ಸು.ರಂ.ಎಕ್ಕುಂಡಿ
ಸು.ರಂ. ಎಕ್ಕುಂಡಿ - ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ.ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು ೧೯೨೩ ಜನವರಿ ೨೦ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. ೩೫ ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾದರು. ಇವರ ಕೃತಿಗಳು ಕವನ ಸಂಕಲನ: ಶ್ರೀ ಆನಂದ ತೀರ್ಥರು , ಸಂತಾನ, ಹಾವಾಡಿಗರ ಹುಡುಗ ನೆರಳು, ಮುಂತಾದವು. ಶ್ರೀಯುತರು ೧೯೯೫ ರಲ್ಲಿ ನಿಧನರಾದರು [೧][೨][೩] ೧೯೨೩-೯೫ ಕನ್ನಡ ಪ್ರಸಿದ್ದ
ಸು. ರಂ. ಎಕ್ಕುಂಡಿ | |
---|---|
ಜನನ | ೧೯೨೩ ರಾಣೆಬೆನ್ನೂರು, ಹಾವೇರಿ ಜಿಲ್ಲೆ, ಕರ್ನಾಟಕ |
ಮರಣ | ೧೯೯೫ ಬೆಂಗಳೂರು |
ವೃತ್ತಿ | ಕವಿ ಮತ್ತು ಶಿಕ್ಷಕ |
ರಾಷ್ಟ್ರೀಯತೆ | ಭಾರತ |
ಪ್ರಕಾರ/ಶೈಲಿ | ಕವಿತೆ |
ಪ್ರಮುಖ ಪ್ರಶಸ್ತಿ(ಗಳು) | ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನ್ಯಾಶನಲ್ ಅವಾರ್ಡ್ ಫಾರ್ ಟೀಚರ್ಸ್s, ಸೋವಿಯತ್ ಲ್ಯಾಂಡ್ ಅವಾರ್ಡ್. |
ಪ್ರಭಾವಗಳು | |
ಪ್ರಭಾವಿತರು |
ಕವಿ ಇವರ ತಂದೆ ರಂಗಾಚಾರ್ಯ ಎಕ್ಕುಂಡಿಯವರು ರಾಣೆಬೆನ್ನೂರಿನಲ್ಲಿ ಶಿಕ್ಷಕರಗಿದ್ದರು ತಾಯಿ ರಾಜಕ್ಕ. ಇವರಿಗೆ ಐದು ವರ್ಷಗಳದ್ದಾಗ ತಂದೆ ನಿಧನರಾದರು.ಚಿಕ್ಕಂದಿನಲ್ಲಿಯೇ ಸಂಸಾರದ ಭಾರ ತಲೆಯ ಮೇಲೆಬಿದ್ದುದರಿಂದ ಸವಣೂರಿನಲ್ಲಿ ಶ್ರೀ ಸತ್ಯಬೋ ಸೇವಾಸಂಘ ನಡೆಸಿದ್ದು .ವಚನಾಲಯದ ಪುಸ್ತಕಗಳನ್ನು ಮನೆಗೆ ಮುಟ್ಟಿಸುವ ಕೆಲಸ ಮಾಡಿದರೂ ಪುಸ್ತಕಗಳನ್ನು ಪುಕ್ಕಟೆ ಓದಿವ . ಅವಕಾಶವದುದರಿಂದ ಬಲ್ಯದಲ್ಲಿ ಜ್ಞಾನಸಂಪಾದನೆ ಇವರ ಕಾಯಕವಾಯಿತು .ಇದ್ದರಿಂದ ಶಿಕ್ಷಣದತ್ತ ಒಲವುಬೆಳೆಯಿತು .ಇವರ ಪ್ರಾಥಮಿಕಶಿಕ್ಷಣ ಹುಬ್ಬಳ್ಳಿಯಲ್ಲಿ ನಡೆಯಿತು .
=ಕೃತಿಗಳು
ಬದಲಾಯಿಸಿ=
ಕಾವ್ಯ
ಬದಲಾಯಿಸಿ- ಶ್ರೀ ಆನಂದತೀರ್ಥರು
- ಸಂತಾನ
ಹಾವಾಡಿಗರ ಹುಡುಗ
ಬದಲಾಯಿಸಿ- ಮತ್ಸ್ಯಗಂಧಿ
- ಬೆಳ್ಳಕ್ಕಿಗಳು
- ಬಕುಳದ ಹೂಗಳು
- ಪಾರಿವಾಳ
ಕಥಾಸಂಕಲನ
ಬದಲಾಯಿಸಿ- ನೆರಳು
ಕಾದಂಬರಿ
ಬದಲಾಯಿಸಿ- ಪ್ರತಿಬಿಂಬಗಳು
ಪರಿಚಯ
ಬದಲಾಯಿಸಿ- ಶ್ರೀ ಪು.ತಿ.ನರಸಿಂಹಾಚಾರ್ಯರು
ಅನುವಾದ
ಬದಲಾಯಿಸಿ- ಎರಡು ರಶಿಯನ್ ಕಾದಂಬರಿಗಳು.
ಪುರಸ್ಕಾರ
ಬದಲಾಯಿಸಿ- "ಲೆನಿನ್ನರ ನೆನಪಿಗೆ" ಎನ್ನುವ ಕೃತಿಗೆ ೧೯೭೦ರಲ್ಲಿ ಸೋವಿಯತ್ ಲ್ಯಾಂಡಿನ ನೆಹರು ಪುರಸ್ಕಾರ ದೊರೆತಿದೆ.
- "ಮತ್ಸ್ಯಗಂಧಿ" ಕವನ ಸಂಕಲನಕ್ಕೆ ೧೯೭೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
- "ಬೆಳ್ಳಕ್ಕಿಗಳು" ಹಸ್ತಪ್ರತಿಗೆ ೧೯೮೨ರಲ್ಲಿ ಮುದ್ದಣ ಸ್ಮಾರಕ ಕಾವ್ಯ ಬಹುಮಾನ ದೊರೆತಿದೆ.
- "ಬಳುಕದ ಹೂವುಗಳು" ಎಂಬ ಕೃತಿಗೆ ೧೯೯೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
ಉಲ್ಲೇಖಗಳು
ಬದಲಾಯಿಸಿ- ↑ K. M. George (1992). Modern Indian Literature, an Anthology. Sahitya Akademi. p. 678. ISBN 81-7201-324-8.
- ↑ Amaresh Datta (1988). Encyclopaedia of Indian literature vol. 2. Sahitya Akademi. p. 1142. ISBN 81-260-1194-7.
- ↑ "Article In The Hindu newspaper ಸು.ರಂ.ಎಕ್ಕುಂಡಿ". Archived from the original on 2008-09-15. Retrieved 2017-06-26.