ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳು

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ

ಭಾರತ ಸರ್ಕಾರ ನೀಡುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಎಂದರೆ ಅದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ವಾರ್ಷಿಕ ಪ್ರಶಸ್ತಿಗಳ ಜೊತೆಯಲ್ಲಿಯೇ ಭಾರತದ ವಿಭಿನ್ನ ಭಾಷೆಗಳ ಹಿರಿಯ ಸಾಹಿತಿಗಳನ್ನು ಆಯ್ಕೆ ಮಾಡಿ ಅವರಿಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ ನೀಡುತ್ತದೆ. ಇದರ ಜತೆಯಲ್ಲಿ ಯುವ ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಬಾಲ ಸಾಹಿತ್ಯ ಪುರಸ್ಕಾರ, ಅನುವಾದ ಕ್ಷೇತ್ರದ ಸಾಧನೆಗೆ ಅನುವಾದ ಬಹುಮಾನಗಳನ್ನೂ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಗಳಿಗೆ ಭಾಜನರಾದ ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಪಟ್ಟಿ ಈ ಕೆಳಗಿನಂತಿದೆ.

ಸಾಹಿತ್ಯ ಅಕಾಡೆಮಿ ಫೆಲೋ ಗೌರವಸಂಪಾದಿಸಿ

ಸಾಹಿತ್ಯ ಅಕಾಡೆಮಿ ನೀಡುವ ಅತ್ಯುನ್ನತ ಸಾಹಿತ್ಯ ಗೌರವವಿದು. ಭಾರತೀಯ ಭಾಷೆಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಸಾಧಕರಿಗೆ ಫೆಲೋ ಗೌರವ ಸಲ್ಲಿಸಲಾಗುತ್ತದೆ. ಹೀಗೆ ಮೊದಲ ಫೆಲೋ ಗೌರವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ ಭಾರತದ ರಾಷ್ಟ್ರಪತಿಗಳಾಗಿ ದೇಶಕ್ಕೆ ಕೊಡುಗೆ ನೀಡಿದ ಸರ್ವೇಪಲ್ಲಿ ರಾಧಾಕೃಷ್ಣನ್ ಅವರಿಗೆ 1968ರಲ್ಲಿ ಸಂದಿತು. ಇದರ ಜತೆಯಲ್ಲಿ ವಿದೇಶೀ ಲೇಖಕರಿಗೆ ಗೌರವ ಫೆಲೋಶಿಪ್, ಏಷ್ಯಾದ ಕಲೆ, ಸಾಹಿತ್ಯ, ಸಂಸ್ಕೃತಿಯ ಅಧ್ಯಯನ ಮಾಡುವವರಿಗೆ ನೀಡಲಾಗುತ್ತಿದ್ದ ಆನಂದ ಕುಮಾರಸ್ವಾಮಿ ಫೆಲೋಶಿಪ್ (ಈಗ ನಿಲ್ಲಿಸಲಾಗಿದೆ), ಸಾರ್ಕ್ ದೇಶಗಳ ಸಾಹಿತಿಗಳಿಗೆ ಸಲ್ಲುವ ಪ್ರೇಮ್‌ಚಂದ್ ಫೆಲೋಶಿಪ್ಗಳನ್ನೂ ಸಾಹಿತ್ಯ ಅಕಾಡೆಮಿ ನೀಡುತ್ತಿದೆ.

ವರ್ಷ ಚಿತ್ರ ಪುರಸ್ಕೃತರು ಉಲ್ಲೇಖ
1969   ದ. ರಾ. ಬೇಂದ್ರೆ
1973   ಮಾಸ್ತಿ ವೆಂಕಟೇಶ ಅಯ್ಯಂಗಾರ್
1979   ಕೆ. ವಿ. ಪುಟ್ಟಪ್ಪ
1985   ಕೆ. ಶಿವರಾಮ ಕಾರಂತ
1989   ವಿ. ಕೃ. ಗೋಕಾಕ
1994   ಪು. ತಿ. ನರಸಿಂಹಾಚಾರ್
1999   ಕೆ. ಎಸ್. ನರಸಿಂಹಸ್ವಾಮಿ
2004   ಯು. ಆರ್. ಅನಂತಮೂರ್ತಿ
2014   ಎಸ್. ಎಲ್. ಭೈರಪ್ಪ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಸಂಪಾದಿಸಿ

1954ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯನ್ನು ಪ್ರತಿವರ್ಷವೂ ಸಾಹಿತ್ಯ ಅಕಾಡೆಮಿ ಅಂಗೀಕರಿಸಿದ 24 ಭಾಷೆಗಳ ಒಂದೊಂದು ಪುಸ್ತಕಕ್ಕೆ ನೀಡಿ ಗೌರವಿಸಲಾಗುತ್ತದೆ. ಆರಂಭದಲ್ಲಿ ₹5000/- ಇದ್ದ ಹಣದ ಮೊತ್ತ, 1983ರಲ್ಲಿ ₹10,000/-ಕ್ಕೆ ಏರಿಕೆಯಾಯಿತು. ಆ ಬಳಿಕ, 1988ರಿಂದ ₹25,000/-, 2001ರಿಂದ ₹40,000/-, 2003ರಿಂದ ₹50,000/-ಕ್ಕೆ ಹೆಚ್ಚಳವಾಗಿದೆ. ಪ್ರಸ್ತುತ ಬಹುಮಾನದ ಮೊತ್ತ ₹1,00,000/-. ಪ್ರಶಸ್ತಿಯ ಮೊತ್ತದ ಜೊತೆಯಲ್ಲಿ ಒಂದು ತಾಮ್ರಪತ್ರ, ಪ್ರಶಸ್ತಿ ಫಲಕ ಮತ್ತು ಶಾಲನ್ನು ನೀಡಿ ಗೌರವಿಸಲಾಗುತ್ತದೆ.

ವರ್ಷ ಚಿತ್ರ ಪುರಸ್ಕೃತರು ಕೃತಿ(ಗಳು) ಕೃತಿಯ ಪ್ರಕಾರ ಉಲ್ಲೇಖ(ಗಳು)
1955   ಕೆ. ವಿ. ಪುಟ್ಟಪ್ಪ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ
1956  – ರಂ. ಶ್ರೀ. ಮುಗಳಿ ಕನ್ನಡ ಸಾಹಿತ್ಯ ಚರಿತ್ರೆ ಭಾಷಾ ಇತಿಹಾಸ
1958   ದ. ರಾ. ಬೇಂದ್ರೆ ಅರಳು ಮರಳು ಕಾವ್ಯ
1959   ಕೆ. ಶಿವರಾಮ ಕಾರಂತ ಯಕ್ಷಗಾನ ಬಯಲಾಟ ಪರಿಚಯ ಗ್ರಂಥ
1960   ವಿ. ಕೃ. ಗೋಕಾಕ ದ್ಯಾವಾ-ಪೃಥಿವೀ ಕಾವ್ಯ
1961  – ಎ. ಆರ್. ಕೃಷ್ಣಶಾಸ್ತ್ರಿ ಬೆಂಗಾಲಿ ಕಾದಂಬರಿಕಾರ ಬಂಕಿಮಚಂದ್ರ ವಿಮರ್ಶಾ ಬರಹ
1962  – ದೇವುಡು ನರಸಿಂಹ ಶಾಸ್ತ್ರಿ ಮಹಾಕ್ಷತ್ರಿಯ ಕಾದಂಬರಿ
1964  – ಬಿ. ಪುಟ್ಟಸ್ವಾಮಯ್ಯ ಕ್ರಾಂತಿ ಕಲ್ಯಾಣ ಕಾದಂಬರಿ
1965  – ಎಸ್. ವಿ. ರಂಗಣ್ಣ ರಂಗ ಬಿನ್ನಪ ತತ್ವಶಾಸ್ತ್ರದ ಒಳನೋಟಗಳು
1966   ಪು. ತಿ. ನರಸಿಂಹಾಚಾರ್ ಹಂಸ ದಮಯಂತಿ ಮತ್ತು ಇತರ ರೂಪಕಗಳು ಸಂಗೀತ ನಾಟಕ
1967   ಡಿ. ವಿ. ಗುಂಡಪ್ಪ ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ ತತ್ವಶಾಸ್ತ್ರದ ಒಳನೋಟಗಳು
1968   ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಣ್ಣ ಕಥೆಗಳು (ಸಂಪುಟ 12-13) ಸಣ್ಣ ಕಥೆಗಳು
1969   ಎಚ್. ತಿಪ್ಪೇರುದ್ರಸ್ವಾಮಿ ಕರ್ಣಾಟಕ ಸಂಸ್ಕೃತಿ ಸಮೀಕ್ಷೆ ಸಾಂಸ್ಕೃತಿಕ ಅಧ್ಯಯನ
1970   ಶಂ. ಬಾ. ಜೋಶಿ ಕರ್ಣಾಟ ಸಂಸ್ಕೃತಿಯ ಪೂರ್ವ ಪೀಠಿಕೆ ಸಾಂಸ್ಕೃತಿಕ ಅಧ್ಯಯನ
1971  – ಆದ್ಯ ರಂಗಾಚಾರ್ಯ ಕಾಳಿದಾಸ ಸಾಹಿತ್ಯ ವಿಮರ್ಶೆ
1972  – ಸಂ. ಶಿ. ಭೂಸನೂರಮಠ ಶೂನ್ಯ ಸಂಪಾದನೆಯ ಪರಾಮರ್ಶೆ ವಿವರಣೆ
1973   ವಿ. ಸೀತಾರಾಮಯ್ಯ ಅರಲು ಬರಲು ಕಾವ್ಯ
1974   ಎಂ. ಗೋಪಾಲಕೃಷ್ಣ ಅಡಿಗ ವರ್ಧಮಾನ ಕಾವ್ಯ
1975   ಎಸ್. ಎಲ್. ಭೈರಪ್ಪ ದಾಟು ಕಾದಂಬರಿ
1976   ಎಂ. ಶಿವರಾಂ ಮನಮಂಥನ ಮಾನಸಿಕ ಆರೋಗ್ಯ ಅಧ್ಯಯನ
1977   ಕೆ. ಎಸ್. ನರಸಿಂಹಸ್ವಾಮಿ ತೆರೆದ ಬಾಗಿಲು ಕಾವ್ಯ
1978   ಬಿ. ಜಿ. ಎಲ್. ಸ್ವಾಮಿ ಹಸುರು ಹೊನ್ನು ಸಸ್ಯ ಲೋಕದ ಪರಿಚಯ
1979  – ಎ. ಎನ್. ಮೂರ್ತಿರಾವ್ ಚಿತ್ರಗಳು ಪತ್ರಗಳು ನೆನಪುಗಳು
1980   ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅಮೆರಿಕಾದಲ್ಲಿ ಗೊರೂರು ಪ್ರವಾಸ ಕಥನ
1981  – ಚನ್ನವೀರ ಕಣವಿ ಜೀವಧ್ವನಿ ಕಾವ್ಯ
1982   ಚದುರಂಗ ವೈಶಾಖ ಕಾದಂಬರಿ
1983   ಯಶವಂತ ಚಿತ್ತಾಲ ಕಥೆಯಾದಳು ಹುಡುಗಿ ಸಣ್ಣ ಕಥೆಗಳು
1984   ಜಿ. ಎಸ್. ಶಿವರುದ್ರಪ್ಪ ಕಾವ್ಯಾರ್ಥ ಚಿಂತನ ಸಾಹಿತ್ಯ ವಿಮರ್ಶೆ
1985  – ತ. ರಾ. ಸುಬ್ಬರಾವ್ ದುರ್ಗಾಸ್ತಮಾನ ಕಾದಂಬರಿ
1986  – ವ್ಯಾಸರಾಯ ಬಲ್ಲಾಳ ಬಂಡಾಯ ಕಾದಂಬರಿ
1987   ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಚಿದಂಬರ ರಹಸ್ಯ ಕಾದಂಬರಿ
1988  – ಶಂಕರ ಮೊಕಾಶಿ ಪುಣೇಕರ ಅವಧೇಶ್ವರಿ ಕಾದಂಬರಿ
1989  – ಹಾ. ಮಾ. ನಾಯಕ ಸಂಪ್ರತಿ ಅಂಕಣ ಬರಹಗಳು
1990   ದೇವನೂರು ಮಹಾದೇವ ಕುಸುಮಬಾಲೆ ಕಾದಂಬರಿ
1991   ಚಂದ್ರಶೇಖರ ಕಂಬಾರ ಸಿರಿಸಂಪಿಗೆ ನಾಟಕ
1992  – ಸು. ರಂ. ಎಕ್ಕುಂಡಿ ಬಕುಲದ ಹೂವುಗಳು ಕಾವ್ಯ
1993  – ಪಿ. ಲಂಕೇಶ್ ಕಲ್ಲು ಕರಗುವ ಸಮಯ ಸಣ್ಣ ಕಥೆಗಳು
1994   ಗಿರೀಶ್ ಕಾರ್ನಾಡ್ ತಲೆದಂಡ ನಾಟಕ
1995   ಕೀರ್ತಿನಾಥ ಕುರ್ತಕೋಟಿ ಉರಿಯ ನಾಲಗೆ ವಿಮರ್ಶೆ
1996  – ಜಿ. ಎಸ್. ಆಮೂರ ಭುವನದ ಭಾಗ್ಯ ಸಾಹಿತ್ಯ ವಿಮರ್ಶೆ
1997  – ಎಂ. ಚಿದಾನಂದ ಮೂರ್ತಿ ಹೊಸತು ಹೊಸತು ವಿಮರ್ಶೆ
1998  – ಬಿ. ಸಿ. ರಾಮಚಂದ್ರ ಶರ್ಮ ಸಪ್ತಪದಿ ಕಾವ್ಯ
1999  – ಡಿ. ಆರ್. ನಾಗರಾಜ್ ಸಾಹಿತ್ಯ ಕಥನ ಪ್ರಬಂಧಗಳು
2000   ಶಾಂತಿನಾಥ ದೇಸಾಯಿ ಓಂ ಣಮೋ ಕಾದಂಬರಿ
2001  – ಎಲ್. ಎಸ್. ಶೇಷಗಿರಿ ರಾವ್ ಇಂಗ್ಲಿಷ್ ಸಾಹಿತ್ಯ ಚರಿತ್ರೆ ಭಾಷಾ ಇತಿಹಾಸ
2002  – ಎಸ್. ನಾರಾಯಣ ಶೆಟ್ಟಿ ಯುಗಸಂಧ್ಯಾ ಮಹಾಕಾವ್ಯ
2003   ಕೆ. ವಿ. ಸುಬ್ಬಣ್ಣ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಪ್ರಬಂಧಗಳು
2004   ಗೀತಾ ನಾಗಭೂಷಣ ಬದುಕು ಕಾದಂಬರಿ
2005  – ರಾಘವೇಂದ್ರ ಪಾಟೀಲ್ ತೇರು ಕಾದಂಬರಿ
2006  – ಎಂ. ಎಂ. ಕಲಬುರ್ಗಿ ಮಾರ್ಗ 4 ಪ್ರಬಂಧಗಳು
2007   ಕುಂ. ವೀರಭದ್ರಪ್ಪ ಅರಮನೆ ಕಾದಂಬರಿ
2008   ಶ್ರೀನಿವಾಸ ಬಿ. ವೈದ್ಯ ಹಳ್ಳ ಬಂತು ಹಳ್ಳ ಕಾದಂಬರಿ
2009   ವೈದೇಹಿ ಕ್ರೌಂಚ ಪಕ್ಷಿಗಳು ಸಣ್ಣ ಕಥೆಗಳು
2010   ರಹಮತ್ ತರೀಕೆರೆ ಕತ್ತಿಯಂಚಿನ ದಾರಿ ಸಾಹಿತ್ಯ ವಿಮರ್ಶೆ
2011  – ಗೋಪಾಲಕೃಷ್ಣ ಪೈ ಸ್ವಪ್ನ ಸಾರಸ್ವತ ಕಾದಂಬರಿ
2012   ಎಚ್. ಎಸ್. ಶಿವಪ್ರಕಾಶ್ ಮಬ್ಬಿನ ಹಾಗೆ ಕಣಿವೆಯಾಸಿ ಕಾವ್ಯ [೧]
2013   ಸಿ. ಎನ್. ರಾಮಚಂದ್ರನ್ ಆಖ್ಯಾನ ವ್ಯಾಖ್ಯಾನ ಪ್ರಬಂಧಗಳು [೨]
2014   ಜಿ. ಎಚ್. ನಾಯಕ ಉತ್ತರಾರ್ಧ ಪ್ರಬಂಧಗಳು [೩]
2015   ಕೆ. ವಿ. ತಿರುಮಲೇಶ್ ಅಕ್ಷಯ ಕಾವ್ಯ ಕಾವ್ಯ [೪]
2016   ಬೊಳುವಾರು ಮಹಮ್ಮದ್ ಕುಂಞಿ ಸ್ವಾತಂತ್ರ್ಯದ ಓಟ ಕಾದಂಬರಿ [೫]
2017   ಟಿ. ಪಿ. ಅಶೋಕ ಕಥನ ಭಾರತಿ ಸಾಹಿತ್ಯ ವಿಮರ್ಶೆ [೬]
2018  – ಕೆ. ಜಿ. ನಾಗರಾಜಪ್ಪ ಅನುಶ್ರೇಣಿ-ಯಜಮಾನಿಕೆ ಸಾಹಿತ್ಯ ವಿಮರ್ಶೆ [೭]
2019   ವಿಜಯಾ ಕುದಿ ಎಸರು ಆತ್ಮಕಥನ [೮]
2020   ಎಂ. ವೀರಪ್ಪ ಮೊಯಿಲಿ ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಮಹಾಕಾವ್ಯ [೯][೧೦]
2021  – ಡಿ. ಎಸ್. ನಾಗಭೂಷಣ ಗಾಂಧಿ ಕಥನ [೧೧]

ಭಾಷಾ ಸಮ್ಮಾನ್ ಗೌರವ ಕನ್ನಡ ಸಾಹಿತ್ಯ2020ಸಂಪಾದಿಸಿ

ವರ್ಷ ಚಿತ್ರ ಪುರಸ್ಕೃತರು ಕ್ಷೇತ್ರ ಉಲ್ಲೇಖ(ಗಳು)
1996  – ಮಂದಾರ ಕೇಶವ ಭಟ್ ತುಳು ಸಾಹಿತ್ಯ
ಕೆದಂಬಾಡಿ ಜತ್ತಪ್ಪ ರೈ
2001   ಟಿ. ವಿ. ವೆಂಕಟಾಚಲ ಶಾಸ್ತ್ರಿ ಪ್ರಾಚೀನ ಮತ್ತು ಮಧ್ಯಕಾಲೀನ ಸಾಹಿತ್ಯ
2005  – ಎಲ್. ಬಸವರಾಜು ಪ್ರಾಚೀನ ಮತ್ತು ಮಧ್ಯಕಾಲೀನ ಸಾಹಿತ್ಯ
2006   ಹಂ. ಪ. ನಾಗರಾಜಯ್ಯ ಪ್ರಾಚೀನ ಮತ್ತು ಮಧ್ಯಕಾಲೀನ ಸಾಹಿತ್ಯ
2007  – ಷ. ಶೆಟ್ಟರ್ ಪ್ರಾಚೀನ ಮತ್ತು ಮಧ್ಯಕಾಲೀನ ಕನ್ನಡ ಸಾಹಿತ್ಯ
2010  – ಅಡ್ಡಂಡ ಸಿ. ಕಾರ್ಯಪ್ಪ ಕೊಡವ ಸಾಹಿತ್ಯ
ಮಂಡೀರ ಜಯಾ ಅಪ್ಪಣ್ಣ
2015   ಅಮೃತ ಸೋಮೇಶ್ವರ ತುಳು ಸಾಹಿತ್ಯ
2017   ಜಿ. ವೆಂಕಟಸುಬ್ಬಯ್ಯ ಪ್ರಾಚೀನ ಮತ್ತು ಮಧ್ಯಕಾಲೀನ ಸಾಹಿತ್ಯ

ಅನುವಾದ ಪುರಸ್ಕಾರಸಂಪಾದಿಸಿ

ವರ್ಷ ಚಿತ್ರ ಪುರಸ್ಕೃತರು ಅನುವಾದಿತ ಕೃತಿ(ಗಳು) ಪ್ರಕಾರ ಮೂಲ ಕೃತಿ
(ಭಾಷೆ)
ಮೂಲ ಲೇಖಕರು ಉಲ್ಲೇಖ(ಗಳು)
1990  – ಎಸ್. ವಿ. ಪರಮೇಶ್ವರ ಭಟ್ಟ ಕನ್ನಡ ಕಾಳಿದಾಸ ಮಹಾಸಂಪುಟ ಕಾವ್ಯ ನಾಟಕ ಕಾಳಿದಾಸನ ಸಮಗ್ರ ಕೃತಿಗಳು
(ಸಂಸ್ಕೃತ)
ಕಾಳಿದಾಸ
1991  – ಎಚ್. ಎಸ್. ವೆಂಕಟೇಶಮೂರ್ತಿ ಋತು ವಿಲಾಸ ಕಾವ್ಯ ಋತು ಸಂಹಾರಂ
(ಸಂಸ್ಕೃತ)
ಕಾಳಿದಾಸ
1992  – ಸರಸ್ವತಿ ಗಜಾನನ ರಿಸಬೂಡ ವಾಲ್ಮೀಕಿ ರಾಮಾಯಣ ಶಾಪ ಮತ್ತು ವರ ಮಹಾಕಾವ್ಯ ವಾಲ್ಮೀಕಿ ರಾಮಾಯಣ: ಶಾಪ್ ಅಣಿ ವರ್
(ಮರಾಠಿ)
ಶ್ರೀಪಾದ ರಘುನಾಥ ಭಿಡೆ
1993 ಕೀರ್ತಿನಾಥ ಕುರ್ತಕೋಟಿ ಮರಾಠಿ ಸಂಸ್ಕೃತಿ: ಕೆಲವು ಸಮಸ್ಯೆಗಳು ವಿಮರ್ಶೆ ಮರಾಠಿ ಸಂಸ್ಕೃತಿ
(ಮರಾಠಿ)
ಶಂ. ಬಾ. ಜೋಶಿ
1994  – ಪ್ರಧಾನ್ ಗುರುದತ್ತ ಜಯ ಯೌಧೇಯ ಕಾದಂಬರಿ ಜಯ ಯೌಧೇಯ
(ಹಿಂದಿ)
ರಾಹುಲ್ ಸಾಂಕೃತ್ಯಾಯನ
1995  – ತಿಪ್ಪೇಸ್ವಾಮಿ ನಿರ್ಮಲಾ ಕಾದಂಬರಿ ನಿರ್ಮಲಾ
(ಹಿಂದಿ)
ಪ್ರೇಮಚಂದ್
1996  – ಶೇಷನಾರಾಯಣ ಹದಿನೆಂಟನೆಯ ಅಕ್ಷರೇಖೆ ಕಾದಂಬರಿ ಪದಿನೆಟ್ಟವಾಡು ಅಕ್ಷಕ್ಕೋಡು
(ತಮಿಳು)
ಅಶೋಕಮಿತ್ರನ್
1997  – ನೀರ್ಪಾಜೆ ಭೀಮಭಟ್ಟ ಕಲ್ಹಣನ ರಾಜತರಂಗಿಣಿ ಸಂಪುಟ I ಮತ್ತು II ಕಾವ್ಯ
1998  – ಸಿ. ರಾಘವನ್ ಇಂದುಲೇಖಾ ಕಾದಂಬರಿ
1999  – ವಾಮನ ಬೇಂದ್ರೆ ಕೋಸಲ ಕಾದಂಬರಿ
2000  – ಎಲ್. ಬಸವರಾಜು ಬುದ್ಧ ಚರಿತೆ ಮಹಾಕಾವ್ಯ
2001   ಬನ್ನಂಜೆ ಗೋವಿಂದಾಚಾರ್ಯ ಆವೆಯ ಮಣ್ಣಿನ ಆಟದ ಬಂಡಿ ನಾಟಕ
2002 ವೀಣಾ ಶಾಂತೇಶ್ವರ ನದಿ ದ್ವೀಪಗಳು ಕಾದಂಬರಿ
2003 ಸ್ನೇಹಲತಾ ರೋಹಿಡೇಕರ್ ವಿಚಿತ್ರ ವರ್ಣ
2004 ಚಂದ್ರಕಾಂತ ಪೋಕಳೆ ಮಹಾನಾಯಕ ಕಾದಂಬರಿ
2005  – ಪಂಚಾಕ್ಷರಿ ಹಿರೇಮಠ ಹೇಮಂತ ಋತುವಿನ ಸ್ವರಗಳು ಸಣ್ಣ ಕಥೆಗಳು
2006  – ರಂ. ಶಾ. ಲೋಕಾಪುರ ಕನ್ನಡ ಜ್ಞಾನೇಶ್ವರಿ ಕಾವ್ಯ
2007  – ಆರ್. ಲಕ್ಷ್ಮೀನಾರಾಯಣ ಕನ್ನಡ ವಕ್ರೋಕ್ತಿ Poetics
2008  – ಹಸನ್ ನಯೀಂ ಸುರಕೋಡ ರಸೀದಿ ಟಿಕೇಟು ಆತ್ಮಕಥೆ
2009  – ಡಿ. ಎನ್. ಶ್ರೀನಾಥ್ ಭೀಷ್ಮ ಸಹಾನಿಯವರ ಪ್ರಾತಿನಿಧಿಕ ಕಥೆಗಳು ಸಣ್ಣ ಕಥೆಗಳು
2010  – ಎ. ಜಾನಕಿ ಗೋದಾನ ಕಾದಂಬರಿ
2011  – ತಮಿಳ್ ಸೆಲ್ವಿ ನಾನು ಅವನಲ್ಲ...ಅವಳು...! ಆತ್ಮಕಥೆ [೧೨]
2012 K. K. Nair & Ashok Kumar Hagga (Part 1, 2, 3) Novel
2013 ಜೆ. ಪಿ. ದೊಡ್ಡಮನಿ ಮಹಾತ್ಮಾ ಜ್ಯೋತಿರಾವ್ ಫುಲೆ ಜೀವನ ಚರಿತ್ರೆ [೧೩]
2014 ಜಿ. ಎನ್. ರಂಗನಾಥ ರಾವ್ ಮೋಹನದಾಸ್: ಒಂದು ಸತ್ಯಕಥೆ ಜೀವನ ಚರಿತ್ರೆ
2015 ನಾ. ದಾಮೋದರ ಶೆಟ್ಟಿ ಕೊಚ್ಚರೇತ್ತಿ ಕಾದಂಬರಿ
2016 ಓ. ಎಲ್. ನಾಗಭೂಷಣ ಸ್ವಾಮಿ ಎ. ಕೆ. ರಾಮಾನುಜನ್: ಆಯ್ದ ಕಥೆಗಳು ಪ್ರಬಂಧಗಳು
2017 ಎಚ್. ಎಸ್. ಶ್ರೀಮತಿ ಮಹಾಶ್ವೇತಾ ದೇವಿ ಅವರ ಕಥಾ ಸಾಹಿತ್ಯ-1 ಮತ್ತು 2 ಸಣ್ಣ ಕಥೆಗಳು
2018  – ಗಿರಡ್ಡಿ ಗೋವಿಂದರಾಜ ಜಯ: ಮಹಾಭಾರತ ಸಚಿತ್ರ ಮರುಕಥನ ಮಹಾಕಾವ್ಯ
2019  – ವಿಠಲರಾವ್ ಟಿ. ಗಾಯಕವಾಡ ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ ಸಾಹಿತ್ಯ ವಿಮರ್ಶೆ

ಯುವ ಪುರಸ್ಕಾರಸಂಪಾದಿಸಿ

ವರ್ಷ ಚಿತ್ರ ವಿಜೇತರು ಕೃತಿ ಪ್ರಕಾರ ಉಲ್ಲೇಖ
೨೦೨೦   ಸ್ವಾಮಿ ಪೊನ್ನಾಚಿ ಧೂಪದ ಮಕ್ಕಳು ಕಥಾಸಂಕಲನ
೨೦೧೯ (ಫಕೀರ್)ಶ್ರೀಧರ್ ಬನವಾಸಿ ಜಿ. ಸಿ. ಬೇರು ಕಾದಂಬರಿ
೨೦೧೮ ಪದ್ಮನಾಭ ಭಟ್ ಕೇಪಿನ ಡಬ್ಬಿ ಕಥಾಸಂಕಲನ
೨೦೧೭ ಶಾಂತಿ ಕೆ. ಅಪ್ಪಣ್ಣ ಮನಸು ಅಭಿಸಾರಿಕೆ ಕಥಾಸಂಕಲನ
೨೦೧೬ ವಿಕ್ರಮ ಹತ್ವಾರ ಜೀರೋ ಮತ್ತು ಒಂದು ಕಥಾಸಂಕಲನ
೨೦೧೫ ಮೌನೇಶ್ ಬಡಿಗೇರ್ ಮಾಯಾಕೋಲಾಹಲ ಕಥಾಸಂಕಲನ
೨೦೧೪ ಕಾವ್ಯಾ ಕಡಮೆ ಧ್ಯಾನಕ್ಕೆ ತಾರೀಖಿನ ಹಂಗಿಲ್ಲ ಕವನಸಂಕಲನ
೨೦೧೩ ಲಕ್ಕೂರು ಆನಂದ ಬಟವಾಡೆಯ ರಸೀತಿ ಕವನಸಂಕಲನ
೨೦೧೨ ಆರಿಫ಼್ ರಾಜ ಜಂಗಮ ಫಕೀರನ ಜೋಳಿಗೆ ಕವನಸಂಕಲನ
೨೦೧೧ ವೀರಣ್ಣ ಮಡಿವಾಳರ ನೆಲದ ಕರುಣೆಯ ದನಿ ಕವನಸಂಕಲನ

ಉಲ್ಲೇಖಗಳುಸಂಪಾದಿಸಿ

 1. "Poets dominate Sahitya Akademi Awards 2012" Archived 28 September 2013 at the Wayback Machine.. Sahitya Akademi. 20 December 2012. Retrieved 18 December 2013.
 2. "Poets dominate Sahitya Akademi Awards 2013" Archived 19 December 2013 at the Wayback Machine.. Sahitya Akademi. 18 December 2013. Retrieved 18 December 2013.
 3. "Sahitya Akademi Awards 2014" (PDF). Archived from the original (PDF) on 4 March 2016. Retrieved 27 December 2015.
 4. "Sahitya Akademi Awards 2015" (PDF). Archived from the original (PDF) on 22 December 2015. Retrieved 27 December 2015.
 5. "Sahitya Akademi Awards 2016" (PDF). Archived from the original (PDF) on 8 September 2017. Retrieved 21 December 2016.
 6. "Sahitya Akademi Awards 2017" (PDF). Archived from the original (PDF) on 24 ಫೆಬ್ರವರಿ 2018. Retrieved 23 December 2017. Check date values in: |archive-date= (help)
 7. "Sahitya Akademi Awards 2018". Retrieved 21 Feb 2019.
 8. "Kannada writer's autobiography wins Akademi Award". Retrieved 19 Dec 2019.
 9. "ವೀರಪ್ಪ ಮೊಯಿಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ" [Sahitya akademi award for Veerappa Moily]. Prajavani (in Kannada). 12 March 2021.CS1 maint: unrecognized language (link)
 10. "Veerappa Moily, Arundhathi Subramania among others to receive Sahitya Akademi Award-2020". Indian Express. 12 March 2021.
 11. "ಡಿ. ಎಸ್. ನಾಗಭೂಷಣ ಅವರ ಗಾಂಧಿ ಕಥನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ". ಪ್ರಜಾವಾಣಿ (in Kannada). 30 December 2021.CS1 maint: unrecognized language (link)
 12. "Honour for two writer-translators". The Hindu. 17 February 2012. Retrieved 14 March 2021.
 13. "Sahitya Akademi Award for Kannada translation". The Hindu. 14 March 2014. Retrieved 14 March 2021.