ಮರಗೆಣಸು ಸಸ್ಯದ ಎಲೆಗಳು
ಮರಗೆಣಸು
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಪ್ರಜಾತಿ:
M. esculenta
Binomial name
ಮನಿಹಾಟ್ ಎಸ್ಕುಲೆಂಟಾ
Crantz
Manihot esculenta

ಮರಗೆಣಸು ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ, ದಕ್ಷಿಣ ಅಮೆರಿಕಾ ಮೂಲದ ಪೊದೆಯಂತಹ ಸಸ್ಯ. ಮರಗೆಣಸಿನ ತವರು ದಕ್ಷಿಣ ಅಮೆರಿಕದ ಬ್ರಜಿಲ್. ವಿಪುಲ ಆಹಾರ ಸಂಗ್ರಹಣದಿಂದಾಗಿ ಇದರ ಬೇರು ಗೆಡ್ಡೆಯಂತೆ ದಪ್ಪವಾಗಿದ್ದು ಗೆಣಸಿನ ಆಕಾರ ಪಡೆದಿದೆ. ಆದ್ದರಿಂದಲೇ ಇದಕ್ಕೆ ಮರಗೆಣಸು ಎಂದು ಹೆಸರು. ಸಸ್ಯ ವೈಜ್ಞಾನಿಕವಾಗಿ ಇದನ್ನು ಮ್ಯಾನಿಹಾಟ್ ಯೂಟಿಲಿಸಿಮ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಮುಖ್ಯವಾಗಿ ಕೇರಳದಲ್ಲಿ ಉಪಯೋಗದಲ್ಲಿದೆ. ನೈಜೀರಿಯ ದೇಶದಲ್ಲಿ ಪ್ರಪಂಚದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಮರಗೆಣಸು ಸಿಹಿ ಅಥವಾ ಕಹಿ ಇರುತ್ತದೆ.

ಅಕ್ಕಿ ಮತ್ತು ಮೆಕ್ಕೆ ಜೋಳದ ನಂತರ ಮರಗೆಣಸು ಕಾರ್ಬೊಹೈಡ್ರೇಟ್‍ನ ಮೂರನೇ ಅತಿದೊಡ್ಡ ಮೂಲವಾಗಿದೆ.[][][] ಮರಗೆಣಸು ಅಭಿವೃದ್ಧಿಶೀಲ ಪ್ರಪಂಚದಲ್ಲಿ ಒಂದು ಪ್ರಮುಖ ಆಹಾರವಾಗಿದೆ. ಅರ್ಧ ಬಿಲಿಯನ್ ಜನರಿಗೆ ಮೂಲಭೂತ ಆಹಾರ ಒದಗಿಸುತ್ತದೆ.[] ಇದು ಅತ್ಯಂತ ಬರ ಸಹಿಷ್ಣು ಬೆಳೆಗಳಲ್ಲಿ ಒಂದಾಗಿದೆ. ಕನಿಷ್ಠ ಮಣ್ಣಿನಲ್ಲಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಥೈಲ್ಯಾಂಡ್ ಒಣಗಿದ ಮರಗೆಣಸಿನ ಅತಿದೊಡ್ಡ ರಫ್ತುದಾರವಾಗಿದೆ.

ಪೋರ್ಚುಗೀಸರು 17ನೆಯ ಶತಮಾನದಲ್ಲಿ ಭಾರತ ದೇಶಕ್ಕೆ ಇದನ್ನು ತಂದರು. ಮೊದಲು ಮಲಬಾರ್ ತೀರಪ್ರದೇಶದ ತಿರುವನಂತಪುರ ಮತ್ತು ಕೊಚ್ಚಿನ್‌ಗಳಿಗೆ ತರುವಾಯ ದೇಶದ ಇತರ ಭಾಗಗಳಿಗೆ ಹರಡಿತು.

ಸಸ್ಯದ ವಿವರಣೆ

ಬದಲಾಯಿಸಿ

ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಯಲಗು ಹಸ್ತಾಕಾರದಲ್ಲಿದ್ದು 3-7 ಭಾಗಗಳಾಗಿ ವಿಂಗಡಗೊಂಡಿದೆ. ಎಲೆಯ ಮೇಲುಭಾಗದಲ್ಲಿ ನವುರಾದ ರೋಮಗಳುಂಟು. ಹೂಗೊಂಚಲು ಅಸೀಮಾಕ್ಷಿ (ರೇಸಿಮೋಸ್) ಅಥವಾ ಪ್ಯಾನಿಕಲ್ ಮಾದರಿಯದು; ಎಲೆಯ ಕಕ್ಷಗಳಲ್ಲೊ ರೆಂಬೆಗಳ ತುದಿಗಳಲ್ಲೊ ಸ್ಥಿತವಾಗಿರುತ್ತದೆ.

ಮರಗೆಣಸು ಉಷ್ಣವಲಯದ ಬೆಳೆ. ಇದು ತಂಪು ವಾತಾವರಣವನ್ನು ಸಹಿಸದು. ಇದನ್ನು ಸಮುದ್ರ ಮಟ್ಟದಿಂದ ಹಿಡಿದು 1200ಮೀ ಎತ್ತರದವರೆಗಿನ ಪ್ರದೇಶಗಳಲ್ಲಿ ಮಾತ್ರ ಬೆಳೆಸಬಹುದು. ಜೌಗಿಲ್ಲದ ಮರಳುಮಿಶ್ರಿತ ಮಣ್ಣುಗಳಲ್ಲಿ ಇದರ ಬೆಳವಣಿಗೆ ಹುಲುಸು. ಮರಳುಮಿಶ್ರಿತ ಗೋಡು ಅತ್ಯುತ್ತಮ. ಮಲಬಾರ್ ತೀರಪ್ರದೇಶದಲ್ಲಿರುವ ಜಂಬಿಟ್ಟಿಗೆ ಗೋಡುಮಣ್ಣಿನಲ್ಲಿ ಕೂಡ ಇದರ ಬೇಸಾಯ ಯಶಸ್ವಿಯಾಗುತ್ತದೆ.

ಮರಗೆಣಸು ದಷ್ಟಪುಷ್ಟವಾಗಿ ಬೆಳೆಯುವುದರಿಂದ ಭೂಮಿಯಲ್ಲಿರುವ ಲವಣ, ಖನಿಜಾಂಶಗಳನ್ನು ಚೆನ್ನಾಗಿ ಮತ್ತು ಶೀಘ್ರವಾಗಿ ಉಪಯೋಗಿಸಿಕೊಂಡು ಭೂಮಿಯನ್ನು ನಿಸ್ಸಾರ ಮಾಡುತ್ತದೆ. ಆದ್ದರಿಂದ ಪ್ರತಿವರ್ಷ ಇದೇ ಬೆಳೆಯನ್ನು ಬೆಳೆಸುವುದು ಭೂಮಿಯ ಫಲವತ್ತು ಮತ್ತು ಫಸಲಿನ ಇಳುವರಿ ದೃಷ್ಟಿಯಿಂದ ಉತ್ತಮವಲ್ಲ. ಇದನ್ನು ತರಕಾರಿ ಬೆಳೆಗಳ ಅನಂತರ ಪರ್ಯಾಯ ರೀತಿಯಲ್ಲಿ ಬೆಳಸುವುದು ವಾಡಿಕೆ. ಅಲ್ಲದೆ ಬೇರೆ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಸುವುದು ಕೂಡ ಉಂಟು.

ಮರಗೆಣಸನ್ನು ಕಾಂಡ ತುಂಡುಗಳಿಂದ ವೃದ್ಧಿ ಮಾಡುವುದು ಸಾಮಾನ್ಯ. ಇದನ್ನು ಬೀಜದಿಂದ ವೃದ್ಧಿ ಮಾಡುವ ಸಾಧ್ಯತೆ ಇದ್ದರೂ ಹೀಗೆ ಬೆಳೆಸಿದ ಸಸ್ಯಗಳು ಇಳುವರಿ ಕೊಡಲು ಹೆಚ್ಚು ಕಾಲ ಹಿಡಿಯುವುದರಿಂದ ಈ ವಿಧಾನ ಹೆಚ್ಚಾಗಿ ಬಳಕೆಯಲ್ಲಿಲ್ಲ.

ಮರಗೆಣಸು ಸರಿಸುಮಾರಾಗಿ ಒಂದು ವರ್ಷದ ಬೆಳೆ. ತುಂಡುಗಳನ್ನು ನೆಟ್ಟ 8-10 ತಿಂಗಳ ತರುವಾಯ ಬೇರುಗಳು ಬಲಿತು ಕುಯ್ಲಿಗೆ ಬರುತ್ತವೆ. ಬೇಸಾಯ ಕ್ರಮ ಹಾಗೂ ತಳಿ ಅವಲಂಬಿಸಿ ಮರಗೆಣಸಿನ ಇಳುವರಿ ಹೆಕ್ಟೇರಿಗೆ 12-15 ಟನ್ ಇದೆ. 50 ಟನ್ ಇಳುವರಿ ಕೊಡುವಂಥ ಸುಧಾರಿತ ತಳಿಯನ್ನು ಇತ್ತಿಚೆಗೆ ತಿರುವನಂತಪುರದ ಮರಗೆಣಸು ಸಂಶೋಧನ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಉಪಯೋಗಗಳು

ಬದಲಾಯಿಸಿ

ಮರಗೆಣಸು ಮಲಬಾರ್ ತೀರಪ್ರದೇಶ ಜನರ ಮುಖ್ಯ ಆಹಾರ. ಇದನ್ನು ಬೇಯಿಸಿ ಇಲ್ಲವೆ ಸುಟ್ಟು ಉಪಯೋಗಿಸುವುದಿದೆ. ಅಲ್ಲದೆ ಹುಳಿ ಮತ್ತು ಪಲ್ಯದ ರೀತಿಯಲ್ಲಿ ಸಹ ಉಪಯೋಗಿಸುವುದುಂಟು. ಇದರಿಂದ ಹಿಟ್ಟು ಮತ್ತು ಕೃತಕ ಅಕ್ಕಿ ತಯಾರು ಮಾಡುವುದಿದೆ. ಫಿಲಿಪೀನ್ಸ್‌ನಲ್ಲಿ ಇದರಿಂದ ಮದ್ಯ ತಯಾರಿಸುತ್ತಾರೆ. ಇದರ ಹಿಟ್ಟು ಬಿಸ್ಕತ್ತು ತಯಾರಿಕೆಗೂ ಗಂಜಿಯು ಬಟ್ಟೆಗಳಿಗೆ ಹಾಕಲೂ ಒದಗುತ್ತದೆ. ಮರಗೆಣಸಿನ ಹಿಟ್ಟನ್ನು ಚಪಾತಿ, ಪೂರಿ ಇತ್ಯಾದಿಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಇದರಿಂದ ರವೆ ತಯಾರಿಸಿ ಉಪ್ಪಿಟ್ಟು, ಸಜ್ಜಿಗೆ, ಇಡ್ಲಿ ಮುಂತಾದವನ್ನು ಮಾಡಬಹುದು.

ಇದಕ್ಕೆ ಔಷಧೀಯ ಪ್ರಾಮುಖ್ಯವೂ ಉಂಟು. ಇದರ ಎಲೆ, ಮೆದುವಾದ ಕಾಂಡ ಮತ್ತು ಗೆಡ್ಡೆ ಜಾನುವಾರು ಮೇವಾಗಿ ಕೂಡ ಉಪಯೋಗಿಸುತ್ತಾರೆ. ಮರಗೆಣಸು ಮತ್ತು ಇದರ ಉಪೋತ್ಪನ್ನಗಳು ಅನೇಕ ಕೈಗಾರಿಕೆಗಳಿಗೆ ಅಗತ್ಯ ಕಚ್ಚಾ ವಸ್ತುಗಳೆನಿಸಿವೆ. ಇದರಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾದ ಪೌಷ್ಟಿಕಾಂಶಗಳುಂಟು.

ಉಲ್ಲೇಖಗಳು

ಬದಲಾಯಿಸಿ
  1. "Cassava". Food and Agriculture Organization of the United Nations (FAO). Archived from the original on 18 November 2016. Retrieved 24 November 2011.
  2. Fauquet Claude; Fargette Denis (1990). "African Cassava Mosaic Virus: Etiology, Epidemiology, and Control" (PDF). Plant Disease. 74 (6). American Phytopathological Society (APS): 404–11. doi:10.1094/pd-74-0404. Archived (PDF) from the original on 9 August 2017. Retrieved 10 January 2011.
  3. Afedraru, Lominda (2019-01-31). "Uganda to launch innovative gene-edited cassava research". Alliance for Science. Archived from the original on 15 August 2021. Retrieved 2021-08-15.
  4. "Dimensions of Need: An atlas of food and agriculture". United Nations Food and Agriculture Organization (FAO). 1995. Archived from the original on 24 November 2016. Retrieved 23 November 2011.


ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:


"https://kn.wikipedia.org/w/index.php?title=ಮರಗೆಣಸು&oldid=1169665" ಇಂದ ಪಡೆಯಲ್ಪಟ್ಟಿದೆ