ಚಪಾತಿಯು ಭಾರತೀಯ ಉಪಖಂಡದ ಒಂದು ಬಗೆಯ ಉಬ್ಬಿರದ ಚಪ್ಪಟೆ ರೊಟ್ಟಿ . ಇದರ ರೂಪಾಂತರಗಳು ತುರ್ಕ್‌ಮೇನಿಸ್ತಾನ್, ಯೂಗ್ಯಾಂಡಾ, ಕೀನ್ಯಾ ಮತ್ತು ಟಾಂಜಾನೀಯಾವನ್ನು ಒಳಗೊಂಡಂತೆ ಪೂರ್ವ ಆಫ್ರಿಕಾದ ರಾಷ್ಟ್ರಗಳು, ಮತ್ತು ಇತರ ರಾಷ್ಟ್ರಗಳ ಪೈಕಿ ಘಾನಾವೂ ಸೇರಿದಂತೆ ಪಶ್ಚಿಮ ಆಫ್ರಿಕಾದಲ್ಲಿ ಕಾಣುತ್ತವೆ. ಮುಘಲ್ ಸಾಮ್ರಾಟ ಅಕ್ಬರ್‌ನ ವಜೀರ್ನಾಗಿದ್ದ ಅಬುಲ್-ಫಜಲ್ ಇಬ್ನ್ ಮುಬಾರಕ್ ನಿಂದ ಬರೆಯಲ್ಪಟ್ಟ ಒಂದು ೧೬ನೆಯ ಶತಮಾನದ ದಸ್ತಾವೇಜಾದ ಐನ್-ಇ-ಅಕ್ಬರಿಯಲ್ಲಿ ಚಪಾತಿಯ ಬಗ್ಗೆ ಟಿಪ್ಪಣಿ ಮಾಡಲಾಗಿದೆ.[೧] ಇದು ಭಾರತದ ಉಪಖಂಡದಿಂದ ಹುಟ್ಟಿದ ಹುಳಿಯಿಲ್ಲದ ಫ್ಲಾಟ್‌ಬ್ರೆಡ್ ಎಂದೂ ಕರೆಯಲಾಗುತ್ತದೆ ಮತ್ತು ಇದನ್ನು ಭಾರತ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಪೂರ್ವ ಆಫ್ರಿಕಾ ಮತ್ತು ಕೆರಿಬಿಯನ್ ನಲ್ಲೂ ಚಪಾತಿಯು ಪ್ರಧಾನ ಖಾದ್ಯವಾಗಿದೆ . ಚಪಾತಿಗಳನ್ನು ಸಂಪೂರ್ಣ ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ,[೨][೩] ಇದನ್ನು ನೀರಿನೊಂದಿಗೆ ಹಿಟ್ಟಿನಲ್ಲಿ ಬೆರೆಸಿ , ಖಾದ್ಯ ಎಣ್ಣೆ ಮತ್ತು ಉಪ್ಪನ್ನು ಸೇರಿಸಿ ಮಿಶ್ರಣವನ್ನು ಪಾತ್ರೆಯಲ್ಲಿ ತಯಾರಿಸಿ ತವಾ (ಫ್ಲಾಟ್ ಬಾಣಲೆ) ಮೇಲೆ ಬೇಯಿಸಲಾಗುತ್ತದೆ.

ಚಪಾತಿಯು ಭಾರತೀಯ ಉಪಖಂಡದಲ್ಲಿ ಮತ್ತು ವಿಶ್ವದಾದ್ಯಂತ ಭಾರತೀಯ ಉಪಖಂಡದ ವಲಸಿಗರಲ್ಲಿ ಸಾಮಾನ್ಯ ಆಹಾರವಾಗಿದೆ. ಭಾರತೀಯ ಉಪಖಂಡದಿಂದ ವಲಸೆ ಹೋದವರು, ವಿಶೇಷವಾಗಿ ಮಧ್ಯ ಏಷ್ಯಾ , ಪೂರ್ವ ಆಫ್ರಿಕಾ ಮತ್ತು ಕೆರಿಬಿಯನ್ ದ್ವೀಪಗಳಿಗೆ ಭಾರತೀಯ ವ್ಯಾಪಾರಿಗಳಿಂದ ಹಾಗೂ ವಿಶ್ವದ ಇತರ ಭಾಗಗಳಿಗೆ ಚಪಾತಿಯನ್ನು ಪರಿಚಯಿಸಲಾಯಿತು.[೪][೫]

ಇತಿಹಾಸ ಬದಲಾಯಿಸಿ

ಚಪಾತಿ ಎಂಬ ಪದದ ಅರ್ಥ "ಸ್ಲ್ಯಾಪ್" ಮತ್ತು "ಫ್ಲಾಟ್", ಇದು ಒದ್ದೆಯಾದ ಅಂಗೈ ಕೈಗಳ ನಡುವೆ ತೆಳುವಾದ ಹಿಟ್ಟಿನ ಉಂಡೆಗಳನ್ನು ತಯಾರಿಸುವ ಸಾಂಪ್ರದಾಯಿಕ ವಿಧಾನವಾಗಿದೆ. ಭಾರತೀಯ ಉಪಖಂಡದಲ್ಲಿ ಪ್ರಧಾನ ಆಹಾರವಾಗಿರುವ ಗೋಧಿಯ ಸಾಮಾನ್ಯ ರೂಪಗಳಲ್ಲಿ ಚಪಾತಿಯೂ ಒಂದು. ಮೊಹೆಂಜೊ-ದಾರೊದಲ್ಲಿನ ಉತ್ಖನ್ನದಲ್ಲಿ ಪತ್ತೆಯಾದ ಕಾರ್ಬೊನೈಸ್ಡ್ ಗೋಧಿ ಧಾನ್ಯಗಳು ಇಂದು ಭಾರತದಲ್ಲಿ ಕಂಡುಬರುವ ಸ್ಥಳೀಯ ಜಾತಿಯ ಗೋಧಿಗೆ ಹೋಲುತ್ತವೆ. ಸಿಂಧೂ ಕಣಿವೆಯಲ್ಲಿನ ಪೂರ್ವಜರು ಹೆಚ್ಚಾಗಿ ಗೋಧಿ ಬೆಳೆ ಬೆಳೆಯುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ .[೬]

ರೋಟಿ ಜೊತೆಗೆ ಚಪಾತಿಗಳನ್ನು ವಿಶ್ವದ ಇತರ ಭಾಗಗಳಿಗೆ ಭಾರತೀಯ ಉಪಖಂಡದ ವಲಸಿಗರು ಪರಿಚಯಿಸಿದರು . ವಿಶೇಷವಾಗಿ ದಕ್ಷಿಣ ಏಷ್ಯಾ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ನೆಲೆಸಿದ ಭಾರತೀಯ ವ್ಯಾಪಾರಿಗಳು ಪರಿಚಯಿಸಿದರು .

ಚಪಾತಿಗೆ ಮಾಲ್ಡೀವ್ಸ್ ನಲ್ಲಿರುವ ಇತರ ಹೆಸರುಗಳು ಬದಲಾಯಿಸಿ

ಚಪಾತಿಗೆ ರೊಟ್ಟಿ, ರೊಟ್ಲಿ, ಸಫತಿ, ಶಬಾತಿ,[೭] ಫುಲ್ಕಾ ಮತ್ತು ರೋಶಿ[೮] ಎಂದೂ ಮಾಲ್ಡೀವ್ಸ್ ನಲ್ಲಿ ಕರೆಯುತ್ತಾರೆ .

ಬೇಕಾಗುವ ಸಾಮಾಗ್ರಿಗಳು ಬದಲಾಯಿಸಿ

ಗೋಧಿ ಹಿಟ್ಟು ೫ ಕಪ್, ೧ ಚಮಚ,ತೆಂಗಿನ ಎಣ್ಣೆ ೩ ಚಮಚ,ತುಪ್ಪ ೨ ಚಮಚ, ಸ್ವಲ್ಪ ಬಿಸಿಮಾಡಿದ ನೀರು ೧ ಕಪ್, ರುಚಿಗೆ ತಕ್ಕಷ್ಟು ಉಪ್ಪು .[೯]

ತಯಾರಿಸುವ ವಿಧಾನ ಬದಲಾಯಿಸಿ

ಒಂದು ಅಗಲವಾದ ಪಾತ್ರೆಗೆ ನೀರು, ತುಪ್ಪ, ಹಾಕಿ ಸರಿಯಾಗಿ ಕಲಸಿಕೊಳ್ಳಬೇಕು, ನಂತರ ಅದಕ್ಕೆ ಗೋಧಿ ಹಿಟ್ಟನ್ನು ಹಾಕಿ ಸರಿಯಾಗಿ ಕಲಸಿ ಕೊನೆಗೆ ಅದಕ್ಕೆ ಎಣ್ಣೆ ಹಾಕಿ ಕಲಸಿಟ್ಟು, ಅರ್ಧ ಗಂಟೆಯ ನಂತರ ಉಂಡೆಗಳನ್ನು ಮಾಡಿಟ್ಟು ಅದನ್ನು ಗೋಧಿ ಹಿಟ್ಟಿನಲ್ಲಿ ಅದ್ದಿ ಲಟ್ಟಿಸಬೇಕು . ನಂತರ ಒಲೆಯಲ್ಲಿ ತವ ಬಿಸಿ ಮಾಡಿ ಅದಕ್ಕೆ ಚಪಾತಿಯನ್ನು ಹಾಕಿ ಕಾಯಿಸಿ ಅದು ಸರಿಯಾಗಿ ಉಬ್ಬಿದ ನಂತರ ತುಪ್ಪ ಸವರಿ ಬಿಸಿ ಬಿಸಿ ಚಪಾತಿಯನ್ನು ಸವಿಯಬಹುದು . ಭಾರತೀಯ ಉಪಖಂಡದ ಕೆಲವು ಪ್ರದೇಶಗಳಲ್ಲಿ ಚಪಾತಿಗಳನ್ನು ಬಾಣಲೆಯ ಮೇಲೆ ಭಾಗಶಃ ಬೇಯಿಸಲಾಗುತ್ತದೆ , ತದನಂತರ ನೇರವಾಗಿ ಜ್ವಾಲೆಯ ಮೇಲೆ ಬೇಯಿಸಲಾಗುತ್ತದೆ , ಇದು ಚಪಾತಿ ಉಬ್ಬಲು ಕಾರಣವಾಗುತ್ತದೆ. ಇಂತಹ ಉಬ್ಬಿದ ಚಪಾತಿಯನ್ನು ಉತ್ತರ ಭಾರತ ಮತ್ತು ಪೂರ್ವ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಫುಲ್ಕಾ ಎಂದೂ ಕರೆಯಲಾಗುತ್ತದೆ .[೧೦]

ಉಲ್ಲೇಖಗಳು ಬದಲಾಯಿಸಿ

  1. ಚಪಾತಿ ಮಾಡುವ ವಿಧಾನ
  2. https://kitchenkemistry.wordpress.com/2012/03/05/chapathi-whole-wheat-flat-bread/
  3. https://www.cooksinfo.com/chapati-flour
  4. https://www.thebetterindia.com/59404/chapati-movement-india-revolt/
  5. https://www.infodriveindia.com/india-export-data/roti-chapati-export/fc-united_arab_emirates/fp-dubai-report.aspx
  6. https://www.desiblitz.com/content/history-of-chapati
  7. https://maldivescook.com/recipe/roshi/
  8. https://kitchen.nine.com.au/recipes/huni-roshi-maldivian-chapati/a431478b-b5bc-4055-96e8-35c813fff731
  9. "Soft Chapati, How to make easy chapati recipe". Kannamma Cooks. 15 July 2016. Retrieved 4 January 2020.
  10. "ಆರ್ಕೈವ್ ನಕಲು". Archived from the original on 2020-09-28. Retrieved 2020-01-04.
"https://kn.wikipedia.org/w/index.php?title=ಚಪಾತಿ&oldid=1129115" ಇಂದ ಪಡೆಯಲ್ಪಟ್ಟಿದೆ