ಹಿಟ್ಟು
ಹಿಟ್ಟು ಎಂದರೆ ಕಚ್ಚಾ ಧಾನ್ಯಗಳು, ಬೇರುಗಳು, ಅವರೆಗಳು, ಕರಟಕಾಯಿಗಳು ಅಥವಾ ಬೀಜಗಳನ್ನು ಬೀಸಿ ತಯಾರಿಸಲಾದ ಪುಡಿ. ಇದನ್ನು ಅನೇಕ ವಿಭಿನ್ನ ಆಹಾರಗಳನ್ನು ತಯಾರಿಸಲು ಬಳಸಲಾಗುತ್ತದೆ. ಧಾನ್ಯದ ಹಿಟ್ಟು ಅನೇಕ ಸಂಸ್ಕೃತಿಗಳಲ್ಲಿ ಪ್ರಧಾನ ಆಹಾರವಾದ ಬ್ರೆಡ್‍ನ ಮುಖ್ಯ ಘಟಕಾಂಶವಾಗಿದೆ. ಐರೋಪ್ಯ, ಉತ್ತರ ಅಮೇರಿಕ, ಮಧ್ಯಪ್ರಾಚ್ಯ, ದಕ್ಷಿಣ ಅಮೇರಿಕ, ಉತ್ತರ ಭಾರತ, ಮತ್ತು ಉತ್ತರ ಆಫ್ರಿಕಾದ ಸಂಸ್ಕೃತಿಗಳಲ್ಲಿ, ಗೋಧಿಹಿಟ್ಟು ಅತ್ಯಂತ ಪ್ರಮುಖ ಘಟಕಾಂಶಗಳಲ್ಲಿ ಒಂದು, ಮತ್ತು ಅವರ ಶೈಲಿಗಳ ಬ್ರೆಡ್ ಹಾಗೂ ಪೇಸ್ಟ್ರಿಗಳಲ್ಲಿ ಲಾಕ್ಷಣಿಕ ಮಿಶ್ರಣಾಂಶವಾಗಿದೆ.
ಗೋಧಿಯು ಹಿಟ್ಟಿನ ಅತ್ಯಂತ ಸಾಮಾನ್ಯ ಆಧಾರವಾಗಿದೆ. ಪ್ರಾಚೀನಕಾಲದಿಂದ ಮೀಸೋಅಮೆರಿಕನ್ ಪಾಕಶೈಲಿಯಲ್ಲಿ ಮೆಕ್ಕೆ ಜೋಳದ ಹಿಟ್ಟು ಮಹತ್ವದ್ದಾಗಿದೆ ಮತ್ತು ಅಮೆರಿಕಾ ಖಂಡಗಳಲ್ಲಿ ಪ್ರಧಾನ ಆಹಾರವಾಗಿ ಉಳಿದುಕೊಂಡಿದೆ. ಚಿಕ್ಕಗೋಧಿಯ ಹಿಟ್ಟು ಮಧ್ಯ ಯುರೋಪ್‍ನಲ್ಲಿ ಬ್ರೆಡ್‍ನ ಘಟಕವಾಗಿದೆ.
ಉಲ್ಲೇಖಗಳು
ಬದಲಾಯಿಸಿಬಾಹ್ಯ ಸಂಪರ್ಕಗಳು
ಬದಲಾಯಿಸಿ- New International Encyclopedia. 1905. .