸಿ

ಮುಂಭಾಗದ ಪಿಟ್ಯುಟರಿ ಎಂಡೊಕ್ರೈನ್ ಹಾರ್ಮೋನುಗಳನ್ನು ಒಂದುಗೂಡಿಸುತ್ತದೆ ಮತ್ತು ಸ್ರವಿಸುತ್ತವೆ , ಅವುಗಳೆಂದರೆ ACTH, TSH, PRL, GH, ಎಂಡೋರ್ಫಿನ್s, FSH ಮತ್ತು LH. ಈ ಹಾರ್ಮೋನುಗಳು ಮುಂಭಾಗದ ಪಿಟ್ಯುಟರಿಯಿಂದ ಮಸ್ತಿಷ್ಕನಿಮ್ನಾಂಗದ ಪ್ರಭಾವದಿಂದ ಬಿಡುಗಡೆಯಾಗಲ್ಪಡುತ್ತವೆ. ಮಸ್ತಿಷ್ಕನಿಮ್ನಾಂಗದ ಹಾರ್ಮೋನುಗಳು ಮುಂಭಾಗದ ಪಾಲಿಗೆ ಕ್ಯಪಿಲ್ಲರಿ ವ್ಯವಸ್ಥೆಯಿಂದ ಸ್ರವಿಸುತ್ತವೆ, ಅದನ್ನು ಮಸ್ತಿಷ್ಕನಿಮ್ನಾಂಗ-ಹೈಪೊಫಿಸಿಯಲ್ ಪೋರ್ಟಲ್ ವ್ಯವಸ್ತೆ ಎಂದು ಕರೆಯಲಾಗುತ್ತದೆ. ಮುಂಭಾಗದ ಪಿಟ್ಯುಟರಿಯನ್ನು ಅಂಗರಚನಾ ಶಾಸ್ತ್ರದ ವಿಭಾಗಗಳಾಗಿ ವಿಭಾಜಿಸಲಾಗಿದೆ, ಅವುಗಳೆಂದರೆ ಪಾರ್ಸ್ ಟ್ಯೂಬೆರಾಲಿಸ್, ಪಾರ್ಸ್ ಇಂಟರ್ಮೀಡಿಯ ಮತ್ತು ಪಾರ್ಸ್ ಡಿಸ್ಟಾಲಿಸ್. ಕಂಠನಾಳದ(ಸ್ಟೊಮೊಡಿಯಲ್ ಭಾಗ) ಹಿಂಬದಿಯ ಗೋಡೆಯಲ್ಲಿ ತಗ್ಗುಂಟಾಗಿ ಇದು ಉತ್ಪತ್ತಿಯಾಗುತ್ತದೆ ಇದನ್ನು ರಾತ್ಕೆಯ ಚೀಲ ಎಂದು ಕರೆಯಲಾಗುತ್ತದೆ.

ಹಿಂಭಾಗದ ಪಿಟ್ಯುಟರಿ (ನ್ಯೂರೊಹೈಪೊಫೈಸಿಸ್)ಸಂಪಾದಿಸಿ

ಹಿಂಭಾಗದ ಪಿಟ್ಯುಟರಿಯು ಶೇಖರಿಸುವ ಮತ್ತು ಬಿಡುಗಡೆಮಾಡುವ ಹಾರ್ಮೋನುಗಳು:

ನಿರ್ಧಿಷ್ಟ ಕುಣಿಕೆಗಳನ್ನು ಸೃಷ್ಟಿಸುವ ಕೆಲವೇ ಹಾರ್ಮೋನುಗಳಲ್ಲಿ ಆಕ್ಸಿಟೋಸಿನ್ ಕೂಡಾ ಒಂದು. ಉದಾಹರಣೆಗೆ, ಗರ್ಭಾಶಯದ ಸಂಕುಚಿತವು ಮುಂಭಾಗದ ಪಿಟ್ಯುಟರಿಯಿಂದ ಆಕ್ಸಿಟೋಸಿನ್‌ವನ್ನು ವಿಸರ್ಜಿಸಲು ಉತ್ತೇಜಿಸುತ್ತದೆ, ಅದು ಗರ್ಭಾಶಯದ ಸಂಕುಚಿತವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಈ ನಿರ್ಧಿಷ್ಟ ಕುಣಿಕೆಗಳ ಸೃಷ್ಟಿಯು ಪ್ರಸವದ ನೋವಿನುದ್ದಕ್ಕೂ ಮುಂದುವರೆಯುತ್ತದೆ.

ಮಧ್ಯಂತರ ಪಾಲಿಸಂಪಾದಿಸಿ

ಹಲವು ಪ್ರಾಣಿಗಳಲ್ಲಿ ಮಧ್ಯಂತರ ಪಾಲಿ ಇರುತ್ತದೆ. ಉದಾಹರಣೆಯಾಗಿ, ಮೀನಿನಲ್ಲಿ, ಶರೀರದ ಬಣ್ಣ ಬದಲಾವಣೆಯನ್ನು ನಿಯಂತ್ರಿಸುತ್ತದೆ ಎಂದು ನಂಬಲಾಗುತ್ತದೆ. ವಯಸ್ಕರಲ್ಲಿ, ಅದು ಮುಂಭಾಗ ಮತ್ತು ಹಿಂಭಾಗದ ಪಿಟ್ಯುಟರಿಗಳ ಮಧ್ಯದ ತೆಳುವಾದ ಅಣುಕೋಶಗಳ ಪದರವಾಗಿದೆ. ಈ ಕ್ರಿಯೆಯು ಮುಂಭಾಗ ಪಿಟ್ಯುಟರಿಯ ಗುಣವಾಗಿದ್ದರೂ ಸಹ ಅನೇಕವೇಳೆ ಮಧ್ಯಂತರ ಪಾಲಿಯು ಮೆಲನೊಸೈಟ್-ಸ್ಟಿಮುಲೇಟಿಂಗ್ ಹಾರ್ಮೋನ್ (MSH) ವನ್ನು ಉತ್ಪಾದಿಸುತ್ತದೆ.

ಬೆನ್ನೆಲುಬುಳ್ಳ ಜೀವಿಗಳಲ್ಲಿ ಪರಿವರ್ತನೆಸಂಪಾದಿಸಿ

ಪಿಟ್ಯುಟರಿ ಗ್ರಂಥಿಯು ಎಲ್ಲಾ ಬೆನ್ನೆಲುಬುಳ್ಳ ಜೀವಿಗಳಲ್ಲಿ ಕಂಡುಬರುತ್ತದೆ, ಆದರೆ ಅದರ ರಚನೆಯು ಬೇರೆ ಬೇರೆ ಗುಂಪುಗಳ ನಡುವೆ ವ್ಯತ್ಯಾಸವಿರುತ್ತದೆ.

ಮೇಲೆ ವಿವರಿಸಿರುವ ಪಿಟ್ಯುಟರಿಯ ವಿಭಜನೆಯು ಪ್ರತ್ಯೇಕವಾಗಿ ಸಸ್ತನಿ ವರ್ಗದ್ದಾಗಿದ್ದು , ಮತ್ತು ನಿಜಾಂಶವೆಂದರೆ ಅದು ಎಲ್ಲಾ ತರಹದ ಟೆಟ್ರಾಪಾಡ್‌ಗಳಿಗು ಅನ್ವಯಿಸುತ್ತದೆ. ಹೇಗಾದರೂ, ಸಸ್ತನಿ ವರ್ಗದಲ್ಲಿ ಮಾತ್ರ ಮುಂಭಾಗದ ಪಿಟ್ಯುಟರಿಯು ಚಿಕ್ಕಗಾತ್ರಹೊಂದಿರುತ್ತದೆ. ಲಂಗ್‌ಫಿಶ್‌ಗಳಲ್ಲಿ ಹೋಲಿಸಿದರೆ ಅದು ಮುಂಭಾಗದ ಪಿಟ್ಯುಟರಿಯ ಮೇಲಿನ ತೆಳುವಾದ ಅಂಗಾಂಶವಾಗಿದ್ದು, ಮತ್ತು ಉಭಯಚರಗಳಲ್ಲಿ, ಸರೀಸೃಪಗಳಲ್ಲಿ ಮತ್ತು ಹಕ್ಕಿಗಳಲ್ಲಿ, ಅದು ಗಣನಿಯವಾಗಿ ಹರಡಿಕೊಂಡಿದೆ. ಸಾಧಾರಣವಾಗಿ ಮಧ್ಯಂತರ ಪಾಲಿಯು ಚತುಷ್ಪಾದಿ ಪ್ರಾಣಿಗಳಲ್ಲಿ ಹೆಚ್ಚು ವ್ಯವಸ್ಥಿತವಾಗಿರುವುದಿಲ್ಲ ಮತ್ತು ಹಕ್ಕಿಗಳಲ್ಲಿ ಇರುವುದೇ ಇಲ್ಲ.[೨]

ಲಂಗ್‌ಫಿಶ್‌ಗಳನ್ನು ಹೊರತುಪಡಿಸಿ, ಪಿಟ್ಯುಟರಿಯ ರಚನೆಯು ಮೀನುಗಳಲ್ಲಿ ಸಾಧಾರಣವಾಗಿ ಟೆಟ್ರಾಪಾಡ್‌ಗಳಲ್ಲಿ ಇರುವುದಕಿಂತ ವಿಭಿನ್ನವಾಗಿರುತ್ತದೆ. ಸಾಧಾರಣವಾಗಿ, ಮಧ್ಯಂತರ ಪಾಲಿಯು ಸುವ್ಯವಸ್ಥೆಗೊಂಡಿದ್ದು, ಮತ್ತು ಗಾತ್ರದಲ್ಲಿ ಮುಂಭಾಗದ ಪಿಟ್ಯುಟರಿಯ ಸರಿಸಮವಾಗಿರುತ್ತದೆ. ಮುಂಭಾಗದ ಪಿಟ್ಯುಟರಿಯು ಪಿಟ್ಯುಟರಿ ಸ್ಟಾಕ್‌ನ ಅಡಿಯಲ್ಲಿ ಅಂಗಾಂಶಗಳ ತೆಳು ಹಾಳೆಯಾಗಿದ್ದು, ಮತ್ತು ಹಲವು ಸಂದರ್ಭದಲ್ಲಿ ಮುಂಭಾಗದ ಪಿಟ್ಯುಟರಿಯ ಅಂಗಾಂಶಗಳಿಗೆ ನಿಯತವಲ್ಲದ ಬೆರಳಿನ ಆಕಾರದ ಮುಂದೆಚಾಚಿರುವ ಭಾಗಗಳನ್ನು ಕಳಿಸುತ್ತದೆ, ಅವು ಅದರ ಕಳಗೆ ನೆಲೆಸಿರುತ್ತದೆ. ಮುಂಭಾಗದ ಪಿಟ್ಯುಟರಿಯನ್ನು ವಿಶೇಷವಾಗಿ ಎರಡು ಭಾಗದಲ್ಲಿ ವಿಭಜಿಸಲಾಗಿದೆ, ಹೆಚ್ಚು ಮುಂಭಾಗದ ರೋಸ್ಟ್ರಲ್ ಭಾಗ ಮತ್ತು ಹಿಂಭಾಗದ ಪ್ರಾಕ್ಸಿಮಲ್ ಭಾಗ, ಆದರೆ ಅವೆರಡರ ನಡುವಿನ ಗಡಿರೇಖೆಯು ಅನೇಕವೇಳೆ ಸರಿಯಾಗಿ ಕಾಣಿಸುವುದಿಲ್ಲ. ಎಲಾಸ್ಮೊಬ್ರಾಂಚ್‌ಗಳಲ್ಲಿ ಮುಂಭಾಗದ ಪಿಟ್ಯುಟರಿಯ ಕೆಳಗೆ ಅಧಿಕವಾದ ವೆಂಟ್ರಲ್ ಲೋಬ್ ಇರುತ್ತದೆ.[೨]

ಎಲ್ಲಾ ತರಹದ ಮೀನುಗಳಲ್ಲಿ ಮುಖ್ಯವಾದಂತಹ ಲ್ಯಾಂಪ್ರರಿಗಳ ವ್ಯವಸ್ಥೆಯು ಮೂಲತಃ ಪಿಟ್ಯುಟರಿಯು ತಮ್ಮ ಪೂರ್ವಜ ಕಶೇರುಕಗಳಿಂದ ಬಂದಂತಹುದು ಎಂಬುದನ್ನು ಸೂಚಿಸಬಹುರು. ಇಲ್ಲಿ, ಹಿಂಭಾಗದ ಪಿಟ್ಯುಟರಿಯು ಮೆದುಳಿನ ಕೆಳಭಾಗದಲ್ಲಿ ಸಹಜವಾದ ಅಂಗಾಂಶಗಳ ತೆಳು ಹಾಳೆಯಾಗಿರುತ್ತದೆ ಮತ್ತು ಪಿಟ್ಯುಟರಿ ಸ್ಟಾಕ್ ಇರುವುದಿಲ್ಲ. ರಾತ್ಕೆಯ ಚೀಲವು ಮೂಗಿನ ರಂಧ್ರಕ್ಕೆ ಸಮೀಪವಿದ್ದು, ಹೊರಭಾಗಕ್ಕೆ ತೆರೆದಿರುತ್ತದೆ. ಚೀಲಕ್ಕೆ ಹತ್ತಿರದಲ್ಲಿ ಹೊಂದಿಕೊಂಡಂತೆ ಗ್ಲಾಂಡುರ್ ಟಿಶ್ಯೂವಿನಲ್ಲಿ ಮೂರು ಬೇರೆ ಬೇರೆ ಗೊಂಚಲುಗಳು ಇವೆ, ಮುಂಭಾಗದ ಪಿಟ್ಯುಟರಿಯ ಇಂಟರ್‌ಮೀಡಿಯೇಟ್ ಪಾಲಿಗೆ , ಮತ್ತು ರೋಸ್ಟ್ರಲ್ ಹಾಗೂ ಪ್ರಾಕ್ಸಿಮಲ್ ಭಾಗಗಳಿಗೆ ಅನುರೂಪವಾಗಿವೆ. ಈ ವಿವಿಧ ಭಾಗಗಳು ಮೆದುಳಿನ ಪೊರೆಯ ತೆಳುವಾದ ಚರ್ಮದಿಂದ ಬೇರ್ಪಡಿಸಲ್ಪಟ್ಟಿವೆ, ಇದು ಇತರೆ ಕಶೇರುಕಗಳಲ್ಲಿ ಪಿಟ್ಯುಟರಿಯು ಪೊರೆಗಳಿಂದ ಸೇರ್ಪಡೆಯಿಂದ ಒಂದಾಗಿವೆ ಎಂಬುದನ್ನು ಸೂಚಿಸುತ್ತದೆ, ಆದರೆ ಗ್ರಂಥಿಗಳ ಜೊತೆಯಲ್ಲಿ ಬಿಗಿಯಾಗಿ ಸಂಪರ್ಕಹೊಂದಿವೆ.[೨]

ಹಲವು ಮೀನುಗಳು ಯೂರೋಫಿಸಿಸ್‌ ಅನ್ನು ಹೊಂದಿದ್ದು, ಅದು ನ್ಯೂರಲ್ ಗ್ರಂಥಿಯಾಗಿದ್ದು ಹಿಂಭಾಗದ ಪಿಟ್ಯುಟರಿ ತರಹದ್ದಾಗಿರುತ್ತದೆ, ಆದರೆ ಅದು ಬಾಲದಲ್ಲಿ ನೆಲೆಸಿರುತ್ತದೆ ಮತ್ತು ಸ್ಪೈನಲ್ ಕಾರ್ಡ್ನ ಜೊತೆ ಸಂಪರ್ಕದಲ್ಲಿರುತ್ತದೆ. ಅದು ಆಸ್ಮೊಲೆಗ್ಗುಲೇಶನ್ನ ಕ್ರಿಯೆಯಲ್ಲಿ ಕಾರ್ಯ ನಿರ್ವಹಿಸುತ್ತದೆ.[೨]

ಕಾರ್ಯಚಟುವಟಿಕೆಗಳುಸಂಪಾದಿಸಿ

ಕೆಳಕಂಡ ಕೆಲವು ದೇಹದ ಪ್ರಕ್ರಿಯೆಗಳನ್ನು ನಿಯಂತ್ರಿಸಲು ಪಿಟ್ಯುಟರಿ ಹಾರ್ಮೋನುಗಳು ಸಹಾಯ ಮಾಡುತ್ತವೆ:

ಪೂರಕವಾದ ಚಿತ್ರಗಳುಸಂಪಾದಿಸಿ

ಇವನ್ನೂ ಗಮನಿಸಿಸಂಪಾದಿಸಿ

ಆಕರಗಳುಸಂಪಾದಿಸಿ

  1. Gibo H, Hokama M, Kyoshima K, Kobayashi S (1993). "[Arteries to the pituitary]". Nippon Rinsho. 51 (10): 2550–4. PMID 8254920.{{cite journal}}: CS1 maint: multiple names: authors list (link)
  2. ೨.೦ ೨.೧ ೨.೨ ೨.೩ Romer, Alfred Sherwood; Parsons, Thomas S. (1977). The Vertebrate Body. Philadelphia, PA: Holt-Saunders International. pp. 549–550. ISBN 0-03-910284-X.

ಹೊರಗಿನ ಕೊಂಡಿಗಳುಸಂಪಾದಿಸಿ