ಪೆರ್ಲ ಗೋಪಾಲಕೃಷ್ಣ ಪೈ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕಾಸರಗೋಡಿನ ಪೆರ್ಲ ಗೋಪಾಲಕೃಷ್ಣ ಪೈ ರವರು, ಕನ್ನಡ ಭಾಷೆಯಲ್ಲಿ ಕತೆ, ನಾಟಕ , ಪ್ರಬಂಧ, ಲೇಖನ ಕಾದಂಬರಿಗಳನ್ನು ಬರೆಯುವುದರಲ್ಲಿ ಪ್ರವೀಣರು. ನಾಟಕ ವಿಮರ್ಶೆ ಮೊದಲಾದ ಹಲವು ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸಾಹಿತ್ಯ ಕೃಷಿಯನ್ನು ಬೆಳೆಸುತ್ತಿರುವ ಗೋಪಾಲಕೃಷ್ಣ ಪೈ ರವರ ಮತ್ತಿತರ ಕೃತಿಗಳು.
ಕಾದಂಬರಿಗಳು
ಬದಲಾಯಿಸಿ- ಸ್ವಪ್ನ ಸಾರಸ್ವತ
- ಬ್ರಹ್ಮ (೨೦೨೦)
ಕಥಾ ಸಂಕಲನಗಳು
ಬದಲಾಯಿಸಿ- ಬೇಲಾಡಿ ಹರಿಶ್ಚಂದ್ರ (೨೦೨೦)
- ಮೂರು ಮತ್ತಿಷ್ಟು (೨೦೧೦)
ಅನುವಾದಗಳು
ಬದಲಾಯಿಸಿ- ಮಹಾತ್ಮನಿಗಾಗಿ ಕಾಯುತ್ತಾ.
ಪ್ರಶಸ್ತಿಗಳು
ಬದಲಾಯಿಸಿ- ಸ್ವಪ್ನ ಸಾರಸ್ವತ ಕಾದಂಬರಿಗೆ ೨೦೧೦ ರ ಸಾಲಿನ 'ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'ದೊರೆತಿದೆ. ತಾಮ್ರಪತ್ರ, ಶಾಲು, ಹಾಗೂ ಒಂದು ಲಕ್ಷರೂಪಾಯಿಗಳ ನಗದು ಬಹುಮಾನವನ್ನು ಈ ಪ್ರಶಸ್ತಿವಿಜೇತರು ಪಡೆಯುತ್ತಾರೆ.
ಚಲನಚಿತ್ರ ಸಾಹಿತ್ಯ
ಬದಲಾಯಿಸಿ’ಉಜ್ವಾಡು’ ಎಂಬ ಕೊಂಕಣಿ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಕಾಸರಗೋಡು ಚಿನ್ನಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಷ್ಟ್ರಮಟ್ಟದ ಉತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ವಿಜೇತ,ಖ್ಯಾತ ನಿರ್ದೇಶಕ, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಕನಸೆಂಬ ಕುದುರೆಯನ್ನೇರಿ ಚಿತ್ರಕ್ಕೆ ಚಿತ್ರಕಥೆಯನ್ನು ರಚಿಸಿಕೊಟ್ಟಿದ್ದಾರೆ. ಪಿ.ಶೇಷಾದ್ರಿ ನಿರ್ದೇಶನದ ಬೆಟ್ಟದ ಜೀವ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಇವರ ಚಿತ್ರಕಥೆಗಾಗಿ 'ಉತ್ತಮ ಚಿತ್ರಕಥೆ ಪ್ರಶಸ್ತಿ' ದೊರೆತಿದೆ.